Tag: ಸ್ಟೂಡೆಂಟ್ಸ್

  • ವಿದ್ಯಾರ್ಥಿಗಳ ರಕ್ಷಣೆ ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ

    ವಿದ್ಯಾರ್ಥಿಗಳ ರಕ್ಷಣೆ ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ

    ಷ್ಯಾ ಮತ್ತು ಉಕ್ರೇನ್ ನಡುವಿನ ದಾಳಿ ಜಗತ್ತನ್ನೇ ತಲ್ಲಣಗೊಳಿಸಿದೆ. ಉಕ್ರೇನ್ ಮೇಲೆ ವಿಪರೀತ ದಾಳಿ ನಡೆದಿದ್ದರಿಂದ ಅಲ್ಲಿ ವಾಸವಿರುವ ಕನ್ನಡಿಗರು ಆತಂಕದಿಂದ ದಿನಗಳೆಯುತ್ತಿದ್ದಾರೆ. ಅವರನ್ನು ಕರೆತರಲು ಏನೆಲ್ಲ ಪ್ರಯತ್ನಗಳು ನಡೆದರೂ, ಅವು ಫಲಕಾರಿ ಆಗುತ್ತಿಲ್ಲ. ಹಾಗಾಗಿ ಉಕ್ರೇನ್ ನಲ್ಲಿ ನೆಲೆಸಿರುವ ಕನ್ನಡಿಗರು ವಿಡಿಯೋ ಮತ್ತು ಫೋನ್ ಕರೆಗಳ ಮೂಲಕ ತಮ್ಮನ್ನು ರಕ್ಷಿಸುವಂತೆ ಮೊರೆಯಿಡುತ್ತಿದ್ದಾರೆ. ಇದನ್ನೂ ಓದಿ : ತಾಯಿಯ ಸಾವಿನ ನೋವಲ್ಲೂ ವೃತ್ತಿ ಪರತೆ ಮೆರೆದ ರಘು ದೀಕ್ಷಿತ್

    ಈ ಕುರಿತು ನಟಿ, ಮಾಜಿ ಸಂಸದೆ ರಮ್ಯಾ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವಿಟ್ ಮಾಡಿದ್ದಾರೆ. “ಕರ್ನಾಟಕದ ವಿದ್ಯಾರ್ಥಿಗಳ ರಕ್ಷಣೆ ಹೇಗೆ? ಅವರನ್ನು ಹೇಗೆ ಕರೆತರುತ್ತೀರಿ? ಮತ್ತು ಯಾವಾಗ ಕರೆತರುತ್ತೀರಿ?” ಎಂದು ಪ್ರಶ್ನೆ ಕೇಳಿದ್ದಾರೆ. ಇದನ್ನೂ ಓದಿ : ಪುನೀತ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರ ನಿರ್ದೇಶಕನಿಗೆ ಟಾಲಿವುಡ್ ನಿಂದ ಮೆಗಾ ಆಫರ್

    ಇತ್ತೀಚಿನ ದಿನಗಳಲ್ಲಿ ರಮ್ಯಾ ಸಿನಿಮಾಗಿಂತಲೂ ಸಿನಿಮಾದಾಚೆಗಿನ ಸುದ್ದಿಗಳಿಂದಾಗಿ ಸದ್ದು ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ನ್ಯಾಯಾಂಗ ಬಂಧನದಲ್ಲಿರುವ ಚೇತನ್ ಪರ ರಮ್ಯಾ ಬ್ಯಾಟ್ ಬೀಸಿದ್ದರು. ಅಲ್ಲದೇ, ಬೀದಿ ನಾಯಿಯ ಮೇಲೆ ಕಾರು ಹಾಯಿಸಿದ ವ್ಯಕ್ತಿಯ ವಿರುದ್ಧ ಹೋರಾಡಿದ್ದರು. ಶಿವಮೊಗ್ಗದ ಹರ್ಷ ಹತ್ಯೆಯಾದಾಗಲೂ ಅದನ್ನು ಖಂಡಿಸಿದ್ದರು. ಈಗ ಉಕ್ರೇನ್ ವಿದ್ಯಾರ್ಥಿಗಳ ರಕ್ಷಣೆಯ ವಿಷಯದಲ್ಲಿ ಪ್ರಶ್ನೆ ಮಾಡಿದ್ದಾರೆ.