Tag: ಸೌಂದರ್ಯ

  • ಜಯಮಾಲಾ ಮಗಳ ಹಳದಿ ಸಂಭ್ರಮ- ಸ್ಯಾಂಡಲ್‌ವುಡ್ ಸ್ಟಾರ್ಸ್ ಭಾಗಿ

    ಜಯಮಾಲಾ ಮಗಳ ಹಳದಿ ಸಂಭ್ರಮ- ಸ್ಯಾಂಡಲ್‌ವುಡ್ ಸ್ಟಾರ್ಸ್ ಭಾಗಿ

    ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಂದ್ ಕಡೆ ಡಾಲಿ ಹಸೆಮಣೆ ಏರೋಕೆ ರೆಡಿಯಾಗಿದ್ರೆ, ಇನ್ನೊಂದ್ ಕಡೆ ಜಯಮಾಲಾ ಪುತ್ರಿ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಸೌಂದರ್ಯ ಜಯಮಾಲಾ ಹಳದಿ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ನಟಿಯರು ಮಿಂಚಿದ್ದಾರೆ. ನಟಿಯ ಹಳದಿ ಶಾಸ್ತ್ರ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಜಯಮಾಲಾ (Jayamala) ಪುತ್ರಿ ಸೌಂದರ್ಯ (Soundarya) ಅವರ ಫೆ.5ರಂದು ಮೆಹೆಂದಿ ಹಾಗೂ ಹಳದಿ ಶಾಸ್ತ್ರ ನಗರದ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ವಧು ಸೌಂದರ್ಯ ಹಳದಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:ಡೇಟಿಂಗ್ ಸುದ್ದಿ ನಡುವೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸಮಂತಾ ಶಾಕಿಂಗ್ ಕಾಮೆಂಟ್

    ಈ ಸಂಭ್ರಮದಲ್ಲಿ ಹಿರಿಯ ನಟಿ ಶ್ರುತಿ, ಮಾಳವಿಕಾ ಅವಿನಾಶ್, ಸುಧಾರಾಣಿ, ಉಮಾಶ್ರೀ, ಪ್ರಮೀಳಾ ಜೋಷಾಯ್, ಗಿರಿಜಾ ಲೋಕೇಶ್, ಹರ್ಷಿಕಾ, ಅನು ಪ್ರಭಾಕರ್, ಪ್ರಿಯಾಂಕಾ ಉಪೇಂದ್ರ, ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ, ಸುಧಾ ನರಸಿಂಹರಾಜು ಮುಂತಾದ ಹಿರಿಯ ನಟಿಯರು ಭಾಗವಹಿಸಿದ್ದಾರೆ. ಎಲ್ಲರೂ ಹಳದಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಹಿರಿಯ ನಟಿಯರು ಜಯಮಾಲಾ ಜೊತೆ ಸಖತ್ ಆಗಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.

    ಇನ್ನೂ ರುಷಬ್ ಕೆ ಎನ್ನುವವರ ಜೊತೆ ಸೌಂದರ್ಯ ಹಸೆಮಣೆ (Wedding) ಏರೋಕೆ ರೆಡಿಯಾಗಿದ್ದಾರೆ. ಆದರೆ ಇವರದ್ದು ಅರೇಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಎಂಬುದು ರಿವೀಲ್ ಆಗಿಲ್ಲ. ಹುಡುಗನ ವಿವರ ಕೂಡ ರಿವೀಲ್ ಆಗಿಲ್ಲ.

     

    View this post on Instagram

     

    A post shared by Shruthi (@shruthi__krishnaa)

    ಇನ್ನೂ ಸೌಂದರ್ಯ ಜಯಮಾಲಾ ಅವರ ವಿವಾಹ (Wedding) ಫೆ.7 ಹಾಗೂ 8ರಂದು ಜರುಗಲಿದೆ. ಈ ಮದುವೆ ಸಂಭ್ರಮದಲ್ಲಿ ರಾಜಕೀಯ ಗಣ್ಯರಿಗೆ ಹಾಗೂ ಸಿನಿಮಾ ಸ್ಟಾರ್ಸ್ ಆಹ್ವಾನ ನೀಡಲಾಗಿದೆ.

    ಇನ್ನೂ ಸೌಂದರ್ಯ ಜಯಮಾಲಾ ಅವರು ಚಿತ್ರರಂಗದಲ್ಲಿದ್ದ 2 ವರ್ಷಗಳಲ್ಲಿ 4 ಸಿನಿಮಾಗಳನ್ನು ಮಾಡಿದ್ದರು. ತೆಲುಗಿನಲ್ಲಿ ಮಿಸ್ಟರ್ ಪ್ರೇಮಿಕುಡು, ದುನಿಯಾ ವಿಜಯ್ ಜೊತೆ ಸಿಂಹಾದ್ರಿ, ಉಪೇಂದ್ರ ಜೊತೆ ಗಾಢ್ ಫಾದರ್, ಶ್ರೀನಗರ ಕಿಟ್ಟಿ ಜೊತೆ ಪಾರು ವೈಫ್ ಆಫ್ ದೇವದಾಸ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಸದ್ಯ ಅವರು ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡಿದ್ದಾರೆ.

