Tag: ಸ್ಕ್ರೀನ್‌ಶಾಟ್

  • ವಾಟ್ಸಪ್‌ನಲ್ಲಿ ಇನ್ಮುಂದೆ ಸ್ಕ್ರೀನ್‌ಶಾಟ್ ತೆಗೆಯೋಕ್ಕಾಗಲ್ಲ – ಹೊಸ ಫೀಚರ್ ಬಗ್ಗೆ ಇಲ್ಲಿದೆ ಮಾಹಿತಿ

    ವಾಟ್ಸಪ್‌ನಲ್ಲಿ ಇನ್ಮುಂದೆ ಸ್ಕ್ರೀನ್‌ಶಾಟ್ ತೆಗೆಯೋಕ್ಕಾಗಲ್ಲ – ಹೊಸ ಫೀಚರ್ ಬಗ್ಗೆ ಇಲ್ಲಿದೆ ಮಾಹಿತಿ

    ವಾಷಿಂಗ್ಟನ್: ವಾಟ್ಸಪ್ ತನ್ನ ಬಳಕೆದಾರರಿಗೆ ಹೆಚ್ಚು ಹೆಚ್ಚು ಗೌಪ್ಯತೆಯನ್ನು ಕಾಪಾಡಲು ಹೊಸ ಹೊಸ ಫೀಚರ್‌ಗಳನ್ನು ತರುತ್ತಲೇ ಇದೆ. ಇದೀಗ ವಾಟ್ಸಪ್ ಬಳಕೆದಾರರ ಗೌಪ್ಯತೆಯನ್ನು ಕಾಪಾಡುವಂತಹ ಅತಿ ಉಪಯುಕ್ತ 3 ಫೀಚರ್‌ಗಳನ್ನು ತರಲು ಸಿದ್ಧವಾಗಿದೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    ಗೌಪ್ಯವಾಗಿಯೇ ಗ್ರೂಪ್‌ನಿಂದ ನಿರ್ಗಮಿಸಿ:
    ಮೆಸೆಜಿಂಗ್ ದೈತ್ಯ ಇದೀಗ ಬಳಕೆದಾರರಿಗೆ ವಾಟ್ಸಪ್ ಗ್ರೂಪ್‌ಗಳಿಂದ ಮೌನವಾಗಿ ತೊರೆಯಲು ಸಹಾಯ ಮಾಡುತ್ತಿದೆ. ಯಾವುದಾದರೂ ಗ್ರೂಪ್ ನಿಮಗೆ ಬಹಳಷ್ಟು ಕಿರಿಕಿರಿ ಉಂಟುಮಾಡುತ್ತಿದ್ದರೆ, ಆ ಗ್ರೂಪ್‌ನ ಸದಸ್ಯರಾರಿಗೂ ತಿಳಿಯದಂತೆ ನಿರ್ಗಮಿಸಲು ಸಾಧ್ಯವಿದೆ. ನೀವು ಗ್ರೂಪ್ ತೊರೆಯುವ ಬಗ್ಗೆ ಆ ಗ್ರೂಪ್‌ನ ಅಡ್ಮಿನ್‌ಗೆ ಮಾತ್ರ ತಿಳಿಯುವಂತಹ ಹೊಸ ಫೀಚರ್ ಅನ್ನು ವಾಟ್ಸಪ್ ತರುತ್ತಿದೆ.

    ಆನ್‌ಲೈನ್ ಸ್ಥಿತಿ ಮರೆಮಾಡಿ:
    ವಾಟ್ಸಪ್ ಬಳಕೆದಾರರಿಗೆ ತಮ್ಮ ಪ್ರೊಫೈಲ್ ಚಿತ್ರ ಹಾಗೂ ಕೊನೆಯದಾಗಿ ಆನ್‌ಲೈನ್ ಇದ್ದ ಸಮಯವನ್ನು ಮರೆ ಮಾಡುವಂತಹ ಅವಕಾಶ ಈ ಮೊದಲೇ ನೀಡಿತ್ತು. ಆದರೆ ನೀವು ಆನ್‌ಲೈನ್ ಇರುವುದನ್ನು ಮರೆ ಮಾಡಲು ಅವಕಾಶ ನೀಡಿರಲಿಲ್ಲ. ಇದೀಗ ವಾಟ್ಸಪ್ ಪ್ರತಿ ಚ್ಯಾಟ್‌ನ ಮೇಲ್ಗಡೆ ತೋರಿಸುವ ಆನ್‌ಲೈನ್ ಅಥವಾ ಆಫ್‌ಲೈನ್ ಸ್ಥಿತಿಯನ್ನು ಮರೆ ಮಾಡಲು ಅವಕಾಶ ನೀಡಲಿದೆ. ನೀವು ಆನ್‌ಲೈನ್ ಇರುವುದರಿಂದ ನಿಮ್ಮ ಸ್ನೇಹಿತರು ಕಿರಿಕಿರಿ ಮಾಡುತ್ತಿದ್ದರೆ, ಅವರಿಗೆ ತಿಳಿಯದಂತೆ ಈ ಫೀಚರ್ ಅನ್ನು ಬಳಸಿ ಕಿರಿಕಿರಿ ತಪ್ಪಿಸಬಹುದಾಗಿದೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    ಸ್ಕ್ರೀನ್‌ಶಾಟ್‌ಗೆ ನಿರ್ಬಂಧ:
    ಗೌಪ್ಯತೆಗೆ ಬಹಳ ಮುಖ್ಯವಾದ ಫೀಚರ್ ಅನ್ನು ವಾಟ್ಸಪ್ ಕೊನೆಗೂ ತರಲಿದೆ. ವಾಟ್ಸಪ್ ವೀವ್ ವನ್ಸ್(ಒಂದು ಬಾರಿ ಮಾತ್ರ ತೋರಿಸು) ಫೀಚರ್ ಅನ್ನು ಬಳಸುವ ಸಮಯ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಿದೆ. ವಾಟ್ಸಪ್ ಮೊದಲ ಬಾರಿ ವಿವ್ ವನ್ಸ್ ಫೀಚರ್ ಬಗ್ಗೆ ತಿಳಿಸಿದಾಗ ಬಹಳಷ್ಟು ಜನ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಮೂಲಕ ಫೀಚರ್‌ನ ಫೈಲ್ಯೂರ್ ಬಗ್ಗೆ ಟೀಕಿಸಿದ್ದರು. ಇದೀಗ ವೀವ್ ವನ್ಸ್ ಫೀಚರ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದನ್ನು ವಾಟ್ಸಪ್ ನಿರ್ಬಂಧಿಸುತ್ತಿದ್ದು, ಈ ಮೂಲಕ ಬಳಕೆದಾರರ ಗೌಪ್ಯತೆಗೆ ಮತ್ತಷ್ಟು ಒತ್ತು ನೀಡುತ್ತಿದೆ. ಇದನ್ನೂ ಓದಿ: ಆರೋಗ್ಯ ಸೇತು ಕಾರ್ಯ ನಿರ್ವಹಿಸುತ್ತಿಲ್ಲ – ವೈಯಕ್ತಿಕ ಮಾಹಿತಿಗಳ ಕತೆಯೇನು?

    Live Tv
    [brid partner=56869869 player=32851 video=960834 autoplay=true]