Tag: ಸ್ಕೂಬಾ ಡೈವಿಂಗ್

  • ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕ ಜುಬೀನ್ ಗಾರ್ಗ್ ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕ ಜುಬೀನ್ ಗಾರ್ಗ್ ಅಂತ್ಯಕ್ರಿಯೆ

    -ಸಿಎಂ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವ ಕಿರಣ್ ಭಾಗಿ

    ದಿಸ್ಪುರ್: ಸಿಂಗಾಪುರ್‌ದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಮೃತಪಟ್ಟಿದ್ದ ಅಸ್ಸಾಂ (Assam) ಮೂಲದ ಖ್ಯಾತ ಗಾಯಕ ಜುಬೀನ್ ಗಾರ್ಗ್ (Zubeen Garg) ಅಂತ್ಯಕ್ರಿಯೆ (Funeral) ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ.

    ಅಸ್ಸಾಂನ ಗುವಾಹಟಿಯಲ್ಲಿ ಕುಟುಂಬಸ್ಥರು, ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸರ್ಕಾರಿ ಗೌರವದೊಂದಿಗೆ ಗಾರ್ಗ್ಗೆ ಅಂತಿಮ ವಿದಾಯ ಹೇಳಲಾಯಿತು. ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು, ಸರ್ಬಾನಂದ ಸೋನಾವಾಲ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಅಂತಿಮ ಯಾತ್ರೆ ಲಿಮ್ಕಾ ದಾಖಲೆಗೆ ಸೇರ್ಪಡೆ

    ಅಂತಿಮಯಾತ್ರೆಗೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಜನರು ಸೇರಿದ 4ನೇ ಅಂತಿಮ ಯಾತ್ರೆಯೆಂದು ದಾಖಲೆ ನಿರ್ಮಿಸಿ, ಲಿಮ್ಕಾ ಬುಕ್ ಆಫ್ ರೆಕಾಡ್ಸ್ಗೆ ಸೇರ್ಪಡೆಯಾಗಿದೆ. ಮೈಕೆಲ್ ಜಾಕ್ಸನ್, ಪೋಪ್ ಫ್ರಾನ್ಸಿಸ್, ರಾಜಕುಮಾರಿ ಡಯಾನಾ ಮತ್ತು ರಾಣಿ ಎಲಿಜಬೆತ್ ಅವರಿಗೆ ನೀಡಿದಂತೆ ಇದು ಕೂಡ ಸ್ಮರಣೀಯ ವಿದಾಯ ಎಂದು ಗುರುತಿಸಲಾಗಿದೆ.

    ಇನ್ನು ಅಂತಿಮಯಾತ್ರೆಯಲ್ಲಿ ಜುಬೀನ್‌ಗೆ ಜಯವಾಗಲಿ, ಜುಬೀನ್ ದೀರ್ಘಕಾಲ ಉಳಿಯಲಿ ಎಂಬ ಘೋಷ ವಾಕ್ಯಗಳು ಕೇಳಿಬಂದವು. ಗಾರ್ಗ್ ಸಾವಿನ ಹಿಂದೆ ಯಾವುದೇ ಅಪರಾಧ ಕೃತ್ಯಗಳು ನಡೆದಿಲ್ಲ ಎಂದು ಖಚಿತಪಡಿಸಲು ಸರ್ಕಾರ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಿತ್ತು. ಅದರಂತೆ 2ನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು.ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಸಾವು | ಕಾರ್ಯಕ್ರಮ ಆಯೋಜಕರ ವಿರುದ್ಧ FIR – ತನಿಖೆಗೆ ಮುಂದಾದ ಅಸ್ಸಾಂ ಸರ್ಕಾರ

     

  • ಸ್ಕೂಬಾ ಡೈವಿಂಗ್‌ ವೇಳೆ ಬಾಲಿವುಡ್‌ನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು

    ಸ್ಕೂಬಾ ಡೈವಿಂಗ್‌ ವೇಳೆ ಬಾಲಿವುಡ್‌ನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು

    ಪ್ರಸಿದ್ಧ ಅಸ್ಸಾಮೀಸ್ ಗಾಯಕ ಮತ್ತು ಸಾಂಸ್ಕೃತಿಕ ಐಕಾನ್ ಜುಬೀನ್ ಗಾರ್ಗ್ (Zubeen Garg) ಅವರು ಶುಕ್ರವಾರ ಸ್ಕೂಬಾ ಡೈವಿಂಗ್‌ ಅವಘಡದಲ್ಲಿ ಮೃತಪಟ್ಟಿದ್ದಾರೆ.

    52 ವಯಸ್ಸಿನ ಗಾರ್ಗ್‌ ಅವರು ಸಿಂಗಾಪುರದಲ್ಲಿದ್ದರು. ಸಮುದ್ರದಲ್ಲಿ ಸ್ಕೂಬಾ ಡೈವಿಂಗ್‌ ವೇಳೆ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಗ್‌ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ನಟಿ ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ; ಇಬ್ಬರು ಅಪ್ರಾಪ್ತರು ಅರೆಸ್ಟ್

    ಗಾಯಕ ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಸಿಂಗಾಪುರದಲ್ಲಿದ್ದರು. ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಅಸ್ಸಾಂ ತನ್ನ ನೆಚ್ಚಿನ ಪುತ್ರರಲ್ಲಿ ಒಬ್ಬನನ್ನು ಕಳೆದುಕೊಂಡಿದೆ. ಜುಬೀನ್ ಅವರ ಧ್ವನಿಯು ಜನರನ್ನು ಚೈತನ್ಯಗೊಳಿಸುವ ಸಾಟಿಯಿಲ್ಲದ ಸಾಮರ್ಥ್ಯವನ್ನು ಹೊಂದಿತ್ತು. ನಮ್ಮ ಭವಿಷ್ಯದ ಪೀಳಿಗೆಯು ಅವರನ್ನು ಅಸ್ಸಾಂನ ಸಂಸ್ಕೃತಿಯ ಧೀಮಂತ ವ್ಯಕ್ತಿಯಾಗಿ ನೆನಪಿಸಿಕೊಳ್ಳುತ್ತದೆ. ಆ ಮಾಂತ್ರಿಕ ಧ್ವನಿ ಶಾಶ್ವತವಾಗಿ ಮೌನವಾಗಿದೆ ಎಂದು ಭಾವುಕ ಪೋಸ್ಟ್‌ ಹಾಕಿದ್ದಾರೆ.

    ಜುಬೀನ್ ಗರ್ಗ್ ಅಸ್ಸಾಮಿ ಮತ್ತು ಹಿಂದಿ ಮಾತ್ರವಲ್ಲದೆ, ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ನೇಪಾಳಿ ಸೇರಿದಂತೆ ಹಲವು ಭಾಷೆಗಳಿಗೆ ಹಾಡಿದ್ದಾರೆ. ತಮ್ಮ ಮೂರನೇ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಅವರ ಮೊದಲ ಆಲ್ಬಂ ‘ಅನಾಮಿಕಾ’ 1992 ರಲ್ಲಿ ಬಿಡುಗಡೆಯಾಯಿತು. ‘ಮಾಯಾ’, ‘ಜುಬೀನೋರ್ ಗಾನ್’, ‘ಕ್ಸಾಬ್ಡಾ’, ‘ಪಾಖಿ’, ‘ಶಿಶು’, ‘ಜಂತ್ರ’ ಅವರ ಅತ್ಯಂತ ಪ್ರೀತಿಯ ಅಸ್ಸಾಮೀಸ್ ಆಲ್ಬಂಗಳಲ್ಲಿ ಕೆಲವು. ಅವರು ‘ದಿಲ್ ಸೆ’, ‘ವಾಸ್ತವ್’, ‘ಫಿಜಾ’, ‘ಅಶೋಕ’, ‘ಕಾಂಟೆ’, ‘ಗ್ಯಾಂಗ್‌ಸ್ಟರ್’, ‘ಕ್ರಿಶ್ 3’ ಮತ್ತು ಇನ್ನೂ ಹೆಚ್ಚಿನ ಹಿಂದಿ ಚಿತ್ರಗಳಿಗೂ ಹಾಡಿದ್ದಾರೆ. ಆದಾಗ್ಯೂ, ಗ್ಯಾಂಗ್‌ಸ್ಟರ್‌ಗಾಗಿ ಅವರು ಹಾಡಿದ್ದ ‘ಯಾ ಅಲಿ’ ಹಾಡು ಅವರಿಗೆ ಅಸ್ಸಾಂನ ಹೊರಗೂ ಜನಪ್ರಿಯತೆ ತಂದುಕೊಟ್ಟಿತು.

