Tag: ಸ್ಟೀವನ್ ಸ್ಮಿತ್

  • ಅಶ್ವಿನ್, ಶಮಿ ಸ್ಪಿನ್ ದಾಳಿಗೆ ಮಕಾಡೆ ಮಲಗಿದ ಕಾಂಗರೂ ಪಡೆ – ಭಾರತಕ್ಕೆ 1-0 ಜಯದ ಮುನ್ನಡೆ

    ಅಶ್ವಿನ್, ಶಮಿ ಸ್ಪಿನ್ ದಾಳಿಗೆ ಮಕಾಡೆ ಮಲಗಿದ ಕಾಂಗರೂ ಪಡೆ – ಭಾರತಕ್ಕೆ 1-0 ಜಯದ ಮುನ್ನಡೆ

    ನಾಗ್ಪುರ: ಟೀಂ ಇಂಡಿಯಾ ಬೌಲರ್‌ಗಳಾದ ಆರ್. ಅಶ್ವಿನ್ (Ravichandran Ashwin), ಮೊಹಮ್ಮದ್ ಶಮಿ, ಜಡೇಜಾ (Ravindra Jadeja) ಸ್ಪಿನ್ ದಾಳಿ ನೆರವಿನಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ 132 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 4 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy 2023) ಟೆಸ್ಟ್ ಸರಣಿಯಲ್ಲಿ ರೋಹಿತ್ ಪಡೆ 1-0 ಮುನ್ನಡೆ ಸಾಧಿಸಿದೆ.

    ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನದ ಆಟಕ್ಕೆ 7 ವಿಕೆಟ್ ಕಳೆದುಕೊಂಡು 144 ರನ್‌ಗಳ ಮುನ್ನಡೆ ಸಾಧಿಸಿದ್ದ ಟೀಂ ಇಂಡಿಯಾ (Team India) ಶನಿವಾರ ಮೂರನೇ ದಿನದ ಇನ್ನಿಂಗ್ಸ್ ಆರಂಭಿಸಿತು. ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ (Mohammed Shami) ಇಬ್ಬರ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ 139.3 ಓವರ್‌ಗಳಿಗೆ 400 ರನ್ ಗಳಿಸಿ ಆಲೌಟ್ ಆಯಿತು. ಈ ವೇಳೆ ಅಕ್ಷರ್ ಪಟೇಲ್ 84 ರನ್ ಗಳಿಸಿದ್ರೆ, ಮೊಹಮ್ಮದ್ ಶಮಿ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

    ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 223 ರನ್‌ಗಳ ಮುನ್ನಡೆ ಸಾಧಿಸಿತ್ತು. ನಂತರ ಕ್ರೀಸ್‌ಗಿಳಿದ ಕಾಂಗರೂ ಪಡೆ ಅಶ್ವಿನ್, ಶಮಿ, ಜಡೇಜಾ ಹಾಗೂ ಅಕ್ಷರ್ ಪಟೇಲ್ (Axar Patel) ಸ್ಪಿನ್ ದಾಳಿಗೆ ಮಕಾಡೆ ಮಲಗಿತು. 32.3 ಓವರ್‌ಗಳಲ್ಲಿ ಕೇವಲ 91 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಭಾರತ 132 ಭಾರೀ ರನ್‌ಗಳ ಅಂತರದಿಂದ ಜಯ ಸಾಧಿಸಿತು. ಟೀಂ ಇಂಡಿಯಾ ಎದುರು ಆಸ್ಟ್ರೇಲಿಯಾ ಮಂಡಿಯೂರಿತು.

    2ನೇ ದಿನದಾಟದಲ್ಲಿ ನಾಯಕ ರೋಹಿತ್ ಶರ್ಮಾ (120 ರನ್) ಶತಕ ಸಿಡಿಸಿದ್ದರು ಹಾಗೂ ರವೀಂದ್ರ ಜಡೇಜಾ (70 ರನ್) ಅರ್ಧಶತಕ ಗಳಿಸಿ ಮಿಂಚಿದ್ದರು. ಇದನ್ನೂ ಓದಿ: ಒಂದೂವರೆ ವರ್ಷಗಳ ಬಳಿಕ ಶತಕ ಸಿಡಿಸಿ ದಾಖಲೆ ಬರೆದ ರೋಹಿತ್

    ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 10, ಮಾರ್ನಸ್ ಲಾಬುಶೇನ್ 17 ರನ್ ಗಳಿಸಿದ್ರೆ, ಸ್ಟೀವನ್ ಸ್ಮಿತ್ 25 ರನ್‌ಗಳಿಸಿ ಅಜೇಯರಾಗುಳಿದರು. ಉಳಿದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಟೀಂ ಇಂಡಿಯಾ ಎದುರು ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಜಡೇಜಾ, ಅಶ್ವಿನ್‌ ದಾಳಿಗೆ ಆಸ್ಟ್ರೇಲಿಯಾ ಪಲ್ಟಿ – ಏಕದಿನ ಶೈಲಿಯಲ್ಲಿ ರೋಹಿತ್‌ ಬ್ಯಾಟಿಂಗ್‌

    ಅಶ್ವಿನ್ ಸ್ಪಿನ್ ದಾಳಿ: ಪಂದ್ಯದ 2ನೇ ಇನಿಂಗ್ಸ್ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಆರ್.ಅಶ್ವಿನ್ ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಮ್ಯಾಟ್ ರೆನ್‌ಶಾ, ಪೀಟರ್ ಹ್ಯಾಂಡ್ಸ್‌ಕಾಂಬ್‌ ಹಾಗೂ ಅಲೆಕ್ಸ್ ಕೆರಿ ಬ್ಯಾಟರ್‌ಗಳನ್ನ ಉರುಳಿಸಿದರು. ಈ ಮೂಲಕ ಅಶ್ವಿನ್ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಇವರಿಗೆ ಸಾಥ್ ನೀಡಿದ್ದ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ತಲಾ ಎರಡು ವಿಕೆಟ್ ಉರುಳಿಸಿದರು. ಅಕ್ಷರ್ ಪಟೇಲ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    ಅಕ್ಷರ್-ಶಮಿ ಸ್ಫೋಟಕ ಬ್ಯಾಟಿಂಗ್: ಪಂದ್ಯದ ಮೂರನೇ ದಿನ ಮೊದಲ ಸೆಷನ್‌ನಲ್ಲಿ ಅಕ್ಷರ್ ಪಟೇಲ್ ಹಾಗೂ ಮೊಹಮ್ಮದ್ ಶಮಿ ಅವರು ಏಕದಿನ ಶೈಲಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅಕ್ಷರ್ ಪಟೇಲ್ 174 ಎಸೆತಗಳಲ್ಲಿ ಒಂದು ಸಿಕ್ಸರ್ 10 ಬೌಂಡರಿಗಳೊಂದಿಗೆ 84 ರನ್ ಸಿಡಿಸಿದರೆ, ಮೊಹಮ್ಮದ್ ಶಮಿ 47 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ 37 ರನ್ ಚಚ್ಚಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೆ ಕಳ್ಳಾಟವಾಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸ್ಟೀವ್‌  ಸ್ಮಿತ್

    ಮತ್ತೆ ಕಳ್ಳಾಟವಾಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸ್ಟೀವ್‌ ಸ್ಮಿತ್

    ಸಿಡ್ನಿ: ಕ್ರಿಕೆಟ್‍ನಲ್ಲಿ ಸ್ಲೆಡ್ಜಿಂಗ್‍ನಿಂದಲೇ ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾ ಆಟಗಾರರು ಇದೀಗ ಕಳ್ಳಾಟದ ಮೂಲಕ ಕ್ಯಾಮೆರಾ ಕಣ್ಣಿಗೆ ಸಿಕ್ಕಿಹಾಕಿಕೊಂಡಿದ್ದು ಭಾರೀ ಟೀಕೆಗೆ ಗುರಿಯಾಗಿದೆ.

    ಆಸ್ಟ್ರೇಲಿಯಾ ತಂಡದಲ್ಲಿ ಸ್ಥಿರ ಬ್ಯಾಟಿಂಗ್‌ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್ ರಿಷಬ್ ಪಂತ್ ಅವರು ಮಾರ್ಕ್ ಮಾಡಿದ್ದ ಗಾರ್ಡ್  ಅನ್ನು ಕಾಲಿನಿಂದ ಒರೆಸಿದ್ದಾರೆ. ಒರೆಸುತ್ತಿರುವ ದೃಶ್ಯ ಸ್ಟಂಪ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

