Tag: ಸ್ಟಂಪ್

  • ಧೋನಿಗೆ ಏಜ್‌ ಆಗಿದೆ ಅಂದವರ್ಯಾರು? – ಮತ್ತೆ ರಾಕೆಟ್‌ ಸ್ಪೀಡ್‌ನಲ್ಲಿ ಸ್ಟಂಪ್‌, ಸಾಲ್ಟ್‌ ಸ್ಟನ್‌!

    ಧೋನಿಗೆ ಏಜ್‌ ಆಗಿದೆ ಅಂದವರ್ಯಾರು? – ಮತ್ತೆ ರಾಕೆಟ್‌ ಸ್ಪೀಡ್‌ನಲ್ಲಿ ಸ್ಟಂಪ್‌, ಸಾಲ್ಟ್‌ ಸ್ಟನ್‌!

    ಚೆನ್ನೈ: ಎರಡನೇ ಪಂದ್ಯದಲ್ಲೂ ಧೋನಿ (Dhoni) ಸ್ಟಂಪ್‌ ಔಟ್‌ (Stump Out) ಮಾಡುವ ಮೂಲಕ ಮತ್ತೆ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ.

    ಆರ್‌ಸಿಬಿ (RCB) ಆರಂಭಿಕ ಆಟಗಾರ ಸಾಲ್ಟ್‌ (Phil Salt) ಅವರನ್ನು 43 ವರ್ಷದ ಧೊನಿ ಮಿಂಚಿನ ವೇಗದಲ್ಲಿ ಸ್ಟಂಪ್‌ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ಟ್ರೆಂಡ್‌ ಆಗಿದೆ.

     


    ಮೊದಲ ಮ್ಯಾಚ್‌ನಲ್ಲಿ ಮುಂಬೈ ತಂಡದ ಸೂರ್ಯಕುಮಾರ್‌ ಯಾದವ್‌ (Surya Kumar Yadav) ಅವರನ್ನು 0.12 ಸೆಕೆಂಡ್‌ನಲ್ಲಿ ಔಟ್‌ ಮಾಡಿದರೆ ಇಂದು ಸಾಲ್ಟ್‌ ಅವರನ್ನು 0.14 ಸೆಕೆಂಡ್‌ನಲ್ಲಿ ಸ್ಟಂಪ್‌ ಮಾಡಿ ಪೆವಿಲಿಯನ್‌ಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಬಿಸಿಸಿಐ ಕೇಂದ್ರ ಗುತ್ತಿಗೆ – ಮತ್ತೆ ಶ್ರೇಯಸ್, ಇಶಾನ್ ಕಿಶನ್ ಕಂಬ್ಯಾಕ್?

     


    ಔಟಾಗುವ ಮುನ್ನ ಫಿಲ್‌ ಸಾಲ್ಟ್‌ 23 ಎಸೆತಗಳಲ್ಲಿ 1 ಸಿಕ್ಸ್‌, 5 ಬೌಂಡರಿ ಹೊಡೆದು 32 ರನ್‌ ಸಿಡಿಸಿದ್ದರು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

     

     

  • ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್ – ವಿಡಿಯೋ

    ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್ – ವಿಡಿಯೋ

    ವೆಲಿಂಗ್ಟನ್: ಟೀಂ ಇಂಡಿಯಾ ಮಾಜಿ ನಾಯಕ 37 ವರ್ಷದ ಧೋನಿ ವಿಕೆಟ್ ಹಿಂದಿನ ತಮ್ಮ ಅನುಭವದ ಕೌಶಲ್ಯಗಳನ್ನು ಮತ್ತೆ ಸಾಬೀತುಪಡಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲೂ ಸ್ಮಾರ್ಟ್ ರನೌಟ್ ಮಾಡಿ ಪ್ರಶಂಸೆ ಪಡೆದಿದ್ದಾರೆ.

    ಪಂದ್ಯದ 37 ಓವರ್ ನಲ್ಲಿ ಸ್ಟ್ರೈಕ್ ನಲ್ಲಿದ್ದ ನೀಶಮ್ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಲು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರು. ಆದರೆ ಕೇದಾರ್ ಜಾಧವ್ ತಮ್ಮ ಬೌಲಿಂಗ್ ನಲ್ಲಿ ಎಲ್‍ಬಿಡಬ್ಲೂ ಗೆ ಅಂಪೈರ್ ಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಮಯ ಪ್ರಜ್ಞೆ ತೋರಿದ ಧೋನಿ ಮಿಂಚಿನ ವೇಗದಲ್ಲಿ ಬಾಲ್ ಪಡೆದು ಬ್ಯಾಟ್ಸ್ ಮನ್ ಕ್ರಿಸ್‍ಗೆ ಬರುವ ಮುನ್ನವೇ ಬೆಲ್ಸ್ ಉರುಳಿಸಲು ಯಶಸ್ವಿಯಾಗಿದರು. ಇದನ್ನು ಕಂಡ ಕ್ಷಣ ಕಾಲ ದಂಗಾದ ನೀಶಮ್ ನಿರಾಸೆಯಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

    ಗಾಯದ ಸಮಸ್ಯೆಯಿಂದ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಧೋನಿ, ಅಂತಿಮ ಪಂದ್ಯದ ವೇಳೆಗೆ ಚೇತರಿಸಿಕೊಂಡು ಕಣಕ್ಕೆ ಇಳಿದಿದ್ದರು. ಆದರೆ ಬ್ಯಾಟಿಂಗ್ ನಲ್ಲಿ 1 ರನ್ ಗಳಿಸಿ ಔಟಾಗುವ ಮೂಲಕ ಧೋನಿ ನಿರಾಸೆ ಮೂಡಿಸಿದರೂ ಕೂಡ ವಿಕೆಟ್ ಹಿಂದೆ ನಿಂತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಧೋನಿ ತಮ್ಮ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಾತ್ರ ಗಮನ ಸೆಳೆಯದೆ, ತಂಡದ ಬೌಲರ್ ಗಳಿಗೆ ಸೂಕ್ತ ಸಲಹೆ ನೀಡುವ ಮೂಲಕ ಸ್ಪಿನ್ನರ್ ಗಳ ಯಶಸ್ವಿಗೆ ಕಾರಣರಾಗಿದ್ದಾರೆ. ರವೀಂದ್ರ ಜಡೇಜಾ, ಕೇದಾರ್ ಜಾಧವ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್‍ರ ಯಶಸ್ಸಿನ ಹಿಂದೆ ಧೋನಿ ನೀಡಿದ ಸಲಹೆಗಳು ಮುಖ್ಯವಾಗಿದೆ. 2018 ಇಂಗ್ಲೆಂಡ್ ಸರಣಿಯಲ್ಲೂ ಧೋನಿ ಪ್ರಮುಖರಾಗಿದ್ದರು, ಏಕೆಂದರೆ ಈ ಸರಣಿಯ 6 ಪಂದ್ಯಗಳಲ್ಲಿ ಚಹಲ್, ಕುಲ್ದೀಪ್ 33 ವಿಕೆಟ್ ಪಡೆದಿದ್ದರು. ಪ್ರತಿ ಸಂದರ್ಭದಲ್ಲೂ ಧೋನಿ ನೀಡಿದ ಸಲಹೆ ಬಗ್ಗೆ ಬೌಲರ್ ಗಳು ಪ್ರಶಂಸೆ ವ್ಯಕ್ತಡಿಸುವಂತೆ ಬೌಲ್ ಮಾಡಿ ವಿಕೆಟ್ ಪಡೆಯುತ್ತಿದ್ದರು. ನ್ಯೂಜಿಲೆಂಡ್ ಸರಣಿಯಲ್ಲೂ ಧೋನಿ ಅವರ ಮಾಸ್ಟರ್ ಮೈಂಡ್ ಕೆಲಸ ಮಾಡಿತ್ತು.

    https://twitter.com/DoctorrSays/status/1091984081695367169

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕ್ಷಣಾರ್ಧದಲ್ಲಿ ಸ್ಟಂಪಿಂಗ್ – ಧೋನಿ ಕೀಪಿಂಗ್ ನೋಡಿ ಅಚ್ಚರಿಗೊಂಡ ಕೊಹ್ಲಿ

    ಕ್ಷಣಾರ್ಧದಲ್ಲಿ ಸ್ಟಂಪಿಂಗ್ – ಧೋನಿ ಕೀಪಿಂಗ್ ನೋಡಿ ಅಚ್ಚರಿಗೊಂಡ ಕೊಹ್ಲಿ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಮತ್ತೊಮ್ಮೆ ಮಿಂಚು ಹರಿಸಿದ್ದು, ಕ್ಷಣಾರ್ಧದಲ್ಲಿ ಸ್ಟಂಪ್ ಔಟ್ ಮಾಡಿದ್ದಾರೆ.

    ವರ್ಷದ ಆರಂಭದ ಬಳಿಕ ನಡೆದ 2 ಏಕದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದ್ದ ಧೋನಿ ಈ ಪಂದ್ಯದಲ್ಲಿ ತಮ್ಮ ಚಾಣಾಕ್ಷತೆ ತೋರಿ ಕಳೆದ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದ್ದ ಮಾರ್ಷ್ ವಿಕೆಟ್ ಪಡೆದು ಮಿಂಚಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://twitter.com/UB399/status/1086140484152635392?

    ಪಂದ್ಯದಲ್ಲಿ 3 ಬೌಂಡರಿ ಸಿಡಿಸಿ 39 ರನ್ ಗಳಿಸಿದ್ದ ಮಾರ್ಷ್ ಚಹಲ್ ಬೌಲಿಂಗ್ ನಲ್ಲಿ ಬ್ಯಾಟ್ ಬೀಸಲು ಯತ್ನಿಸಿ ವಿಫಲರಾಗಿದ್ರು. ಈ ವೇಳೆ ಚೆಂಡು ಧೋನಿ ಕೈ ಸೇರುತ್ತಿದಂತೆ ವಿಕೆಟ್ ಗೆ ಮುಟ್ಟಿಸಿದರು. ಇತ್ತ ಧೋನಿ ಸ್ಟಂಪ್ ಮಾಡುತ್ತಿದಂತೆ ನಾಯಕ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿ ಅಂಪೈರ್ ಔಟ್ ಎಂದು ತೀರ್ಪು ನೀಡುವ ಮೂಲಕವೇ ಆತ್ಮವಿಶ್ವಾಸದಿಂದ ಸಂಭ್ರಮಿಸಿದರು.

    ಸದ್ಯ ಸರಣಿಯಲ್ಲಿ 1-1ರ ಮೂಲಕ ಸಮಬಲ ಸಾಧಿಸಿರುವ ಟೀಂ ಇಂಡಿಯಾ ಅಂತಿಮ ಪಂದ್ಯ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಮಾಡುವ ವಿಶ್ವಾಸದಲ್ಲಿದೆ. ಟೀಂ ಇಂಡಿಯಾ ಪಂದ್ಯದಲ್ಲಿ ಜಯಗಳಿಸಿದರೆ ಆಸೀಸ್ ನೆಲದಲ್ಲಿ ನಡೆದ ದ್ವೀಪಕ್ಷಿಯ ಸರಣಿಯಲ್ಲಿ ಮೊದಲ ಬಾರಿಗೆ ಗೆಲುವು ಪಡೆದ ದಾಖಲೆ ನಿರ್ಮಿಸಲಿದೆ. ಅಲ್ಲದೇ ಆಸೀಸ್ ಪ್ರವಾಸದಲ್ಲಿ ಸರಣಿ ಸೋಲದೇ ಅಜೇಯರಾಗಿ ಉಳಿದ ಹೆಗ್ಗಳಿಕೆ ಪಡೆಯಲಿದೆ. ಇದನ್ನು ಓದಿ: ಧೋನಿಯ ಶರವೇಗದ ಸ್ಟಂಪಿಂಗ್ – ವೈರಲ್ ಆಗಿದೆ ವಿಡಿಯೋ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv