Tag: ಸ್ಟಾರ್ ನಟ

  • ನಾನು ಮಲಯಾಳಂ ಸ್ಟಾರ್ ಜೊತೆ ಮದುವೆ ಆಗುತ್ತಿಲ್ಲ ಎಂದ ಕನ್ನಡದ ನಟಿ ನಿತ್ಯಾ ಮೆನನ್

    ನಾನು ಮಲಯಾಳಂ ಸ್ಟಾರ್ ಜೊತೆ ಮದುವೆ ಆಗುತ್ತಿಲ್ಲ ಎಂದ ಕನ್ನಡದ ನಟಿ ನಿತ್ಯಾ ಮೆನನ್

    ನ್ನಡ ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಮತ್ತು ಕನ್ನಡಿಗರೇ ಆಗಿದ್ದ ನಿತ್ಯಾ ಮೆನನ್ ಮದುವೆ ವಿಚಾರ ಸ್ಯಾಂಡಲ್ ವುಡ್ ಮತ್ತು ಮಲಯಾಳಂ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಮಲಯಾಳಂ ಸ್ಟಾರ್ ನಟನ ಜೊತೆ ನಿತ್ಯಾ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು. ಆ ನಟ ಯಾರಿರಬಹುದು ಎನ್ನುವ ಲೆಕ್ಕಾಚಾರ ನಡೆದಿತ್ತು. ನಿತ್ಯಾ ಅವರ ಬಾಯ್ ಫ್ರೆಂಡ್ ಬಗ್ಗೆ ಹುಡುಕಾಟ ನಡೆಸಿದ ಬೆನ್ನಲ್ಲೇ ಈ ಸುದ್ದಿ ಠಸ್ ಪಟಾಕಿ ಆಗಿದೆ.

    ಹೌದು, ನಿತ್ಯಾ ಮೆನನ್ ಮದುವೆ ಆಗಲಿರುವ ಸ್ಟಾರ್ ನಟ ಯಾರು ಎನ್ನುವ ಪ್ರಶ್ನೆ ಮೂಡಿತ್ತು. ನಿತ್ಯಾ ಜೊತೆ ಆತ್ಮೀಯರಾಗಿರುವ ಹಲವು ನಟರ ಹೆಸರುಗಳು ಕೂಡ ಜೋಡಣೆಯಾಗಿದ್ದವು. ಅದರಲ್ಲಿ ಸ್ಟಾರ್ ನಟರ ಮಕ್ಕಳ ಹೆಸರು ಇದ್ದವು. ಈ ತೀವ್ರತೆಯನ್ನು ಅರಿತ ನಿತ್ಯಾ ಮೆನನ್, ಈ ಎಲ್ಲ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಇಟ್ಟಂತೆ ಮಾತನಾಡಿದ್ದಾರೆ. ತಾವು ಯಾರೊಂದಿಗೂ ಡೇಟಿಂಗ್ ಮಾಡಿಲ್ಲ, ಯಾವ ಸ್ಟಾರ್ ನಟನನ್ನೂ ಮದುವೆ ಆಗುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ:ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಆಸ್ಪತ್ರೆಗೆ ದಾಖಲು

    ಸದ್ಯ ಮದುವೆ ಆಗುವ ಬಗ್ಗೆ ಯೋಚನೆ ಕೂಡ ಮಾಡಿಲ್ಲ. ಅಲ್ಲದೇ, ಮದುವೆಯಾಗುವಷ್ಟು ಸಲುಗೆಯನ್ನು ಯಾರೊಂದಿಗೂ ನಾನು ಇಟ್ಟುಕೊಂಡಿಲ್ಲ. ಅನೇಕ ಸ್ಟಾರ್ ನಟರು ಆತ್ಮೀಯರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರನ್ನು ಮದುವೆ ಆಗುತ್ತಿದ್ದೇನೆ ಎನ್ನುವುದು ಸುಳ್ಳು. ನಾನು ನನ್ನ ಕೆಲಸದಲ್ಲಿ ಬ್ಯುಸಿ ಆಗಿರುವೆ. ಮದುವೆ ಮಾತು ದೂರ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೋಟೆಲಿನಲ್ಲಿ ಸ್ಟಾರ್ ನಟರೊಬ್ಬರಿಂದ ವೇಟರ್ ಮೇಲೆ ಹಲ್ಲೆ – ಬೊಮ್ಮಾಯಿಗೆ ಇಂದ್ರಜಿತ್ ದೂರು

    ಹೋಟೆಲಿನಲ್ಲಿ ಸ್ಟಾರ್ ನಟರೊಬ್ಬರಿಂದ ವೇಟರ್ ಮೇಲೆ ಹಲ್ಲೆ – ಬೊಮ್ಮಾಯಿಗೆ ಇಂದ್ರಜಿತ್ ದೂರು

    ಬೆಂಗಳೂರು: ಸ್ಟಾರ್ ನಟರೊಬ್ಬರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರು ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ದೂರು ನೀಡಿದ್ದಾರೆ.

    ಮೈಸೂರಿನ ಸಂದೇಶ್ ನಾಗರಾಜ್ ಮಾಲೀಕತ್ವದ ಹೋಟೇಲಿನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ಸಂಪೂರ್ಣ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಸ್ಟಾರ್ ನಟ,  ಹೋಟೇಲಿನಲ್ಲಿ ದಲಿತ ವೇಟರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಆರೋಪಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಇಂದ್ರಜಿತ್, ಸಂದೇಶ್ ನಾಗರಾಜ್ ಹೋಟೆಲಿನಲ್ಲಿ ನಟರೊಬ್ಬರು ದಲಿತ ಸಮುದಾಯದ ವೇಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ವೇಟರ್ ಗೆ ಕಣ್ಣುಗಳಿಗೆ ಹಾನಿಯಾಗಿದೆ. ಸಿಸಿ ಟಿವಿ ದೃಶ್ಯ ಇದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಎಂದು ಇಂದ್ರಜಿತ್ ಆಗ್ರಹಿಸಿದ್ದಾರೆ. ಆದರೆ ನಟನ ಹೆಸರನ್ನು ಮಾತ್ರ ಇಂದ್ರಜಿತ್ ಮನವಿಯಲ್ಲಿ ಉಲ್ಲೇಖ ಮಾಡಿಲ್ಲ.

    ನಾನು ಸಾಮಾನ್ಯರ ಪರ. ಪ್ರತಿಯೊಂದು ಕೇಸ್ ನಲ್ಲಿ ಸಾಮಾನ್ಯರಿಗೆ ನ್ಯಾಯ ಸಿಗ್ತಿಲ್ಲ. ಹೀಗಾಗಿ ಈ ಪ್ರಕರಣದಲ್ಲಾದರೂ ನ್ಯಾಯ ಸಿಗಲಿ ಎಂದು ಇಂದ್ರಜಿತ್ ಒತ್ತಾಯಿಸಿದ್ದಾರೆ.

  • ಡಿ ಬಾಸ್‍ಗೆ ನಿರ್ದೇಶಕ ತರುಣ್ ಸುಧೀರ್ ಧನ್ಯವಾದ

    ಡಿ ಬಾಸ್‍ಗೆ ನಿರ್ದೇಶಕ ತರುಣ್ ಸುಧೀರ್ ಧನ್ಯವಾದ

    ಬೆಂಗಳೂರು: ಖ್ಯಾತ ನಿರ್ದೇಶಕ ತರುಣ್ ಸುಧೀರ್ ಸ್ಯಾಂಡಲ್‍ವುಡ್ ಸ್ಟಾರ್ ನಟ ದರ್ಶನ್ ಅವರಿಗೆ ಧನ್ಯವಾದ ಹೇಳಿದ್ದಾರೆ.

    ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ಚೌಕ ಸಿನಿಮಾ ತೆರೆಕಂಡು ನಾಲ್ಕು ವರ್ಷ ಪೂರೈಸಿದೆ. ಈ ಸಂತೋಷದ ವಿಚಾರವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿರುವ ತರುಣ್ ಸುಧೀರ್ ಅವರು ದರ್ಶನ್‍ಗೆ ಧನ್ಯವಾದ ಹೇಳುವ ಮೂಲಕವಾಗಿ ಸಂಭ್ರಮಿಸಿದ್ದಾರೆ.

    ಚೌಕ ಸಿನಿಮಾದಲ್ಲಿ ಬರೆದ ಅತಿಥಿ ಪಾತ್ರ ಈ ಮಟ್ಟಕ್ಕೆ ಬೆಳೆದು ಒಂದು ದಿನ ದೊಡ್ಡ ಸಿನಿಮಾ ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಹೀಗೆ ಒಂದು ದಿನ ದೊಡ್ಡ ಸ್ಟಾರ್‍ ಗೆ ನಿರ್ದೇಶನ ಮಾಡುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿಕೊಂಡಿರಲಿಲ್ಲ. ಅಂದಿನಿಂದ ಇಂದಿನವರೆಗೂ ನನಗೆ ‘ರಾಬರ್ಟ್’ ಎಂಬುದು ಸ್ಪೆಷಲ್ ಆಗಿದೆ. ಇದು ಸಾಧ್ಯವಾಗಿಸಿದ್ದಕ್ಕೆ ಡಿ ಬಾಸ್‍ಗೆ ಧನ್ಯವಾದಗಳು ಎಂದು ತರುಣ್ ಸುಧೀರ್ ಟ್ವೀಟ್ ಮಾಡಿ ದರ್ಶನ್ ಮತ್ತು ಸುಧೀರ್ ಒಟ್ಟಿಗೆ ಇರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ಚೌಕ ದೊಡ್ಡಮಟ್ಟದ ಯಶಸ್ಸನ್ನು ನೀಡಿತ್ತು. ಇದೀಗ ಚಿತ್ರ ತೆರೆಕಂಡು ನಾಲ್ಕು ವರ್ಷ ಪೂರೈಸಿದೆ. ಚೌಕದಲ್ಲಿ ನಟ ದರ್ಶನ್ ‘ರಾಬರ್ಟ್’ ಎಂಬ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಒಂದು ಪಾತ್ರವು ಕೂಡಾ ಸಿನಿಮಾ ಗೆಲುವಿಗೆ ಕಾರಣವಾಗಿತ್ತು. ಅದೇ ಪಾತ್ರವನ್ನು ಇಟ್ಟುಕೊಂಡು ತರುಣ್ ‘ರಾಬರ್ಟ್’ ಚಿತ್ರವನ್ನು ಮಾಡಿದ್ದಾರೆ. ದರ್ಶನ್ ಅವರ ಸಹಕಾರದಿಂದ ಸಾಧ್ಯವಾಗಿದೆ ಎಂದು ತರುಣ್ ಟ್ವೀಟ್ ಮಾಡುವ ಮೂಲಕವಾಗಿ ನೆನಪಿಸಿಕೊಂಡಿದ್ದಾರೆ.

