Tag: ಸ್ಟಂಟ್ ಆ್ಯಕ್ಟರ್ಸ್

  • ಬೆಂಗಳೂರಲ್ಲಿ ಸ್ಟಂಟ್ ನಟರಿಂದ ವಕೀಲರ ಕಿಡ್ನ್ಯಾಪ್

    ಬೆಂಗಳೂರಲ್ಲಿ ಸ್ಟಂಟ್ ನಟರಿಂದ ವಕೀಲರ ಕಿಡ್ನ್ಯಾಪ್

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಂಟ್ ನಟರು ಸಿಮಿಮಾ ಸ್ಟೈಲ್ ನಲ್ಲಿ ರಿಯಲ್ ಕಿಡ್ನ್ಯಾಪ್ ಮಾಡಿದ್ದು, 10 ಲಕ್ಷ ರೂ.ಗೆ ಬೇಡಿಕೆ ಇಟ್ಟು ವಕೀಲರನ್ನೆ ಅಪಹರಿಸಿದ್ದರು.

    ನಾಗರಭಾವಿಯ ಸ್ವಾತಿ ಹೋಟೆಲ್ ಬಳಿಯಿಂದ ಕಳೆದ ಸೆ.20ರಂದು ವಕೀಲ ಅಭಯ್ ರವೀಂದ್ರ ಕುಲಕರ್ಣಿಯವರನ್ನು ಅಪಹರಿಸಿದ್ದರು. ನಟರ ಪ್ಲ್ಯಾನ್ ಫ್ಲಾಪ್ ಮಾಡಿ, ಸಿನಿಮಾ ಸ್ಟೈಲ್‍ನಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಿಡ್ನ್ಯಾಪ್ ಆಗಿ 12 ಗಂಟೆಯೊಳೆಗೆ ಇನ್‍ಸ್ಪೆಕ್ಟರ್ ಲೋಹಿತ್ ಆ್ಯಂಡ್ ಟೀಮ್ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಕಿಡ್ನ್ಯಾಪ್ ಮಾಡಿಸಿದ ಸಿದ್ದೇಶ್, ಕಿಡ್ನ್ಯಾಪ್ ಮಾಡಿದ ನಟರಾದ ಸಂಜಯ್, ಅರುಣ್ ಹಾಗೂ ಅಶೋಕ್ ನರೇಶ್ ಸೇರಿ 9 ಜನರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಸಿನಿಮಾ ಸ್ಟೈಲ್ ನಲ್ಲಿ ಎರಡು ಫಾಚ್ರ್ಯೂನರ್ ಕಾರಿನಲ್ಲಿ ವಕೀಲರನ್ನು ಕಿಡ್ನ್ಯಾಪ್ ಮಾಡಲಾಗಿತ್ತು.

    ಕಿಡ್ನ್ಯಾಪ್ ಮಾಡಿ ಅಂದ್ರಹಳ್ಳಿಯ ಆಫೀಸ್ ನಲ್ಲಿಟ್ಟು ಅಭಯ್ ರವೀಂದ್ರಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ರವೀಂದ್ರ ಮನೆಯವರಿಗೆ ಕಾಲ್ ಮಾಡಿ 10 ಲಕ್ಷ ರೂ. ತರುವಂತೆ ಬೇಡಿಕೆ ಇಟ್ಟಿದ್ದಾರೆ. ತಾವಿರುವ ಅಡ್ರೆಸ್‍ಗೆ ಹಣ ತೆಗೆದುಕೊಂಡು ಬರುವಂತೆ ಅಭಯ್ ರವೀಂದ್ರ ಕುಲಕರ್ಣಿ ಅವರ ಮೊಬೈಲ್ ನಿಂದ ಲೊಕೇಶನ್ ಕಳುಹಿಸಿದ್ದಾರೆ. ಲೊಕೇಷನ್ ಕಳುಹಿಸಿ ಕಿಡ್ನ್ಯಾಪರ್ಸ್ ತಗ್ಲಾಕ್ಕೊಂಡಿದ್ದಾರೆ. ಸದ್ಯ ಘಟನೆ ಸಂಬಂಧ 9 ಆರೋಪಿಗಳನ್ನು ಅನ್ನಪೂರ್ಣೇಶ್ವಿನಗರ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೇಡ..ಬೇಡ ಎಂದರೂ ಅಮ್ಮ ಮಕ್ಕಳೊಂದಿಗೆ ನದಿಗೆ ಹಾರಿದ್ಳು

    ಅಭಯ್ ರವೀಂದ್ರ ಕುಲಕರ್ಣಿ ಅವರು ಖಾಸಗಿ ಕಂಪನಿಯ ಲೀಗಲ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಅಂದ್ರಹಳ್ಳಿಯ ಸಿದ್ದೇಶ್ ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ. ಸಿದ್ದೇಶ್ ಹಣ ಹೂಡಿಕೆಗೆ ಅಭಯ್ ರವೀಂದ್ರ ಕುಲಕರ್ಣಿ ಮೂಲಕ ಮಾತುಕತೆ ನಡೆದಿತ್ತು. ಇದಕ್ಕಾಗಿ ಬೇಸಿಕ್ ಚಾರ್ಜ್ ಸ್ ಎಂದು ಸಿದ್ದೇಶ್ ಬಳಿ ಅಭಯ್ ರವೀಂದ್ರ 6-7 ಲಕ್ಷ ರೂ. ಹಣ ಪಡೆದಿದ್ದರು. ಹಣ ವಾಪಸ್ ನೀಡದಿದ್ದಾಗ ಸಿದ್ದೇಶ್ ವಕೀಲರ ದುಂಬಾಲು ಬಿದ್ದಿದ್ದ. ಬಳಿಕ ಸಿದ್ದೇಶ್ ವಕೀಲರ ಕಿಡ್ನ್ಯಾಪ್‍ಗೆ ಪ್ಲ್ಯಾನ್ ಮಾಡಿದ್ದ. ಇದಕ್ಕೆ ಸ್ಯಾಂಡಲ್‍ವುಡ್ ನಟರು ಕೈ ಜೊಡಿಸಿದಿದ್ದರು. ಇದನ್ನೂ ಓದಿ: ಕಾರಲ್ಲೇ ಕೂರಿಸಿ ಯುವಕ, ಯುವತಿಯ ವೀಡಿಯೋ ರೆಕಾರ್ಡ್ – 5 ಲಕ್ಷಕ್ಕೆ ಬೆದರಿಕೆ

    ನಟರಾದ ಸಂಜಯ್, ಅರುಣ್ ಹಾಗೂ ಅಶೋಕ್ ನರೇಶ್ ಸೇರಿ ಅಭಯ್ ರವೀಂದ್ರರನ್ನು ಕಿಡ್ನಾಪ್ ಮಾಡಿದ್ದರು. ಸಂಜಯ್ ಭರ್ಜರಿ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾನೆ.