Tag: ಸ್ಕಾರ್ಪಿಯೋ ಕಾರು

  • ಸ್ಕಾರ್ಪಿಯೋ ಕಾರಿನಲ್ಲಿ ವಿಶ್ವಪರ್ಯಟನೆಗೆ ಮಂದಾದ ಪುತ್ತೂರಿನ ಯುವಕ

    ಸ್ಕಾರ್ಪಿಯೋ ಕಾರಿನಲ್ಲಿ ವಿಶ್ವಪರ್ಯಟನೆಗೆ ಮಂದಾದ ಪುತ್ತೂರಿನ ಯುವಕ

    75 ರಾಷ್ಟ್ರಗಳನ್ನ ಏಕಾಂಗಿಯಾಗಿ ಸಂಚರಿಸಲಿರೋ ಮುಹಮ್ಮದ್

    ಬೆಂಗಳೂರು: ಸ್ಕಾರ್ಪಿಯೋ ಕಾರಿನಲ್ಲೇ (Scorpio Car) ವಿಶ್ವಪರ್ಯಟನೆಗೆ ಪುತ್ತೂರಿನ (Puttur) ಯುವಕ ಮುಂದಾಗಿದ್ದಾರೆ. ಕರ್ನಾಟಕದಿಂದ ಲಂಡನ್‌ವರೆಗೂ (Karnataka To London) ಯುವಕ ವಿಶ್ವಪರ್ಯಟನೆ ಮಾಡಲಿದ್ದಾರೆ.

    ಮುಹಮ್ಮದ್ ಸಿನಾನ್ ಎಂಬ ಯುವಕ ಹೊಸ ಚರಿತ್ರೆ ಸೃಷ್ಟಿಸಲು ಮುಂದಾಗಿದ್ದು, ಬೈ ರೋಡ್ ಕಾರಿನಲ್ಲಿ 75 ರಾಷ್ಟ್ರಗಳನ್ನ ಏಕಾಂಗಿಯಾಗಿ ಸಂಚರಿಸಲು ನಿರ್ಧರಿಸಿದ್ದಾರೆ. ಇದೇ ತಿಂಗಳು 29 ರಿಂದ ಕರ್ನಾಟಕದಿಂದ ಲಂಡನ್‌ವರೆಗೂ ಪರ್ಯಟನೆ ಆರಂಭ ಆಗಲಿದೆ. ಇದನ್ನೂ ಓದಿ: ವಿನಾಶ ಕಾಲದಲ್ಲಿ ಕಾಂಗ್ರೆಸ್‌ಗೆ ವಿಪರೀತ ಬುದ್ಧಿ: ಸದಾನಂದ ಗೌಡ ವಾಗ್ದಾಳಿ

    ಕನ್ನಡ ನಾಡಿನ ಆಚಾರ-ವಿಚಾರ, ಸಂಸ್ಕೃತಿ ಮತ್ತು ಹಿರಿಮೆಯನ್ನ ಸಾರುವ ಉದ್ದೇಶದಿಂದ ಈ ಸಂಚಾರ ಆರಂಭಿಸಲಾಗಿದೆಯಂತೆ. ಸುಮಾರು 2 ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಿ.ಮೀ ವರೆಗೂ 75 ದೇಶಗಳನ್ನ ಸುತ್ತಲಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಇರುವ ಕನ್ನಡಿಗರನ್ನ ಭೇಟಿ ಮಾಡಿ ಕನ್ನಡಿನ ಹಿರಿಮೆಯನ್ನ ಸಾರಲಿದ್ದಾರೆ. ಇದೇ ತಿಂಗಳ 29 ರಿಂದ‌ ಮಂಗಳೂರಿನ ಮೂಲಕ ದುಬೈ ತಲುಪಿ ಅಲ್ಲಿಂದ ಬೇರೆ ಬೇರೆ ರಾಷ್ಟ್ರಗಳಿಗೆ ಸಂಚರಿಸಲಿದ್ದಾರೆ.

    ಮುಹಮ್ಮದ್ ಸಿನಾನ್ ಇಂಟಿರಿಯರ್‌ ಡಿಸೈನರ್ ಆಗಿದ್ದು, ಯುಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯದವರು ಈ ರೀತಿ ಕಾರಿನಲ್ಲಿ ವಿಶ್ವಪರ್ಯಟನೆ ಮಾಡುವುದನ್ನ ನೋಡಿ ತಾನೂ ಈ ನಿರ್ಧಾರ ಮಾಡಿದ್ದರಂತೆ. ಇದನ್ನೂ ಓದಿ: ಬಜರಂಗ ಬಲಿ ಕೀ ಜೈ ಘೋಷಣೆ ಮಾಡಿ ತುಳುವಿನಲ್ಲಿ ಭಾಷಣ ಮಾಡಿದ ಮೋದಿ

    2018 ರಲ್ಲೇ ವಿಶ್ವಪರ್ಯಟನೆಗೆ ಪ್ಲ್ಯಾನ್ ಮಾಡಿದ್ದೆ. ಆದರೆ ಕೊರೊನಾದಿಂದ ಸಾಧ್ಯ ಆಗಿರಲಿಲ್ಲ.‌ ಈಗ ಸಾಧ್ಯ ಆಗಿದ್ದು, ಕರ್ನಾಟಕ ಮತ್ತು ಭಾರತದ ಪ್ರವಾಸೋದ್ಯಮವನ್ನ ಉತ್ತೇಜನ ಮಾಡೋದು ನನ್ನ ಉದ್ದೇಶ ಆಗಿದೆ‌. ಇದಕ್ಕೆ 1 ಕೋಟಿ ಖರ್ಚಾಗಲಿದೆ ಎಂದು ಮುಹಮ್ಮದ್‌ ತಿಳಿಸಿದ್ದಾರೆ.

  • ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ – ಐವರು ದುರ್ಮರಣ

    ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ – ಐವರು ದುರ್ಮರಣ

    ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಐವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಶನಿವಾರ ರಾತ್ರಿ 10:30ರ ಸುಮಾರಿಗೆ ಲಾರಿವೊಂದು ಸ್ಕಾರ್ಪಿಯೋ ಕಾರಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಐವರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದು, ಇದೀಗ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ್ ಕುಟುಂಬದ ಜೊತೆ ಸಂಬಂಧಿಯ ಮಗನ ಬರ್ತ್ ಡೇ ಆಚರಿಸಲು ಕೊಪ್ಪಳಕ್ಕೆ ಬಂದಿದ್ದರು. ರಾತ್ರಿ ಹುಟ್ಟುಹಬ್ಬ ಮುಗಿಸಿಕೊಂಡು ಮರಳಿ ಬಿನ್ನಾಳ ಗ್ರಾಮಕ್ಕೆ ಬರುತ್ತಿದ್ದ ವೇಳೆ ಅಪಘಾತವಾಗಿದೆ. ಇದನ್ನೂ ಓದಿ: ಉದ್ಯಾನವನದಲ್ಲಿ ಕಾಡಾನೆ ಪ್ರತ್ಯಕ್ಷ – ದಿಕ್ಕಾಪಾಲಾದ ಪ್ರವಾಸಿಗರು

    ಘಟನೆಯಲ್ಲಿ ಕೊಪ್ಪದ(62), ಮೃತರ ಸೊಸೆ ಗಿರಿಜಮ್ಮ(45), ಅಣ್ಣನ ಮಕ್ಕಳಾದ ಶಾಂತಮ್ಮ(35), ಪಾರ್ವತಮ್ಮ (32), ಸಂಬಂಧಿ ಕಸ್ತೂರಮ್ಮ(20) ಮೃತಪಟ್ಟಿದ್ದು, ಚಾಲಕ ಹರ್ಷವರ್ಧನ, ಬಸವರಾಜ, ಪುಟ್ಟರಾಜ, ಭೂಮಿಕಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕಾರ್ಪಿಯೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಶವಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಗಿತ್ತು. ಸದ್ಯ ಸ್ಥಳಕ್ಕೆ ಕೊಪ್ಪಳ ಎಸ್‍ಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮೇಕೆದಾಟು ನಿರ್ಮಾಣಕ್ಕೆ ಅನುಮತಿ ನೀಡಲ್ಲ: ತಮಿಳುನಾಡು ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ಮನೆ ಮುಂದೆ ನಿಲ್ಲಿಸಿದ್ದ ಶಾಸಕರ ಕಾರನ್ನೇ ಎಗರಿಸಿ ಖತರ್ನಾಕ್ ಕಳ್ಳರು

    ಮನೆ ಮುಂದೆ ನಿಲ್ಲಿಸಿದ್ದ ಶಾಸಕರ ಕಾರನ್ನೇ ಎಗರಿಸಿ ಖತರ್ನಾಕ್ ಕಳ್ಳರು

    ಜೈಪುರ: ಜೈಪುರದ ವಿವೇಕ್ ವಿಹಾರ್ ಪ್ರದೇಶದಲ್ಲಿರುವ ಲೋಕತಾಂತ್ರಿಕ ಪಕ್ಷದ (ಆರ್‌ಎಲ್‍ಪಿ) ಶಾಸಕ ನಾರಾಯಣ್ ಬೇನಿವಾಲ್ ಅವರ ಎಸ್‍ಯುವಿ ಕಾರನ್ನು ಅವರ ನಿವಾಸದ ಬಳಿಯೇ ಖದೀಮರು ಕದ್ದಿದ್ದಾರೆ.

    ಶನಿವಾರ ರಾತ್ರಿ ನಾರಾಯಣ್ ಬೇನಿವಾಲ್ ಅವರು ತಮ್ಮ ಸ್ಕಾರ್ಪಿಯೋ ಕಾರನ್ನು ಕಟ್ಟಡದ ಹೊರಗೆ ನಿಲ್ಲಿಸಿದ್ದರು. ಆದರೆ ಇಂದು ಬೆಳಗ್ಗೆ ವಾಹನ ನಾಪತ್ತೆಯಾಗಿದೆ. ಇದೀಗ ವಿವೇಕ್ ವಿಹಾರ್ ಸಮೀಪದ ಪ್ರದೇಶಗಳಲ್ಲಿನ ಕಟ್ಟಡದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್‍ಎಚ್‍ಒ ಶ್ಯಾಮ್‍ನಗರ ಶ್ರೀಮೋಹನ್ ಮೀನಾ ತಿಳಿಸಿದ್ದಾರೆ.

    ಈ ಕುರಿತಂತೆ ಪ್ರತಿಕ್ರಿಯಿಸಿದ ಶಾಸಕ ನಾರಾಯಣ್ ಬೇನಿವಾಲ್ ಅವರು, ಪ್ರತಿ ದಿನದಂತೆ ಶನಿವಾರ ರಾತ್ರಿ ಅಪಾರ್ಟ್‍ಮೆಂಟ್ ಹೊರಗೆ ಕಾರನ್ನು ನಿಲ್ಲಿಸಿದ್ದೆ. ಆದರೆ ಇಂದು ಬೆಳಗ್ಗೆ ಎದ್ದು ನೋಡಿದಾಗ ವಾಹನ ನಾಪತ್ತೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ – ಹಂದಿ ಮಾಂಸ ಸೇವಿಸದಂತೆ ಸರ್ಕಾರ ಸೂಚನೆ

    ಕಳ್ಳರಿಗೆ ಪೊಲೀಸರ ಭಯವಿಲ್ಲ. ಶಾಸಕರ ವಾಹನವನ್ನೇ ಹೀಗೆ ಕಳ್ಳತನ ಮಾಡಿರುವಾಗ ಜನ ಸಾಮಾನ್ಯರ ಸ್ಥಿತಿ ಏನಾಗಬಹುದು? ಪೊಲೀಸರು ಜನಸಾಮಾನ್ಯರನ್ನು ಅಡ್ಡಗಟ್ಟಿ ತಪಾಸಣೆ ನಡೆಸುತ್ತಾರೆ. ಆದರೆ ಕಳ್ಳರು ಮತ್ತು ದಂಗೆಕೋರರನ್ನು ಸ್ವಾತಂತ್ರ್ಯವಾಗಿ ಓಡಾಡಲು ಬಿಟ್ಟಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾರಾಯಣ್ ಬೇನಿವಾಲ್ ನಾಗೌರ್ ಸಂಸದ ಹನುಮಾನ್ ಬೇನಿವಾಲ್ ಅವರ ಸಹೋದರರಾಗಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ- ಆ್ಯಸಿಡ್ ಕುಡಿಸಿ ಕೊಲೆಗೆ ಯತ್ನ

    Live Tv
    [brid partner=56869869 player=32851 video=960834 autoplay=true]

  • ಕಾಲುವೆಗೆ ಬಿದ್ದ ಸ್ಕಾರ್ಪಿಯೋ ಕಾರು – ನಾಲ್ವರು ಯುವಕರು ಪಾರು

    ಕಾಲುವೆಗೆ ಬಿದ್ದ ಸ್ಕಾರ್ಪಿಯೋ ಕಾರು – ನಾಲ್ವರು ಯುವಕರು ಪಾರು

    ಚಿಕ್ಕಬಳ್ಳಾಪುರ: ಸ್ಕಾರ್ಪಿಯೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ಮಾರ್ಗದ ತಿಪ್ಪೇನಹಳ್ಳಿ ಬಳಿ ನಡೆದಿದೆ.

    ಅದೃಷ್ಟವಶಾತ್ ಘಟನೆ ವೇಳೆ ಪವಾಡಸದೃಷ ರೀತಿಯಲ್ಲಿ ಕಾರಿನಲ್ಲಿದ್ದ ನಾಲ್ವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅವಘಡ ಚಿಕ್ಕಬಳ್ಳಾಪುರ ನಗರದ ಡಿವೈನ್ ಸಿಟಿ ಲೇಔಟ್ ನಿವಾಸಿ ಯುವಕನೊರ್ವ ತನ್ನ ನಾಲ್ವರು ಸ್ನೇಹಿತರೊಂದಿಗೆ ಗೌರಿಬಿದನೂರು ಮಾರ್ಗದ ಕಣಿವೆ ಕಡೆ ತೆರಳುತ್ತಿದ್ದರು. ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಾಲುವೆಗೆ ಜಂಪ್ ಹೊಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.

    ಘಟನೆಯಲ್ಲಿ ಕಾರಿನಲ್ಲಿದ್ದ ಅಭಿ ಹಾಗೂ ವಿಕ್ಕಿ ಎಂಬ ಇಬ್ಬರು ಯುವಕರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದರೆ, ಇನ್ನಿಬ್ಬರು ಯುವಕರು ಪ್ರಾಥಮಿಕ ಚಿಕಿತ್ಸೆ ಪಡೆದು ತಕ್ಷಣವೇ ಚೇತರಿಸಿಕೊಂಡು ಆರಾಮಾಗಿದ್ದಾರೆ. ಗಾಯಗೊಂಡ ಮತ್ತಿಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಪ್ರಪಾತಕ್ಕೆ ಬಿದ್ದ ಹಸುಗಳು – ಫಲ ನೀಡದ ಯುವಕರ ಪ್ರಯತ್ನ

    ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಸ್ಕಾರ್ಪಿಯೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಹಾಳಾಗಿದೆ. ಇದನ್ನೂ ಓದಿ:  ಅಧಿಕ ದರದಲ್ಲಿ ಮದ್ಯ ಮಾರಾಟ-ಗ್ರಾಮದಲ್ಲಿ ಡಂಗುರ ಸಾರಿದ ಮದ್ಯಪ್ರಿಯರು

  • ಟೋಲ್‍ನಲ್ಲಿ ಅಪಘಾತ – ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ

    ಟೋಲ್‍ನಲ್ಲಿ ಅಪಘಾತ – ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ

    ಚಿಕ್ಕಬಳ್ಳಾಪುರ: ಟೋಲ್ ಕಟ್ಟಲು ಸರದಿ ಸಾಲಿನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಸ್ಕಾರ್ಪಿಯೋ ಕಾರೊಂದು ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಕರ್ನಾಟಕ ಆಂಧ್ರ ಗಡಿಭಾಗದ ಬಾಗೇಪಲ್ಲಿ ಟೋಲ್ ಪ್ಲಾಜಾದಲ್ಲಿ ಅಪಘಾತ ನಡೆದಿದೆ. ಬೆಂಗಳೂರು ಕಡೆಯಿಂದ ಬಂದ ಸ್ಕಾರ್ಪಿಯೋ ಕಾರು, ಸರದಿ ಸಾಲಿನಲ್ಲಿದ್ದ ಸ್ವಿಫ್ಟ್ ಡಿಜೈರ್ ಹಾಗೂ ಹುಂಡೈ ವೆನ್ಯೂ ಕಾರಿಗೆ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ನಂತರ ಸ್ಕಾರ್ಪಿಯೋ ಕಾರು ಪಲ್ಟಿಯಾಗಿದೆ.

    ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂರು ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಹಾಗೆ ಸ್ಕಾರ್ಪಿಯೋ ಕಾರು ಚಾಲಕ ವೈಭವ್ ಕುಮಾರ್ ಕಾರು ಚಲಾಯಿಸುತ್ತಿದ್ದು, ಕಾರಿನಲ್ಲಿ ಬೆಂಗಳೂರಿನ ಪದ್ಮನಾಭನಗರದ ನಿವಾಸಿಗಳಾದ ಚಂದ್ರಕಲಾ ಹಾಗೂ ನಾಗ ಇದ್ದರು.

    ಕಾರಿನಲ್ಲಿ ಕದಿರಿಗೆ ಪ್ರಯಾಣ ಮಾಡುತ್ತಿದ್ದರು. ಸಿನಿಮಾ ಸ್ಟೈಲ್‍ನಲಿ ಸ್ಕಾರ್ಪಿಯೋ ಕಾರು ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸದ್ಯ ಬಾಗೇಪಲ್ಲಿ ಪಿಎಸ್‍ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

  • ನಂಬರ್ ಪ್ಲೇಟ್ ಬದಲಿಸಿ ರಕ್ತಚಂದನ ಸಾಗಿಸುತ್ತಿದ್ದ ಕಾರು ವಶಕ್ಕೆ

    ನಂಬರ್ ಪ್ಲೇಟ್ ಬದಲಿಸಿ ರಕ್ತಚಂದನ ಸಾಗಿಸುತ್ತಿದ್ದ ಕಾರು ವಶಕ್ಕೆ

    – ಕಾರು ಬಿಟ್ಟು ಪರಾರಿಯಾದ ಖದೀಮರು

    ಚಿಕ್ಕಬಳ್ಳಾಪುರ: ತಮಿಳುನಾಡು ನೊಂದಣಿಯ ಸ್ಕಾರ್ಪಿಯೋ ಕಾರಿಗೆ ಕರ್ನಾಟಕ ನಂಬರ್ ಪ್ಲೇಟ್ ಬಳಸಿ ಅಕ್ರಮವಾಗಿ ರಕ್ತಚಂದನವನ್ನು ಸಾಗಿಸುತ್ತಿದ್ದ ಕಾರನ್ನು ಚಿಕ್ಕಬಳ್ಳಾಪುರ ಅರಣ್ಯ ಇಲಾಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಅಂದಹಾಗೆ ಆಯಾ ರಾಜ್ಯಗಳಲ್ಲಿ ಆ ರಾಜ್ಯದ ನಕಲಿ ನಂಬರ್ ಪ್ಲೇಟ್ ಗಳನ್ನು ಬಳಸಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತ ಚಂದನ ಸಾಗಾಟ ಮಾಡುತ್ತಿದ್ದ ಕಾರನ್ನು ಬೆನ್ನಟ್ಟಿದ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಅಧಿಕಾರಿಗಳು, ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಬಳಿ ಸ್ಕಾರ್ಪಿಯೋ ಕಾರನ್ನು ತಡೆದು ಕಾರು ಸಮೇತ ರಕ್ತ ಚಂದನ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.

    ಕಾರಿನಲ್ಲಿ 14 ರಕ್ತಚಂದನದ ತುಂಡುಗಳಿದ್ದು ಆರೋಪಿಗಳು ಅಧಿಕಾರಿಗಳನ್ನು ನೋಡುತ್ತಿದ್ದಂತೆ ಕಾರು ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಕಾರಿನ ನಂಬರ್ ಟಿಎನ್ 49, ಎ.ಎಫ್ 0333 ಅಸಲಿ ಆಗಿದ್ದು, ಇದಕ್ಕೆ ಕೆಎ 34 ಎಂ 6866 ನಂಬರ್ ಪ್ಲೇಟನ್ನು ಅಳವಡಿಸಿದ್ದಾರೆ. ಕಾರಿನ ಪರಿಶೀಲನೆ ವೇಳೆ ಸರಿಸುಮಾರು 500 ಕೆಜಿಯ ಲಕ್ಷಾಂತರ ರೂಪಾಯಿ ಮೌಲ್ಯದ 14 ರಕ್ತ ಚಂದನದ ತುಂಡುಗಳು, ಎರಡು ಆಸಲಿ ತಮಿಳುನಾಡಿನ ನೊಂದಣಿಯ ನಂಬರ್ ಪ್ಲೇಟುಗಳು, ಕಾರಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಟೈರ್ ಸಿಡಿದು ಸ್ಕಾರ್ಪಿಯೋ ಪಲ್ಟಿ – 3 ಸಾವು, 7 ಮಂದಿ ಸ್ಥಿತಿ ಗಂಭೀರ

    ಟೈರ್ ಸಿಡಿದು ಸ್ಕಾರ್ಪಿಯೋ ಪಲ್ಟಿ – 3 ಸಾವು, 7 ಮಂದಿ ಸ್ಥಿತಿ ಗಂಭೀರ

    ರಾಮನಗರ: ಸ್ಕಾರ್ಪಿಯೋ ಕಾರಿನ ಮುಂದಿನ ಟೈರ್ ಸಿಡಿದು ಪಲ್ಟಿ ಹೊಡೆದ ಪರಿಣಾಮ ಮೂವರು ಮೃತಪಟ್ಟರೆ, 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು-ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯ ತಿಗಳರ ಪಾಳ್ಯ ಸೇತುವೆ ಬಳಿ ನಡೆದಿದೆ.

    ಬೆಂಗಳೂರು ಹೊಸಕೆರೆಹಳ್ಳಿ ಹಾಗೂ ತ್ಯಾಗರಾಜನಗರ ನಿವಾಸಿಗಳಾದ ರಕ್ಷನ್ (22), ಉಜ್ವಲ್ (22) ಹಾಗೂ ಹರೀಶ್ (22) ಮೃತ ದುರ್ದೈವಿಗಳು. ಇವರು ಬೆಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ. ಇನ್ನು ಗಾಯಗೊಂಡ 7 ಮಂದಿಯನ್ನು ಕುಣಿಗಲ್ ಹಾಗೂ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ನಾಗಮಂಗಲದಲ್ಲಿ ರಮೇಶ್ ಸಂಬಂಧಿಕರೊಬ್ಬರ ಬೀಗರ ಊಟದ ಕಾರ್ಯಕ್ರಮವಿತ್ತು. ಹೀಗಾಗಿ ಇಂದು ಸ್ಕಾರ್ಪಿಯೋ ಕಾರಿನಲ್ಲಿ ಒಟ್ಟು 13 ಜನರು ಬೆಂಗಳೂರಿನಿಂದ ಚುಂಚನಗಿರಿ ಮಾರ್ಗವಾಗಿ ನಾಗಮಂಗಲಕ್ಕೆ ಹೊರಟಿದ್ದರು. ಈ ವೇಳೆ ತಿಗಳರ ಪಾಳ್ಯ ಸೇತುವೆ ಬಳಿ ಕಾರು ಬರುತ್ತಿದ್ದಂತೆ ಮುಂದಿನ ಟೈರ್ ಸಿಡಿದ ಪರಿಣಾಮ ಕಾರು ಪಲ್ಟಿ ಹೊಡೆದಿದೆ. ಅದರಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, 7 ಸ್ಥಿತಿ ಚಿಂತಾಜನಕವಾಗಿತ್ತು. ಉಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಾಳಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸ್ಕಾರ್ಪಿಯೋ ಕಾರು ಸಂಪೂರ್ಣವಾಗಿ ಜಖಂಗೊಂಡು ರಸ್ತೆ ಬದಿಯಲ್ಲಿ ಬಿದ್ದಿದೆ. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv