Tag: ಸ್ಕಂದ ಅಶೋಕ್

  • ಸೀರಿಯಲ್ ನಟ ಸ್ಕಂದ ಅಶೋಕ್ ಇನ್‌ಸ್ಟಾಗ್ರಾಮ್‌ ಹ್ಯಾಕ್ – ವಂಚನೆಗೆ ಯತ್ನ!

    ಸೀರಿಯಲ್ ನಟ ಸ್ಕಂದ ಅಶೋಕ್ ಇನ್‌ಸ್ಟಾಗ್ರಾಮ್‌ ಹ್ಯಾಕ್ – ವಂಚನೆಗೆ ಯತ್ನ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಒಬ್ಬರಿಲ್ಲೊಬ್ಬರು ಒಂದಿಲ್ಲೊಂದು ಪ್ರಕರಣಗಳಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ. ಅದೇ ರೀತಿ ಸೀರಿಯಲ್ ನಟ ಸ್ಕಂದ ಅಶೋಕ್ (Skanda Ashok) ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ ಮಾಡಿ ವಂಚನೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಸ್ಕಂದ ಅಶೋಕ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನ (Instagram Account Hack) ದುರ್ಬಳಕೆ ಮಾಡಿಕೊಂಡು ವಂಚನೆಗೆ ಯತ್ನಿಸಿರುವ ಘಟನೆ ಮೈಕ್ರೋ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: I.N.D.I.A ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಮೋದಿ ಜೈಲಿಗೆ – ಮಿಸಾ ಭಾರತಿ

    ಸೈಬರ್ ವಂಚಕರು ಸ್ಕಂದ ಅಶೋಕ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿ ಅವರ ಫಾಲೋವರ್ಸ್‌ಗಳಿಗೆ ಮೆಸೇಜ್ ಕಳುಹಿಸಿ, ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಶೋಕ್ ಮೈಕ್ರೋ ಲೇಔಟ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಅಕೌಂಟ್ ಹ್ಯಾಕ್ ಆದ ಲೊಕೆಷನ್ ಪರಿಶೀಲಿಸಿದ್ರೆ ಚೆನೈ ಹಾಗೂ ಬೆಂಗಳೂರು ಮತ್ತು ನೈಜೀರಿಯಾ ಸ್ಥಳಗಳಲ್ಲಿ ಪತ್ತೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್- ಕಾಂಗ್ರೆಸ್‌ನಿಂದ ಮಿಡ್‍ನೈಟ್ ಆಪರೇಷನ್

  • ಮತ್ತೆ ಲವರ್‌ ಬಾಯ್‌ ಆಗಿ ಕಿರುತೆರೆಯತ್ತ ಸ್ಕಂದ ಅಶೋಕ್

    ಮತ್ತೆ ಲವರ್‌ ಬಾಯ್‌ ಆಗಿ ಕಿರುತೆರೆಯತ್ತ ಸ್ಕಂದ ಅಶೋಕ್

    ‘ರಾಧಾ ರಮಣ’ (Radha Ramana) ಖ್ಯಾತಿಯ ಸ್ಕಂದ ಅಶೋಕ್ (Skanda Ashok) ಕಿರುತೆರೆಯಲ್ಲಿ ಮತ್ತೆ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ್ದಾರೆ. ‘ಅವನು ಮತ್ತು ಶ್ರಾವಣಿ’ ಎಂಬ ಸೀರಿಯಲ್ ಮೂಲಕ ಟಿವಿ ಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಅಪ್ಪನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರೂಪೇಶ್ ಶೆಟ್ಟಿ

    ಬಹುಭಾಷಾ ನಟ ಸ್ಕಂದ ಅಶೋಕ್, ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಕಡೆಯದಾಗಿ ‘ಸರಸು’ (Sarasu) ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅಭಿಮನ್ಯು ಆಗಿ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ. ಮುದ್ದಾದ ಪ್ರೇಮ ಕಥೆಯ ಜೊತೆ ಮೋಡಿ ಮಾಡಲು ಸ್ಕಂದ ಸಜ್ಜಾಗಿದ್ದಾರೆ.

    ರಾಧಾ ರಮಣ (Radha Ramana) ಎಂಬ ಸೀರಿಯಲ್‌ನಲ್ಲಿ ರಮಣ ಎಂಬ ಪಾತ್ರ ಸ್ಕಂದಗೆ ಹೆಚ್ಚಿನ ಜನಪ್ರಿಯತೆ ನೀಡಿತ್ತು. ರಾಧಾ ಮಿಸ್ ಗಂಡನಾಗಿ, ಪಕ್ಕಾ ಬ್ಯುಸಿನೆಸ್ ಮ್ಯಾನ್ ರೋಲ್‌ನಲ್ಲಿ ಜನಮನ ಸೆಳೆದಿದ್ದರು. ಈಗ ಸ್ಕಂದ ಹೊಸ ಸೀರಿಯಲ್ ‘ಅವನು ಮತ್ತು ಶ್ರಾವಣಿ’ (Avanu Matte Shravani) ಪ್ರೋಮೋ ರಿವೀಲ್ ಆಗಿದೆ. ಈ ಮೂಲಕ ಸ್ಕಂದ ಮತ್ತೆ ಮೋಡಿ ಮಾಡ್ತಿದ್ದಾರೆ.

    ಮಲಯಾಳಂನ ನೋಟ್ ಬುಕ್ (Note Book) ಎಂಬ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಚಿಕ್ಕಮಗಳೂರಿನ ಪ್ರತಿಭೆ ಸ್ಕಂದ ಪಾದಾರ್ಪಣೆ ಮಾಡಿದ್ದರು. ಚಾರುಲತಾ, ಪಾಸಿಟಿವ್, ಮಲ್ಲಿ ಮಲ್ಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸ್ಕಂದ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿಯ ಸೀಮಂತ ಸಂಭ್ರಮದಲ್ಲಿ ‘ರಾಧಾರಮಣ’ ಖ್ಯಾತಿಯ ನಟ

    ಪತ್ನಿಯ ಸೀಮಂತ ಸಂಭ್ರಮದಲ್ಲಿ ‘ರಾಧಾರಮಣ’ ಖ್ಯಾತಿಯ ನಟ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿಯ ನಟ ಸ್ಕಂದ ಅಶೋಕ್ ತಂದೆಯಾಗುತ್ತಿದ್ದು, ತಮ್ಮ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ.

    ಸ್ಕಂದ ಪತ್ನಿ ಶಿಖಾ ಪ್ರಸಾದ್ ಎರಡು ತಿಂಗಳ ಹಿಂದೆಯಷ್ಟೆ ತಾವು ಗರ್ಭಿಣಿ ಎಂಬ ವಿಚಾರವನ್ನು ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. ಇದೀಗ ಸ್ಕಂದ ತಮ್ಮ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರೆವೇರಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕುಟುಂಬದರು ಮತ್ತು ಆಪ್ತರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಶಿಖಾ ಪ್ರಸಾದ್‍ಗೆ ಆಶೀರ್ವಾದಿಸಿದ್ದಾರೆ. ಸೀಮಂತದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಪತ್ನಿಯ ಜೊತೆ ಸ್ಕಂದ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ.

    ಸ್ಕಂದ ಅಶೋಕ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ತನ್ನ ಪ್ರೇಯಸಿ ಶಿಖಾ ಪ್ರಸಾದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2018 ಮೇ ತಿಂಗಳಲ್ಲಿ ಸ್ಕಂದ ಅಶೋಕ್ ಹಾಗೂ ಶಿಖಾ ಪ್ರಸಾದ್ ವಿವಾಹ ಮಹೋತ್ಸವ ಬೆಂಗಳೂರು ಅರಮನೆಯಲ್ಲಿ ಅದ್ಧೂರಿಯಾಗಿ ನೇರವೇರಿತ್ತು. ಕಿರುತೆರೆಯ ಗಣ್ಯರು ಹಾಗೂ ಸ್ಯಾಂಡಲ್‍ವುಡ್ ನಟ-ನಟಿಯರು ಸ್ಕಂದ ಅಶೋಕ್ ಮದುವೆಯಲ್ಲಿ ಭಾಗವಹಿಸಿದ್ದರು.

    ನಟ ಸ್ಕಂದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಸೀರಿಯಲ್ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ. ಧಾರಾವಾಹಿಯಲ್ಲಿ ರಮಣ್ ಪಾತ್ರದಲ್ಲಿ ಅಭಿನಯಿಸಿದ್ದರು. ಹೀಗಾಗಿ ಕಿರುತೆರೆಯಲ್ಲಿ ರಮಣ್ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.

  • ‘ರಣಾಂಗಣ’ದಲ್ಲಿ ಸರ್ಜಿಕಲ್ ಸ್ಟ್ರೈಕ್!

    ‘ರಣಾಂಗಣ’ದಲ್ಲಿ ಸರ್ಜಿಕಲ್ ಸ್ಟ್ರೈಕ್!

    ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಹಿಂದಿಯಲ್ಲಿ ಉರಿ ಅನ್ನೋ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಭಾರತೀಯ ಯೋಧರು ಉಗ್ರರ ವಿರುದ್ದ ಹೇಗೆಲ್ಲಾ ಸೆಣಸಾಡಿ ಜಯಿಸಿದರು ಎಂಬುದನ್ನು ಅದ್ಭುತವಾಗಿ ಕಟ್ಟಿಕೊಡಲಾಗಿತ್ತು. ಈ ಕಾರಣಕ್ಕೆ ಈ ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಈಗ ಅಂಥದ್ದೇ ಸಿನಿಮಾವೊಂದು ಸ್ಯಾಂಡಲ್‍ವುಡ್ಡಿನಲ್ಲಿ ನಿರ್ಮಾಣವಾಗುತ್ತಿದೆ.

    ಮೊನ್ನೆ ಮೊನ್ನೆ ಪುಲ್ವಾಮದಲ್ಲಿ ನಡೆದ ಹತ್ಯೆಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳನ್ನು ನಮ್ಮ ಸೈನಿಕರು ಧ್ವಂಸಗೊಳಿಸಿದ್ದು ಸೇರಿದಂತೆ ಹಲವಾರು ಪ್ರಮುಖ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾಗೆ ಕಥೆ ಹೆಣೆಯಲಾಗಿದೆ. ಅಂದಹಾಗೆ ಈ ಸಿನಿಮಾದ ಹೆಸರು `ರಣಾಂಗಣ’.

    ಈಗಾಗಲೇ ಮುಹೂರ್ತ ಆಚರಿಸಿಕೊಂಡಿರುವ ಈ ಚಿತ್ರದಲ್ಲಿ ನಮ್ಮ ಭಾರತೀಯ ಯೋಧರ ಹೋರಾಟದ ನೈಜ ಘಟನೆಗಳ ಕುರಿತಾದ ಕಥೆಯನ್ನು ಹೇಳಲಾಗುತ್ತಿದೆ. ಹೊಸ ಬಗೆಯು ಕಥಾನಕ ಹೊಂದಿರುವ ಈ ಚಿತ್ರ ಎರಡು ಛಾಪ್ಟರ್‍ಗಳಲ್ಲಿ ಮೂಡಿ ಬರಲಿದ್ದು, ಮೊದಲನೆಯ ಭಾಗದಲ್ಲಿ ನಿಜ ಜೀವನದ ಹಲವಾರು ಅಂಶಗಳನ್ನು ತೆಗೆದುಕೊಳ್ಳಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಸಂಪೂರ್ಣವಾಗಿ ಸೈನಿಕರ ಕುರಿತಂತೆ ನಿರ್ಮಾಣ ಮಾಡುತ್ತಿರುವ ವಿಶೇಷ ಚಲನಚಿತ್ರ ಇದಾಗಿದೆ.

