Tag: ಸ್ಚಚ್ಛತಾ ಕಾರ್ಮಿಕರು

  • ಕುಂಭ ಮೇಳದ ಸ್ವಚ್ಛತಾ ಕಾರ್ಮಿಕರಿಗೆ ವೈಯಕ್ತಿಕ ಉಳಿತಾಯದಿಂದ 21 ಲಕ್ಷ ರೂ. ದೇಣಿಗೆ

    ಕುಂಭ ಮೇಳದ ಸ್ವಚ್ಛತಾ ಕಾರ್ಮಿಕರಿಗೆ ವೈಯಕ್ತಿಕ ಉಳಿತಾಯದಿಂದ 21 ಲಕ್ಷ ರೂ. ದೇಣಿಗೆ

    ನವದೆಹಲಿ: ಪ್ರಯಾಗ್ ಕುಂಭ ಮೇಳದ ಸ್ವಚ್ಛತಾ ಕಾರ್ಮಿಕರ ಕಲ್ಯಾಣ ನಿಧಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ವೈಯಕ್ತಿಕ ಉಳಿತಾಯ ಖಾತೆಯಿಂದ 21 ಲಕ್ಷ ರೂ ದೇಣಿಗೆ ನೀಡಿದ್ದಾರೆ.

    ಪ್ರಧಾನಿ ಮೋದಿ ಅವರು ಈ ಹಿಂದೆಯು ಸಹ ಇಂತಹ ದೇಣಿಗೆಗಳನ್ನು ನೀಡಿದ್ದಾರೆ. ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ಅದರ ಒಟ್ಟು 1.3 ಲಕ್ಷ ಕೋಟಿ ಹಣವನ್ನು ನಮಾಮಿ ಗಂಗಾ ಯೋಜನೆಗೆಂದು ಮೀಸಲಿಡಲಾಗುವುದು ಎಂದು ಘೋಷಿಸಿದ್ದರು.

    ಅಷ್ಟೇ ಅಲ್ಲದೇ ತಮಗೆ ಬಂದಂತಹ ಸ್ಮರಣಿಕೆ ಮತ್ತು ಉಡುಗೊರೆಗಳನ್ನು ಹರಾಜು ಹಾಕಿ ಬಂದ 3.40 ಕೋಟಿ ರೂ. ಹಣವನ್ನು ಗಂಗಾ ನದಿ ಸ್ವಚ್ಛತೆಗಾಗಿ ನೀಡಿದ್ದರು. 2015ರಲ್ಲಿ ಅದುವರೆಗೂ ಬಂದಂತಹ ಊಡುಗೊರೆಗಳನ್ನು ಸೂರತ್‍ನಲ್ಲಿ ಹರಾಜು ಹಾಕಿದ್ದು, ಅದರಲ್ಲಿ ಬಂದಂತಹ 8.33 ಕೋಟಿ ರೂಪಾಯಿನ್ನು ಕೂಡ ದೇಣಿಗೆಯಾಗಿ ನೀಡಿದ್ದರು.

    ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ರಾಜ್ಯ ಸರಕಾರದ ನೌಕರರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ವೈಯಕ್ತಿಕ ಉಳಿತಾಯದಿಂದ 21 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದರು.

    ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಮಗೆ ಬಂದಂತಹ ಉಡುಗೊರೆಗಳನ್ನು ಹರಾಜು ಮಾಡಿದ್ದರು. ಆಗ ಅವರಿಗೆ ಬಂದಂತಹ 89.96 ಕೋಟಿ ರೂ.ಗಳನ್ನು ಕನ್ಯಾ ಕೇಲಾವಾನಿ ಫಂಡ್‍ಗೆ ದೇಣಿಗೆ ನೀಡಲಾಗಿತ್ತು. ಈ ಯೋಜನೆಯ ಮೂಲಕ ಹಣವನ್ನು ಮಗುವಿನ ಶಿಕ್ಷಣಕ್ಕಾಗಿ ಖರ್ಚು ಮಾಡಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv