Tag: ಸ್ಕೂಲ್

  • ಓದಿದ ಕೆರಾಡಿ ಶಾಲೆ ದತ್ತು ಪಡೆದ ರಿಷಬ್ ಶೆಟ್ಟಿ

    ಓದಿದ ಕೆರಾಡಿ ಶಾಲೆ ದತ್ತು ಪಡೆದ ರಿಷಬ್ ಶೆಟ್ಟಿ

    ರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿಮೂಡಿಸಿ ಹಲವಾರು ಕನ್ನಡ ಶಾಲೆಗಳ ಉಳಿವಿಗೆ ಕಾರಣನಾಗಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೇ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಿಷಭ್ ಶೆಟ್ಟಿ ಫೌಂಡೇಶನ್ ಮೂಲಕ ಅಳಿವಿನಂಚಿನಲ್ಲಿದ್ದ ತಾನು ಓದಿದ ಕೆರಾಡಿ (Keradi) ಸರ್ಕಾರಿ ಕನ್ನಡ ಶಾಲೆಯನ್ನು (School) ದತ್ತು ಪಡೆದಿದ್ದಾರೆ

    ಕೆರಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಗೆ ಭೇಟಿನೀಡಿ ಕನ್ನಡ ಶಾಲೆ ಉಳಿಸುವ ಮತ್ತು ಬೆಳೆಸುವ ತನ್ನ ಕನಸನ್ನು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ಊರ ಪ್ರಮುಖರು,ಹಿರಿಯರು ಉಪಸ್ಥಿತರಿದ್ದು ಹುಟ್ಟೂರಿನ ಶಾಲೆಯ ದತ್ತು ರಿಷಬ್ ಶೆಟ್ಟಿಯವರನ್ನು ಅಭಿನಂದಿಸಿದರು.

    ಕಾಂತರದಲ್ಲಿ ಬ್ಯುಸಿ

    ರಿಷಬ್ ಸದ್ಯ ಕಾಂತಾರ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ ರಿಲೀಸ್ ಆಗಿರುವ ಕಾಂತಾರ (Kantara) ಚಾಪ್ಟರ್ 1 ಸಿನಿಮಾದ ಟೀಸರ್ (Teaser) ಕೋಟಿ ಕೋಟಿ ವಿವ್ಸ್ಯೂ ಪಡೆಯುತ್ತಿದ್ದು, ಟೀಸರ್ ನೋಡಿದ ಭಾರತವೇ ಬೆಚ್ಚಿ ಬಿದ್ದಿದೆ. ಟೀಸರ್ ನಲ್ಲಿ ತೋರಿಸಲಾದ ಆಶಯ ಮತ್ತು ರಿಷಬ್ ಶೆಟ್ಟಿ ಕಂಡು ದಕ್ಷಿಣದ ಬಹುತೇಕ ಸ್ಟಾರ್ ನಟರು ಫಿದಾ ಆಗಿದ್ದಾರೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಕಲಾವಿದರು ಮೆಚ್ಚಿ ಶುಭ ಹಾರೈಸಿದ್ದಾರೆ.

    ಕಳೆದ ವರ್ಷ ಬಿಡುಗಡೆಯಾಗಿ  ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ದೊಡ್ಡ ಯಶಸ್ಸು ಕಂಡ ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಚಿತ್ರವಾದ ‘ಕಾಂತಾರ – ಅಧ್ಯಾಯ 1’ ರ (Kantara Chapter 1) ಮೊದಲ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ವೀಕ್ಷಣೆಗೆ ಸಾಕ್ಷಿಯಾಗಿತ್ತು.

    ಕಾಂತಾರ’ ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಬ್ ಶೆಟ್ಟಿ (Rishabh Shetty) ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತಿದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.

  • ಕಿಚ್ಚನ `ಹೆಬ್ಬುಲಿ’ ಹೇರ್‌ಕಟ್ ಸ್ಟೈಲ್ ಗೆ ಹೆಡ್‌ಮಾಸ್ಟರ್ ಗರಂ

    ಕಿಚ್ಚನ `ಹೆಬ್ಬುಲಿ’ ಹೇರ್‌ಕಟ್ ಸ್ಟೈಲ್ ಗೆ ಹೆಡ್‌ಮಾಸ್ಟರ್ ಗರಂ

    ಹೆಬ್ಬುಲಿ (Hebbuli) ಹೇರ್‌ಕಟ್. ಇದೊಂದು ಹೊಸ ಆವಿಷ್ಕಾರ. ಹೆಬ್ಬುಲಿ ಸಿನಿಮಾದ ಫಸ್ಟ್ ಲುಕ್‌ನಲ್ಲಿ ಕಿಚ್ಚ ಸುದೀಪ್ (Sudeep) ವಿಭಿನ್ನ ರೀತಿಯ ಹೇರ್‌ಕಟ್ ಮಾಡಿಸ್ಕೊಂಡು ಗಮನ ಸೆಳೆಯುತ್ತಾರೆ. ಅಲ್ಲಿಯವರೆಗೂ ಅದು ಕರ್ನಾಟಕದಲ್ಲಿ ಚಾಲ್ತಿ ಇರಲಿಲ್ಲ. ಯಾವ ಮಟ್ಟಕ್ಕೆ ಈ ಸ್ಟೈಲ್ ಫೇಮಸ್ ಆಯ್ತು ಅಂದ್ರೆ ಬಳಿಕ ಕಾಲೇಜು ವಿದ್ಯಾರ್ಥಿಗಳು, ಮಕ್ಕಳು ಇದೇ ಥರ ಹೆರ್‌ಕಟ್ ಮಾಡಿಸಿಕೊಳ್ಳಲು ಮುಗಿಬಿದ್ರು. ಹೆಬ್ಬುಲಿ ಸಿನಿಮಾ ರಿಲೀಸ್ ಆಗಿ 5 ವರ್ಷ ಕಳೆದೋದ್ರೂ ಟ್ರೆಂಡ್ ಮುಗಿದಿಲ್ಲ.

    ಅಂದಹಾಗೆ ಇದೀಗ ಹೆಬ್ಬುಲಿ ಹೇರ್‌ಕಟ್ ಮೇಲೆ ಜಿಗುಪ್ಸೆಗೊಂಡಿದ್ದು ಬಾಗಲಕೋಟೆ (Bagalkote) ಜಿಲ್ಲೆಯ ಜಮಖಂಡಿ ತಾಲೂಕಿನ ಹಳ್ಳಿಯೊಂದರ ಮೇಷ್ಟ್ರು. ಹಲವು ವರ್ಷಗಳಿಂದ ಹೆಬ್ಬುಲಿ ಸ್ಟೈಲ್ (Hair Style) ಹೇರ್‌ಕಟ್ ಮಾಡಿಸ್ಕೊಂಡು ಮಕ್ಕಳು ಶಾಲೆಗೆ ಬರ್ತಿದ್ರಂತೆ. ಹೆಡ್‌ಮಾಸ್ಟರ್‌ಗೆ ಇದೇ ಚಿಂತೆ. ಓದೋ ಟೈಮಲ್ಲಿ ಮಕ್ಕಳಿಗೆ ಇಂಥಹ ಸ್ಟೈಲ್ ಎಲ್ಲಾ ಬೇಕಾ? ಒಬ್ರು ಈ ಥರ ಹೇರ್‌ಕಟ್ ಮಾಡಿಸ್ಕೊಂಡ್ರು ಅಂತ ಇನ್ನೊಬ್ರು ಮತ್ತೊಬ್ರು ಹೀಗೆ ಮಕ್ಕಳು ಬರೀ ಸ್ಟೈಲ್ ಬಗ್ಗೆನೇ ಗಮನ ಕೊಡ್ತಾ ಓದಿನ ಬಗ್ಗೆ ಆಸಕ್ತಿ ಕಳೆದುಕೊಳ್ತಾ ಇದ್ರಂತೆ. ಇದರಿಂದ ಬೇಸರಗೊಂಡ ಹೆಡ್‌ಮಾಸ್ಟರ್ ಶಾಲೆಯ ಹತ್ತಿರದ ಎಲ್ಲಾ ಸಲೂನ್‌ಗಳಿಗೆ ಪಾಠ ಮಾಡಿದ್ದಾರೆ. ಇದನ್ನೂ ಓದಿ:ಬಿಕಿನಿಯಲ್ಲಿ ಅನನ್ಯಾ ಮಿಂಚಿಂಗ್, ಬಾಯ್‌ಫ್ರೆಂಡ್ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

    ವಿದ್ಯಾರ್ಥಿಗಳಿಗೆ ಹೆಬ್ಬುಲಿ ಹೇರ್‌ಕಟ್ ಮಾಡಿಸಿಕೊಳ್ಳದಂತೆ ಎಷ್ಟೇ ಪಾಠ ಹೇಳಿದ್ರೂ ಕೇಳಲಿಲ್ಲ. ಇದೇ ಕಾರಣಕ್ಕೆ ಶಾಲೆಯಿಂದ ನೋಟೀಸ್ ಜಾರಿ ಮಾಡಿದ್ದಾರೆ. ಇದರಲ್ಲಿ ಹೆಬ್ಬುಲಿ ಹೇರ್‌ಕಟ್‌ನಿಂದ ಆಗ್ತಿರೋ ತೊಂದರೆ ಬಗ್ಗೆ ಹೆಡ್‌ಮಾಸ್ಟರು ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ. ಹೀಗಾಗಿ ಸಲೂನ್‌ಗೆ ಬಂದು ಕೇಳಿದ್ರೂ ಹೆಬ್ಬುಲಿ ಹೇರ್‌ಕಟ್ ಮಾಡಬೇಡಿ ಎಂದು ನೋಟೀಸ್‌ನಲ್ಲಿ ಹೇಳಿದ್ದಾರೆ.

     

    ಇದು ತಮಾಶೆ ಅನ್ನಿಸಿದ್ರೂ ಇದ್ರಿಂದ ಅನುಕೂಲ ಹೆಚ್ಚು. ಹಳ್ಳಿಯಲ್ಲಿ ಬಡ ಮಕ್ಕಳು ಹೇರ್‌  ಸ್ಟೈಲ್ ಮೋಹಕ್ಕೆ ಬಿದ್ದು ಬಡ ತಂದೆ ತಾಯಿಗಳಿಗೆ ತೊಂದರೆ ಕೊಡುತ್ತಾರೆ. ಅದನ್ನು ಮಾಡಿಸದೇ ಇದ್ದರೆ ಶಾಲೆಯ ವಾತಾವರಣ ಎರಡೂ ಚೆನ್ನಾಗಿರುತ್ತೆ. ಹೀಗಾಗಿ 5 ವರ್ಷ ಕಳೆದ್ರೂ ಹೆಡ್‌ಮಾಸ್ಟರ್ ಮಾತು ಕೇಳದ ಮಕ್ಕಳ ಈ ಆಸೆಯನ್ನ ಬೇರಿಂದಲೇ ಕಿತ್ತೆಸೆಯಲು ಈ ಪ್ಲ್ಯಾನ್  ಮಾಡಿದ್ದಾರೆ ಆ ಮೇಷ್ಟ್ರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಲಾಸ್ ನಲ್ಲಿ ಫಸ್ಟ್ ಬೆಂಚು, ಮ್ಯಾಥ್ಸ್ ನಲ್ಲಿ ಲಾಸ್ಟು ಎಂದ ನಟಿ ಐಶಾನಿ ಶೆಟ್ಟಿ

    ಕ್ಲಾಸ್ ನಲ್ಲಿ ಫಸ್ಟ್ ಬೆಂಚು, ಮ್ಯಾಥ್ಸ್ ನಲ್ಲಿ ಲಾಸ್ಟು ಎಂದ ನಟಿ ಐಶಾನಿ ಶೆಟ್ಟಿ

    ಹೊಂದಿಸಿ ಬರೆಯಿರಿ ಸಿನಿಮಾದ ಮೂಲಕ ಸಾಕಷ್ಟು ಹೆಸರು ಮಾಡುತ್ತಿರುವ ನಟಿ ಐಶಾನಿ ಶೆಟ್ಟಿ, ತಮ್ಮ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ತಮ್ಮ ಸ್ಕೂಲ್ ಮತ್ತು ಕಾಲೇಜು ದಿನಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ ತಮಗೆ ಮ್ಯಾಥ್ಸ್ ಸಬ್ಜೆಕ್ಟ್ ಅಂದ್ರೆ ತುಂಬಾ ಕಷ್ಟವೆಂದೂ ಹೇಳಿಕೊಂಡಿದ್ದಾರೆ.

    ‘ತುಂಟಾಟ ಮಾಡುವುದರಲ್ಲಿ ಹೆಸರುವಾಸಿ ಲಾಸ್ಟ್ ಬೆಂಚ್ ಸ್ಟೂಡೆಂಟ್. ಆದರೆ, ಏನು ಮಾಡೋದು? ಓದಿದ್ದು‌ ತಲೆಗೆ ಹೋಗ್ಬೇಕು ಅಂತ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆದೆ’ ಎಂದು ಪೀಣ್ಯಾದ ಆರ್.ಎನ್.ವಿ.ಕೆ ಪಿಯು ಕಾಲೇಜು ವಿದ್ಯಾರ್ಥಿಗಳ ‌ ಜೊತೆ ತಮ್ಮ ಸ್ಟೂಡೆಂಟ್ ದಿನಗಳ‌ ನೆನಪಿನ ಬುತ್ತಿಯನ್ನು ಐಶಾನಿ ಹಂಚಿಕೊಂಡಿದ್ದಾರೆ.‌ ಹೆಣ್ಣುಮಕ್ಕಳು ಹಣಕಾಸಿನ‌ ವಿಚಾರದಲ್ಲಿ ಬೇರೆ ಯಾರಿಗೂ ಡಿಪೆಂಡ್ ಆಗ್ಬೇಡಿ, ಇಂಡಿಪೆಂಡೆಂಟ್ ಆಗಿ ಬದುಕಿ, ನಿಮ್ಮ ಜೀವನದ ಜವಾಬ್ದಾರಿಯನ್ನು ನೀವೇ ಹೊತ್ತಿಕೊಳ್ಳಿ ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಗಾಯಕಿ ವಾಣಿ ಜಯರಾಮ್ ನಿಗೂಢ ಸಾವು : ಮರಣೋತ್ತರ ವರದಿಯಲ್ಲೇನಿದೆ?

    ಮುಂದುವರೆದು ಮಾತನಾಡಿರುವ ಅವರು, ‘ಪರೀಕ್ಷೆಯಲ್ಲಿ ಕಡಿಮೆ ಅಂಕ‌ ಬಂತು ಅಂತ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮನ್ನು ಮತ್ತೊಬ್ಬರಿಗೆ ಕಂಪೇರ್ ಮಾಡಿಕೊಳ್ಳಬೇಡಿ. ನಿಮ್ಮ ಪ್ರತಿಭೆ ಏನು ಅಂತ ಚಿಂತಿಸಿ. ಆ‌ ಕಡೆ ಹೆಜ್ಜೆ ಹಾಕಿ. ಸೋತಾಗ ತಲೆಕೆಡಿಸಿಕೊಂಡು ನಾನು ಸೋತೆ, ಅವರು ಗೆದ್ದರು ಅಂತ ಚಿಂತಿಸುವ ಅವಶ್ಯಕತೆ ಇಲ್ಲ. ಮತ್ತೊಮ್ಮೆ ಪ್ರಯತ್ನ ಮಾಡಿ. ಗೆಲುವು ನಿಮ್ಮದಾಗುತ್ತದೆ’ ಎಂದು ಅವರು ಆರ್.ಎನ್.ವಿ.ಕೆ ದ್ವಿತೀಯ ಪಿಯು ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ‌ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

    ನಂತರ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಿ, ತಮ್ಮಿಷ್ಟದ ಹಾಡು ಹಾಡುವುದರ ಮೂಲಕವೂ ಅವರ ರಂಜಿಸಿದ್ದಾರೆ. ಮಕ್ಕಳ ಜೊತೆ ಫೋಟೋಗೆ ಪೊಸ್ ಕೊಟ್ಟಿದ್ದಾರೆ. ಕಾಲೇಜಿನ ಕಾರ್ಯದರ್ಶಿ ಭರತ್ ಕುಮಾರ್ ಹಾಗೂ ಪ್ರಾಂಶುಪಾಲರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೈಕ್ ಅಡ್ಡ ಹಾಕಿದ ಪೊಲೀಸ್ರು – ನಡುರಸ್ತೆಯಲ್ಲಿ ಗನ್ ಹಿಡಿದು ಓಡುತ್ತಾ, ಶಾಲೆಗೆ ನುಗ್ಗಿದ ಸರಗಳ್ಳರು

    ಬೈಕ್ ಅಡ್ಡ ಹಾಕಿದ ಪೊಲೀಸ್ರು – ನಡುರಸ್ತೆಯಲ್ಲಿ ಗನ್ ಹಿಡಿದು ಓಡುತ್ತಾ, ಶಾಲೆಗೆ ನುಗ್ಗಿದ ಸರಗಳ್ಳರು

    ನವದೆಹಲಿ: ಬೈಕ್‍ನಲ್ಲಿ ಹೋಗುತ್ತಿದ್ದ ಸರಗಳ್ಳರನ್ನು ಪೊಲೀಸರು ಅಡ್ಡಹಾಕಿದ್ದಾರೆ. ಈ ವೇಳೆ ಧರಿಸಿದ್ದ ಹೆಲ್ಮೆಟ್ ಅನ್ನು ಎಸೆದು ಆರೋಪಿಗಳು ಕೈಯಲ್ಲಿ ಗನ್ ಹಿಡಿದುಕೊಂಡು ನಡು ಬೀದಿಯಲ್ಲಿ ದಿಕ್ಕಾಪಾಲಾಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿದ್ದಾರೆ.

    ದರೋಡೆಯನ್ನು ತಡೆಯಲು ರಚಿಸಲಾಗಿದ್ದ ಜಿಲ್ಲಾ ಪೊಲೀಸರ ತಂಡ ಮಂಗಳವಾರ ಬೆಳಗ್ಗೆ 8:55ರ ಸುಮಾರಿಗೆ, ನಂಬರ್ ಪ್ಲೇಟ್ ಇಲ್ಲದೇ ಹೋಗುತ್ತಿದ್ದ ಬೈಕ್ ಅನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರಿಗೆ ಬಂದೂಕು ತೋರಿಸಿ ಬೆದರಿಸಿದ ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ – ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಕೆ

    ಮೊದಲಿಗೆ ಬೈಕ್ ತಡೆದು ವಿಚಾರಣೆ ಪ್ರಾರಂಭಿಸುತ್ತಿದ್ದಂತೆಯೇ ಹೆಲ್ಮೆಟ್ ಧರಿಸಿದ ಇಬ್ಬರು ಓಡಲು ಆರಂಭಿಸಿದರು. ನಾವು ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ. ಅವರಲ್ಲಿ ಒಬ್ಬ ಪಿಸ್ತೂಲ್ ತೆಗೆದುಕೊಂಡು ಪೊಲೀಸರಿಗೆ ಬೆದರಿಕೆ ಹಾಕಿದ್ದ. ಮತ್ತೊಬ್ಬ ಹತ್ತಿರದ ಶಾಲೆಯೊಂದರ ಗೋಡೆಯನ್ನು ಏರಿ ಶಾಲೆಯೊಳಗೆ ನುಗ್ಗಿದ್ದ. ಈ ವೇಳೆ ಕೂಡ ನಾವು ಆತನನ್ನು ಬಂಧಿಸಿದ್ದೇವೆ ಎಂದು ಶಹದಾರ ಡಿಸಿಪಿ ಆರ್ ಸತ್ಯಸುಂದರಂ ಹೇಳಿದ್ದಾರೆ.

    KILLING CRIME

    ಈ ಘಟನೆಯ ವೀಡಿಯೋ ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದು, ಓಡುತ್ತಾ ಆರೋಪಿಗಳು ಹೆಲ್ಮೆಟ್ ಅನ್ನು ಎಸೆಯುವುದನ್ನು ಕಾಣಬಹುದಾಗಿದೆ. ಅಲ್ಲದೇ ಶಾಲೆಯೊಳಗೆ ಜಿಗಿದವನು ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಗನ್ ತೋರಿಸಿ ಬೆದರಿಕೆಯೊಡ್ಡಿದ್ದಾನೆ. ಆದರೆ ಪೊಲೀಸರು ಆತನನ್ನು ಸದೆಬಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: 1.77 ಕೋಟಿಗೆ ಸೇಲ್ ಆಯ್ತು 1970ರ ದಶಕದ ಸ್ಟೀವ್ ಜಾಬ್ಸ್ ಚಪ್ಪಲಿ

    ಆರೋಪಿಗಳನ್ನು ಇಲ್ಯಾಸ್ ಅಲಿಯಾಸ್ ಫೈಸಲ್ ಮತ್ತು ಇಸ್ಮಾಯಿಲ್ ಎಂದು ಗುರುತಿಸಲಾಗಿದ್ದು, ಅವರ ಬಳಿ ಇದ್ದ ಗನ್ ಮತ್ತು ಕೆಟಿಎಂ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಳೆಯಿಂದ 9 ಮತ್ತು 10ನೇ ತರಗತಿ ಆರಂಭವಾಗಲಿದೆ: ಬಿ.ಸಿ.ನಾಗೇಶ್

    ನಾಳೆಯಿಂದ 9 ಮತ್ತು 10ನೇ ತರಗತಿ ಆರಂಭವಾಗಲಿದೆ: ಬಿ.ಸಿ.ನಾಗೇಶ್

    ಹಾಸನ: ನಾಳೆಯಿಂದ 9 ಮತ್ತು 10ನೇ ತರಗತಿ ಆರಂಭವಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿಸಿ.ನಾಗೇಶ್ ತಿಳಿಸಿದ್ದಾರೆ.

    ಹಿಜಬ್ ಮತ್ತು ಕೇಸರಿ ಶಾಲಿನ ವಿವಾದ ಜೋರಾಗುತ್ತಲೇ ಸರ್ಕಾರ ಶಾಲಾ, ಕಾಲೇಜಿಗೆ ರಜೆ ಘೋಷಣೆ ಮಾಡಿತ್ತು. ಇದೀಗ ನಾಳೆಯಿಂದ ಒಂಬತ್ತು ಮತ್ತು ಹತ್ತನೇ ತರಗತಿ ಆರಂಭವಾಗುತ್ತಿದ್ದು ಸೋಮವಾರ ನಡೆಯುವ ಸಿಎಂ ಸಭೆಯ ನಂತರ ಪಿಯುಸಿ ಹಾಗೂ ಪದವಿ ತರಗತಿಗಳನ್ನು ತೆರೆಯುವ ಬಗ್ಗೆ ಯೋಚನೆ ಮಾಡಿ ಸದ್ಯದಲ್ಲಿಯೇ ಈ ಬಗ್ಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

    ಇದೇ ವೇಳೆ ಹಿಜಬ್ ಯೂನಿಫಾರ್ಮ್ ಅಂಗ ಅಲ್ಲ. ಯಾವ ಕಾರಣಕ್ಕೆ ಆ ಹೆಣ್ಣುಮಕ್ಕಳು ಆ ರೀತಿ ವರ್ತನೆ ಮಾಡಿದರು ಅರ್ಥ ಆಗುತ್ತಿಲ್ಲ. ಈ ಹಿಜಬ್ ವಿವಾದದ ಹಿಂದೆ ಕೆಲ ಮುಸ್ಲಿಂ ಸಂಘಟನೆಗಳ ಕೈವಾಡ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಎಲ್ಲ ಹೊರಬರಲಿದೆ ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