  • ಬ್ಯೂಟಿ ಬಗ್ಗೆ ಮತ್ತೆ ಮತ್ತೆ ಪ್ರಶ್ನೆ ಮಾಡಿದ್ದಕ್ಕೆ ಬೇಸರಿಸಿಕೊಂಡ ಹನಿ ರೋಸ್

    ಬ್ಯೂಟಿ ಬಗ್ಗೆ ಮತ್ತೆ ಮತ್ತೆ ಪ್ರಶ್ನೆ ಮಾಡಿದ್ದಕ್ಕೆ ಬೇಸರಿಸಿಕೊಂಡ ಹನಿ ರೋಸ್

    ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹನಿ ರೋಸ್ (Honey Rose). ಇವರು ಮಾಡಿದ ಸಿನಿಮಾಗಳಿಗಿಂತ ಇವರ ಹಾಟ್ ಹಾಟ್ ಫೋಟೋಗಳು ಸಖತ್ ಸದ್ದು ಮಾಡುತ್ತವೆ. ನಡು ವಯಸ್ಸಿಗೆ ಹತ್ತಿರವಾಗಿರುವ ಹನಿ ಸೌಂದರ್ಯದ (Beauty) ಬಗ್ಗೆ ಹಲವರು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಸ್ಪಷ್ಟನೆ ಕೊಟ್ಟರೂ ಈ ಪ್ರಶ್ನೆಗಳು ಮಾತ್ರ ನಿಲ್ಲದೇ ಇರುವುದಕ್ಕೆ ಹನಿಗೆ ಬೇಸರವಿದೆಯಂತೆ.

    ಮಾನಸ್ಟರ್, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ (Veera Simha Reddy) ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ (Balayya) ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ. ನೋಡಲು ಫಿಟ್ ಮತ್ತು ಮುದ್ದಾಗಿರೋ ಹನಿ ರೋಸ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅದಕ್ಕೆ ಅವರು ಇಷ್ಟು ಮುದ್ದಾಗಿ ಕಾಣ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಈಗಾಗಲೇ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದರೂ, ಮತ್ತೆ ಇದೀಗ  ಇನ್ನೊಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್ ಫೇಸ್‌ಬುಕ್ ಅಕೌಂಟ್ ಹ್ಯಾಕ್

    ಸೋಷಿಯಲ್ ಮೀಡಿಯಾದಲ್ಲಿ ಅವರ ಬೋಲ್ಡ್ ಫೋಟೋಗಾಗಿಯೇ ಕಾಯುವ ಫ್ಯಾನ್ಸ್ ಇದ್ದಾರೆ. ಹನಿ ರೋಸ್ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಇದೇ ಅವರ ಸೀಕ್ರೆಟ್ ಎಂದು ಅನೇಕರು ಆರೋಪಿಸಿದ್ರು. ಈಗ ನಟಿ ತಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ. ನನಗೆ ದೇವರು ಈ ಅಂದ ಕೊಟ್ಟಿದ್ದು ಬಿಟ್ರೆ ಬೇರೇನೂ ಇಲ್ಲ ಎಂದಿದ್ದಾರೆ. ನಾನು ಯಾವುದೇ ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಪ್ರಶ್ನೆಗಳು ನಿಲ್ಲದೇ ಇರುವುದಕ್ಕೆ ಬೇಸರಿಸಿಕೊಂಡಿದ್ದಾರೆ.

     

    ಸದ್ಯ ‘ರಾಚೆಲ್’ (Rachel) ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಿನ್ನವಾಗಿರುವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ನಟಿ ಫಸ್ಟ್ ಲುಕ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಕನ್ನಡ, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ರಾಚೆಲ್ ಸಿನಿಮಾ ಮೂಡಿ ಬರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ ರಜನಿಕಾಂತ್ 2ನೇ ಪುತ್ರಿ

    ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ ರಜನಿಕಾಂತ್ 2ನೇ ಪುತ್ರಿ

    ಳೆದ ತಿಂಗಳಷ್ಟೇ ರಜನಿಕಾಂತ್ (Rajinikanth) ಮೊದಲ ಪುತ್ರಿ ಐಶ್ವರ್ಯ (Aishwarya) ರಜನಿಕಾಂತ್ ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ (Police) ದೂರು ನೀಡಿದ್ದರು. ಪೊಲೀಸರು ತತಕ್ಷಣವೇ ಕಾರ್ಯಾಚರಣೆ ನಡೆಸಿ, ಕಳ್ಳರನ್ನು ಹಿಡಿಯುವಲ್ಲಿ ಯಶಸ್ಸಿ ಆಗಿದ್ದರು. ಇದೀಗ ರಜನಿ ಎರಡನೇ ಪುತ್ರಿ ಕೂಡ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

    ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯ (Soundarya) ಸದ್ಯ ಚೆನ್ನೈನ ತೇನಾಂಪೇಟೆ (Tenampet) ಪೊಲೀಸ್ ಠಾಣೆ ಮೆಟ್ಟಿಲೇರಿದು ತಮ್ಮ ಐಷಾರಾಮಿ ಕಾರಿನ ಕೀ ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಏಪ್ರಿಲ್ 22 ರಂದು ತಮ್ಮ ದುಬಾರಿ ಕಾರಿನ ಕೀ ಕಳೆದು ಹೋಗಿದ್ದು, ಅದನ್ನು ಹುಡುಕಿಕೊಡುವಂತೆ ದೂರು (Complaint) ನೀಡಿದ್ದಾರೆ. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ಏಪ್ರಿಲ್ 22 ರಂದು ಅವರು ಕಾಲೇಜೊಂದರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಕಾರ್ಯಕ್ರಮಕ್ಕೆ ರೇಂಜ್ ರೋವರ್ ಕಾರು ತಗೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಪೌಚ್ ನಲ್ಲಿಟ್ಟಿದ್ದ ಕಾರು ಕೀ ಕಾಣೆಯಾಗಿದ್ದು ಗೊತ್ತಾಗಿದೆ. ಕೂಡಲೇ ಅವರು ಪೊಲೀಸ್ ಠಾಣೆಗೆ ದೂರು ನೀಡಿ ಕೀ ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಇದೇ ಸ್ಟೇಶನ್ ನಲ್ಲೇ ಈ ಹಿಂದೆ ಐಶ್ವರ್ಯ ರಜನಿಕಾಂತ್ ಕೂಡ ತಮ್ಮ ಮನೆಯಲ್ಲಿ ಕಳ್ಳತನಾದ ಕುರಿತು ದೂರು ನೀಡಿದ್ದರು. ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ತಂಗಿಯೂ ಅದೇ ಸ್ಟೇಶನ್ ಮೆಟ್ಟಿಲು ಏರಿದ್ದಾರೆ.

  • ಶವ ನೋಡಿ ಬೆಚ್ಚಿಬಿದ್ದಿದ್ದೆ- ಸೌಂದರ್ಯ ಸಾವಿನ ಬಗ್ಗೆ ಪ್ರೇಮಾ ಭಾವುಕ

    ಶವ ನೋಡಿ ಬೆಚ್ಚಿಬಿದ್ದಿದ್ದೆ- ಸೌಂದರ್ಯ ಸಾವಿನ ಬಗ್ಗೆ ಪ್ರೇಮಾ ಭಾವುಕ

    ಭಾರತೀಯ ಚಿತ್ರರಂಗ ಕಂಡ ಟ್ಯಾಲೆಂಟೆಡ್‌ ನಟಿ  ಸೌಂದರ್ಯ ಅವರು 90ರ ದಶಕದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಮುಂಚೂಣಿಯಲ್ಲಿದ್ದ ಕಲಾವಿದೆ. ಅಪಾರ ಅಭಿಮಾನಿಗಳ ನೆಚ್ಚಿನ ನಟಿಯಾಗಿರುವ ಸೌಂದರ್ಯ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿತ್ತು. ಆಕೆಯ ಸಾವು ಕುಟುಂಬದವರಿಗೆ, ಆಪ್ತರಿಗೆ ಶಾಕ್ ನೀಡಿತ್ತು. ಇದೀಗ ಸ್ನೇಹಿತೆ ಸೌಂದರ್ಯ ಬಗ್ಗೆ ಪ್ರೇಮಾ ಭಾವುಕರಾಗಿದ್ದಾರೆ.

    1992ರಲ್ಲಿ ‘ಗಂಧರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸೌಂದರ್ಯ ಅವರು ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 2004ರಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ದುರಂತದಲ್ಲಿ ಸೌಂದರ್ಯ ನಿಧನರಾದರು. ಇದೀಗ ಸೌಂದರ್ಯ ಅವರನ್ನು ಸಂದರ್ಶನವೊಂದರಲ್ಲಿ ನಟಿ ಪ್ರೇಮಾ ಸ್ಮರಿಸಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಎದುರು ಅಬ್ಬರಿಸಲಿದ್ದಾರೆ ಸೈಫ್ ಅಲಿ ಖಾನ್

    ಸೌಂದರ್ಯ- ಪ್ರೇಮಾ ಇಬ್ಬರೂ ಆತ್ಮೀಯ ಸ್ನೇಹಿತೆಯರಾಗಿದ್ದರು. ಸೌಂದರ್ಯ ಜೊತೆ ಪ್ರೇಮಾ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ- ತೆಲುಗು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ನಾನು ನನ್ನ ಹೆಂಡ್ತೀರು, ಆಪ್ತಮಿತ್ರ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ಶೂಟಿಂಗ್ ವೇಳೆ ನಮ್ಮ ನಡುವೆ ಒಡನಾಟ ಬೆಳೆಯಿತು. ರಾಮ ನವಮಿ ಬಂತು ಅಂದರೆ, ಎಲ್ಲರಿಗೂ ಪಾನಕ ಕುಡಿಸುತ್ತಿದ್ದರು. ಅಲ್ಲದೆ ಸೌಂದರ್ಯದ ವಿಚಾರದಲ್ಲಂತೂ ತುಂಬಾನೇ ಕಾಳಜಿ ವಹಿಸುತ್ತಿದ್ದರು. ಆಹಾರವನ್ನೂ ಮಿತವಾಗಿ ಬಳಸುತ್ತಿದ್ದರು. ಸೌಂದರ್ಯಾ ನಟನೆ ಕೂಡ ತುಂಬಾನೇ ಸಹಜವಾಗಿತ್ತು. ಕಣ್ಣಿನಿಂದಲೇ ಸಾವಿರ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು ಎಂದು ಪ್ರೇಮಾ ಹೇಳಿಕೊಂಡಿದ್ದಾರೆ.

    2004ರಲ್ಲಿ ಸೌಂದರ್ಯ ಚುನಾವಣ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಸೌಂದರ್ಯ ಸಹೋದರ ಅಮರ್‌ನಾಥ್ ಅವರೊಂದಿಗೆ ಪ್ರಚಾರಕ್ಕೆ ಮುಂದಾಗಿದ್ದರು. ಬೆಂಗಳೂರಿನಿಂದ ಆಂಧ್ರಪ್ರದೇಶದ ಕರೀಂನಗರಕ್ಕೆ ಪ್ರಚಾರಕ್ಕೆ ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪತನಗೊಂಡಿತ್ತು. ಈ ಅಪಘಾತದಲ್ಲಿ ಸೌಂದರ್ಯಾ ಜೊತೆ ಸಹೋದರ ಅಮರ್‌ನಾಥ್ ಕೂಡ ಸಾವನ್ನಪ್ಪಿದ್ದರು. ಆ ದಿನವನ್ನು ನೆನೆದು ಪ್ರೇಮಾ ಭಾವುಕರಾಗಿದ್ದಾರೆ.