    ಎಲ್ಲೆಡೆ ಸುದ್ದಿಯಲ್ಲಿರುವ ಬಹು ನಿರೀಕ್ಷೆಯ ಚಿತ್ರಗಳಲ್ಲಿ ‘ರಾಬರ್ಟ್’ ಸಿನಿಮಾ ಒಂದಾಗಿದೆ. ಮಾರ್ಚ್ 11 ರಂದು ಸಿನಿಮಾ ಬಿಡುಗಡೆಯಾಗಿ ಅಭಿಮಾನಿಗಳನ್ನು ರಂಜಿಸಲು ತೆರೆಮೇಲೆ ಬರಲಿದೆ.

  • ಸ್ಟಾರ್ ಹೀರೋಗಳ ನಡುವೆ ಬಹಿರಂಗ ವಾರ್- ಚಿರಂಜೀವಿಗೆ ಗರುಡವೇಗದಲ್ಲಿ ರಾಜಶೇಖರ್ ಸವಾಲ್

    ಸ್ಟಾರ್ ಹೀರೋಗಳ ನಡುವೆ ಬಹಿರಂಗ ವಾರ್- ಚಿರಂಜೀವಿಗೆ ಗರುಡವೇಗದಲ್ಲಿ ರಾಜಶೇಖರ್ ಸವಾಲ್

    ಹೈದರಾಬಾದ್: ಇಷ್ಟು ದಿನ ತೆಲುಗು ನಟರ ನಡುವೆ ಸಾಮರಸ್ಯವಿದೆ. ಆಂತರಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೂ, ಅದನ್ನು ತೋರ್ಪಡಿಸಿಕೊಳ್ಳದೇ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಕ್ಕು ನಲಿಯುತ್ತಾರೆ ಎಂಬ ಮಾತಿತ್ತು. ಆದರೆ ಅದು ಈಗ ಸುಳ್ಳಾಗಿದೆ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್(ಮಾ)ನ ಡೈರಿ ರಿಲೀಸ್ ಕಾರ್ಯಕ್ರಮದಲ್ಲಿ ಸ್ಟಾರ್ ನಟರ ನಡುವಿನ ಅಂತರ್ಯುದ್ಧ ಬೀದಿಗೆ ಬಂದಿದೆ.

    ಟಾಲಿವುಡ್‍ನ ಮೆಗಾ ಸ್ಟಾರ್ ಚಿರಂಜೀವಿ ಮತ್ತು ನಾಯಕ ನಟ ರಾಜಶೇಖರ್ ನಡುವೆ ನೇರಾನೇರ ಕಿತ್ತಾಟ ನಡೆದಿದೆ. ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಜೋರಾಗಿ ಗಲಾಟೆ ಆಗಿದೆ. ‘ಮಾ’ ಸಂಸ್ಥೆಯ ಡೈರಿ ರಿಲೀಸ್ ಕಾರ್ಯಕ್ರಮದಲ್ಲಿ ಹಿರಿಯ ನಟ ಮತ್ತು ಸ್ಕ್ರಿಪ್ಟ್ ರೈಟರ್ ಪರಚೂರಿ ಗೋಪಾಲಕೃಷ್ಣ ಮಾತನಾಡುವ ವೇಳೆ ವೇದಿಕೆ ಹತ್ತಿದ ‘ಮಾ’ ಉಪಾಧ್ಯಕ್ಷ ರಾಜಶೇಖರ್ ಬಲವಂತವಾಗಿ ಮೈಕ್ ಕಿತ್ತುಕೊಂಡರು. ಫಿಲಂ ಸ್ಟೈಲಲ್ಲಿ ವೇದಿಕೆ ಮೇಲೆ ಕುಳಿತಿದ್ದ ಮೆಗಾ ಸ್ಟಾರ್ ಚಿರಂಜೀವಿ, ಡೈಲಾಗ್ ಕಿಂಗ್ ಮೋಹನ್ ಬಾಬು, ರೆಬೆಲ್ ಸ್ಟಾರ್ ಕೃಷ್ಣಂರಾಜು ಕಾಲಿಗೆ ನಮಸ್ಕರಿಸಿದರು.

    ‘ಮಾ’ನಲ್ಲಿ ಎಲ್ಲವೂ ಸರಿ ಇಲ್ಲ. ಗಲಾಟೆಗಳು ನಡೆಯುತ್ತಿವೆ. ಓಪನ್ ಆಗಿ ಮಾತನಾಡಲು ಯಾರಿಗೂ ಅವಕಾಶವೇ ಕೊಡುತ್ತಿಲ್ಲ. ಎಲ್ಲರೂ ಜೊತೆ ಜೊತೆಯಲ್ಲೇ ನಡೆಯಬೇಕೆಂದು ಮೆಗಾ ಸ್ಟಾರ್ ಚಿರಂಜೀವಿ ಅವರು ಹೇಳುತ್ತಾರೆ. ಆದರೆ, ಕೆಂಡವನ್ನು ಮುಚ್ಚಿಟ್ಟರೆ ಏನಾಗುತ್ತೆ? ಹೊಗೆ ಬಾರದೇ ಇರುತ್ತಾ ಎಂದು ರಾಜಶೇಖರ್ ಪ್ರಶ್ನೆ ಮಾಡಿ, ತಮ್ಮ ಅಸಮಾಧಾನ ಹೊರ ಹಾಕಿದರು.

    ಈ ವೇಳೆ ಮಧ್ಯೆ ಮಾತನಾಡಲು ಚಿರಂಜೀವಿ ಪ್ರಯತ್ನ ಮಾಡಿದರೂ, ನಟ ರಾಜಶೇಖರ್ ಅವಕಾಶ ಕೊಡಲಿಲ್ಲ. ಮತ್ತೋರ್ವ ಹಿರಿಯ ನಟ ಮೋಹನ್ ಬಾಬು, ಮಾತು ನಿಲ್ಲಿಸಿ ಎಂದರೂ ನಟ ರಾಜಶೇಖರ್ ಸುಮ್ಮನಾಗಲಿಲ್ಲ. ಕಳೆದ ಮಾರ್ಚ್ ನಲ್ಲಿ ‘ಮಾ’ ಸಂಸ್ಥೆಗೆ ಹೊಸ ಆಡಳಿತ ಮಂಡಳಿ ರಚನೆ ಆದ ಕ್ಷಣದಿಂದ ನನಗೆ ಒಂದೇ ಒಂದು ಸಿನಿಮಾ ಮಾಡಲು ಆಗಿಲ್ಲ. ಇತ್ತೀಚೆಗೆ ನನ್ನ ಆಡಿ ಕಾರು ಅಪಘಾತಕ್ಕೂ ಇದೇ ಕಾರಣ. ನಿತ್ಯ ನನ್ನ ಮನೆಯಲ್ಲಿ ಗಲಾಟೆಗಳು ನಡೆಯುತ್ತಿವೆ. `ಮಾ’ಗಾಗಿ ಯಾಕೆ ಅಷ್ಟೊಂದು ದುಡಿಯುತ್ತಿದ್ದೀಯಾ..? ಅಂತ ಬೈಯ್ತಿದ್ದಾರೆ. ರಿಯಲ್ ಲೈಫ್‍ನಲ್ಲಿಯೂ ಹೀರೋ ಆಗಿ ಕೆಲಸ ಮಾಡುತ್ತಿರುವ ತಮ್ಮನ್ನು ತುಳಿಯಲಾಗುತ್ತಿದೆ ಎಂದು ಎಲ್ಲರ ಮುಂದೆಯೇ ನೇರವಾಗಿ ವಾಗ್ದಾಳಿ ನಡೆಸಿದರು. ಈ ಮೂಲಕ ಚಿರಂಜೀವಿಗೆ ನೇರವಾಗಿ ಡಿಚ್ಚಿಕೊಟ್ಟರು.

    ಇದರಿಂದ ಚಿರಂಜೀವಿ ತೀವ್ರ ಮುಜುಗರಕ್ಕೆ ಒಳಗಾದರು. ಆದರೂ ಸಾವರಿಸಿಕೊಂಡು ಮಾತನಾಡಿದ ಮೆಗಾಸ್ಟಾರ್ ಚಿರಂಜೀವಿ, ನನ್ನ ಮಾತಿಗೆ ಯಾರು ಬೆಲೆ ಕೊಡುತ್ತಿಲ್ಲ. ನಮ್ಮ ಮಾತಿಗೆ, ತಮ್ಮ ಹಿರಿತನಕ್ಕೆ ಬೆಲೆ ಇಲ್ಲ ಎಂದರೇ ನಾವೇಕೆ ಇಲ್ಲಿ ಇರಬೇಕು. ಸಭೆಗೆ ಗೌರವ ಕೊಡದೇ ರಾಜಶೇಖರ್ ಮೈಕ್ ಎಳೆದುಕೊಂಡು ಮಾತನಾಡಿದ್ದು ಸರಿಯಲ್ಲ. ಈಗಲೂ ನಾವು ಸ್ಪಂದಿಸದಿದ್ದರೆ ನಮ್ಮ ಹಿರಿತನಕ್ಕೆ ಬೆಲೆ ಇರಲ್ಲ. ರಾಜಶೇಖರ್ ವಿರುದ್ಧ ‘ಮಾ’ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲೇಬೇಕು ಎಂದು ಚಿರಂಜೀವಿ ಆಗ್ರಹಿಸಿದರು.

    ಈ ಬೆನ್ನಲ್ಲೇ ರಾಜಶೇಖರ್ ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಿದರು. ಕೊನೆಗೆ ಮಾ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದರು. ತಮಗೆ ಚಿರಂಜೀವಿ ಮೇಲೆ ಕೋಪ ಇಲ್ಲ. ಅಧ್ಯಕ್ಷ ನರೇಶ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ಇದೆ ಎಂದು ಟ್ವೀಟ್ ಮಾಡಿದ ರಾಜಶೇಖರ್, ಚಿರಂಜೀವಿ ಅವರಲ್ಲಿ ಕ್ಷಮೆ ಕೂಡ ಕೇಳಿದರು. ಆದರೆ ಅಷ್ಟೊತ್ತಿಗೆ ಆಗಬೇಕಾದ ಡ್ಯಾಮೇಜ್ ಆಗಿ ಹೋಗಿತ್ತು. ಟಾಲಿವುಡ್‍ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಬಟಾಬಯಲಾಯ್ತು.

  • ಸಿನಿಮಾ ನಟರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

    ಸಿನಿಮಾ ನಟರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

    ಬೆಂಗಳೂರು: ಸಿನಿಮಾ ನಟರ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ದೂರು ದಾಖಲಿಸಿದೆ.

    ಕರವೇ ಸಿನಿಮಾ ನಟರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಚಿತ್ರ ನಟರು ಬಹಿರಂಗವಾಗಿ ಒಬ್ಬರ ಪರ ಮತ ಯಾಚಿಸುತ್ತಿದ್ದಾರೆ. ಹಾಗಾಗಿ ಚುನಾವಣಾ ಮುಗಿಯುವವರೆಗು ಅವರ ಚಿತ್ರಗಳನ್ನು ಬ್ಯಾನ್ ಮಾಡುವಂತೆ ಅಧ್ಯಕ್ಷ ಜಯರಾಮ್ ನಾಯ್ಡು ದೂರು ದಾಖಲಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಜಯರಾಮ್ ನಾಯ್ದು, ಕರ್ನಾಟಕ ರಕ್ಷಣಾ ವೇದಿಕೆಯಿಂದ ನಾವು ದೂರು ದಾಖಲಿಸಿದ್ದೇವೆ. ಯಾವುದೇ ಸ್ಟಾರ್ ನಟ ಅಥವಾ ಪ್ರಚಾರಕ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾದ್ರೆ, ಅವರೆಲ್ಲರೂ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಬರುತ್ತಾರೆ. ಈ ಸಂಬಂಧ ನಮ್ಮ ವಕೀಲರ ಬಳಿ ಕೇಳಿದ್ದಾಗ ಪ್ರಚಾರಕರೆಲ್ಲರೂ ಕೋಡ್ ಆಫ್ ಕಂಡೆಕ್ಟ್ ಗೆ ಬರುತ್ತೆ ಎಂದು ಹೇಳಿದ್ದಾರೆ.

    ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಕೆಲ ನಟರು ನಾವು ಗೆಲ್ಲಿಸುತ್ತೇವೆ. ಅಭಿಮಾನಿ ಸಂಘಗಳು ಕೂಡ ಸಾಥ್ ನೀಡುತ್ತಾರೆ ಎಂದು ಹೇಳಿದ್ದಾರೆ. ಹಾಗಾಗಿ ಇದು ಕೋಡ್ ಆಫ್ ಕಂಡೆಕ್ಟ್ ಗೆ ಬರುತ್ತೆ ಎಂಬ ಕಾರಣಕ್ಕೆ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇನೆ. ಚುನಾವಣೆ ಮುಗಿಯುವವರೆಗೂ ನಟರ ಚಿತ್ರ ಹಾಗೂ ಜಾಹೀರಾತು ನಿಷೇಧ ಮಾಡಬೇಕು ಎಂದು ಜಯರಾಮ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದರ್ಶನ್ ಕ್ಲಿಕ್ಕಿಸಿದ ಫೋಟೋವನ್ನು ಉಡುಗೊರೆಯಾಗಿ ಪಡೆದ ಸ್ಟಾರ್ ನಟ

    ದರ್ಶನ್ ಕ್ಲಿಕ್ಕಿಸಿದ ಫೋಟೋವನ್ನು ಉಡುಗೊರೆಯಾಗಿ ಪಡೆದ ಸ್ಟಾರ್ ನಟ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಡಿನಲ್ಲಿ ಕ್ಲಿಕ್ಕಿಸಿದ ಫೋಟೋವನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಉಡುಗೊರೆಯಾಗಿ ಪಡೆದಿದ್ದಾರೆ.

    ಇತ್ತೀಚೆಗೆ ಶ್ರೀಮುರಳಿ ‘ಮದಗಜ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮದಗಜ ಜಿತ್ರದ ನಿರ್ಮಾಪಕ ಉಮಾಪತಿ, ದರ್ಶನ್ ಅರಣ್ಯದಲ್ಲಿ ಸೆರೆ ಹಿಡಿದ ಹುಲಿಯ ಫೋಟೋವನ್ನು ಶ್ರೀ ಮುರಳಿ ಅವರಿಗೆ ನೀಡಿದ್ದಾರೆ. ಈ ಫೋಟೋಗೆ 10 ಸಾವಿರ ರೂ. ಆಗಿದ್ದು, ಹುಲಿಯ ಫೋಟೋ ಪಡೆದ ಶ್ರೀ ಮುರಳಿ ನಿರ್ಮಾಪಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.

    ಮಾರ್ಚ್ 3ರ ವಿಶ್ವ ವನ್ಯಜೀವಿ ದಿನ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ಮೂರು ದಿನಗಳ ಕಾಲ ದರ್ಶನ್ ಸೆರೆ ಹಿಡಿದ ಛಾಯಾಚಿತ್ರ ಪ್ರದರ್ಶನವಾಗಿತ್ತು. ಈ ಪ್ರದರ್ಶನದಲ್ಲಿ ದರ್ಶನ್ ಅವರು ಕಾಡಿನಲ್ಲಿ ಸೆರೆ ಹಿಡಿದ 75 ಆಯ್ದ ಛಾಯಾಚಿತ್ರಗಳನ್ನು ವನ್ಯಜೀವಿ ಸಂರಕ್ಷಣಾ ನಿಧಿಗೆ ಹಣ ಸಂಗ್ರಹಿಸಲು ಪ್ರದರ್ಶನಕ್ಕೆ ಇಡಲಾಗಿತ್ತು. ತಮ್ಮ ಚಿತ್ರಗಳ ಪ್ರದರ್ಶನದ ಜೊತೆಗೆ ಮಾರಾಟದ ಆಯೋಜನೆ ಕೂಡ ನಡೆದಿತ್ತು. ಪ್ರತಿ ಚಿತ್ರಕ್ಕೆ 2000 ಬೆಲೆ ನಿಗದಿ ಆಗಿದ್ದು, ಫೋಟೋ ಜೊತೆಗೆ ದರ್ಶನ್ ಆಟೋಗ್ರಾಫ್ ಪಡೆಯಲು 500 ಹೆಚ್ಚುವರಿ ಹಣ ನೀಡಬೇಕಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ಸ್ಟಾರ್ ನಟನ ಹತ್ಯೆಗೆ ನಡೆದಿತ್ತು ಪ್ಲಾನ್..!

    ಸ್ಯಾಂಡಲ್‍ವುಡ್ ಸ್ಟಾರ್ ನಟನ ಹತ್ಯೆಗೆ ನಡೆದಿತ್ತು ಪ್ಲಾನ್..!

    ಬೆಂಗಳೂರು: ರೌಡಿಶೀಟರ್ ಗೆ ಸುಪಾರಿ ನೀಡಿ ಸದ್ದಿಲ್ಲದೆ ಸ್ಯಾಂಡಲ್‍ವುಡ್ ನ ಸ್ಟಾರ್ ನಟನ ಹತ್ಯೆಗೆ ಪ್ಲಾನ್ ನಡೆದಿರುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ.

    ಹೌದು. ಆಶ್ಚರ್ಯ ಅನಿಸಿದರೂ ನೀವು ನಂಬಲೇಬೇಕು. ಏಕೆಂದರೆ ಆ ನಟ ಖುದ್ದಾಗಿ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಮುಂದೆ ಕೂತು ಜೀವಭಯವಿರುವ ಬಗ್ಗೆ ಮಾತನಾಡಿದ್ದಾರೆ. ಸುಪಾರಿ ಕೊಟ್ಟವರು ಯಾರು ಗೊತ್ತಿಲ್ಲ. ಆದರೆ ರೌಡಿಶೀಟರ್ ಒಬ್ಬ ನನ್ನ ಮುಗಿಸೋಕೆ ಪ್ಲಾನ್ ಮಾಡಿದ್ದಾನೆ ಎಂದು ನಟ ಹೇಳಿದ್ದಾರೆ.

    ನಟ ರೌಡಿಶೀಟರ್ ಭರತ್ ಅಲಿಯಾಸ್ ಸ್ಲಂ ಭರತನ ಮೇಲೆ ಬೊಟ್ಟು ಮಾಡಿದ್ದಾರೆ. ಸ್ಲಂ ಭರತ್ ಅಂಡ್ ಗ್ಯಾಂಗ್, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ನಟ ಹೇಳಿದ್ದಾರೆ. ರೌಡಿ ಪೆರೇಡ್ ಮಾಡಿ ವಾರ್ನ್ ಮಾಡಿದರೂ ಈತ ಕಸುಬು ಬಿಡುತ್ತಿಲ್ಲ ಎಂದು ಭರತನ ಕಾಲಿಗೆ ಗುಂಡಿಕ್ಕಿ ಅರೆಸ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ.

    ಅಸಲಿಗೆ ಭರತನೇ ಡೀಲ್‍ಗೆ ಇಳಿದಿದ್ನಾ ಅಥವಾ ಭರತನ ಹೆಸರೇಳಿಕೊಂಡು ಬೇರೆ ಯಾರಾದರೂ ಈ ಕೃತ್ಯ ಮಾಡಿದ್ದಾರಾ ಅನ್ನೋದು ಗೊತ್ತಿಲ್ಲ. ನಟನ ಹೆಸರೇಳಿದರೆ ಬೇರೆಯವರು ಆ ನಟನ ಹಿಂದೆ ಬೀಳಬಹುದು ಎನ್ನುವ ಕಾರಣಕ್ಕೆ ಪೊಲೀಸರು ಹೆಸರು ರಿವೀಲ್ ಮಾಡಲು ಒಪ್ಪುತ್ತಿಲ್ಲ. ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲಿರುವ ಭರತ್ ರಿಲೀಸ್ ಆದ ನಂತರ ಇದಕ್ಕೆಲ್ಲಾ ಸ್ಪಷ್ಟ ಉತ್ತರ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿಯನ್ನು ನೋಡಲು ಹೆಚ್ಚು ಮನೆಗೆ ಹೋಗುತ್ತಿದ್ರು ಸ್ಟಾರ್ ನಟ

    ಅಂಬಿಯನ್ನು ನೋಡಲು ಹೆಚ್ಚು ಮನೆಗೆ ಹೋಗುತ್ತಿದ್ರು ಸ್ಟಾರ್ ನಟ

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ನೋಡಲು ಚಾಲೆಂಜಿಗ್ ಸ್ಟಾರ್ ದರ್ಶನ್ ಹೆಚ್ಚು ಅವರ ಮನೆಗೆ ಹೋಗುತ್ತಿದ್ದರು.

    ಅಂಬರೀಶ್ ಅವರ ಮನೆಗೆ ತಾರೆಯರು ಆಗಾಗ ಹೋಗುತ್ತಿರುತ್ತಾರೆ. ಆದರೆ ಪ್ರಮುಖವಾಗಿ ದರ್ಶನ್ ಅವರು ಅತಿ ಹೆಚ್ಚು ಬಾರಿ ಅಂಬರೀಶ್ ಅವರ ಮನೆಗೆ ಹೋಗಿದ್ದಾರೆ. ಅವರನ್ನು ಹೊರತುಪಡಿಸಿ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೋಗುತ್ತಿದ್ದರು. ಅಲ್ಲದೇ ಮೋಹನ್ ಬಾಬು, ರಜನಿಕಾಂತ್, ಚಿರಂಜೀವಿ ಬೆಂಗಳೂರಿಗೆ ಬಂದಾಗ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಆದರೆ ದರ್ಶನ್ ಅವರು ಬಿಡುವು ಇದ್ದಾಗಲೆಲ್ಲಾ ಅಂಬಿ ಮನೆಗೆ ಹೋಗುತ್ತಿದ್ದರು ಎಂದು ಅಂಬರೀಶ್ ಅವರ ಆಪ್ತರಾದ ಸೀನಣ್ಣ ಜೇಳಿದ್ದಾರೆ.

    ದರ್ಶನ್ ಅಂಬಿ ಮನೆಯಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ದರ್ಶನ್ ಅಂಬಿಯ ಮತ್ತೊಂದು ಮಗನಂತೆ ಇದ್ದರು. ಅಂಬಿ, ದರ್ಶನ್‍ಗೆ ಲೇ ಹುಷಾರಾಗಿರು. ಕೆಟ್ಟ ಕೆಲಸ ಮಾಡಬೇಡ ಹಾಗೂ ಕೆಟ್ಟವರ ಜೊತೆ ಸೇರಬೇಡ ಎಂದು ಹೇಳುತ್ತಿದ್ದರು. ಅಣ್ಣ ಅವರ ಮಗ ಅಭಿಷೇಕ್‍ಗೂ ಇದೇ ಮಾತು ಹೇಳುತ್ತಿದ್ದರು. ದರ್ಶನ್ ಅವರು ಕೂಡ ಅಣ್ಣನ ಯಾವುದೇ ಮಾತು ಇಲ್ಲ ಎಂದು ಹೇಳುತ್ತಿರಲಿಲ್ಲ. ಅದು ಸಿನಿಮಾಗೆ ಸಂಬಂಧಿಸಬಹುದು ಅಥವಾ ಅವರ ಖಾಸಗಿ ವಿಷಯಕ್ಕೆ ಸಂಬಂಧಿಸಬಹುದು. ದರ್ಶನ್ ಅವರ ಮಾತನ್ನು ಪಾಲಿಸುತ್ತಿದ್ದರು.

    ದರ್ಶನ್ ಶೂಟಿಂಗ್‍ನಲ್ಲಿ ಬ್ಯುಸಿಯಾಗಿ ಮನೆಗೆ ಬರಲು ಆಗದೇ ಇದ್ದಾಗ ಫೋನ್ ಮಾಡುತ್ತಿದ್ದನು. ಕೆಲವೊಮ್ಮೆ ನಾನು ಫೋನ್ ರಿಸೀವ್ ಮಾಡುತ್ತಿದ್ದೆ. ಆಗ ಅವರು ಮೊದಲು ಅಣ್ಣನಿಗೆ ಫೋನ್ ಕೊಡಿ ಎಂದು ಹೇಳಿ ಹೇಗಿದ್ದೀಯಾ ಅಣ್ಣ ಎಂದು ಕೇಳುತ್ತಿದ್ದರು. ಆಗ ಅವರು ‘ನಾನು ಚೆನ್ನಾಗೇ ಇದ್ದೀನಿ. ನನಗೆ ಏನಾಗಿದೆ. ನೀನ್ ಹೇಗೆ ಇದ್ದೀಯಾ. ಎಲ್ಲಿಇದ್ದಿಯಾ ಎಂದು ಕೇಳಿತ್ತಿದ್ದರು. ಹೀಗೆ ಅವರಿಬ್ಬರ ಮಾತು ಶುರುವಾಗುತ್ತಿತ್ತು ಎಂದು ಸೀನಣ್ಣ ತಿಳಿಸಿದ್ದಾರೆ.

    ಸದ್ಯ ಅಂಬಿ ನಿಧನರಾಗಿದ್ದಾಗ ದರ್ಶನ್ ಸ್ವೀಡನ್‍ನಲ್ಲಿ ಯಜಮಾನ ಚಿತ್ರದ ಶೂಟಿಂಗ್‍ನಲ್ಲಿದ್ದರು. ನಂತರ ಅಂಬಿ ಅವರ ನಿಧನ ಸುದ್ದಿ ಕೇಳಿ ದರ್ಶನ್ ವಿದೇಶದಲ್ಲಿ ಶೂಟಿಂಗ್ ತಮ್ಮ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಲ್ಯಾಂಡ್ ಆಗಿದರು. ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂಗೆ ಅಂಬುಲೆನ್ಸ್ ಮೂಲಕ ಮೃತ ಶರೀರ ಬಂದ ಬಳಿಕ ದರ್ಶನ್ ಅಂಬಿ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಅಂಬಿ ಮೃತದೇಹಕ್ಕೆ ದರ್ಶನ್ ಹೆಗಲು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ಸ್ಟಾರ್ ನಟನಿಗೆ ಧ್ವನಿಯಾದ ಸಂಜಿತ್ ಹೆಗ್ಡೆ

    ಸ್ಯಾಂಡಲ್‍ವುಡ್ ಸ್ಟಾರ್ ನಟನಿಗೆ ಧ್ವನಿಯಾದ ಸಂಜಿತ್ ಹೆಗ್ಡೆ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ’ ಶೋ ಮೂಲಕ ಖ್ಯಾತರಾಗಿರುವ ಗಾಯಕ ಸಂಜಿತ್ ಹೆಗ್ಡೆ ಈಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಧ್ವನಿಯಾಗಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ಸಂಜಿತ್ ಹೆಗ್ಡೆ ಒಂದರ ಹಿಂದೆ ಒಂದು ಸೂಪರ್ ಹಿಟ್ ಹಾಡುಗಳನ್ನು ನೀಡುತ್ತಿದ್ದಾರೆ. ಸದ್ಯ ಈಗ ಸಂಜಿತ್, ಪುನೀತ್ ರಾಜ್‍ಕುಮಾರ್ ನಟನೆಯ ‘ನಟಸಾರ್ವಭಮ’ ಚಿತ್ರದ ಇಂಟ್ರೋಡಕ್ಷನ್ ಹಾಡನ್ನು ಹಾಡಿದ್ದಾರೆ.

    ಇತ್ತೀಚೆಗೆ ಸಂಜಿತ್ ಹೆಗ್ಡೆ ಲೂಸ್ ಮಾದ ಯೋಗೀಶ್ ಅಭಿನಯಿಸಿದ ‘ಲಂಬೋದರ’ ಚಿತ್ರಕ್ಕೆ ಹಾಡನ್ನು ಹಾಡಿದ್ದರು. ಈ ಚಿತ್ರದ ಆಡಿಯೋವನ್ನು ಪುನೀತ್ ರಾಜ್‍ಕುಮಾರ್ ರಿಲೀಸ್ ಮಾಡಿದ್ದರು. ಸದ್ಯ ಸಂಜಿತ್ ಹಾಡಿಗೆ ಶಿವಣ್ಣ ಹಾಗೂ ಪುನೀತ್ ಇಬ್ಬರು ಫಿದಾ ಆಗಿದ್ದಾರೆ.

    ನಟಸಾರ್ವಭೌಮ ಚಿತ್ರದ ಇಂಟ್ರೊಡಕ್ಷನ್ ಹಾಡಿಗೆ ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದು, ಜೊತೆಗೆ ‘ಟಗರು’ ಖ್ಯಾತಿಯ ಆಂಟೋನಿ ದಾಸ್ ಅವರು ಕೂಡ ಈ ಚಿತ್ರಕ್ಕೆ ಹಾಡನ್ನು ಹಾಡಿದ್ದಾರೆ. ಈ ಚಿತ್ರಕ್ಕೆ ಡಿ. ಇಮ್ರಾನ್ ಸಂಗೀತಾ ನೀಡಿದ್ದಾರೆ.

    ಈ ಚಿತ್ರದ ಹಾಡಿಗಾಗಿ ಅದ್ಧೂರಿ ಸೆಟ್ ನಿರ್ಮಿಸಿ ಅಲ್ಲಿ ಶೂಟಿಂಗ್ ನಡೆಸುತ್ತಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದು, ಪವನ್ ಒಡೆಯರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಪುನೀತ್‍ಗೆ ನಾಯಕಿಯರಾಗಿ ಡಿಂಪಲ್ ಬೆಡಗಿ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews