Tag: ಸ್ಕಾಟ್ಲೆಂಡ್

  • ಟಿ20 ವಿಶ್ವಕಪ್‌: ಸ್ಕಾಟ್ಲೆಂಟ್‌ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌ ಲೋಗೋ

    ಟಿ20 ವಿಶ್ವಕಪ್‌: ಸ್ಕಾಟ್ಲೆಂಟ್‌ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌ ಲೋಗೋ

    ನವದೆಹಲಿ: ಟಿ20 ಕ್ರಿಕೆಟ್‌ ವಿಶ್ವಕಪ್‌ಗಾಗಿ (T20 World Cup 2024) ತನಗೆ ಪ್ರಾಯೋಜಕತ್ವ ನೀಡಿರುವ ಕರ್ನಾಟಕ ಹಾಲು ಒಕ್ಕೂಟದ ‘ನಂದಿನಿ’ (Nandini Brand) ಬ್ರ್ಯಾಂಡ್‌ ಲೋಗೋ ಇರುವ ಜೆರ್ಸಿಯನ್ನು ಸ್ಕಾಟ್ಲೆಂಡ್‌ (Scotland) ತಂಡ ಅನಾವರಣಗೊಳಿಸಿದೆ.

    ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯುವ ಪಂದ್ಯಾವಳಿ ಜೂ.2 ರಿಂದ ಆರಂಭವಾಗಲಿದೆ. ಸ್ಕಾಟ್ಲೆಂಡ್ ಪುರುಷರ ಪ್ಲೇಯಿಂಗ್ ಶರ್ಟ್‌ಗಳ ಎಡ ತೋಳಿನ ಮೇಲೆ ನಂದಿನಿ ಲೋಗೋ ಇರುತ್ತದೆ. ಲೋಗೋದಲ್ಲಿ ‘ನಂದಿನಿ’ ಎಂದು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಲಾಗಿದೆ. ಇದನ್ನೂ ಓದಿ: IPL 2024: ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಗೆದ್ದು ಬೀಗಿದ ಪಂಜಾಬ್‌ – ಕಿಂಗ್ಸ್‌ಗೆ 5 ವಿಕೆಟ್‌ಗಳ ಜಯ!

    ನಂದಿನಿ ಬ್ರಾಂಡ್‌ನಲ್ಲಿ (Nandini Milk) ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (KMF), ಟಿ20 ಕ್ರಿಕೆಟ್ ವಿಶ್ವಕಪ್‌ಗಾಗಿ (T20 World Cup 2024) ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ. ಪ್ರತಿ ತಂಡಕ್ಕೆ ಪ್ರಾಯೋಜಕತ್ವದ ಮೊತ್ತ ಸುಮಾರು 2.5 ಕೋಟಿ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

    ಜೂನ್‌ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್‌ 19 ರಿಂದ 24ರ ವರೆಗೆ ಸೂಪರ್‌-8 ಪಂದ್ಯಗಳು, ಜೂನ್‌ 26 ಮತ್ತು ಜೂನ್‌ 27 ರಂದು ಸೆಮಿಫೈನಲ್‌ ಪಂದ್ಯಗಳು ನಡಯೆಲಿದ್ದು, ಜೂನ್‌ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಗುಂಪು ಹಂತದಲ್ಲಿ ಭಾರತ ಎದುರಿಸುವ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳು ನ್ಯೂಯಾರ್ಕ್‌ ನಗರದಲ್ಲಿ, ಒಂದು ಪಂದ್ಯ ಫ್ಲೋರಿಡಾ ನಗರದಲ್ಲಿ ನಡೆಯಲಿದೆ. ಗುಂಪು ಹಂತದಲ್ಲಿ ಜೂನ್‌ 5 ರಂದು ಐರ್ಲೆಂಡ್‌ ವಿರುದ್ಧ, ಜೂನ್‌ 12 ರಂದು ಯುಎಸ್‌ಎ ವಿರುದ್ಧ, ಜೂನ್‌ 15 ರಂದು ಕೆನಡಾ ವಿರುದ್ಧ ಭಾರತ ತಂಡ ಸೆಣಸಲಿದೆ. ಇನ್ನೂ ಬಹು ನಿರೀಕ್ಷಿತ ಹೈವೋಲ್ಟೇಜ್‌ ಕದನದಲ್ಲಿ ಜೂನ್‌ 9 ರಂದು ಪಾಕಿಸ್ತಾನ ವಿರುದ್ಧ ನ್ಯೂಯಾರ್ಕ್‌ನ ಅಂಗಳದಲ್ಲಿ ಭಾರತ ಸೆಣಸಲಿದೆ. ಇದನ್ನೂ ಓದಿ: ಹೈವೋಲ್ಟೇಜ್ ಕದನ ವಾಷ್‌ಔಟ್‌ ಆಗುವ ಸಾಧ್ಯತೆ – ಆರ್‌ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ!

    ಯಾವ ಗುಂಪಿನಲ್ಲಿ-ಯಾವ ತಂಡಗಳು?
    ಗುಂಪು-ಎ:
    ಭಾರತ, ಪಾಕಿಸ್ತಾನ, ಐರ್ಲೆಂಡ್‌, ಕೆನಡಾ, ಯುಎಸ್‌ಎ

    ಗ್ರೂಪ್‌-ಬಿ:
    ಇಂಗ್ಲೆಂಡ್‌, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‌ಲೆಂಡ್‌, ಒಮನ್‌

    ಗ್ರೂಪ್‌-ಸಿ:
    ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ

    ಗ್ರೂಪ್‌-ಡಿ:
    ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್‌, ನೇಪಾಳ

  • ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ

    ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ

    ಬೆಂಗಳೂರು: ನಂದಿನಿ ಬ್ರಾಂಡ್‌ನಲ್ಲಿ (Nandini Milk) ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (KMF), ಟಿ20 ಕ್ರಿಕೆಟ್ ವಿಶ್ವಕಪ್‌ಗಾಗಿ (T20 World Cup 2024) ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ.

    ಇದೇ ಮೊದಲ ಬಾರಿಗೆ ಕ್ರಿಕೆಟ್‌ ತಂಡಗಳಿಗೆ ಕೆಎಂಎಫ್‌ ಪ್ರಾಯೋಜಕತ್ವ ನೀಡುತ್ತಿದೆ. ಇದು ಕರ್ನಾಟಕದ ಜನತೆಗೆ ಹೆಮ್ಮೆಯ ಸಂಗತಿ ಎಂದು ಕೆಎಂಎಫ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಟ್ರಾವಿಸ್ ಸ್ಪೋಟಕ ಬ್ಯಾಟಿಂಗ್‌ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 67 ರನ್‌ಗಳ ಭರ್ಜರಿ ಜಯ

    ಈ ಕುರಿತು ಮಾತನಾಡಿರುವ ಕೆಎಂಎಫ್‌ನ ವ್ಯವಸ್ಥಾಪಕ ಎಂ.ಕೆ.ಜಗದೀಶ್‌, ಏ.20 ರಂದು ಒಪ್ಪಂದ ಅಧಿಕೃತಗೊಂಡಿದೆ. ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ (Scotland and Ireland) ತಂಡಗಳ ಆಟಗಾರರ ಜೆರ್ಸಿಯ ತೋಳಿನ ಭಾಗದ ಮೇಲೆ ಕೆಎಂಎಫ್‌ ಲೋಗೋ ಇರಲಿದೆ ಎಂದು ತಿಳಿಸಿದ್ದಾರೆ.

    ಎರಡೂ ತಂಡಗಳ ಆಟಗಾರರು ನಂದಿನಿ ಉತ್ಪನ್ನಗಳ ಜಾಹೀರಾತು, ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಅಭಿಯಾನ, ಫೋಟೋಶೂಟ್‌ಗಳಲ್ಲಿ ಭಾಗವಹಿಸಲಿದ್ದಾರೆ. ವಿಶ್ವಕಪ್‌ ವೇಳೆ ಜಾಹೀರಾತುಗಳು ಪ್ರಸಾರಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಹಸಿರು ಅಭಿಯಾನ; ಬೆಂಗ್ಳೂರು ಕೆರೆಗಳಿಗೆ ಕಾಯಕಲ್ಪ ನೀಡಲು ಮುಂದಾದ ಫ್ರಾಂಚೈಸಿಗೆ ಭೇಷ್‌ ಎಂದ ಫ್ಯಾನ್ಸ್‌

    ಮಧ್ಯಪ್ರಾಚ್ಯ, ಸಿಂಗಾಪುರ, ಭೂತಾನ್‌, ಮ್ಯಾನ್ಮಾರ್‌ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೆಎಂಎಫ್‌ ಅಸ್ತಿತ್ವ ಹೊಂದಿದೆ. ವಿಶ್ವಕಪ್‌ ವೇಳೆ ಕೆಎಂಎಫ್‌ನ ಉತ್ಪನ್ನಗಳು ಅಮೆರಿಕದಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.

    T20 ಕ್ರಿಕೆಟ್ ವಿಶ್ವಕಪ್ 2024 ಜೂನ್ 1 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆತಿಥ್ಯ ವಹಿಸಲಿವೆ. ಈ ವರ್ಷದ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆಯ 20 ತಂಡಗಳಿವೆ. ಇದನ್ನೂ ಓದಿ: ರಾಹುಲ್‌ ಅಬ್ಬರದ ಆಟ – ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್‌ಗಳ ಭರ್ಜರಿ ಜಯ

  • ಕಳೆದು ಹೋಗಿದ್ದ ಬೆಕ್ಕು 17 ವರ್ಷಗಳ ಬಳಿಕ ಪತ್ತೆ- ಈ ರೋಚಕ ಕಥೆ ಸಖತ್ ಥ್ರಿಲ್ಲಿಂಗ್

    ಕಳೆದು ಹೋಗಿದ್ದ ಬೆಕ್ಕು 17 ವರ್ಷಗಳ ಬಳಿಕ ಪತ್ತೆ- ಈ ರೋಚಕ ಕಥೆ ಸಖತ್ ಥ್ರಿಲ್ಲಿಂಗ್

    ಎಡಿನ್‍ಬರ್ಗ್: ಸಾಕಿದ ಬೆಕ್ಕನ್ನು ಕಳೆದುಕೊಂಡಿದ್ದ ಸ್ಕಾಟ್ಲೆಂಡಿನ ಮಹಿಳೆಯೊಬ್ಬರು 17 ವರ್ಷಗಳ ಬಳಿಕ ಅದೇ ಬೆಕ್ಕನ್ನು ಮತ್ತೆ ಪಡೆದ ರೋಚಕಕಾರಿ ಘಟನೆ ನಡೆದಿದೆ.

    ಕಿಮ್‍ಕೋಲಿನ್ ಬೆಕ್ಕೊಂದನ್ನು ಸಾಕಿದ್ದರು. ಅದಕ್ಕೆ ಟಿಲ್ಲಿ ಎಂಬ ಹೆಸರಿಟ್ಟಿದ್ದರು. ಆದರೆ ಕಿಮ್‍ಕೋಲಿನ್ ಅವರು ಇಂಗ್ಲೆಂಡಿನಿಂದ ಸ್ಕಾಟ್ಲೆಂಡ್‍ನ ಮಿಡ್ಲೋಥಿಯನ್‍ಗೆ ಮನೆ ಬದಲಾವಣೆ ಮಾಡುವ ವೇಳೆ ಟಿಲ್ಲಿ ತಪ್ಪಿಸಿಕೊಂಡಿತ್ತು. ಆದರೂ ಛಲ ಬಿಡದ ಕಿಮ್ ತಮ್ಮ ಮುದ್ದಿನ ಬೆಕ್ಕು ಟಿಲ್ಲಿಯನ್ನು ಹುಡುಕುವ ಸಲುವಾಗಿ ನಿರಂತರವಾಗಿ ಪೋಸ್ಟ್‍ಗಳನ್ನು ಹಾಕಿದ್ದಾರೆ.ಇದರ ಫಲವಾಗಿ 17 ವರ್ಷಗಳ ಬಳಿಕ ಆ ಬೆಕ್ಕು ಅವರಿಗೆ ಮತ್ತೆ ಸಿಕ್ಕಿದೆ. ಇದಕ್ಕಾಗಿ ಅವರು ಬೆಕ್ಕಿಗೆ ಅಳವಡಿಸಿದ್ದ ಮೈಕ್ರೋಚಿಪ್‍ಗೆ ಧನ್ಯವಾದ ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಿಮ್‍ಕೋಲಿನ್ ಅವರು, ಟೆಲ್ಲಿ 17 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಜಾಗದಲ್ಲೇ ಪ್ರತ್ಯೇಕ್ಷವಾಗಿದ್ದಾಳೆ. ಬೆಕ್ಕು ಸಿಕ್ಕಿರುವ ಸಂತೋಷವನ್ನು ನನಗೆ ತಿಳಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ಕುರಿತ ಹೈಕೋರ್ಟ್‌ ತೀರ್ಪನ್ನು ನಾನು ಒಪ್ಪಲ್ಲ: 15 ಟ್ವೀಟ್‌ ಮಾಡಿದ ಓವೈಸಿ

    20ನೇ ವರ್ಷಕ್ಕೆ ಕಾಲಿಡಲಿರುವ ಟಿಲ್ಲಿ ಟ್ಯೂಮರ್‍ನಿಂದ ಬಳಲುತ್ತಿದ್ದಾಳೆ. ಇನ್ನೂ ಕೆಲವೇ ದಿನ ಬದುಕುಳಿಯಲಿದೆ. ಈ ಹಿನ್ನೆಲೆಯಲ್ಲಿ ಬೆಕ್ಕಿಗೆ ವೈದ್ಯರು ತುರ್ತು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶಾ ಪ್ರಯತ್ನ ಇದಾಗಿತ್ತು: ಕೈ ವಿರುದ್ಧ ಬಿಜೆಪಿ ವಾಗ್ದಾಳಿ

     

  • ಸ್ಕಾಟ್ಲೆಂಡ್ ಮೇಲೆ ಸವಾರಿ ಮಾಡಿದ ಭಾರತ – 8 ವಿಕೆಟ್‍ಗಳ ಜಯದೊಂದಿಗೆ ಸೆಮೀಸ್ ಆಸೆ ಜೀವಂತ

    ಸ್ಕಾಟ್ಲೆಂಡ್ ಮೇಲೆ ಸವಾರಿ ಮಾಡಿದ ಭಾರತ – 8 ವಿಕೆಟ್‍ಗಳ ಜಯದೊಂದಿಗೆ ಸೆಮೀಸ್ ಆಸೆ ಜೀವಂತ

    ದುಬೈ: ಸ್ಕಾಟ್ಲೆಂಡ್ ತಂಡದ ಮೇಲೆ ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಮಿಂಚಿದ ಭಾರತ ತಂಡ 8 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ.

    ಸ್ಕಾಟ್ಲೆಂಡ್ ನೀಡಿದ 86 ರನ್‍ಗಳ ಗುರಿ ಬೆನ್ನಟ್ಟಿದ ಭಾರತ ತಂಡ 6.3 ಓವರ್‍ ಗಳಲ್ಲಿ 89 ರನ್ ಬಾರಿಸಿ 8 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿದೆ. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಬೌಂಡರಿ, ಸಿಕ್ಸರ್‍ ಗಳ ಸುರಿಮಳೆ ಗೈದರು. ಈ ಜೋಡಿ ಮೊದಲ ವಿಕೆಟ್‍ಗೆ 70 ರನ್ (30 ಎಸೆತ) ಜೊತೆಯಾಟವಾಡಿತು. ರೋಹಿತ್ ಶರ್ಮಾ 30 ರನ್ (16 ಎಸೆತ, 5 ಬೌಂಡರಿ, 1 ಸಿಕ್ಸ್) ಔಟ್ ಆದರೆ, ರಾಹುಲ್ 50 ರನ್ (19 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಕಡೆಗೆ ಭಾರತ ತಂಡ 6.3 ಓವರ್‍ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 89ರನ್ ಸಿಡಿಸಿ ಜಯ ದಾಖಲಿಸಿತು. ಈ ಮೂಲಕ ಭಾರತ ತಂಡದ ನೆಟ್ ರನ್ ರೇಟ್ +1.619ಕ್ಕೆ ಏರಿದೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಡಲ್ ಆದ ಚಾಂಪಿಯನ್ ಆಟಗಾರರು – ಸೂಪರ್ 12 ಹಂತದಲ್ಲೇ ಔಟ್

    ಜಡೇಜಾ ಜಾದೂ, ಶಮಿ ಸಖತ್ ಬೌಲಿಂಗ್

    ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ ಭಾರತ ತಂಡದ ಆಲ್‍ರೌಂಡರ್ ರವೀಂದ್ರ ಜಡೇಜಾ ಮತ್ತು ವೇಗಿ ಮೊಹಮ್ಮದ್ ಶಮಿ ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್ ಅಲ್ಪ ಮೊತ್ತಕ್ಕೆ ಕುಸಿಯಿತು. ಸ್ಕಾಟ್ಲೆಂಡ್ ಪರ ಜಾರ್ಜ್ ಮುನ್ಸಿ 24 ರನ್ (19 ಎಸೆತ, 4 ಬೌಂಡರಿ, 1 ಸಿಕ್ಸ್) ಕ್ಯಾಲಮ್ ಮ್ಯಾಕ್ಲಿಯೋಡ್ 16 ರನ್ (28 ಎಸೆತ), ಮೈಕೆಲ್ ಲೀಸ್ಕ್ 21 ರನ್ (12 ಎಸೆತ, 2 ಬೌಂಡರಿ, 1 ಸಿಕ್ಸ್) ಮಾರ್ಕ್ ವ್ಯಾಟ್ 14 ರನ್ (13 ಎಸೆತ, 2 ಬೌಂಡರಿ) ಹೊರತುಪಡಿಸಿ ಉಳಿದ 7 ಜನ ಆಟಗಾರರು ಒಂದಂಕಿ ಮೊತ್ತಕ್ಕೆ ಔಟ್ ಆದರು. ಸ್ಕಾಟ್ಲೆಂಡ್ 17.4 ಓವರ್‍ ಗಳಲ್ಲಿ 85 ರನ್‍ಗೆ ಆಲ್‍ಔಟ್ ಆಯಿತು. ಇದನ್ನೂ ಓದಿ: ಟೀಂ ಇಂಡಿಯಾ ಸೆಮಿಫೈನಲ್ ಕನಸು ನನಸಾಗಲು ಇದೊಂದೇ ಮಾರ್ಗ

    ಭಾರತದ ಪರ ಜಡೇಜಾ ಮತ್ತು ಶಮಿ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ಬುಮ್ರಾ 2 ಮತ್ತು ಅಶ್ವಿನ್ 1 ವಿಕೆಟ್ ಪಡೆದರು.

  • 5 ವರ್ಷದ ಪೋರಿಗೆ ಬಾಯ್‍ಫ್ರೆಂಡ್ ಜೊತೆ ಮದ್ವೆ- ಸಾವಿನಂಚಿನ ಬಾಲೆಯ ಆಸೆ ಈಡೇರಿಸಿದ ಪೋಷಕರು

    5 ವರ್ಷದ ಪೋರಿಗೆ ಬಾಯ್‍ಫ್ರೆಂಡ್ ಜೊತೆ ಮದ್ವೆ- ಸಾವಿನಂಚಿನ ಬಾಲೆಯ ಆಸೆ ಈಡೇರಿಸಿದ ಪೋಷಕರು

    ಎಡಿನ್ಬರ್ಗ್(ಸ್ಕಾಟ್ಲೆಂಡ್): 5 ವರ್ಷದ ಬಾಲಕಿಯೊಬ್ಬಳು ತನ್ನ ಬೆಸ್ಟ್ ಫ್ರೆಂಡ್ ಜೊತೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿರೋ ಘಟನೆ ಸ್ಕಾಟ್ಲೆಂಡ್‍ನಲ್ಲಿ ನಡೆದಿದೆ.

    ಕ್ಯಾನ್ಸರ್‍ನಿಂದಾಗಿ ಸಾವಿನಂಚಿನಲ್ಲಿದ್ದ ಐದು ವರ್ಷದ ಈಲೀದ್ ಪ್ಯಾಟರ್ಸನ್ ಎಂಬಾಕೆ ಮದುವೆಯಾದ ಬಾಲಕಿ. ಎರಡು ವರ್ಷ ವಯಸ್ಸಿನಲ್ಲಿರುವಾಗಲಿಂದಲೇ ಬಾಲಕಿ ಕ್ಯಾನ್ಸರ್ ನಿಂದ ಬಳುತ್ತಿದ್ದಳು. ಈಕೆ ತನ್ನ ಗೆಳೆಯ ಹ್ಯಾರಿಸನ್ ಗ್ರಯರ್ ಎಂಬಾತನ್ನು ಮದುವೆಯಾಗುವ ಕನಸು ಹೊಂದಿದ್ದಳು.

    ಚಿಕ್ಕವರಾಗಿದ್ದರೂ ಇಬ್ಬರೂ ಒಬ್ಬರನೊಬ್ಬರು ಮೆಚ್ಚಿಕೊಂಡಿದ್ದರು. ಹ್ಯಾರಿಸನ್ ಕೂಡ ನಾನು ಆಕೆಯನ್ನು ಪ್ರೀತಿಸಿಸುತ್ತಿದ್ದೇನೆ. ಹಾಗೂ ಆಕೆಯನ್ನು ಮದುವೆಯಾಗುವುದಾಗಿ ಹೇಳಿಕೊಳ್ಳುತ್ತಿದ್ದನು ಅಂತಾ ಈಲೀದ್ ತಂದೆ, ತಾಯಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಅಲ್ಲದೇ ಈಲೀದ್ ಕೂಡ ಆಸ್ಪತ್ರೆಯಲ್ಲಿ ದಾದಿಯರ ಜೊತೆ ನನಗೆ ಬಾಯ್ ಫ್ರೆಂಡ್ ಇದ್ದಾನೆ. ನಾವಿಬ್ಬರೂ ಮುಂದೊಂದು ದಿನ ಮದುವೆಯಾಗುತ್ತೇವೆ ಅಂತೆಲ್ಲ ಹೇಳುತ್ತಿದ್ದಳು.

    ಐದು ವರ್ಷದ ಪುಟ್ಟ ಬಾಲಕಿಗೆ ಕ್ಯಾನ್ಸರ್ ಇದೆ ಎಂದು ವೈದ್ಯರು ಪತ್ತೆ ಮಾಡುವಷ್ಟರಲ್ಲಿ ಅದು ಇಡೀ ದೇಹಕ್ಕೆ ಹರಡಿತ್ತು. ಹೀಗಾಗಿ ಬಾಲಕಿಯ ಪೋಷಕರು ಕೊನೆಯ ಆಸೆ ಏನೆಂಬುವುದನ್ನು ಕೇಳಿದ್ದಾರೆ. ಈ ಬಾಲಕಿ ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಯಾಗಬೇಕು. ಇದೇ ನನ್ನ ಕೊನೆಯ ಆಸೆಗಳಲ್ಲಿ ಮೊದಲೆನೆಯದು ಎಂದಿದ್ದಾಳೆ. ಅಂತೆಯೇ ಇಬ್ಬರ ಪೋಷಕರೂ ಒಪ್ಪಿ ಅದ್ಧೂರಿಯಾಗಿಯೇ ಈಲೀದ್ ಬಾಯ್ ಫ್ರೆಂಡ್ 6 ವರ್ಷದ ಹ್ಯಾರಿಸನ್ ಜೊತೆ ಮದುವೆ ಮಾಡಿದ್ದಾರೆ. ಸೈಂಟ್ ಕ್ರಿಸ್ಟೋಫರ್‍ನ ನೆಕ್ಲೇಸ್ ಗಳನ್ನು ವಿನಿಮಯ ಮಾಡಿಕೊಂಡು ಇಬ್ಬರೂ ಮದುವೆಯಾಗಿದ್ದಾರೆ. ಮದುವೆಗೆ ಆಗಮಿಸಿದ ಎಲ್ಲರೂ ಪ್ರೀತಿಪೂರ್ವಕವಾಗಿಯೇ ಇಬ್ಬರಿಗೂ ಶುಭಾಶಯ ತಿಳಿಸಿದ್ದಾರೆ.

    ಈ ಬಗ್ಗೆ ಈಲೀದ್ ತಂದೆ ಗೈಲ್ ಪತ್ರಿಕೆಯೊಂದಕ್ಕೆ ಮಾತನಾಡಿ, ಮಗಳ ಮದುವೆ ನೋಡಿ ನಿಜಕ್ಕೂ ಒಂದು ಬಾರಿ ಕಣ್ಣೀರು ಬಂತು. ಆದ್ರೆ ಕೂಡಲೇ ನಾನು ಅಳಬಾರದು ಅಂದುಕೊಂಡು ಸುಮ್ಮನಾದೆ. ನನ್ನ ಜೀವನದಲ್ಲಿ ಇದೊಂದು ಅದ್ಭುತ ದಿನವಾಗಿದೆ ಅಂತಾ ತಿಳಿಸಿದ್ದಾರೆ.