Tag: ಸೌಮೆಂದು ಮುಖರ್ಜಿ

  • ಜಾರಕಿಹೊಳಿ ಸಿಡಿ ಕೇಸ್‍ಗೆ ಟ್ವಿಸ್ಟ್ – ಹೈಕೋರ್ಟ್ ಅಸಮಾಧಾನ

    ಜಾರಕಿಹೊಳಿ ಸಿಡಿ ಕೇಸ್‍ಗೆ ಟ್ವಿಸ್ಟ್ – ಹೈಕೋರ್ಟ್ ಅಸಮಾಧಾನ

    ಬೆಂಗಳೂರು: ಸಿಡಿ ಕೇಸ್ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಸ್‍ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

    ರಮೇಶ್ ಜಾರಕಿಹೊಳಿ ಪ್ರಕರಣ ಇತ್ಯರ್ಥ ಆಗುವ ಲಕ್ಷಣಗಳೇ ಕಾಣುತ್ತಿಲ್ಲ. ತನಿಖೆ ಮುಗಿದು ಕೋರ್ಟ್ ಸುಪರ್ದಿಯಲ್ಲಿ ಅಂತಿಮ ವರದಿ ಇದ್ದರೂ ಅದನ್ನು ಕೆಳಹಂತದ ನ್ಯಾಯಾಲಯ ಸಲ್ಲಿಸುವುದಾಗಲಿ, ಜಾರಕಿಹೊಳಿಗೆ ಮುಕ್ತಿ ಕೊಡಿಸುವುದಾಗಲಿ ಆಗುತ್ತಿಲ್ಲ.

    ಇಂದು ರಮೇಶ್ ಜಾರಕಿಹೊಳಿ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಎಸ್‍ಐಟಿ ಮುಖ್ಯಸ್ಥರು ಮೂರು ತಿಂಗಳು ರಜೆ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಇಡೀ ಪ್ರಕರಣದ ತನಿಖೆ ನಡೆದಿದೆ. ಈ ಬಗ್ಗೆ ಹೈಕೋರ್ಟ್‍ಗೆ ಕೂಡ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ. ಆದರೆ ಎಸ್‍ಐಟಿ ಮುಖ್ಯಸ್ಥರ ಗಮನದಲ್ಲಿ ಇಲ್ಲದೇ ತನಿಖೆ ಮುಕ್ತಾಯ ಆಗಿದೆ. ಹಾಗಾದರೆ ಎಸ್‍ಐಟಿ ಮುಖ್ಯಸ್ಥರನ್ನು ನೇಮಕ ಮಾಡೋದು ಯಾಕೆ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.  ಇದನ್ನೂ ಓದಿ: ನಾನೀಗ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ, ನನಗೂ ಒಳ್ಳೆಯ ಕಾಲ ಬರಲಿದೆ: ರಮೇಶ್ ಜಾರಕಿಹೊಳಿ

    ರಜೆ ಮುಗಿಸಿಕೊಂಡು ವಾಪಸ್ ಬಂದಿರುವ ಸೌಮೆಂದು ಮುಖರ್ಜಿ ಎಸ್‍ಐಟಿ ಅಧಿಕಾರಗಳ ಜೊತೆ ಕೇಸ್ ಬಗ್ಗೆ ರಿವ್ಯೂ ಮೀಟಿಂಗ್ ಕೂಡ ಮಾಡಿಲ್ಲ. ರಿವ್ಯೂ ಮೀಟಿಂಗ್ ಮಾಡದೆ ಇದ್ದರೆ ವರದಿಯ ಬಗ್ಗೆ ಅನುಮತಿ ಇದ್ಯಾ, ಇಲ್ಲವೇ ಎಂಬ ನಿಲುವು ತಿಳಿಸುವಂತೆ 20 ನಿಮಿಷಗಳ ಕಾಲ ಹೈಕೋರ್ಟ್ ಅವಕಾಶ ನೀಡಿತ್ತು.

    ಈ ನಡುವೆ ಹೈಕೋರ್ಟ್‍ಗೆ ಸೌಮೆಂದು ಮುಖರ್ಜಿ ಯಾವ ನಿಲುವನ್ನು ಸ್ಪಷ್ಟಪಡಿಸಲಿಲ್ಲ. ಹಾಗಾಗಿ, ಮುಂದಿನ ವಿಚಾರಣೆಯಲ್ಲಿ ಪ್ರಮಾಣಪತ್ರ ನೀಡುವಂತೆ ಎಸ್‍ಐಟಿ ಮುಖ್ಯಸ್ಥರಿಗೆ ಹೈಕೋರ್ಟ್ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಸೆ.2ಕ್ಕೆ ಮುಂದೂಡಿದೆ.

  • ಸಿಡಿ ತನಿಖೆಯ ಎಸ್‍ಐಟಿ ಮುಖ್ಯಸ್ಥರ ರಜೆ ಅವಧಿ ಮತ್ತೆ ವಿಸ್ತರಣೆ

    ಸಿಡಿ ತನಿಖೆಯ ಎಸ್‍ಐಟಿ ಮುಖ್ಯಸ್ಥರ ರಜೆ ಅವಧಿ ಮತ್ತೆ ವಿಸ್ತರಣೆ

    ಬೆಂಗಳೂರು: ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಎಸ್‍ಐಟಿ ಮುಖ್ಯಸ್ಥರು ರಜೆ ಅವಧಿ ವಿಸ್ತರಣೆಯಾಗುವ ಮೂಲಕವಾಗಿ ಮತ್ತೇ ಟ್ವಿಸ್ಟ್ ಪಡೆದುಕೊಂಡಿದೆ.ಇದನ್ನೂಓದಿ:  ರಮೇಶ್ ಜಾರಕಿಹೊಳಿ ಪ್ರಕರಣ- ಎಸ್‍ಐಟಿಗೆ ಮುಖ್ಯಸ್ಥರೇ ಇಲ್ಲ..!

    ರಮೇಶ್ ಜಾರಕಿಹೊಳಿ ರೇಪ್ ಕೇಸ್ ತನಿಖೆ ನಡೆಸ್ತಾ ಇರೋ ಎಸ್‍ಐಟಿ ಮುಖ್ಯಸ್ಥರು ಈ ಹಿಂದೆ ದೀರ್ಘ ರಜೆಯ ಮೇಲೆ ಹೊರಗೆ ಉಳಿದಿದ್ದರು. ಮತ್ತೇ ಇದೀಗ ರಜೆಯನ್ನು ತೆಗೆದುಕೊಂಡಿದ್ದಾರೆ. ಮತ್ತೆ ಒಂದು ತಿಂಗಳು ರಜೆಯನ್ನು ಸೌಮೆಂದು ಮುಖರ್ಜಿ ತೆಗೆದುಕೊಂಡಿದ್ದಾರೆ. ಸದ್ಯ ಎಸ್‍ಐಟಿ ಉಸ್ತುವಾರಿ ನೋಡಿ ಕೊಳ್ಳುತ್ತಿರುವ ಸಂದೀಪ್ ಪಾಟೀಲ್ ಈಗಾಗಲೇ 2 ತಿಂಗಳಿಗೂ ಹೆಚ್ಚು ಕಾಲ ರಜೆಯಲ್ಲಿದ್ದ ಸೌಮೇಂದು ಮುಖರ್ಜಿ ಈಗ ಪುನಃ ರಜೆ ವಿಸ್ತರಣೆ ಮಾಡಿಕೊಳ್ಳುವ ಮೂಲಕವಾಗಿ ಪ್ರಕರಣದ ತನಿಖೆಯನ್ನು ಮತ್ತೆ ಅಲ್ಲಿಗೇ ಬಿಟ್ಟಿದ್ದಾರೆ.

     

    ಎಸ್‍ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ವೈದ್ಯಕೀಯ ರಜೆಯ ಮೇಲೆ ಹೊರಗೆ ಉಳಿದಿದ್ದಾರೆ. ಈ ಮೂಲಕ ಎಸ್‍ಐಟಿಗೆ ಮುಖ್ಯಸ್ಥರೇ ಇಲ್ಲದಂತಾಗಿದೆ. ಎಸ್‍ಐಟಿಯಿಂದ ತನಿಖೆ ನಡೆಯುತ್ತಾ ಇದ್ದರೂ ಎಸ್‍ಐಟಿ ಮುಖ್ಯಸ್ಥರೇ ಇಲ್ಲವಾಗಿದೆ.

    ಅನಾರೋಗ್ಯ ಕಾರಣದಿಂದಾಗಿ ಎಸ್‍ಐಟಿ ಮುಖ್ಯಸ್ಥರು ಸುದೀರ್ಘ ರಜೆಗೆ ಹೋಗಿದ್ದಾರೆ. ಆದರೆ ಈಗ ಈ ರಜೆಯ ಹಿಂದೆಯೇ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಒತ್ತಡ ಸಹಿಲಾರದೇ ರಜೆ ಮೇಲೆ ತೆರಳಿದ್ರಾ..? ಎಂಬ ಅನುಮಾನಗಳು ಕೂಡ ಇದೆ. ಇಡೀ ಪ್ರಕರಣ ಬೇರೆ ರೀತಿ ಸಾಗುತ್ತಾ ಇದೆ. ಅದೇ ವಿಚಾರಕ್ಕೆ ಹೊರನಡೆದ್ರಾ..? ಈ ಅನುಮಾನಗಳು ಈಗ ಶುರುವಾಗಿದ್ದು, ಯಾವುದೇ ಮಾಹಿತಿಯನ್ನು ಹೊರಗೆ ಹಾಕಿಲ್ಲ. ಸೌಮೇಂದು ಮುಖರ್ಜಿ ಅವರ ಅನುಪಸ್ಥಿತಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತನಿಖೆಯ ಜವಬ್ದಾರಿ ಹೊತ್ತಿದ್ದಾರೆ.