Tag: ಸ್ಟಂಪ್ ಔಟ್

  • ಮಂಕಡಿಂಗ್ ಬಳಿಕ ವಿವಾದಿತ ಸ್ಟಂಪ್ ಔಟ್ – ವಿಡಿಯೋ ವೈರಲ್

    ಮಂಕಡಿಂಗ್ ಬಳಿಕ ವಿವಾದಿತ ಸ್ಟಂಪ್ ಔಟ್ – ವಿಡಿಯೋ ವೈರಲ್

    ಡಬ್ಲಿನ್: ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಬೆನ್ ಫೋಕ್ಸ್ ಮಾಡಿದ ಸ್ಟಂಪ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಐರ್ಲೆಂಡ್ ಇನ್ನಿಂಗ್ಸ್‍ನ 25 ಓವರ್‍ನಲ್ಲಿ ಕ್ರೀಸ್‍ನಲ್ಲಿ ಆಂಡಿ ಬಾಲ್ಬಿರ್ನಿ ಬ್ಯಾಟ್ ಮಾಡುತ್ತಿದ್ದರು. 25 ಓವರಿನ 3ನೇ ಎಸೆತವನ್ನು ಬಲಗಾಲನ್ನು ಊರಿ ಎಡಗಡೆ ಹೊಡೆಯಲು ಪ್ರಯತ್ನಿಸಿದ್ದಾರೆ. ಆದರೆ ಬಾಲ್ ಬ್ಯಾಟಿಗೆ ಸಿಗದೇ ಕೀಪರ್ ಬೆನ್ ಫೋಕ್ಸ್ ಗ್ಲೌಸ್ ಸೇರಿದೆ.

    ಬಾಲ್ ಬ್ಯಾಟಿಗೆ ಸಿಗದ ಕಾರಣ ಸ್ಟಂಪ್ ಮಾಡಬಹುದು ಎನ್ನುವ ಭಯದಿಂದ ಬಾಲ್ಬಿರ್ನಿ ಕೂಡಲೇ ಬಾಲಗಾಲನ್ನು ಕ್ರೀಸಿನ ಹಿಂದಕ್ಕೆ ಇಟ್ಟಿದ್ದಾರೆ. ಈ ವೇಳೆ ಸ್ಟಂಪ್ ಮಾಡಲು ಯತ್ನಿಸಿದ ಫೋಕ್ಸ್ ಬಾಲನ್ನು ವಿಕೆಟ್‍ಗೆ ತಾಗಿಸುವಂತೆ ಮಾಡಿದ್ದಾರೆ. ಆದರೆ ಅವರು ಬಾಲ್ ತಾಗಿಸಿರಲಿಲ್ಲ. ಬಾಲ್ ತಾಗಿಸದ ಕಾರಣ ಬಾಲ್ಬಿರ್ನಿ ಕಾಲನ್ನು ಮೇಲಕ್ಕೆ ಎತ್ತಿದ ಕೂಡಲೇ ಫೋಕ್ಸ್ ಸ್ಟಂಪ್ ಮಾಡಿದ್ದಾರೆ.

    ಟಿವಿ ರಿಪ್ಲೇ ವೇಳೆ ಫೋಕ್ಸ್ ಸ್ಟಂಪ್ ಮಾಡುವ ಸಮಯದಲ್ಲೇ ಬಾಲ್ಬಿರ್ನಿ ಶೂ ಮೇಲೆ ಇತ್ತು. ಹೀಗಾಗಿ ಔಟ್ ಎಂದು ಘೋಷಣೆ ಆಯ್ತು. ಈಗ ಈ ರೀತಿಯಾಗಿ ಔಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಅತ್ಯಂತ ಕೆಟ್ಟ ಸ್ಟಂಪ್ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.

    ಕೀಪರ್ ಸ್ಟಂಪ್ ಮಾಡಿದರೆ ಮೊದಲ ಪ್ರಯತ್ನದಲ್ಲೇ ಸ್ಟಂಪ್ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ತಡವಾಗಿ ಔಟ್ ಮಾಡುವುದು ಸರಿಯಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಇಂಗ್ಲೆಂಡ್ ತಂಡದ ಮಾಜಿನ ನಾಯಕ ಮೈಕಲ್ ವಾನ್, ಬೆನ್ ಫೋಕ್ಸ್ ಸ್ಮಾರ್ಟ್ ಕ್ರಿಕೆಟರ್. ಹೈ ಕ್ಲಾಸ್ ಎಂದು ಬರೆದು ಈ ಸ್ಟಂಪ್‍ಗೆ ಮೆಚ್ಚುಗೆ ಸೂಚಿಸಿದ್ದಾರೆ.