Tag: ಸೌತೆಕಾಯಿ

  • ಮಳೆಯಿಂದ ಸೌತೆಕಾಯಿ ಬೆಲೆ ಭಾರಿ ಇಳಿಕೆ – ಮೂಟೆ ಸೌತೆಕಾಯಿ 100 ರಿಂದ 150 ರೂ.ಗೆ ಸೇಲ್‌

    ಮಳೆಯಿಂದ ಸೌತೆಕಾಯಿ ಬೆಲೆ ಭಾರಿ ಇಳಿಕೆ – ಮೂಟೆ ಸೌತೆಕಾಯಿ 100 ರಿಂದ 150 ರೂ.ಗೆ ಸೇಲ್‌

    – ಬೆಲೆ ಕುಸಿತಕ್ಕೆ ರೈತರು ಕಂಗಾಲು

    ಚಿಕ್ಕಬಳ್ಳಾಪುರ: ಮಳೆ ನಿಂತರೂ ಮಳೆಯಿಂದಾದ (Rain) ಅವಾಂತರಗಳಿಗೇನು ಕಮ್ಮಿ ಇಲ್ಲ. ರೈತರು ಹಗಲು ರಾತ್ರಿ ಅನ್ನದೇ ಕಷ್ಟಪಟ್ಟು ಹೂವು ಹಣ್ಣು ತರಕಾರಿ ಎಲ್ಲವನ್ನೂ ಬೆಳೀತಾರೆ, ಆದ್ರೆ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಾಂತಾಗಿ ಅನ್ನದಾತರು (Farmers) ಸಂಕಷ್ಟಕ್ಕೆ ಸಿಲುಕುವಂತಾಗಿದೆ.

    ಸಾಲ ಸೋಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬೆಳೆದ ಸೌತೆಕಾಯಿ (Cucumber) ಆರು ಕಾಸು ಮೂರು ಕಾಸಿಗೆ ಬಿಕರಿಯಾಗುತ್ತಿದ್ದು, ರೈತರು ಕಣ್ಣೀರುಡುವಂತಾಗಿದೆ. ಇದನ್ನೂ ಓದಿ: ಸಂಡೂರು ಉಪ ಚುನಾವಣೆ| 2.5 ಕೆ.ಜಿ ಚಿನ್ನ, 25 ಕೆಜಿ ಬೆಳ್ಳಿ – ಬಂಗಾರು ಬಳಿ ಆಸ್ತಿ ಎಷ್ಟಿದೆ?

    ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹನಿ ಹನಿ ನೀರುಣಿಸಿ ಬಂಗಾರದಂಹತ ಬೆಳೆ ತೆಗೀತಾರೆ. ಹೂವು ಹಣ್ಣು ತರಕಾರಿ ಎಲ್ಲವನ್ನೂ ಬೆಳೆಯುವ ರೈತರು ಈ ಬಾರಿ ಯಥೇಚ್ಛವಾಗಿ ಸೌತೆಕಾಯಿಯನ್ನ ಬೆಳೆದಿದ್ದಾರೆ. ನಿರಂತರ ಮಳೆಯಿಂದ ಸೌತೆಕಾಯಿ ಇಳುವರಿಯೂ ಹೆಚ್ಚಾಗಿದ್ದು ಚಿಕ್ಕಬಳ್ಳಾಪುರ ತರಕಾರಿ ಮಾರುಕಟ್ಟೆಗೆ ಹೆಚ್ಚಿನ ಸೌತೆಕಾಯಿ ಬಂದಿದೆ. ಇದ್ರಿಂದ ಒಂದು ಮೂಟೆ ಸೌತೆಕಾಯಿ ಕೇವಲ 100 ರಿಂದ 150 ರೂ.ಗೆ ಬಿಕರಿಯಾಗುತ್ತಿದ್ದು ಸೌತೆಕಾಯಿ ಬೆಳೆದ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆ | ಖಾದ್ರಿ ಬೆಂಬಲಿಗರಿಂದ ಕಾಂಗ್ರೆಸ್‌ ಅಭ್ಯರ್ಥಿಯ ಕಾರಿನ ಗಾಜು ಪುಡಿಪುಡಿ 

    ಇನ್ನೂ ಅತಿಯಾದ ಮಳೆಯ ಕಾರಣ ಒಂದು ಕಡೆ ಸೌತೆಕಾಯಿ ಬಂಪರ್ ಇಳುವರಿಯೂ ಬಂದಿದೆ. ಮತ್ತೊಂದು ಕಡೆ ಮಳೆ ಹೊಡೆತಕ್ಕೆ ಹೊಸ ಹೂವಿನ ಮೊಗ್ಗು ಎಲ್ಲವೂ ಉದುರಿ ಮುಂದೆ ಫಸಲು ಕುಂಠಿತವಾಗುತ್ತಿದೆ. ಮಳೆಯಿಂದ ಸೌತೆಕಾಯಿ ಬೆಳೆಗೆ ರೋಗ ರುಜಿನಗಳ ಬಾಧೆ ಸಹ ಆವರಿಸುತ್ತಿದ್ದು, ಸಾವಿರಾರು ರೂಪಾಯಿ ಕ್ರಿಮಿನಾಶಕಗಳಿಗೆ ಖರ್ಚು ಮಾಡಬೇಕಿದೆ.

    ಇದರಿಂದ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಇಲ್ಲದೇ ಅನ್ನದಾತ ಆತಂಕಕ್ಕೀಡಾಗುವಂತಾಗಿದೆ. ಮಳೆ ಬಂದರೂ ಕಷ್ಟ, ಬರಿದಿದ್ದರೂ ಕಷ್ಟ ಅನ್ನೋ ಹಾಗೆ ರೈತರಿಗೆ ನಷ್ಟ ಮಾತ್ರ ತಪ್ಪಿದ್ದಲ್ಲ ಎಂಬಂತಾಗಿದೆ.

  • ಕೂಲ್ ಕೂಲ್ ಆಗಿ ಮಾಡಿ ‘ಕೂಲಂಟ್ ಕುಕುಂಬರ್ ಡ್ರಿಂಕ್’

    ಕೂಲ್ ಕೂಲ್ ಆಗಿ ಮಾಡಿ ‘ಕೂಲಂಟ್ ಕುಕುಂಬರ್ ಡ್ರಿಂಕ್’

    ಬೇಸಿಗೆಯಲ್ಲಿ ಕೂಲ್ ಆಗಿ ಇರಲು ಜನರು ಹೆಚ್ಚು ನೀರಿನಾಂಶವಿರುವ ಆಹಾರವನ್ನು ಸೇವಿಸುತ್ತಾರೆ. ಅದರಲ್ಲಿ ಹೆಚ್ಚು ಜನರು ಸೌತೆಕಾಯಿಯನ್ನು ಬೇಸಿಗೆ ಸಮಯದಲ್ಲಿ ಹೆಚ್ಚು ತಿನ್ನುತ್ತಾರೆ. ನಿಮ್ಮ ದೇಹವನ್ನು ಹೆಚ್ಚು ತಂಪು ಮಾಡಲು ‘ಕೂಲಂಟ್ ಕುಕುಂಬರ್ ಡ್ರಿಂಕ್’ ಟ್ರೈ ಮಾಡಿ.

    ಬೇಕಾಗಿರುವ ಪದಾರ್ಥಗಳು:
    * ಕತ್ತರಿಸಿದ ಸೌತೆಕಾಯಿ – 1 ಕಪ್
    * ನೀರು – 1/2 ಕಪ್
    * ಪುದೀನಾ ಎಲೆಗಳು – 1/4 ಕಪ್
    * ಹುರಿದ ಜೀರಿಗೆ ಪುಡಿ – 1/2 ಟೀಸ್ಪೂನ್


    * ಕಪ್ಪು ಉಪ್ಪು – 1/4 ಟೀಸ್ಪೂನ್
    * ಸಕ್ಕರೆ – 2 ಟೀಸ್ಪೂನ್
    * ಉಪ್ಪು – 1/8 ಟೀಸ್ಪೂನ್
    * ಐಸ್ ಕ್ಯೂಬ್ಸ್ – 4-6
    * ನೀರಿನಲ್ಲಿ ಸಬ್ಜಾ ಬೀಜಗಳನ್ನು ನೆನೆಸಿಡಿ

    ಮಾಡುವ ವಿಧಾನ:
    * ‘ಕೂಲಂಟ್ ಕುಕುಂಬರ್ ಡ್ರಿಂಕ್’ ಮಾಡಲು ಮಿಕ್ಸಿಗೆ ಐಸ್ ಕ್ಯೂಬ್ ಸೇರಿದಂತೆ ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಹಾಕಿ ರುಬ್ಬಿ.
    * ಸರ್ವಿಂಗ್ ಗ್ಲಾಸ್‍ನಲ್ಲಿ ಸುರಿಯಿರಿ. ಹುರಿದ ಜೀರಿಗೆ ಪುಡಿಯಿಂದ ಜ್ಯೂಸ್ ಅಲಂಕರಿಸಿ.


    * ಅಗತ್ಯವಿದ್ದರೆ ಹೆಚ್ಚುವರಿ ಐಸ್‍ಕ್ಯೂಬ್‍ಗಳನ್ನು ಸೇರಿಸಿ.

     

  • ಕೊರೊನಾದಿಂದ ಗ್ರಾಮ ಸೀಲ್‍ಡೌನ್- ಬೆಳೆದ ಬೆಳೆ ಮಣ್ಣು ಪಾಲು

    ಕೊರೊನಾದಿಂದ ಗ್ರಾಮ ಸೀಲ್‍ಡೌನ್- ಬೆಳೆದ ಬೆಳೆ ಮಣ್ಣು ಪಾಲು

    ಮಂಡ್ಯ: ಕೊರೊನಾದಿಂದ ಇಡೀ ಗ್ರಾಮ ಸೀಲ್‍ಡೌನ್ ಆಗಿರುವ ಕಾರಣ ರೈತರು ಬೆಳೆದ ಸುನಾಮಿ ಸೌತೆಕಾಯಿ ಮಣ್ಣು ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಜರುಗಿದೆ.

    ಕ್ಯಾತನಹಳ್ಳಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮಂದಿಗೆ ಕೊರೊನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಇದೇ ಗ್ರಾಮ ರೈತ ಕುಮಾರ್ ಸಾವಿರಾರು ರೂಪಾಯಿ ಬಂಡವಾಳ ಹಾಕಿ ಸುನಾಮಿ ಸೌತೆಕಾಯಿಯನ್ನು ಬೆಳೆದಿದ್ದರು. ಇದೀಗೆ ಸಮೃದ್ಧಿಯಾಗಿ ಬಂದಿರುವ ಬೆಳೆಯನ್ನು ಕಟಾವು ಮಾಡಿಸಲಾಗದೇ ಬೆಳೆದ ಬೆಳೆಯಲ್ಲಾ ಮಣ್ಣು ಪಾಲಾಗುತ್ತಿದೆ.

    ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿ ಇದ್ದ ಕುಮಾರ್ ಇದೀಗ ಕೊರೊನಾದ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ತಾವು ಹಾಕಿದ ಬಂಡವಾಳವು ಕೈ ಸೇರಲಿಲ್ಲ ಎಂದು ನಿರಾಸೆ ಅನುಭವಿಸುತ್ತಿದ್ದಾರೆ. ಸರ್ಕಾರ ನನ್ನ ನೆರವಿಗೆ ಬರಬೇಕೆಂದು ಕುಮಾರ್ ಮನವಿ ಮಾಡಿಕೊಳ್ಳುತ್ತಿದ್ದಾರೆ.

  • ಕಲ್ಲಂಗಡಿ, ಸೌತೆಕಾಯಿ ತಿಂದರೆ ಕೊರೊನಾ ಬರೋ ಸಾಧ್ಯತೆ ಕಡಿಮೆ: ಬಿ.ಸಿ.ಪಾಟೀಲ್

    ಕಲ್ಲಂಗಡಿ, ಸೌತೆಕಾಯಿ ತಿಂದರೆ ಕೊರೊನಾ ಬರೋ ಸಾಧ್ಯತೆ ಕಡಿಮೆ: ಬಿ.ಸಿ.ಪಾಟೀಲ್

    ಕಲಬುರಗಿ: ಕಲ್ಲಂಗಡಿ ಹಾಗೂ ಸೌತೆಕಾಯಿ ಹಣ್ಣು ತಿಂದರೆ ಲಂಗ್ಸ್ ಕ್ಲಿಯರ್ ಆಗುತ್ತೆ, ಇದರಿಂದ ಕೊರೊನಾ ಬರದಂತೆ ನಾವು ತಡೆ ಹಿಡಿಯಬಹುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇಂದು ನಗರದಲ್ಲಿ ನಡೆದ ಕೃಷಿ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಕಲ್ಲಂಗಡಿ ಹಣ್ಣು ತಿಂದರೆ ಕೊರೊನಾ ಬರುತ್ತೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ವಿಜ್ಞಾನಿಗಳ ಪ್ರಕಾರ ಕಲ್ಲಂಗಡಿ ಹಾಗೂ ಸೌತೆಹಣ್ಣು ಜಾಸ್ತಿ ತಿನ್ನಬೇಕು. ಈ ಮೂಲಕ ಲಂಗ್ಸ್ ಕ್ಲಿಯರ್ ಇದ್ದರೆ ಕೊರೊನಾ ಸಹ ಬರುವುದಿಲ್ಲ ಎಂದರು.

    ಇದರ ಬಗ್ಗೆ ಜನರಿಗೆ ಮಾಧ್ಯಮದವರು ಹಾಗೂ ಅಧಿಕಾರಿಗಳು ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು. ಸಭೆಗೂ ಮುನ್ನ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಚಂದ್ರಕಾಂತ ಕುಟುಂಬಕ್ಕೆ, ಸರ್ಕಾರದ 5 ಲಕ್ಷ ಹಾಗೂ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಪರಿಹಾರದ ಚೆಕ್‍ನ್ನು ಬಿ.ಸಿ.ಪಾಟೀಲ್ ವಿತರಿಸಿದರು. ಇದೇ ವೇಳೆ ಮಾತನಾಡಿದ ಸಚಿವರು ಯಾವುದೇ ಕಾರಣಕ್ಕೂ ರೈತರ ಬೆಳೆದ ಸಾಮಗ್ರಿಗಳನ್ನು ಪೊಲೀಸರು ತಡೆಹಿಡಿಯ ಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದರು.

  • ಸೌತೆಕಾಯಿ ಬೆಲೆ ಭಾರೀ ಕುಸಿತ – ಸಂಕಷ್ಟಕ್ಕೆ ಸಿಲುಕಿದ ರೈತರು

    ಸೌತೆಕಾಯಿ ಬೆಲೆ ಭಾರೀ ಕುಸಿತ – ಸಂಕಷ್ಟಕ್ಕೆ ಸಿಲುಕಿದ ರೈತರು

    ಮೈಸೂರು: ಜಿಲ್ಲೆಯ ಮಾರುಕಟ್ಟೆಯಲ್ಲಿ ಸೌತೆಕಾಯಿ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡು ರೈತರು ಕಂಗಾಲಾಗಿದ್ದಾರೆ.

    ನೆರೆ ಪ್ರವಾಹದಿಂದ ಮೊದಲೇ ತತ್ತರಿಸಿ ಹೋಗಿದ್ದ ರೈತರಿಗೆ ಈಗ ಸೌತೆಕಾಯಿ ಬೆಲೆ ದಿಢೀರನೆ ಭಾರೀ ಇಳಿಕೆ ಕಂಡಿರೋದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಚಳಿಗಾಲದ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿದಷ್ಟು ಸೌತೆಕಾಯಿ ಬೆಲೆ ಕುಸಿದಿದೆ. ಒಂದು ತಿಂಗಳ ಹಿಂದೆ 15 ರಿಂದ 20 ರೂಪಾಯಿ ಕೆಜಿ ಇದ್ದ ಸೌತೆಕಾಯಿ ಈಗ 2 ರಿಂದ ಮೂರು ರೂಪಾಯಿಗೆ ಇಳಿದಿದೆ. ಇದರಿಂದ ರೈತರಿಗೆ ಹಾಕಿದ ಬಂಡವಾಳವೂ ವಾಪಸ್ ಬರುತ್ತಿಲ್ಲ.

    ಬಂಡವಾಳ ಇರಲಿ ಹೊಲದಿಂದ ಮಾರುಕಟ್ಟೆಗೆ ಸೌತೆಕಾಯಿ ಸಾಗಿಸಿದ ವಾಹನ ಬಾಡಿಗೆ ಹಣವೂ ಇದರಿಂದ ಸಿಗುತ್ತಿಲ್ಲ. ಸೌತೆಕಾಯಿಗೆ ಕನಿಷ್ಟ ಕೆಜಿಗೆ 10 ರೂಪಾಯಿ ಸಿಗದಿದ್ದರೆ ಹಾಕಿದ ಬಂಡವಾಳ ವಾಪಾಸ್ ಬರಲ್ಲ. ರೈತರು ಒಂದು ಎಕ್ರೆಯಲ್ಲಿ ಸೌತೆಕಾಯಿ ಬೆಳೆಯಲು ಕನಿಷ್ಟ 50 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಇದರಿಂದ ಎಕ್ರೆಗೆ ಕನಿಷ್ಟ 10 ಸಾವಿರ ಕೆಜಿ ಇಳುವರಿ ಬರುತ್ತೆ. ಆದರೆ ಸೌತೆಕಾಯಿ ಬೆಲೆ ಈ ಮಟ್ಟದಲ್ಲಿ ಕುಸಿದ ಕಾರಣ ರೈತರು ಕಷ್ಟಕ್ಕೆ ಸಿಲುಕಿದ್ದಾರೆ.

  • ಸೌತೆಕಾಯಿ ತಿನ್ನುವುದರಿಂದ ಆರೋಗ್ಯದ ಮೇಲೆ ಆಗೋ ಪರಿಣಾಮದ ಬಗ್ಗೆ ಓದಿ

    ಸೌತೆಕಾಯಿ ತಿನ್ನುವುದರಿಂದ ಆರೋಗ್ಯದ ಮೇಲೆ ಆಗೋ ಪರಿಣಾಮದ ಬಗ್ಗೆ ಓದಿ

    ಸೌತೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ತಿಳಿದುಕೊಂಡಿರುತ್ತಾರೆ. ಕೆಲವರು ತಮ್ಮ ಡಯಟ್‍ಗೆಂದು ಸೌತೆಕಾಯಿ ತಿನ್ನುತ್ತಾರೆ. ಸೌತೆಕಾಯಿ ತಿನ್ನುವುದರಿಂದ ಒಳ್ಳೆಯದಾಗುತ್ತದೆ. ಸೌತೆಕಾಯಿ ಒಳ್ಳೆಯದು ಅಂತಾ ಹೆಚ್ಚಾಗಿ ಸೇವನೆ ಮಾಡಿದ್ರೆ ಅದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

    ಕೆಲವು ಜನರು ಡಯಟ್ ಎಂದು ದಿನಕ್ಕೆ 8 ರಿಂದ 10 ಸೌತೆಕಾಯಿ ತಿನ್ನುತ್ತಾರೆ. ಸೌತೆಕಾಯಿ ತಿನ್ನುವುದರಿಂದ ನಮ್ಮ ದೇಹಕ್ಕೆ ಒಳ್ಳೆಯದಾಗುತ್ತೆ. ಆದರೆ ಅವಶ್ಯಕ್ಕಿಂತ ಹೆಚ್ಚು ಸೌತೆಕಾಯಿ ತಿಂದರೆ ಅಮೃತವೂ ವಿಷವಾಗುತ್ತದೆ ಎನ್ನುವ ಗಾದೆ ಮಾತಿನಂತೆ ಸೌತೆಕಾಯಿ ಕೂಡ ವಿಷ ಆಗುತ್ತದೆ.

    ರಾತ್ರಿ ಸಮಯದಲ್ಲಿ ಎಂದಿಗೂ ಸೌತೆಕಾಯಿ ತಿನ್ನಬೇಡಿ. ಬೆಳಗ್ಗೆ ಹೊತ್ತು ಸೌತೆಕಾಯಿ ತಿಂದರೆ ನಿಮ್ಮ ದೇಹಕ್ಕೆ ಅಧಿಕ ಲಾಭವಾಗುತ್ತದೆ. ಮಧ್ಯಾಹ್ನ ತಿಂದರೆ ಸಾಮಾನ್ಯವಾಗಿ ಒಳ್ಳೆಯದಾಗುತ್ತದೆ. ಆದರೆ ರಾತ್ರಿ ಸೌತೆಕಾಯಿ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ.

    ಸೌತೆಕಾಯಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕುಕುರ್ಬಿಟೈನ್ ಎಂಬ ವಿಷಕಾರಿ ಅಂಶವಿರುತ್ತದೆ. ನೀವು ಅವಶ್ಯಕ್ಕಿಂತ ಹೆಚ್ಚು ಸೌತೆಕಾಯಿ ತಿಂದರೆ ನಿಮ್ಮೆ ದೇಹದಲ್ಲಿ ಟಾಕ್ಸಿಕ್ ಅಂಶ ಸೇರುತ್ತದೆ. ಇದರಿಂದ ನಿಮ್ಮ ಲಿವರ್, ಪ್ಯಾಂಕ್ರಿಯಾಟಿಕ್ ಮತ್ತು ಮೂತ್ರಪಿಂಡ ಊತವಾಗುತ್ತದೆ. ಹಾಗಾಗಿ ಸೌತೆಕಾಯಿಯನ್ನು ಮಿತಿಯಲ್ಲಿ ತಿಂದರೆ ಉತ್ತಮ.

    ಸೌತೆಕಾಯಿ ತಣ್ಣಗಿನ ಪದಾರ್ಥ. ನಿಮಗೆ ಕಫ, ಶೀತ, ನೆಗಡಿ ಅಥವಾ ಉಸಿರಾಟದ ಸಮಸ್ಯೆ ಇದ್ದರೆ ಸೌತೆಕಾಯಿ ತಿನ್ನಬೇಡಿ. ಸೌತೆಕಾಯಿಯನ್ನು ಮಿತವಾಗಿ ಸೇವನೆ ಮಾಡಿದ್ದಲ್ಲಿ ನಿಮ್ಮ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv