ನವದೆಹಲಿ: ಕುದುರೆ ರೇಸ್, ಆನ್‌ಲೈನ್ ಆಟ, ಕ್ಯಾಸಿನೋಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (GST) ಅಡಿಯಲ್ಲಿ 28% ರಷ್ಟು ತೆರಿಗೆ ವಿಧಿಸಲು ಜಿಎಸ್‌ಟಿ ಕೌನ್ಸಿಲ್ (GST Council) ಅನುಮೋದನೆ ನೀಡಿದ್ದು ಈಗ ಪರ, ವಿರೋಧ ಚರ್ಚೆಗೆ ಕಾರಣವಾಗಿವೆ.
ದೆಹಲಿಯಲ್ಲಿ ಜಿಎಸ್‌ಟಿ ಕೌನ್ಸಿಲ್‌ನ 50 ನೇ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆನ್‌ಲೈನ್ ಗೇಮಿಂಗ್ ಅನ್ನು ಸೇರಿಸಲು ಜಿಎಸ್‌ಟಿ ಕಾನೂನಿಗೆ ಕೆಲವು ತಿದ್ದುಪಡಿಯಾಗಲಿದೆ. ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳು ಮತ್ತು ಕುದುರೆ ರೇಸಿಂಗ್‌ಗಳಿಗೆ 28% ತೆರಿಗೆ ವಿಧಿಸಲಾಗುತ್ತದೆ ಎಂದು ಹೇಳಿದರು.
👉 Recommendations of 50th meeting of GST Council
👉 GST Council recommends Casino, Horse Racing and Online gaming to be taxed at the uniform rate of 28% on full face value
👉 GST Council recommends notification of GST Appellate Tribunal by the Centre with effect from… pic.twitter.com/9LMcvJDYpe
— Ministry of Finance (@FinMinIndia) July 11, 2023
ಈ ಹಿಂದೆ ಕುದುರೆ ರೇಸ್, ಆನ್‌ಲೈನ್ ಆಟ, ಕ್ಯಾಸಿನೋಗಳ (Online Gaming, Casinos and Horse Racing) ಮೇಲೆ ಎಷ್ಟು ತೆರಿಗೆ ವಿಧಿಸಬೇಕು ಎಂಬುದನ್ನು ಪರಿಶೀಲಿಸಲು ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ 28% ರಷ್ಟು ತೆರಿಗೆ ವಿಧಿಸಲು ಶಿಫಾರಸು ಮಾಡಿತ್ತು.
ಪ್ರಸ್ತುತ ಈಗ ಬೆಟ್ಟಿಂಗ್ ಅಥವಾ ಗ್ಯಾಬ್ಲಿಂಗ್ ಇರುವ ಆನ್‌ಲೈನ್ ಆಟಗಳಿಗೆ 28% ರಷ್ಟು ತೆರಿಗೆ, ಬೆಟ್ಟಿಂಗ್ ಅಥವಾ ಗ್ಯಾಬ್ಲಿಂಗ್ ಇಲ್ಲದ ಆನ್‌ಲೈನ್ ಆಟಗಳಿಗೆ 18% ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕುದುರೆ ರೇಸ್‌ಗಳ ಒಟ್ಟು ಬೆಟ್ ಮೌಲ್ಯದ ಮೇಲೆ 28% ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಈ ಹಿಂದೆ ಹಲವು ರಾಜ್ಯ ಸರ್ಕಾರಗಳು ಆನ್‌ಲೈನ್ ಗೇಮ್ಸ್ ನಿಷೇಧಿಸಲು ಮುಂದಾಗಿದ್ದವು. ಈಗ ಭಾರೀ ತೆರಿಗೆ ವಿಧಿಸುವ ಮೂಲಕ ರಾಜ್ಯ ಸರ್ಕಾಕ್ಕೆ ಆದಾಯ ಸಿಗಲಿದೆ.
ಜನಪ್ರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಆದಾಯವು ಹಿಂದಿನ ವರ್ಷದಿಂದ 24% ರಷ್ಟು ಏರಿಕೆಯಾಗಿ 342 ಮಿಲಿಯನ್ ಡಾಲರ್‌ಗೆ (2,800 ಕೋಟಿ ರೂ.) ಏರಿಕೆಯಾಗಿತ್ತು.
2022 ರಲ್ಲಿ 2.8 ಶತಕೋಟಿ ಡಾಲರ್ ಇದ್ದ ಭಾರತದ ಗೇಮಿಂಗ್ ಮಾರುಕಟ್ಟೆಯು 2025 ರ ವೇಳೆಗೆ 5 ಶತಕೋಟಿ ಡಾಲರ್‌ಗೆ ಬೆಳೆಯುವ ನಿರೀಕ್ಷೆಯಿದೆ. ಪ್ರತಿ ವರ್ಷ ಇದು 28-30 ಪ್ರತಿಶತ ಪ್ರಮಾಣದಲ್ಲಿ ಬೆಳೆಯುತ್ತಿದೆ.
ಗೇಮಿಂಗ್ ಇಂಡಸ್ಟ್ರಿಯಿಂದ ವಿರೋಧ
ಆನ್‌ಲೈನ್ ಗೇಮ್ಸ್‌ಗೆ 28% ಜಿಎಸ್‌ಟಿ ವಿಧಿಸಿದ್ದಕ್ಕೆ ಗೇಮಿಂಗ್ ಇಂಡಸ್ಟ್ರಿ ಭಾರೀ ವಿರೋಧ ವ್ಯಕ್ತಪಡಿಸಿವೆ. ಸಾಮಾಜಿಕ ಜಾಲತಾಣಗಳಲ್ಲೂ ಟೀಕೆ ವ್ಯಕ್ತವಾಗಿದೆ. ಭಾರತದಲ್ಲಿ ಗೇಮಿಂಗ್ ಇಂಡಸ್ಟ್ರಿ ಈಗಷ್ಟೇ ತೆರೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಇಷ್ಟೊಂದು ತೆರಿಗೆ ವಿಧಿಸಿರುವುದು ಸರಿಯಲ್ಲ. ಇದರಿಂದಾಗಿ ವಿದೇಶದಿಂದ ನಡೆಯುವ ಅಕ್ರಮ ಗೇಮಿಂಗ್ ಆಪ್‌ಗಳು ಲಾಭ ಮಾಡಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.
https://twitter.com/Ashneer_Grover/status/1678790046537895937
ಭಾರತ್ ಪೇ ಸಂಸ್ಥಾಪಕ ಅಶ್ನೀರ್ ಗ್ರೋವರ್ ಜಿಎಸ್‌ಟಿ ಕೌನ್ಸಿಲ್ ನಿರ್ಧಾರವನ್ನು ಟೀಕಿಸಿ, ಸ್ಟಾರ್ಟ್‌ಅಪ್‌ಗಳ ಸಂಸ್ಥಾಪಕರು ರಾಜಕೀಯಕ್ಕೆ ಪ್ರವೇಶಿಸಲು ಮತ್ತು ಪ್ರತಿನಿಧಿಸುವ ಸಮಯ ಬಂದಿದೆ. ಫ್ಯಾಂಟಸಿ ಗೇಮಿಂಗ್ ಉದ್ಯಮವನ್ನು ಕೊಲೆ ಮಾಡಲಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ತಪ್ಪಿದ ಭಾರೀ ದುರಂತ – ಖಾಸಗಿ ವಿಮಾನ ತುರ್ತು ಭೂಸ್ಪರ್ಶ
Online fantasy sports industry is done and dusted by GST Council today.
