Tag: ಸ್ಟೀವ್ ಜಾಬ್ಸ್

  • ಸ್ಟೀವ್‌ ಜಾಬ್ಸ್‌ ಪತ್ನಿ ಅಸ್ವಸ್ಥ – ಸನಾತನದ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳುತ್ತಿದ್ದಾರೆ ಕಮಲಾ

    ಸ್ಟೀವ್‌ ಜಾಬ್ಸ್‌ ಪತ್ನಿ ಅಸ್ವಸ್ಥ – ಸನಾತನದ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳುತ್ತಿದ್ದಾರೆ ಕಮಲಾ

    ಪ್ರಯಾಗ್‌ರಾಜ್‌: ಮಹಾಕುಂಭಮೇಳದಲ್ಲಿ (Mahakumbh) ಪಾಲ್ಗೊಂಡಿರುವ ಆಪಲ್ (Apple) ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ (Steve Jobs) ಪತ್ನಿ ಲಾರೆನ್ ಪಾವೆಲ್ (Laurene Powell) ಅಸ್ವಸ್ಥಗೊಂಡಿದ್ದಾರೆ.

    ಕಮಲಾ (Kamala) ಎಂದು ಹೆಸರು ಬದಲಿಸಿಕೊಂಡಿರುವ ಲಾರೆನ್ ಪಾವೆಲ್, ಹೊಸ ವಾತಾವರಣದ ಕಾರಣದಿಂದ ಅನಾರೋಗ್ಯಕ್ಕೆ ಈಡಾಗಿದ್ದಾರೆ. ನಿರಂಜನ ಅಖಾಡದ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಕೈಲಾಸನಂದಗಿರಿ ಮಹಾರಾಜ್ ಪ್ರತಿಕ್ರಿಯಿಸಿ, ಈಗ ಅವರು ನನ್ನ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ಕೆಲವು ಅಲರ್ಜಿಗಳಿವೆ. ಅವರು ಎಂದಿಗೂ ಇಷ್ಟೊಂದು ಜನದಟ್ಟಣೆಯ ಸ್ಥಳಕ್ಕೆ ಹೋಗಿರಲಿಲ್ಲ. ಚೇತರಿಕೆ ಬಳಿಕ ಅವರು ಅಮೃತಸ್ನಾನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ ಪತ್ನಿ ಲಾರೆನ್ ಇನ್ಮುಂದೆ ʻಕಮಲಾʼ – ಹಿಂದೂ ಹೆಸರು ನಾಮಕರಣ

    ಲಾರೆನ್ ಪಾವೆಲ್ ತುಂಬಾ ಸರಳ ವ್ಯಕ್ತಿಯಾಗಿದ್ದಾರೆ. ಪೂಜೆಯ ಸಮಯದಲ್ಲಿ ಅವರು ನಮ್ಮೊಂದಿಗೆ ಇದ್ದರು. ಅವರು ಸನಾತನ ಧರ್ಮದಕ್ಕೆ ಸಂಬಂಧಿಸಿದಂತೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

     

    ಪ್ರಯಾಗ್‌ರಾಜ್‌ ತ್ರಿವೇಣಿ ಸಂಗಮಕ್ಕೆ ತೆರಳುವ ಮೊದಲು ಲಾರೆನ್ ಪಾವೆಲ್ ಅವರು ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

    ಜನವರಿ 20 ರಂದು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಹಿಂತಿರುಗುವ ಮೊದಲು ಅವರು ಜನವರಿ 15 ರವರೆಗೆ ನಿರಂಜಿನಿ ಅಖಾರ ಶಿಬಿರದಲ್ಲಿ ಇರುತ್ತಾರೆ ಎಂದು ವರದಿಯಾಗಿದೆ.

     

  • ಕುಂಭಮೇಳದಲ್ಲಿ ಭಾಗಿಯಾಗ್ತಾರೆ ಆ್ಯಪಲ್ ಸಹ-ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ

    ಕುಂಭಮೇಳದಲ್ಲಿ ಭಾಗಿಯಾಗ್ತಾರೆ ಆ್ಯಪಲ್ ಸಹ-ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ

    ಲಕ್ನೋ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ 2025 ರ ಮಹಾ ಕುಂಭಮೇಳದಲ್ಲಿ ದಿವಂಗತ ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಭಾಗವಹಿಸಲಿದ್ದಾರೆ ಎಂದು ಸ್ವಾಮಿ ಕೈಲಾಶಾನಂದ್ ಜಿ ಮಹಾರಾಜ್ ಬುಧವಾರ ದೃಢಪಡಿಸಿದ್ದಾರೆ.

    ಲಾರೆನ್ ಪೊವೆಲ್ ಅವರಿಗೆ ‘ಕಮಲಾ’ ಎಂಬ ಹಿಂದೂ ಹೆಸರನ್ನು ನೀಡಲಾಗಿದೆ. ಅವರು ತನ್ನ ಗುರುಗಳನ್ನು ಭೇಟಿ ಮಾಡಲು ಇಲ್ಲಿಗೆ ಬರುತ್ತಿದ್ದಾರೆ. ನಾವು ಅವರಿಗೆ ಕಮಲಾ ಎಂದು ಹೆಸರಿಟ್ಟಿದ್ದೇವೆ. ಅವರು ನಮಗೆ ಮಗಳಿದ್ದಂತೆ. ಆಕೆ ಭಾರತಕ್ಕೆ ಎರಡನೇ ಬಾರಿ ಬರುತ್ತಿದ್ದಾರೆ. ಕುಂಭಮೇಳಕ್ಕೆ ಎಲ್ಲರಿಗೂ ಸ್ವಾಗತ ಎಂದು ಮಹಾರಾಜ್ ತಿಳಿಸಿದ್ದಾರೆ.

    ಜಗತ್ತಿನ ಹೆಚ್ಚಿನ ಜನರು ಯಾರೋ ಒಬ್ಬ ಗುರುವಿನ ಮಾರ್ಗದರ್ಶನದಲ್ಲಿದ್ದಾರೆ. ಅನೇಕ ಜನರು ಕುಂಭಮೇಳಕ್ಕೆ ಬರುತ್ತಿದ್ದಾರೆ. ಕೆಲವರು ತಮ್ಮ ವೈಯಕ್ತಿಕ ಕಾರ್ಯಕ್ರಮಕ್ಕಾಗಿ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಇದು ಧಾರ್ಮಿಕ ಮೇಳ. ದೇಶ-ವಿದೇಶಗಳಿಂದ ಜನರು ಆಶೀರ್ವಾದ ಪಡೆಯಲು ಮಹಾ ಕುಂಭಕ್ಕೆ ಭೇಟಿ ನೀಡುತ್ತಾರೆ ಎಂದಿದ್ದಾರೆ.

    ಈ ಬಾರಿ ಭಕ್ತರು ದೈವಿಕ ಮತ್ತು ಭವ್ಯವಾದ ಕುಂಭಮೇಳಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭರವಸೆ ನೀಡಿದ್ದಾರೆ. ಪ್ರಯಾಗರಾಜ್‌ನ ದೈವಿಕ, ಭವ್ಯ, ಹಸಿರು ಕುಂಭಕ್ಕೆ ಬಹಳ ದೈವಿಕ ಮತ್ತು ಭವ್ಯವಾದ ಸಿದ್ಧತೆಗಳನ್ನು ಮಾಡಲಾಗಿದೆ. ನಾವು ಜ.13 ಕ್ಕಾಗಿ ಕಾಯುತ್ತಿದ್ದೇವೆ. ಎಲ್ಲರನ್ನು ಸ್ವಾಗತಿಸಲು ಮತ್ತು ಅವರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಂಪೂರ್ಣ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಂದು ತಿಳಿಸಿದ್ದಾರೆ.

  • 1.77 ಕೋಟಿಗೆ ಸೇಲ್ ಆಯ್ತು 1970ರ ದಶಕದ ಸ್ಟೀವ್ ಜಾಬ್ಸ್ ಚಪ್ಪಲಿ

    1.77 ಕೋಟಿಗೆ ಸೇಲ್ ಆಯ್ತು 1970ರ ದಶಕದ ಸ್ಟೀವ್ ಜಾಬ್ಸ್ ಚಪ್ಪಲಿ

    ವಾಷಿಂಗ್ಟನ್: ಆಪಲ್ ಕಂಪನಿಯ ಸಹ-ಸಂಸ್ಥಾಪಕ (Apple co-founder) ಸ್ಟೀವ್ ಜಾಬ್ಸ್ (Steve Jobs) ಅವರು ಧರಿಸುತ್ತಿದ್ದ ಕಂದು ಬಣ್ಣದ ಲೆದರ್ ಚಪ್ಪಲಿ 1.77 ಕೋಟಿಗೆ ($218,750) ಮಾರಾಟವಾಗಿದೆ ಎಂದು ಹರಾಜು (Auctions) ಕಂಪನಿ ಜೂಲಿಯನ್ಸ್ (Julien’s) ತಿಳಿಸಿದೆ.

    ನವೆಂಬರ್ 11 ರಿಂದ ನೇರ ಪ್ರಸಾರವಾದ ಹರಾಜು ಪ್ರಕ್ರಿಯೆ ನವೆಂಬರ್ 13ಕ್ಕೆ ಮುಕ್ತಾಯವಾಯಿತು. ಒಂದು ಜೊತೆ ಕಂದು ಬಣ್ಣದ (Brown Suede) ಸ್ಯೂಡ್ ಲೆದರ್ ಬರ್ಕೆನ್‍ಸ್ಟಾಕ್ ಅರಿಜೋನಾ ಚಪ್ಪಲಿಯನ್ನು (Leather Birkenstock Arizona sandals) ಸ್ಟೀವ್ ಜಾಬ್ಸ್ ಅವರು ಧರಿಸುತ್ತಿದ್ದರು. 1970ರ ಮತ್ತು 1980ರ ದಶಕದಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಯನ್ನು ಧರಿಸುತ್ತಿದ್ದರು. ಈ ಒಂದು ಜೊತೆ ಚಪ್ಪಲಿ, ಹಿಂದೆ ಸ್ಟೀವ್ ಜಾಬ್ಸ್ ಅವರ ಮನೆ ನಿರ್ವಾಹಕ ಆಗಿದ್ದ ಮಾರ್ಕ್ ಶೆಫ್ ಅವರ ಬಳಿ ಇತ್ತು.

    ಹರಾಜು ಮನೆಯ ವೆಬ್‍ಸೈಟ್‍ನಲ್ಲಿನ ವಿವರಗಳ ಪ್ರಕಾರ, ಆಪಲ್ ಕಂಪನಿಯ ಇತಿಹಾಸದಲ್ಲಿ ಅನೇಕ ಪ್ರಮುಖ ಕ್ಷಣಗಳಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಗಳನ್ನು ಧರಿಸಿದ್ದರು. 1976ರಲ್ಲಿ ಲಾಸ್ ಆಲ್ಟೋಸ್ ಗ್ಯಾರೇಜ್‍ನಲ್ಲಿ ಆಪಲ್ ಕಂಪ್ಯೂಟರ್ ಅನ್ನು ಆನ್ ಮಾಡುವ ಸಂದರ್ಭದಲ್ಲಿ ಸ್ಟೀವ್ ಜಾಬ್ಸ್ ಇದೇ ಚಪ್ಪಲಿಯನ್ನು ಧರಿಸಿದ್ದರು. ಜಾಬ್ಸ್ ಬಿರ್ಕೆನ್‍ಸ್ಟಾಕ್ಸ್‌ನ ಜಾಣ್ಮೆ ಮತ್ತು ಪ್ರಾಯೋಗಿಕತೆಯನ್ನು ಕಂಡು ಜನ ಬೆರಗಾಗಿದ್ದರು. ಇದನ್ನೂ ಓದಿ: ಯಾರಿಗೂ ನಂಬಿಕೆ ದ್ರೋಹ ಮಾಡ್ಬೇಡಿ- ಗೆಳತಿಯ ಕತ್ತು ಸೀಳಿ ವೀಡಿಯೋ ಹಂಚಿಕೊಂಡ ಕ್ರೂರಿ

    ಈ ಚಪ್ಪಲಿಯನ್ನು ಇಟಲಿಯ ಮಿಲಾನೊದಲ್ಲಿನ ಸಲೋನ್ ಡೆಲ್ ಮೊಬೈಲ್‍ನಲ್ಲಿ ಮಾತ್ರವಲ್ಲದೇ, 2017 ರಲ್ಲಿ ಜರ್ಮನಿಯ ರಹ್ಮ್ಸ್‍ನಲ್ಲಿರುವ ಬರ್ಕೆನ್‍ಸ್ಟಾಕ್ ಪ್ರಧಾನ ಕಚೇರಿಯಲ್ಲಿ, ನ್ಯೂಯಾರ್ಕ್‍ನ ಸೋಹೋದಲ್ಲಿನ ಬಿರ್ಕೆನ್‍ಸ್ಟಾಕ್‍ನಲ್ಲಿ, ಯುನೈಟೆಡ್ ಸ್ಟೇಟ್ಸ್ ಶಾಪ್ಸ್‍ಗಳು ಸೇರಿದಂತೆ ಹಲವೆಡೆ ಪ್ರದರ್ಶನಕ್ಕೆ ಇಡಲಾಗಿತ್ತು. ಕೊಲ್ನ್, ಜರ್ಮನಿಯ ಕಲೋನ್‍ನಲ್ಲಿ ಪೀಠೋಪಕರಣ ಮೇಳ, 2018 ರಲ್ಲಿ ಡೈ ಝೀಟ್ ಮ್ಯಾಗಜೀನ್‍ಗಾಗಿ ಝೀಟ್ ಈವೆಂಟ್ ಬರ್ಲಿನ್ ಮತ್ತು ಇತ್ತೀಚೆಗೆ ಜರ್ಮನಿಯ ಸ್ಟಟ್‍ಗಾರ್ಟ್‍ನಲ್ಲಿರುವ ಹಿಸ್ಟರಿ ಮ್ಯೂಸಿಯಂನಲ್ಲೂ ಇಡಲಾಗಿತ್ತು. ಇದನ್ನೂ ಓದಿ: ಮೆಟ್ಟಿಲು ಹತ್ತುವಾಗ ಎಡವಿದ ಜೋ ಬೈಡನ್ – ಮುಂದೇನಾಯ್ತು ಗೊತ್ತಾ?

    Live Tv
    [brid partner=56869869 player=32851 video=960834 autoplay=true]