Tag: ಸೌದಿ ಮಿನಿಸ್ಟರ್

  • ಸೌದಿ ಮಿನಿಸ್ಟರ್ ಜೊತೆ ಔತಣ ಸವಿದ ಶಾರೂಖ್, ಸಲ್ಮಾನ್, ಅಕ್ಷಯ್ – ಅಸಲಿ ಕಾರಣವೇನು?

    ಸೌದಿ ಮಿನಿಸ್ಟರ್ ಜೊತೆ ಔತಣ ಸವಿದ ಶಾರೂಖ್, ಸಲ್ಮಾನ್, ಅಕ್ಷಯ್ – ಅಸಲಿ ಕಾರಣವೇನು?

    ರಬ್ ರಾಷ್ಟ್ರಗಳಲ್ಲಿ ಬಾಲಿವುಡ್ ಮೂವೀ ಸಖತ್ ಫೇಮಸ್. ಈ ಬೆನ್ನಲ್ಲೇ ಬಾಲಿವುಡ್ ಬಾದ್‍ಷಾಗಳಾದ ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅರಬ್ ರಾಷ್ಟ್ರದ ಮಿನಿಸ್ಟರ್ ಜೊತೆ ಔತನಕೂಟ ಮಾಡಿದ್ದಾರೆ ಎಂಬುದು ಬಿ’ಟೌನ್‍ನಲ್ಲಿ ಸುದ್ದಿಯಾಗಿದೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಶಾರೂಖ್ ಖಾನ್, ಸಲ್ಮಾನ್ ಖಾನ್, ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಕುಮಾರ್ ಜೊತೆ ಫೋಟೋ ಕ್ಲಿಕಿಸಿಕೊಂಡ ಸೌದಿ ಸಚಿವರು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆದರೆ ಸೌದಿ ಸಚಿವರನ್ನು ಯಾವ ಉದ್ದೇಶಕ್ಕೆ ಬಾಲಿವುಡ್ ತಾರೆಯರು ಭೇಟಿ ಮಾಡಿದ್ದಾರೆ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಅದಕ್ಕೆ ಅಸಲಿ ಕಾರಣ ಇಲ್ಲಿದೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

    ರಂಜಾನ್ ಹಿನ್ನೆಲೆ ಶಾರೂಖ್ ಮನೆಯಲ್ಲಿ ‘ಮನ್ನತ್’ ಪಾರ್ಟಿ ಏರ್ಪಡಿಸಲಾಗಿತ್ತು. ಈ ಹಿನ್ನೆಲೆ ಸೌದಿ ಅರೇಬಿಯಾ ರೆಡ್ ಸೀ ಫಿಲ್ಮ್ ಫೆಸ್ಟಿವಲ್ ಅಧ್ಯಕ್ಷ ಮೊಹಮ್ಮದ್ ಅಲ್ ಟರ್ಕಿ ಅವರನ್ನು ಈ ಕೂಟಕ್ಕೆ ಶಾರೂಖ್ ಕರೆದಿದ್ದು, ಅವರು ಸಹ ಬಂದಿದ್ದರು. ಈ ಕುರಿತು ಮೊಹಮ್ಮದ್ ಅಲ್ ಸೋಶಿಯಲ್ ಮೀಡಿಯಾದಲ್ಲಿ, ಇಂಡಿಯಾದ ನನ್ನ ಸಹೋದರ ಶಾರೂಖ್ ಖಾನ್ ಅವರಿಂದ ರಂಜಾನ್ ಹಬ್ಬದ ಶುಭಾಶಯಗಳು ಎಂದು ಕ್ಯಾಪ್ಷನ್ ಬರೆದು ಪೋಸ್ಟ್ ಮಾಡಿದ್ದರು.

    ಸೌದಿ ಅರೇಬಿಯಾದ ಸಾಂಸ್ಕøತಿ ಸಚಿವ ಫರ್ಹಾನ್ ಅಲ್‍ಸೌದ್ ಜೊತೆ ಕೂಡ ಬಾಲಿವುಡ್ ತಾರೆಯರು ಸಮಯ ಕಳೆದಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಫರ್ಹಾನ್ ಅಲ್‍ಸೌದ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಅಕ್ಷಯ್ ಕುಮಾರ್ ಇದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇವರೆಲ್ಲ ಶಾರುಖ್ ನಿವಾಸದಲ್ಲಿ ಏರ್ಪಡಿಸಿದ್ದ ಮನ್ನತ್ ಔತಣಕೂಟದಲ್ಲಿ ಭಾಗಿಯಾಗಿದ್ದರು.

    ಬಾಲಿವುಡ್ ತಾರೆಯರನ್ನು ಮಿಟ್ ಮಾಡಿದ ಮೇಲೆ ಫರ್ಹಾನ್ ಅಲ್‍ಸೌದ್ ಇನ್‍ಸ್ಟಾದಲ್ಲಿ ಫೊಟೋವನ್ನು ಶೇರ್ ಮಾಡಿಕೊಂಡಿದ್ದು, ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಸಲ್ಮಾನ್, ಶಾರುಖ್, ಅಕ್ಷಯ್, ಸೈಫ್ ಅಲಿ ಜೊತೆ ಸಿನಿಮಾ ಜಗತ್ತಿನ ಸುಂದರ ವಿಷಯಗಳ ಬಗ್ಗೆ ಸಂವಾದ ಮಾಡಿದ್ದಕ್ಕೆ ಖುಷಿ ಆಯಿತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದೃಢಸಂಕಲ್ಪ, ಜಾಣ್ಮೆ, ತಾಳ್ಮೆ ಇವು ಯಶಸ್ಸಿನ ಸೂತ್ರಗಳು: ಆನಂದ್ ಮಹೀಂದ್ರಾ

    Actor Saif Ali Khan Dons a New Professional Hat, Makes Big Announcement

    ಈ ಸ್ಟಾರ್ ನಟರು ಬಾಲಿವುಡ್ ಬಹುಬೇಡಿಕೆಯ ನಟರು. ಈ ಮಧ್ಯೆಯೂ ತಮ್ಮ ಬ್ಯುಸಿ ಶೆಡ್ಯೂಲ್ ಬಿಟ್ಟು ಸೌದಿ ಅರೇಬಿಯಾದ ಸಚಿವರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಭೇಟಿಯಲ್ಲಿ ಯಾವ ವಿಷಯಗಳ ಬಗ್ಗೆ ಚರ್ಚೆಯಾಯಿತು ಎಂಬುದರ ಕುರಿತು ಈ ನಟರು ಯಾವ ರೀತಿಯ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ.