Tag: ಸ್ಟಾರ್ಸ್

  • ಗೋಲ್ಡನ್ ಸ್ಟಾರ್ ಮನೆಯಲ್ಲಿ ದೀಪಾವಳಿ ಆಚರಿಸಿದ ಸ್ಯಾಂಡಲ್‍ವುಡ್ ಸ್ಟಾರ್ಸ್: ಫೋಟೋಗಳಲ್ಲಿ ನೋಡಿ

    ಗೋಲ್ಡನ್ ಸ್ಟಾರ್ ಮನೆಯಲ್ಲಿ ದೀಪಾವಳಿ ಆಚರಿಸಿದ ಸ್ಯಾಂಡಲ್‍ವುಡ್ ಸ್ಟಾರ್ಸ್: ಫೋಟೋಗಳಲ್ಲಿ ನೋಡಿ

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆಯಲ್ಲಿ ಸ್ಯಾಂಡಲ್‍ವುಡ್ ಕಲಾವಿದರು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

    ನಟ ಗಣೇಶ್ ಶೂಟಿಂಗ್ ನಿಂದ ಸ್ವಲ್ಪ ಬಿಡುವು ಮಾಡಿಕೊಂಡು ಸ್ಯಾಂಡಲ್‍ವುಡ್ ಕಲಾವಿದರ ಜೊತೆ ತಮ್ಮ ಮನೆಯಲ್ಲೇ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಗಣೇಶ್ ಅವರ ಮನೆಯಲ್ಲಿ ನಟ ರವಿಶಂಕರ್ ಗೌಡ, ಗೋಲ್ಡನ್ ಕ್ವೀನ್ ಅಮೂಲ್ಯ ಹಾಗೂ ಹಲವು ಕಲಾವಿದರು ಭಾಗಿಯಾಗಿದ್ದರು.

    ದೀಪಾವಳಿ ಹಬ್ಬಕ್ಕೆ ಗಣೇಶ್ ಕುರ್ತಾ ಹಾಕಿದ್ದರೆ, ಅವರ ಪತ್ನಿ ಶಿಲ್ಪಾ ಗಣೇಶ್ ಸಾಂಸ್ಕೃತಿಕ ಉಡುಗೆ ತೊಟ್ಟು ಮಿಂಚಿದ್ದಾರೆ. ಗಣೇಶ್ ಮಕ್ಕಳಾದ ಚಾರಿತ್ರ್ಯ ಹಾಗೂ ವಿಹಾನ್ ಕೂಡ ಹೊಸ ಬಟ್ಟೆ ಧರಿಸಿ ದೀಪಾವಳಿ ಸಂಭ್ರದಲ್ಲಿ ಭಾಗಿಯಾಗಿದ್ದರು.

    ಸದ್ಯ ಗಣೇಶ್ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ದಿನ ಕ್ಲಿಕಿಸಿದ ಫೋಟೋವನ್ನು ಶಿಲ್ಪಾ ಗಣೇಶ್ ಹಾಗೂ ನಟಿ ಅಮೂಲ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಇತ್ತ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಅವರು ತಮ್ಮ ಕುಟುಂಬದ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ರಮೇಶ್ ನರಕ ಚತುರ್ದಶಿಯಂದು ತಮ್ಮ ಮಕ್ಕಳ ಜೊತೆ ಪಟಾಕಿ ಸಿಡಿಸಿದ್ದಾರೆ. ತಮ್ಮ ಮಕ್ಕಳ ಜೊತೆ ಪಟಾಕಿ ಹೊಡೆದ ಫೋಟೋವನ್ನು ರಮೇಶ್ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv