ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟರ ನಿವಾಸದಲ್ಲಿ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಇಂದು ನಸುಕಿನ ಜಾವ ನಿರ್ಗಮಿಸಿದ್ದಾರೆ.
ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್ ಅವರ ಮನೆಯಲ್ಲಿ ಈಗಾಗಲೇ ಐಟಿ ದಾಳಿ ಮುಗಿದಿದೆ. ಆದರೆ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಬಳಿ ಕಿಚ್ಚ ಸುದೀಪ್ ಮನವಿ
ಸ್ಟಾರ್ ನಟರ ಕುಟುಂಬದ ಆಸ್ತಿಪಾಸ್ತಿಗೆ ಸಂಬಂಧಿಸಿದ ಆಸ್ತಿ ದಾಖಲೆಗಳು ಐಟಿ ವಶದಲ್ಲಿದೆ. ಅಲ್ಲದೇ ಬ್ಯಾಂಕ್ ಖಾತೆ, ಲಾಕರ್ ಗಳಲ್ಲಿಟ್ಟಿರುವ ಚಿನ್ನಾಭರಣಗಳ ದಾಖಲೆಗಳನ್ನು ಕೂಡ ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಐಟಿ ದಾಳಿ ವೇಳೆ ಬೆಳಕಿಗೆ ಬಂತು ಮಹತ್ವದ ವಿಚಾರಗಳು
ಅಧಿಕಾರಿಗಳು ಇನ್ಮುಂದೆ ವಿಚಾರಣೆಗೆ ಬನ್ನಿ ಎಂದು ಹೇಳಿದಾಗಲೆಲ್ಲಾ ಸ್ಟಾರ್ ನಟರು ಐಟಿ ಆಫೀಸ್‍ಗೆ ಹೋಗಬೇಕಾಗಿದೆ. ಆಸ್ತಿಪಾಸ್ತಿ ಬಗ್ಗೆ ಸ್ಟಾರ್ ನಟರು ಹಾಗೂ ಅವರ ಕುಟುಂಬಸ್ಥರು ಪದೇ ಪದೇ ವಿಚಾರಣೆಗೆ ಹಾಜರಾಗಿ ತಮ್ಮ ಆದಾಯದ ಮಾಹಿತಿಯನ್ನು ನೀಡಬೇಕಾಗುತ್ತದೆ.
ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಲು ಕಾರಣವಾಗಿದ್ದು ಒಂದು ಡೈರಿ ಎನ್ನುವ ವಿಚಾರ ಈಗ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹೌದು. ಐಟಿ ದಾಳಿ ನಡೆಯಲು ಕಾರಣವಾಗಿದ್ದು ಜಯಣ್ಣ ಅವರ ಡೈರಿಯಂತೆ. ಐಟಿ ಅಧಿಕಾರಿಗಳು ದಾಳಿ ನಡೆಸುವ 1 ವಾರದ ಮೊದಲು ಜಯಣ್ಣ ಅವರನ್ನು ಕರೆದು ವಿಚಾರಣೆ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಹಲವು ಥಿಯೇಟರ್ ಮಾಲೀಕರ ಜೊತೆಗೂ ಸಿನಿಮಾ ಕಲೆಕ್ಷನ್ ಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಐಟಿ ಸಂಗ್ರಹಿಸಿತ್ತು.
ಡೈರಿ ಸಿಕ್ಕಿದ ಕಾರಣ ಸ್ಟಾರ್ ನಟರ ಆದಾಯದ ಮೇಲೂ ಐಟಿ ಕಣ್ಣು ಹಾಕಿದೆ ಎಂದು ಮೂಲಗಳು ತಿಳಿಸಿವೆ. ಜಯಣ್ಣ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ವ್ಯವಹಾರದ ಬಗ್ಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಯಾವ ನಟರೊಂದಿಗೆ ಏನು ವ್ಯವಹಾರ, ರಿಯಲ್ ಎಸ್ಟೇಟ್ ಹೂಡಿಕೆ ಮಾಹಿತಿ ಈ ಡೈರಿಯಲ್ಲಿ ಇದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಎರಡನೇ ದಿನವೂ ದಾಳಿ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಸ್ಟಾರ್ ನಟರು
ನಿರ್ಮಾಪಕರಾಗಿರುವ ಜಯಣ್ಣ ಕಳೆದ 20 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದಾರೆ. ನೂರಾರು ಚಿತ್ರಗಳನ್ನು ವಿತರಿಸಿರುವ ಜಯಣ್ಣ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವು ವ್ಯಕ್ತಿಗಳಿಗೆ ಬೇಕಾಗಿರುವ ಜಯಣ್ಣ ಅವರು ವಿತರಣಾ ಹಕ್ಕನ್ನು ಪಡೆದುಕೊಂಡರೆ ಆ ಚಿತ್ರ ಕನಿಷ್ಟ 200 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ. ‘ದಿ ವಿಲನ್’, ‘ಕೆ.ಜಿ.ಎಫ್’ಚಿತ್ರಗಳ ಬಿಡುಗಡೆಗೂ ಸಹಾಯ ಮಾಡಿದ್ದ ಜಯಣ್ಣ ‘ಸಾಹೇಬ’, ‘ಮಫ್ತಿ’, ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರವನ್ನು ನಿರ್ಮಿಸಿದ್ದರು. ಇದನ್ನೂ ಓದಿ: ಐಟಿ ದಾಳಿ ವೇಳೆ ಬೆಳಕಿಗೆ ಬಂತು ಮಹತ್ವದ ವಿಚಾರಗಳು
ಯಶ್ ಅಭಿನಯದ ಡ್ರಾಮಾ, ಗೂಗ್ಲಿ, ಗಜಕೇಸರಿ, ಮಿ.ಆಂಡ್ ಮಿಸ್ಸಸ್ ರಾಮಾಚಾರಿ, ಪುನೀತ್ ರಾಜ್ ಕುಮಾರ್ ಅಭಿನಯದ ಪರಾಮತ್ಮ, ರಣವಿಕ್ರಮವನ್ನು ಜಯಣ್ಣ ನಿರ್ಮಿಸಿದ್ದರೆ, ಈ ವರ್ಷ ಕೂಡ ಅವರು ನಿರ್ಮಿಸುತ್ತಿರುವ ‘ರುಸ್ತುಂ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಜಯಣ್ಣ ಅವರು ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಗುತ್ತಿಗೆದಾರರ ಜೊತೆಗೂ ನಂಟು ಹೊಂದಿದ್ದಾರೆ.
ಗುರುವಾರ ಐಟಿ ಅಧಿಕಾರಿಗಳು ಯಶ್, ಸುದೀಪ್, ಪುನೀತ್, ಶಿವಣ್ಣ ಹಾಗೂ ರಾಧಿಕಾ ಅವರ ಮನೆ ಮೇಲೆ ನಡೆಸಿದ್ದರು. ಈ ವೇಳೆ ಹಲವು ದಾಖಲೆಗಳು ಸಿಕ್ಕಿದ್ದು, ಸ್ಟಾರ್ ನಟರು ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ವ್ಯವಹಾರಗಳ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಪ್ರಶ್ನೆ ಕೇಳುತ್ತಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇಂದು ಅಧಿಕಾರಿಗಳು ಸ್ಟಾರ್ ನಟರ ವಿಚಾರಣೆ ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳ ಪ್ರಶ್ನೆಗೆ ಸ್ಟಾರ್ ನಟರು ಖಡಕ್ ಆಗಿ ಉತ್ತರ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಗುರುವಾರ ಐಟಿ ಅಧಿಕಾರಿಗಳು ಯಶ್, ಸುದೀಪ್, ಪುನೀತ್, ಶಿವಣ್ಣ ಹಾಗೂ ರಾಧಿಕಾ ಅವರ ಮನೆ ಮೇಲೆ ನಡೆಸಿದ್ದರು. ಈ ವೇಳೆ ಹಲವು ದಾಖಲೆಗಳು ಸಿಕ್ಕಿದ್ದು, ಸ್ಟಾರ್ ನಟರು ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ವ್ಯವಹಾರಗಳ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಪ್ರಶ್ನೆ ಕೇಳುತ್ತಿದ್ದಾರೆ.
* ಐಟಿ ಕೇಳಿದ ಪ್ರಶ್ನೆಗೆ ಯಶ್ ಉತ್ತರವೇನು….? ಐಟಿ ಪ್ರಶ್ನೆ: 70 ಕೋಟಿ ವೆಚ್ಚದಲ್ಲಿ ಕೆಜಿಎಫ್ ನಿರ್ಮಿಸಲಾಗಿದೆ. ಹೂಡಿಕೆ ಬಗ್ಗೆ ನಿಮಗೇನು ಗೊತ್ತು? ಯಶ್ ಉತ್ತರ: ಹಣಕಾಸಿನ ವ್ಯವಹಾರ ಬಗ್ಗೆ ನನಗೇನೂ ಗೊತ್ತಿಲ್ಲ. ನಿರ್ಮಾಪಕರನ್ನೇ ಕೇಳಬೇಕು ಐಟಿ: ನಿಮಗೆ ಸ್ವಲ್ಪನೂ ಮಾಹಿತಿ ಇಲ್ಲದೆ ಬಹುಕೋಟಿ ಸಿನಿಮಾದಲ್ಲಿ ನಟಿಸಿದ್ರಾ? ಯಶ್: ನಿರ್ಮಾಪಕರ ವ್ಯವಹಾರ ಬಗ್ಗೆ ನನಗೇನೂ ತಿಳಿದಿಲ್ಲ. ನಾನು ಒಬ್ಬ ನಟನಷ್ಟೇ. ಐಟಿ: ನೀವು ಕನ್ನಡದ ಸೂಪರ್ ಸ್ಟಾರ್. ನಿಮ್ಮ ಸಂಭಾವನೆ ಎಷ್ಟು? ಯಶ್: ಒಂದೊಂದು ಸಿನಿಮಾಕ್ಕೆ ಒಂದೊಂದು ಸಂಭಾವನೆ ಇರುತ್ತೆ. ಅದು ಬದಲಾಗುತ್ತಿರುತ್ತದೆ. ಐಟಿ: ನಿಮ್ಮ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಬಹುದೇ? ಯಶ್: ನನಗೆ 40 ಕೋಟಿ ಸಾಲವಿದೆ. 2 ಬ್ಯಾಂಕ್‍ನಲ್ಲಿ ಸಾಲ ಮಾಡಿದ್ದೇನೆ. ಐಟಿ: ನೀವು ಹೊಸ ಮನೆ ಖರೀದಿ ಮಾಡಿದ್ದೀರಿ. ಇದರ ಬಗ್ಗೆ ದಾಖಲೆ ಕೊಡಬಹುದಾ? ಯಶ್: ಸಾಲ ಪಡೆದು ಮನೆ ಖರೀದಿಸಲಾಗಿದೆ. ಇದರ ಬಗ್ಗೆ ನಮ್ಮ ಅಕೌಂಟೆಂಟ್ ಮಾಹಿತಿ ನೀಡಲಿದ್ದಾರೆ.
* ಐಟಿ ಕೇಳಿದ ಪ್ರಶ್ನೆಗೆ ಪುನೀತ್ ಉತ್ತರವೇನು….? ಐಟಿ ಪ್ರಶ್ನೆ: ನೀವು ಬಹು ಬೇಡಿಕೆಯ ನಟ. ನಿಮ್ಮ ಸಿನಿಮಾಗಳ ಸಂಭಾವನೆ ಎಷ್ಟು? ಪುನೀತ್ ಉತ್ತರ: ಒಂದೊಂದು ಸಿನಿಮಾಗಳಿಗೆ ಒಂದು ಸಂಭಾವನೆ ಇದೆ. ಐಟಿ: ನಿಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಬಹುದಾ? ಪುನೀತ್: ಎಲ್ಲದಕ್ಕೂ ರಸೀತಿ ಇದೆ. ಸ್ವಲ್ಪ ಟೈಂ ಬೇಕು. ಐಟಿ: ನೀವು ಕೋರಮಂಗಲದಲ್ಲಿ ಆಸ್ತಿ-ಪಾಸ್ತಿ ಹೊಂದಿದ್ದೀರಿ. ಇದರ ವಿವರಣೆ ನೀಡಿ. ಪುನೀತ್: ಎಲ್ಲದಕ್ಕೂ ದಾಖಲಾತಿಗಳಿವೆ. ನನ್ನ ಅಕೌಂಟೆಂಟ್ ಮಾಹಿತಿ ನೀಡ್ತಾರೆ. ಐಟಿ: ಇತ್ತೀಚೆಗೆ ಹೊಸ ಪ್ರಾಜೆಕ್ಟ್‍ಗಳನ್ನು ಆರಂಭಿಸಿದ್ದೀರಿ. ಏನದು? ಪುನೀತ್: ಪಿಆರ್ ಕೆ ಆಡಿಯೋ ಹಾಗೂ ಪಿಆರ್ ಕೆ ಪ್ರೊಡಕ್ಷನ್ ಆರಂಭಿಸಿದ್ದೇವೆ. ಐಟಿ: ದೊಡ್ಡ ದೊಡ್ಡ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದೀರಾ. ಅದರ ಮಾಹಿತಿ ಕೊಡಿ. ಪುನೀತ್: ದೊಡ್ಡ ವ್ಯವಹಾರ ಆಗುತ್ತಿರೋದ್ರಿಂದ ಮಾಹಿತಿಗೆ ಕಾಲಾವಕಾಶ ಬೇಕು.
* ಐಟಿ ಕೇಳಿದ ಪ್ರಶ್ನೆಗೆ ಸುದೀಪ್ ಉತ್ತರವೇನು….? ಐಟಿ ಪ್ರಶ್ನೆ: ನಿಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿ. ಸುದೀಪ್ ಉತ್ತರ: ನನಗೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ. ಐಟಿ: ನಿಮ್ಮಲ್ಲಿ ಐಷಾರಾಮಿ ಕಾರುಗಳಿವೆ. ಅದರ ಮಾಹಿತಿ ನೀಡಿ. ಸುದೀಪ್: ಹೊಸದಾಗಿ ಯಾವುದು ಖರೀದಿಸಿಲ್ಲ. ಇವೆಲ್ಲಾ ಹಳೆಯದ್ದು ಐಟಿ: ನೀವು ಬೆಳ್ಳಿತೆರೆ ಅಲ್ಲದೆ, ಕಿರುತೆರೆಯಲ್ಲೂ ನಟನೆ ಮಾಡುತ್ತಿದ್ದೀರಿ. ಎಷ್ಟು ಸಂಭಾವನೆ ಪಡೆಯುತ್ತೀರಿ? ಸುದೀಪ್: ಸಂಭಾವನೆ, ವ್ಯವಹಾರ ಬಗ್ಗೆ ನಮ್ಮ ಅಕೌಂಟೆಂಟ್ ಮಾಹಿತಿ ಕೊಡಲಿದ್ದಾರೆ ಐಟಿ: ಚಿತ್ರರಂಗವಲ್ಲದೆ ಇತರ ವ್ಯವಹಾರಗಳ ಬಗ್ಗೆ ಮಾಹಿತಿ ಕೊಡಿ. ಸುದೀಪ್: ಎಲ್ಲವನ್ನೂ ಲಿಖಿತ ರೂಪದಲ್ಲಿ ನಮ್ಮ ಅಕೌಂಟೆಂಟ್ ನೀಡಲಿದ್ದಾರೆ.
* ಐಟಿ ಕೇಳಿದ ಪ್ರಶ್ನೆಗೆ ಶಿವಣ್ಣ ಉತ್ತರವೇನು….? ಐಟಿ ಪ್ರಶ್ನೆ: ಮೋಸ್ಟ್ ಬ್ಯುಸಿ ನಟ ನೀವು. ವರ್ಷಕ್ಕೆ ಎಷ್ಟು ಸಿನಿಮಾಗಳ ನಟಿಸುತ್ತೀರಾ? ಶಿವಣ್ಣ ಉತ್ತರ: ವರ್ಷಕ್ಕೆ 7ರಿಂದ 8 ಸಿನಿಮಾಗಳಲ್ಲಿ ನಟಿಸುತ್ತೇನೆ. ಐಟಿ: ನಿಮ್ಮ ಪುತ್ರಿಯ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಇದೆ. ಇದರ ಮಾಹಿತಿ ಕೊಡಿ. ಶಿವಣ್ಣ: ನಮ್ಮ ಅಕೌಂಟೆಂಟ್ ಸಂಪರ್ಕಿಸಿ ಕೊಡುತ್ತೇನೆ. ಐಟಿ: ನೀವು ಸಿನಿಮಾವಲ್ಲದೆ, ಸೀರಿಯಲ್ ನಿರ್ಮಾಣದಲ್ಲಿ ತೊಡಗಿದ್ದೀರಾ? ಶಿವಣ್ಣ: ಹೌದು, ಅದರ ವ್ಯವಹಾರವನ್ನೆಲ್ಲಾ ಪತ್ನಿ ನೋಡಿಕೊಳ್ಳುತ್ತಾರೆ. ಐಟಿ: ರಿಯಲ್ ಎಸ್ಟೇಟ್‍ನಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಾ? ಶಿವಣ್ಣ: ಹೂಡಿಕೆಯ ಬಗ್ಗೆ ನನ್ನ ಅಕೌಂಟೆಂಟ್ ಮಾಹಿತಿ ಕೊಡುತ್ತಾರೆ.