Tag: ಸ್ಕಂದ

  • ಶ್ರೀಲೀಲಾಗೆ ಲಕ್ ಕೈ ಕೊಡ್ತಾ? ನಟಿಸಿದ ಎರಡೂ ಸಿನಿಮಾ ಅಟ್ಟರ್ ಫ್ಲಾಪ್

    ಶ್ರೀಲೀಲಾಗೆ ಲಕ್ ಕೈ ಕೊಡ್ತಾ? ನಟಿಸಿದ ಎರಡೂ ಸಿನಿಮಾ ಅಟ್ಟರ್ ಫ್ಲಾಪ್

    ಶ್ರೀಲೀಲಾ (Sreeleela) ಅಭಿಮಾನಿಗಳು ಕಂಗಾಲಾಗಿದ್ಧಾರೆ. ಇದೇನಾಗುತ್ತಿದೆ ನಮ್ಮ ದೇವತೆ ಬದುಕಿನಲ್ಲಿ? ನಾಯಕಿ ಪಟ್ಟ ಕಳೆದುಕೊಳ್ಳುತ್ತಾರಾ ಲೀಲಾ. ಅವಸರಕ್ಕೆ ಬಿದ್ದು ಅವಲಕ್ಷಣ ಮಾಡಿಸಿಕೊಂಡರಾ, ಪ್ರಿನ್ಸ್ ಹಾಗೂ ಪವನ್ ಕಲ್ಯಾಣ್ (Pawan Kalyan) ಸಿನಿಮಾ ಕೈ ಹಿಡಿಯದಿದ್ದರೆ ಭವಿಷ್ಯದ ಗತಿ ಏನು? ಇದು ಖುದ್ದು ಶ್ರೀಲೀಲಾಗೂ ಕಂಗಾಲು ಮಾಡಿದೆ. ಏನದು ಸೀಕ್ರೆಟ್.

    ಶ್ರೀಲೀಲಾ ಅಭಿನಯದ ಮೂರು ಸಿನಿಮಾ ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾದವು. ಅದರಲ್ಲಿ ಬಾಲಕೃಷ್ಣ (Balayya) ಜೊತೆ ನಟಿಸಿದ, ಅಂದರೆ ಮಗಳಾಗಿ ಕಾಣಿಸಿದ್ದ ಭಗವಂತ ಕೇಸರಿ ಹಿಟ್ ಆಯಿತು. ಆದರೆ ಕ್ರೆಡಿಟ್ ಪೂರ್ತಿ ಬಾಲಯ್ಯ ನುಂಗಿ ನೀರು ಕುಡಿದರು. ಶ್ರೀಲೀಲಾ ಗೆದ್ದೂ ಸೋತರು. ಈ ನಡುವೆ ‘ಸ್ಕಂದ’ (Skanda) ಹಾಗೂ ‘ಆದಿಕೇಶವ’ ಬಂತು ನೋಡಿ. ‘ಸ್ಕಂದ’ ಚಿತ್ರದಲ್ಲಿ ಹಾಡು ಕೆಲವು ದೃಶ್ಯ ಅಷ್ಟೇ ಪಾಲಿಗೆ ಬಂದ ಪಂಚಾಮೃತ. ಇದನ್ನೂ ಓದಿ:ಕಾರ್ತಿಕ್‌ಗೆ ಗುನ್ನ ಕೊಟ್ಟ ಡ್ರೋನ್‌ಗೆ ‘ಬಿಗ್ ಬಾಸ್’ ತಿರುಮಂತ್ರ

    ಹತ್ತತ್ತು ಸಿನಿಮಾ ಕೈಯಲ್ಲಿವೆ. ಹ್ಯಾಪ್‌ನಿಂಗ್ ಸ್ಟಾರ್ ಶ್ರೀಲೀಲಾಗೆ ಪ್ರಿನ್ಸ್ ಹಾಗೂ ಪವನ್ ಜೊತೆ ಅವಕಾಶ ಸಿಕ್ಕಿದೆ. ಈಗಾಗಲೇ ಶ್ರೀಲೀಲಾ ಫ್ಯಾನ್ಸ್ ದಿಕ್ಕೆಟ್ಟಿದ್ದಾರೆ. ‘ಗುಂಟೂರು ಖಾರಂ’ ಹಾಗೂ ‘ಉಸ್ತಾದ್ ಭಗತ್‌ಸಿಂಗ್’ ಎರಡರಲ್ಲೂ ಶ್ರೀಲೀಲಾಗೆ ಹಾಡು ಮತ್ತು ಕುಣಿತಕ್ಕಷ್ಟೇ ಜಾಗ ಕೊಟ್ಟರೆ ಬದುಕು ಕಷ್ಟ ಕಷ್ಟ.

    ಅಕಸ್ಮಾತ್ ಅಲಾ ವೈಕುಂಠಪುರಂಲೋದಲ್ಲಿ ಪೂಜಾ ಹೆಗ್ಡೆಗೆ (Pooja Hegde) ಸಿಕ್ಕಂಥ ಅವಕಾಶ ಈಕೆಗೂ ದಕ್ಕಿದರೆ ಮಾತ್ರ ಬದುಕು ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ. ಮುಂಬರುವ ಅವಕಾಶಗಳಲ್ಲಿ ಶ್ರೀಲೀಲಾ ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ.

  • ‘ಧಮಾಕಾ’ ಬಳಿಕ ಮತ್ತೆ ಗೆದ್ದು ಬೀಗಿದ ಶ್ರೀಲೀಲಾ

    ‘ಧಮಾಕಾ’ ಬಳಿಕ ಮತ್ತೆ ಗೆದ್ದು ಬೀಗಿದ ಶ್ರೀಲೀಲಾ

    ನ್ನಡದ ಕಿಸ್ ಬ್ಯೂಟಿ ಶ್ರೀಲೀಲಾ (Sreeleela) ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಧಮಾಕಾ (Dhamaka) ಸಕ್ಸಸ್ ಬಳಿಕ ತೆಲುಗಿನ ತಮ್ಮ 3ನೇ ಚಿತ್ರ ‘ಸ್ಕಂದ’ (Skanda Film) ಮೂಲಕ ನಟಿ ಗಮನ ಸೆಳೆಯುತ್ತಿದ್ದಾರೆ. ಧಮಾಕ ಬಳಿಕ ಮತ್ತೆ ಲಕ್ಕಿ ನಟಿ ಶ್ರೀಲೀಲಾ ಗೆದ್ದಿ ಬೀಗುತ್ತಿದ್ದಾರೆ.

    ರಾಮ್ ಪೋತಿನೇನಿಗೆ ಜೊತೆಯಾಗಿ ‘ಸ್ಕಂದ’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಗೆದ್ದಿದ್ದಾರೆ. ಸೆ.28ರಂದು ಬಹುಭಾಷೆಗಳಲ್ಲಿ ರಿಲೀಸ್ ಆದ ಸ್ಕಂದ ಚಿತ್ರ ಈಗ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

    ‘ಸ್ಕಂದ’ ರಿಲೀಸ್ ಆದ ಮೊದಲ ದಿನ ಒಟ್ಟು 18.2 ಕೋಟಿ ರೂಪಾಯಿ ಗಳಿಸಿದೆ. 2 ದಿನಗಳಲ್ಲಿ 27.6 ಕೋಟಿ ಗಳಿಸುವ ಮೂಲಕ ಚಿತ್ರ ಪೀಕ್‌ನಲ್ಲಿದೆ. ವ್ಯಾಕ್ಸಿನ್ ವಾರ್, ಚಂದ್ರಮುಖಿ 2 ನಡುವೆ ಸ್ಕಂದ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ವಾರಾಂತ್ಯ ಶುರುವಾಗುತ್ತಿರೋ ಕಾರಣ, ಚಿತ್ರ ಮತ್ತಷ್ಟು ಕಲೆಕ್ಷನ್‌ ಆಗುವ ಬಗ್ಗೆ ನೀರೀಕ್ಷೆ ಇದೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಬ್ರೇಕ್‌ ಹಾಕಿದ ರಚಿತಾ- ಸೋಶಿಯಲ್‌ ಮೀಡಿಯಾದಲ್ಲಿ ನಟಿ ಮನವಿ

    ರಾಮ್ ಪೋತಿನೇನಿ-ಶ್ರೀಲೀಲಾ ಜೋಡಿಯನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ‘ಸ್ಕಂದ’ ಚಿತ್ರದಿಂದ ಶ್ರೀಲೀಲಾಗೆ ಕೆರಿಯರ್‌ಗೆ ಮತ್ತೆ ಪ್ಲಸ್ ಆಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿಗೆ ಮತ್ತಷ್ಟು ಬಂಪರ್ ಆಫರ್ ಅರಸಿ ಬರೋದು ಗ್ಯಾರಂಟಿ ಅಂತಿದ್ದಾರೆ ಸಿನಿಮಾ ಪ್ರೇಮಿಗಳು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗಿನ ‘ಸ್ಕಂದ’ ಚಿತ್ರದಲ್ಲಿ ಕನ್ನಡದ  ಡ್ಯಾನಿ ಕುಟ್ಟಪ್ಪ

    ತೆಲುಗಿನ ‘ಸ್ಕಂದ’ ಚಿತ್ರದಲ್ಲಿ ಕನ್ನಡದ ಡ್ಯಾನಿ ಕುಟ್ಟಪ್ಪ

    ನ್ನಡ ಚಿತ್ರರಂಗದಲ್ಲಿ ‘ಬೆಂಕಿ ಕಂಗಳ ನಟ’ ಎಂದೇ ಜನಪ್ರಿಯರಾಗಿರುವ ಡ್ಯಾನಿ ಕುಟ್ಟಪ್ಪ (Danny Kuttappa) ಈಗ ತೆಲುಗಿನಲ್ಲಿ (Telugu) ಅಬ್ಬರಿಸುವುದಕ್ಕೆ ಸಜ್ಜಾಗಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ತೆಲುಗಿನ ಮಾಸ್‍ ನಿರ್ದೇಶಕ ಬೋಯಾಪಾಟಿ ಶ್ರೀನು ನಿರ್ದೇಶನದ, ರಾಮ್‍ ಪೋತಿನೇನಿ ಅಭಿನಯದ ‘ಸ್ಕಂದ’ (Skanda) ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಡ್ಯಾನಿಗೆ ಟಾಲಿವುಡ್‍ ಹೊಸದೇನಲ್ಲ. ‘ಬಾಹುಬಲಿ’ ಚಿತ್ರದ ಮೂಲಕ ತೆಲುಗಿಗೆ ಹೊರಟ ಅವರು, ನಂತರ ‘ಗದ್ದಲಕೊಂಡ ಗಣೇಶ್‍’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಈಗ ‘ಸ್ಕಂದ’ ಚಿತ್ರದಲ್ಲಿ ಅತೀ ಮುಖ್ಯವಾದ ನೆಗೆಟಿವ್‍ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‍ನಲ್ಲಿ ಡ್ಯಾನಿ ಕುಟ್ಟಪ್ಪ ಅವರ ಪಾತ್ರದ ಪರಿಚಯವೂ ಇದೆ.

    ಅದರ ಜೊತೆಗೆ, ಇತ್ತೀಚೆಗೆ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಬೋಯಾಪಾಟಿ ಶ್ರೀನು, ಡ್ಯಾನಿ ಕುಟ್ಟಪ್ಪ ಅವರನ್ನು ಆಂಧ್ರದ ಜನತೆಗೆ ಪರಿಚಯಿಸಿಕೊಡುವ ಜೊತೆಗೆ, ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಡ್ಯಾನಿ ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಸಾವಿರಾರು ಜನರ ಮುಂದೆ ಹೊಗಳಿದ್ದಾರೆ. ತೆಲುಗಿನಲ್ಲಿ ‘ಅಖಂಡ’, ‘ಲೆಜೆಂಡ್‍’, ‘ಸಿಂಹ’ ಮುಂತಾದ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಬೋಯಾಪಾಟಿ ಶ್ರೀನು ಅವರಿಂದ ಮೆಚ್ಚುಗೆಯ ಮಾತುಗಳು ಕೇಳುವುದು ಅಷ್ಟು ಸುಲಭದ ಮಾತಲ್ಲ. ಅಂತಹ ಮಾತುಗಳನ್ನು ಕೇಳಿ ಡ್ಯಾನಿ ಖುಷಿಯಾಗಿದ್ದಾರೆ.

    ‘ಬೋಯಾಪಾಟಿ ಶ್ರೀನು ಅವರು ಪ್ರತಿ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಾರೆ. ಆ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದರಿಂದ ಹಿಡಿದು, ಆ ಪಾತ್ರ ಹೇಗಿರಬೇಕು, ಏನು ಮಾಡಬೇಕು ಎಂಬ ಸಣ್ಣಸಣ್ಣ ವಿವರಗಳಿಗೂ ಮಹತ್ವ ಕೊಡುತ್ತಾರೆ. ಯಾರಾದರೂ ಹಾಗೆ ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಜವಾಬ್ದಾರಿಯೂ ಇನ್ನಷ್ಟು ಹೆಚ್ಚುತ್ತದೆ. ಪಾತ್ರಕ್ಕೆ ಇನ್ನಷ್ಟು ಸಮರ್ಪಿಸಿಕೊಳ್ಳಬೇಕು ಎಂದು ಸ್ಫೂರ್ತಿ ಬರುತ್ತದೆ’ ಎನ್ನುತ್ತಾರೆ ಡ್ಯಾನಿ.  ‘ಸ್ಕಂದ’ ಚಿತ್ರಕ್ಕಾಗಿ 20 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ ಡ್ಯಾನಿ ಕುಟ್ಟಪ್ಪ. ರಾಮೋಜಿ ಫಿಲಂ ಸಿಟಿ, ಅನ್ನಪೂರ್ಣ ಸ್ಟುಡಿಯೋಸ್‍ ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು, ಹಲವು ಸಾಹಸಮಯ ಸನ್ನಿವೇಶಗಳಲ್ಲಿ ಭಾಗವಹಿಸಿದ್ದಾರೆ. ತಮ್ಮ ಪಾತ್ರವನ್ನು Rude and Rough ಎಂದು ಬಣ್ಣಿಸುವ ಅವರು, ಈ ಚಿತ್ರವು ತಮ್ಮ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

     

    ಇನ್ನು, ಮುಂಬರುವ ದಿನಗಳಲ್ಲಿ ಕನ್ನಡದಲ್ಲೂ ಹೊಸಬರು, ಹಳಬರು ಎನ್ನದೇ ಎಲ್ಲರೊಂದಿಗೂ ಕೆಲಸ ಮಾಡಲು ಎದುರು ನೋಡುತ್ತಿರುವ ಡ್ಯಾನಿ ಕುಟ್ಟಪ್ಪ, ‘ಇಂಥವರು ಇಂಥ ಪಾತ್ರ ಮಾಡಬೇಕು ಎನ್ನುವುದಕ್ಕಿಂತ ಆ ಪಾತ್ರದ ಕುರಿತು ಆರೋಗ್ಯಕರ ಚರ್ಚೆಗಳಾಗಬೇಕು. ಒಬ್ಬ ನಿರ್ದೇಶಕ ಮತ್ತು ನಟನ ನಡುವೆ ಚರ್ಚೆಗಳಾದಾಗ, ಒಂದೊಳ್ಳೆಯ ಪಾತ್ರ ಮತ್ತು ಚಿತ್ರವನ್ನು ಮಾಡಬಹುದು’ ಎನ್ನುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ

    ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ

    ನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ತೆಲುಗು ಚಿತ್ರರಂಗದಲ್ಲಿ (Tollywood) ಸೌಂಡ್ ಮಾಡ್ತಿದ್ದಾರೆ. ಟಾಪ್ ಸ್ಟಾರ್ ನಟರಿಗೆ ನಾಯಕಿಯಾಗಿ ಶ್ರೀಲೀಲಾ ಮೆರೆಯುತ್ತಿದ್ದಾರೆ. ‘ಧಮಾಕ’ (Dhamaka)  ಸಕ್ಸಸ್ ನಂತರ 10ಕ್ಕೂ ಹೆಚ್ಚು ಸಿನಿಮಾಗಳಿಗೆ ಲೀಲಾ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಕನ್ನಡದ ನಟಿಮಣಿಗೆ ಇರುವ ಡಿಮ್ಯಾಂಡ್ ನೋಡಿ, ಸಮಾರಂಭವೊಂದರಲ್ಲಿ ಶ್ರೀಲೀಲಾ ಸರಸ್ವತಿ ವರಪ್ರಸಾದ ಎಂದು ಹಾಡಿಹೊಗಳಿದ್ದಾರೆ.

    ರಾಮ್ ಪೋತಿನೇನಿ(Ram Pothineni)- ಶ್ರೀಲೀಲಾ ನಟನೆಯ ಸ್ಕಂದ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಶ್ರೀಲೀಲಾ ಅತಿಥಿಯಾಗಿ ಆಗಮಿಸಿದ್ದರು. ಆಗ ಶ್ರೀಲೀಲಾ ಬಗ್ಗೆ ನಟನೆ, ಆಕೆಯ ಶಿಸ್ತಿನ ಬಗ್ಗೆ ಬಾಲಯ್ಯ ಕೊಂಡಾಡಿದ್ದರು. ಶ್ರೀಲೀಲಾ ಸಂಪ್ರದಾಯಬದ್ಧ ತೆಲುಗು ಹುಡುಗಿ. ತೆಲುಗು ಚಿತ್ರರಂಗಕ್ಕೆ ಹಲವು ನಟಿಯರು ಬಂದಿದ್ದಾರೆ. ಆದರೆ ಕೆಲವರಿಗೆ ಮಾತ್ರವೇ ಇಲ್ಲಿಯೇ ನೆಲೆ ನಿಲ್ಲಲು ಸಾಧ್ಯವಾಗಿದೆ. ಅಂತೆಯೇ ಶ್ರೀಲೀಲಾಗೂ ಸಹ ಇಲ್ಲಿ ಬಹಳ ಒಳ್ಳೆಯ ಭವಿಷ್ಯವಿದೆ ಎಂದ ಬಾಲಕೃಷ್ಣ(Balakrishna) ಶ್ರೀಲೀಲಾ ಅಂದದ ಬಗ್ಗೆ ಹಿಂದಿಯಲ್ಲಿ ಯಾರಿಗೂ ಅರ್ಥವಾಗದಂಥಹಾ ಡೈಲಾಗ್ ಒಂದನ್ನು ಸಹ ಹೊಡೆದರು. ಬಾಲಕೃಷ್ಣ ಡೈಲಾಗ್‌ಗೆ ಶ್ರೀಲೀಲಾ ಸಹಿತ ಎಲ್ಲರೂ ನಕ್ಕರಾದರೂ ಯಾರಿಗೂ ಅರ್ಥವಾಗಲಿಲ್ಲ. ಇದನ್ನೂ ಓದಿ:ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ- ಜೋಡೆತ್ತು ಜೊತೆ ಡಿ ಬಾಸ್ ಪೋಸ್ಟ್ ವೈರಲ್

    ಶ್ರೀಲೀಲಾಗೆ ಸೌಂದರ್ಯವಿದೆ ಜೊತೆಗೆ ಅಭಿನಯವೂ ಇದೆ. ಅಭಿನಯದ ಜೊತೆಗೆ ಡ್ಯಾನ್ಸ್ ಕಲೆಯೂ ಇದೆ. ಇವೆಲ್ಲವನ್ನೂ ಸೇರಿಸಿ ನಮಗೆ ಸಿಕ್ಕಿರುವ ಒಳ್ಳೆಯ ನಟಿ. ಸರಸ್ವತಿ ದೇವಿಯ ವರ ಪ್ರಸಾದ. ನಾನೂ ಸಹ ಅವರೊಟ್ಟಿಗೆ ‘ಭಗವಂತ್ ಕೇಸರಿ’ (Bhagavantha Kesari) ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಸೆಟ್‌ನಲ್ಲಿ ಅವರ ಶ್ರಮ, ಪ್ರತಿ ಸೀನ್ ಮಾಡುವಾಗಲೂ ತೋರುವ ಶ್ರದ್ಧೆಯನ್ನು ಪ್ರತಿದಿನವೂ ನೋಡುತ್ತಿದ್ದೇನೆ. ಇಷ್ಟು ಒಳ್ಳೆಯ ನಟಿಯಾಗಿದ್ದರೂ, ಇಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಸಾಮಾನ್ಯರಂತೆ ವರ್ತಿಸುತ್ತಾರೆ ಅದು ನನಗೆ ಬಹಳ ಇಷ್ಟವಾಗುತ್ತದೆ. ಆಕೆಗೆ ಒಳ್ಳೆಯ ಭವಿಷ್ಯ ಸಿಗಲಿ ಎಂದು ಬಾಲಯ್ಯ ಹಾರೈಸಿದ್ದಾರೆ.

    ಕನ್ನಡದ ‘ಕಿಸ್’ (Kiss Film) ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ತೆಲುಗಿನ ಪೆಳ್ಳಿ ಸಂದಡಿ, ‘ಧಮಾಕ’ ಸಿನಿಮಾದ ಮೂಲಕ ಸಕ್ಸಸ್ ಕಂಡರು. ಈಗ ವಿಜಯ್ ದೇವರಕೊಂಡ, ನಿತಿನ್, ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಮಹೇಶ್ ಬಾಬು ಹೀಗೆ ಸೂಪರ್ ಸ್ಟಾರ್‌ಗಳಿಗೆ ಶ್ರೀಲೀಲಾ ಹೀರೋಯಿನ್ ಆಗಿ ರಶ್ಮಿಕಾ ಠಕ್ಕರ್ ಕೊಡ್ತಿದ್ದಾರೆ. ನಿರ್ದೇಶಕರ ಪಾಲಿನ ನೆಚ್ಚಿನ ನಟಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಡ್ಡೆಹುಡುಗರ ರಾಣಿ ಶ್ರೀಲೀಲಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್

    ಪಡ್ಡೆಹುಡುಗರ ರಾಣಿ ಶ್ರೀಲೀಲಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್

    ‘ಧಮಾಕ’ ಬ್ಯೂಟಿ ಶ್ರೀಲೀಲಾ(Sreeleela) ಅಭಿಮಾನಿಗಳಿಗೆ (Fans) ಇಲ್ಲಿದೆ ಗುಡ್ ನ್ಯೂಸ್. ಕಿಸ್ ಚೆಲುವೆಯನ್ನ ಕಣ್ಣುಂಬಿಕೊಳ್ಳಲು ಬಂಪರ್ ಆಫರ್, ಬ್ಯಾಕ್ ಟು ಬ್ಯಾಕ್ ಲೀಲಾ ಸಿನಿಮಾಗಳ ಮೆರವಣಿಗೆ ರೆಡಿಯಾಗಿದೆ. ಏನದು ಸಿಹಿಸುದ್ದಿ? ಇಲ್ಲಿದೆ ಮಾಹಿತಿ.‌ ಇದನ್ನೂ ಓದಿ:ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾದ ಬೆಂಗಳೂರಿನ ಬೆಡಗಿ

    ಬೆಂಗಳೂರಿನ ಬ್ಯೂಟಿ ಶ್ರೀಲೀಲಾ, ಟಾಲಿವುಡ್ (Tollywood) ಅಡ್ಡಾದಲ್ಲಿ ಭಾರೀ ಬೇಡಿಕೆಯಲ್ಲಿದ್ದಾರೆ. ಮಾಡಿದ್ದು ತೆಲುಗಿನಲ್ಲಿ ಎರಡೇ ಸಿನಿಮಾ ಆಗಿದ್ರೂ ಅಭಿಮಾನಿಗಳ ಬಳಗ ಈಗ ಹಿರಿದಾಗಿದೆ. ಈ ವರ್ಷದ ಗಣೇಶ್ ಹಬ್ಬದಿಂದ ಮುಂದಿನ ವರ್ಷ ಸಂಕ್ರಾಂತಿವರೆಗೂ ಶ್ರೀಲೀಲಾ ಸಿನಿಮಾಗಳು ಚಿತ್ರಮಂದಿರದಲ್ಲಿ ದರ್ಶನ ಕೊಡಲಿದೆ.

    ಗಣೇಶ ಹಬ್ಬ ಸಂದರ್ಭದಲ್ಲಿ ಸೆಪ್ಟೆಂಬರ್ 15ಕ್ಕೆ ರಾಮ್ ಪೋತಿನೇನಿ ಜೊತೆಗಿನ ಸ್ಕಂದ (Skanda) ತೆರೆಗೆ ಅಬ್ಬರಿಸಲಿದೆ. ನಂತರ ದಸರಾಗೆ ಬಾಲಕೃಷ್ಣ ಅಭಿನಯದ ‘ಭಗವಂತ ಕೇಸರಿ’ (Bhagavantha Kesari) ಚಿತ್ರದ ಅಬ್ಬರ ಶುರುವಾಗಲಿದೆ. ಉಪ್ಪೇನ ಹೀರೋ ವೈಷ್ಣವ್ ತೇಜ್ ಜೊತೆಗಿನ ‘ಆದಿಕೇಶವ’. ಕ್ರಿಸ್‌ಮಸ್‌ಗೆ ನಿತಿನ್ ಜೊತೆಗಿನ ಎಕ್ಸ್ಟ್ರಾರ್ಡಿನರಿ ಮ್ಯಾನ್ ಸಿನಿಮಾ ರಿಲೀಸ್ ಆಗ್ತಿದೆ. ಹೊಸ ವರ್ಷದ ಆರಂಭದಲ್ಲೇ ಮಹೇಶ್ ಬಾಬು ಜೊತೆ ‘ಗುಂಟೂರು ಖಾರಂ’ ಸಿನಿಮಾ ಅಬ್ಬರಿಸಲಿದೆ. ಅಲ್ಲಿಗೆ ಶ್ರೀಲೀಲಾ ಅಭಿನಯದ ಸಾಲು ಸಾಲು ಐದು ಸಿನಿಮಾ ಬೆಳ್ಳಿತೆರೆಯಲ್ಲಿ ಅಬ್ಬರಿಸಲಿದೆ. ಅದರಲ್ಲಿ ಯಾವ ಸಿನಿಮಾ ಗೆಲುವಿನ ಓಟದಲ್ಲಿ ಜಯಭೇರಿ ಬಾರಿಸುತ್ತೆ ಎಂಬುದನ್ನ ಕಾಯಬೇಕಿದೆ.

    ಕನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಕೈಯಲ್ಲಿ ಒಟ್ಟು 12 ಸಿನಿಮಾಗಳಿವೆ. ಸ್ಟಾರ್ ನಟರಿಗೆ ಜೋಡಿಯಾಗುವ ಮೂಲಕ ಭರಾಟೆ ನಟಿ ಗಮನ ಸೆಳೆದಿದ್ದಾರೆ. ನಟನೆ ಪ್ಲಸ್ ಡ್ಯಾನ್ಸ್ ಮೂಲಕ ಮೋಡಿ ಮಾಡಿರುವ ಚೆಲುವೆ ಶ್ರೀಲೀಲಾ ಕನ್ನಡದ ಕಿಸ್ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಬಳಿಕ ಭರಾಟೆ ಮತ್ತು ಬೈಟು ಲವ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದರ ಜೊತೆಗೆ ತೆಲುಗಿನ ಪೆಳ್ಳಿಸಂದಡಿ ಮತ್ತು ಧಮಾಕ (Dhamaka) ಸಿನಿಮಾ ಮೂಲಕ ರಂಜಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸ್ಕಂದ’ ಚಿತ್ರದ ಫಸ್ಟ್ ಸಾಂಗ್: ಉಸ್ತಾದ್ ರಾಮ್ ಪೋತಿನೇನಿ-ಶ್ರೀಲೀಲಾ ಡ್ಯಾನ್ಸ್

