Tag: ಸ್ಕೇಟಿಂಗ್

  • ಮಂಗಳೂರಿನ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ಗೆ 94 ಪದಕ, 26 ಮಂದಿ ರಾಜ್ಯಮಟ್ಟಕ್ಕೆ ಆಯ್ಕೆ

    ಮಂಗಳೂರಿನ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ಗೆ 94 ಪದಕ, 26 ಮಂದಿ ರಾಜ್ಯಮಟ್ಟಕ್ಕೆ ಆಯ್ಕೆ

    ಮಂಗಳೂರು: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಹಾಗೂ ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆ ಮಂಗಳೂರಿನ ಅಶೋಕ್ ನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಫೆ.6 ರಂದು ನಡೆಯಿತು.

    ಮಂಗಳೂರಿನ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ನ 39 ಸ್ಕೇಟರ್‍ಗಳು ಭಾಗವಹಿಸಿದ್ದು, 44 ಚಿನ್ನ, 31 ಬೆಳ್ಳಿ ಮತ್ತು 19 ಕಂಚು ಸೇರಿ ಒಟ್ಟು 94 ಪದಕಗಳನ್ನು ಗೆದ್ದಿದ್ದಾರೆ. ಇದೇ ವೇಳೆ ಹೈಫ್ಲೈಯರ್ಸ್ ಕ್ಲಬ್‍ನ 26 ಮಂದಿ ಮಾರ್ಚ್ ಮೊದಲ ವಾರದಲ್ಲಿ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟಕ್ಕೆ ಸ್ಕೇಟಿಂಗ್ ಚಾಂಪಿಯನ್ ಶಿಪ್‍ಗೆ ಅರ್ಹತೆ ಪಡೆದಿದ್ದಾರೆ.

    ಪದಕ ವಿಜೇತರ ಹೈಫ್ಲೈಯರ್ಸ್ ಕ್ಲಬ್ ಸ್ಕೇಟರ್ಸ್ :
    ಡೇನಿಯಲ್ ಸಾಲ್ವಡೋರ್ ಕಾನ್ಸೆಸಾವೊ (4 ಗೋಲ್ಡ್), ರುಷಭ್ ಮಂಜೇಶ್ವರ್ (4 ಚಿನ್ನ), ಡ್ಯಾಶೆಲ್ ಅಮಂಡಾ ಕಾನ್ಸೆಸಾವೊ (3 ಚಿನ್ನ,1 ಬೆಳ್ಳಿ )ಅರ್ಪಿತಾ ನಿಶಾಂತ್ ಶೇಟ್ (3 ಚಿನ್ನ,1 ಬೆಳ್ಳಿ), ಮೊಹಮ್ಮದ್ ಶಾಮಿಲ್ ಅರ್ಷದ್ (3 ಚಿನ್ನ), ಕೃತಿ ಕಯ್ಯ (3 ಚಿನ್ನ) ಅನಘಾ ರಾಜೇಶ್ (3 ಚಿನ್ನ) ವಿವೇಕ ಯೋಗರಾಜ್(3 ಚಿನ್ನ ) ನಿರ್ಮಯ್ ವೈ ಎನ್ (3 ಚಿನ್ನ), ಮೊಹಮ್ಮದ್ ಫರಾಜ್ ಅಲಿ (3 ಚಿನ್ನ, ),ತನ್ಮಯ್ ಎಂ.ಕೊಟ್ಟಾರಿ (2 ಚಿನ್ನ,1 ಬೆಳ್ಳಿ),ರಕ್ಷಿತ್ ಜೋಶಿ (4 ಬೆಳ್ಳಿ),ಮಹೇಶ್ ಕೃಷ್ಣ (1 ಚಿನ್ನ,2 ಬೆಳ್ಳಿ) ಶಮಿತ್.ಯು ಶೆಟ್ಟಿ (1 ಚಿನ್ನ, 2 ಬೆಳ್ಳಿ),ಶಾನನ್ ಜೋಯಲ್ ಪ್ರಸಾದ್ (1 ಚಿನ್ನ,2 ಬೆಳ್ಳಿ),ರಿಯನ್ನ್ ಜೆನ್ ಡಿಸಿಲ್ವ (1 ಚಿನ್ನ,2 ಬೆಳ್ಳಿ ),ಜಿಶಾನ್ ಗ್ಲಾವಿನ್ ಡಿಸೋಜಾ (2ಚಿನ್ನ), ಹಿಮಾನಿ ಕೆ.ವಿ (2 ಚಿನ್ನ ),ವೇದಾಂತ್ ಉಪಾಧ್ಯಾಯ(1 ಚಿನ್ನ,1 ಬೆಳ್ಳಿ ) ರೆಹನ್ ಪ್ರೀಯಾನ್ ಡಿಸೋಜಾ (1 ಚಿನ್ನ,2 ಕಂಚು),ಏಂಜಲಿನ ಸಾರ ರಂಜಿತ್ (2 ಬೆಳ್ಳಿ,1 ಕಂಚು),ಗ್ರೀಷ್ಮಾ ಶೆಟ್ಟಿ (2 ಬೆಳ್ಳಿ,1 ಕಂಚು)ಇಶಾನಿ ಕೆ.ವಿ (2 ಬೆಳ್ಳಿ 1 ಕಂಚು ),ರೇಹನಾ ಪ್ರಿಯಲ್ ಡಿಸೋಜಾ (2 ಬೆಳ್ಳಿ 1 ಕಂಚು ),ಚಿನ್ಮಯ್ ಆರ್.ಪೂಜಾರಿ (1 ಬೆಳ್ಳಿ 2 ಕಂಚು ),ವರ್ದನ್ ಯಾದವ್ (1 ಬೆಳ್ಳಿ 1 ಕಂಚು ), ತಕ್ಷಕ್ ಶೆಟ್ಟಿ (1 ಬೆಳ್ಳಿ 1 ಕಂಚು), ಮೌರ್ಯ ಕಿರಣ್ ಬಂಜನ್ (1 ಬೆಳ್ಳಿ, 1 ಕಂಚು ),ಅನಶ್ ಕಿರಣ್ ಪಕ್ಕಳ(1 ಬೆಳ್ಳಿ,1 ಕಂಚು)ಆರ್ನ ರಾಜೇಶ್ (1 ಬೆಳ್ಳಿ ,1 ಕಂಚು),ಯೋಹನ್ ಮ್ಯಾಥ್ಯೂ (1 ಬೆಳ್ಳಿ ),ಪ್ರಜ್ವಲ್ ಸಿ ಪೂಜಾರಿ (2 ಕಂಚು )ಗ್ರೀಷ್ಮಾ ಬಿ.ಮ್ (2 ಕಂಚು )ಲಕ್ಷನ್ ಆರ್ ಅಡ್ಯಂತಾಯ (1 ಕಂಚು ),ಭದ್ರ ಶರ್ಮ (1 ಕಂಚು)

    ಪದಕ ವಿಜೇತ ಎಲ್ಲಾ  ಸ್ಕೇಟರ್‌ಗಳಿಗೆ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ನ ಕೋಚ್‍ ಮೋಹನ್‍ದಾಸ್ ಕೆ, ಜಯರಾಜ್ ಹಾಗೂ ರಮಾನಂದ್ ಅವರು ತರಬೇತಿ ನೀಡುತ್ತಿದ್ದಾರೆ.

  • ಗುರುವಿಲ್ಲದೇ ಪುಟಾಣಿ ಸ್ಕೇಟಿಂಗ್ ಪ್ರಚಂಡ

    ಗುರುವಿಲ್ಲದೇ ಪುಟಾಣಿ ಸ್ಕೇಟಿಂಗ್ ಪ್ರಚಂಡ

    – 150 ಪೋಲ್‍ಗಳನ್ನ 1 ನಿಮಿಷ 4 ಸೆಕೆಂಡ್‍ಗಳಲ್ಲಿ ಕಂಪ್ಲಿಟ್

    ಬೆಂಗಳೂರು: ಇತ್ತೀಚೆಗೆ ಪುಟಾಣಿ ಮಕ್ಕಳು ದಾಖಲೆ ಬರೆಯುವಂತೆ ಗುರಿ ಹೊಂದಿರುತ್ತಾರೆ. ಇದೇ ರೀತಿ ಬೆಂಗಳೂರಿನ ಸುಬ್ರಮಣ್ಯನಗರ ಪುಟಾಣಿ ಪೋರ ದಾಖಲೆ ಮಾಡುವಂತಹ ದೊಡ್ಡ ಕನಸು ಹೊತ್ತಿದ್ದಾನೆ.

    ಮಾರುತಿ ಹಾಗೂ ಸವಿತಾ ದಂಪತಿ ಪುತ್ರ ಆರ್ಯನ್ ಸ್ಕೇಟಿಂಗ್‍ನಲ್ಲಿ ಲಿಂಬೋ ದಾಖಲೆ ಮಾಡಲು ಸಿದ್ಧನಾಗುತ್ತಿದ್ದಾನೆ. ಕಬ್ಬನ್ ಪಾರ್ಕಿನಲ್ಲಿ ಭಾನುವಾರವಾದರೆ ಸಾಕು ಸ್ಕೇಟಿಂಗ್ ಮಾಡುತ್ತಾನೆ. ಈ ಪುಟಾಣಿ ಫೋರ 150 ಮೀ ಉದ್ದವನ್ನ 9 ಅಡಿ ಎತ್ತರ ಪೋಲ್‍ಗಳನ್ನ ಇರಿಸಿ ಬಾಡಿ ಬೆಂಡ್ ಮಾಡಿ ಸ್ಕೇಟಿಂಗ್ ಮಾಡುತ್ತಿದ್ದಾನೆ.

    ಈವರೆಗೂ ಯಾರು ಈ ಸಾಧನೆ ಮಾಡಿಲ್ಲ. ಹೀಗಾಗಿ ಆರ್ಯನ್ ಈ ಸಾಧನೆ ಮಾಡುವ ಆಸೆ ಹೊಂದಿದ್ದಾನೆ ಎಂದು ತಂದೆ ಮಾರುತಿ ಹೇಳಿದ್ದಾರೆ. 6 ವರ್ಷದ ಆರ್ಯನ್ 150 ಪೋಲ್‍ಗಳನ್ನ ಕೇವಲ 1 ನಿಮಿಷ 4 ಸೆಕೆಂಡ್‍ಗಳಲ್ಲಿ ಕಂಪ್ಲಿಟ್ ಮಾಡುತ್ತಾನೆ. ಈ ಸಂಬಂಧ ಅಗತ್ಯ ದಾಖಲೆಗಳನ್ನ ಕಲೆಹಾಕಲಾಗಿದೆ. ಲಿಂಬೋ ದಾಖಲೆಗಾಗಿ ವಿಡಿಯೋಗಳನ್ನ ಕಳುಹಿಸಲಾಗಿದೆ. ಈ ದಾಖಲೆಗಾಗಿಯೇ ಆರ್ಯನ್ ಕಾತುರದಿಂದ ಕಾಯುತ್ತಿದ್ದಾನೆ ಎಂದು ತಾಯಿ ಸವಿತಾ ತಿಳಿಸಿದ್ದಾರೆ.

    ಆರ್ಯನ್ ಈ ವಿದ್ಯೆಗೆ, ಈ ದಾಖಲೆ ಮಾಡಲು ಯಾರೂ ಗುರುವಿಲ್ಲ. ತಂದೆ-ತಾಯಿ ನಿತ್ಯ ಆರ್ಯನ್ ಸ್ಕೇಟಿಂಗ್ ಮೇಲೆ ಗಮನವಿರಿಸಿ ಈ ಸಾಧನೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ.

  • ಅಂತರಾಷ್ಟ್ರೀಯ ಐಸ್ ಸ್ಕೇಟಿಂಗ್‍ನಲ್ಲಿ ಮಂಗ್ಳೂರಿನ ಅನಘಾಗೆ ಎರಡು ಚಿನ್ನದ ಪದಕ

    ಅಂತರಾಷ್ಟ್ರೀಯ ಐಸ್ ಸ್ಕೇಟಿಂಗ್‍ನಲ್ಲಿ ಮಂಗ್ಳೂರಿನ ಅನಘಾಗೆ ಎರಡು ಚಿನ್ನದ ಪದಕ

    ಮಂಗಳೂರು: ಸಿಂಗಾಪುರ್‌ನಲ್ಲಿ ನಡೆದ ಅಂತರಾಷ್ಟ್ರೀಯ ಐಸ್ ಸ್ಕೇಟಿಂಗ್‍ನಲ್ಲಿ ಮಂಗಳೂರಿನ ಅನಘಾ ಎರಡು ಚಿನ್ನದ ಪದಕ ಗೆದ್ದಿದ್ದಾರೆ.

    ಸಿಂಗಾಪುರ್‌ನ ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಸಿಂಗಾಪುರದಲ್ಲಿ ಅಂತರಾಷ್ಟ್ರೀಯ ಮಟ್ಟದ ಸೌತ್ ಈಸ್ಟ್ ಏಪ್ಯಾನ್ ಓಪನ್ ಶಾರ್ಟ್ ಟ್ರಾಕ್ ಟ್ರೋಪಿ-2020 ಐಸ್ ಸ್ಕೇಟಿಂಗ್ ಚಾಂಪಿಯನ್‍ಶಿಪ್ ಆಯೋಜಿಸಿತ್ತು. ಈ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಅನಘಾ ಎರಡು ಚಿನ್ನದ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

    ಸಿಂಗಾಪುರದ ಜೆಕ್ಯೂಬ್ ಐಸ್ ರಿಂಕ್‍ನಲ್ಲಿ ಜನವರಿ 4 ಹಾಗೂ 5 ರಂದು ನಡೆದ ಈ ಚಾಂಪಿಯನ್ ಶಿಪ್ ನ ಹುಡುಗಿಯರ ಜ್ಯೂನಿಯರ್ ವಿಭಾಗದ 500 ಮೀಟರ್ ಹಾಗೂ 333 ಮೀಟರ್ ಐಸ್ ಸ್ಕೇಟಿಂಗ್‍ನಲ್ಲಿ ಅನಘಾ ಚಿನ್ನದ ಪದಕ ಪಡೆದಿದ್ದಾರೆ. 14 ದೇಶದ ಸ್ಕೇಟಿಂಗ್ ಪಟುಗಳಿದ್ದ ಈ ಚಾಂಪಿಯನ್‍ಶಿಪ್‍ನಲ್ಲಿ ಅನಘಾ ಎರಡು ಚಿನ್ನದ ಪದಕ ಪಡೆದು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

    ಮಂಗಳೂರಿನ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂಡ್ಸ್ ಸೆಂಟ್ರಲ್ ಸ್ಕೂಲ್‍ನ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಐಸ್ ಸ್ಕೇಟಿಂಗ್‍ನ ಭಾರತ ತಂಡದ ಕೋಚ್ ಅವಧೂತ್ ಥಾವಡೇ ಅವರಿಂದ ಅನಘಾ ದೆಹಲಿಯಲ್ಲಿ ಐಸ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾರೆ.

  • ಕಣ್ಣಿದ್ದವರನ್ನು ನಾಚಿಸುವಂತೆ ಸ್ಕೇಟಿಂಗ್ ಮಾಡುತ್ತಾನೆ ಈ ಅಂಧ ಯುವಕ- ವಿಡಿಯೋ

    ಕಣ್ಣಿದ್ದವರನ್ನು ನಾಚಿಸುವಂತೆ ಸ್ಕೇಟಿಂಗ್ ಮಾಡುತ್ತಾನೆ ಈ ಅಂಧ ಯುವಕ- ವಿಡಿಯೋ

    ನವದೆಹಲಿ: ಅಂಧ ಯುವಕ ಕಣ್ಣಿದ್ದವರನ್ನೂ ಮೀರಿಸುವಂತೆ ಸ್ಕೇಟಿಂಗ್ ಮಾಡುವ ಮೂಲಕ ನೆಟ್ಟಿಗರು ನಿಬ್ಬೆರಗಾಗುವಂತೆ ಮಾಡಿದ್ದಾನೆ.

    ಜಪಾನ್ ಮೂಲಕ ಕಿಡ್_ಎಂ.ಸಿ ಎಂಬ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಹಲವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಆದರೆ, ಈ ಯುವಕ ತನ್ನ ಅದ್ಭುತ ವಿಡಿಯೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಇತರರು ನಿಬ್ಬೆರಗಾಗುವಂತೆ ಮಾಡಿದ್ದಾನೆ.

    https://www.instagram.com/p/B5DA2Czh2ob/?utm_source=ig_embed

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಬಹುತೇಕರು ಇದರಿಂತ ಪ್ರೇರಿತರಾಗುತ್ತಿದ್ದಾರೆ. ಯುವಕನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ವಿಡಿಯೋದಲ್ಲಿ ಬಿಳಿ ಟಿ ಶರ್ಟ್ ಧರಿಸಿದ ಅಂಧ ಯುವಕ ಸ್ಕೇಟ್ ಬೋರ್ಡ್ ಪಾರ್ಕಿನಲ್ಲಿ ತನ್ನ ಅದ್ಭುತ ಸ್ಕೇಟಿಂಗ್ ಕೌಶಲವನ್ನು ಪ್ರದರ್ಶಿಸಿದ್ದಾನೆ. ಕಣ್ಣಿದ್ದವರು ಸಹ ಇಂತಹ ಸ್ಟಂಟ್ ಮಾಡಲು ಭಯಪಡುತ್ತಾರೆ. ಆದರೆ ಈ ಯುವಕ ಒಂದು ಕೈಯಲ್ಲಿ ಸ್ಟಿಕ್ ಹಿಡಿದು ಸರ್ರನೆ ಹೋಗುವ ಮೂಲಕ ನೋಡುಗರು ನಿಬ್ಬೆರಗಾಗುವಂತೆ ಮಾಡಿದ್ದಾನೆ. ಒಂದು ಬಾರಿಯೂ ಎಡವಿ ಬೀಳದೇ ಸರಾಗವಾಗಿ ಸ್ಕೇಟಿಂಗ್ ವ್ಹೀಲ್ ಮೂಲಕ ಜಾರುತ್ತಾನೆ.

    https://www.instagram.com/p/B4ueAFfBkrV/?utm_source=ig_embed

    ತಾನು ಸ್ಕೇಟಿಂಗ್ ಮಾಡಿರುವ ಹತ್ತಾರು ವಿಡಿಯೋವನ್ನು ಯುವಕ ಇನ್‍ಸ್ಟಾದಲ್ಲಿ ಹಾಕಿದ್ದು, ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವರು ಹಾಡಿ ಹೊಗಳಿದರೆ, ನೀವು ನಮಗೆಲ್ಲ ಸ್ಪೂರ್ತಿ ಎಂದು ಕೊಂಡಾಡಿದ್ದಾರೆ.

  • ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್‍ – ಗಿನ್ನಿಸ್ ದಾಖಲೆ ಬರೆದ ಹುಬ್ಬಳ್ಳಿ ಬಾಲೆ

    ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್‍ – ಗಿನ್ನಿಸ್ ದಾಖಲೆ ಬರೆದ ಹುಬ್ಬಳ್ಳಿ ಬಾಲೆ

    ಹುಬ್ಬಳ್ಳಿ: ಮಕ್ಕಳ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ 12 ವರ್ಷದ ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51 ಸೆಕೆಂಡ್‍ನಲ್ಲಿ 400 ಮೀಟರ್ ಸ್ಕೇಟಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾಳೆ.

    ಓಜಲ್ ಎಸ್ ನಲವಡಿ ಇಲ್ಲಿನ ಶಿರೂರು ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಈ ಸಾಧನೆ ಮಾಡಿದ್ದಾಳೆ. ಈ ಸಾಧನೆಯನ್ನು ನೋಡಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿ ವಿಕ್ಟರ್ ಫೆನೆಸ್ ದಾಖಲಿಸಿಕೊಂಡರು. ಬೆಳ್ಳಂಬೆಳಗ್ಗೆ ನಡೆದ ಈ ದಾಖಲೆಗೆ ನೂರಾರು ಮಂದಿ ಸಾಕ್ಷಿಯಾದರು.

    ವಿಆರ್‌ಎಲ್‌ ಕಂಪನಿಯ ಸಿಎಫ್‍ಒ ಆಗಿರುವ ಸುನೀಲ್ ಎಸ್. ನಲವಡಿ ಹಾಗೂ ದೀಪಾ ಎಸ್. ನಲವಡಿ ಅವರ ಪುತ್ರಿಯಾದ ಓಜಲ್, ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ ಇದುವರೆಗೆ ಒಟ್ಟು 13 ದಾಖಲೆಗಳನ್ನು ನಿರ್ಮಿಸಿದ್ದಾಳೆ.

    ಇದೀಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಓಜಲ್‍ಳಿಗೆ ಅಕ್ಷಯ ಸೂರ್ಯವಂಶಿ ಎಂಬವರು ತರಬೇತಿ ನೀಡಿದ್ದರು.

  • ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‍ಶಿಪ್: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಮಂಗ್ಳೂರು ಪಟು

    ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‍ಶಿಪ್: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಮಂಗ್ಳೂರು ಪಟು

    ಬೆಂಗಳೂರು: ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‍ಶಿಪ್ -2019ರಲ್ಲಿ ಮಂಗಳೂರಿನ ಸ್ಕೇಟಿಂಗ್ ಪಟು ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ಬೆಳ್ಳಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ರೋಲರ್ ಸ್ಕೇಟಿಂಗ್ ಫೇಡರೇಷನ್ ಆಫ್ ಇಂಡಿಯಾ ಹಾಗೂ ಉತ್ತರ ಪ್ರದೇಶ ರೋಲರ್ ಸ್ಪೋಟ್ರ್ಸ್ ಅಸೋಸಿಯೇಷನ್ ಆಲ್ ಇಂಡಿಯಾ ರೋಲರ್ ಸ್ಕೇಟಿಂಗ್ ಚಾಂಪಿಯನ್‍ಶಿಪ್ ಆಯೋಜಿಸಿತ್ತು. ಇದರಲ್ಲಿ 14 ವರ್ಷದೊಳಗಿನ ವಿಭಾಗ, 500 ಮೀಟರ್ ರಿಂಕ್ ರೇಸ್‍ನಲ್ಲಿ ಮಂಗಳೂರಿನ ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ಅವರು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.

    ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ನಗರದ ಮಾಲೆಮಾರ್ ನಿವಾಸಿಯಾದ ಫ್ರಾನ್ಸಿಸ್ ಕೊನ್ಸೆಸ್ಸೊ ಹಾಗೂ ಡೋರಿಸ್ ಕೊನ್ಸೆಸ್ಸೊ ದಂಪತಿಯ ಪುತ್ರಿ. ಮಂಗಳೂರಿನ ನೀರು ಮಾರ್ಗದ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಡ್ಯಾಷೆಲ್ ಅವರು ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯರಾಗಿದ್ದು, ಮೋಹನ್.ಕೆ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

  • ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್: ಅಶ್ವಿನ್ ಡಿಸಿಲ್ವಾಗೆ ಕಂಚು

    ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್: ಅಶ್ವಿನ್ ಡಿಸಿಲ್ವಾಗೆ ಕಂಚು

    ಮಂಗಳೂರು: ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ ಪುರುಷರ ಜೂನಿಯರ್ ವಿಭಾಗದ 1,000 ಮೀಟರ್ ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ನಲ್ಲಿ ನಗರದ ಅಶ್ವಿನ್ ಕ್ಯಾಲೆನ್ ಡಿಸಿಲ್ವಾ ಕಂಚಿನ ಪದಕ ಪಡೆದಿದ್ದಾರೆ.

    ಅಶ್ವಿನ್ ಕ್ಯಾಲೆನ್ ಡಿಸಿಲ್ವಾ ಮಂಗಳೂರಿನ ಆಲ್ವಿನ್ ಮತ್ತು ಆಶಾ ಡಿಸಿಲ್ವಾ ದಂಪತಿಯ ಪುತ್ರನಾಗಿದ್ದಾರೆ. ಇದೇ ಡಿಸೆಂಬರ್ 1 ಮತ್ತು 2 ರಂದು ಜಕಾರ್ತದಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಸ್ಪರ್ಧೆಯಲ್ಲಿ ಅಶ್ವಿನ್ ಕಂಚಿನ ಪದಕ ಗೆಲ್ಲುವ ಮೂಲಕ ಜನವರಿಯಲ್ಲಿ ಕೆನಡಾದಲ್ಲಿ ನಡೆಯಲಿರುವ ವರ್ಲ್ಡ್ ಜೂನಿಯರ್ ಚಾಂಪಿಯನ್ ಶಿಪ್ ಗೂ ಸಹ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.

    ಇದಲ್ಲದೇ ಫೆಬ್ರವರಿಯಲ್ಲಿ ಜರ್ಮನಿಯ ಡ್ರೆಸ್ಡೆನ್ ನಲ್ಲಿ ನಡೆಯಲಿರುವ ವರ್ಲ್ಡ್ ಕಪ್ ಚಾಂಪಿಯನ್ ಶಿಪ್ ನಲ್ಲಿಯೂ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿ ಪದಕ ಪಡೆದ ಮಂಗ್ಳೂರು ವಿದ್ಯಾರ್ಥಿನಿ

    ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿ ಪದಕ ಪಡೆದ ಮಂಗ್ಳೂರು ವಿದ್ಯಾರ್ಥಿನಿ

    ಮಂಗಳೂರು: ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಮಂಗಳೂರಿನ ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ಎರಡು ಬೆಳ್ಳಿ ಪದಕ ಪಡೆದಿದ್ದು, ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    15ನೇ ರಾಷ್ಟ್ರೀಯ ಐಸ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನ್ನು ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ನವೆಂಬರ್ 17 ಹಾಗೂ 18 ರಂದು ದೆಹಲಿಯಲ್ಲಿ ಆಯೋಜಿಸಿತ್ತು. ಈ ಚಾಂಪಿಯನ್ ಶಿಪ್‍ನ 13 ವರ್ಷದೊಳಗಿನ ವಿಭಾಗದಲ್ಲಿ ಮಂಗಳೂರಿನ ಅಮಂಡಾ ಕೊನ್ಸೆಸ್ಸೊ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ.

    ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ನಗರದ ಮಾಲೆಮಾರ್ ನಿವಾಸಿಯಾದ ಫ್ರಾನ್ಸಿಸ್ ಹಾಗೂ ಡೋರಿಸ್ ದಂಪತಿಯ ಪುತ್ರಿಯಾಗಿದ್ದು, ಮಂಗಳೂರಿನ ನೀರುಮಾರ್ಗದ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಅಲ್ಲದೇ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸ್ಕೇಟಿಂಗ್ ಸ್ಪರ್ಧೆ: ಹೈ ಫ್ಲೈಯರ್ಸ್ ಕ್ಲಬ್‍ಗೆ 23 ಪದಕ

    ಸ್ಕೇಟಿಂಗ್ ಸ್ಪರ್ಧೆ: ಹೈ ಫ್ಲೈಯರ್ಸ್ ಕ್ಲಬ್‍ಗೆ 23 ಪದಕ

    ಮಂಗಳೂರು: 2018-19 ನೇ ಸಾಲಿನ ಸ್ಪೀಡ್ ರೋಲರ್ ಸ್ಕೇಟಿಂಗ್ ಓಪನ್ ಚಾಂಪಿಯನ್ ಶಿಪ್ ಅ.27 ಮತ್ತು 28ರಂದು ಮಂಗಳೂರಿನ ಅಶೋಕ್ ನಗರದಲ್ಲಿರುವ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಆಶ್ರಯದಲ್ಲಿ ನಡೆಯಿತು.

    8 ವರ್ಷ ಕೆಳಗಿನ ವಿಭಾಗದಲ್ಲಿ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ 15 ಸ್ಕೇಟರ್ ಗಳು ಭಾಗವಹಿಸಿ, 5 ಚಿನ್ನ, 5 ಬೆಳ್ಳಿ ಮತ್ತು 13 ಕಂಚಿನ ಪದಕಗಳ ಸಹಿತ ಒಟ್ಟು 23 ಪದಕಗಳನ್ನು ಪಡೆದರು.

    ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಸ್ಕೇಟರ್ ಗಳಾದ ಆಯುಷ್ ಲೆಹೆಲ್ ಮಹೇಶ್ 2 ಚಿನ್ನ, ಸೈದಾ ಐರಾ ಸಫಿಯಾ 2 ಚಿನ್ನ, ಶನೋನ್ ಜಾಯೆಲ್ ಪ್ರಸಾದ್ 1 ಚಿನ್ನ ಹಾಗು 1 ಬೆಳ್ಳಿ, ರಿಷಾ ಶೆಟ್ಟಿ 2 ಬೆಳ್ಳಿ, ತಕ್ಷಕ್ ಎ. ಶೆಟ್ಟಿ 2 ಬೆಳ್ಳಿ, ಆಲಿಯಾ ನೀಲಗಾರ್ 2 ಕಂಚು, ದೇವಿಕಾ ಎಂ. 2 ಕಂಚು, ಆರುಷ್ ಎ ಪುತ್ರನ್ 2 ಕಂಚು, ಕೆ.ಜೆ ಶ್ರೀ ದತ್ತ್ 2 ಕಂಚು, ನಿಝಾ ಆಯೆಷಾ ನಝೀಬ್ 2 ಕಂಚು, ಅಭಿನಂದ್ ಡಿ ಶೆಟ್ಟಿ 2 ಕಂಚು, ಪಿ. ಧನ್ವಿ ಶಾಂತಾರಾಮ್ 1 ಕಂಚು, ದೇಶಿಕ್ ಎಂ 1 ಕಂಚು ಪದಕಗಳನ್ನು ಪಡೆದರು.

    ಪದಕ ವಿಜೇತ ವಿದ್ಯಾರ್ಥಿಗಳೆಲ್ಲರೂ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ತರಬೇತುದಾರರಾದ ಮೋಹನ್ ದಾಸ್, ಜಯರಾಜ್ ಮತ್ತು ರಮಾನಂದ್ ಯು. ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ಗೆ 100 ಪದಕಗಳು

    ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ಗೆ 100 ಪದಕಗಳು

    ಮಂಗಳೂರು: ಸ್ಪೀಡ್ ರೋಲರ್ ಸ್ಕೇಟಿಂಗ್ ಜಿಲ್ಲಾ ಆಯ್ಕೆ ಪ್ರಕ್ರಿಯೆ ಮತ್ತು ಚಾಂಪಿಯನ್ ಶಿಪ್ 2018-19ರಲ್ಲಿ ಮಂಗಳೂರಿನ ಹೈ ಫೈಯರ್ಸ್ ಸ್ಕೇಟಿಂಗ್ ಕ್ಲಬ್‍ಗೆ 100 ಪದಕಗಳು ಬಂದಿವೆ.

    ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಶನಿವಾರ ಹಾಗೂ ಭಾನುವಾರ ಸ್ಕೇಟಿಂಗ್ ಸ್ಪರ್ಧೆ ನಡೆದಿತ್ತು. ಈ ವೇಳೆ 8 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 77 ಪದಕಗಳನ್ನು ಮತ್ತು 8 ವರ್ಷಕ್ಕಿಂತ ಕೆಳಗಿನ ವಿಭಾಗದಲ್ಲಿ 23 ಪದಕಗಳನ್ನು ಹೈ ಫ್ಲೈಯರ್ಸ್ ಕ್ಲಬ್ ಗಳಿಸಿತು. ಈ ಮೂಲಕ ಚಿನ್ನ, ಬೆಳ್ಳಿ ಮತ್ತು ಕಂಚಿನ ಸೇರಿದಂತೆ ಒಟ್ಟು 100 ಪದಕಗಳನ್ನು ಕ್ಲಬ್ ತನ್ನದಾಗಿಸಿಕೊಂಡಿದೆ.

    8 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ 37 ಸ್ಕೇಟರ್ ಗಳು ಭಾಗವಹಿಸಿದ್ದು, ಅವರಲ್ಲಿ 22 ಜನರು ನವೆಂಬರ್ ತಿಂಗಳು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಗೆ ತೇರ್ಗಡೆ ಹೊಂದಿದ್ದಾರೆ. ಪದಕ ವಿಜೇತ ಸ್ಕೇಟರ್ ಗಳಿಗೆ ಕೋಚ್ ಮೋಹನ್ ದಾಸ್ ಹಾಗೂ ಜಯರಾಜ್ ಅವರು ತರಬೇತಿ ನೀಡುತ್ತಿದ್ದಾರೆ.

    ಯಾರಿಗೆ ಎಷ್ಟು ಪದಕ?:
    ವಿಜೇತರ ಪೈಕಿ ಡೇನಿಯಲ್ ಕೊನ್ಸೆಸ್ಸೋ, ಖುಷಿರಾಣಿ, ಸುಹಾನ್ ರಾಜ್ ಅವರು ತಲಾ 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ವಿವೇಕ್ ಯೋಗರಾಜ್, ದೀಯಾ ದಾಸ್, ಮೋಕ್ಷಾ ಸುವರ್ಣ, ತನ್ಮಯ್ ಕೊಟ್ಟಾರಿ, ಮೊಹಮ್ಮದ್ ಶಮಿಲ್ ಅರ್ಶಾದ್, ಕೃತಿ ಕಯ್ಯ, ಸ್ವಸ್ತಿ ಶ್ರೀ ಶೆಟ್ಟಿ, ವಿಹಾನ್ ಸುವರ್ಣ, ನಿಹಾರಿಕಾ ಟಿ. ತಲಾ 3 ಚಿನ್ನಕ್ಕೆ ಕೊರಳೊಡಿದ್ದಾರೆ.

    ಡೇಶಿಯಲ್ ಕಾನ್ಸೆಸ್ಸೋ ಮೂರು ಚಿನ್ನ 1 ಬೆಳ್ಳಿ, ರಚಿತ್ ಡಿಸೋಜ 2 ಚಿನ್ನ 2 ಬೆಳ್ಳಿ, ಅರ್ಪಿತಾ ಶೇಟ್ 1 ಚಿನ್ನ ಮೂರು ಬೆಳ್ಳಿ, ರುಷಭ್ ಮಂಜೇಶ್ವರ್ 1 ಚಿನ್ನ 2 ಬೆಳ್ಳಿ, ಫರಾಝ್ ಫರೀದ್ 3 ಬೆಳ್ಳಿ, ಅನಘಾ ರಾಜೇಶ್ 3 ಬೆಳ್ಳಿ, ಶಹಾನ್ ಮಹಮ್ಮದ್ 2 ಬೆಳ್ಳಿ 1 ಕಂಚು, ಮಯಾನ್ ಸಿಕ್ವೇರಾ 2 ಬೆಳ್ಳಿ 1 ಕಂಚು, ಶಮಿತ್ ಶೆಟ್ಟಿ 2 ಬೆಳ್ಳಿ, ಅದ್ವಿಕಾ ಶೆಟ್ಟಿ 1 ಬೆಳ್ಳಿ 2 ಕಂಚು, ಶಹೀಮ್ ಮೊಹಮ್ಮದ್ 2 ಕಂಚು, ನಿರ್ಮಾಯ್ ವೈ.ಎನ್. 1 ಕಂಚು, ಅದ್ವಿಕ್ ಶೆಟ್ಟಿ 1 ಕಂಚು, ಫರಾಝ್ 1 ಚಿನ್ನ, ರಿಷನ್ ನಝರೇತ್ 1 ಕಂಚಿನ ಪದಕ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv