Tag: ಸೌಂದರ್ಯ ಸ್ಪರ್ಧೆ

  • 21 ವರ್ಷಗಳ ಬಳಿಕ ಭಾರತದ ಮಹಿಳೆಗೆ ಒಲಿಯಿತು ಮಿಸೆಸ್ ವರ್ಲ್ಡ್ ಕಿರೀಟ

    21 ವರ್ಷಗಳ ಬಳಿಕ ಭಾರತದ ಮಹಿಳೆಗೆ ಒಲಿಯಿತು ಮಿಸೆಸ್ ವರ್ಲ್ಡ್ ಕಿರೀಟ

    ವಾಷಿಂಗ್ಟನ್: 21 ವರ್ಷಗಳ ಬಳಿಕ ಭಾರತದ ಮಹಿಳೆಯಗೆ ಮಿಸೆಸ್ ವರ್ಲ್ಡ್ (Mrs. World) ಕಿರೀಟ ಲಭಿಸಿದೆ. ಭಾರತವನ್ನು ಪ್ರತಿನಿಧಿಸಿ, 63 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಸರ್ಗಮ್ ಕೌಶಲ್ (Sargam Koushal) ಮಿಸೆಸ್ ವರ್ಲ್ಡ್ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ.

    ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಮಿಸೆಸ್ ಇಂಡಿಯಾ ಸ್ಪರ್ಧೆಯ ವ್ಯವಸ್ಥಾಪಕ ಸಂಸ್ಥೆ, ದೀರ್ಘ ಕಾಯುವಿಕೆ ಇದೀಗ ಮುಗಿದಿದೆ. 21 ವರ್ಷಗಳ ಬಳಿಕ ನಾವು ಕಿರೀಟವನ್ನು ಮರಳಿ ಪಡೆದಿದ್ದೇವೆ ಎಂದು ತಿಳಿಸಿದೆ.

     

    View this post on Instagram

     

    A post shared by Mrs. India Inc (@mrsindiainc)

    ಸರ್ಗಮ್ ಕೌಶಲ್ ಯಾರು?
    ಜಮ್ಮು ಮತ್ತು ಕಾಶ್ಮೀರ ಮೂಲದ ಸರ್ಗಮ್ ಕೌಶಲ್ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಈ ಹಿಂದೆ ಸರ್ಗಮ್ ವಿಜಾಗ್‌ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ತಮ್ಮ ಪತಿ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ನಂಬರ್‌ ಒನ್ ಸ್ಥಾನ ಗಿಟ್ಟಿಸಿಕೊಂಡ ರಶ್ಮಿಕಾ ಮಂದಣ್ಣ

    ಮಿಸೆಸ್ ವರ್ಲ್ಡ್ ಕಿರೀಟವನ್ನು ತೊಟ್ಟಿರುವ ಸರ್ಗಮ್, ನಾವು 21 ವರ್ಷಗಳ ಬಳಿಕ ಕಿರೀಟವನ್ನು ಮರಳಿ ಪಡೆದಿದ್ದೇವೆ. ನಾನು ತುಂಬಾ ಉತ್ಸುಕಳಾಗಿದ್ದೇನೆ. ಲವ್ ಯು ಇಂಡಿಯಾ, ಲವ್ ಯು ವರ್ಲ್ಡ್ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

    ಏನಿದು ಮಿಸೆಸ್ ವರ್ಲ್ಡ್ ಸ್ಪರ್ಧೆ?
    ಮಿಸೆಸ್ ವರ್ಲ್ಡ್ ವಿವಾಹಿತ ಮಹಿಳೆಯರ ಸೌಂದರ್ಯ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯನ್ನು 1984 ರಲ್ಲಿ ಅಮೆರಿಕದಲ್ಲಿ ಪ್ರಾರಂಭಿಸಲಾಯಿತು. ಆರಂಭದಲ್ಲಿ ಈ ಸ್ಪರ್ಧೆಯನ್ನು ಮಿಸೆಸ್ ವುಮನ್ ಆಫ್ ದಿ ವರ್ಲ್ಡ್ ಎಂದು ಹೆಸರಿಸಲಾಗಿತ್ತು. ಬಳಿಕ 1988 ರಲ್ಲಿ ಮಿಸೆಸ್ ವರ್ಲ್ಡ್ ಎಂದು ಕರೆಯಲ್ಪಟ್ಟಿತು. ಮಿಸೆಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆಗೆ 80 ಕ್ಕೂ ಹೆಚ್ಚು ದೇಶಗಳು ಸ್ಪರ್ಧಿಸಿವೆ. ಅಮೆರಿಕ ಹೆಚ್ಚು ಸಂಖ್ಯೆಯ ವಿಜೇತರನ್ನು ಹೊಂದಿದೆ. ಇದನ್ನೂ ಓದಿ: ಮಗು ಯಾವ ಧರ್ಮಕ್ಕೆ ಸೇರುತ್ತೆ ಎಂದು ಕೇಳಿದವರಿಗೆ ಖಡಕ್ ಉತ್ತರ ಕೊಟ್ಟ ನಟಿ ದೆವೊಲೀನಾ

    2001 ರಲ್ಲಿ ಡಾ. ಅದಿತಿ ಗೋವಿತ್ರಿಕರ್ ಅಸ್ಕರ್ ಮಿಸೆಸ್ ವರ್ಲ್ಡ್ ಕಿರೀಟವನ್ನು ಪಡೆದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. ಇದಾದ 21 ವರ್ಷಗಳ ಬಳಿಕ ಇದೀಗ ಮಿಸೆಸ್ ವರ್ಲ್ಡ್-2022 ರ ಕಿರೀಟ ಸರ್ಗಮ್ ಕೌಶಲ್‌ರದ್ದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸೌಂದರ್ಯ ಸ್ಪರ್ಧೆಯಲ್ಲಿ ರ‍್ಯಾಂಪ್ ವಾಕ್ – ಐವರು ಪೊಲೀಸರ ವರ್ಗಾವಣೆ

    ಸೌಂದರ್ಯ ಸ್ಪರ್ಧೆಯಲ್ಲಿ ರ‍್ಯಾಂಪ್ ವಾಕ್ – ಐವರು ಪೊಲೀಸರ ವರ್ಗಾವಣೆ

    ಚೆನ್ನೈ: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದಕ್ಕೆ ವಿಶೇಷ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

    ಸೌಂದರ್ಯ ಸ್ಪರ್ಧೆಯಲ್ಲಿ ಪೊಲೀಸ್ ಸಿಬ್ಬಂದಿ ರ‍್ಯಾಂಪ್ ವಾಕ್ ಮಾಡಿದ ಹಿನ್ನೆಲೆ ನಾಗಪಟ್ಟಣಂ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಅಮೃತ ಮಹೋತ್ಸವಕ್ಕೆ 750 ಗ್ರಾಮೀಣ ಹೆಣ್ಣುಮಕ್ಕಳೇ ತಯಾರಿಸಿದ ಆಜಾದಿ ಉಪಗ್ರಹ ಉಡಾವಣೆ – ಏನಿದರ ವಿಶೇಷತೆ?

    ಕಳೆದ ಭಾನುವಾರ ಮೈಲಾಡುತುರೈ ಜಿಲ್ಲೆಯ ಸೆಂಬನಾರ್ಕೋವಿಲ್‍ನಲ್ಲಿ ಖಾಸಗಿ ಸಂಸ್ಥೆಯೊಂದು ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ಇದರಲ್ಲಿ ನಟಿ ಯಶಿಕಾ ಆನಂದ್ ವಿಶೇಷ ಅಥಿತಿಯಾಗಿ ಭಾಗವಹಿಸಿ, ಸ್ಪರ್ಧೆಯನ್ನು ಉದ್ಘಾಟಿಸಿದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ವೈರಲ್ ಆಗಿತ್ತು. ಇದನ್ನೂ ಓದಿ: ರಾಜಕುಮಾರ್ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ನಾಗಪಟ್ಟಣಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜವಗರ್ ಅವರು, ಪ್ರಸ್ತುತ ಸೆಂಬನಾರ್ಕೋವಿಲ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಸಹಾಯಕ ಇನ್ಸ್‌ಪೆಕ್ಟರ್ ಸುಬ್ರಮಣಿಯನ್ ಸೇರಿದಂತೆ ರೇಣುಕಾ, ಅಶ್ವಿನಿ, ನಿತ್ಯಶೀಲಾ ಮತ್ತು ಶಿವನೇಸನ್ ಅನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಿಸ್ ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಮಂಗ್ಳೂರು ಬೆಡಗಿಗೆ ಮಿಸ್ ಟೀನ್ ಪಟ್ಟ

    ಮಿಸ್ ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಮಂಗ್ಳೂರು ಬೆಡಗಿಗೆ ಮಿಸ್ ಟೀನ್ ಪಟ್ಟ

    ಮಂಗಳೂರು: ಥೈಲ್ಯಾಂಡ್‍ನಲ್ಲಿ ಮಿಸ್ ವರ್ಲ್ಡ್ ಸೂಪರ್ ಮಾಡೆಲ್ 2019ರ ಸ್ಪರ್ಧೆಯಲ್ಲಿ ಮಂಗಳೂರು ಮೂಲದ ಬೆಡಗಿ ಮಿಸ್ ಟೀನ್ ಆಗಿ ಆಯ್ಕೆಯಾಗಿದ್ದಾರೆ.

    ವೆನ್ಸಿಟಾ ಡಯಾಸ್ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಏಷ್ಯಾದ ವಿವಿಧ ಕಡೆಗಳಿಂದ ಬಂದಿದ್ದ 16 ಮಂದಿ ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದರು. ಆ ಪೈಕಿ ವೆನ್ಸಿಟಾ ಮಿಸ್ ಟೀನ್ ಆಗಿ ಆಯ್ಕೆಯಾಗಿದ್ದಾರೆ.

    ಮಂಗಳೂರಿನ ನಾಗುರಿ ನಿವಾಸಿ ವೆನ್ಸಿಟಾ ಸಂಗೀತ, ಡ್ಯಾನ್ಸ್, ನಟನೆ ಹೀಗೆ ಬಹುಮುಖಿ ಪ್ರತಿಭೆಗಳನ್ನು ಹೊಂದಿದ್ದಾರೆ. ವಾಲ್ಟರ್ ಮತ್ತು ಜ್ಯೋತಿ ಡಯಾಸ್ ದಂಪತಿಯ ಪುತ್ರಿಯಾಗಿರುವ ಇವರು ಮಂಗಳೂರಿನಲ್ಲಿ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿನಿಯಾಗಿದ್ದಾರೆ.

    ನ. 12ರಿಂದ 16ರವರೆಗೆ ಥೈಲ್ಯಾಂಡ್‍ನಲ್ಲಿ ಈ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಿಯದರ್ಶಿನಿ ಗೆದ್ದರೆ, ಬೆಂಗಳೂರು ಮೂಲದ ಆಶಾ ಮೊದಲ ರನ್ನರಪ್ ಆಗಿದ್ದಾರೆ. ಎರಡನೇಯ ರನ್ನರಪ್ ಆಗಿ ದುಬೈ ಮೂಲದ ರಿಹಾ ಖಾನ್ ಆಗಿದ್ದಾರೆ.

  • ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರಶಸ್ತಿ ಗೆದ್ದ ಬೀದರ್ ಬೆಡಗಿ

    ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರಶಸ್ತಿ ಗೆದ್ದ ಬೀದರ್ ಬೆಡಗಿ

    ಬೀದರ್: ಗಡಿ ಜಿಲ್ಲೆಯ ಕುಗ್ರಾಮದ ಬೆಡಗಿ ನಿಶಾ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌-2019 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದ ಜಿಲ್ಲೆಯ ಹಾಗೂ ರಾಜ್ಯದ ಏಕೈಕ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಗಡಿ ಜಿಲ್ಲೆ ಬೀದರಿನ ದುಮ್ಮಸ್ನೂರು ಎಂಬ ಕುಗ್ರಾಮ ನಿವಾಸಿಯಾಗಿರುವ ನಿಶಾ ತಾಳಂಪಳ್ಳಿ, 2019 ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪಿಯುಸಿವರೆಗೆ ಜಿಲ್ಲೆಯಲ್ಲೇ ಶಿಕ್ಷಣ ಮುಗಿಸಿರುವ ನಿಶಾ, ನಂತರ ಹೈದರಾಬಾದ್ ನಲ್ಲಿ ಡಿಪ್ಲೊಮಾ ಇನ್ ಏವಿಎಷನ್ ಮಾಡಿದ್ದಾರೆ. ಹೈದರಾಬಾದ್ ನಲ್ಲಿ ಒಂದು ತಿಂಗಳ ಕಾಲ ನಡೆದ ಇಂಡಿಯನ್ ಫ್ಯಾಷನ್ ಪಿಸ್ತಾ ಆಡಿಷನ್ ನಲ್ಲಿ ಭಾಗಿಯಾಗಿ ಕೊನೆಗೂ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರಶಸ್ತಿಯನ್ನು ಗೆದ್ದಿದ್ದಾರೆ.

    ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಈ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆ ನವೆಂಬರ್ 14ರಿಂದ 18ರವರೆಗೆ ನಡೆದಿದೆ. ಅಂತಿಮ ಸುತ್ತಿನಲ್ಲಿ ನಿಶಾ 30 ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ನಿಶಾ ಈ ಸ್ಪರ್ಧೆಗೆ ಆಯ್ಕೆಯಾಗಿದ್ದಾಗ ಬೀದರ್ ರಾಜ್ಯ ಹಾಗೂ ದೇಶದ ಜನ ಹೆಮ್ಮೆ ಪಟ್ಟಿದ್ದರು. ಆದರೆ ಈಗ ನಿಶಾ ಪ್ರಶಸ್ತಿ ಗೆದ್ದಿದ್ದು ರಾಜ್ಯದ ಜನತೆ ಖುಷಿಪಡುತ್ತಿದ್ದಾರೆ. ಸ್ಪರ್ಧೆಗೆ ಆಯ್ಕೆ ಆಗಿದ್ದಾಗ ನಿಶಾ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವ ಮೂಲಕ ನನಗೆ ಸಪೋರ್ಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

     

  • ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗ್ಳೂರಿನ ವೈದ್ಯೆ ರನ್ನರ್ ಅಪ್

    ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗ್ಳೂರಿನ ವೈದ್ಯೆ ರನ್ನರ್ ಅಪ್

    ಒಟ್ಟಾವಾ: ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ವೈದ್ಯೆ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದಾರೆ.

    ಡಾ. ಪ್ರಿಯಾ ಶರತ್, ಡೆರ್ಮಾಟೋಲೊಜಿಸ್ಟ್ (ಚರ್ಮರೋಗ ತಜ್ಞೆ) ಹಾಗೂ ಕಾಸ್ಮೆಟಾಲಜಿಸ್ಟ್ ಆಗಿದ್ದು, ಇತ್ತೀಚೆಗೆ ಟೊರೊಂಟೊದಲ್ಲಿ ನಡೆದ ಮಿಸೆಸ್ ಯೂನೈಟೆಡ್ ನೇಶನ್ ಇಂಟರ್ ನ್ಯಾಷನಲ್ ಸೌಂದರ್ಯ ಸ್ಪರ್ಧೆ 2019ರಲ್ಲಿ ಭಾಗವಹಿಸಿದ್ದರು. ಪ್ರಿಯಾ ಶರತ್ ಈ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರು.

    2018ರಲ್ಲಿ ಮಿಸೆಸ್ ಇಂಡಿಯಾ ಗ್ಯಾಲೆಕ್ಸಿ ಸ್ಪರ್ಧೆಯಲ್ಲಿ ಪ್ರಿಯಾ ತನ್ನ ಸಾಮಾಜಿಕ ಕೆಲಸಕ್ಕಾಗಿ ಮಿಸೆಸ್ ಸೋಶಿಯಲ್ ಐಕಾನ್ ಕಿರೀಟವನ್ನು ಗೆದಿದ್ದರು. ಬಳಿಕ ಪ್ರಿಯಾ ಅವರು ನವದೆಹಲಿಯಲ್ಲಿ ನಡೆದ ಮಿಸೆಸ್. ಇಂಡಿಯಾ ಯೂನೈಟೆಡ್ ನೇಶನ್ ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ ಗೆಲ್ಲಲು ಹೋಗಿದ್ದರು.

    ಪ್ರಿಯಾ ಶರತ್ ಮೂಲತಃ ಮಂಗಳೂರಿನವರಾಗಿದ್ದು, ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದಿದ್ದರು. ಬಳಿಕ  ಮಂಗಳೂರಿನ ಮುಲ್ಲರ್ ಕಾಲೇಜಿನಿಂದ ಎಂಡಿ ಪದವಿಯನ್ನು ಪಡೆದುಕೊಂಡಿದ್ದರು. ಸದ್ಯ ಪ್ರಿಯಾ ಅವರು ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಹಾಗೂ ರಿಸರ್ಚ್ ಸೆಂಟರ್ ನಲ್ಲಿ ಚರ್ಮರೋಗ ತಜ್ಞೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ನಾನು ರ‍್ಯಾಂಪ್‌ ಮೇಲೆ ನಡೆಯಬೇಕು ಎಂಬುದು ನನ್ನ ಬಾಲ್ಯದ ಕನಸು. ನಾನು ಕಾಲೇಜಿನಲ್ಲಿ ಇದ್ದಾಗ ಓದುವುದರಲ್ಲಿ ಬ್ಯುಸಿಯಿದ್ದೆ. ಬಳಿಕ ನನ್ನ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡೆ. ಈಗ ನನ್ನ ಮಗ ಅನುಜ್ 8ನೇ ತರಗತಿ ಓದುತ್ತಿದ್ದು, ತನ್ನ ಕೆಲಸವನ್ನು ತಾನು ಮಾಡಿಕೊಳ್ಳುತ್ತಾನೆ. ಹಾಗಾಗಿ ನಾನು ಮಾಡೆಲಿಂಗ್ ಮಾಡೋಣ ಎಂದುಕೊಂಡೆ ಎಂದು ಪ್ರಿಯಾ ತಿಳಿಸಿದ್ದಾರೆ.

    ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರ ಜೊತೆ ಕೆಲಸ ಮಾಡುವುದು ನನ್ನ ಕನಸು. ಅವರು ನನ್ನ ಮೊದಲ ಆದ್ಯತೆಯಾಗಿರುತ್ತಾರೆ. ನನ್ನ ಬಳಿ ಈಗ ಒಂದು ಯೋಜನೆ ಇದೆ. ನಾನು ಈಗಾಗಲೇ ಈ ಯೋಜನೆ ಬಗ್ಗೆ ಕೆಲವರ ಹತ್ತಿರ ಮಾತನಾಡಿದ್ದೇನೆ. ಅವರು ಕೂಡ ಈ ಯೋಜನೆಗೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಯ ನಿರ್ವಹಣೆ ಮಾಡುವುದು ಒಂದು ಸವಾಲಾಗಿದೆ. ನನ್ನ ಕುಟುಂಬಸ್ಥರ ಹಾಗೂ ಸ್ನೇಹಿತರ ಬೆಂಬಲದಿಂದ ನಾನು ಇಲ್ಲಿಗೆ ಬರಲು ಸಾಧ್ಯವಾಯಿತು ಎಂದು ಪ್ರಿಯಾ ಹೇಳಿದ್ದಾರೆ.

  • ಸೌಂದರ್ಯ ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗೆ ಸುಳ್ಳು ಹೇಳ್ದೆ, ಪ್ರಾಮಾಣಿಕ ಉತ್ತರ ನೀಡಿ ಚಪ್ಪಾಳೆ ಗಿಟ್ಟಿಸಿದ ಸ್ಪರ್ಧಿ

    ಸೌಂದರ್ಯ ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗೆ ಸುಳ್ಳು ಹೇಳ್ದೆ, ಪ್ರಾಮಾಣಿಕ ಉತ್ತರ ನೀಡಿ ಚಪ್ಪಾಳೆ ಗಿಟ್ಟಿಸಿದ ಸ್ಪರ್ಧಿ

    ಮನಿಲಾ: ನೀವು ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದರೆ ಏನು ಮಾಡ್ತೀರ ಅಂತ ಕೇಳಿದಾಗ ಎಲ್ಲಾ ಸ್ಪರ್ಧಿಗಳು ಸಮಾಜಕ್ಕಾಗಿ ಏನಾದ್ರೂ ಸಹಾಯ ಮಾಡ್ತೀನಿ ಎಂದು ಹೇಳಿದ್ರೆ, ಒಬ್ಬ ಸ್ಪರ್ಧಿ ಮಾತ್ರ ಸರಿಯಾಗಿ ಊಟ ಮಾಡಿ ತುಂಬಾ ದಿನ ಆಯ್ತು…. ಬಿಸಿಬೇಳೆ ಬಾತ್ ತಿಂತೀನಿ ಅಂತ ಹೇಳೋದನ್ನ ಜಾಹಿರಾತೊಂದರಲ್ಲಿ ಕೇಳಿರ್ತೀರ. ಆದೇ ರೀತಿ ಇಲ್ಲೊಬ್ಬ ಸ್ಪರ್ಧಿ ಸೌಂದರ್ಯ ಸ್ಪರ್ಧೆಯಲ್ಲಿ ತನ್ನ ಪ್ರಾಮಾಣಿಕ ಉತ್ತರದಿಂದ ಸ್ಪರ್ಧೆಯ ನಿರ್ಣಾಯಕರನ್ನೇ ದಂಗಾಗಿಸಿದ್ದಾಳೆ.

    ಸೌಂದರ್ಯ ಸ್ಪರ್ಧೆಗಳು ಸ್ಕ್ರಿಪ್ಟೆಡ್ ಆಗಿರುತ್ತೆ, ಸ್ಪರ್ಧಿಗಳು ನೀಡೋ ಉತ್ತರ ಮೊದಲೇ ಅಭ್ಯಾಸ ಮಾಡಿಕೊಂಡು ಬಂದಿರುತ್ತಾರೆ ಎಂಬ ಆರೋಪವಿದೆ. ಆದ್ರೆ ಮಿಸ್ ಫಿಲಿಪೈನ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಯೊಬ್ಬಳು ಪ್ರಶ್ನೋತ್ತರ ಸುತ್ತಿನಲ್ಲಿ ಸುಳ್ಳು ಹೇಳದೇ ಪ್ರಾಮಾಣಿಕ ಉತ್ತರ ನೀಡಿದ್ದಾಳೆ.

    ಟಾಪ್ 15 ಸ್ಪರ್ಧಿಗಳಲ್ಲಿ ಮೊದಲು ವೇದಿಕೆ ಮೇಲೆ ಕರೆಯಲಾದ ಸಾಂದ್ರಾ ಲೆಮೊನಾನ್ ಗೆ ಸರ್ಕಾರಿ ಯೋಜನೆಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಸರ್ಕಾರದ ಬಿಲ್ಡ್, ಬಿಲ್ಡ್, ಬಿಲ್ಡ್ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಸ್ಪರ್ಧೆಯ ನಿರ್ಣಾಯಕರು ಕೇಳಿದ್ದರು. ಇದಕ್ಕೆ ಸಾಂದ್ರಾ ಸುಮ್ಮನೆ ಬುರುಡೆ ಬಿಡುವ ಬದಲು, ಸಾವಿರಾರು ಪ್ರೇಕ್ಷಕರ ಮುಂದೆ ತನಗೆ ಈ ಯೋಜನೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಪ್ರಾಮಾಣಿಕ ಉತ್ತರ ನೀಡಿದ್ದಾಳೆ.

    ನಿಜ ಹೇಳಬೇಕೆಂದರೆ, ನಾನು ಈ ಪ್ರಶ್ನೋತ್ತರ ಸುತ್ತಿಗಾಗಿ ಬಹಳ ಓದಿಕೊಂಡಿದ್ದೆ. ಆದ್ರೆ ಈ ವಿಷಯದ ಬಗ್ಗೆ ನನಗೆ ಹೆಚ್ಚಿಗೆ ಏನೂ ಗೊತ್ತಿಲ್ಲ. ಆದ್ರೂ ನಾನೊಂದು ಒಳ್ಳೆ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಲು ಇಲ್ಲಿದ್ದೇನೆ, ಧನ್ಯವಾದ ಎಂದು ಹೇಳಿ ತನಗೆ ಆ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂಬುದನ್ನ ವೇದಿಕೆ ಮೇಲೆಯೇ ಹೇಳಿದ್ದಾಳೆ.

    ಸ್ಪರ್ಧಿಯ ಈ ಪ್ರಾಮಾಣಿಕ ಉತ್ತರ ಕೇಳಿ ಕಾರ್ಯಕ್ರಮದ ನಿರೂಪಕಿ ಹಾಗೂ 2015ರ ಮಿಸ್ ಯೂನಿವರ್ಸ್ ಪಿಯಾ ವರ್ಟ್‍ಬ್ಯಾಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕೆಯ ಪ್ರಾಮಾಣಿಕತೆ ನನಗೆ ಇಷ್ಟವಾಯ್ತು, ಸುಳ್ಳು ಹೇಳುವುದಕ್ಕಿಂತ ಇದು ಉತ್ತಮ ಎಂದು ವರ್ಟ್‍ಬ್ಯಾಚ್ ಹೇಳಿದ್ದಾರೆ.

    ಪ್ರಾಮಾಣಿಕ ಉತ್ತರ ನೀಡಿದ ಸಾಂದ್ರಾಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅಂತಿಮವಾಗಿ ಸಾಂದ್ರಾ ಸ್ಪರ್ಧೆಯಲ್ಲಿ ಗೆದ್ದಿಲ್ಲವಾದ್ರೂ ಸಾವಿರಾರು ಅಭಿಮಾನಿಗಳನ್ನ ಗೆದ್ದಿದ್ದಾರೆ.

    https://www.youtube.com/watch?time_continue=11&v=sMJpf1DV9-4

  • 4,000 ಯುವತಿಯರನ್ನ ಹಿಂದಿಕ್ಕಿ ಬ್ಯೂಟಿ ಕಾಂಟೆಸ್ಟ್ ಫೈನಲ್ಸ್ ತಲುಪಿದ- ಕೊನೆಗೆ ನಾನು ಅವಳಲ್ಲ, ಅವನು ಎಂದ!

    4,000 ಯುವತಿಯರನ್ನ ಹಿಂದಿಕ್ಕಿ ಬ್ಯೂಟಿ ಕಾಂಟೆಸ್ಟ್ ಫೈನಲ್ಸ್ ತಲುಪಿದ- ಕೊನೆಗೆ ನಾನು ಅವಳಲ್ಲ, ಅವನು ಎಂದ!

    ಅಸ್ತಾನಾ: ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ತನ್ನ ಸೌಂದರ್ಯದಿಂದ ಎಲ್ಲರ ಮನಸೆಳೆದಿದ್ದ ಗ್ಲಾಮರಸ್ ಸ್ಪರ್ಧಿ ಅಂತಿಮ ಹಂತ ತಲುಪಿದ ನಂತರ ತಾನು ಪುರುಷನೆಂದು ಬಹಿರಂಗಪಡಿಸಿದ ಅಚ್ಚರಿಯ ಘಟನೆ ಕಝಾಕಿಸ್ತಾನದಲ್ಲಿ ನಡೆದಿದೆ.

     

    ಇಲೆ ದ್ಯಾಗಿಲೇವ್(22) ಅರಿನಾ ಅಲೀವಾ ಎಂಬ ಹೆಸರಿನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಆಯೋಜಕರಿಗೆ ಮಂಕುಬೂದಿ ಎರಚಿದ್ದಾನೆ. ಸುಮಾರು 4 ಸಾವಿರ ಸ್ಪರ್ಧಿಗಳನ್ನ ಹಿಂದಿಕ್ಕಿ ಸ್ಪರ್ಧೆಯ ಅಂತಿಮ ಹಂತ ತಲುಪಿದ್ದ ಈತ ಕೊನೆಗೆ ತಾನು ಮಹಿಳೆಯಲ್ಲ ಪುರುಷ ಎಂದು ಹೇಳಿದಾಗ ಜಡ್ಜ್ ಗಳೇ ದಂಗಾಗಿದ್ದಾರೆ.

    ನಾನು ಹಾಗೂ ನನ್ನ ಗೆಳೆಯರು ಸೌಂದರ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ನಂತರ ನಾನು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದೆ. ನಾನು ಯವಾಗ್ಲೂ ನೈಜ ಸೌಂದರ್ಯದ ಚಾಂಪಿಯನ್ ಆಗಿದ್ದೆ. ಅದೇ ಮೇಕಪ್, ಅದೇ ಸ್ಟೈಲ್‍ನಿಂದ ಹಲವಾರು ಯುವತಿಯರು ಒಂದೇ ಥರ ಕಾಣೊದನ್ನ ನೀವು ನೋಡಬಹುದು. ಹಾಗೂ ಟ್ರೆಂಡ್‍ಗಳನ್ನ ಪಾಲಿಸಿದ್ರೆ ನಾವು ಸುಂದರವಾಗಿದ್ದೀವಿ ಎಂದುಕೊಂಡಿರ್ತಾರೆ. ಆದ್ರೆ ನನಗೆ ಹಾಗೆ ಅನ್ನಿಸುವುದಿಲ್ಲ ಎಂದು ಪುರುಷ ಮಾಡೆಲ್ ಇಲೆ ಹೇಳಿದ್ದಾನೆ.

    ಮಿಸ್ ವರ್ಚುವಲ್ ಕಝಾಕಿಸ್ತಾನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಲೆಗೆ ಸೆಮಿ ಫೈನಲ್ಸ್ ನಲ್ಲಿ ಆನ್‍ಲೈನ್ ಮೂಲಕ ಸಾಕಷ್ಟು ಜನ ಓಟ್ ಮಾಡಿದ್ದರು. ಆದ್ರೆ ಕೊನೆಯ ಹಂತದಲ್ಲಿ ಆಯೋಜಕರಿಗೆ ತಾನು ಸುಳ್ಳು ಹೇಳಿದ್ದ ಬಗ್ಗೆ ಬಹಿರಂಗಪಡಿಸಲು ಇಲೆ ನಿರ್ಧರಿಸಿದ್ದ.

    ನಾನು ಫಿನಾಲೆ ತಲುಪಿದೆ. ಆದ್ರೆ ನಾನು ತೀರಾ ಮುಂದೆ ಹೋಗಿದ್ದೇನೆ ಎಂದು ಅರಿವಾಗಿ ಅರಿನಾ ಅಲೀವಿಯಾಳ ನಿಜವಾದ ಗುರುತು ಬಹಿರಂಗಪಡಿಸಲು ನಿರ್ಧರಿಸಿದೆ. ಮೊದಲಿಗೆ ಕಝಾಕಿಸ್ತಾನದಾದ್ಯಂತ 4 ಸಾವಿರ ಅರ್ಜಿಗಳು ಬಂದಿದ್ದವು. ಆದ್ರೆ ನಾನು ಅಂತಿಮ ಹಂತ ತಲುಪಿದ್ದೆ ಎಂದು ಇಲೆ ಹೇಳಿದ್ದಾನೆ.

    ಇಲೆ ಸತ್ಯವನ್ನು ಬಹಿರಂಗಪಡಿಸಿದ ನಂತರ ಆತನನ್ನು ಫೈನಲಿಸ್ಟ್ ಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇಲೆ ಜಾಗಕ್ಕೆ ಆತನ ನಂತರದ ಸ್ಥಾನ ಪಡೆದಿದ್ದ ಐಕೆರಿಮ್ ತೆಮಿರ್‍ಖನೋವಾ ಎಂಬಾಕೆಯನ್ನ ತರಲಾಗಿದೆ. ಸೆಮಿ ಫೈನಲ್ಸ್ ನಲ್ಲಿ ಐಕೆರಿಮ್ 1975 ಪಡೆದಿದ್ರೆ, ನಕಲಿ ಅರಿನಾ ಗೆ 2012 ಮತಗಳು ಬಂದಿದ್ದವು. ಅರಿನಾ ನಿಜವಾಗ್ಲೂ ಹುಡುಗಿ ಎಂದುಕೊಂಡು ಸ್ಪರ್ಧೆಯಲ್ಲಿ ಗೆಲ್ಲಿಸಲು ಓಟ್ ಮಾಡಿದ್ದ ಜನ ಈಗ ಕಕ್ಕಾಬಿಕ್ಕಿಯಾಗಿದ್ದಾರೆ.

    ಕಳೆದ ವರ್ಷ ರಷ್ಯಾದಲ್ಲಿ ಪುರುಷ ವಿದ್ಯಾರ್ಥಿ ಆಂಡ್ರಿ ನಗೋರ್ನಿ(20) ಒಳುಡುಪುಗಳ ಮಾಡೆಲ್ ಆಗಿ ಸ್ಪರ್ಧೆ ಗೆದ್ದಿದ್ದ. ತನ್ನ ಗರ್ಲ್ ಫ್ರೆಂಡ್ ಒಳುಡುಪು ಹಾಗೂ ಮೇಕಪ್ ಬಳಸಿದ್ದ ಆತ, ತನ್ನನ್ನು ತಾನು ಮಿಸ್ ಅವಕಾಡೋ ಎಂದು ಕರೆದುಕೊಂಡಿದ್ದ.

    ಪೆಸಿಫಿಕ್ ಐಲ್ಯಾಂಡ್ ಆಫ್ ಸಖಾಲಿನ್ ನಲ್ಲಿ ನಡೆದ ಸ್ಪರ್ಧೆಯ ನಂತರ ಸತ್ಯ ಗೊತ್ತಾಗಿ ಆಯೋಜಕರು ಆತನಿಂದ ಪ್ರಶಸ್ತಿ ಹಾಗೂ ಪಟ್ಟವನ್ನ ಹಿಂಪಡೆದಿದ್ದರು.

  • ಉಡುಪಿಯ ಚೆಲುವೆ ಈಗ ಕ್ವೀನ್ ಕರ್ನಾಟಕ

    ಉಡುಪಿಯ ಚೆಲುವೆ ಈಗ ಕ್ವೀನ್ ಕರ್ನಾಟಕ

    ಉಡುಪಿ: ಪತ್ರಿಕೋದ್ಯಮ ವಿದ್ಯಾರ್ಥಿನಿ ಶಾಸ್ತ್ರಾ ಶೆಟ್ಟಿ ಕ್ವೀನ್ ಕರ್ನಾಟಕ ಅವಾರ್ಡ್ ಗೆದ್ದಿದ್ದಾರೆ. ಕೊಚ್ಚಿಯಲ್ಲಿ ನಡೆದ ಸೌತ್ ಇಂಡಿಯನ್ ಲೆವೆಲ್ ಬ್ಯೂಟಿ ಕಾಂಟೆಸ್ಟ್ ನಲ್ಲಿ ಶಾಸ್ತ್ರಾ ಶೆಟ್ಟಿಗೆ ಈ ಗೌರವ ಸಿಕ್ಕಿದೆ.

    5 ರಾಜ್ಯಗಳ ಸುಮಾರು 35 ಸ್ಪರ್ಧಿಗಳ ಪೈಕಿ ಶಾಸ್ತ್ರಾ ಅಂತಿಮ 5ರ ಘಟ್ಟಕ್ಕೆ ಬಂದಿದ್ದಾರೆ. ಕರ್ನಾಟಕದ 8 ಸ್ಪರ್ಧಿಗಳು ಈ ಕಾಂಟೆಸ್ಟ್ ನಲ್ಲಿ ಪಾಲ್ಗೊಂಡಿದ್ದರು. 8 ಮಂದಿಯಲ್ಲಿ ಒಬ್ಬರನ್ನು ತೀರ್ಪುಗಾರರು ಆಯ್ಕೆ ಮಾಡಿದ್ದು, ಶಾಸ್ತ್ರಾಗೆ ಕ್ವೀನ್ ಕರ್ನಾಟಕ ಒಲಿದಿದೆ. ಈ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

    ಬ್ಯೂಟಿಫುಲ್ ಐಸ್, ಬ್ಯೂಟಿಫುಲ್ ಸ್ಮೈಲ್, ಪರ್ಫೆಕ್ಟ್ ಪರ್ಸನಾಲಿಟಿ, ಜನರಲ್ ನಾಲೆಡ್ಜ್, ಸ್ಪೀಕಿಂಗ್ ಸ್ಟೈಲ್ ಹೀಗೆ ಹಲವು ರೌಂಡ್ ಗಳಲ್ಲಿ ಶಾಸ್ತ್ರಾ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇಂಟ್ರಡಕ್ಷನ್ ರೌಂಡ್, ಟಾಪ್ ಟೆನ್ ರೌಂಡ್, ಕಾಮನ್ ಕ್ವೆಸ್ಚನ್ ರೌಂಡ್ನಲ್ಲಿ ಈ ಸುಂದರಿ ಆಯ್ಕೆಯಾಗಿದ್ದಾರೆ.

    ಈ ಹಿಂದೆ ಮಿಸ್ ಮಂಗಳೂರು ಕಿರೀಟವನ್ನು ಶಾಸ್ತ್ರಾ ಮುಡಿಗೇರಿಸಿದ್ದಾರೆ. ಬಲ್ಗೇರಿಯಾದಲ್ಲಿ ನಡೆದ ಬ್ಯೂಟಿ ಕಾಂಟೆಸ್ಟ್ ನ ವಿನ್ನರ್ ಆಗಿರುವ ಶಾಸ್ತ್ರಾ, ಮಿಸ್ ಏಷ್ಯಾದಲ್ಲೂ ಪಾಲ್ಗೊಂಡಿದ್ದರು. ಜರ್ನಲಿಸಂ ಪದವಿ ಓದುತ್ತಿರುವ ಶಾಸ್ತ್ರಾ ಮುಂದೆ ಎಂಸಿಜೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ.

    ಹಲವು ಚಲನಚಿತ್ರಗಳಲ್ಲೂ ಇವರಿಗೆ ಆಫರ್ ಬಂದಿದ್ದು, ಯಾವುದನ್ನೂ ಶಾಸ್ತ್ರ ಒಪ್ಪಿಕೊಂಡಿಲ್ಲ. ಐಎಫ್‍ಎಸ್ ಅಧಿಕಾರಿಯಾಗಬೇಕು ಅನ್ನೋ ಕನಸು ಇವರಿಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಎಂಬ ಹಂಬಲ ಶಾಸ್ತ್ರಾರದ್ದು.

    ಮುಂದೆ ಪೆಗಸಸ್ ಸಂಸ್ಥೆ ಆಯೋಜಿಸುವ ಸೌತ್ ಇಂಡಿಯನ್ ಲೆವೆಲ್ ಬ್ಯೂಟಿ ಕಾಂಟೆಸ್ಟ್ ನಲ್ಲಿ ನ್ಯಾಶನಲ್ ಲೆವೆಲ್ ನಲ್ಲಿ ಭಾಗವಹಿಸಲಿದ್ದಾರೆ. ಮಂಗಳೂರಿನ ನಿಷ್ಪನ್ನಾ ಕ್ರಿಯೇಶನ್ಸ್ ಮೇಘನಾ ಶೆಟ್ಟಿ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ಸೀರೆಯನ್ನು ಹೆಚ್ಚು ಮೆಚ್ಚಿಕೊಳ್ಳುವ ಶಾಸ್ತ್ರಾ ಅದರಲ್ಲೇ ವಿಭಿನ್ನ ಡಿಸೈನ್ ಗಳನ್ನು ತೊಟ್ಟು ಕಾಂಟೆಸ್ಟ್ ಗೆ ಹೋಗ್ತಾರೆ.

    ಶಾಸ್ತ್ರಾ ಶೆಟ್ಟಿಗೆ ತಂದೆ-ತಾಯಿಯ ಸಂಪೂರ್ಣ ಪ್ರೋತ್ಸಾಹವಿದೆ. ಚಿಕ್ಕಂದಿನಿಂದಲೇ ಕುಟುಂಬದ ಕ್ವೀನ್ ಅಂತ ಕರೆಸಿಕೊಂಡಿದ್ದ ಇವರು, ಈಗ ಕರ್ನಾಟಕದ ಕ್ವೀನ್ ಆಗಿದ್ದಾರೆ. ತಂದೆ ತಾಯಿ ಸಂಪೂರ್ಣ ಪ್ರೋತ್ಸಾಹ ಇರೋದ್ರಿಂದ ನಾನು ಈ ಹಂತಕ್ಕೆ ತಲುಪಿದ್ದೇನೆ. ಅವರಿಗೆ ಯಾವ ನಿರೀಕ್ಷೆಯೂ ಇಲ್ಲ, ಅವರಿಂದ ಯಾವ ಅಡ್ಡಿಯೂ ಆಗಿಲ್ಲ. ಹೀಗಾಗಿ ನಾನು ಫ್ರೀ ಮೈಂಡ್ ನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ ಎಂದು ಶಾಸ್ತ್ರಾ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಭಿಪ್ರಾಯ ಹಂಚಿಕೊಂಡರು.

    ಚಿಕ್ಕ ಮಗುವಿನಿಂದ ಇಲ್ಲಿಯ ತನಕ ಮಗಳನ್ನು ಮುದ್ದಾಗಿ ಬೆಳೆಸಿದ್ದೇವೆ. ಆಕೆ ವಿದ್ಯಾಭ್ಯಾಸ, ನಡತೆ, ಕುಟುಂಬದ ಜೊತೆಗಿನ ಸಂಬಂಧದಲ್ಲಿ ಎಲ್ಲೂ ಹಿಂದೆ ಇದ್ದಾಳೆ ಅಂತ ನಮಗೆ ಅನ್ನಿಸಿಲ್ಲ. ಶಾಸ್ತ್ರಾ ನಮ್ಮ ಮಗಳು, ನಾವು ಆಕೆಯ ಹೆತ್ತವರು ಅಂತ ಹೇಳಿಕೊಳ್ಳಲು ಖುಷಿಯಾಗುತ್ತಿದೆ. ಸಿನಿಮಾ ಆಫರ್, ಮಾಡೆಲಿಂಗ್ ಗೆ ಬೇಡಿಕೆ ಬರ್ತಾನೇ ಇದೆ. ನಿರ್ಧಾರ ಆಕೆಯ ವೈಯಕ್ತಿಕ. ಅದರಲ್ಲಿ ನಮ್ಮ ಹಸ್ತಕ್ಷೇಪ ಇಲ್ಲ. ಎಲ್ಲಕ್ಕಿಂತ ಆಕೆಯ ಭವಿಷ್ಯ ಮುಖ್ಯ ಎಂದು ಶಾಸ್ತ್ರಾ ತಂದೆ ಶಶಿ ಶೆಟ್ಟಿ ಮತ್ತು ತಾಯಿ ಶರ್ಮಿಳಾ ಶೆಟ್ಟಿ ಹೇಳಿದ್ರು.

    ಬ್ಯೂಟಿ ಕಾಂಟೆಸ್ಟ್, ಭಾಷಣ ಸ್ಪರ್ಧೆ, ಪೇಂಟಿಂಗ್, ಕವನ ಬರಿಯೋದ್ರಲ್ಲಿ ಹಿಡಿತವಿರುವ ಶಾಸ್ತ್ರಾ ಶೆಟ್ಟಿ, ಜರ್ನಲಿಸ್ಟ್ ಆಗ್ಬೇಕು ಅನ್ನೋ ಆಸೆಯನ್ನೂ ಹೊಂದಿದ್ದಾರಂತೆ. ವಿದ್ಯಾಭ್ಯಾಸ ಮುಗಿಸಿ ಬಾಲಿವುಡ್ ಗೆ ಹಾರೋ ಐಡಿಯಾ ಇದ್ಯಾ ಅಂತ ಕೇಳಿದ್ರೆ ಶಾಸ್ತ್ರಾ ಫುಲ್ ಸ್ಮೈಲ್ ಕೊಟ್ಟು ಸುಮ್ಮನಾದ್ರು.

  • 2017ರ ಮಿಸ್ ಟೀನ್ ಯೂನಿವರ್ಸ್ ಪಟ್ಟ ಮುಡಿಗೇರಿಸಿಕೊಂಡ ನೊಯ್ಡಾದ ಸೃಷ್ಟಿ

    2017ರ ಮಿಸ್ ಟೀನ್ ಯೂನಿವರ್ಸ್ ಪಟ್ಟ ಮುಡಿಗೇರಿಸಿಕೊಂಡ ನೊಯ್ಡಾದ ಸೃಷ್ಟಿ

    – ಅತ್ಯುತ್ತಮ ರಾಷ್ಟ್ರೀಯ ಉಡುಗೆಗೂ ಅವಾರ್ಡ್

    ನವದೆಹಲಿ: ಮಂಗಳವಾರದಂದು ನೋಯ್ಡಾದ ನಿವಾಸಿ ಸೃಷ್ಟಿ ಕೌರ್ 2017ನೇ ಸಾಲಿನ ಮಿಸ್ ಟೀನ್ ಯೂನಿವರ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

    ಮಧ್ಯ ಅಮೆರಿಕ ದೇಶವಾದ ನಿಕಾರಾಗುವಾದ ಮನಾಗುವಾದಲ್ಲಿ ಈ ಸೌಂದರ್ಯ ಸ್ಪರ್ಧೆ ನಡೆದಿದ್ದು, ಸೃಷ್ಟಿ ವಿಶ್ವದಾದ್ಯಂತ ವಿವಿಧ ದೇಶಗಳಿಂದ ಬಂದಿದ್ದ 25 ಸ್ಪರ್ಧಿಗಳನ್ನ ಹಿಂದಿಕ್ಕಿ ಕಿರೀಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಮೆಕ್ಸಿಕೋದ ಆ್ಯರಿ ಟ್ರಾವಾ ಹಾಗೂ ಕೆನಡಾದ ಸಮಂತಾ ಪೆರ್ರಿ ಇದ್ರು.

    ಇದರ ಜೊತೆಗೆ ಸೃಷ್ಟಿ ಅತ್ಯುತ್ತಮ ರಾಷ್ಟ್ರೀಯ ಉಡುಗೆಗೂ ಅವಾರ್ಡ್ ಪಡೆದಿದ್ದಾರೆ. ಭಾರತದ ರಾಷ್ಟ್ರಪಕ್ಷಿ ನವಿಲನ್ನು ಸೃಷ್ಟಿ ತಮ್ಮ ಉಡುಗೆಯಲ್ಲಿ ಪ್ರದರ್ಶಿಸಿದ್ದರು. ಸೃಷ್ಟಿ ನೋಯ್ಡಾದ ಲೋಟಸ್ ವ್ಯಾಲಿ ಇಂಟರ್ ನ್ಯಾಷನಲ್‍ನಲ್ಲಿ ಓದಿದ್ದು, ಸದ್ಯಕ್ಕೆ ಲಂಡನ್ ಸ್ಕೂನ್ ಆಫ್ ಫ್ಯಾಷನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಇದೇ ವರ್ಷದ ಆರಂಭದಲ್ಲಿ ಸೃಷ್ಟಿ 29 ಸ್ಪರ್ಧಿಗಳನ್ನ ಹಿಂದಿಕ್ಕಿ ಮಿಸ್ ಟೀನ್ ಟಿಯಾರಾ ಇಂಟರ್‍ನ್ಯಾಷನಲ್ ಪಟ್ಟವನ್ನ ತನ್ನದಾಗಿಸಿಕೊಂಡಿದ್ದರು. ಈ ಸೌಂದರ್ಯ ಸ್ಪರ್ಧೆಯನ್ನ 6 ವರ್ಷಗಳ ಹಿಂದೆ ಪ್ರಾರಂಭಿಸಲಾಗಿದ್ದು 15 ರಿಂದ 19 ವರ್ಷ ವಯಸ್ಸಿನವರಿಗಾಗಿ ಮಿಸ್ ಯೂನಿವರ್ಸ್ ಸಂಸ್ಥೆ ಈ ಸ್ಪರ್ಧೆಯನ್ನ ಆಯೋಜಿಸುತ್ತದೆ.