  • ಸ್ನೇಹಿತರ ಜೊತೆ ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್

    ಸ್ನೇಹಿತರ ಜೊತೆ ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್

    ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯಗೆ (Daali Dhananjay) ಸಿನಿಮಾ ಕೆಲಸದಲ್ಲಿ ಬ್ರೇಕ್ ಸಿಕ್ಕ ಬೆನ್ನಲ್ಲೇ ಸ್ನೇಹಿತರ ಜೊತೆ ಟ್ರಿಪ್‌ಗೆ ತೆರಳಿದ್ದಾರೆ. ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್ (Scuba Diving) ಮಾಡಿ ಎಂಜಾಯ್ ಮಾಡಿದ್ದಾರೆ. ಈ ಕುರಿತ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಮುರುಡೇಶ್ವರದಿಂದ 10 ಕಿ.ಮೀ ದೂರವಿರುವ ನೇತ್ರಾಣಿ ದ್ವೀಪಕ್ಕೆ ಡಾಲಿ ಭೇಟಿ ನೀಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಡಾಲಿ ಟ್ರಿಪ್‌ಗೆ ಮೈಸೂರಿನ ಸ್ನೇಹಿತರು ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಮುಂದಿನ ತಿಂಗಳು ಆಪರೇಷನ್ ಇದೆ, ಯುಎಸ್‌ಎಗೆ ಹೋಗುತ್ತಿದ್ದೇನೆ: ಶಿವರಾಜ್ ಕುಮಾರ್

    ಇನ್ನೂ ಡಾಕ್ಟರ್ ಧನ್ಯತಾ ಜೊತೆ ಡಾಲಿ ಫೆ.16ರಂದು ಮೈಸೂರಿನಲ್ಲಿ ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಧನ್ಯತಾ ಜೊತೆಗಿನ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.

  • ಸ್ಕೂಬಾ ಡೈವಿಂಗ್ ಮಜಾನೇ ಬೇರೆ ಅಂತಿದ್ದಾರೆ ಕಿರಿಕ್ ಹುಡುಗಿ ನಟಿ ಸಂಯುಕ್ತ

    ಸ್ಕೂಬಾ ಡೈವಿಂಗ್ ಮಜಾನೇ ಬೇರೆ ಅಂತಿದ್ದಾರೆ ಕಿರಿಕ್ ಹುಡುಗಿ ನಟಿ ಸಂಯುಕ್ತ

    ಗಾಗ್ಗೆ ಥಾಯ್ಲೆಂಡ್ ನಲ್ಲಿ ಕಾಣಿಸಿಕೊಳ್ಳುವ ಸಂಯುಕ್ತ ಹೆಗ್ಡೆ (Samyukta Hegde), ಈ ಬಾರಿಯ ಹುಟ್ಟು ಹಬ್ಬವನ್ನೂ ಅದೇ ದೇಶದಲ್ಲೇ ಆಚರಿಸಿಕೊಂಡಿದ್ದಾರೆ. ಜೊತೆಗೆ ಸ್ಕೂಬಾ ಡೈವಿಂಗ್ (Scuba diving) ಮಾಡಿ, ಅದರ ಅನುಭವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಕೂಬಾ ಡೈವಿಂಗ್ ವಿಡಿಯೋವನ್ನೂ ಅಪ್ ಲೋಡ್ ಮಾಡಿದ್ದಾರೆ.

    ಮೊನ್ನೆಯಷ್ಟೇ ತಮ್ಮ ಹುಟ್ಟು ಹಬ್ಬವನ್ನು (Birthday) ಥಾಯ್ಲೆಂಡ್ ನಲ್ಲಿ ಆಚರಿಸಿಕೊಂಡಿರುವ ಸಂಯುಕ್ತ ಪಾರ್ಟಿ ಮೂಡ್ ನಲ್ಲೇ ಫೋಟೋಶೂಟ್ ವೊಂದನ್ನು ಮಾಡಿಸಿಕೊಂಡಿದ್ದರು. ಒಂದು ರೀತಿಯಲ್ಲಿ ಕಥಾ ಸರಣಿಯಂತಿದ್ದವು ಫೋಟೋ ಶೂಟ್.

    ಥಾಯ್ಲೆಂಡ್ (Thailand) ನ ಕೋಹ್ ಪಂಗೋನ್ ದ್ವೀಪದಲ್ಲಿ ಅವರು ತಮ್ಮ 25ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಶೇರ್ ಮಾಡಿದ್ದಾರೆ. ಅಷ್ಟೂ ಫೋಟೋಗಳಲ್ಲೂ ಸಂಯುಕ್ತ ಬಿಂದಾಸ್.

    ಸಾಮಾನ್ಯವಾಗಿ ಹುಟ್ಟು ಹಬ್ಬದ ದಿನದಂದು ಗ್ರ್ಯಾಂಡ್ ಆಗಿರುವ ಬಟ್ಟೆ ಹಾಕೋದು ಕಾಮನ್. ಆದರೆ, ಆ ಸಂಪ್ರದಾಯವನ್ನು ಸಂಯುಕ್ತ ಮುರಿದಿದ್ದಾರೆ. ತುಂಡುಡುಗೆಯಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೇ ಹುಟ್ಟು ಹಬ್ಬವನ್ನು ಎಂಜಾಮ್ ಮಾಡಿದ್ದಾರೆ.

    ಯಾವುದನ್ನೂ ಮುಚ್ಚುಮರೆ ಮಾಡದೇ ಕೇಕು, ವೋಡ್ಕ, ವೈನು, ನಾಯಿ ಹೀಗೆ ಕಾನ್ಸೆಪ್ಟ್ ರೀತಿಯಲ್ಲಿ ತಮ್ಮೊಂದಿಗೆ ಇಟ್ಟುಕೊಂಡು ಫೋಟೋಗೆ ಫೋಸ್ ನೀಡಿದ್ದಾರೆ ಸಂಯುಕ್ತ. ಇದೆಲ್ಲ ಏನು ಎಂದು ಹಲವರು ನಟಿಗೆ ಪ್ರಶ್ನೆ ಮಾಡಿದ್ದಾರೆ.

    ಕೇಕ್ ನೊಂದಿಗೆ ಶುರುವಾಗುವ ಅವರ ಹುಟ್ಟು ಹಬ್ಬ, ನಾನಾ ಭಾವಗಳನ್ನು ದಾಟಿಕೊಂಡು ಬೀದಿಯ ಎಟಿಎಂ ಬಳಿ ನಶೆಯಲ್ಲಿ ಮುಕ್ತಾಯವಾಗುತ್ತದೆ. ಇಂಥದ್ದೊಂದು ವಿಚಿತ್ರ ಕಲ್ಪನೆಯಲ್ಲಿ ಫೋಟೋ ಶೂಟ್ ಮಾಡಿಕೊಂಡಿದ್ದಾರೆ ಸಂಯುಕ್ತ.

    ಈ ಹಿಂದೆಯೂ ಸಂಯುಕ್ತ ಟಾಪ್‌ಲೆಸ್ ವೀಡಿಯೋವೊಂದನ್ನ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ನಿಮ್ಮ ದೇಹ, ನಿಮ್ಮ ಆಸ್ತಿ ಎಂದು ನಟಿ ವೀಡಿಯೋದಲ್ಲಿ ಪಾಠ ಮಾಡಿದ್ದರು.

    ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿಗೆ (Rakshit Shetty) ನಾಯಕಿಯಾಗುವ ಮೂಲಕ ಬಣ್ಣದ ಬದುಕಿಗೆ ಲಗ್ಗೆಯಿಟ್ಟರು. ರಕ್ಷಿತ್, ರಶ್ಮಿಕಾ ಜೊತೆ ಸಂಯುಕ್ತಾ ಕೂಡ ಮೊದಲ ಚಿತ್ರದಲ್ಲೇ ಗಮನ ಸೆಳೆದರು. ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾದಲ್ಲೂ ನಟಿ ಮಿಂಚಿದ್ರು. ಜಯಂರವಿ, ಪ್ರಭುದೇವ, ಅಂತಹ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ

    ಕೆಲ ತಿಂಗಳುಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣದಲ್ಲಿ ಸಂಯುಕ್ತಾ ಕಾಲಿಗೆ ಪೆಟ್ಟಾಗಿತ್ತು. ಬಳಿಕ ಸೂಕ್ತ ಚಿಕಿತ್ಸೆಯ ನಂತರ ನಟಿ ಚೇತರಿಸಿಕೊಂಡಿದ್ದಾರೆ. 5 ತಿಂಗಳ ಬೆಡ್ ರೆಸ್ಟ್ ನಂತರ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಕಿರಿಕ್ ಬೆಡಗಿ ಸಂಯುಕ್ತಾ, ದೇಹ ಪ್ರದರ್ಶಿಸಿರುವ ವೀಡಿಯೋ ಶೇರ್ ಮಾಡುವ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೆಟ್ ಮಾಡಿದ್ದಾರೆ. ನಟಿ ಟಾಪ್‌ಲೆಸ್ ಆಗಿರುವ ವೀಡಿಯೋ ನೋಡಿ ಅಭಿಮಾನಿಗಳು ದಂಗಾಗಿದ್ದರು.

     

    ನಟಿ ಸಂಯುಕ್ತಾ ಹೆಗ್ಡೆ ಕೈಯಲ್ಲಿ ಹೇಳಿಕೊಳ್ಳುವಂತಹ ಸಿನಿಮಾಗಳೇನು ಇಲ್ಲ. ‘ಕ್ರೀಮ್’ (Cream) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಸಂಯುಕ್ತಾ ಒಂದೇ ಸಿನಿಮಾದಿಂದ ಲಾಂಚ್ ಆದ್ರೂ ಕೂಡ ರಶ್ಮಿಕಾ ಅವರಿಗೆ ಸಿಕ್ಕಂತಹ ಯಶಸ್ಸು ಸಂಯುಕ್ತಾಗೆ ಸಿಗಲಿಲ್ಲ. ಒಳ್ಳೆಯ ಕಥೆಗಾಗಿ ನಟಿ ಎದುರು ನೋಡ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈರಲ್ ಆಯ್ತು ಪರಿಣಿತಿ ಚೋಪ್ರಾ ಸ್ಕೂಬಾ ಡೈವಿಂಗ್ ವಿಡಿಯೋ

    ವೈರಲ್ ಆಯ್ತು ಪರಿಣಿತಿ ಚೋಪ್ರಾ ಸ್ಕೂಬಾ ಡೈವಿಂಗ್ ವಿಡಿಯೋ

    ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ, ಇತ್ತೀಚೆಗೆ ಸಮುದ್ರ ಆಳಕ್ಕೆ ಇಳಿದಿದ್ದಾರೆ. ಈ ವೇಳೆ ಸಮುದ್ರ ಆಳದ ತ್ಯಾಜ್ಯಗಳನ್ನ ಸಂಗ್ರಹಣೆ ಮಾಡಿದ್ದಾರೆ. ಇದೀಗ ಸ್ಕೂಬಾ ಡೈವಿಂಗ್ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಬಿಟೌನ್ ಬ್ಯೂಟಿ ಪರಿಣಿತಾ ಸಮುದ್ರ ಆಳಕ್ಕೆ ಇಳಿದಿರುವ ಸ್ಕೂಬಾ ಡೈವಿಂಗ್ ವಿಡಿಯೋ ವೈರಲ್ ಆಗಿದೆ. ಜತೆಗೆ ಸಮುದ್ರ ಪ್ರದೇಶಗಳಿಗೆ ಹೋದಾಗ ಅಲ್ಲಿ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ವಸ್ತುಗಳನ್ನ ಅಲ್ಲಿರುವ ಕಸದ ಬುಟ್ಟಿಗಳಿಗೆ ಹಾಕಿ ಪರಿಸರವನ್ನು ರಕ್ಷಿಸೋಣ ಎಂದು ನಟಿ ಪರಿಣಿತಿ ಚೋಪ್ರಾ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಬಾಲಯ್ಯ- ದುನಿಯಾ ವಿಜಯ್ ನಟನೆಯ ತೆಲುಗು ಚಿತ್ರದ ಶೂಟಿಂಗ್‌ನಲ್ಲಿ ಶ್ರುತಿ ಹಾಸನ್

     

    View this post on Instagram

     

    A post shared by Parineeti Chopra (@parineetichopra)

    ಇನ್ನು ಚಿತ್ರರಂಗದಲ್ಲಿ ಆಕ್ಟೀವ್ ಇರುವ ಪರಿಣಿತಿ, ಹಿಂದಿಯ ಒಂದಿಷ್ಟು ಪ್ರಾಜೆಕ್ಟ್ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಕಮಾಲ್ ಮಾಡಲು ಸಜ್ಜಾಗಿದ್ದಾರೆ.

    Live Tv

  • ಜಾಲಿ ಮೂಡ್‌ನಲ್ಲಿ ನಟ ದಿಗಂತ್ – ನೇತ್ರಾಣಿಯ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್‌

    ಜಾಲಿ ಮೂಡ್‌ನಲ್ಲಿ ನಟ ದಿಗಂತ್ – ನೇತ್ರಾಣಿಯ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್‌

    ಕಾರವಾರ: ಸ್ಯಾಂಡಲ್‌ವುಡ್‌ ನಟ ದಿಗಂತ್‌ ಜಾಲಿ ಮೂಡ್‌ನಲ್ಲಿದ್ದಾರೆ. ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್‌ ಮಾಡಿ ಎಂಜಾಯ್‌ ಮಾಡಿದ್ದಾರೆ.

    ರಾಜ್ಯದ ಏಕೈಕಾ ಸ್ಕೂಬಾ ಡೈವಿಂಗ್ ತಾಣವಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೇತ್ರಾಣಿ ನಡುಗಡ್ಡೆಯಲ್ಲಿ ಇಂದು ನಟ ದಿಗಂತ್, ನೇತ್ರಾಣಿ ಅಡ್ವೇಂಚರ್ ಸಂಸ್ಥೆಯ ಸಹಕಾರದೊಂದಿಗೆ ಅರಬ್ಬೀ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. 10 ಮೀಟರ್ ಆಳಕ್ಕೆ ಹೋಗಿ ವಿವಿಧ ಭಂಗಿಯಲ್ಲಿ ಈಜಿ ಖುಷಿಪಟ್ಟರು. ಸ್ಕೂಬಾ ಡೈವಿಂಗ್‌ಗಾಗಿ ಮಾಲ್ಡೀವ್ಸ್‌ನಲ್ಲಿ ತರಬೇತಿ ಪಡೆದಿದ್ದರು. ಇದನ್ನೂ ಓದಿ: ಮೊದಲ ದಿನದ ಶೂಟಿಂಗ್‍ನಲ್ಲಿ ಪಾಲ್ಗೊಂಡ ಮೇಘನಾ ರಾಜ್

    ಮುರುಡೇಶ್ವರದ ನೇತ್ರಾಣಿಯ ನಡುಗಡ್ಡೆಗೆ ತೆರಳಿದ ಅವರು ಅರಬ್ಬೀ ಸಮುದ್ರದಲ್ಲಿ ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡು ಡೈವಿಂಗ್ ಮಾಡಿದರು. ನಂತರ ಸಮುದ್ರದಾಳದ ಜಲಚರಗಳನ್ನು ವೀಕ್ಷಿಸಿ ಎಂಜಾಯ್ ಮಾಡಿದರು.

    ಹಲವು ವರ್ಷದ ನಂತರ ವೀಕೆಂಡ್ ಮಸ್ತಿಗಾಗಿ ತಂದೆ ಕೃಷ್ಣಮೂರ್ತಿ ಮಂಚಾಲೆ, ತಾಯಿ ಮಲ್ಲಿಕಾ ಹಾಗೂ ಐಂದ್ರಿತಾ ಸಹೋದರನೊಂದಿಗೆ ಆಗಮಿಸಿದ್ದ ಅವರು ಇದೇ ಮೊದಲ ಬಾರಿಗೆ ಮುರುಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. ಇದನ್ನೂ ಓದಿ: ವಿಕ್ರಾಂತ್ ರೋಣ ಚಿತ್ರಕ್ಕೆ ಭರ್ಜರಿ ಆಫರ್ ನೀಡಿದ ಓಟಿಟಿ!

  • ಸಮುದ್ರದಾಳದಲ್ಲಿ ಹಾರಾಡಿದ ಕನ್ನಡ ಧ್ವಜ- ಸ್ಕೂಬಾ ಡೈವಿಂಗ್ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ!

    ಸಮುದ್ರದಾಳದಲ್ಲಿ ಹಾರಾಡಿದ ಕನ್ನಡ ಧ್ವಜ- ಸ್ಕೂಬಾ ಡೈವಿಂಗ್ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ!

    ಕಾರವಾರ: ರಾಜ್ಯಾದ್ಯಂತ 66ನೇ ಕನ್ನಡ ರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಶಿಷ್ಟ ರೀತಿಯ ಆಚರಣೆ ಮೂಲಕ ಕನ್ನಡಿಗರು ಕನ್ನಡತನದ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ಕನ್ನಡ ಧ್ವಜ ಹಾರಾಡಿಸಿ ಸಂಸ್ಥೆಯೊಂದು ವಿಶಿಷ್ಟ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದೆ.

    66 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮುರುಡೇಶ್ವರದ ನೇತ್ರಣಾಣಿ ನಡುಗಡ್ಡೆ ಭಾಗದದ ಅರಬ್ಬಿ ಸಮುದ್ರದಾಳದಲ್ಲಿ ನೇತ್ರಾಣಿ ಅಡ್ವೇಂಚರ್ ಸಂಸ್ಥೆಯು ಸ್ಕೂಬಾ ಡೈವಿಂಗ್ ಮಾಡುವ ಸಾಹಸಿಗಳ ಮೂಲಕ ಸಮುದ್ರದಾಳದಲ್ಲಿ 20 ಅಡಿ ಉದ್ದದ ಕನ್ನಡ ಧ್ವಜವನ್ನು ಹಾರಿಸಿ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿತು. ಇದನ್ನೂ ಓದಿ: ಆಸ್ಪತ್ರೆಯಿಂದ ರಜನಿಕಾಂತ್ ಡಿಸ್ಚಾರ್ಜ್ – ಮನೆಗೆ ಆಗಮಿಸಿ ದೇವರಿಗೆ ಪ್ರಾರ್ಥನೆ

    ಮುರುಡೇಶ್ವರದ ನೇತ್ರಾಣಿ ಅಡ್ವೇಂಚರ್ ಜಲಸಾಹಸ ಸಂಸ್ಥೆಯ ಗಣೇಶ್ ಹರಿಕಾಂತ ಅವರ ಮಾರ್ಗದರ್ಶನದಲ್ಲಿ ಆರು ಜನ ಯುವಕರ ತಂಡ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಸಮುದ್ರದ 200 ಅಡಿ ಆಳಕ್ಕೆ ಇಳಿದು ಅಲ್ಲಿ ಕನ್ನಡ ಧ್ವಜವನ್ನು ಹಾರಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್‌ಗೆ ಬಂದ `ರಾಜಕುಮಾರ’

    ನಂತರ ಮುರುಡೇಶ್ವರದ ಕಡಲಲ್ಲಿ ಕನ್ನಡ ಧ್ವಜ ಹಿಡಿದು ಪ್ರದರ್ಶಿಸಿ ಕನ್ನಡ ಅಭಿಮಾನ ಮೆರೆದರು.

  • ಮುರುಡೇಶ್ವರ ನೇತ್ರಾಣಿಯಲ್ಲಿ ಗರಿ ಗೆದರಿದ ಸ್ಕೂಬಾ ಡೈವಿಂಗ್

    ಮುರುಡೇಶ್ವರ ನೇತ್ರಾಣಿಯಲ್ಲಿ ಗರಿ ಗೆದರಿದ ಸ್ಕೂಬಾ ಡೈವಿಂಗ್

    -ಒಂದು ತಿಂಗಳು ಅವಕಾಶ ಕಲ್ಪಿಸಿದ ಜಿಲ್ಲಾಡಳಿತ

    ಕಾರವಾರ: ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ನಡೆಯುತಿದ್ದ ಜಲಸಾಹಸ ಕ್ರೀಡೆಯು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದೀಗ ಮತ್ತೆ ಆರಂಭವಾಗಿದೆ.

    ಕೊರೊನಾ ಇಳಿಕೆಯಾದ ಕಾರಣ ಜಿಲ್ಲೆಯಲ್ಲಿ ನಡೆಯುತಿದ್ದ ಜಲಸಾಹಸ ಕ್ರೀಡೆಗೆ ಅವಕಾಶ ಕಲ್ಪಿಸಿ ಕೊಡುವ ಜೊತೆಗೆ ಇದೀಗ ಮುರುಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿ ಪ್ರಾರಂಭವಾಗಿದ್ದ ಸ್ಕೂಬಾ ಡೈವ್‍ಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಇದನ್ನೂ ಓದಿ: ಪ್ರವಾಸಿಗರ ಮನಸೆಳೆಯುವ ಕಡಲಾಳದ ಸ್ಕೂಬಾ ಡೈವಿಂಗ್-ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್

    ಪಶ್ಚಿಮ ಕರಾವಳಿಯಲ್ಲಿ ಮೊದಲು ಪ್ರಾರಂಭ:

    ಭಾರತದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪವನ್ನು ಹೊರತುಪಡಿಸಿದರೆ ಎರಡನೇ ಮತ್ತು ಅತ್ಯಂತ ಸುರಕ್ಷತೆ ಇರುವ ನೇತ್ರಾಣಿ ದ್ವೀಪದಲ್ಲಿ ಮಾತ್ರ ಸ್ಕೂಬಾ ಡೈವ್ ಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ನೇತ್ರಾಣಿ ಅಡ್ವೆಂಚರ್ಸ್ 2009ರ ಡಿಸೆಂಬರ್ ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ ಮುರುಡೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ಯಾಡಿ ನೋಂದಾಯಿತ ಡೈವ್ ಕೇಂದ್ರವಾಗಿದ್ದು, ಸ್ಕೂಬಾ ಡೈವರ್‍ ಗಳು ಮತ್ತು ಬೋಧಕರಿಗೆ ಮಹತ್ವಾಕಾಂಕ್ಷೆಯ ಡಿಸ್ಕವರ್ ಸ್ಕೂಬಾ ಡೈವ್ ಮತ್ತು ವೃತ್ತಿಪರ ಪ್ರಮಾಣೀಕರಣ ಕೋರ್ಸ್‍ಗಳನ್ನು ನೀಡುತ್ತದೆ. ಪ್ಯಾಡಿ ಜಾಗತಿಕ ಮಾನದಂಡಗಳ ಪ್ರಕಾರ ನೇತ್ರಾಣಿ ಅಡ್ವೆಂಚರ್ಸ್ ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತದೆ. ಸ್ಕೂಬಾ ಡೈವಿಂಗ್ ಸೆಪ್ಟೆಂಬರ್ ಮಧ್ಯದಿಂದ ಪ್ರಾರಂಭವಾಗುತ್ತದೆ ಮತ್ತು ಮೇ ಅಂತ್ಯದವರೆಗೆ ನಡೆಯುತ್ತದೆ. ಆದರೇ ಇದೀಗ ಜಿಲ್ಲಾಡಳಿತ ಒಂದು ತಿಂಗಳು ಮಾತ್ರ ಸ್ಕೂಬಾ ಡೈವ್‍ಗೆ ಅವಕಾಶ ಮಾಡಿಕೊಟ್ಟಿದೆ.

    ಏನಿದು ಸ್ಕೂಬಾ ಡೈವ್?ಹೇಗಿರುತ್ತೆ ಕಡಲಾಳದ ಸೌಂದರ್ಯ?

    ಸಮುದ್ರದಾಳದಲ್ಲಿ ಇಳಿದು ಅಲ್ಲಿನ ಜೀವಚರಗಳನ್ನು ವೀಕ್ಷಿಸುವುದೇ ಸ್ಕೂಬಾ ಡೈವ್. ಇದಕ್ಕಾಗಿ ಆಕ್ಸಿಜನ್ ಸಿಲಿಂಡರ್ ತುಂಬಿದ ಪರಿಕರಗಳನ್ನು ಹಾಕಿಕೊಂಡು ಸಮುದ್ರದ ಮಧ್ಯಭಾಗದಲ್ಲಿ ಜಂಪ್ ಮಾಡುವ ಮೂಲಕ ಕಡಲಿನ ಆಳಕ್ಕೆ ಇಳಿಯಲಾಗುತ್ತದೆ. ಇದಕ್ಕಾಗಿ ಈಜು ಬರಬೇಕು ಎಂದೇನೂ ಇಲ್ಲ. ಆದರೇ ಧೈರ್ಯ ಬೇಕು. ಇನ್ನು ಸುರಕ್ಷತೆ ದೃಷ್ಟಿಯಿಂದ ನುರಿತ ತರಬೇತುದಾರರು ಸಹಾಯಕ್ಕೆ ಇರುತ್ತಾರೆ. ಉಸಿರಾಟದ ಸಾಧನ ಧರಿಸಿ ನೀರೊಳಗೆ ಮುಳುಗಿ ಹವಳಗಳನ್ನು ನೋಡುವ, ಮೀನಿನಂತೆ ಸಮುದ್ರದಲ್ಲಿ ಈಜಾಡಬೇಕು ಎನ್ನುವ ಆಸಕ್ತಿ ಇರುವ ಯಾವುದೇ ವ್ಯಕ್ತಿ ಸ್ಕೂಬಾ ಡೈವಿಂಗ್ ಮಾಡಬಹುದು. ನೀರಿನ ಅಡಿಯಲ್ಲಿ ಸಂವಹನಕ್ಕಾಗಿ ಬಳಸಬೇಕಾದ ವಿವಿಧ ಕೈ ಸನ್ನೆಗಳು, ಮೂಲ ಉಸಿರಾಟದ ತತ್ವಗಳು ಮತ್ತು ಉಪಕರಣಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಆಸಕ್ತರಿಗೆ ಮಾರ್ಗದರ್ಶಕರು ತಿಳಿಸಿಕೊಡುತ್ತಾರೆ. ಕೈ ಚಿಹ್ನೆಗಳನ್ನು ತಪ್ಪಾಗಿ ಗ್ರಹಿಸಬಾರದು, ಕಿವಿಗಳ ಮೇಲಿನ ಒತ್ತಡವನ್ನು ಹೇಗೆ ಸಮನಾಗಿಸುವುದು ಎಂಬುದನ್ನು ಕಲಿಯುವುದು ಅವಶ್ಯಕ. ಕೆಲವು ನಿರ್ವಾಹಕರು ತೀರದ ಬಳಿ ಅಥವಾ ಈಜುಕೊಳದಲ್ಲಿ ಪ್ರಾತ್ಯಕ್ಷಿಕೆ ನೀಡಿ ವಿವರಿಸುತ್ತಾರೆ. ನಂತರ ಹವಳಗಳಿರುವ ತಾಣಕ್ಕೆ ದೋಣಿಯಲ್ಲಿ ಹೋಗಿ ಗೈಡ್ ಮತ್ತು ಹವ್ಯಾಸಿ ಮುಳುಗುಗಾರರು ಇಬ್ಬರೂ ನೀರಿಗೆ ಧುಮುಕಿ ನೀರೊಳಗಿನ ಮೀನುಗಳು ಮತ್ತು ಹವಳಗಳನ್ನು ಹತ್ತಿರದಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತಾರೆ. ಇದನ್ನೂ ಓದಿ: ಸಮುದ್ರದಾಳದಲ್ಲಿ ಪತಿ ಜೊತೆ ನಟಿಯ ಸ್ಕೂಬಾ ಡೈವಿಂಗ್

    ನೇತ್ರಾಣಿ ದ್ವೀಪದಲ್ಲಿ ಹವಳದ ದಿಬ್ಬಗಳು, ಡಾಲ್ಫಿನ್‍ಗಳು, ವಿವಿಧ ಜಾತಿಯ ಆಮೆಗಳು, ಚಿಟ್ಟೆ ಮೀನು, ಬಂದೂಕು ಮೀನು, ಗಿಳಿ ಮೀನು, ಹಾವು ಮೀನು ಮತ್ತು ಸೀಗಡಿ ಮೀನುಗಳು ಕಂಡು ಬರುತ್ತವೆ. ಓರ್ಕಾ ಮತ್ತು ತಿಮಿಂಗಿಲಗಳನ್ನೂ ಸಹ ಇಲ್ಲಿ ನೋಡಬಹುದಾಗಿದ್ದು ಅಪರೂಪದ ಜಲಚರಗಳ ಆಗರವಾಗಿದ್ದು ಇವುಗಳನ್ನು ಸಮುದ್ರದಾಳಕ್ಕೆ ಇಳಿದು ವೀಕ್ಷಿಸಬಹುದಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಾಲಯ ಪಟ್ಟಣವಾದ ಮುರುಡೇಶ್ವರದಿಂದ ಸುಮಾರು 10 ನಾಟಿಕಲ್ ಮೈಲುಗಳಷ್ಟು (19 ಕಿ.ಮೀ) ದೂರದಲ್ಲಿರುವ ಪಾರಿವಾಳ ದ್ವೀಪ ಎಂದೂ ಕರೆಯಲ್ಪಡುವ ನೇತ್ರಾಣಿ ಮೇಲಿನಿಂದ ಹೃದಯ ಆಕಾರದಲ್ಲಿ ಕಾಣುತ್ತದೆ ಇದನ್ನು ‘ಭಾರತದ ಡೈವಿಂಗ್‍ನ ಹೃದಯ’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಭಾರತೀಯ ನೌಕಾದಳವು ಸಮರಾಭ್ಯಾಸ ಮಾಡುವ ಪ್ರದೇಶವೂ ಇದಾಗಿದ್ದು, ಹಿಂದೆ ಈ ಭಾಗಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೇ ಜಿಲ್ಲಾಡಳಿತದ ದೂರ ದೃಷ್ಟಿಯಿಂದ ಇದೀಗ ಈ ಭಾಗದಲ್ಲಿ ಪ್ರವಾಸಿಗರಿಗೆ ತೆರಳಲು ಅವಕಾಶಗಳನ್ನು ನೀಡಿದೆ. ಇದನ್ನೂ ಓದಿ: ದುಬೈನಲ್ಲಿ ಸ್ಕೈ ಡೈವ್ ಮಾಡಿದ ನೀರಜ್

    ತೆರಳುವುದು ಹೇಗೆ? ವ್ಯವಸ್ಥೆ ಏನು?

    ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಪಶ್ವಿಮ ಕರಾವಳಿ ತೀರ ಪ್ರದೇಶವಾಗಿದೆ. ಬಸ್, ರೈಲು ಹಾಗೂ ವಿಮಾನದಲ್ಲಿ ಸಹ ಇಲ್ಲಿಗೆ ಬರಬಹುದಾಗಿದೆ. ಗೋಕರ್ಣದಿಂದ ಕೇವಲ 54 ಕಿ.ಮೀ ದೂರದಲ್ಲಿದೆ.

    ವಿಮಾನದ ಮೂಲಕ:
    ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣಕ್ಕೆ 153 ಕಿ.ಮೀ ದೂರದಲ್ಲಿದೆ. ಇದು ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಮತ್ತು ವಿದೇಶದಲ್ಲಿರುವ ಕೆಲವು ಸ್ಥಳಗಳಿಗೆ ಸಂಪರ್ಕ ಹೊಂದಿದೆ. ಮುರುಡೇಶ್ವರ ತಲುಪಲು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.

    ರೈಲಿನ ಮೂಲಕ:
    ಮುರುಡೇಶ್ವರ ರೈಲು ನಿಲ್ದಾಣವು ಮಂಗಳೂರು ಮತ್ತು ಮುಂಬೈಗೆ ಸಂಪರ್ಕ ಹೊಂದಿದೆ. ಮಂಗಳೂರು ಪ್ರಮುಖ ರೈಲುಮಾರ್ಗವಾಗಿದ್ದು, ಇದು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಮುರುಡೇಶ್ವರ ರೈಲು ನಿಲ್ದಾಣವು ಪಟ್ಟಣದಿಂದ ಪೂರ್ವಕ್ಕೆ ಕೇವಲ 2 ಕಿ.ಮೀ ದೂರದಲ್ಲಿದೆ ಮತ್ತು ಬಸ್ಸುಗಳು ಮತ್ತು ಆಟೋರಿಕ್ಷಾಗಳ ಮೂಲಕ ತಲುಪಬಹುದಾಗಿದೆ.

    ರಸ್ತೆ ಮಾರ್ಗ:
    ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಮುರುಡೇಶ್ವರನನ್ನು ಮುಂಬೈ, ಕೊಚ್ಚಿ ಮತ್ತು ಬೆಂಗಳೂರಿಗೆ ಸಂಪರ್ಕಿಸುತ್ತವೆ. ಮುಂಬೈಯನ್ನು ಕೊಚ್ಚಿಗೆ ಸಂಪರ್ಕಿಸುವ ಎನ್‍ಎಚ್-17 ನಲ್ಲಿ ನೆಲೆಗೊಂಡಿರುವ ಸಾಮಾನ್ಯ ಬಸ್‍ಗಳು ಎರಡು ನಗರಗಳ ನಡುವೆ ನಿಯಮಿತವಾಗಿ ಚಲಿಸುತ್ತವೆ ಮತ್ತು ಮಂಗಳೂರಿನ ಮೂಲಕ ಹಾದು ಹೋಗುತ್ತವೆ. ಬೆಂಗಳೂರು ಈ ಪ್ರದೇಶದ ಇತರ ಹಲವು ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ.

    ವಸತಿ ವ್ಯವಸ್ಥೆ:
    ಮುರಡೇಶ್ವರ ಪ್ರಸಿದ್ಧ ಪ್ರವಾಸಿ ಸ್ಥಳವಾದ್ದರಿಂದ ವಸತಿ ವ್ಯವಸ್ಥೆ ಸಾಕಷ್ಟಿದೆ. ಖಾಸಗಿ ಲಾಡ್ಜ್‍ಗಳು, ಸರ್ಕಾರಿ ವಸತಿಗೃಹ ಹಾಗೂ ಹೋಮ್ ಸ್ಟೇಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇಲ್ಲಿಗೆ ಬರುವವರು ಸ್ಕೂಬಾ ಡೈ ಜೊತೆಗೆ ಹೊನ್ನಾವರ ಭಾಗದ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಹೊಂದಿದ ಇಕೋ ಬೀಚ್ ಸೌಂದರ್ಯ ಸವಿಯುವ ಜೊತೆಗೆ ಕಾಂಡ್ಲ ವನದಲ್ಲಿ ವಾಕ್ ಸಹ ಮಾಡಬಹುದಾಗಿದ್ದು, ಪ್ರವಾಸಿಗರಿಗೆ ಅತೀ ಕಡಿಮೆ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ಇಲ್ಲಿ ವ್ಯವಸ್ಥೆ ಮಾಡಿದೆ.

  • ಗ್ರಹಣ ಸಮಯದಲ್ಲಿ ಸ್ಕೂಬಾ ಡೈವ್ ಮಾಡಿದ ರೋಹಿಣಿ ಸಿಂಧೂರಿ

    ಗ್ರಹಣ ಸಮಯದಲ್ಲಿ ಸ್ಕೂಬಾ ಡೈವ್ ಮಾಡಿದ ರೋಹಿಣಿ ಸಿಂಧೂರಿ

    ಕಾರವಾರ: ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಗ್ರಹಣ ಸಮಯದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬ ಸಮೇತ ಆಗಮಿಸಿ ಮುರಡೇಶ್ವರದ ನೇತ್ರಾಣಿ ನಡುಗಟ್ಟೆಯಲ್ಲಿ ಗ್ರಹಣ ಸಮಯದಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು.

    ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ತರಬೇತಿದಾರ ಗಣೇಶ್ ಹರಿಕಂತ್ರ ರೋಹಿಣಿ ಸಿಂಧೂರಿ ಹಾಗೂ ಅವರ ಕುಟುಂಬ ಸದಸ್ಯರಿಗೆ ತರಬೇತಿಯನ್ನು ನೀಡಿದರು. ಬಳಿಕ ಗಣೇಶ್ ಹರಿಕಂತ್ರ ಅವರು ರೋಹಿಣಿ ಹಾಗೂ ಅವರ ಕುಟುಂಬಸ್ಥರನ್ನು ನೇತ್ರಾಣಿ ನಡುಗಡ್ಡೆಗೆ ಕರೆದುಕೊಂಡು ಹೋಗಿ ಸ್ಕೂಬಾ ಡೈವಿಂಗ್ ಮಾಡಿಸಿದರು.

    ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಅಪರೂಪದ ಮತ್ಸ್ಯಗಳನ್ನು ಹಾಗೂ ಹವಳದ ದಂಡೆಗಳನ್ನು ನೋಡಿ ರೋಹಿಣಿ ಸಿಂಧೂರಿ ಸ್ಕೂಬಾ ಡೈವಿಂಗ್ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

  • ಪ್ರವಾಸಿಗರ ಮನಸೆಳೆಯುವ ಕಡಲಾಳದ ಸ್ಕೂಬಾ ಡೈವಿಂಗ್-ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್

    ಪ್ರವಾಸಿಗರ ಮನಸೆಳೆಯುವ ಕಡಲಾಳದ ಸ್ಕೂಬಾ ಡೈವಿಂಗ್-ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್

    ಕಾರವಾರ : ಕಡಲಾಳದ ವಿಸ್ಮಯ ನೋಡಬೇಕೆಂದರೇ ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಈ ವಿಸ್ಮಯ ಜಗತ್ತನ್ನು ನೋಡಲು ವಿದೇಶಕ್ಕೂ ಅಥವಾ ಅಂಡಮಾನ್ ನಿಕೋಬಾರ್ ಗೆ ತೆರಳಿ ಸಾವಿರಾರು ರೂ. ವ್ಯಯಿಸಿ ಕಣ್ತುಂಬಿಕೊಳ್ಳಬೇಕಿತ್ತು. ಆದರೆ ಈಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ನೇತ್ರಾಣಿ ಗುಡ್ಡದ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಗೆ ಅವಕಾಶ ನೀಡಲಾಗಿದೆ.

    ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಸ್ಕೂಬಾ ಡೈವ್ ಗೆ ಕಳೆದ ಒಂದು ವರ್ಷಗಳಿಂದ ಅವಕಾಶ ಮಾಡಿಕೊಟ್ಟಿದ್ದು, ಮೊದಲ ಬಾರಿಗೆ ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್ ನಡೆಯಿತು. ಎರಡು ದಿನಗಳಿಂದ ದೇಶ ವಿದೇಶದ 150 ಸ್ಕೂಬಾ ಡೈವರ್ಸ್ ಗಳು ಸಮುದ್ರದಾಳದಲ್ಲಿ ಇಳಿದು ಎಂಜಾಯ್ ಮಾಡಿದರು.

    ಏನಿದು ಸ್ಕೂಬಾ ಡೈವಿಂಗ್?
    ಆಮ್ಲಜನಕ ಸಿಲಿಂಡರನ್ನು ಹೆಗಲಿಗೆ ಕಟ್ಟಿಕೊಂಡು ನೀರಿಗೆ ಧುಮುಕಿ ಕಡಲಾಳದ ಜಲಚರಗಳ ವೀಕ್ಷಣೆ ಮಾಡುವುದು ಸ್ಕೂಬಾ ಡೈವಿಂಗ್ ಆಗಿದೆ. ಮುರಡೇಶ್ವರದ ನೇತ್ರಾಣಿಯಲ್ಲಿ 2007 ರಿಂದಲೇ ಸ್ಕೂಬಾ ಡೈವಿಂಗ್ ನಡೆಯುತ್ತಿದೆ. ಆದರೆ, ಇದು ಪ್ರವಾಸಿಗರಿಗೆ ತೆರೆದುಕೊಂಡಿರಲಿಲ್ಲ. ಹೆಚ್ಚು ಪ್ರಚಾರವು ಆಗಿರಲಿಲ್ಲ. ಕೆಲವು ಕಡಲ ಜೀವ ವಿಜ್ಞಾನಿಗಳು ಮಾತ್ರ ಇಲ್ಲಿಗೆ ಬಂದು ಈ ಕಾರ್ಯ ನಡೆಸುತ್ತಿದ್ದರು. ಆದರೆ 2017 ರಲ್ಲಿ ಅಧಿಕೃತವಾಗಿ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಾರ್ವಜನಿಕರಿಗೆ ಸ್ಕೂಬಾ ಡೈವಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದೆ.

    ಯಾರು ಯಾರು ಸ್ಕೂಬಾ ಡೈವಿಂಗ್ ಮಾಡಬಹುದು?
    ತೀವ್ರ ತರಹದ ಕಾಯಿಲೆ ಅಥವಾ ತೊಂದರೆ ಇರುವವರನ್ನು ಹೊರತುಪಡಿಸಿ ಉಳಿದೆಲ್ಲರೂ ಸ್ಕೂಬಾ ಡೈವಿಂಗ್ ಮಾಡಬಹುದಾಗಿದೆ. ವಯಸ್ಸಿನ ಬೇಧವಿಲ್ಲ. ನಿಮಗೆ ಈಜಲು ಬರಬೇಕೆಂದಿಲ್ಲ. ಅನುಭವಿ ತರಬೇತುದಾರರ ತಂಡ ನಮ್ಮನ್ನು ನೀರಿನಾಳಕ್ಕೆ ಕರೆದೊಯ್ದು ವಾಪಸ್ ಕರೆ ತರುತ್ತದೆ. ಇದಕ್ಕಾಗಿ ನುರಿತ ಸ್ಕೂಬಾ ತರಬೇತಿದಾರರು ಅರ್ಧ ಗಂಟೆಗಳ ಕಾಲ ಮಾಹಿತಿ ಮತ್ತು ತರಬೇತಿ ನೀಡುತ್ತಾರೆ.

    ನೇತ್ರಾಣಿ ಗುಡ್ಡದ ಮಹತ್ವವೇನು?
    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರಡೇಶ್ವರ ಕಡಲ ತೀರದಿಂದ ಅರಬ್ಬಿ ಸಮುದ್ರದಲ್ಲಿ (10 ನಾಟಿಕಲ್ ಮೈಲು) 19 ಕಿಲೋಮೀಟರ್ ಬೋಟ್ ನಲ್ಲಿ ಸಾಗಿದರೆ ನೇತ್ರಾಣಿ ಗುಡ್ಡ ಸಿಗುತ್ತದೆ. ಸುಮಾರು 2 ಕಿಲೋಮೀಟರ್ ಸುತ್ತಳತೆ ಹೊಂದಿರುವ ಬೃಹದಾಕಾರದ ಕಲ್ಲುಬಂಡೆಗಳಿಂದ ಆವೃತವಾಗಿದೆ.

    ಅಪರೂಪದ ಜೀವ ವೈವಿದ್ಯ: ನೇತ್ರಾಣಿ ದ್ವೀಪ ಜಲಚರಗಳ ಜೊತೆ ಅಪರೂಪದ ಕಾಡು ಕುರಿ ಹಾಗೂ ಪಕ್ಷಿಗಳಿಗೂ ವಾಸಸ್ಥಳವಾಗಿದೆ. ಪಾರಿವಾಳದ ದ್ವೀಪ ಎಂದೇ ಪ್ರಸಿದ್ಧವಾಗಿದ್ದು, ಈ ಹಿಂದೆ ಗುಡ್ಡದ ಬಳಿ ಭಾರತೀಯ ನೌಕಾದಳವು ಸಮರಾಭ್ಯಾಸ ಮಾಡುತಿತ್ತು. ಪರಿಸರವಾದಿಗಳ ಹೋರಾಟದಿಂದ ಈಗ ನಿಲ್ಲಿಸಲಾಗಿದೆ. ಈ ಗುಡ್ಡವನ್ನ ಹತ್ತಿದರೆ ಕಾಡು ಕುರಿಗಳು, ಕಾಡುಕೋಳಿ, ಪಾರಿವಾಳ, ವಿವಿಧ ಜಾತಿಯ ಹದ್ದು, ಗಿಡುಗಗಳ ಜೊತೆ ಸಮರಾಭ್ಯಾಸದ ವೇಳೆ ಉಳಿದ ಕಾಲಿಷಲ್ ಗಳು, ನಿಷ್ಕ್ರಿಯ ಬಾಂಬ್‍ಗಳು ನೋಡಸಿಗುತ್ತದೆ.

    ಗುಡ್ಡದ ಭಾಗದಲ್ಲಿ ಗುಹೆ ಕೂಡ ಇದ್ದು ಇದರ ವೀಕ್ಷಣೆಗೆ ನಿಷೇಧವಿದೆ. ಇನ್ನು ಈ ಗುಡ್ಡದ ಬಳಿ ನೀಲಿ ಬಣ್ಣದ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದರೆ ಹವಳದ ದಿಬ್ಬ, ಪ್ಯಾರೆಟ್ ಫಿಶ್, ಕ್ವೀನ್ ಫಿಷ್, ಮಿಂಚುಳ್ಳಿ ಮೀನು, ಚಿಟ್ಟೆಮೀನು, ಮುಳ್ಳಿನ ಮೀನು, ಸಮುದ್ರದ ಹಾವುಗಳು, ಜಲ್ಲಿ ಫಿಷ್, ವಿವಿಧ ಬಣ್ಣದ ಮೀನು, ವಿವಿಧ ಜಾತಿಯ ಸಮುದ್ರ ಸಸ್ಯಗಳು, ಸಮುದ್ರದ ಆಮೆಗಳು, ಚಿಕ್ಕ ಜಾತಿಯ ಷಾರ್ಕ್‍ಗಳು, ಡಾಲ್ಫಿನ್‍ಗಳು ಕೂಡ ನೋಡಲು ಸಿಗುತ್ತವೆ.

    ಸ್ಕೂಬಾ ಡೈವಿಂಗ್ ಗಾಗಿ ಜಿಲ್ಲಾಡಳಿ ಮಾನ್ಯತೆ ಪಡೆದ ಮೂರು ಸಂಸ್ಥೆಗಳಿಗೆ ಗುತ್ತಿಗೆ ನೀಡಿದೆ. ವೆಸ್ಟ್ ಕೋಸ್ಟ್ ಅಡ್ವೆಂಚರ್ಸ್, ನೇತ್ರಾಣಿ ಅಡ್ವೆಂಚರ್ಸ್ ಹಾಗೂ ಡೈವ್ ಗೋವಾ ಎಂಬ ಮೂರು ಕಂಪನಿಗಳು ಇಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿವೆ. ಇವುಗಳಲ್ಲಿ ನೇತ್ರಾಣಿ ಅಡ್ವೆಂಚರ್ಸ್ ಹಾಗೂ ಡೈವ್ ಗೋವಾ ಎಂಬ ಕಂಪನಿಗಳು ಹೆಚ್ಚಿನ ತಾಂತ್ರಿಕತೆ ಹಾಗೂ ಭದ್ರತೆವದಗಿಸುವ ಜೊತೆ ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಪ್ರತಿ ವ್ಯಕ್ತಿಗೆ 5000 ದರ ನಿಗದಿ ಮಾಡಿದೆ. ಆದರೇ ಸಮುದ್ರದಲ್ಲಿ ತೊಂದರೆಗಳಾದರೇ ಯಾವ ಗುತ್ತಿಗೆ ಪಡೆದ ಕಂಪನಿಗಳೂ ಪ್ರಥಮ ಚಿಕಿತ್ಸೆಗೆ ಬೇಕಾದ ಸವಲತ್ತುಗಳನ್ನು ಹೊಂದಿರದ ಕಾರಣ ಡೈವಿಂಗ್ ಮಾಡುವವರು ಮುನ್ನೆಚ್ಚರಿಕೆ ವಹಿಸುವುದುವಳಿತು. ಇಲ್ಲವಾದಲ್ಲಿ ಪ್ರಾಣಕ್ಕೆ ಸಂಚುಕಾರ ಕಟ್ಟಿಟ್ಟ ಬತ್ತಿಯಾಗಿದೆ.

    ಸಂಪರ್ಕ ಹೇಗೆ ..?
    ಸ್ಕೂಬಾ ಡೈವಿಂಗ್ ಎಂಬುದು ಒಂದು ದಿನದ ಪ್ಯಾಕೇಜ್. ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ ತೀರದಿಂದ 19 ಕಿಮೀ ದೂರದಲ್ಲಿರುವ ನೇತ್ರಾಣಿ ದ್ವೀಪಕ್ಕೆ ದೋಣಿಯಲ್ಲಿ ಬೆಳಗ್ಗೆ ತೆರಳಿದರೆ ಸಂಜೆ ಹೊತ್ತಿಗೆ ವಾಪಸ್ ಬರಬಹುದು. ದೋಣಿಯಿಂದಲೇ ಸಮುದ್ರಾಳಕ್ಕೆ ಧುಮುಕುವ ವ್ಯವಸ್ಥೆ ಮಾಡಲಾಗುತ್ತದೆ.

    ಮಹಾರಾಷ್ಟ್ರ, ಗೋವಾ ಬೆಂಗಳೂರಿನಿಂದ ಇಲ್ಲಿಗೆ ಬರುವವರು ಸಾರಿಗೆ ಮುಖಾಂತರ ಅಥವಾ ವಿಮಾನದ ಮೂಲಕವೂ ಬರಬಹುದಾಗಿದ್ದು, ವಿಮಾನದಲ್ಲಿ ಬರುವವರು ಮಂಗಳೂರಿನಿಂದ ಬರಬಹುದಾಗಿದೆ. ರೈಲ್ವೆ ಸಂಪರ್ಕ ಕೂಡ ಇರುವುದರಿಂದ ಹಣ ಉಳಿತಾಯ ಮಾಡಬಹುದು.

    ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸ್ಕೂಬಾ ಡೈವಿಂಗ್ ಗೆ ಹೆಚ್ಚಿನ ಪ್ರೋತ್ಸಹ ನೀಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ದಲ್ಲಿ ಮೊದಲ ಬಾರಿ ಸ್ಕೂಬಾ ಡೈವಿಂಗ್ ಪ್ರಾರಂಭಿಸಿದ್ದು ಪ್ರತಿ ದಿನ 60 ಕ್ಕೂ ಹೆಚ್ಚು ಜನರು ಡೈವಿಂಗ್ ಮಾಡುತಿದ್ದಾರೆ. ಇನ್ನು ಕಾರವಾರ ಹಾಗೂ ಉಡುಪಿಯ ಕಾಪುವಲ್ಲಿ ಸಹ ಸ್ಕೂಬಾ ಡೈವಿಂಗ್ ಗೆ ಅವಕಾಶ ವದಗಿಸಲು ಅನುಮತಿ ನೀಡಲಾಗಿದ್ದು ಪ್ರಾರಂಭದ ಹಂತದಲ್ಲಿದೆ. ಇನ್ನು ಕರ್ನಾಟಕದಲ್ಲೇ ಮೊದಲ ಬಾರಿ ಎರಡು ದಿನಗಳ ಸ್ಕೂಬಾ ಡೈವಿಂಗ್ ಫೆಸ್ಟಿವಲ್ ಆಯೋಜನೆ ಮಾಡುವ ಮೂಲಕ ಪ್ರವಾಸಿರನ್ನು ಹೆಚ್ಚು ಆಕರ್ಷಿಸುವ ಜೊತೆಗೆ ವಿದೇಶಿಯರನ್ನೂ ಆಕರ್ಷಿಸುತ್ತಿದೆ. ಇದಲ್ಲದೇ ಕಾರವಾರ ಜಿಲ್ಲಾಡಳಿತ ಡೈವಿಂಗ್ ತರಬೇತಿ ಪಡೆಯುವವರಿಗಾಗಿ ಕಲಿಕಾ ಕೇಂದ್ರವನ್ನು ಸದ್ಯದರಲ್ಲೇ ಸ್ಥಾಪನೆ ಮಾಡಲಿದೆ.