    ‘ಸ್ಕಂದ’ ಚಿತ್ರದ ಫಸ್ಟ್ ಸಾಂಗ್: ಉಸ್ತಾದ್ ರಾಮ್ ಪೋತಿನೇನಿ-ಶ್ರೀಲೀಲಾ ಡ್ಯಾನ್ಸ್

    ಸ್ತಾದ್ ರಾಮ್ ಪೋತಿನೇನಿ (Ustad Pothineni) ಹಾಗೂ ಬೋಯಾಪಾಟಿ ಶ್ರೀನು ಕಾಂಬಿನೇಷನ್ ಮಾಸ್ ಆಕ್ಷನ್ ಎಂಟರ್ ಟೈನರ್ ‘ಸ್ಕಂದ’ (Skanda) ಸಿನಿಮಾದ ಮೊದಲ ಹಾಡು (Song) ಬಿಡುಗಡೆಯಾಗಿದೆ. ‘ನಿನ್ ಸುತ್ತ ಸುತ್ತ ತಿರುಗಿದೆ’ ಎಂಬ ಗಾನಬಜಾನಕ್ಕೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಸಂತೋಷ್ ವೆಂಕಿ ಹಾಗೂ ಶ್ರೀನಿಧಿ ತಿರುಮಲ ಕಂಠ ಕುಣಿಸಿದ್ದಾರೆ. ಎಸ್ ಎಸ್ ತಮನ್ ಟ್ಯೂನ್, ರಾಮ್ ಎನರ್ಜಿ, ಶ್ರೀಲೀಲಾ ಗ್ಲಾಮರ್ ರಂಗು, ಅದ್ಧೂರಿ ಸೆಟ್ ಹಾಡಿನ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಐದು ಭಾಷೆಯಲ್ಲಿಯೂ ಸ್ಕಂದ ಹಾಡು ಬಿಡುಗಡೆಯಾಗಿದೆ.

    ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಸ್ಕಂದ ಸಿನಿಮಾಗಾಗಿ ಮಾಸ್ ಅವತಾರ ತಾಳಿದ್ದಾರೆ. ಕನ್ನಡತಿ ಶ್ರೀಲೀಲಾ (sreeleela) ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್  ಸಂಗೀತ ಚಿತ್ರಕ್ಕಿದೆ. ಸ್ಕಂದ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ.

    ಸ್ಕಂದ ಸಿನಿಮಾವನ್ನು ದಸರಾ ಸ್ಪೆಷಲ್ ಆಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ ದಸರಾಗೂ ಮೊದ್ಲೇ ಅಂದರೆ ಸೆಪ್ಟಂಬರ್ 15ರಂದು ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಚಿತ್ರ ತೆರೆಕಾಣಲಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ಸ್ಕಂದ ಬಿಡುಗಡೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ನೀ ಚುಟು ಚುಟು’ ಅಂತಾ ರಾಮ್ ಪೋತಿನೇನಿ ಜೊತೆ ಶ್ರೀಲೀಲಾ ಎಂಟ್ರಿ

    ‘ನೀ ಚುಟು ಚುಟು’ ಅಂತಾ ರಾಮ್ ಪೋತಿನೇನಿ ಜೊತೆ ಶ್ರೀಲೀಲಾ ಎಂಟ್ರಿ

    ನ್ನಡದ ಬ್ಯೂಟಿ ಕ್ವೀನ್ ಶ್ರೀಲೀಲಾ (Sreeleela) ಅವರು ಈಗ ಟಾಲಿವುಡ್‌ನತ್ತ (Tollywood)ಮುಖ ಮಾಡಿದ್ದಾರೆ. ‘ನೀ ಚುಟು ಚುಟು’ ಅಂತಾ ರಾಮ್ ಪೋತಿನೇನಿ (Ram Pothineni) ಜೊತೆ ಮಸ್ತ್ ಆಗಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಸ್ಕಂದ (Skanda) ರಾಮ್‌ಗೆ ಧಮಾಕಾ ನಾಯಕಿ ಜೋಡಿಯಾಗಿದ್ದಾರೆ. ಸ್ಕಂದ-ಲೀಲಾ ಸ್ಟೋರಿ ಡಿಟೈಲ್ಸ್ ಇಲ್ಲಿದೆ.

    ಭರಾಟೆ ಬ್ಯೂಟಿ ಶ್ರೀಲೀಲಾ ಅವರು ಕನ್ನಡದ ಕಿಸ್, ಭರಾಟೆ, ಬೈ ಟು ಲವ್ 3 ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ತೆಲುಗಿನ ಪೆಳ್ಳಿ ಸಂದಡಿ, ಧಮಾಕಾ ಸಿನಿಮಾದಲ್ಲಿ ಲೀಲಾ ಮೋಡಿ ಮಾಡಿದ್ರು. ಎರಡೇ ಸಿನಿಮಾಗೆ ಶ್ರೀಲೀಲಾ ತೆಲುಗಿನಲ್ಲಿ ಕ್ಲಿಕ್ ಆದರು. ಈಗ 10ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗಿ ರಶ್ಮಿಕಾ(Rashmika), ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ (Krithi Shetty) ಕನ್ನಡದ ನಟಿ ಠಕ್ಕರ್ ಕೊಡ್ತಿದ್ದಾರೆ. ಇದನ್ನೂ ಓದಿ:ಧನುಷ್‌ಗೆ ಜೋಡಿಯಾದ ‘ಬುಟ್ಟ ಬೊಮ್ಮ’ ಖ್ಯಾತಿಯ ಅನಿಕಾ

    ಸಾಲು ಸಾಲು ಸಿನಿಮಾಗಳ ಪೈಕಿ ಈಗ ‘ಸ್ಕಂದ’ (Skanda) ರಾಮ್ ಪೋತಿನೇನಿಗೆ ಶ್ರೀಲೀಲಾ (Sreeleela) ನಾಯಕಿಯಾಗಿದ್ದಾರೆ. ಸಿನಿಮಾದ ಫಸ್ಟ್ ಸಾಂಗ್‌ನ ಝಲಕ್ ಈಗ ರಿವೀಲ್ ಮಾಡಲಾಗಿದೆ. ನೀ ಚುಟು ಚುಟು ಸಾಂಗ್ ಪ್ರೋಮೋ ಔಟ್ ಆಗಿದೆ. ಅದರಲ್ಲಿ ರಾಮ್ ಪೋತಿನೇನಿ ಜೊತೆ ಶ್ರೀಲೀಲಾ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ರಾಮ್ ಜೊತೆ ಕಿಸ್ ನಟಿ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ.

    ಈ ಹಾಡಿನ ಫುಲ್ ವೀಡಿಯೋ ಆಗಸ್ಟ್ 3ರಂದು ಬೆಳಿಗ್ಗೆ 9:36ಕ್ಕೆ ರಿಲೀಸ್ ಆಗಲಿದೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ- ಜಾನರ್ ಚಿತ್ರವಾಗಿದ್ದು, ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಭೋಯಪತಿ ಶ್ರೀನು ನಿರ್ದೇಶನದ ‘ಸ್ಕಂದ’ ಚಿತ್ರವು ಸೆಪ್ಟೆಂಬರ್ 15ಕ್ಕೆ ತೆರೆಗೆ ಬರಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ’ಸ್ಕಂದ’ನಾದ ಉಸ್ತಾದ್ ರಾಮ್ ಪೋತಿನೇನಿ

    ’ಸ್ಕಂದ’ನಾದ ಉಸ್ತಾದ್ ರಾಮ್ ಪೋತಿನೇನಿ

    ಸ್ತಾದ್ ರಾಮ್ ಪೋತಿನೇನಿ (Ustad Ram Pothineni) ಹಾಗೂ ಬೋಯಾಪಾಟಿ ಶ್ರೀನು (Boyapati Srinu) ಕಾಂಬಿನೇಷನ್ ನ  ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ ‘ಸ್ಕಂದ’  (Skanda) ಎಂದು ಹೆಸರಿಡಲಾಗಿದೆ. ಸ್ಕಂದನಾಗಿ ರಾಮ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಸಣ್ಣ ಗ್ಲಿಂಪ್ಸ್ ಮೂಲಕ ಚಿತ್ರತಂಡ ಪವರ್ ಫುಲ್ ಟೈಟಲ್ (Title) ರಿವೀಲ್ ಮಾಡಿದೆ.

    ಕಾರ್ತಿಕೇಯ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಇನ್ನೊಂದು ಹೆಸರೇ ಸ್ಕಂದ. ಪಂಚಿಂಗ್ ಡೈಲಾಗ್ ಮೂಲಕ ಮಾಸ್ ಅವತಾರದಲ್ಲಿ ರಾಮ್ ಪೋತಿನೇನಿ ಧಗಧಗಿಸಿದ್ದಾರೆ.  ದಸರಾಗೆ ಸ್ಕಂದ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿತ್ತು. ಆದರೆ ನಿಗದಿತ ಸಮಯಕ್ಕಿಂತಲೂ ಒಂದು ತಿಂಗಳು ಮುಂಚಿತವಾಗಿಯೇ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ:ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ

    ಸೆಪ್ಟಂಬರ್ 15ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಸ್ಕಂದ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಸ್ಕಂದ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ನಟಿಸಿದ್ದಾರೆ. ಕನ್ನಡತಿ ಶ್ರೀಲೀಲಾ (Srileela) ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ.

     

    ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಮ್ಯೂಸಿಕ್ ಕಿಕ್ ಚಿತ್ರಕ್ಕಿದೆ. ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸ್ಕಂದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಮಾಸ್ ಅವತಾರ, ಪವರ್ ಫುಲ್ ಟೈಟಲ್ ಸ್ಕಂದ ಅಬ್ಬರ ಜೋರಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]