    ಆ ದಿನ ನಾನು ಸೌಂದರ್ಯ ಮನೆಗೆ ಹೋಗಿದ್ದೆ. ಅಲ್ಲಿ ಸೌಂದರ್ಯ ಅವರ ಶವವನ್ನು ಬಾಕ್ಸ್‌ನಲ್ಲಿ ಇಡಲಾಗಿತ್ತು. ಅದರಲ್ಲಿ ಆಕೆಯ ಶವವಿತ್ತು. ಆದರೆ, ಮುಖದ ಗುರುತೇ ಸಿಗಲಿಲ್ಲ. ಅದನ್ನು ನೋಡಿ ಬೆಚ್ಚಿಬಿದ್ದಿದ್ದೆ. ಆ ವೇಳೆ ಕಲಾವಿದರ ಜೀವನ ಇಷ್ಟೇನಾ ಅಂತ ಅನಿಸಿತ್ತು ಎಂದು  ಸೌಂದರ್ಯ ಅವರನ್ನು ನೆನೆದು ಪ್ರೇಮಾ ಭಾವುಕರಾಗಿದ್ದಾರೆ.

  • ಸೌಂದರ್ಯವಿದ್ದರೂ ಅವಕಾಶವಿಲ್ಲ ಎಂದ ಹನಿ ರೋಸ್ ಫ್ಯಾನ್ಸ್

    ಸೌಂದರ್ಯವಿದ್ದರೂ ಅವಕಾಶವಿಲ್ಲ ಎಂದ ಹನಿ ರೋಸ್ ಫ್ಯಾನ್ಸ್

    ನ್ನ ಬ್ಯೂಟಿಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಹನಿ ರೋಸ್ (Honey Rose) ಗೆ ಅವಕಾಶಗಳೇ ಇಲ್ಲವಂತೆ. ಸಖತ್ ಬೋಲ್ಡ್ ಆಗಿರುವಂತಹ ಪಾತ್ರಗಳನ್ನು ಮಾಡಿದರೂ ಅವರಿಗೆ ಅವಕಾಶ ಯಾಕೆ ಹುಡುಕಿಕೊಂಡು ಬರುತ್ತಿಲ್ಲ ಎನ್ನುವುದು ಅವರ ಅಭಿಮಾನಿಗಳ ಚಿಂತೆಯಾಗಿದೆ.

    ಸದಾ ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಾಕುತ್ತಾ, ಅಭಿಮಾನಿಗಳ ಕಾಮೆಂಟ್ ಗಳನ್ನು ಎಂಜಾಯ್ ಮಾಡುವ  ಹನಿ ರೋಸ್, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.  ಬಾಲಕೃಷ್ಣ (Balakrishna) ಜೊತೆ ನಟಿಸಿದ್ದ ವೀರ ಸಿಂಹ ರೆಡ್ಡಿ ಚಿತ್ರ ಭಾರೀ ಗೆಲುವು ಕಂಡಿದೆ. ಆದರೂ, ಹನಿಗೆ ಅವಕಾಶವಿಲ್ಲವಂತೆ.

    ಸೌಂದರ್ಯದ ಜೊತೆಗೆ ಪ್ರತಿಭೆಯೂ ಇದೆ. ಆದರೂ, ಸಿನಿಮಾ ರಂಗ ನಿಮ್ಮನ್ನು ಗುರುತಿಸುತ್ತಿಲ್ಲವಲ್ಲ ಯಾಕೆ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದಾನೆ. ನಿಮ್ಮನ್ನು ಕೇವಲ ಐಟಂ ಸಾಂಗ್ ಗೆ ಮಾತ್ರ ಸೀಮಿತ ಮಾಡಿದ್ದಾರಾ ಎನ್ನುವ ಪ್ರಶ್ನೆಯನ್ನೂ ಹಾಕಿದ್ದಾರೆ. ಇದನ್ನೂ ಓದಿ: ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

    ಹನಿ ರೋಸ್ ಅವಕಾಶಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳೇ ನಟಿಗೆ ಎದುರಾಗಿವೆ. ನಿರ್ದೇಶಕರ ಜೊತೆ ಕಿರಿಕ್ ಏನಾದರೂ ಮಾಡಿಕೊಂಡಿದ್ದೀರಾ? ಅದಕ್ಕಾಗಿ ಅವಕಾಶಗಳು ನಿಮ್ಮಿಂದ ದೂರವಾಗುತ್ತಿದ್ದಾವಾ ಎನ್ನುವ ಅನುಮಾನವನ್ನೂ ಕೆಲವರು ವ್ಯಕ್ತ ಪಡಿಸಿದ್ದಾರೆ.

    ಸೌಂದರ್ಯದ ಗಣಿಯೇ ಆಗಿರುವ ಹನಿಗೆ ತೂಕ ಇಳಿಸಿಕೊಳ್ಳುವಂತೆ ಕೆಲವರು ಸಲಹೆ ನೀಡಿದ್ದಾರೆ. ತೂಕ ಇಳಿಸಿಕೊಂಡರೆ ನಿರ್ದೇಶಕರು ನಿಮ್ಮನ್ನು ಕರೆಯಬಹುದು ಅನಿಸತ್ತೆ. ಅದೊಂದು ಸಲ ಟ್ರೈ ಮಾಡಿ ಎಂದು ಕೆಲವರು ಬಿಟ್ಟಿ ಸಲಹೆ ನೀಡಿದ್ದಾರೆ.