    ಮಂಗಳೂರು ಬಂದರು, ರಾಮೇಶ್ವರ, ಹಿಮಾಚಲ ಪ್ರದೇಶ ಹಾಗೂ ಯುರೋಪ್ ನಲ್ಲಿರುವ ಸರ್ಬಿಯಾ ಸೇರಿದಂತೆ ಹಲವಾರು ವಿಭಿನ್ನ ಲೊಕೇಶನ್ ಗಳಲ್ಲಿ ರಣಾಂಗಣ ಚಿತ್ರದ ಚಿತ್ರೀಕರಣವನ್ನು ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಇದರ ಜೊತೆಗೆ ಚಿತ್ರದ ಕಥೆಯಲ್ಲಿ ಬರುವ ಯುದ್ಧದ ಸನ್ನಿವೇಶಗಳಿಗೆ ತಕ್ಕಂತೆ ಸೆಟ್ ಹಾಕಲು ಕಲಾ ನಿರ್ದೇಶಕ ಮನು ಜಗದ್ ಅವರು ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಮುಖವಾಗಿ ಭಾರತದ ಗಡಿ ಭಾಗದಲ್ಲಿ ನಡೆದ ಮೂರು ಪ್ರಮುಖ ಘಟನೆಗಳನ್ನು ತೆಗೆದುಕೊಂಡು ಕಥೆ ಹೆಣೆಯಲಾಗಿದೆ. ಆದರೆ ಆ ಬಗ್ಗೆ ಯಾವುದೇ ವಿವರವನ್ನು ಚಿತ್ರತಂಡ ಬಿಟ್ಟುಕೊಡಲಿಲ್ಲ. ಟಿ.ಎಸ್. ನಾಗಾಭರಣ, ವಾಸು ಅವರಂಥ ಹಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿ ಅನುಭವ ಪಡೆದಿರುವ ರೋಹಿತ್ ರಾವ್ ಇದೇ ಮೊದಲ ಬಾರಿಗೆ ಈ ಚಿತ್ರದ ಕತೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರು ಕನ್ನಡದಲ್ಲಿ ಈಗಾಗಲೇ ಹೆಸರು ಮಾಡಿರುವ ನಿರ್ದೇಶಕ ಮಹೇಶ್ ರಾವ್ ಅವರ ಸಹೋದರನಂತೆ.

    ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರೋಹಿತ್ ರಾವ್, ಗಡಿಯಲ್ಲಿ ನಮ್ಮ ದೇಶವನ್ನು ಕಾಯುತ್ತಿರುವ ಯೋಧ, ನಮಗೆ ಅನ್ನ ನೀಡಲು ಹೊಲದಲ್ಲಿ ಸದಾ ದುಡಿಯುವ ರೈತ, ಈ ಇಬ್ಬರೂ ಕಷ್ಟಪಡುತ್ತಿರುವುದರಿಂದಲೇ ನಾವುಗಳೆಲ್ಲಾ ನೆಮ್ಮದಿಯಿಂದ ಜೀವನ ನಡೆಸುತ್ತಿರುವುದು. ಇದನ್ನೇ ನಮ್ಮ ಚಿತ್ರದಲ್ಲಿ ಹೇಳಿದ್ದೇವೆ. ಈ ಚಿತ್ರವನ್ನು ನೋಡಿದ ಯಾರಿಗೇ ಆಗಲಿ ತಾನು ಕೂಡ ಸೈನ್ಯಕ್ಕೆ ಸೇರಬೇಕೆಂಬ ಉತ್ಸಾಹ ಖಂಡಿತ ಅವರಲ್ಲಿ ಮೂಡುತ್ತದೆ. ಜನವರಿ 15ರಂದು ಬರುವ ಸೈನಿಕರ ದಿನಾಚರಣೆಯಂದೇ ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಯೋಚಿಸಿದ್ದು, ಆ ವೇಳೆಗೆ ಚಿತ್ರವನ್ನು ಕಂಪ್ಲೀಟ್ ಮಾಡಲು ಪ್ರಯತ್ನ ಮಾಡುತ್ತೇವೆ. ಇದು ದೇಶಭಕ್ತಿಯನ್ನು ಸಾರುವ ಕಥೆ ಹೊಂದಿರುವ ಚಿತ್ರವಾಗಿರುವ ಕಾರಣ ಕನ್ನಡ ಸೇರಿದಂತೆ ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಕೂಡ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ನಮ್ಮ ಭಾರತದಲ್ಲಿ ಒಟ್ಟು ಏಳು ಗಡಿಭಾಗಗಳಿವೆ, ಅದೇ ರೀತಿ ಈ ಚಿತ್ರದಲ್ಲಿ ಏಳು ಜನ ಖಳ ನಾಯಕರುಗಳು ನಟಿಸಲಿದ್ದಾರೆ. ಈ ಪೈಕಿ ಮೊದಲ ಹಂತದಲ್ಲಿ ರಘು, ಯೋಗೀಶ್ ಆಯ್ಕೆಯಾಗಿದ್ದಾರೆ, ಉಳಿದವರ ಹೆಸರನ್ನು ಸದ್ಯದಲ್ಲೇ ಅನೌನ್ಸ್ ಮಾಡುತ್ತೇವೆ ಎಂದರು.

    ಕಿರುತೆರೆಯ ಫೇಮಸ್ ಧಾರಾವಾಹಿ ರಾಧಾ ರಮಣ ಖ್ಯಾತಿಯ ನಟ ಸ್ಕಂದ ಅಶೋಕ್ ಈ ಚಿತ್ರದಲ್ಲಿ ನಾಯಕನಾಗಿ ಹಾಗೂ ದೇಶ ಕಾಯುವ ಸೈನಿಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಾಯಕಿ ಶಾನ್ವಿ ಶ್ರೀವಾತ್ಸವ್ ಆರಂಭದಲ್ಲಿ ಒಬ್ಬ ಪತ್ರಕರ್ತೆಯಾಗಿದ್ದು, ನಂತರ ಸೇನೆಗೆ ಸೇರುವ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಸೈನ್ಯಕ್ಕೆ ಸಂಬಂಧಿಸಿದ ಕಥೆ ಇರುವ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಇವರ ಆಸೆಯಾಗಿತ್ತಂತೆ. ಅದು ಈ ಮೂಲಕ ಸಾಕಾರಗೊಂಡಿದೆ.

  • ಅದ್ಧೂರಿಯಾಗಿ ನಡೆಯಿತು ರಮಣನ ಮದುವೆ- ವಿಡಿಯೋ ನೋಡಿ

    ಅದ್ಧೂರಿಯಾಗಿ ನಡೆಯಿತು ರಮಣನ ಮದುವೆ- ವಿಡಿಯೋ ನೋಡಿ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಾಧಾ ರಮಣ ಧಾರಾವಾಹಿಯ ನಟ ಸ್ಕಂದ ಆಶೋಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುದಿನದ ಗೆಳತಿ ಜೊತೆ ಸ್ಕಂದ ಮದುವೆಯಾಗಿದ್ದಾರೆ.

    ಸ್ಕಂದ ಅಶೋಕ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ತನ್ನ ಪ್ರೇಯಸಿ ಶಿಖಾ ಪ್ರಸಾದ್ ಜೊತೆ ತಮ್ಮ ಪೂರ್ತಿ ಜೀವನವನ್ನು ಕಳೆಯಲು ಆರಂಭಿಸಿದ್ದಾರೆ. ಮೇ 31ರಂದು ಸ್ಕಂದ ಅಶೋಕ್ ಹಾಗೂ ಶಿಖಾ ಪ್ರಸಾದ್ ವಿವಾಹ ಮಹೋತ್ಸವ ಬೆಂಗಳೂರು ಅರಮನೆಯಲ್ಲಿ ಅದ್ಧೂರಿಯಾಗಿ ನೇರವೇರಿತ್ತು. ಕಿರುತೆರೆಯ ಗಣ್ಯರು ಹಾಗೂ ಸ್ಯಾಂಡಲ್‍ವುಡ್ ನಟ-ನಟಿಯರು ಸ್ಕಂದ ಅಶೋಕ್ ಮದುವೆಯಲ್ಲಿ ಭಾಗವಹಿಸಿದ್ದರು.

    ಮದುವೆಯಲ್ಲಿ ಸ್ಕಂದ ಬಿಳಿ ಪಂಚೆ ಶಲ್ಯ ತೊಟ್ಟ ಮಿಂಚಿದರೆ ಶಿಖಾ ಪ್ರಸಾದ್ ಕೆಂಪು ಸೀರೆ ತೊಟ್ಟು ಮಿಂಚಿದ್ದಾರೆ. ಸ್ಕಂದ ಮದುವೆಯಲ್ಲಿ ಅವರು ನಾಯಕನಾಗಿ ನಟಿಸುತ್ತಿರುವ ರಾಧಾ ರಮಣ ಧಾರಾವಾಹಿ ತಂಡ ಭಾಗಿಯಾಗಿತ್ತು. ನಟಿ ಶ್ವೇತಾ ಪ್ರಸಾದ್, ಸುಜಾತ ಸೇರಿದಂತೆ ಹಲವರು ಸ್ಕಂದ ಮದುವೆಗೆ ಆಗಮಿಸಿ, ಶುಭ ಕೋರಿದ್ದರು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ಮೊದಲಾದ ಗಣ್ಯಾತಿಗಣ್ಯರು ಕೂಡ ಸ್ಕಂದ ಮದುವೆಯಲ್ಲಿ ಪಾಲ್ಗೊಂಡಿದ್ದರು.