    ಸಿಡ್ನಿಯಲ್ಲಿ ನಡೆಯುತ್ತಿದ್ದ ಬಾರ್ಡರ್ ಗಾವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯಾಟದ ಐದನೇ ದಿನದ ಮೊದಲ ಸೆಷನ್‍ಲ್ಲಿ ಘಟನೆ ನಡೆದಿದೆ. 407 ರನ್‍ಗಳ ಟಾರ್ಗೆಟ್ ಚೇಸ್ ಮಾಡುತ್ತಿದ್ದ ಭಾರತಕ್ಕೆ ರಿಷಬ್ ಪಂತ್ ಆಸರೆಯಾಗಿ ಗೆಲುವಿನ ದಡಸೇರಿಸಲು ಹೋರಾಟ ನಡೆಸುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಎದುರಾಳಿ ಆಟಗಾರರೂ ಪಂತ್ ಅವರ ವಿಕೆಟ್ ಪಡೆಯಲು ಹೊಂಚು ಹಾಕಿ ಕಾಯುತ್ತಿದ್ದರು. ಪಂತ್ ಅರ್ಧಶತಕ ಹೊಡೆಯಲು 64 ಎಸೆತ ತೆಗದುಕೊಂಡರೆ ನಂತರ ತನ್ನ ಲಯವನ್ನು ಬದಲಾಯಿಸಿ ಆಕ್ರಮಣಕಾರಿ ಆಟ ಆಡುತ್ತಿದ್ದರು.

    ಈ ವೇಳೆ ಡ್ರಿಂಕ್ಸ್ ಬ್ರೇಕ್ ಬಂದು ಮುಂದಿನ ಅವಧಿ ಆರಂಭದ ಮೊದಲು ಸ್ಮಿತ್ ಸ್ಟಂಪ್ ಬಳಿ ಬಂದು ಪಂತ್ ಅವರು ಮಾರ್ಕ್ ಮಾಡಿದ್ದ ಗಾರ್ಡ್ ಅನ್ನು ಕಾಲಿನಿಂದ ಒರೆಸಿದ್ದಾರೆ. ಈ ವಿಡಿಯೋ ಸ್ಟಂಪ್‍ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕ್ರೀಸ್‍ನಲ್ಲಿ ಗಾರ್ಡ್ ಇಲ್ಲದನ್ನು ನೋಡಿದ ಪಂತ್ ಮತ್ತೆ ಅಂಪೈರ್ ಬಳಿ ಕೇಳಿ ಗಾರ್ಡ್ ಮಾರ್ಕ್ ಹಾಕಿದ್ದಾರೆ.

    ಕ್ಯಾಮೆರಾದಲ್ಲಿ ಸ್ಟಷ್ಟವಾಗಿ ಸ್ಮಿತ್ ಅವರ ನೆರಳು ಕಂಡು ಬಂದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಮಿತ್ ನಡೆಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿದ್ದ ಟೆಸ್ಟ್‌ನಲ್ಲಿ ಬೌಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಹಾಕಿಕೊಂಡಿದ್ದ ಸ್ಮಿತ್ 1 ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿ ಕ್ರಿಕೆಟ್‍ಗೆ ಮರಳಿ ಬಂದಿದ್ದರು.

  • ಜಡೇಜಾ ಬುಲೆಟ್ ಥ್ರೋಗೆ ಸ್ಮಿತ್ ರನೌಟ್ – ಮತ್ತೆ ಮಿಂಚಿದ ಗಿಲ್

    ಜಡೇಜಾ ಬುಲೆಟ್ ಥ್ರೋಗೆ ಸ್ಮಿತ್ ರನೌಟ್ – ಮತ್ತೆ ಮಿಂಚಿದ ಗಿಲ್

    ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ 2ನೇ ದಿನವಾದ ಇಂದು ರವೀಂದ್ರ ಜಡೇಜಾ ಬುಲೆಟ್ ಥ್ರೋ ಮಾಡುವ ಮೂಲಕ ಶತಕದ ಆಟವಾಡಿ ಮುನ್ನುಗುತ್ತಿದ್ದ ಸ್ಟೀವನ್ ಸ್ಮಿತ್ ಅವರನ್ನು ರನೌಟ್ ಮಾಡಿದ್ದಾರೆ. ಈ ವೇಗವಾದ ರನೌಟ್‍ನಿಂದಾಗಿ ತಾನೂ ವಿಶ್ವದ ಅತ್ಯುತ್ತಮ ಫೀಲ್ಡರ್ ಎಂಬುದನ್ನು ಜಡೇಜಾ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

    ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ಮೊದಲ ದಿನದ ಮಳೆಯ ನಡುವೆ ಉತ್ತಮ ಮೊತ್ತ ಕಲೆಹಾಕಿದ್ದ ಆಸೀಸ್ ದಿನದಂತ್ಯಕ್ಕೆ 166 ರನ್ ಮಾಡಿ 2 ವಿಕೆಟ್ ಕಳೆದುಕೊಂಡಿತ್ತು. ಅಲ್ಲಿಂದ 2 ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಲಬುಶೇನ್, ಮತ್ತು ಸ್ಟೀವನ್ ಸ್ಮಿತ್ ಅವರ ಉತ್ತಮ ಜೊತೆಯಾಟದಿಂದಾಗಿ 338 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ. ನಿನ್ನೆಯ 166 ರನ್‍ಗೆ ಇಂದು 172ರನ್ ಸೇರಿಸಿ ಆಸ್ಟ್ರೇಲಿಯಾ ಆಲೌಟ್ ಆಯ್ತು.

