Tag: ಸ್ಟಂಟ್ ಡೈರೆಕ್ಟ್

  • 29 ವರ್ಷದ ಸಿನಿ ಜರ್ನಿಯಲ್ಲಿ 500 ಚಿತ್ರಕ್ಕೆ ಸ್ಟಂಟ್ ಡೈರೆಕ್ಟ್

    29 ವರ್ಷದ ಸಿನಿ ಜರ್ನಿಯಲ್ಲಿ 500 ಚಿತ್ರಕ್ಕೆ ಸ್ಟಂಟ್ ಡೈರೆಕ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ಫೈಟ್‍ಮಾಸ್ಟರ್ ಥ್ರಿಲ್ಲರ್ ಮಂಜು ಅವರು ತಮ್ಮ ಸಿನಿ ವೃತ್ತಿಯ ಪಯಣದಲ್ಲಿ ಬರೋಬ್ಬರಿ 500 ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ.

    ಥ್ರಿಲ್ಲರ್ ಮಂಜು ಅವರು 29 ವರ್ಷಗಳ ಸಿನಿಮಾ ಜರ್ನಿಯಲ್ಲಿ 500 ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಬಹುಭಾಷಾ ನಟಿ ರಾಯ್ ಲಕ್ಷ್ಮಿ ಅಭಿನಯದ ‘ಝಾನ್ಸಿ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದು, ಇದು ಅವರ 500ನೇ ಚಿತ್ರವಾಗಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ.

    ಒಮ್ಮೆ ನಾನು ಹಿಂದೆ ತಿರುಗಿ ನೋಡಿದಾಗ ಇಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದೀನಾ ಎಂದು ಆಶ್ಚರ್ಯ ಆಗುತ್ತದೆ. ಈಗ ನಾನು 500ನೇ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದೇನೆ. ಈ ಮೊದಲು ನಾನು ನಟಿ ಮಾಲಾಶ್ರೀ ಮತ್ತು ಆಯೇಷಾ ಅವರಿಗೆ ಸ್ಟಂಟ್ ಡೈರೆಕ್ಷನ್ ಮಾಡಿದ್ದೆ. ಇವರ ನಂತರ ರಾಯ್ ಲಕ್ಷ್ಮಿ ಅವರಿಗೆ ನಿರ್ದೇಶನ ಮಾಡಿದ್ದೇನೆ. ಈ ಸಿನಿಮಾದಲ್ಲಿ 6 ಆ್ಯಕ್ಷನ್ ದೃಶ್ಯಗಳಿವೆ. ಹಾಲಿವುಡ್ ಚಿತ್ರಗಳಲ್ಲಿ ನಟಿಯರು ಮಾಡುವ ರೀತಿ ಸ್ಟಂಟ್ ಕಂಪೋಸ್ ಮಾಡಿದ್ದೇನೆ ಎಂದು ಥ್ರಿಲ್ಲರ್ ಮಂಜು ತಿಳಿಸಿದ್ದಾರೆ.

    ಥ್ರಿಲ್ಲರ್ ಮಂಜು ಅವರು 1990ರಲ್ಲಿ ನಟ ಶಂಕರ್ ನಾಗ್ ಅಭಿನಯದ ‘ನರಸಿಂಹ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡುವ ಮೂಲಕ ತಮ್ಮ ಸಿನಿ ಪ್ರಯಣವನ್ನು ಶುರು ಮಾಡಿದ್ದರು. ನಂತರ ಸ್ಯಾಂಡಲ್‍ವುಡ್‍ನ ಬಹುತೇಕ ನಟರಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಥ್ರಿಲ್ಲರ್ ಮಂಜು ಅವರು ನಿರ್ದೇಶನ ಮಾಡಿದ್ದಾರೆ. ನಟಿ ಮಾಲಾಶ್ರೀ ಅವರ ಆ್ಯಕ್ಷನ್ ಸಿನಿಮಾಗಳಿಗೆ ಥ್ರಿಲ್ಲರ್ ಮಂಜು ಸ್ಟಂಟ್ ಡೈರೆಕ್ಷನ್ ಮಾಡಿದ್ದಾರೆ. ನಂತರ ನಟಿ ಆಯೇಷಾ ಅವರಿಗೆ ನಿರ್ದೇಶನ ಮಾಡಿದ್ದಾರೆ.