Tag: ಸ್ಕ್ರ್ಯಾಪ್ ಅಂಗಡಿ

  • ಮದ್ಯ ಸೇವಿಸಲು 2 ವರ್ಷದಿಂದ ಆಫೀಸ್‍ನಲ್ಲಿದ್ದ ಪೀಠೋಪಕರಣ, ಆಸ್ತಿಯನ್ನೆಲ್ಲಾ ಮಾರಾಟ ಮಾಡ್ದ

    ಮದ್ಯ ಸೇವಿಸಲು 2 ವರ್ಷದಿಂದ ಆಫೀಸ್‍ನಲ್ಲಿದ್ದ ಪೀಠೋಪಕರಣ, ಆಸ್ತಿಯನ್ನೆಲ್ಲಾ ಮಾರಾಟ ಮಾಡ್ದ

    ಭುವನೇಶ್ವರ: ಮದ್ಯ ವ್ಯಸನನಾಗಿದ್ದ ವ್ಯಕ್ತಿಯೋರ್ವ ಕುಡಿಯುವುದಕ್ಕಾಗಿ ತನ್ನ ಕಚೇರಿಯಲ್ಲಿದ್ದ ಪೀಠೋಪಕರಣಗಳು, ಫೈಲ್‍ಗಳು ಮತ್ತು ಆಸ್ತಿಯನ್ನು ಮಾರಾಟ ಮಾಡಿದ್ದಾನೆ.

    ಗಂಜಾಂ (Ganjam) ಜಿಲ್ಲಾ ಶಿಕ್ಷಣ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೀತಾಂಬರಂ ಎಂಬಾತ ಎರಡು ವರ್ಷಗಳಿಂದ ತನ್ನ ಮದ್ಯದ ವೆಚ್ಚ ಭರಿಸಲು ಸ್ಕ್ರ್ಯಾಪ್ ಅಂಗಡಿಗೆ ಕಟ್ಟಡದ ಬಾಗಿಲುಗಳು ಮತ್ತು ಕಿಟಕಿಗಳು ಹೀಗೆ ಹಲವಾರು ವಸ್ತುಗಳನ್ನು ಮಾರಾಟ ಮಾಡಿತ್ತಿದ್ದನು. ಆಶ್ಚರ್ಯವೆಂದರೆ ಎರಡು ವರ್ಷಗಳಿಂದಲೂ ಇಷ್ಟೆಲ್ಲಾ ಸಾಮಾನುಗಳನ್ನು ಮಾರಾಟ ಮಾಡುತ್ತಿದ್ದರೂ, ಯಾರ ಗಮನಕ್ಕೂ ಈ ವಿಚಾರ ತಿಳಿದುಬಂದಿರಲಿಲ್ಲ. ಆದರೆ ಇತ್ತೀಚೆಗೆ ಕಚೇರಿಯನ್ನು ಸ್ಥಳಾಂತರಗೊಳಿಸುವ ವೇಳೆ ಸತ್ಯ ತಿಳಿದುಬಂದಿದ್ದು, ಇದೀಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಹಾರ್ಂಪುರ ನಗರದ ಟೌನ್ ಪೊಲೀಸ್ ಠಾಣೆಯ ಪಕ್ಕದಲ್ಲಿ ಕಟ್ಟಡವಿದೆ. ಇದು 1948 ರಲ್ಲಿ ಸ್ಥಾಪನೆಯಾದ ಈ ಕಟ್ಟಡದ ಹೆಸರನ್ನು ಸುಮಾರು ಐದು ವರ್ಷಗಳ ಹಿಂದೆ ಡಿಇಓ ಎಂದು ಬದಲಾಯಿಸಲಾಯಿತು ಮತ್ತು ನಗರದಲ್ಲಿ ಹೊಸ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಲಾಯಿತು. ಆದರೆ ಕಚೇರಿಗೆ ಸಂಬಂಧಿಸಿ ಹಳೆ ಫೈಲ್‍ಗಳು, ಪೀಠೋಪಕರಣಗಳು ಹಾಗೂ ಇತರೆ ಸಾಮಾನುಗಳನ್ನು ಹಳೆ ಕಟ್ಟಡದಲ್ಲಿಯೇ ಇರಿಸಲಾಗಿತ್ತು. ಅಲ್ಲದೇ ಕಳೆದ ಎರಡು ವರ್ಷಗಳಿಂದ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಯಾರೂ ಕಟ್ಟಡಕ್ಕೆ ಭೇಟಿ ನೀಡಿರಲಿಲ್ಲ.  ಇದನ್ನೂ ಓದಿ: ಕೆಜಿ ಹಳ್ಳಿ ಗಲಭೆಯಲ್ಲಿ ಅಶ್ರಫ್ ಕೈವಾಡ..?- ಐಸ್ ರೀಡರ್ ಅಪ್ಲಿಕೇಷನ್‍ನಿಂದ ಡೇಟಾ ಇರೇಸ್