    ಒಟ್ಟಾರೆ ವಿದ್ಯಾ ದೇಗುಲದಲ್ಲಿ ಹಿಜಬ್ ಮತ್ತು ಕೇಸರಿ ಶಾಲಿನ ಗಲಾಟೆ ಆರಂಭವಾಗಿ ಶಿಕ್ಷಣ ವ್ಯವಸ್ಥೆಗೆ ಸಮಸ್ಯೆಯಾಗತೊಡಗಿತ್ತು. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜಿಗೆ ರಜೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಒಂಬತ್ತು ಹತ್ತನೇ ತರಗತಿ ಆರಂಭವಾಗುತ್ತಿದ್ದು, ಇದಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ಯಾವ ರೀತಿ ಸಹಕರಿಸುತ್ತಾರೆ ಕಾದು ನೋಡಬೇಕಿದೆ. ಇದನ್ನೂ ಓದಿ: ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಅಂದ ಅಯೂಬ್ ಖಾನ್ – ಸಿಡಿದೆದ್ದ ಜೈನ ಸಮುದಾಯ

  • ಗುಜರಾತ್‍ನಲ್ಲಿ ಜುಲೈ 26 ರಿಂದ 9 ಮತ್ತು 11ನೇ ತರಗತಿಗಳು ಓಪನ್

    ಗುಜರಾತ್‍ನಲ್ಲಿ ಜುಲೈ 26 ರಿಂದ 9 ಮತ್ತು 11ನೇ ತರಗತಿಗಳು ಓಪನ್

    ಗಾಂಧೀನಗರ: 9ನೇ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕವಾಗಿ ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಜುಲೈ 26ರಿಂದ ಶಾಲೆ ತೆರೆಯಲು ಗುಜರಾತ್ ಸರ್ಕಾರ ಅನುಮತಿ ನೀಡಿದೆ.

    ಈ ಕುರಿತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಶಾಲೆಯಲ್ಲಿ ದೈಹಿಕ ಶಿಕ್ಷಣ ತರಗತಿಗೆ ಹಾಜರಾಗಲು ಸಿದ್ಧರಿರುವ ವಿದ್ಯಾರ್ಥಿಗಳ ಪೋಷಕರು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಸಲ್ಲಿಸಬೇಕಾಗುತ್ತದೆ.

    ಈ ದೈಹಿಕ ಶಿಕ್ಷಣ ತರಗತಿಗೆ ಹಾಜರಿ ಕಡ್ಡಾಯವಾಗಿಲ್ಲವಾದರೂ, ಆನ್‍ಲೈನ್ ಶಿಕ್ಷಣ ಎಂದಿನಂತೆ ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಕೋವಿಡ್-19 ನಿಯಮಗಳ ಅನುಸಾರ ಶಾಲೆಗಳನ್ನು ತೆರೆಯಲಾಗಿದ್ದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

    ಕಳೆದ ವಾರ ಕೊರೊನಾ ವೈರಸ್ ಪ್ರಕರಣದಲ್ಲಿ ಇಳಿಕೆ ಕಂಡಿದ್ದು, ಶಾಲೆಗಳು, 12ನೇ ತರಗತಿ, ಕಾಲೇಜುಗಳು ಹಾಗೂ ತಾಂತ್ರಿಕ ಸಂಸ್ಥೆಗಳನ್ನು ಪುನಃ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಗುಜರಾತ್‍ನಲ್ಲಿ ಗುರುವಾರ 34 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸಾವಿನಕ್ಕೆ ಶೂನ್ಯವಾಗಿದೆ. ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮಂಗಳೂರಿನ ವಿನಂತಿ ಹರಿಕಾಂತ

  • ಸ್ಕೂಲ್ ಅಡ್ಮಿಶನ್ ಮಾಡಿಲ್ಲವೆಂದು ಮಹಿಳೆಯಿಂದ ಟಿಕ್‍ಟಾಕ್ ವಿಡಿಯೋ

    ಸ್ಕೂಲ್ ಅಡ್ಮಿಶನ್ ಮಾಡಿಲ್ಲವೆಂದು ಮಹಿಳೆಯಿಂದ ಟಿಕ್‍ಟಾಕ್ ವಿಡಿಯೋ

    – ಕ್ಷಮೆ ಕೇಳಿದ ಪ್ರಿನ್ಸಿಪಾಲ್

    ಮುಂಬೈ: ಶಾಲೆಯಲ್ಲಿ ಮಗನಿಗೆ ಅಡ್ಮಿಶನ್ ಕೊಡಿಸಿಲ್ಲ ಎಂದು ತಾಯಿಯೊಬ್ಬರು ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಂಶುಪಾಲರು ಕ್ಷಮೆ ಕೇಳಿದ್ದಾರೆ.

    ಸುಜಾತ ಎಂಬವರು ತಮ್ಮ 7 ವರ್ಷದ ಮಗನಿಗೆ ಶಾಲೆಯಲ್ಲಿ ಅಡ್ಮಿಶನ್ ಮಾಡಿಸಲು ಕರೆದುಕೊಂಡು ಹೋಗಿದ್ದರು. ಸುಜಾತ ಸಿಂಗಲ್ ಪೆರೆಂಟ್ ಆಗಿದ್ದು, ಇದನ್ನು ತಿಳಿದ ಶಾಲೆಯ ಮುಖ್ಯಶಿಕ್ಷಕರು ಬಾಲಕನಿಗೆ ಅಡ್ಮಿಶನ್ ಕೊಡಲು ನಿರಾಕರಿಸಿದ್ದರು. ಹಾಗಾಗಿ ಸುಜಾತ ಈ ಘಟನೆ ಬಗ್ಗೆ ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿದ್ದಾರೆ.

    ಸುಜಾತ ಮಾಡಿದ ಈ ವಿಡಿಯೋ ಜೂನ್ 13ರಿಂದ ವೈರಲ್ ಆಗಲು ಶುರುವಾಯಿತು. ಇದಾದ ಬಳಿಕ ಕೆಲವು ಮಂದಿ ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ, ಸ್ಮೃತಿ ಇರಾನಿ, ಡೇವಿಡ್ ಫರ್ನಾಂಡಿಸ್ ಸೇರಿದಂತೆ ಹಲವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

    https://twitter.com/KUNALPA25129276/status/1139239103667437568?ref_src=twsrc%5Etfw%7Ctwcamp%5Etweetembed%7Ctwterm%5E1139239103667437568&ref_url=https%3A%2F%2Fwww.amarujala.com%2Fphoto-gallery%2Feducation%2Fschool-denied-admission-of-child-for-having-single-parent-mother-viral-tiktok-video-helped

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಚಾರ ಶಿಕ್ಷಣ ಇಲಾಖೆವರೆಗೂ ತಲುಪಿತು. ಬಳಿಕ ಮುಂಬೈ ಶಿಕ್ಷಣ ಇಲಾಖೆ ಶಾಲೆಗೆ ನೋಟಿಸ್ ನೀಡಿ ಉತ್ತರ ಕೇಳಿತ್ತು. ನೋಟಿಸ್ ಬಂದ ನಂತರ ಪ್ರಾಂಶುಪಾಲರು ಕ್ಷಮೆ ಕೇಳಿ ಪತ್ರ ಬರೆದಿದ್ದಾರೆ. ಅಲ್ಲದೆ ಬಾಲಕನಿಗೆ ಅಡ್ಮಿಶನ್ ನೀಡಲು ಒಪ್ಪಿಕೊಂಡಿದ್ದಾರೆ.

    ಪ್ರಿನ್ಸಿಪಾಲ್ ಮೊದಲು ಅಡ್ಮಿಶನ್ ಮಾಡಿಸಲು ಒಪ್ಪಿಕೊಂಡಿದ್ದರು. ಬಳಿಕ ನಾನು ಸಿಂಗಲ್ ಪೆರೆಂಟ್ ಎಂಬ ವಿಷಯ ಅವರಿಗೆ ತಿಳಿಯಿತು. ಆಗ ಅವರು ಅಡ್ಮಿಶನ್ ನೀಡಲು ನಿರಾಕರಿಸಿದ್ದರು. ಅಲ್ಲದೆ ಸಿಂಗಲ್ ಪೆರೆಂಟ್ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದರು ಎಂದು ಸುಜಾತ ದೂರಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]