As per news: state govts we’re pushing for this. Meanwhile Modi govt is working hard to build startup ecosystem, money hungry state govts wants to milk entire public to fund their pensions and revdis.…
— Ashu (@muglikar_) July 11, 2023
ಒಟ್ಟು ಗೇಮಿಂಗ್ ಆದಾಯಕ್ಕೆ ವಿರುದ್ಧವಾಗಿ ಸ್ಪರ್ಧೆಯ ಪ್ರವೇಶ ಮೊತ್ತದ (CEA) ಮೇಲೆ 28% ಜಿಎಸ್‌ಟಿ ಜಾರಿಗೊಳಿಸುವ ಜಿಎಸ್‌ಟಿ ಕೌನ್ಸಿಲ್‌ನ ನಿರ್ಧಾರದಿಂದ ನಾವು ತೀವ್ರ ದುಃಖಿತರಾಗಿದ್ದೇವೆ, ಈ ನಿರ್ಧಾರವನ್ನು ಮರುಪರಿಶೀಲಿಸಲು ಮತ್ತು ಉದ್ಯಮದೊಂದಿಗೆ ಕೆಲಸ ಮಾಡಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ. ಉದ್ಯಮಕ್ಕೆ ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸುವ ಹೆಚ್ಚು ಸೂಕ್ತವಾದ ತೆರಿಗೆ ಮಾದರಿಯನ್ನು ಹುಡುಕಬೇಕೆಂದು ಗೇಮ್ಸ್24 ಸಂಸ್ಥಾಪಕ ಭವಿನ್ ಪಾಂಡ್ಯ ಟ್ವೀಟ್ ಮಾಡಿದ್ದಾರೆ.
ರಾಜ್ಯ ಸರ್ಕಾಗಳು ಪಿಂಚಣಿ ಮತ್ತು ಉಚಿತ ಕೊಡುಗೆ ನೀಡಲು ಇಡೀ ಗೇಮಿಂಗ್ ಉದ್ಯಮವನ್ನೇ ನಾಶ ಮಾಡಲು ಮುಂದಾಗಿವೆ. ಇದರಿಂದಾಗಿ ಲಕ್ಷಾಂತರ ಉದ್ಯೋಗಗಳು ನಾಶವಾಗಲಿವೆ ಎಂದು ಟೀಕೆ ವ್ಯಕ್ತವಾಗಿವೆ.
ವಸ್ತುವಿನ ಮೇಲೆ ತೆರಿಗೆ ಹೇಗೆ ನಿರ್ಧಾರವಾಗುತ್ತೆ?
ಭಾರತದಲ್ಲಿ 0%, 5%, 12%, 18% , 28% ಐದು ಜಿಎಸ್‌ಟಿ ಸ್ತರಗಳಿವೆ. ಯಾವ ವಸ್ತುಗಳ ಮೇಲೆ ಎಷ್ಟು ತೆರಿಗೆ ಹಾಕಬೇಕು ಎಂಬುದನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಒಳಗೊಂಡ ಜಿಎಸ್‌ಟಿ ಕೌನ್ಸಿಲ್ ನಿರ್ಧಾರ ಮಾಡುತ್ತದೆ. ಒಂದು ವಸ್ತುವಿನ ಮೇಲೆ ಎಷ್ಟು ತೆರಿಗೆ ವಿಧಿಸಬೇಕು ಎಂಬುದನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಈ ಸಮಿತಿ ಅಧ್ಯಯನ ನಡೆಸಿ ಎಷ್ಟು ತೆರಿಗೆ ವಿಧಿಸಬಹುದು ಎಂದು ಜಿಎಸ್‌ಟಿ ಕೌನ್ಸಿಲ್‌ಗೆ ಶಿಫಾರಸು ಮಾಡುತ್ತದೆ. ಈ ಶಿಫಾರಸಿನ ಆಧಾರದ ಮೇಲೆ ಜಿಎಸ್‌ಟಿ ಕೌನ್ಸಿಲ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು. ಆದರೆ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸುತ್ತಿರುವ ಕಾರಣ ಇನ್ನು ಪೆಟ್ರೋಲ್, ಡಿಸೇಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದಿಲ್ಲ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