    POLICE JEEP

    ಕಳೆದ ಶುಕ್ರವಾರ ಸೆಕ್ಷನ್ ಆಫೀಸರ್ ಜಯಂತ್ ಕುಮಾರ್ ಸಾಹು ಅವರು ಕೆಲವು ಹಳೆಯ ಫೈಲ್‍ಗಳನ್ನು ಪರಿಶೀಲಿಸಲು ಕಚೇರಿಗೆ ಹೋಗಿದ್ದಾರೆ. ಆದರೆ ಈ ವೇಳೆ ಕಟ್ಟಡ ಸಂಪೂರ್ಣವಾಗಿ ಖಾಲಿಯಾಗಿರುವುದನ್ನು ಕಂಡು ಗೊಂದಲಕ್ಕೊಳಗಾಗಿದ್ದಾತರ. ಫೈಲ್‍ಗಳು ಮತ್ತು ಪೀಠೋಪಕರಣಗಳು ಮಾತ್ರವಲ್ಲದೇ ಕೆಲವು ಬಾಗಿಲುಗಳು ಮತ್ತು ಕಿಟಕಿಗಳು ಸಹ ಕಾಣೆಯಾಗಿರುವುದನ್ನು ನೋಡಿದ್ದಾರೆ. ನಂತರ ಈ ಬಗ್ಗೆ ಜಯಂತ್ ಕುಮಾರ್ ಸಾಹು ಅವರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಬಳಿಕ ಕಟ್ಟಡದ ಸಾಮಾನುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದ ಪೀತಾಂಬರನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಕಟ್ಟಡ ಮುಚ್ಚಿದ್ದರಿಂದ ಅಲ್ಲದೇ ಕಳೆದ ಎರಡು ವರ್ಷಗಳಿಂದ ಯಾರು ಭೇಟಿ ನೀಡದೇ ಇದ್ದ ಕಾರಣ ಮದ್ಯ ಖರೀದಿಸಲು ಸ್ಕ್ರ್ಯಾಪ್ ಅಂಗಡಿಗೆ ಎರಡು ಬಾಗಿಲು, 35 ಅಲ್ಮೆರಾಗಳು, 10 ಸೆಟ್ ಕುರ್ಚಿಗಳು ಮತ್ತು ಟೇಬಲ್‍ಗಳು ಸೇರಿದಂತೆ ಎಲ್ಲಾ ಫೈಲ್‍ಗಳು, ಪೀಠೋಪಕರಣಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ನೋಡ ಬನ್ನಿ ಬೊಂಬೆ ಸೊಬಗ – ಬೆಂಗ್ಳೂರಿನ ಶ್ರೀವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ದಸರಾ ವೈಭವ

    ಇದೀಗ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಿತಾಂಬರನನ್ನು ಬಂಧಿಸಿದ್ದಾರೆ. ಜೊತೆಗೆ ಮೂವರು ಸ್ಕ್ರ್ಯಾಪ್ ಅಂಗಡಿಯವರನ್ನು ಕೂಡ ಬಂಧಿಸಿದ್ದಾರೆ. ಭಾನುವಾರ ನಾಲ್ವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಇಲಾಖೆಯು ಪಿತಾಂಬರರನ್ನು ಕೆಲಸದಿಂದ ಅಮಾನತುಗೊಳಿಸಿದ್ದು, ಈ ಬಗ್ಗೆ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಡಿಇಒ ಬಿನಿತಾ ಸೇನಾಪತಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆಲಸಕ್ಕೆ ಹೋಗಲ್ಲ ಅಂತ ತಂದೆ ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ

    ಕೆಲಸಕ್ಕೆ ಹೋಗಲ್ಲ ಅಂತ ತಂದೆ ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ

    ಬೆಂಗಳೂರು: ಸ್ಕ್ರ್ಯಾಪ್ ಅಂಗಡಿಯ ಕೆಲಸಕ್ಕೆ ಬರಲಿಲ್ಲ ಎಂದು ತಂದೆ ನಿಂದಿಸಿದ್ದಕ್ಕೆ 23 ವರ್ಷದ ಯುವಕ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ.

    ಮೃತ ಯುವಕನನ್ನು ಸಾಹೀಲ್ ಎಂದು ಗುರುತಿಸಲಾಗಿದ್ದು, ಯುವಕನ ತಂದೆ ಅಬ್ಬಾಸ್ ತಮ್ಮ ಮಗ ಕೆಟ್ಟ ಹಾದಿಯನ್ನು ಹಿಡಿದಿದ್ದು, ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂದು ಬೇಸತ್ತಿದ್ದರು. ಆಟೋ ರಿಕ್ಷಾ ಚಾಲಕನಾಗಿದ್ದ ಅಬ್ಬಾಸ್, ಭಾನುವಾರ ಕೆಲಸಕ್ಕೆ ಹೋಗದೇ ಟಿ.ವಿ ನೋಡಿಕೊಂಡು ಕುಳಿತಿದ್ದ ಸಾಹೀಲ್‍ಗೆ ನಿಂದಿಸಿ ಕೆಲಸಕ್ಕೆ ತೆರಳಿದ್ದಾರೆ. ಆದರೆ ಇದರಿಂದ ಮನನೊಂದ ಸಾಹೀಲ್ ಅಡುಗೆ ಮನೆಗೆ ಹೋಗಿ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡಿದ್ದಾನೆ. ಇದನ್ನೂ ಓದಿ: ಅಧಿಕಾರಕ್ಕಾಗಿ ಕಾಂಗ್ರೆಸ್‍ನಿಂದ ಮೇಕೆದಾಟು ಪಾದಯಾತ್ರೆ ನಾಟಕ: ಹಾಲಪ್ಪ ಆಚಾರ್

    ಮೊದಲಿಗೆ ಚಾಕು ಹಿಡಿದು ಕೇವಲ ಬೆದರಿಸುತ್ತಿದ್ದಾನೆ ಎಂದು ಆತನ ತಾಯಿ ರೇಷ್ಮಾ ಅಂದುಕೊಂಡಿದ್ದರು ಮತ್ತು ಹೊಟ್ಟೆಯಲ್ಲಿ ಆಗಿರುವ ಗಾಯ ಸಣ್ಣದು ಎಂದು ಭಾವಿಸಿದ್ದರು. ಆದರೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸಾಹೀಲ್‍ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣ ಸಾಹೀಲ್ ಕರೆದೊಯ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಸಾಹೀಲ್ ಕೊನೆಯುಸಿರೆಳಿದಿದ್ದಾನೆ.

    ಈ ಪ್ರಕರಣ ಕುರಿತಂತೆ ರೇಷ್ಮಾ ಅವರು, ಸಾಹೀಲ್ ಅಡುಗೆ ಕೋಣೆಗೆ ಹೋಗಿ ತನ್ನ ತಂದೆಯ ಮೇಲೆ ಕೂಗಾಡುತ್ತಾ ಕೋಪದಿಂದ ಚಾಕು ತೆಗೆದುಕೊಂಡು ಇರಿದುಕೊಂಡಿದ್ದಾನೆ. ನಂತರ ಚೂರಿಯನ್ನು ನೆಲದ ಮೇಲೆ ಎಸೆದು ಹಾಲ್‍ನಲ್ಲಿದ್ದ ಸೋಫಾದ ಮೇಲೆ ಕುಳಿತುಕೊಂಡಿದ್ದ. ಆದರೆ ಸಾಹೀಲ್ ನೋವಿನಿಂದ ಅಳಲು ಆರಂಭಿಸಿದಾಗಲೇ ರೇಷ್ಮಾಗೆ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂಬ ಅರಿವಾಗಿದೆ. ಸದ್ಯ ಈ ಸಂಬಂಧ ಜೆಜೆ ನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಅಂಟಿಸಿ ಪಾದಯಾತ್ರೆ ನಿಲ್ಲಿಸಲು ಯತ್ನಿಸುತ್ತಿದ್ದೀರಾ, ನಿಮ್ಗೆ ಒಳ್ಳೆಯದಾಗಲ್ಲ: ಡಿಕೆಶಿ ಕಣ್ಣೀರು