ಟಾಲಿವುಡ್‌ನಲ್ಲಿ ಶ್ರೀಲೀಲಾಗೆ (Sreeleel) ಭರ್ಜರಿ ಡಿಮ್ಯಾಂಡ್ ಇದೆ. ಕನ್ನಡ ಸಿನಿಮಾಗೆ ಮತ್ತೆ ಬರಲ್ವಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡ್ತಿದೆ. ತೆಲುಗಿನಲ್ಲಿ ಗಟ್ಟಿ ನೆಲೆ ನಿಲ್ಲುವ ಲಕ್ಷಣವಿದೆ. ಹೀಗಿರುವಾಗ ಸ್ಟಾರ್ ನಟರಾದ ರವಿತೇಜ (Raviteja), ವಿಜಯ್ ದೇವರಕೊಂಡ (Vijay Devarakonda) ನಟನೆಯ ಸಿನಿಮಾಗಳಿಗೆ ಶ್ರೀಲೀಲಾ ಕೈಕೊಟ್ಟಿದ್ದಾರೆ.

ಸೆ.28ರಂದು ರಿಲೀಸ್ ಆಗುತ್ತಿರುವ ‘ಸ್ಕಂದ’ ಸಿನಿಮಾ ಸೇರಿದಂತೆ 7ಕ್ಕೂ ಹೆಚ್ಚು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ನಡುವೆ ರವಿತೇಜ, ವಿಜಯ್ ದೇವರಕೊಂಡ ನಟನೆಯ ಸಿನಿಮಾದಿಂದ ಕಾರಣಾಂತರಗಳಿಂದ ಹೊರಬಂದಿದ್ದಾರೆ. ಈ ಚಿತ್ರಗಳು ಈಗ ರಶ್ಮಿಕಾ ಮಂದಣ್ಣ ಪಾಲಾಗಿದೆ. ಇಬ್ಬರು ಕನ್ನಡತಿಯರ ನಡುವೆ ಸಖತ್ ಪೈಪೋಟಿಯಿದ್ದು, ಸ್ಟಾರ್ ನಟರಿಗೆ ಜೋಡಿಯಾಗ್ತಿದ್ದಾರೆ.

ಭಗವಂತ ಕೇಸರಿ, ಆದಿಕೇಶವ, ಗುಂಟೂರು ಖಾರಂ, ಉಸ್ತಾದ್ ಭಗತ್ ಸಿಂಗ್ ಸೇರಿದಂತೆ ಹಲವು ಸಿನಿಮಾಗಳು ಶ್ರೀಲೀಲಾ ಕೈಯಲ್ಲಿವೆ. ಇದನ್ನೂ ಓದಿ:ನಿತ್ಯಾ ಮೆನನ್ ಜೊತೆ ತಮಿಳು ನಟ ಅನುಚಿತವಾಗಿ ವರ್ತಿಸಿದ್ರಾ? ಮೈನಾ ನಟಿ ಸ್ಪಷ್ಟನೆ
ಶ್ರೀಲೀಲಾ (Sreeleela) ನಟಿಸಿದ ತೆಲುಗಿನ 3ನೇ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ‘ಧಮಾಕ’ (Dhamaka) ಸಿನಿಮಾ ಮೂಲಕ ಸಕ್ಸಸ್ ಕಂಡ ನಟಿ ಈಗ ಸ್ಕಂದ ಚಿತ್ರದ ಮೂಲಕ ಗೆದ್ದು ಬೀಗುತ್ತಾ ಕಾಯಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


ರಾಮ್ ಪೋತಿನೇನಿ (Ram Pothineni)- ಶ್ರೀಲೀಲಾ ನಟನೆಯ ‘ಸ್ಕಂದ’ ಸಿನಿಮಾ ಸೆಪ್ಟೆಂಬರ್ 15ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ, ಈಗ ತಂಡ ಸಿನಿಮಾ ರಿಲೀಸ್ ದಿನಾಂಕವನ್ನು ಎರಡು ವಾರ ಮುಂದಕ್ಕೆ ಹಾಕಿದೆ. ಸೆ.28ರಂದು ಚಿತ್ರ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಿಕೊಂಡಿದೆ.
ಬೋಯಪಾಟಿ ಶ್ರೀನು ಆಕ್ಷನ್ ಕಟ್ ಹೇಳಿರುವ ‘ಸ್ಕಂದ’ ಸಿನಿಮಾದ ಟ್ರೈಲರ್, ಹಾಡುಗಳು ಭಾರೀ ಸದ್ದು ಮಾಡಿವೆ. ಪ್ರೀ ರಿಲೀಸ್ ವ್ಯವಹಾರದಲ್ಲಿಯೂ ದಾಖಲೆ ಬರೆದಿರುವ ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ.