Tag: ಸೌದಿ

  • ಖಶೋಗಿ ಹತ್ಯೆಗೆ ಸೌದಿ ಕ್ರೌನ್ ಪ್ರಿನ್ಸ್ ಹೊಣೆಗಾರಿಕೆ: ಬೈಡನ್

    ಖಶೋಗಿ ಹತ್ಯೆಗೆ ಸೌದಿ ಕ್ರೌನ್ ಪ್ರಿನ್ಸ್ ಹೊಣೆಗಾರಿಕೆ: ಬೈಡನ್

    ವಾಷಿಂಗ್ಟನ್: ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ವಾಷಿಂಗ್ಟನ್ ಪತ್ರಕರ್ತ ಜಮಾಲ್ ಖಶೋಗಿ ಅವರ ಹತ್ಯೆಗೆ ಹೊಣೆಗಾರರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆರೋಪಿಸಿದರು.

    2018ರಲ್ಲಿ ಖಶೋಗಿಯ ಹತ್ಯೆಯ ನಂತರ ಅವರು ಪರಿಯಾ ಎಂದು ಕರೆದಿದ್ದ ದೇಶದೊಂದಿಗೆ ಸಂಬಂಧವನ್ನು ಮರುಹೊಂದಿಸುವ ಪ್ರವಾಸವನ್ನು ಬೈಡನ್ ಕೈಗಿದ್ದರು. ಈ ವೇಳೆ ಅವರು ಕ್ರೌನ್ ಪ್ರಿನ್ಸ್ ಅವರು ಖಶೋಗಿ ಕೊಲೆಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದರು. ಖಶೋಗಿ ಹತ್ಯೆಗೆ ಸಂಬಂಧಿಸಿದಂತೆ, ನಾನು ಸಭೆಯಲ್ಲಿ ಮಾತನಾಡಿದ್ದೇನೆ. ಆ ಸಮಯದಲ್ಲಿ ನಾನು ಅದರ ಬಗ್ಗೆ ಏನು ಯೋಚಿಸಿದೆ ಮತ್ತು ಈಗ ಅದರ ಬಗ್ಗೆ ಏನು ಯೋಚಿಸುತ್ತೇನೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದು ಮಾತನ್ನು ಆರಂಭಿಸಿದರು. ಇದನ್ನೂ ಓದಿ: ದಿಯಾ ಖ್ಯಾತಿಯ ಪೃಥ್ವಿ ಅಂಬಾರ್‌ಗೆ ಮಾತೃ ವಿಯೋಗ 

    Biden confronts Saudi crown prince over US journalist Khashoggi murder,  expects action on energy - World News

    ನಾನು ಖಶೋಗಿ ಹತ್ಯೆ ಕುರಿತು ನೇರವಾಗಿ ಚರ್ಚೆ ಮಾಡಿದ್ದೆ. ನಾನು ನನ್ನ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದ್ದೇನೆ. ಒಬ್ಬ ಅಮೇರಿಕ ಅಧ್ಯಕ್ಷರು ಮಾನವ ಹಕ್ಕುಗಳ ವಿಷಯದ ಬಗ್ಗೆ ಮೌನವಾಗಿರುವುದು ಅಸಮಂಜಸವಾಗಿದೆ ಎಂದು ತಿಳಿಸಿದರು.

    ಇಸ್ತಾನ್‍ಬುಲ್‍ನಲ್ಲಿ ಸೌದಿ ಏಜೆಂಟರಿಂದ ಹತ್ಯೆಗೀಡಾದ ಮತ್ತು ಛಿದ್ರಗೊಂಡ ವಿಮರ್ಶಕ ಖಶೋಗಿಯನ್ನು ಸೆರೆ ಹಿಡಿಯುವಂತೆ ಕಾರ್ಯಾಚರಣೆಗೆ ಸೌದಿ ಕ್ರೌನ್ ಪ್ರಿನ್ಸ್ ಸಹಾಯ ಮಾಡಿದ್ದರು ಎಂದು ಯುಎಸ್ ಗುಪ್ತಚರ ಹೇಳಿದೆ. ಈಗ ಖಶೋಗಿಗೆ ಏನಾಯಿತು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ:  ಧಾರಾಕಾರ ಮಳೆ – ಟಾರ್ಪಲ್ ಬಳಸಿ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು 

    Live Tv
    [brid partner=56869869 player=32851 video=960834 autoplay=true]

  • ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ

    ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ

    ಮಂಡ್ಯ: ‘ಅಲ್ಲಾಹು ಅಕ್ಬರ್’ ಎಂದು ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಪೊಲೀಸರನ್ನು ಯಾಮಾರಿಸಿ ವಿದೇಶಕ್ಕೆ ಹಾರಿದ್ದಾರೆ.

    ವಿದ್ಯಾರ್ಥಿನಿ ಮುಸ್ಕಾನ್ ಕುಟುಂಬ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡದೆ ಸೌದಿ ಪ್ರವಾಸಕ್ಕೆ ಹೊರಟಿದೆ. ಈ ಪ್ರವಾಸದ ಹಿಂದೆ ಏನಾದರೂ ಇದ್ಯಾ ಎಂಬುದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತಿದೆ. ಈ ಹಿಂದೆ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿ ಭಾರೀ ಸುದ್ದಿಯಾಗಿದ್ದರು. ಈ ಹೇಳಿಕೆ ಹಿನ್ನೆಲೆ ಉಗ್ರ ಸಂಘಟನೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಈ ವೇಳೆ ಮುಸ್ಕಾನ್ ವಿದೇಶಿ ಪ್ರವಾಸ ಕೈಗೊಂಡಿರುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ.

    ಅಲ್ ಖೈದಾ ಸಂಘಟನೆ ಮುಸ್ಕಾನ್ ಹೊಗಳಿ ಗುಣಗಾನ ಮಾಡಿತ್ತು. ಇದರಿಂದ ಮುಸ್ಕಾನ್ ಬಗ್ಗೆ ಹೆಚ್ಚು ತನಿಖೆ ಮಾಡುವಂತೆ ಆಗ್ರಹ ಮಾಡಲಾಗಿತ್ತು. ಪರಿಣಾಮ ಪೊಲೀಸ್ ಇಲಾಖೆ ಮುಸ್ಕಾನ್ ಮತ್ತು ಕುಟುಂಬದವರನ್ನು ವಿಚಾರಣೆ ನಡೆಸಿತ್ತು. ಈ ನಡುವೆ ಮುಸ್ಕಾನ್ ಮನೆಗೆ ಬಂದೋಗುವವರ ಮೇಲೆ ಪೊಲೀಸ್ ಇಲಾಖೆ ಒಂದು ಕಣ್ಣು ಇಟ್ಟಿತ್ತು. ಆದರೆ ಈ ಕುಟುಂಬ ಖಾಕಿಗೆ ಮಾಹಿತಿ ನೀಡದೆ ಕಳೆದ ಏಪ್ರಿಲ್ 25 ರಂದೇ ಸೌದಿಗೆ ತೆರಳಿದೆ. ಇದನ್ನೂ ಓದಿ: ಮುಸ್ಕಾನ್‍ರನ್ನು ತನಿಖೆ ನಡೆಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ

    ಮುಸ್ಕಾನ್ ಕುಟುಂಬ ಧಾರ್ಮಿಕ ಪ್ರವಾಸಕ್ಕಾಗಿ ಸೌದಿ ಪ್ರವಾಸ ಎಂದು ಮಾಹಿತಿ ಸಿಕ್ಕಿದೆ. ಆದರೆ ಈ ಪ್ರವಾಸದ ಹಿಂದೆ ಇರುವ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಪೊಲೀಸ್ ಇಲಾಖೆಗೆ ಒತ್ತಾಯ ಪ್ರಾರಂಭವಾಗಿದೆ.

  • ಹಾರ್ಟ್ ಇಮೋಜಿ ಕಳುಹಿಸಿದ್ರೆ 20 ಲಕ್ಷ ದಂಡ

    ಹಾರ್ಟ್ ಇಮೋಜಿ ಕಳುಹಿಸಿದ್ರೆ 20 ಲಕ್ಷ ದಂಡ

    ರಿಯಾದ್: ಇಂದು ಹೆಚ್ಚಿನ ಸಂವಹನ ಇಮೋಜಿಗಳಲ್ಲಿಯೇ ಮುಗಿದು ಹೋಗುತ್ತದೆ.  ಕುಟುಂಬಸ್ಥರು ಕುಳಿತು ಹರಟೆ ಹೊಡೆಯುವ ಕಾಲ ಬದಲಾಗಿದೆ. ಸೋಶಿಯಲ್ ಮೀಡಿಯಾ ಮೂಲಕವಾಗಿಯೇ ಇಂದು ಹೆಚ್ಚಿನ ಸಂವಹನ ನಡೆಯುತ್ತದೆ. ವಾಟ್ಸಪ್‌, ಮೆಸೆಂಜರ್ ಆ್ಯಪ್‍ನಲ್ಲಿ ಹಾರ್ಟ್ ಇಮೋಜಿಗಳನ್ನು ಕಳುಹಿಸಿದರೆ ಜೈಲು ಶಿಕ್ಷೆ, 20 ಲಕ್ಷ ದಂಡವನ್ನು ಹಾಕಿರುವುದು ಸೌದಿ ಅರೇಬಿಯಾದಲ್ಲಿ ಸುದ್ದಿಯಾಗಿದೆ.

    ಇಂಥಹದ್ದೊಂದು ವಿಚಿತ್ರ ಕಾನೂನು ಜಾರಿ ಮಾಡಿರುವುದು ಸೌದಿ ಅರೇಬಿಯಾದಲ್ಲಿ. ಯಾರಿಗಾದರೂ ಕೆಂಪು ಬಣ್ಣದ ಹೃದಯದ ಇಮೋಜಿ ಕಳುಹಿಸಿ ತಪ್ಪಿತಸ್ಥರೆಂದು ಸಾಬೀತಾದರೆ 2ರಿಂದ 5 ವರ್ಷಗಳ ಕಾಲ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಕಳುಹಿಸುವವರಿಗೆ 20 ಲಕ್ಷ ದಂಡವನ್ನು ವಿಧಿಸಬಹುದಾಗಿದೆ. ಸೌದಿ ಅರೇಬಿಯಾದ ಆ್ಯಂಟಿ ಫ್ರಾಡ್ ಅಸೋಸಿಯೇಶನ್ ಈ ಕುರಿತು ಆದೇಶ ಹೊರಡಿಸಿದೆ.

    ಕೆಂಪು ಹೃದಯದ ಇಮೋಜಿಯನ್ನು ಕಳುಹಿಸುವುದು ಅಪರಾಧವಾಗಿದೆ. ಆನ್‍ಲೈನ್ ಚಾಟಿಂಗ್ ಸಮಯದಲ್ಲಿ ಸ್ವೀಕರಿಸುವವರು ಪ್ರಕರಣ ದಾಖಲಿಸಿದರೆ, ಈ ಕಿರುಕುಳವು ಅಪರಾಧದ ವರ್ಗಕ್ಕೆ ಬರುತ್ತದೆ. ಸಂದೇಶವನ್ನು ಸ್ವೀಕರಿಸಿದವರು ದೂರು ಸಲ್ಲಿಸಿದರೆ ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದರೆ, ಶಿಕ್ಷೆ, ದಂಡ ವಿಧಿಸಲಾಗುತ್ತದೆ. ಇದನ್ನೂ ಓದಿ: ವಿರಾಟ್ ಅಭಿಮಾನಿಗಳಿಗಿಲ್ಲ ಗಡಿರೇಖೆ – ಪಾಕ್ ಕ್ರಿಕೆಟ್ ಲೀಗ್‍ನಲ್ಲಿ ರಾರಾಜಿಸಿದ ಕೊಹ್ಲಿ ಪೋಸ್ಟರ್

  • ಡ್ರೋನ್ ದಾಳಿ- 10 ಜನರಿಗೆ ತೀವ್ರ ಗಾಯ

    ಡ್ರೋನ್ ದಾಳಿ- 10 ಜನರಿಗೆ ತೀವ್ರ ಗಾಯ

    ರಿಯಾದ್: ಡ್ರೋನ್ ದಾಳಿಯಿಂದ 10 ಜನರು ತೀವ್ರ ಗಾಯಗೊಂಡ ಘಟನೆ ಸೌದಿ ದಕ್ಷಿಣ ನಗರದ ಜಿಜಾನ್‍ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಸೌದಿ ದಕ್ಷಿಣ ನಗರ ಜಿಜಾನ್‍ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸ್ಫೋಟಕಗಳು ತುಂಬಿದ ಡ್ರೋನ್ ದಾಳಿ ನಡೆದಿದ್ದು, ಪರಿಣಾಮ 10 ಜನರಿಗೆ ತೀವ್ರ ಗಾಯವಾಗಿದೆ. ಅದರಲ್ಲಿ 6 ಸೌದಿಗಳು, ಮೂವರು ಬಾಂಗ್ಲಾದೇಶಿ ಪ್ರಜೆಗಳು ಮತ್ತು ಓರ್ವ ಸುಡಾನ್ ಪ್ರಜೆ ಗಾಯಗೊಂಡಿದ್ದಾರೆ. ಈ ದಾಳಿಯ ವೇಳೆ ವಿಮಾನ ನಿಲ್ದಾಣದ ಕೆಲವು ಮುಂಭಾಗದ ಕಿಟಕಿಗಳು ಸಹ ಛಿದ್ರಗೊಂಡಿವೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: 627 ಗ್ರಾಂ ಚಿನ್ನ, 24.71 ಲಕ್ಷ ರೂ. ಲೂಟಿ ಮಾಡಿ ಪರಾರಿಯಾಗಿದ್ದ ಕಳ್ಳರು ಅರೆಸ್ಟ್

    ಸೌದಿ ನೇತೃತ್ವದ ಸೇನಾ ಒಕ್ಕೂಟವು 2015 ರಲ್ಲಿ ಯೆಮೆನ್‍ನಲ್ಲಿ ಮಧ್ಯಪ್ರವೇಶಿಸಿತು. ಈ ಪರಿಣಾಮ ಅಧ್ಯಕ್ಷ ಅಬ್ದ್ರಬ್ಬು ಮನ್ಸೂರ್ ಹಾದಿ ಅವರ ಉಚ್ಚಾಟಿತ ಸರ್ಕಾರದ ಬೆಂಬಲ ಪಡೆಗಳು ಮತ್ತು ಇರಾನ್-ಹೊಂದಿಕೊಂಡ ಹೌತಿ ಗುಂಪಿನ ವಿರುದ್ಧ ಹೋರಾಡುವುದು. ಈ ಕೃತ್ಯ ಯಾರು ಮಾಡಿದ್ದು ಎಂದು ತಕ್ಷಣಕ್ಕೆ ಹೇಳಲು ಆಗುತ್ತಿಲ್ಲ. ಆದರೆ ದಾಳಿ ಮಾಡಿದ ಗುಂಪು ನಿಯಮಿತವಾಗಿ ಗಲ್ಫ್ ಸಾಮ್ರಾಜ್ಯವನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

     

  • ಸೌದಿ ಅರೇಬಿಯಾದಲ್ಲೂ ಪೌರತ್ವ ಕಿಚ್ಚು- ಕುಂದಾಪುರದ ಯುವಕ ಅರೆಸ್ಟ್?

    ಸೌದಿ ಅರೇಬಿಯಾದಲ್ಲೂ ಪೌರತ್ವ ಕಿಚ್ಚು- ಕುಂದಾಪುರದ ಯುವಕ ಅರೆಸ್ಟ್?

    ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ ಮಾಡಿರುವ ಆರೋಪದಲ್ಲಿ ಕುಂದಾಪುರದ ಯುವಕ ಅರೆಸ್ಟ್ ಆಗಿದ್ದಾನೆ.

    ಸೌದಿಯ ದಮಾಮ್ ನ ಕಂಪನಿಯಲ್ಲಿ ಕುಂದಾಪುರ ಮೂಲದ ಹರೀಶ್ ಬಂಗೇರ ಕೆಲಸ ಮಾಡುತ್ತಿದ್ದಾನೆ. ಈತ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಕಾಯ್ದೆಯ ಪರ ಬರೆದು ಪೋಸ್ಟ್ ಮಾಡಿದ್ದರು. ಈ ಬರಹದ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಕೂಡಲೇ ಹರೀಶ್, ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದ ವೀಡಿಯೋ ಅಪ್ಲೋಡ್ ಮಾಡಿದ್ದನು.

    ಇದಾದ ಕೂಡಲೇ ಹರೀಶ್ ಬಂಗೇರ ಎಂಬ ಮತ್ತೊಂದು ಅಕೌಂಟಲ್ಲಿ ಸೌದಿ ದೊರೆಗೆ ಅವಹೇಳನ ಮಾಡಿದ ಫೋಟೋ, ಬರಹ ಅಪ್ಲೋಡಾಗಿದೆ. ಮತ್ತೊಂದು ಪೋಸ್ಟಲ್ಲಿ ಮೆಕ್ಕಾದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂದು ಬರೆದುಕೊಂಡಿದ್ದ ಪೋಸ್ಟ್ ಕೂಡ ಅಪ್ಲೋಡಾಗಿದೆ. ಈ ಪೋಸ್ಟ್ ಸೌದಿಯಲ್ಲಿ ಶೇರ್ ಆಗಿದೆ. ಹರೀಶ್ ನನ್ನು ಸೌದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

    ಕುಂದಾಪುರದ ಮನೆಯವರ ಸಂಪರ್ಕಕ್ಕೆ ಹರೀಶ್ ಸಿಗುತ್ತಿಲ್ಲವಂತೆ. ನಕಲಿ ಖಾತೆಯ ಮೂಲಕ ಪೋಸ್ಟ್ ಶೇರ್ ಆಗಿರುವ ಶಂಕೆಯಿದೆ ಎಂದು ಹರೀಶ್ ಗೆಳೆಯರು ಹೇಳುತ್ತಿದ್ದಾರೆ. ಈ ಬಗ್ಗೆ ಉಡುಪಿ ಎಸ್ ಪಿಗೆ ದೂರು ನೀಡುವ ಸಾಧ್ಯತೆಯಿದ್ದು, ಕುಟುಂಬಸ್ಥರು ಸಂಪರ್ಕಕ್ಕೆ ಸಿಕ್ಕಮೇಲೆ ಪೂರ್ಣ ಚಿತ್ರಣ ಸಿಗಲಿದೆ.

  • ಭೀಕರ ಬಸ್ ಅಪಘಾತಕ್ಕೆ 35 ಬಲಿ- ಕಂಬನಿ ಮಿಡಿದ ಮೋದಿ

    ಭೀಕರ ಬಸ್ ಅಪಘಾತಕ್ಕೆ 35 ಬಲಿ- ಕಂಬನಿ ಮಿಡಿದ ಮೋದಿ

    ರಿಯಾದ್: ಸೌದಿಯಲ್ಲಿ ಬುಧವಾರ ಸಂಜೆ ನಡೆದ ಭೀಕರ ಬಸ್ ಅಪಘಾತಕ್ಕೆ 35 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 4 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ವಿಚಾರ ತಿಳಿದು ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.

    ದುರಂತದ ಬಗ್ಗೆ ಟ್ವೀಟ್ ಮಾಡಿದ ಮೋದಿ ಅವರು, ಮೆಕ್ಕಾ ಬಳಿ ನಡೆದ ಬಸ್ ಅಪಘಾತದಿಂದ ದುಃಖಗೊಂಡಿದ್ದೇನೆ. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಸಂತಾಪ ಸೂಚಿಸಲು ಬಯಸುತ್ತೇನೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದು ಸಂತಾಪ ಸೂಚಿಸಿದ್ದಾರೆ.

    ಮದೀನದಿಂದ 170 ಕಿ.ಮೀ ದೂರದಲ್ಲಿರುವ ಅಲ್-ಅಖಾಲ್ ಗ್ರಾಮದ ಸಮೀಪ, ಹಿಜ್ರಾ ರಸ್ತೆಯಲ್ಲಿ ಈ ದುರಂತ ಸಂಭವಿಸಿತ್ತು. ಬುಧವಾರ ಸಂಜೆ 7 ಗಂಟೆ ಹೊತ್ತಿಗೆ 39 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಚಾರ್ಟರ್ಡ್ ಬಸ್ ಲೋಡರ್ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ 35 ಮಂದಿ ಸಾವನ್ನಪ್ಪಿದ್ದು, 4 ಮಂದಿ ಗಾಯಗೊಂಡಿದ್ದರು.

    ಅಪಘಾತ ಸಂಭವಿಸಿದ ಬಳಿಕ ಸ್ಥಳೀಯರು ಗಾಯಾಳುಗಳನ್ನು ಅಲ್-ಹಮ್ನಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಸ್ಸಿನಲ್ಲಿ ಏಷ್ಯನ್ ಮತ್ತು ಅರಬ್ ವಲಸಿಗರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಈವರೆಗೂ ಸಾವನ್ನಪ್ಪಿದ ಪ್ರಯಾಣಿಕರ ಗುರುತು ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಬಸ್ ಅಪಘಾತಗೊಂಡ ಬಳಿಕ ಅದು ಬೆಂಕಿ ಹೊತ್ತಿ ಉರಿಯುತ್ತಿರುವ ಫೋಟೋಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  • ಸೌದಿ ಯುವ ರಾಜನಿಗೆ ಚಿನ್ನ ಲೇಪಿತ ರೈಫಲ್ ಗಿಫ್ಟ್ ಕೊಟ್ಟ ಪಾಕ್

    ಸೌದಿ ಯುವ ರಾಜನಿಗೆ ಚಿನ್ನ ಲೇಪಿತ ರೈಫಲ್ ಗಿಫ್ಟ್ ಕೊಟ್ಟ ಪಾಕ್

    ಇಸ್ಲಾಮಾಬಾದ್: ಪಾಕಿಸ್ತಾನ ಭೇಟಿ ನೀಡಿದ್ದ ಸೌದಿ ಯುವರಾಜ್ ಮೊಹ್ಮದ್ ಬಿನ್ ಸುಲ್ತಾನ್ ಅವರಿಗೆ ಪಾಕಿಸ್ತಾನ ಚಿನ್ನ ಲೇಪಿತ ರೈಫಲನ್ನು ಉಡುಗೊರೆಯಾಗಿ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಮೇಲೆ ಮೊದಲ ಬಾರಿಗೆ ವಿಶ್ವದ ಬಹುತೇಕ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸುತ್ತಿದ್ದು, ಇದೇ ವೇಳೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಸೌದಿ ಯುವರಾಜ್ 20 ಶತಕೋಟಿ ಡಾಲರ್ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಿದ್ದರು.

    ಇದೇ ವೇಳೆ ಪಾಕಿಸ್ತಾನ ಸೆನೆಟ್ ಮೊಹ್ಮದ್ ಬಿನ್ ಸುಲ್ತಾನ್ ರನ್ನು ಭೇಟಿ ಮಾಡಿದ ವೇಳೆ ಈ ಕೊಡುಗೆಯನ್ನು ನೀಡಿದ್ದಾರೆ. ಪುಲ್ವಾಮಾ ದಾಳಿಯ ಬಳಿಕ ಭಾರತ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಹಿಂತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ವಸ್ತುಗಳ ಮೇಲೆ ಶೇ.200 ರಷ್ಟು ಆಮದು ಸುಂಕವನ್ನು ಹೆಚ್ಚಳ ಮಾಡಿತ್ತು. ಆ ಬಳಿಕ ವಿಶ್ವದ 40 ರಾಷ್ಟ್ರಗಳು ಭಾರತ ಪರ ಹೇಳಿಕೆ ನೀಡಿ ಪಾಕಿಸ್ತಾನಕ್ಕೆ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಒತ್ತಡ ಹಾಕಿದೆ.

    ಪಾಕಿಸ್ತಾನದ ಬಳಿಕ ಭಾರತಕ್ಕೆ ಭೇಟಿ ನೀಡಿದ್ದ ಸೌದಿ ಯುವರಾಜ ಭಾರತದೊಂದಿಗೆ 100 ಶತಕೋಟಿ ಡಾಲರ್ ಹೂಡಿಕೆ ಹಾಗೂ ಸೌದಿ ರಾಷ್ಟ್ರದಲ್ಲಿ ವಿವಿಧ ಕಾರಣಗಳಿಂದ ಶಿಕ್ಷೆ ಅನುಭವಿಸುತ್ತಿರುವ 2 ಸಾವಿರ ಮಂದಿಯನ್ನು ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಇತ್ತ ಸೌದಿ ರಾಜಕುಮಾರನನ್ನು ಪ್ರಧಾನಿ ಮೋದಿ ಅವರು ಸ್ವಾಗತ ಕೋರಿರುವ ಕುರಿತು ದೇಶದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷವೂ ಕೂಡ ಮೋದಿ ಅವರು ಸೌದಿ ರಾಜಕುಮಾರರನ್ನು ಅಪ್ಪಿ ಸ್ವಾಗತಿಸಿರುವುದನ್ನು ಟೀಕಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೌದಿಯಲ್ಲಿ ಮೈಸೂರು ಮೂಲದ ವ್ಯಕ್ತಿ ಸಾವು- ಪ್ರತಾಪ್ ಸಿಂಹ ಟ್ವೀಟ್‍ಗೆ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್

    ಸೌದಿಯಲ್ಲಿ ಮೈಸೂರು ಮೂಲದ ವ್ಯಕ್ತಿ ಸಾವು- ಪ್ರತಾಪ್ ಸಿಂಹ ಟ್ವೀಟ್‍ಗೆ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್

    ಮೈಸೂರು: ಸೌದಿಯಲ್ಲಿ ಮೈಸೂರು ಮೂಲದ ವ್ಯಕ್ತಿ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಮಾಡಿದ ಟ್ವೀಟ್‍ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ.

    ಮಾರ್ಚ್ 25 ರಂದು ಶಬ್ಬಿರ್ (24) ಎಂಬವರು ಸೌದಿಯಲ್ಲಿ ಮೃತರಾಗಿದ್ದರು. 9 ತಿಂಗಳ ಹಿಂದೆ ಡ್ರೈವರ್ ಕೆಲಸಕ್ಕಾಗಿ ಶಬ್ಬಿರ್ ಸೌದಿಗೆ ತೆರಳಿದ್ದರು. ಮೂರು ದಿನಗಳ ಹಿಂದೆ ನೇಣುಬಿಗಿದ ಸ್ಥಿತಿಯಲ್ಲಿ ಶಬ್ಬೀರ್ ಶವ ಪತ್ತೆಯಾಗಿತ್ತು. ಶವದ ಸ್ಥಿತಿ ನೋಡಿದ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪ ಮಾಡಿದ್ದರು.

    ಶಬ್ಬಿರ್ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಅಲ್ಲಿನ ಕಂಪೆನಿ ಮಾಲೀಕರು 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಶಬ್ಬಿರ್ ಮೃತದೇಹ ತರಿಸಿಕೊಡುವಂತೆ ಸಂಸದ ಪ್ರತಾಪ್ ಸಿಂಹಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಪ್ರತಾಪ್ ಸಿಂಹ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ಟ್ವೀಟ್ ಕೂಡ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸುಷ್ಮಾ ಸ್ವರಾಜ್ ಭಾರತೀಯ ರಾಯಭಾರಿ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.