Tag: ಸೌತ್ ಕೊರಿಯಾ

  • ಸ್ಕಿಡ್‌ ಆದ ಏರ್‌ ಕೆನಡಾ ಫ್ಲೈಟ್‌ – ಲ್ಯಾಂಡಿಂಗ್‌ ವೇಳೆ ವಿಮಾನದಲ್ಲಿ ಬೆಂಕಿ

    ಸ್ಕಿಡ್‌ ಆದ ಏರ್‌ ಕೆನಡಾ ಫ್ಲೈಟ್‌ – ಲ್ಯಾಂಡಿಂಗ್‌ ವೇಳೆ ವಿಮಾನದಲ್ಲಿ ಬೆಂಕಿ

    ಒಟ್ಟೋವಾ: ಏರ್ ಕೆನಡಾ (Air Canada Plane) ವಿಮಾನವು ಹ್ಯಾಲಿಫ್ಯಾಕ್ಸ್ ವಿಮಾನ ನಿಲ್ದಾಣದಲ್ಲಿ ಭಯಾನಕ ಲ್ಯಾಂಡಿಂಗ್ ಮಾಡಿರುವ ದೃಶ್ಯದ ವೀಡಿಯೋ ವೈರಲ್‌ ಆಗಿದೆ.

    ವಿಮಾನವು ರನ್‌ವೇಯಿಂದ ಕೆಳಕ್ಕೆ ಜಾರಿತು. ಮುರಿದ ಲ್ಯಾಂಡಿಂಗ್ ಗೇರ್‌ನೊಂದಿಗೆ ಸ್ಪರ್ಶಿಸಿದ ನಂತರ ಬೆಂಕಿ ಹೊತ್ತಿಕೊಂಡಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದನ್ನೂ ಓದಿ: ದಕ್ಷಿಣ ಕೊರಿಯಾ | ಲ್ಯಾಂಡಿಂಗ್ ಗೇರ್‌ ವೈಫಲ್ಯದಿಂದ ವಿಮಾನ ಪತನ – 179 ಮಂದಿ ದುರ್ಮರಣ

    ವಿಮಾನದ ಲ್ಯಾಂಡಿಂಗ್ ಗೇರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಈ ಘಟನೆ ಸಂಭವಿಸಿದೆ. ಇದರಿಂದಾಗಿ ರೆಕ್ಕೆ ರನ್‌ವೇಗೆ ತಾಗಿ ಬೆಂಕಿ ಹೊತ್ತಿಕೊಂಡಿತು. ತುರ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿ ಬೆಂಕಿ ನಂದಿಸಿದ್ದಾರೆ.

    ಲ್ಯಾಂಡಿಂಗ್‌ನಲ್ಲಿ ವಿಮಾನದ ಟೈರ್‌ಗಳಲ್ಲಿ ಒಂದನ್ನು ಸರಿಯಾಗಿ ನಿಯೋಜಿಸಲಾಗಿಲ್ಲ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ದೂರಿದ್ದಾರೆ. ‘ವಿಮಾನವು ಎಡಕ್ಕೆ ಸುಮಾರು 20 ಡಿಗ್ರಿ ಕೋನದಲ್ಲಿ ವಾಲಿ ಈ ಅವಘಡ ಸಂಭವಿಸಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಜರ್ಬೈಜಾನ್‌ ವಿಮಾನ ಪತನದಿಂದ 38 ಸಾವು – ʻದುರಂತʼಕ್ಕೆ ಕ್ಷಮೆ ಕೋರಿದ ಪುಟಿನ್

    ಮುಂಜಾಗ್ರತಾ ಕ್ರಮವಾಗಿ ಹ್ಯಾಲಿಫ್ಯಾಕ್ಸ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಬೋಯಿಂಗ್ 737 ದಕ್ಷಿಣ ಕೊರಿಯಾದ ಮುವಾನ್ ವಿಮಾನ ದುರಂತ ಸಂಭವಿಸಿದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ.

  • ಒಲಿಂಪಿಕ್ಸ್ ಪಂದ್ಯಾವಳಿಗೆ ಪೂರೈಕೆ ಆಯ್ತು 1 ಲಕ್ಷಕ್ಕೂ ಅಧಿಕ ಕಾಂಡೋಮ್

    ಒಲಿಂಪಿಕ್ಸ್ ಪಂದ್ಯಾವಳಿಗೆ ಪೂರೈಕೆ ಆಯ್ತು 1 ಲಕ್ಷಕ್ಕೂ ಅಧಿಕ ಕಾಂಡೋಮ್

    ಪೈಯೋಂಗ್ ಚಾಂಗ್: ದಕ್ಷಿಣ ಕೊರಿಯಾದ ಪಿಯಾಂಗ್ ಚಾಂಗ್‍ನಲ್ಲಿ ನಡೆಯಲಿರುವ 2018 ರ ಚಳಿಗಾಲದ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರಿಗೆ ಓಲಿಂಪಿಕ್ ಸಮಿತಿ ಸುಮಾರು 1 ಲಕ್ಷಕ್ಕೂ ಅಧಿಕ ಕಾಂಡೋಮ್‍ಗಳನ್ನು ಪೂರೈಕೆ ಮಾಡಿದೆ.

    ಒಲಿಂಪಿಕ್ಸ್ ಪಂದ್ಯಾವಳಿಗಳು ಮುಂದಿನ ವಾರದಿಂದ ಆರಂಭವಾಗುತ್ತಿದೆ. ಕಳೆದ ಬಾರಿ ರಷ್ಯಾದ ಸೋಚಿ ಯಲ್ಲಿ ಆಯೋಜಿಸಲಾಗಿದ್ದ ಒಲಿಂಪಿಕ್ಸ್ ಪಂದ್ಯಾವಳಿ ಗಳಿಗೆ ಪೂರೈಕೆ ಮಾಡಲಾಗಿದ್ದ 1 ಲಕ್ಷ ಕಾಂಡೋಮ್ ಗಳ ಸಂಖ್ಯೆಯನ್ನು ಹೆಚ್ಚಿಸಿ ಆಧಿಕ ಹತ್ತು ಸಾವಿರ ಕಾಂಡೋಮ್‍ಗಳನ್ನು ಪೂರೈಕೆ ಮಾಡಲಾಗಿದೆ. ಹಾಗೂ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಕೇವಲ 100 ಹೆಚ್ಚಿನ ಆಟಗಾರರು ಭಾಗವಹಿಸುತ್ತಿದ್ದಾರೆ.

     

    ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಆಟಗಾರರಿಗಾಗಿಯೇ ಪ್ರತ್ಯೇಕ ಒಲಿಂಪಿಕ್ ವಿಲೇಜ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ಆಟಗಾರರಿಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅಲ್ಲದೇ ಅಂತರಾಷ್ಟ್ರೀಯ ಅಂಚೆ ಸೇವೆ, ಹೂವಿನ ಮಾರುಕಟ್ಟೆ ಸೇರಿದಂತೆ ವಿವಿಧ ಅಂಗಡಿಗಳು, ಫಿಟ್‍ನೆಸ್ ಸೆಂಟರ್, 24 ಗಂಟೆ ಊಟದ ವ್ಯವಸ್ಥೆ, ಪ್ರಾರ್ಥನಾ ಸ್ಥಳ, ಜೊತೆಗೆ ಮನೆಯಲ್ಲಿ ಸಿಗುವ ಎಲ್ಲಾ ವ್ಯವಸ್ಥೆಗಳನ್ನ ಕಲ್ಪಿಸಲಾಗುತ್ತದೆ.

    ದಕ್ಷಿಣ ಕೊರಿಯಾದ ಕಾಂಡೋಮ್ ಉತ್ಪಾದಕರ ವಕ್ತಾರರು ಸ್ಥಳೀಯ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ, ಸದಾಶಯದಿಂದ ಕಾಂಡೋಮ್ ಪೂರೈಕೆ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ.

    ಈ ಬಾರಿ ಒಲಿಂಪಿಕ್ ವಿಲೇಜ್ ಗೆ 90 ವಿವಿಧ ದೇಶಗಳ 2,925 ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಆಗಮಿಸುವ ನಿರೀಕ್ಷೆ ಇದೆ. ಎರಡು ವಾರಗಳ ಕಾಲ ಕ್ರೀಡಾಕೂಟ ನಡೆಯಲಿದೆ.

    ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಮೊದಲ ಬಾರಿಗೆ 1988 ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಬೇಸಿಗೆ ಕ್ರೀಡಾಕೂಟದಲ್ಲಿ ಕಾಂಡೋಮ್‍ಗಳನ್ನು ಸಾರ್ವಜನಿಕವಾಗಿ ಪೂರೈಕೆ ಮಾಡಲಾಗಿತ್ತು. ಆಟಗಾರರು ಎಚ್‍ಐವಿ ವೈರಸ್ ನಿಂದ ರಕ್ಷಣೆ ಪಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಅನಂತರದಲ್ಲಿ ಈ ಕ್ರಮವನ್ನು ಮುಂದುವರೆಸಲಾಗಿತ್ತು. 2016 ರ ಬ್ರೆಜಿಲ್ ನ ರಿಯೋ ಡಿ ಜನೈರೊ ದಲ್ಲಿ ನಡೆದ ಕ್ರೀಡಾಕೂಟದಲ್ಲಿ 4.5 ಲಕ್ಷ ಕಾಂಡೋಮ್ ಗಳನ್ನು ಪೂರೈಕೆ ಮಾಡಲಾಗಿತ್ತು.