Tag: ಸ್ಕೈ ಡೈವಿಂಗ್

  • ಸ್ಕೈ ಡೈವಿಂಗ್ ಮೂಲಕ ಮದುವೆ ಮನೆಗೆ ಎಂಟ್ರಿ ಕೊಟ್ಟ ವರ: ವಿಡಿಯೋ

    ಸ್ಕೈ ಡೈವಿಂಗ್ ಮೂಲಕ ಮದುವೆ ಮನೆಗೆ ಎಂಟ್ರಿ ಕೊಟ್ಟ ವರ: ವಿಡಿಯೋ

    ಮೆಕ್ಸಿಕೋ: ಸ್ಕೈ ಡೈವಿಂಗ್ ಮೂಲಕ ವರ ತನ್ನ ಮದುವೆಗೆ ಎಂಟ್ರಿ ಕೊಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಇತ್ತೀಚೆಗೆ ಆಕಾಶ್ ಯಾದವ್ ಎಂಬವರು ಮೆಕ್ಸಿಕೋದ ಲಾಸ್ ಕ್ಯಾಬೋಸ್‍ನಲ್ಲಿ ಗಗನ್‍ಪ್ರೀತ್ ಸಿಂಗ್ ಎಂಬವರನ್ನು ಮದುವೆಯಾಗಿದ್ದರು. ತನ್ನ ಮದುವೆಯಲ್ಲಿ ಆಕಾಶ್ ಸ್ಕೈ ಡೈವಿಂಗ್ ಮಾಡುವ ಮೂಲಕ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಮ್ಯೂಸಿಶಿಯನ್ ಅರ್ಮಾನ್ ಗುಪ್ತಾ ಎಂಬವರು ಈ ವಿಡಿಯೋವನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಸ್ಕೈ ಡೈವ್ ಮಾಡಿ ಮದುವೆಮನೆಗೆ ಬರುವುದಾದರೆ ಮತ್ತೆ ಕುದುರೆ ಮೇಲೆ ಏಕೆ ಬರಬೇಕು?. ಆಕಾಶ್, ಗಗನ್‍ಪ್ರೀತ್‍ರನ್ನು ಮದುವೆ ಆಗಲು ಬಿಸಿಲಿನಲ್ಲಿ ಬರುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಆಕಾಶ್ ಹಳದಿ ಹಾಗೂ ಬಿಳಿ ಬಣ್ಣದ ಪ್ಯಾರಾಚೂಟ್‍ನಿಂದ ಎಂಟ್ರಿ ಕೊಟ್ಟಿದ್ದಾರೆ. ಆಕಾಶ್ ಪ್ಯಾರಾಚೂಟ್‍ನಿಂದ ಇಳಿಯುತ್ತಿದ್ದಂತೆ ಅಲ್ಲಿದ್ದ ಅತಿಥಿಗಳು ಚಪ್ಪಾಳೆ ತಟ್ಟುತ್ತಾ ಜೋರಾಗಿ ಕಿರುಚಿಕೊಳ್ಳುವ ಮೂಲಕ ಆಕಾಶ್‍ನನ್ನು ಸ್ವಾಗತಿಸಿದ್ದಾರೆ.

    https://www.instagram.com/p/B5YhLaUngQG/?utm_source=ig_embed

    ಆಕಾಶ್ ನಟ, ಡ್ಯಾನ್ಸರ್ ಹಾಗೂ ಸೂಪರ್ ಮಾಡೆಲ್ ಆಗಿದ್ದು, ವಧು ಗಗನ್‍ಪ್ರೀತ್ ಪ್ರೋಫೆಶನಲ್ ಡ್ಯಾನ್ಸರ್ ಆಗಿದ್ದಾರೆ. ತಮ್ಮ ಮದುವೆ ವಿಭಿನ್ನ ಹಾಗೂ ಸ್ಪೆಷಲ್ ಆಗಿ ಮಾಡಲು ಆಕಾಶ್ ಹಾಗೂ ಗಗನ್‍ಪ್ರೀತ್ ಸಾಕಷ್ಟು ಕಷ್ಟಪಟ್ಟಿದ್ದಾರೆ.

    https://www.instagram.com/p/B5TXojwg5l5/?utm_source=ig_embed

  • 13 ಸಾವಿರ ಅಡಿ ಎತ್ತರದಲ್ಲಿ ಮಂಗ್ಳೂರು ಯುವಕನಿಂದ ದುಬೈನಲ್ಲಿ ಸ್ಕೈ ಡೈವಿಂಗ್

    13 ಸಾವಿರ ಅಡಿ ಎತ್ತರದಲ್ಲಿ ಮಂಗ್ಳೂರು ಯುವಕನಿಂದ ದುಬೈನಲ್ಲಿ ಸ್ಕೈ ಡೈವಿಂಗ್

    – ಸ್ಕೈಡೈವ್‍ನಿಂದ ನೆಲಕ್ಕಿಳಿದ ಕೂಡಲೇ ಅಣ್ಣಾಮಲೈಗೆ ಸೆಲ್ಯೂಟ್

    ಮಂಗಳೂರು: ವಿಮಾನದಲ್ಲಿ ಪ್ರಯಾಣಿಸುತ್ತಾ ಹೊರಗೆ ಇಣುಕಿ ನೋಡುವುದಕ್ಕೇ ಭಯವಾಗುತ್ತದೆ. ಅಂತಹದ್ದರಲ್ಲಿ ಮಂಗಳೂರಿನ ಯುವಕರೊಬ್ಬರು ದೂರದ ದುಬೈನಲ್ಲಿ ವಿಮಾನದಿಂದಲೇ ಹೊರಕ್ಕೆ ಹಾರಿ ಸಾಹಸ ಪ್ರದರ್ಶಿಸಿದ್ದಾರೆ. ವಿಮಾನದಿಂದ ಹೊರಗೆ 13 ಸಾವಿರ ಅಡಿ ಎತ್ತರದಲ್ಲಿ ಸ್ಕೈ ಡೈವಿಂಗ್ ಮಾಡುತ್ತಾ ದುಬೈನ ಪಾಮ್ ಜುಮೈರಾ ನಗರದ ಸೌಂದರ್ಯ ಸವಿದಿದ್ದಾರೆ.

    ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೋಡಪದವು ನಿವಾಸಿಯಾಗಿರಿವ ಸಫ್ವಾನ್ ಶಾ ಈ ಸಾಹಸ ಮಾಡಿದ ಯುವಕ. ಬಹರೈನಲ್ಲಿ ಉದ್ಯೋಗದಲ್ಲಿರುವ ಸಫ್ವಾನ್ ಶಾ ಅವರಿಗೆ ಸಾಹಸ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದು ಹವ್ಯಾಸ. ದುಬೈನ ಖ್ಯಾತ ನಗರಿ ಪಾಮ್ ಜುಮೈರಾದಲ್ಲಿ 13 ಸಾವಿರ ಅಡಿ ಎತ್ತರದಲ್ಲಿ ಇದೀಗ ಸ್ಕೈ ಡೈವಿಂಗ್ ಮಾಡಿದ್ದು ಎಲ್ಲರ ಹುಬ್ಬೆರಿಸಿದ್ದಾರೆ.

    ವೃತ್ತಿಪರ ಸ್ಕೈ ಡೈವರ್ ಜೊತೆಗೆ ಹಾರುವ ಈ ಪ್ರದರ್ಶನಕ್ಕೆ 50 ಸಾವಿರ ರೂ. ವೆಚ್ಚ ತಗಲುವುದು. ವಿಮಾನದಿಂದ ಹೊರಗೆ ಹಾರಿದ ಬಳಿಕ 30 ನಿಮಿಷ ಕಾಲ ಪ್ಯಾರಾಚೂಟ್ ಆಧಾರದಲ್ಲಿ ಆಕಾಶದಲ್ಲಿ ವಿಹರಿಸಿ, ಆ ನಂತರ ನಿಧಾನಕ್ಕೆ ನೆಲಕ್ಕೆ ಇಳಿಯುತ್ತಾರೆ. ಸಫ್ವಾನ್, ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅಭಿಮಾನಿಯಾಗಿದ್ದು, ಸ್ಕೈ ಡೈವ್ ನಿಂದ ನೆಲಕ್ಕಿಳಿದ ಕೂಡಲೇ ಅಣ್ಣಾಮಲೈಗೆ ಸೆಲ್ಯೂಟ್ ಹೊಡೆದಿದ್ದಾರೆ.

    ಯುವಕನ ಸಾಹಸದ ವಿಡಿಯೋ ನೋಡಿದ ಜನ ಅವರ ಧೈರ್ಯವನ್ನು ಕೊಂಡಾಡುತ್ತಿದ್ದಾರೆ.

  • ಸೀರೆಯಲ್ಲಿ ಸ್ಕೈ ಡೈವಿಂಗ್ ಮಾಡಿ ದಾಖಲೆ ಬರೆದ ಮಹಿಳೆ

    ಸೀರೆಯಲ್ಲಿ ಸ್ಕೈ ಡೈವಿಂಗ್ ಮಾಡಿ ದಾಖಲೆ ಬರೆದ ಮಹಿಳೆ

    ಮುಂಬೈ: ಮಹಾರಾಷ್ಟ್ರ ರಾಜ್ಯದ ಪುಣೆಯ ಸಾಹಸಿ ಮಹಿಳೆ ಶೀತಲ್ ರಾಣೆ-ಮಹಾಜನ್, ಥೈಲ್ಯಾಂಡ್‍ನಲ್ಲಿ ‘ನವ್ ವಾರಿ ಸೀರೆ’ (8.25 ಮೀಟರ್ ಉದ್ದದ ಸೀರೆ) ಧರಿಸಿ ಸ್ಕೈ ಡೈವಿಂಗ್ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ಸೀರೆ ಧರಿಸಿ ಸ್ಕೈ ಡೈವಿಂಗ್ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಬಿರುದಿಗೆ ಶೀತಲ್ ಪಾತ್ರವಾಗಿದ್ದಾರೆ.

    ಸ್ಕೈ ಡೈವಿಂಗ್ ಬಳಿಕ ಮಾತನಾಡಿದ ಶೀತಲ್, ಅನಕೂಲಕರವಾದ ವಾತಾವರಣ ಇದ್ದ ಕಾರಣ ಪಟ್ಟಾಯ್‍ನ ವಿಶ್ವ ಪ್ರಸಿದ್ಧ ರೆಸಾರ್ಟ್ ಮೇಲಿಂದ ಸುಮಾರು 13,000 ಅಡಿ ಎತ್ತರದಿಂದ ಎರಡು ಬಾರಿ ಸ್ಕೈ ಡೈವಿಂಗ್ ಮಾಡಿದೆ ಎಂದು ತಮ್ಮ ಸಂತೋಷವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

    ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಈ ಬಾರಿ ಏನಾದ್ರೂ ಸಾಹಸ ಮಾಡಬೇಕೆಂದು ಯೋಚಿಸಿ, ನವ್ ವಾರಿ ಸೀರೆ ಧರಿಸಿ ಸ್ಕೈ ಡೈವಿಂಗ್ ಮಾಡಲು ತೀರ್ಮಾನಿಸಿದೆ ಅಂತಾ ತಿಳಿಸಿದ್ದಾರೆ.

    ಭಾರತೀಯ ಮಹಿಳೆಯರು ಧರಿಸುವ ಸಾಮಾನ್ಯ ಸೀರೆಗಿಂತ್ ‘ನವ್ ವಾರಿ ಸೀರೆ’ ತುಂಬಾ ಉದ್ದವಾಗಿರುತ್ತದೆ. ಮೊದಲು ಸರಿಯಾಗಿ ಸೀರೆಯನ್ನು ತೊಟ್ಟು ರೆಡಿಯಾದೆ. ನಂತರ ಪ್ಯಾರಾಚೂಟ್, ಹ್ಯಾಂಡ್ ಗ್ಲೌಸ್, ಹೆಲ್ಮೆಟ್, ಸಂಪರ್ಕ ಸಾಧನ ಮತ್ತು ಶೂಗಳನ್ನು ಧರಿಸಿ ಸ್ಕೈ ಡೈವಿಂಗ್ ಮಾಡಿದೆ. ಮೊದಲ ಬಾರಿಗೆ ಧುಮುಕುವಾಗ ಸ್ವಲ್ಪ ಭಯವಾಗಿತ್ತು, ಆದ್ರೆ ಎರಡನೇ ಬಾರಿಗೆ ಧೈರ್ಯದಿಂದ ಧುಮುಕಿ ಎಂಜಾಯ್ ಮಾಡಿದೆ ಅಂತಾ ಶೀತಲ್ ಹೇಳಿಕೊಂಡಿದ್ದಾರೆ.

    ಪದ್ಮಶ್ರೀ ಪ್ರಶಸ್ತಿ ವಿಜೇತೆಯಾಗಿರುವ ಶೀತಲ್ ಮಹಾಜನ್ ಫಿನ್‍ಲ್ಯಾಂಡ್ ಮೂಲದ ಎಂಜಿನಿಯರ್ ವೈಭವ್ ರಾಣೆ ಅವರನ್ನು ಮದುವೆ ಆಗಿದ್ದಾರೆ. 2008ರಲ್ಲಿ ಪುಣೆ ನಗರದ ಸ್ಕೈ ಸಿಟಿಯಲ್ಲಿ 750 ಅಡಿ ಎತ್ತರದಲ್ಲಿ ಹಾಟ್ ಏರ್ ಬಲೂನ್‍ನಲ್ಲಿ ಮದುವೆಯಾಗುವ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದರು.

    ಏಪ್ರಿಲ್ 18, 2004ರಲ್ಲಿ ತಮ್ಮ ಮೊದಲ ಸ್ಕೈ ಡೈವಿಂಗ್ ನಲ್ಲಿ ರಷ್ಯಾದಲ್ಲಿರುವ ಉತ್ತರ ದ್ರುವದಲ್ಲಿ ಮೈನಸ್ 37 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 2,400 ಅಡಿ ಎತ್ತರದಿಂದ ಧುಮಕಿದ ವಿಶ್ವದ ಮೊದಲ ಮಹಿಳೆ ಎಂಬ ದಾಖಲೆ ಶೀತಲ್ ಹೆಸರಿನಲ್ಲಿದೆ. ಇದೂವರೆಗೂ ಸ್ಕೈ ಡೈವಿಂಗ್ ನಲ್ಲಿ 18 ರಾಷ್ಟ್ರೀಯ ರೆಕಾರ್ಡ್ ಬರೆದಿದ್ದಾರೆ.