    ಮೊದಲ ದಿನದಾಟದಲ್ಲಿ 67 ರನ್‍ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮಾರ್ನಸ್ ಲಬುಶೇನ್ 91 ರನ್(196 ಎಸೆತ, 11 ಬೌಂಡರಿ) ಹೊಡೆದು ಶತಕ ವಂಚಿತರಾದರೂ ಇನ್ನೂ 31 ರನ್ ಮಾಡಿ ಲಬುಶೇನ್‍ಗೆ ಜೊತೆಯಾಗಿದ್ದ ಸ್ಮಿತ್ 2ನೇ ದಿನ ಶತಕ ಸಿಡಿಸಿದರು.

    ಆಸ್ಟ್ರೇಲಿಯಾದ ರನ್ ಹೆಚ್ಚಿಸಲು ಬ್ಯಾಟ್ ಬಿಸುತ್ತಿದ್ದ ಸ್ಮಿತ್ 130 ರನ್(226 ಎಸೆತ, 16 ಬೌಂಡರಿ) ಗಳಿಸಿ ಆಟವಾಡುತ್ತಿದ್ದರು. 105ನೇ ಓವರ್ ಎಸೆಯಲು ದಾಳಿಗಿಳಿದ ಬುಮ್ರಾರ 4ನೇ ಎಸೆತವನ್ನು ಆಫ್ ಸೈಡ್‍ನತ್ತ ಹೊಡೆಯಲು ಮುಂದಾದ ಸ್ಮಿತ್ ಬ್ಯಾಟ್‍ಗೆ ಇನ್ ಸೈಡ್ ಎಡ್ಜ್ ಆದ ಚೆಂಡು ಸ್ವೇರ್ ಲೆಗ್‍ನತ್ತ ಹೋಗಿ ಜಡೇಜಾ ಅವರ ಕೈ ಸೇರಿತ್ತು. ಆದರೂ ಎರಡು ರನ್ ಕದಿಯುವ ಸಾಹಸಕ್ಕಿಳಿದ ಸ್ಮಿತ್, ಜಡೇಜಾ ಅವರ ಅತ್ಯುತ್ತಮ ಕ್ಷೇತ್ರ ರಕ್ಷಣೆಗೆ ದಂಡ ತೆರಬೇಕಾಯಿತು. ಇದರೊಂದಿಗೆ ಸ್ಮಿತ್ ಅವರ ಭರ್ಜರಿ ಇನ್ನಿಂಗ್ಸ್ ಕೊನೆಗೊಂಡಿತು.

    ಭಾರತದ ಪರ ಫೀಲ್ಡಂಗ್ ಜೊತೆಗೆ ಬೌಲಿಂಗ್‍ನಲ್ಲಿ ಮಿಂಚಿದ ರವೀಂದ್ರ ಜಡೇಜಾ 4 ವಿಕೆಟ್ ಕಿತ್ತರೆ, ಬುಮ್ರಾ ಮತ್ತು ಸೈನಿ ತಲಾ ಎರಡು ವಿಕೆಟ್ ಪಡೆದರು, ಸಿರಾಜ್ ಒಂದು ವಿಕೆಟ್ ಕಿತ್ತರು.

    ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಮೊದಲ ವಿಕೆಟ್‍ಗೆ 70 ರನ್ ಪೇರಿಸಿತ್ತು ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 26 ರನ್‍ಗಳಿಸಿ ಔಟಾಗಿ ನಿರಾಸೆ ಮೂಡಿಸಿದರೆ ಇನ್ನೂರ್ವ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ತಮ್ಮ ಮೊದಲ ಅರ್ಧಶತಕ ಸಿಡಿಸಿ ಪ್ಯಾಟ್ ಕಮಿನ್ಸ್‍ಗೆ ವಿಕೆಟ್ ಒಪ್ಪಿಸಿದರು. ಎರಡನೇ ದಿನದಾಟದ ಅಂತ್ಯದ ವೇಳೆ ಭಾರತ 96 ರನ್ ಮಾಡಿ 2 ವಿಕೆಟ್ ಕಳೆದುಕೊಂಡಿದೆ 9 ರನ್ ಮಾಡಿರುವ ಪೂಜಾರ ಮತ್ತು 5 ರನ್ ಗಳಿಸಿ ರಹಾನೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    https://twitter.com/Naveen99688812/status/1347392326637809667