Tag: ಸ್ಟಾರ್ ಸುವರ್ಣ

  • ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ: ಹೊಸ ಅಧ್ಯಾಯ ಶುರು

    ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ: ಹೊಸ ಅಧ್ಯಾಯ ಶುರು

    ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ (Udho Udho Shri Renuka Yellamma) ಹೊಸ ಅಧ್ಯಾಯ ಶುರುಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಯಶಸ್ಸಿನಿಂದ ಸಾಗುತ್ತಿದೆ. ಇನ್ಮುಂದೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆಯನ್ನು ಹೇಳಲು ಸಜ್ಜಾಗಿದೆ ಸ್ಟಾರ್ ಸುವರ್ಣ.

    ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ (Kannada Serial) ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ. ರೇಣುಕೆ ಹಾಗೂ ಯಲ್ಲಮ್ಮನ ಪಾತ್ರಕ್ಕೆ ಜೀವ ತುಂಬಿದವರು ಅದ್ಭುತವಾಗಿ ನಟಿಸಿ ಅಭಿಮಾನಿಗಳ ಮನಗೆದ್ದು ಮನೆಮಾತಾಗಿದ್ದರು. ಆದ್ರೆ ಇನ್ಮುಂದೆ ಈ ಕಥೆಯು “ಪರಶುರಾಮನ ಅಧ್ಯಾಯ”ವನ್ನು ಹೇಳಲು ತಯಾರಾಗಿದೆ. ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆಯನ್ನು ಹೇಳುತ್ತಿರುವ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ.

    ಬಾಲ್ಯದಿಂದಲೂ ಕಷ್ಟಗಳನ್ನೇ ಎದುರಿಸುತ್ತಾ ಬಂದಿರುವ ರೇಣುಕಾ-ಯಲ್ಲಮ್ಮರ ಬಾಳಿನಲ್ಲಿ 10 ವರ್ಷಗಳ ಬಳಿಕ ಏನೆಲ್ಲಾ ಆಗಲಿದೆ? ಪರಶುರಾಮನ ಜನನ, ಬಾಲ್ಯ, ವಿದ್ಯಾಭ್ಯಾಸ ಹೇಗೆಲ್ಲ ಸಾಗಲಿದೆ? ಕಾರಾಗೃಹದಿಂದ ಹೊರ ಬಂದಿರೋ ಯಲ್ಲಮ್ಮನ ಜೀವನದ ದಿಕ್ಕು ಯಾವೆಲ್ಲ ಸವಾಲಿನಿಂದ ಕೂಡಿರಲಿದೆ? ಮೊದಲಿನಂತೆ ರೇಣುಕಾ ಯಲ್ಲಮ್ಮರ ಸ್ನೇಹ ಮುಂದುವರಿಯಲಿದೆಯಾ? ಎಂಬುದೇ ಈ ಧಾರಾವಾಹಿಯ ಮುಂದಿನ ರೋಚಕ ಕಥಾಹಂದರ.

    ಈಗಾಗಲೇ ಹೊಸ ಅಧ್ಯಾಯದ ಚಿತ್ರೀಕರಣ ಶುರುವಾಗಿದ್ದು, ರೇಣುಕೆಯಾಗಿ ವರ್ಷ, ಯಲ್ಲಮ್ಮನ ಪಾತ್ರದಲ್ಲಿ ಮಾನಸ ಅಭಿನಯಿಸುತ್ತಿದ್ದಾರೆ. ಅಮೋಘ ವಿನ್ಯಾಸದ ಸೆಟ್ ಮತ್ತು ಗ್ರಾಫಿಕ್ಸ್‌ನಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೋಮೋಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಷ್ಣುವಿನ ಮಹಾವತಾರ ಪರಶುರಾಮನ ಅಧ್ಯಾಯದ ಜೊತೆ, ಹೊಸ ಉತ್ಸಾಹದೊಂದಿಗೆ ಬರ್ತಿದ್ದಾರೆ ರೇಣುಕಾ-ಯಲ್ಲಮ್ಮ.”ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ – ಪರಶುರಾಮ ಅಧ್ಯಾಯ” ಇದೇ ಸೋಮವಾರದಿಂದ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  • ತದ್ವಿರುದ್ಧ ಮನಸುಗಳ ಧಾರಾವಾಹಿ: ನೀ ಇರಲು ಜೊತೆಯಲ್ಲಿ

    ತದ್ವಿರುದ್ಧ ಮನಸುಗಳ ಧಾರಾವಾಹಿ: ನೀ ಇರಲು ಜೊತೆಯಲ್ಲಿ

    ನ್ನಡ ಕಿರುತೆರೆ ವೀಕ್ಷಕರಿಗೆ ವಿಭಿನ್ನತೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ (Star Suvarna) ವಾಹಿನಿಯು ಇದೀಗ ನೀ ಇರಲು ಜೊತೆಯಲ್ಲಿ (Nee Iralu Jotheyalli) ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ.

    ಮಾತಿನಲ್ಲಿ ತುಂಟತನವನ್ನೊಳಗೊಂಡ ಕಥಾನಾಯಕ ಕೃಷ್ಣನದ್ದು ಸ್ವಾತಂತ್ಯ ಹೋರಾಟಗಾರರ ಕುಟುಂಬ. ಕೆಲಸದಲ್ಲಿ ಜಾಣ್ಮೆ, ನಿಪುಣತೆ ಹೊಂದಿರುವ ಈತ, ತಂತ್ರದಲ್ಲಿ ಕಪಟಿಯಾಗಿದ್ದರೂ ಮಾಡಿದ ಸಹಾಯಕ್ಕೆ ಪ್ರತಿಫಲವನ್ನು ನಿರೀಕ್ಷಿಸದ ಅಧುನಿಕ ಯುಗದ ಶ್ರೀ ಕೃಷ್ಣ. ಆದರೆ ಈ ಕೃಷ್ಣನಿಗೆ ಪೂತನಿಯಂತೆ ಕಾಟ ಕೊಡೋಳು ಅತ್ತಿಗೆ ಊರ್ಮಿಳಾ ದಿವಾನ್. ನನ್ನದೇ ನಡಿಬೇಕು, ನನ್ನಿಂದಲೇ ಎಲ್ಲಾ ಎಂಬ ಸೊಕ್ಕಿನಿಂದ ಮೆರಿತಿರೋ ಊರ್ಮಿಳಾ, ಅಹಂಕಾರವನ್ನೇ ಒಡವೆಯನ್ನಾಗಿಸಿಕೊಂಡು ಮನೆಮಂದಿಯನ್ನೆಲ್ಲಾ ತನ್ನ ಕೈಗೊಂಬೆಯಾಗಿಸಿರ್ತಾಳೆ.

    ಇನ್ನು ತಂದೆಯ ಮುದ್ದಿನ ಮಗಳು ಕಥಾನಾಯಕಿ ರಚನಾ ಪಟೇಲ್. ಓದಿನಲ್ಲಿ ಅತ್ಯಂತ ಪ್ರತಿಭಾವಂತೆ. ಯಾರನ್ನು ನೋಯಿಸದ ಮಾತೃ ಹೃದಯಿ. ಸೌಂದರ್ಯವನ್ನು ಮುಖದಲ್ಲಿ ಮಾತ್ರವಲ್ಲದೆ ನಡವಳಿಕೆಯಲ್ಲಿಯೂ ಒಗ್ಗೂಡಿಸಿರುವ ಈಕೆಗೆ, ಸಾಧನೆಯ ಶಿಖರವೇರಿರುವ ಊರ್ಮಿಳಾ ದಿವಾನೇ ಆದರ್ಶ. ಆಕೆಯಂತೆ ಏನನ್ನಾದರೂ ಸಾಧಿಸಬೇಕೆಂಬ ಛಲ ರಚನಾಳದ್ದು. ಹೀಗೆ ಸೊಕ್ಕಿನಿಂದ ಮೆರಿತಿರೋ ಊರ್ಮಿಳಾಗೆ ಮುಂದೆ ಕೃಷ್ಣ ತಕ್ಕ ಪಾಠ ಕಲಿಸ್ತಾನ? ತದ್ವಿರುದ್ಧ ಭಾವಗಳನ್ನು ಹೊಂದಿರುವ ಕೃಷ್ಣ,ರಚನಾ ಹೇಗೆ ಒಂದಾಗ್ತಾರೆ? ರಚನಾಗೆ ಆದರ್ಶವಾಗಿರೋ ಊರ್ಮಿಳಾ, ತನ್ನನ್ನೇ ಎದುರಾಳಿಯಾಗಿ ನೋಡಿದ್ರೆ ಮುಂದೇನಾಗಬಹುದು? ಎಂಬುದೇ ಮುಖ್ಯ ಕಥಾ ಹಂದರ. ಇದನ್ನೂ ಓದಿ: ‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ

    ಕನ್ನಡ ಕಿರುತೆರೆಯಲ್ಲಿ ಸುವರ್ಣ ಇತಿಹಾಸ ಬರೆದಿರೋ `ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ, ವರ್ಷಗಳ ಬಳಿಕ ಈ ಕಥೆಯ ಮೂಲಕ ಸುವರ್ಣ ಪರಿವಾರಕ್ಕೆ ಕಮ್‌ಬ್ಯಾಕ್ ಆಗಿದ್ದು ಊರ್ಮಿಳಾ ದಿವಾನ್ ಎಂಬ ಮುಖ್ಯ ಖಳನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಯಕನಾಗಿ ಪವನ್ ರವೀಂದ್ರ ಹಾಗೂ ನಾಯಕಿಯಾಗಿ ಸಲೋಮಿ ಡಿಸೋಜಾ ಬಣ್ಣ ಹಚ್ಚಿದ್ದಾರೆ. ಜೊತೆಗೆ ನಟ ಮೋಹನ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ನಟ-ನಟಿಯರು ಅಭಿನಯಿಸುತ್ತಿದ್ದಾರೆ.

    ಮುದ್ದುಲಕ್ಷ್ಮಿ, ಮರಳಿ ಬಂದಳು ಸೀತೆ, ಮರಳಿ ಮನಸಾಗಿದೆ ಸೇರಿದಂತೆ ಇನ್ನೂ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿರುವ ಧರಣಿ ಜಿ.ರಮೇಶ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ನೀ ಇರಲು ಜೊತೆಯಲ್ಲಿ ಧಾರಾವಾಹಿ ಮೂಡಿ ಬರಲಿದೆ. ಈ ಧಾರಾವಾಹಿ ಇದೇ ಆಗಸ್ಟ್ 11ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  • ಜೋಗಿ ನಿರ್ಮಾಪಕರಿಂದ ಮತ್ತೊಂದು ಹೊಸ ಸಾಹಸದ ಸಂಕಲ್ಪ

    ಜೋಗಿ ನಿರ್ಮಾಪಕರಿಂದ ಮತ್ತೊಂದು ಹೊಸ ಸಾಹಸದ ಸಂಕಲ್ಪ

    ಳೆದ 40 ವರ್ಷಗಳಿಂದ ಅಶ್ವಿನಿ ಆಡಿಯೋ ಕಂಪನಿ ನಡೆಸಿಕೊಂಡು ಬರುತ್ತಿರುವ ಅಶ್ವಿನಿ ರಾಮಪ್ರಸಾದ್ (Ashwini Ramprasad) ಅವರೀಗ ಕಿರುತೆರೆ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ.

    ದಶಕಗಳ ಹಿಂದೆ ಸಾವಿರಾರು ಜಾನಪದ, ಭಕ್ತಿಗೀತೆಗಳನ್ನು ತಮ್ಮ ಆಡಿಯೋ ಕಂಪನಿ ಮೂಲಕ ಜನರಿಗೆ ಕೇಳಿಸಿದ ರಾಮ್ ಪ್ರಸಾದ್ ಅವರಿಗೆ ಮೊದಲಿಂದಲೂ ಕಿರುತೆರೆ ಬಗ್ಗೆ ಆಸಕ್ತಿಯಿತ್ತು. ಆದಕ್ಕೆ ಸುವರ್ಣ ವಾಹಿನಿ (Star Suvarna) ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ. ಇದನ್ನೂ ಓದಿ: ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ

    ಶಿವಣ್ಣ, ಪ್ರೇಮ್ ಕಾಂಬಿನೇಶನ್‌ನ ಜೋಗಿ ಚಿತ್ರ ನಿರ್ಮಿಸುವ ಮೂಲಕ ದಾಖಲೆ ಬರೆದ ಅಶ್ವಿನಿ ರಾಮ್ ಪ್ರಸಾದ್ ಅನಂತರವೂ ಹಲವಾರು ಯಶಸ್ವಿ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಅಲ್ಲದೆ ಘಾರ್ಗ ಚಿತ್ರದ ಮೂಲಕ ತಮ್ಮ ಪುತ್ರನನ್ನೂ ಹೀರೋ ಮಾಡುತ್ತಿದ್ದಾರೆ. ಇದನ್ನೂ ಓದಿ: ಕನ್ನಡ, ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣವಾಗಲಿದೆ ರಿಷಬ್ ಶೆಟ್ಟಿ ಹೊಸ ಚಿತ್ರ

    ಇದೆಲ್ಲದರ ನಡುವೆ ಇದೀಗ ಧಾರ್ಮಿಕ ಹಾಗೂ ವಾಸ್ತುಶಾಸ್ತ್ರದ ಹಿನ್ನೆಲೆಯ `ಸುವರ್ಣ ಸಂಕಲ್ಪ ಅಮೃತಘಳಿಗೆ’ (Suvarna Sankalpa Amrutha Ghalige) ಕಾರ್ಯಕ್ರಮ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಕರ್ನಾಟಕ ಜ್ಯೋತಿಷ್ಯರತ್ನ ಪ್ರಶಸ್ತಿ ಪುರಸ್ಕೃತರಾದ ವಿಶ್ವನಾಥ ಭಾಗವತ ಗುರೂಜಿಯವರು ನಡೆಸಿಕೊಡಲಿದ್ದಾರೆ. ಗಾಯಕಿಯೂ ಆದ ಅಖಿಲಾ ಪಜಿಮಣ್ಣು ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಆಗಸ್ಟ್ 4ರಿಂದ ಪ್ರತಿದಿನ ಬೆಳಗ್ಗೆ 7:30ಕ್ಕೆ ಸುವರ್ಣ ಸಂಕಲ್ಪ ಅಮೃತಘಳಿಗೆ ಪ್ರಸಾರವಾಗಲಿದೆ. ಇದನ್ನೂ ಓದಿ: ಟೀಕೆಯಿಂದ ಖಿನ್ನತೆಗೆ ಜಾರಿದ್ದೆ, ಆತ್ಮಹತ್ಯೆಗೆ ಯೋಚಿಸಿದ್ದೆ – ಮೌನ ಮುರಿದ ಚಹಲ್‌

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ರಾಮ್ ಪ್ರಸಾದ್ ಅವರು ಮಾತನಾಡಿ, ಈಗಾಗಲೇ 6 ವರ್ಷಗಳಿಂದ ನಡೆದುಕೊಂಡು ಬಂದಿರುವ ಕಾರ್ಯಕ್ರಮವಿದು. ಇದರ ನಂತರ ನಾವೇನು ಮಾಡಬೇಕು ಅಂತ ಪ್ಲಾನ್ ಮಾಡುತ್ತಿದ್ದೇವೆ. ರಾಜ್ಯದ, ದೇಶದ ಎಲ್ಲಾ ಪ್ರಖ್ಯಾತ ದೇವಸ್ಥಾನಗಳಿಗೂ ಭೇಟಿ ನೀಡಬೇಕೆಂದು ಯೋಜನೆಯಿದೆ. ಅಲ್ಲದೆ ನಮಗೆ ಯಾರೇ ಕರೆ ಮಾಡಿದರೂ ಬಡವ, ಬಲ್ಲಿದ ಅಂತ ನೋಡದೆ ಅವರ ಮನೆಗಳಿಗೆ ಹೋಗಿ ವಾಸ್ತು ಪರಿಹಾರ ಸೂಚಿಸುತ್ತೇವೆ ಎಂದು ಹೇಳಿದ್ದಾರೆ.

    ಇದರ ಜೊತೆಗೆ ಸಂಜೀವಿನಿ ಸಂಕಲ್ಪ, ಯೋಗ ಸಂಕಲ್ಪ, ಮಂತ್ರ ಸಂಕಲ್ಪ ಹೀಗೆ ಅನೇಕ ಶೀರ್ಷಿಕೆಯಡಿ ಈ ಕಾರ್ಯಕ್ರಮ ನಡೆಯಲಿದೆ. ವೇದಿಕೆಯಲ್ಲಿ ವಿಶ್ವನಾಥ ಗುರೂಜಿ, ನಿರೂಪಕಿ ಅಖಿಲಾ ಪಜಿಮಣ್ಣು ಹಾಗೂ ಸುವರ್ಣ ವಾಹಿನಿಯ ಮುಖ್ಯಸ್ಥರೂ ಸುವರ್ಣ ಸಂಕಲ್ಪ ಅಮೃತಘಳಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ.

  • ಕಿರುತೆರೆಯಲ್ಲೂ ಅಬ್ಬರಿಸಲಿದೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’

    ಕಿರುತೆರೆಯಲ್ಲೂ ಅಬ್ಬರಿಸಲಿದೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’

    ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಬೆಳ್ಳಿಪರದೆಯಲ್ಲಿ ಕಮಾಲ್ ಮಾಡಿದ್ಮೇಲೆ ಕಿರುತೆರೆಯಲ್ಲಿ ಅಬ್ಬರಿಸಲು ಮುಂದಾಗಿದೆ. ದೈವ ಕೋಲದ ಕಥೆಯುಳ್ಳ ಈ ಸಿನಿಮಾವನ್ನ ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ಈಗ ಟಿವಿ ಪರದೆಯಲ್ಲಿ ಮಿಂಚಲು ದಿನಗಣನೆ ಶುರುವಾಗಿದೆ. ಶತದಿನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಟಿವಿಯಲ್ಲಿ ಪ್ರಸಾರವಾಗುವ ಬಗ್ಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ.

    ಕನ್ನಡ ನಾಡಿನ ದಂತಕಥೆ `ಕಾಂತಾರ’ ಸಿನಿಮಾವು ದೇಶದೆಲ್ಲೆಡೆ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಸಿನಿಮಾ ರಿಲೀಸ್ ಆದ ದಿನದಿಂದ ಇಲ್ಲಿಯವರೆಗೆ `ಕಾಂತಾರ’ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ರಿಷಬ್ ಶೆಟ್ಟಿ ಅಭಿನಯದ ಈ ಚಿತ್ರಕ್ಕೆ ಸಿಕ್ಕ ಮೆಚ್ಚುಗೆ ಅಷ್ಟಿಷ್ಟಲ್ಲ. ಇತ್ತೀಚೆಗಷ್ಟೇ ಒಟಿಟಿಯಲ್ಲಿ ಪ್ರಸಾರವಾಗಿದ್ದ `ಕಾಂತಾರʼ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿತ್ತು. ಇನ್ನೂ `ಕಾಂತಾರ’ ಚಿತ್ರ 100 ದಿನಗಳನ್ನ ಪೂರೈಸಿದೆ.

    ತುಳುನಾಡಿನ ದೈವಾರಾಧನೆಯ ಬಗ್ಗೆ ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ಸೂಪರ್ ಹಿಟ್ ಸಿನಿಮಾ `ಕಾಂತಾರ’ ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣದಲ್ಲಿ ಬರಲಿದೆ. ಈಗಾಗಲೇ `ಕಾಂತಾರ’ ಸಿನಿಮಾದ ಟೀಸರ್ ಪ್ರಸಾರವಾಗುತ್ತಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ. ಇದನ್ನೂ ಓದಿ: ಮಿಲ್ಕಿ ಬ್ಯೂಟಿ ತಮನ್ನಾ – ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

    ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ರಿಷಬ್ ಮತ್ತು ಸಪ್ತಮಿ ಗೌಡ ನಟನೆಯ `ಕಾಂತಾರ’ ಯಾವ ದಿನ ಪ್ರಸಾರವಾಗಲಿದೆ ಎಂಬ ಮಾಹಿತಿಯನ್ನ ವಾಹಿನಿ ಹಂಚಿಕೊಂಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಗಣೇಶ್ ನಡೆಸಿಕೊಡುವ ‘ಇಸ್ಮಾರ್ಟ್ ಶೋ’ ಸ್ಪೆಷಲ್ ಏನು? ಯಾರೆಲ್ಲ ಸೆಲೆಬ್ರಿಟಿ ಜೋಡಿ ಭಾಗಿಯಾಗ್ತಿದ್ದಾರೆ ಗೊತ್ತಾ?

    ಗಣೇಶ್ ನಡೆಸಿಕೊಡುವ ‘ಇಸ್ಮಾರ್ಟ್ ಶೋ’ ಸ್ಪೆಷಲ್ ಏನು? ಯಾರೆಲ್ಲ ಸೆಲೆಬ್ರಿಟಿ ಜೋಡಿ ಭಾಗಿಯಾಗ್ತಿದ್ದಾರೆ ಗೊತ್ತಾ?

    ವೀಕೆಂಡ್ ಮನೋರಂಜನೆಗೆ ಸ್ಟಾರ್ ಸುವರ್ಣ ವಾಹಿನಿ ಈಗ  “ಇಸ್ಮಾರ್ಟ್ ಜೋಡಿ”‌ ಎಂಬ ಸುಂದರ ಕಾರ್ಯಕ್ರಮ ಆರಂಭಿಸಲಿದೆ. ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಈ ರಿಯಾಲಿಟಿ ಶೋ ಇದೇ ಜುಲೈ 16ರ ಶನಿವಾರದಿಂದ ಆರಂಭವಾಗಲಿದೆ. ಹತ್ತು ಸೆಲೆಬ್ರಿಟಿ ಜೋಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ-ಅರವಿಂದ ಪಾಲಿಗೆ ಈ ದಿನ ಯಾಕೆ ಸ್ಪೆಷಲ್ ಗೊತ್ತಾ?

    ಈ ಕುರಿತು ಗಣೇಶ್ ಮಾತನಾಡಿ, ಇದುವರೆಗೂ ಮನರಂಜನೆಯ ಮತ್ತು ಸ್ನೇಹದ ಕುರಿತಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ. ಈಗ ಮೊದಲ ಬಾರಿಗೆ ಸೆಲೆಬ್ರಿಟಿ ಜೋಡಿಗಳ ಕುರಿತಾಗಿ ಒಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಎರಡು ವರ್ಷ ಗ್ಯಾಪ್​ ಆಗಿತ್ತು. ಬೇರೇನೋ ಹೊಸದು ಮಾಡಬೇಕು,  ಫ್ಯಾಮಿಲಿ ಆಡಿಯನ್ಸ್​ ತಲುಪಬೇಕು ಎಂದು ಯೋಚಿಸುತ್ತಿದ್ದಾಗ ಸ್ಟಾರ್​ ಸುವರ್ಣದವರು ಈ ಕಾರ್ಯಕ್ರಮದ ಕುರಿತು ಹೇಳಿದರು. ಇದೊಂದು ಸೆಲೆಬ್ರಿಟಿ ಜೋಡಿಯ ಕುರಿತಾದ ಕಾರ್ಯಕ್ರಮ. ಇಲ್ಲಿ ಹೊಸದಾಗಿ ಮದುವೆಯಾದವರಿಂದ 40 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯರವರೆಗೂ ಇದ್ದಾರೆ. ಇವತ್ತಿನ ದಿನಗಳಲ್ಲಿ ದಂಪತಿಗಳು ಸಣ್ಣಸಣ್ಣ ವಿಷಯಕ್ಕೂ ಬಹಳ ಬೇಗ ದೂರ ಆಗುತ್ತಿದ್ದಾರೆ. ಜೀವನ ಎಂದರೆ ಅದಲ್ಲ, ಇಲ್ಲಿ ಏಳುಬೀಳು, ಸುಖ-ಸಂತೋಷ ಎಲ್ಲವೂ ಇರುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಇದು. ಈ ಕಾರ್ಯಕ್ರಮವು ನಾಲ್ಕು ಜನರಿಗೆ ಮಾದರಿ ಆಗಬೇಕು, ನೀವೇ ಇದನ್ನು ನಡೆಸಿಕೊಡಬೇಕು ಎಂದರು. ಒಳ್ಳೆಯ ಕಾನ್ಸೆಪ್ಟ್​ ಆದ್ದರಿಂದ ಒಪ್ಪಿಕೊಂಡೆ. ಒಟ್ಟು 26 ಕಂತುಗಳು. ಪ್ರತಿ ಶನಿವಾರ ಮತ್ತು ಭಾನುವಾರ ರಾತಿ 9ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಆರಂಭಿಕ ಎರಡು ಕಂತುಗಳ ಚಿತ್ರೀಕರಣ ನಡೆದಿದೆ.  ಈಗ ಇನ್ನೆರೆಡು ಕಂತುಗಳ ಚಿತ್ರೀಕರಣ ಆಗುತ್ತಿದೆ. ಇಲ್ಲಿ ಒಬ್ಬೊಬ್ಬರ ಜರ್ನಿ ಒಂದೊಂದು ರೀತಿ. ಹಿರಿಯರ ಜೊತೆಗೆ ಮಾತನಾಡುವಾಗ ಅವರ ಜೀವನದ ಬಗ್ಗೆ ಕೇಳಿ ಬಹಳ ಖುಷಿಯಾಯಿತು. ನಾನು ಸಹ ಒಬ್ಬ ಪ್ರೇಕ್ಷಕನಾಗಿ ಬಹಳ ಕುತೂಹಲ ಎಂದನಿಸಿತು. ಒಟ್ಟಿನಲ್ಲಿ ಎಲ್ಲರೂ ಪ್ರೀತಿಯಿಂದ ಬದುಕಿ ಅಂತ ಸಂದೇಶ ಸಾರುವಂತಹ ಕಾರ್ಯಕ್ರಮ ಇದು. ಇಲ್ಲಿ ತೀರ್ಪುಗಾರರಿರುವುದಿಲ್ಲ. ನಾನು ನಿರೂಪಕನಾಗಿರುತ್ತೇನೆ. ಸ್ಪರ್ಧಿಗಳಿಗೆ ಹಲವು ಟಾಸ್ಕ್​ಗಳನ್ನು ನೀಡಲಾಗುತ್ತದೆ. ಗೆದ್ದವರಿಗೆ ಅಂಕಗಳನ್ನು ನೀಡಲಾಗುತ್ತದೆ. ಮೊದಲ ಐದು ಕಂತುಗಳಲ್ಲಿ ಯಾವುದೇ ಎಲಿಮಿನೇಷನ್​ ಇರುವುದಿಲ್ಲ. ಗೆದ್ದವರಿಗೆ 10 ಲಕ್ಷ ಬಹುಮಾನ ನೀಡಲಾಗುತ್ತದೆ. ಇಲ್ಲಿ ಚಿತ್ರರಂಗ, ಕಿರುತೆರೆ ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಜೋಡಿಗಳು ಭಾಗವಹಿಸುತ್ತಿವೆ. ಜತೆಗೆ ಸಿನಿಮಾ ಪ್ರಮೋಷನ್​ಗಳು ಸಹ ಇರುತ್ತವೆ. ಸೆಲೆಬ್ರಿಟಿಗಳು ಆಗಾಗ ಅತಿಥಿಯಾಗಿ ಬರುತ್ತಿರುತ್ತಾರೆ ಎಂದರು ಗಣೇಶ್.

    ವಿನಯ್​ ಗೌಡ ಮತ್ತು ಅಕ್ಷತಾ ಗೌಡ, ಸುಮನ್​ ನಗರ್​ಕರ್​ ಮತ್ತು ಗುರುದೇವ್​ ನಾಗರಾಜ, ದಿಶಾ ಮದನ್​ ಮತ್ತು ಶಶಾಂಕ್​ ವಾಸುಕಿ ಗೋಪಾಲ್​, ಪ್ರತಿಕ್​ ಪ್ರೊ ಮತ್ತು ಮೌಲ್ಯಶ್ರೀ ಎಂ,ಶ್ರೀರಾಮ ಸುಳ್ಯ ಮತ್ತು ಪುನೀತ ಆಚಾರ್ಯ, ರಘು ವೈನ್​ ಸ್ಟೋರ್​ ಮತ್ತು ವಿದ್ಯಾಶ್ರೀ, ಇಂಪನಾ ಜಯರಾಜ್​ ಮತ್ತು ಅಜಿತ್​  ಜಯರಾಜ್​, ಸಪ್ನ ದೀಕ್ಷಿತ್​ ಮತ್ತು ಅಶ್ವಿನ್​ ದೀಕ್ಷಿತ್​, ಜೈಜಗದೀಶ್​ ಮತ್ತು ವಿಜಯಲಕ್ಷ್ಮಿ ಸಿಂಗ್​, ರಿಚರ್ಡ್​ ಲೂಯಿಸ್​ ಮತ್ತು ಹ್ಯಾರಿಯೆಟ್​ ಲೂಯಿಸ್​.

    ರಾಕ್​ಲೈನ್​ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅದ್ಭುತ  ಸೆಟ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ.  ಶೀರ್ಷಿಕೆ ಹಾಡಿಗೆ ALL OK ಸಂಗೀತ ಸಂಯೋಜನೆ ಮಾಡಿ ಅವರೆ ಹಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಈ ಹಾಡು ಜನರ ಮನ ಗೆದ್ದಿದೆ. ನಿರ್ದೇಶಕ ಪ್ರಶಾಂತ್​, ವರ್ಷ, ಉಷಾ ಗೌಡ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ನೋಡಿ ಜೇಮ್ಸ್ ಸಿನಿಮಾ : ಜು.17ಕ್ಕೆ ವರ್ಲ್ಡ್ ಪ್ರೀಮಿಯರ್

    ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ನೋಡಿ ಜೇಮ್ಸ್ ಸಿನಿಮಾ : ಜು.17ಕ್ಕೆ ವರ್ಲ್ಡ್ ಪ್ರೀಮಿಯರ್

    ನ್ನಡದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಇದೀಗ ಮತ್ತೊಂದು ಬಾರಿ ವರ್ಲ್ಡ್ ಪ್ರೀಮಿಯರ್ ಗೆ ಸಿದ್ಧಗೊಂಡಿದೆ. ಇದು ಪುನೀತ್ ನಟನೆಯ ಕೊನೆ ಸಿನಿಮಾವಾಗಿದ್ದರಿಂದ ವಿಶೇಷ ರೀತಿಯಲ್ಲಿಯೇ ಜನರ ಮುಂದೆ ತರಲು ಸ್ಟಾರ್ ಸುವರ್ಣ ವಾಹಿನಿ ರೆಡಿಯಾಗಿದ್ದು, ಜುಲೈ 17ರಂದು ಸಂಜೆ 5.30ಕ್ಕೆ ಜೇಮ್ಸ್ ಪ್ರಸಾರವಾಗಲಿದೆ.

    ಈಗಾಗಲೇ ಜೇಮ್ಸ್ ಸಿನಿಮಾವನ್ನು ಹಲವರು ನೋಡಿರಬಹುದು. ಆದರೆ, ಆ ಜೇಮ್ಸ್ ಗೂ ಈ ಜೇಮ್ಸಗೂ ವ್ಯತ್ಯಾಸವಿದೆಯಂತೆ. ಈಗಾಗಲೇ ಥಿಯೇಟರ್ ನಲ್ಲಿ ತೆರೆಕಂಡ ಜೇಮ್ಸ್ ಸಿನಿಮಾದಲ್ಲಿ ಅಪ್ಪು ಪಾತ್ರಕ್ಕೆ ಶಿವರಾಜ್ ಕುಮಾರ್ ಡಬ್ ಮಾಡಿದ್ದರೆ, ಆದರೆ, ಕಿರುತೆರೆಯಲ್ಲಿ ತೆರೆಕಾಣುತ್ತಿರುವ ಈ ಜೇಮ್ಸ್ ನಲ್ಲಿ ಸ್ವತಃ ಅಪ್ಪು ಅವರ ವಾಯ್ಸ್ ಅನ್ನೇ ಬಳಸಲಾಗಿದೆಯಂತೆ. ಹಾಗಾಗಿ ಈ ಸಿನಿಮಾ ಬೇರೆ ಲೋಕಕ್ಕೆ ನೋಡುಗರನ್ನು ಕರೆದುಕೊಂಡು ಹೋಗಲಿದೆಯಂತೆ. ಇದನ್ನೂ ಓದಿ:ಆಗಸ್ಟ್ ಮೂರನೇ ವಾರದಲ್ಲಿ ರವಿಚಂದ್ರನ್ ಪುತ್ರನ ಮದುವೆ: ಹಸೆಮಣೆ ಏರಲು ಮನೋರಂಜನ್ ಸಿದ್ಧತೆ

    ಜೇಮ್ಸ್ ಸಿನಿಮಾ ಮಾರ್ಚ್ 17ಕ್ಕೆ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ನೂರಾರು ಕೋಟಿಗಳನ್ನು ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆದಿತ್ತು. ಅಪ್ಪು ನಟನೆಯ ಕೊನೆ ಸಿನಿಮಾ ಇದಾಗಿದ್ದರಿಂದ, ಅಭಿಮಾನಿಗಳು ಚಿತ್ರವನ್ನು ಭಾವನಾತ್ಮಕವಾಗಿ ತಗೆದುಕೊಂಡಿದ್ದರು. ಮತ್ತೆ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ.

    Live Tv
    [brid partner=56869869 player=32851 video=960834 autoplay=true]

  • ಇಸ್ಮಾರ್ಟ್ ಜೋಡಿಗೆ ಜೊತೆಯಾಗಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

    ಇಸ್ಮಾರ್ಟ್ ಜೋಡಿಗೆ ಜೊತೆಯಾಗಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

    ನ್ನಡದ ಸ್ಟಾರ್ ಸುವರ್ಣ ವಾಹಿನಿಯು ಹೊಸ ರಿಯಾಲಿಟಿ ಶೋ ಶುರು ಮಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಇಸ್ಮಾರ್ಟ್ ಜೋಡಿ ಎಂದು ಹೆಸರಿಡಲಾಗಿದೆ. ಈ ಶೋ ವಿಶೇಷ ಅಂದರೆ, ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುತ್ತಿದ್ದಾರೆ. ತಮ್ಮ ಲವಲವಿಕೆಯ ಮಾತಿನ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ನೂತನ ಕಾನ್ಸೆಪ್ಟ್ ಜೊತೆ ಸಿದ್ಧವಾಗಿರುವ ಇಸ್ಮಾರ್ಟ್ ಜೋಡಿ ಶೋ ಇದೇ ಜುಲೈ 16 ರಿಂದ ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

    ಈಗಾಗಲೇ ಸಿನಿಮಾಗಳ ಜೊತೆ ಕಿರುತೆರೆಯಲ್ಲೂ ಮಿಂಚುತ್ತಿರುವ ಗಣೇಶ್, ಈ ಶೋಗಾಗಿ ಬೇರೆ ರೀತಿಯಲ್ಲೇ ಸಿದ್ಧತೆ ಮಾಡಿಕೊಂಡಿದ್ದಾರಂತೆ. ಹಾಗಾಗಿ ಇಸ್ಮಾರ್ಟ್ ಜೋಡಿಯ ಶಕ್ತಿಯೇ ಗಣೇಶ್ ಎಂದಿದೆ ಸ್ಟಾರ್ ಸುವರ್ಣ ವಾಹಿನಿ. ಈ ಶೋಗಾಗಿ ಅದ್ಧೂರಿ ಸೆಟ್ ಕೂಡ ಹಾಕಲಾಗಿದ್ದು, ಆಲ್ ಓಕೆ ಅಲೋಕ್ ಸಂಯೋಜಿಸಿದ ಹಾಡು ಕೂಡ ಕಾರ್ಯಕ್ರಮಕ್ಕೆ ಸಾಥ್ ನೀಡಲಿದೆ. ಇದೊಂದು ರೊಮ್ಯಾಂಟಿಕ್ ಶೋ ಆಗಿದ್ದು, ವರ್ಣರಂಜಿತ ಸೆಟ್ ನಲ್ಲೇ ಬಹುತೇಕ ಶೂಟಿಂಗ್ ನಡೆಯಲಿದೆ. ಇದನ್ನೂ ಓದಿ:`ಮಣಿರತ್ನಂ’ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಐಶ್ವರ್ಯ ರೈ

    ಶೋನಲ್ಲಿ ಭಾಗಿಯಾಗಲು ಈಗಾಗಲೇ ಜನಪ್ರಿಯ ಜೋಡಿಗಳು ಸಜ್ಜಾಗಿದ್ದು, ಆ ಜೋಡಿಗಳು ಯಾವವು? ಯಾರೆಲ್ಲ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ ಎನ್ನುವುದನ್ನು ಜುಲೈ 16 ರಂದೇ ತೆರೆಯ ಮೇಲೆ ನೋಡಿ ಎಂದಿದೆ ಸ್ಟಾರ್ ಸುವರ್ಣ ವಾಹಿನಿ. ಈ ಜೋಡಿಗಳನ್ನು ಪರಿಚಯಿಸುವುದಕ್ಕಾಗಿಯೇ ಅಂದು ಗ್ರ್ಯಾಂಡ್ ಲಾಂಚ್ ಎಪಿಸೋಡ್ ಸಿದ್ಧ ಮಾಡಿಕೊಳ್ಳಲಾಗಿದೆ. ಈ ಜೋಡಿಯು ಪ್ರೇಕ್ಷಕರನ್ನು ರಮಿಸಿ, ಕುಣಿಸಿ, ನಗಿಸಿ, ಆಡಿಸಿ, ಬೀಳಿಸಿ ಒಟ್ಟಾರೆಯಾಗಿ ವೀಕೆಂಡ್ ಅನ್ನು ಭರಪೂರ ಮನರಂಜನೆ ನೀಡುವ ಕೆಲಸ ಮಾಡಲಿದೆಯಂತೆ.

    Live Tv
    [brid partner=56869869 player=32851 video=960834 autoplay=true]

  • ಇಸ್ಮಾರ್ಟ್ ಜೋಡಿಗೆ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಕ

    ಇಸ್ಮಾರ್ಟ್ ಜೋಡಿಗೆ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಕ

    ಕಿರುತೆರೆ ಜಗತ್ತಿನಿಂದಲೇ ಸಿನಿಮಾ ರಂಗಕ್ಕೆ ಪ್ರವೇಶಿಸಿರುವ ಗೋಲ್ಡನ್ ಸ್ಟಾರ್ ಗಣೇಶ್, ಇದೀಗ ಮತ್ತೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಜೊತೆ ಜೊತೆಗೆ ಹಲವು ಜನಪ್ರಿಯ ಶೋಗಳನ್ನು ಅವರು ನಡೆಸಲು ಒಪ್ಪಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಗೋಲ್ಡನ್ ಗ್ಯಾಂಗ್ ಶೋ ನಡೆಸಿಕೊಟ್ಟಿರುವ ಅವರು ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರಲಿರುವ ‘ಇಸ್ಮಾರ್ಟ್ ಜೋಡಿ’ ಕಾರ್ಯಕ್ರಮವನ್ನೂ ನಡೆಸಿಕೊಡಲಿದ್ದಾರೆ.

    ಜನಪ್ರಿಯ ನಟ ಗಣೇಶ್ ಅವರು ಇಸ್ಮಾರ್ಟ್ ಜೋಡಿ ನಡೆಸಿಕೊಡುವ ಕುರಿತಾಗಿ ಸ್ವತಃ ವಾಹಿನಿಯೇ ಪ್ರೋಮೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದೆ. ಈ ಪ್ರೊಮೋಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದು ಯಾವ ಬಗೆಯ ಕಾರ್ಯಕ್ರಮ? ಎಂದು ಹಲವರು ಪ್ರಶ್ನಿಸಿದ್ದಾರೆ. ಜೋಡಿ ಎನ್ನುವ ಹೆಸರು ಇರುವುದರಿಂದ ಇದೊಂದು ಫ್ಯಾಮಿಲಿ ಕಾರ್ಯಕ್ರಮನಾ ಎಂದೂ ಹಲವರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಪಿಂಕ್ ಕಲರ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

    ಸೊಗಸಾದ ಪ್ರೋಮೋ ಮಾಡಿರುವ ಸ್ಟಾರ್ ಸುವರ್ಣ ವಾಹಿನಿಯು ‘ಮೊದಲು ನಿಮ್ಮ ಗಣಪಂಗೆ ಪ್ರೀತಿ ಸಿಕ್ಕಿದ್ದು ಟಿವಿಲಿ ನಮಸ್ಕಾರ ಅಂದಾಗ, ಆಮೇಲೆ ಪ್ರೀತಿ ಮಾಡ್ದಾಗ, ಪ್ರೀತಿ ಕೈ ಕೊಟ್ಟಾಗ, ಪ್ರೀತಿ ಸಿಕ್ಕಾಗ ಶಿಳ್ಳೆ ಚಪ್ಪಾಲೆ ಹೊಡೆದು ಮೆರೆಸಿ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದೀರಾ. ಅಂತಹ ಪ್ರೀತಿನ ಮತ್ತೆ ಸೆಲೆಬ್ರೇಟ್ ಮಾಡೋಕೆ ರೋಮ್ಯಾಂಟಿಕ್ ಜೋಡಿಗಳ ಜೊತೆ ಮನರಂಜನೆಯ ಮೋಡಿ ಮಾಡೋಕೆ ನಿಮ್ಮ ಮುಂದೆ ತರ್ತಿದೀನಿ ಇಸ್ಮಾರ್ಟ್ ಜೋಡಿ’ ಎಂದು ಬರೆದುಕೊಂಡಿದ್ದಾರೆ.

    Live Tv

  • ಬೊಂಬಾಟ್ ಭೋಜನದಲ್ಲಿ ವಾರ ಪೂರ್ತಿ ಸಿಲೆಬ್ರಿಟೀಸ್

    ಬೊಂಬಾಟ್ ಭೋಜನದಲ್ಲಿ ವಾರ ಪೂರ್ತಿ ಸಿಲೆಬ್ರಿಟೀಸ್

    ಸದಾ ಹೊಸ ಬಗೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದೆ ಸ್ಟಾರ್ ಸುವರ್ಣ ವಾಹಿನಿ. ಅದರಲ್ಲೂ ಅಡುಗೆ ಕಾರ್ಯಕ್ರಮದ ಮೂಲಕ ಕೇವಲ ಜನ ಸಾಮಾನ್ಯರಿಗೆ ಮಾತ್ರವಲ್ಲ, ಸಿಲೆಬ್ರಿಟಿಗಳಿಗೂ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ. ಇದನ್ನೂ ಓದಿ : ಇನ್‌ಸ್ಟಾಗ್ರಾಮ್‌ ಪ್ರಭಾವಿ ಪಟ್ಟಿಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ – ದಕ್ಷಿಣದ ಸ್ಟಾರ್‌ಗಳಿಗೂ ಇಲ್ಲ ಪಟ್ಟ

    ಸ್ಟಾರ್ ಸುವರ್ಣ ವಾಹಿನಿಯ ಬೊಂಬಾಟ್ ಭೋಜನ ಕಾರ್ಯಕ್ರಮ ಕಿರುತೆರೆ ವೀಕ್ಷಕರ ಅಚ್ಚುಮೆಚ್ಚಿನ ಅಡುಗೆ ಕಾರ್ಯಕ್ರಮ. ಪಾಕ ಪ್ರವೀಣ ಸಿಹಿಕಹಿ ಚಂದ್ರು ಅವರು ನಡೆಸಿಕೊಡುವ ಈ ಕಾರ್ಯಕ್ರಮ ವಿನೂತನ ಅಡುಗೆ, ವಿಶೇಷ ಅತಿಥಿಗಳಿಂದಾಗಿ ಕಿರುತೆರೆಯ ಮಧ್ಯಾಹ್ನದ ಮನರಂಜನೆಯಲ್ಲಿ ಅಗ್ರಗಣ್ಯವಾಗಿದೆ. ಇದನ್ನೂ ಓದಿ : ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ಗೆ ಭಯಂಕರ ಬೇಡಿಕೆ ಇಟ್ಟ ಫ್ಯಾನ್ಸ್

    ಬೊಂಬಾಟ್ ಭೋಜನದಲ್ಲಿ ಈ ವಾರ ಪೂರ್ತಿ ಸೆಲಬ್ರಿಟಿಗಳು ಭಾಗವಹಿಸಲಿದ್ದಾರೆ. ಮೇ.2ರಂದು ಹಿರಿಯ ನಟ ದೊಡ್ಡಣ್ಣ , ಮೇ 3 ರಂದು ರಂಗಭೂಮಿ ನಿರ್ದೇಶಕರಾದ ಝಾಫರ್ ಮೋಹಿಯುದ್ದೀನ್, ಮೇ 4ರಂದು ದಿಯಾ ಸಿನಿಮಾ ಖ್ಯಾತಿಯ ನಾಯಕ ನಟಿ ಖುಷಿ, ಮೇ 5 ಮತ್ತು 6 ರಂದು ಹಿರಿಯ ನಟಿ ಭವ್ಯ ಮತ್ತು ನಿರ್ದೇಶಕ ಸಿಂಪಲ್ ಸುನಿ ಹಾಗು ಮೇ 7 ರಂದು ನಟಿ ಸಂಜನ ಆನಂದ್ ಬೊಂಬಾಟ್ ಭೋಜನದಲ್ಲಿ ತಮ್ಮ ಕೈರುಚಿ ತೋರಿಸಲಿದ್ದಾರೆ. ಇದನ್ನೂ ಓದಿ : ಹಿಂದಿ ಬದಲು ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ: ಕಂಗನಾ ರಣಾವತ್

    ಸೋಮವಾರಂದಿಂದ ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ವಿಶೇಷ ಅತಿಥಿಗಳ ನಳಪಾಕ ಮೂಡಿ ಬರಲಿದೆ..

  • ಸ್ಟಾರ್ ಸುವರ್ಣದಲ್ಲಿ ‘ಜೇನುಗೂಡು’ ಪ್ರೇಮಕಾವ್ಯ ಫೆ.21ರಂದು ತೆರೆಗೆ

    ಸ್ಟಾರ್ ಸುವರ್ಣದಲ್ಲಿ ‘ಜೇನುಗೂಡು’ ಪ್ರೇಮಕಾವ್ಯ ಫೆ.21ರಂದು ತೆರೆಗೆ

    ಜೇನುಗೂಡು ಸ್ಟಾರ್ ನೆಟ್ವರ್ಕ್‍ನ ಅತ್ಯಂತ ಯಶಸ್ವಿಯಾದ ಧಾರಾವಾಹಿಯಾಗಿದೆ. ಸ್ಟಾರ್ ಜಲ್ಸಾ(ಬೆಂಗಾಲಿ) ಈ ಧಾರಾವಾಹಿಯನ್ನು ಮೊಟ್ಟಮೊದಲ ಬಾರಿಗೆ 2020 ರಲ್ಲಿ ಚೋರ್ಕಟೋ ಎಂಬ ಹೆಸರಿನಲ್ಲಿ ತೆರೆಗೆ ತಂದಿದ್ದು, ಆನಂತರ ಅದನ್ನು ಅತೀ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಇತರೇ ಭಾಷೆಗಳಾದ ಮಲೆಯಾಳಂ, ಹಿಂದಿ, ಮರಾಠಿ, ತಮಿಳಿಗೆ ತರಲಾಯಿತು. ಈಗ ಇದನ್ನು ಕನ್ನಡಕ್ಕೆ ತರಲಾಗಿದೆ.

    ಈ ಪ್ರೇಮಕಥೆಯಲ್ಲಿ ಆಧುನಿಕ ಮನೋಭಾವದ ಯುವತಿ, ಮೊದಲು ತಾನು ಮದುವೆ ಆಗುವ ಹುಡುಗನ ಕುಟುಂಬದವರೊಂದಿಗೆ ಪ್ರೇಮಕಥೆಯಲ್ಲಿ ಬೀಳುತ್ತಾಳೆ. ನಂತರ ಆ ಹುಡುಗನ ಜೊತೆ ಈ ಕಥೆಯಲ್ಲಿ ಆಧುನಿಕ ಮನೋಭಾವದ ಈ ಹುಡುಗಿ ಮಧ್ಯಮವರ್ಗದ ವಿಜ್ಞಾನಿ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಾಗ ಅವಳ ಬದುಕು ಹೇಗೆ ಬದಲಾಗುತ್ತದೆ ಎಂಬುದನ್ನು ಒಳಗೊಂಡಿದೆ.

    ನಡುಕೋಟಿ ಕುಟುಂಬದ ಮೂವರು ಅಣ್ಣತಮ್ಮಂದಿರ ಸ್ವಭಾವ ಬೇರೆ, ಬೇರೆ ಆಗಿದ್ದರೂ, ಅವರು ಯಾವಾಗಲೂ ಒಗ್ಗಟ್ಟಿನಿಂದ ಇರುತ್ತಾರೆ. ಈ ಕುಟುಂಬದವರು ಯಾವುದೇ ಸಂದರ್ಭದಲ್ಲೂ ಒಬ್ಬರಿಗೊಬ್ಬರು ಬಿಟ್ಟು ಕೊಡದೇ ಹೊಂದಾಣಿಕೆ ಜೀವನ ನಡೆಸುತ್ತಿರುತ್ತಾರೆ. ಇವರ ಕುಟುಂಬ ಜೇನುಗೂಡಿನ ತರಹ ಬೇರೆಯವರಿಗೆ ಮಾದರಿಯಾಗುವಂತಹ ಕೂಡುಕುಟುಂಬವಾಗಿರುತ್ತದೆ. ಈ ಧಾರಾವಾಹಿಯ ನಾಯಕನಾಗಿರುವ ಎರಡನೇ ತಮ್ಮನ ಮಗ ಶಶಾಂಕನಿಗೆ ವಿಜ್ಞಾನಿಯಾಗಿ ಅಮೇರಿಕಾದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುತ್ತದೆ. ಆದರೆ ಅವನ ಕುಟುಂಬಕ್ಕಾಗಿ ಅವನು ಆ ಅವಕಾಶವನ್ನು ತ್ಯಜಿಸುತ್ತಾನೆ. ಇದನ್ನೂ ಓದಿ: ಬಣ್ಣದ ಲೋಕಕ್ಕೆ ಕಾಲಿಟ್ಟ ಬಿ.ಎಸ್ ಯಡಿಯೂರಪ್ಪ

    ಇದಕ್ಕೆ ವ್ಯಕ್ತರಿಕ್ತವಾಗಿ ಹೀರೋಯಿನ್ ದಿಯಾ ಫೇಮಸ್ ಸರ್ಜನ್ ಶ್ರೀಧರ್ ಮೂರ್ತಿ ಅವರ ಮಗಳು. ಅವಳಿಗೆ ಈ ಕುಟುಂಬದ ಬಂಧಗಳ ಅರಿವೇ ಇರುವುದಿಲ್ಲ. ಏಕೆಂದರೆ ಅವರ ತಾಯಿ ಅವರ ಕೆಲಸಕ್ಕಾಗಿ ಅವಳನ್ನು ತ್ಯಜಿಸಿ ಅಮೆರಿಕಗೆ ಹೋಗಿರುತ್ತಾರೆ. ದಿಯಾಳನ್ನು ಅವರ ತಂದೆ ಹಾಗೂ ಅವರ ತಂದೆಯ ತಂಗಿ ಸಾರಿಕಾ ಪ್ರೀತಿಯಿಂದ ಬೆಳೆಸುರುತ್ತಾಳೆ. ಸಾರಿಕಾ ಗಂಡನಿಂದ ದೂರವಾಗಿ ಗಂಡನ ಮನೆಯಲ್ಲೇ ಇರುತ್ತಾಳೆ.

    Jenugudu

    ದಿಯಾ ಹಾಗೂ ಶಶಾಂಕ್ ಸದಾ ಜಗಳವಾಡುತ್ತಿರುತ್ತಾರೆ. ಒಬ್ಬರನ್ನೊಬ್ಬರು ದ್ವೇಷಿಸುತ್ತಾರೆ. ಆದರೆ ಇವರಿಬ್ಬರನ್ನು ಒಂದು ಮಾಡಲು ಎರಡೂ ಕುಟುಂಬದವರು ನಿರ್ಧರಿಸಿರುತ್ತಾರೆ. ಕೆಲವೊಂದು ಸಂದರ್ಭಗಳ ಒತ್ತಡಗಳಿಂದ ದಿಯಾ ಹಾಗೂ ಶಶಾಂಕ್ ಮದುವೆ ಆಗುತ್ತಾರೆ. ಇದನ್ನೂ ಓದಿ: ಕೊನೆಗೂ ತನ್ನ ಕನಸು ನೆರವೇರಿತು ಎಂದ ಪ್ರಭಾಸ್ !

    ಮುಂದೆ ಕಥೆಯಲ್ಲಿ ದಿಯಾ ತಾನು ಮುಂದಿನ ವರ್ಷ ಪರೀಕ್ಷೆಯಲ್ಲಿ ಪಾಸು ಆದರೆ ಶಶಾಂಕನನ್ನು ಬಿಟ್ಟು ಬರುವ ಒಪ್ಪಂದ ಮಾಡಿಕೊಂಡಿರುತ್ತಾಳೆ. ಈ ವಿಚಾರ ಕುಟುಂಬಕ್ಕೆ ತಿಳಿದಾಗ ಅವರು ದಿಯಾ ಪರೀಕ್ಷೆಯಲ್ಲಿ ಫೇಲ್ ಆಗಲಿ ಎಂದು ಬಯಸುತ್ತಾರೆ. ಆದರೆ ಶಶಾಂಕ್ ಅವಳಿಂದ ಬಿಡುಗಡೆ ಪಡೆಯಲು ಅವಳು ಪಾಸ್ ಆಗಲಿ ಎಂದು ಬಯಸುತ್ತಾನೆ. ಈ ಪ್ರಕ್ರಿಯೆಯಲ್ಲಿ ಅವರಿಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ.

    Jenugudu

    ರೇಖಾ ಕೆ.ಪಿ ಈ ಧಾರಾವಾಹಿಯ ನಿರ್ಮಾಪಕರಾಗಿದ್ದಾರೆ. ಅನಿಲ್ ನಿರ್ದೇಶಿಸುತ್ತಿದ್ದಾರೆ. ಆರವ್ ಮತ್ತು ನಿತ್ಯ (ಶಶಾಂಕ್ ಮತ್ತು ದಿಯಾ ಪಾತ್ರಧಾರಿಗಳು), ಈ ಧಾರಾವಾಹಿ ಅದ್ಭುತ ತಾರಾಗಣವನ್ನು ಹೊಂದಿದೆ. ವೀಣಾಸುಂದರ್, ರಮೇಶ್ ಪಂಡಿತ್, ರವಿ ಭಟ್, ಶ್ರೀಕಾಂತ್ ಹೆಬ್ಳೀಕರ್ ಹಾಗೂ ಉತ್ತರ ಕರ್ನಾಟಕದ ಬಹಳಷ್ಟು ಕಲಾವಿದರನ್ನು ಒಳಗೊಂಡಿದೆ. ಈ ಧಾರಾವಾಹಿಯು ಉತ್ತರ ಕರ್ನಾಟಕದ ಸಂಸ್ಕೃತಿ, ಶೈಲಿ ಹಾಗೂ ಭಾಷೆಯನ್ನು ಒಳಗೊಂಡಿದೆ. ಇದು ವೀಕ್ಷಕರಿಗೆ ಒಂದು ಅದ್ಭುತವಾದ ಉತ್ತರ ಕರ್ನಾಟಕದ ಔತಣವಾಗಿರುತ್ತದೆ. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ಈ ಜೇನುಗೂಡಿನಂತಹ ಕುಟುಂಬ ವೀಕ್ಷಕರನ್ನು ಇದೇ 21ರ ಸೋಮವಾರ ರಾತ್ರಿ 10 ಗಂಟೆಗೆ ಸ್ಟಾರ್ ಸುವರ್ಣ ಮೂಲಕ ರಂಜಿಸಲು ಬರುತ್ತಿದೆ.