  • ಕೆಂದುಟಿಯ ಅಂದಕ್ಕೆ ಮತ್ತಷ್ಟು ಹೊಳಪು ತರುವ ಬಗೆ-ಬಗೆಯ ಲಿಪ್‌ಸ್ಟಿಕ್ – ಯುವತಿಯರ ಫೇವ್‌ರೆಟ್

    ಕೆಂದುಟಿಯ ಅಂದಕ್ಕೆ ಮತ್ತಷ್ಟು ಹೊಳಪು ತರುವ ಬಗೆ-ಬಗೆಯ ಲಿಪ್‌ಸ್ಟಿಕ್ – ಯುವತಿಯರ ಫೇವ್‌ರೆಟ್

    ಹಿಳೆಯರ ಸೌಂದರ್ಯ (Womens Beauty) ಹೆಚ್ಚಿಸುವಲ್ಲಿ ಲಿಪ್‌ಸ್ಟಿಕ್ (LipStick)ಗಳ ಪಾತ್ರ ಮುಖ್ಯವಾದುದು. ಅದಕ್ಕಾಗಿಯೇ ಮಹಿಳೆಯರು (Women), ಯುವತಿಯರು ಲಿಪ್‌ಸ್ಟಿಕ್ ಹಚ್ಚದೇ ತಮ್ಮ ಮೇಕಪ್ ಪೂರ್ಣಗೊಳಿಸಲು ಸಾಧ್ಯವೇ ಇಲ್ಲ. ಅದರಲ್ಲೂ ಕಚೇರಿ ಕೆಲಸಗಳಿಗೆ ಹೋಗುವವರಂತೂ ಲಿಪ್‌ಸ್ಟಿಕ್ ಇಲ್ಲದೇ ಮನೆಯಿಂದ ಹೊರಗೂ ಬರುವುದಿಲ್ಲ. ಹೆಂಗೆಳೆಯರು ವಿವಿಧ ಬಣ್ಣದ (Colours) ಲಿಪ್ ಸ್ಟಿಕ್‌ಗಳನ್ನ ಟ್ರೈ ಮಾಡ್ತಾರೆ. ಮಹಿಳೆಯರ ಮುಖದಲ್ಲಿ ತುಟಿಯು (Lips) ಎದ್ದುಕಾಣುವಂತಹ ಭಾಗವಾದ್ದರಿಂದ, ಬಣ್ಣ ಹಚ್ಚಿದರೆ ನೋಡಿದಷ್ಟೂ ನೋಡುತ್ತಲೇ ಇರಬೇಕು ಅನ್ನಿಸೋದ್ರಲ್ಲಿ ತಪ್ಪೇನೂ ಇಲ್ಲ.

    ವಾಟರ್ ಪ್ರೂಫ್ ಲಿಪ್‌ಸ್ಟಿಕ್:
    ಲಿಪ್ ಸ್ಟಿಕ್‌ಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ ಮತ್ತು ನಿಮಗೆ ತ್ವರಿತ ಆಕರ್ಷಕ ನೋಟವನ್ನು ನೀಡುತ್ತದೆ. ಅದರಲ್ಲೂ ವಾಟರ್ ಪ್ರೂಫ್ ಲಿಪ್‌ಸ್ಟಿಕ್‌ಗಳು (WaterProof LipStick) ನಿಮಗೆ ಪರಿಪೂರ್ಣ ನೋಟವನ್ನು ನೀಡುತ್ತದೆ. ಕಚೇರಿಯಿಂದ ಪಾರ್ಟಿಗೆ ಅಥವಾ ಪ್ರಯಾಣಿಸುವಾಗ ಇವುಗಳನ್ನು ನೀವು ಬಳಸಬಹುದು. ಇವು ಮಳೆಯಲ್ಲೂ ಬಣ್ಣವನ್ನು ಬಿಡುವುದಿಲ್ಲ. ಇದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತವೆ. ಗರ್ಲ್ ಫ್ರೆಂಡ್, ಪತ್ನಿ ಮತ್ತು ಸಹೋದರಿಯರಿಗೂ ಇದನ್ನು ಉಡುಗೊರೆಗಳಾಗಿ ನೀಡಬಹುದು. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್

    ಕೆಂಪು ಲಿಪ್‌ಸ್ಟಿಕ್:
    ಕೆಂಪು ಲಿಪ್ ಸ್ಟಿಕ್ (Red LipStick) ತುಟಿಗಳನ್ನು ಸುಂದರಗೊಳಿಸುವುದಲ್ಲದೇ ತುಟಿಗಳ ಆರೋಗ್ಯವನ್ನೂ ಕಾಪಾಡುತ್ತದೆ. ಈ ಲಿಪ್ ಸ್ಟಿಕ್‌ಗಳಲ್ಲಿ ಎಷ್ಟೇ ಬಣ್ಣಗಳಿದ್ದರೂ ರೆಡ್ ಕಲರ್ ಎಲ್ಲರ ಫೇವರೇಟ್ ಬಣ್ಣ. ಇವುಗಳಿಗೆ ನೈಸರ್ಗಿಕ ಪದಾರ್ಥಗಳನ್ನೂ ಬಳಸೋದ್ರಿಂದ ನಿಮಗೆ ಯಾವುದೇ ಹಾನಿ ಆಗೋದಿಲ್ಲ ಎಂದು ಸೌಂದರ್ಯವರ್ಧಕ ತಜ್ಞರು ಹೇಳುತ್ತಾರೆ.

    ನ್ಯೂಡ್ ಪಿಂಕ್ ಲಿಪ್‌ಸ್ಟಿಕ್:
    ನ್ಯೂಡ್ ಪಿಂಕ್ ಕಲರ್ ಲಿಪ್ ಸ್ಟಿಕ್ (NudPink Colour Lipstick) ಹಾಕಿಕೊಂಡರೆ ಅದು ನಿಮ್ಮ ನೈಸರ್ಗಿಕ ತುಟಿ ಬಣ್ಣದಂತೆಯೇ ಕಾಣುತ್ತದೆ. ನೀವು ಕಪ್ಪು ಡ್ರೆಸ್ನಲ್ಲಿ ಪ್ರಕಾಶಮಾನವಾದ ಲಿಪ್‌ಸ್ಟಿಕ್ ಅನ್ನು ಹಾಕುವುದು ತಪ್ಪಿಸಲು ಬಯಸಿದರೆ ನ್ಯೂಡ್ ಪಿಂಕ್ ಬಣ್ಣವು ಪರಿಪೂರ್ಣ ಆಯ್ಕೆಯಾಗಿದೆ. ಇದು ತುಂಬಾ ಸ್ಟೈಲಿಶ್‌, ಆದರೆ ತುಂಬಾ ಬೋಲ್ಡ್ ಲುಕ್ ಪಡೆಯಲು ಸಹಾಯ ಮಾಡುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಹುಡುಗಿಯರ ಮೈಕಾಂತಿ ಹೆಚ್ಚಿಸುವ ಸೀರೆಗೊಂದು ಸಿಂಗಾರ ಬೇಡವೇ?

    ಹುಡುಗಿಯರ ಮೈಕಾಂತಿ ಹೆಚ್ಚಿಸುವ ಸೀರೆಗೊಂದು ಸಿಂಗಾರ ಬೇಡವೇ?

    ಬೇರೆ ಯಾವ ಬಟ್ಟೆ ಧರಿಸಿದ್ರೂ ಸೀರೆಯ ಅಂದ ಮೀರಿಸಲು ಸಾಧ್ಯವಿಲ್ಲ. ಸೀರೆಯುಟ್ಟ ಮಹಿಳೆಯರು ಸುಂದರವಾಗಿ ಕಾಣುತ್ತಾರೆ. ಆದರೆ ಈಗ ಸ್ವಲ್ಪ ಟ್ರೆಂಡ್ ಬದಲಾಗಿದೆ.

    ಹೌದು. ಬೇಸಿಗೆಯಲ್ಲಿ ಟ್ಯಾನ್ಸ್ಪರೆಂಟ್ ಅಥವಾ ಕಾಟನ್ ಬಟ್ಟೆಯ ಸೀರೆಗಳು ಹೆಚ್ಚು ಬೇಡಿಕೆಯಲ್ಲಿರುವಂತೆ ಮಳೆ, ಚಳಿಗಾಲದಲ್ಲಿ ಚರ್ಮದ ಸುರಕ್ಷತೆಯೊಂದಿಗೆ ಅಂದ ಹೆಚ್ಚಿಸುವ ಉಡುಪುಗಳನ್ನೇ ಮಹಿಳೆಯರು, ಯುವತಿಯರು ಹೆಚ್ಚಾಗಿ ಇಷ್ಟಪಡುತ್ತಾರೆ. ಕೆಲವು ಮಹಿಳೆಯರು ಗ್ರ್ಯಾಂಡ್‌ ಪಾರ್ಟಿಗೆ ಹೋಗುವಂತ ಸಂದರ್ಭದಲ್ಲಿ ತಮ್ಮ ಮೈಮಾಟದಿಂದಲೇ ಅಂದದ ಹೊಳಪನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಇದನ್ನೂ ಓದಿ: ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ

    ಅದಕ್ಕಾಗಿ ಸುಂದರವಾದ ಹೂವುಗಳಿಂದ ಅಲಂಕೃತವಾದ ಪ್ರಿಂಟೆಡ್ ಸೀರೆಯನ್ನು ಆಯ್ಕೆ ಮಾಡಿಕೊಳ್ಳುವ ಜೊತೆಗೆ ಗ್ರ‍್ಯಾಂಡ್ ವರ್ಕ್ವುಳ್ಳ ಬ್ಲೌಸ್ ಧರಿಸುವುದು ಮರೆಯುವುದೇ ಇಲ್ಲ. ಸ್ಲೀವ್‌ಲೆಸ್ ಬ್ಲೌಸ್‌ಗಳು ಬೇಸಿಗೆ ಕಾಲದಲ್ಲಿ ಮಾರ್ಡನ್ ಲುಕ್ ಮತ್ತು ಆರಾಮದಾಯಕವಾಗಿರುವಂತೆ ಮಳೆಗಾಲದಲ್ಲಿ ಚಳಿಯಿಂದಲೂ ಸುರಕ್ಷತೆ ನೀಡಲು ವೆಸ್ಟ್ರನ್‌ ಲುಕ್ ನೀಡುವ ಸೀರೆಗಳೂ ಇಂದು ಹೆಚ್ಚು ಟ್ರೆಂಡಿಯಾಗಿವೆ.

    ಸೀರೆಗೆ ಮ್ಯಾಚಿಂಗ್ ಬ್ಲೌಸ್, ಇಸ್ತ್ರಿ, ನಿರ್ವಹಣೆ ಹೀಗೆ ಹಲವು ಕೆಲಸಗಳಿರುತ್ತವೆ. ಆದರೂ ಆಧುನಿಕ ಉಡುಪುಗಳ ಟ್ರೆಂಡ್ ಕಡಿಮೆಯಾಗುತ್ತಿದ್ದು, ಯುವತಿಯರು ಮಹಿಳೆಯರಿಂದು ಸ್ಟೈಲ್‌ಗಾಗಿ ಸೀರೆಯತ್ತ ವಾಲುತ್ತಿದ್ದಾರೆ. ಮಾರುಕಟ್ಟೆಯಲ್ಲೂ ಸಹ ಅವರ ಅಭಿರುಚಿಗೆ ತಕ್ಕಂತೆ ಆಧುನಿಕ ಅವತಾರದಲ್ಲಿ ಸೀರೆಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಅಲ್ಲದೆ ಹೆಚ್ಚು ಭಾರವಿರದ, ಸಮಯ ವ್ಯರ್ಥ ಮಾಡದೇ ಸುಲಭವಾಗಿ ಉಡಲು ಬರುವ ಸೀರೆಗಳು ಇಂದಿನ ಪೀಳಿಗೆಗೆ ಅಚ್ಚುಮೆಚ್ಚಾಗಿದೆ. ಇದನ್ನೂ ಓದಿ: ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ ಬಾಲಿವುಡ್‌ ನಟಿ ಬಿಪಾಶಾ ಬಸು

    ಫ್ಯಾಷನ್ ಡಿಸೈನರ್‌ಗಳ ಪ್ರಕಾರ ಬ್ಲೇಜರ್‌ನೊಂದಿಗೆ ಸೀರೆ, ಬಿಕಿನಿ ಟಾಪ್ ಜೊತೆ ಸೀರೆ, ಶರ್ಟ್ನೊಂದಿಗೆ ಸೀರೆ ಧರಿಸುವ ಫ್ಯಾಷನ್ ಬಂದಿದೆ. ಫ್ರೆಂಡ್ಸ್ ಜೊತೆ ಪಾರ್ಟಿಗಳಿಗೆ ಹೋಗುವುದರಿಂದ ಲೇಟ್‌ನೈಟ್ ಪಾರ್ಟಿ, ಕ್ಲಬ್-ಪಬ್‌ಗಳಿಗೂ ಈ ಸೀರೆ ಹೆಚ್ಚು ಸೂಕ್ತವಾಗಿದೆ. ಬಗೆಬಗೆಯ ಫ್ಯಾಷನ್ ಟ್ರೆಂಡ್ ಗಳು ಹೆಚ್ಚಾಗುತ್ತಿದ್ದರೂ ಹಳೆಯ ಸೀರೆ ಉಡುವ ರೀತಿ ನೋಡಲು ಸುಂದರವಾಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮಣ್ಣಲ್ಲಿ ಮಣ್ಣಾದ ಸೌಂದರ್ಯ – ಬಿಎಸ್‌ವೈ ಸೇರಿ ಕುಟುಂಬಸ್ಥರಿಂದ ಅಂತ್ಯಕ್ರಿಯೆ

    ಮಣ್ಣಲ್ಲಿ ಮಣ್ಣಾದ ಸೌಂದರ್ಯ – ಬಿಎಸ್‌ವೈ ಸೇರಿ ಕುಟುಂಬಸ್ಥರಿಂದ ಅಂತ್ಯಕ್ರಿಯೆ

    ಬೆಂಗಳೂರು: ಅಬ್ಬಿಗೆರೆ ಫಾರಂ ಹೌಸ್‌ನಲ್ಲಿ ಲಿಂಗಾಯತ ಸಂಪ್ರದಾಯದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೊಮ್ಮಗಳಾದ ಸೌಂದರ್ಯ ಅವರ ಅಂತ್ಯಕ್ರಿಯೆ ಇಂದು ಸಂಜೆ ನೆರವೇರಿತು.

    ಯಡಿಯೂರಪ್ಪ, ಕುಟುಂಬಸ್ಥರು, ಸಚಿವರು ಸೇರಿ ಬಂಧುಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಯಡಿಯೂರಪ್ಪ ಅವರ ಮೊಮ್ಮಗಳ ಸಾವಿಗೆ ಪ್ರಧಾನಿ ಮೋದಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: 15 ದಿನದ ಹಿಂದೆಯಷ್ಟೇ ಪತಿ ಜೊತೆಗೆ ಕಾಲೇಜಿಗೆ ತೆರಳಿ ಹಳೆ ಸ್ನೇಹಿತರನ್ನು ಮಾತಾಡಿಸಿದ್ದ ಸೌಂದರ್ಯ!

    ಬೆಂಗಳೂರಿನ ವಸಂತನಗರದಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ಬಿಎಸ್‌ವೈ ಅವರ ಮೊಮ್ಮಗಳು ಸೌಂದರ್ಯ (30) ಆತ್ಮಹತ್ಯೆ ಮಾಡಿಕೊಂಡಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದ, ಸೌಂದರ್ಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತಿ ಡಾಕ್ಟರ್ ನೀರಜ್ ಇಂದು ಆಸ್ಪತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸೌಂದರ್ಯ ನೇಣು ಬಿಗಿದುಕೊಂಡಿದ್ದರು. ಮಗುವನ್ನು ಬೇರೊಂದು ಕೊಠಡಿಯಲ್ಲಿ ಮಲಗಿಸಿ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು.

    ಮೇಡಂ ರೂಂ ಬಾಗಿಲು ತೆಗೀತಿಲ್ಲ ಎಂದು ಕೆಲಸದವರು ನೀರಜ್‌ಗೆ ಫೋನ್ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಪತಿಯ ಅಬ್ಬಿಗೆರೆ ಫಾರಂ ಹೌಸ್‌ನಲ್ಲಿ ಸೌಂದರ್ಯ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಇದನ್ನೂ ಓದಿ: ಮಗುವಾದ ಬಳಿಕ ಡಿಪ್ರೆಷನ್‌ಗೆ ಒಳಗಾಗಿದ್ರಾ ಬಿಎಸ್‌ವೈ ಮೊಮ್ಮಗಳು?

  • 15 ದಿನದ ಹಿಂದೆಯಷ್ಟೇ ಪತಿ ಜೊತೆಗೆ ಕಾಲೇಜಿಗೆ ತೆರಳಿ ಹಳೆ ಸ್ನೇಹಿತರನ್ನು ಮಾತಾಡಿಸಿದ್ದ ಸೌಂದರ್ಯ!

    15 ದಿನದ ಹಿಂದೆಯಷ್ಟೇ ಪತಿ ಜೊತೆಗೆ ಕಾಲೇಜಿಗೆ ತೆರಳಿ ಹಳೆ ಸ್ನೇಹಿತರನ್ನು ಮಾತಾಡಿಸಿದ್ದ ಸೌಂದರ್ಯ!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಈಕೆ 15 ದಿನಗಳ ಹಿಂದೆಯಷ್ಟೇ ತನ್ನ ಹಳೆಯ ಸ್ನೇಹಿತರನ್ನು ಮಾತನಾಡಿಸಿಕೊಂಡು ಬಂದಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು 15 ದಿನದ ಹಿಂದೆ ಸೌಂದರ್ಯ ಅವರು ತಮ್ಮ ಜೊತೆಗೆ ಈ ಹಿಂದೆ ತಾನು ಓದಿದ್ದ ಕಾಲೇಜಿಗೆ ಭೇಟಿ ಕೊಟ್ಟು ಸ್ನೇಹಿತರನ್ನು ಮಾತಾನಾಡಿಸಿಕೊಂಡು ಬಂದಿದ್ದರು. ಮದುವೆ ಬಳಿಕ ಸೌಂದರ್ಯ ಅವರು ತಲೆನೋವು ಹಾಗೂ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಂಬಂಧ ಶಿವಮೊಗ್ಗ ಹಾಗೂ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು.

    ಸದ್ಯ ಸೌಂದರ್ಯ ಅವರಿಗೆ 9 ತಿಂಗಳ ಗಂಡು ಮಗುವಿದ್ದು, ಮಗುವಾದ ಬಳಿಕ ಹಳೆ ಸ್ನೇಹಿತರನ್ನು ಭೇಟಿಯಾಗಿ ಮಾತನಾಡಿಸಿಕೊಂಡು ಬಂದಿದ್ದರು. ಆದರೆ ಇದೀಗ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಸ್ನೇಹಿತರು ಕೂಡ ಕಣ್ಣೀರಾಕುತ್ತಿದ್ದಾರೆ. ಇದನ್ನೂ ಓದಿ: ಮೋದಿ, ದೇವೇಗೌಡ, ಸೇರಿ ಗಣ್ಯರಿಂದ ಬಿಎಸ್‍ವೈ ಮೊಮ್ಮಗಳ ಸಾವಿಗೆ ಸಂತಾಪ

    ಬಿಎಸ್‍ವೈ ಮೊಮ್ಮಗಳು ಸೌಂದರ್ಯ ಅವರು ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಅವರ ಪತಿ ಡಾ. ನಿರಂಜನ್ ಕೂಡ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ರಾಮಯ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಬೌರಿಂಗ್‍ನಲ್ಲೇ ಸರ್ಜನ್ ಆಗಿದ್ದ ಸೌಂದರ್ಯ ಅವರು ಮಗುವಾದ ನಂತರ ಕೆಲಸ ಬಿಟ್ಟಿದ್ದರು. ಇದನ್ನೂ ಓದಿ: ದಂಪತಿ ನಡುವೆ ಯಾವತ್ತೂ ಜಗಳವಾಗಿಲ್ಲ- ಬಿಲ್ಡಿಂಗ್ ಕನ್‌ಸ್ಟ್ರಕ್ಟರ್‌ ಖ್ವಾಜಾ ಹುಸೇನ್

    ಸೌಂದರ್ಯ ಹಾಗೂ ಪತಿ ಡಾ. ನಿರಂಜನ್ ಅವರು ಧವಳಗಿರಿ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು. ಆದರೆ ಇಂದು ಡಾಲರ್ಸ್ ಕಾಲೋನಿಯ ಲೆಗೆಸ್ಸಿ ಅಪಾರ್ಟ್ ಮೆಂಟ್‍ ಫ್ಲಾಟ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗುವನ್ನು ಪಕ್ಕದ ರೂಮ್‍ನಲ್ಲಿ ಮಲಗಿಸಿ ತಾನು ಬೇರೊಂದು ರೂಮ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಮಗುವಾದ ಬಳಿಕ ಡಿಪ್ರೆಷನ್‌ಗೆ ಒಳಗಾಗಿದ್ರಾ ಬಿಎಸ್‌ವೈ ಮೊಮ್ಮಗಳು?

  • ಮೋದಿ, ದೇವೇಗೌಡ, ಸೇರಿ ಗಣ್ಯರಿಂದ ಬಿಎಸ್‍ವೈ ಮೊಮ್ಮಗಳ ಸಾವಿಗೆ ಸಂತಾಪ

    ಮೋದಿ, ದೇವೇಗೌಡ, ಸೇರಿ ಗಣ್ಯರಿಂದ ಬಿಎಸ್‍ವೈ ಮೊಮ್ಮಗಳ ಸಾವಿಗೆ ಸಂತಾಪ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ದುಃಖದಲ್ಲಿರುವ ಬಿಎಸ್ ಯಡಿರೂರಪ್ಪರಿಗೆ ಪ್ರಧಾನಿ ಕರೆ ಮಾಡಿ ಧೈರ್ಯ ತುಂಬಿ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಬಿಎಸ್‌ವೈಗೆ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ

     

    ಬಿಎಸ್‍ವೈ ಮೊಮ್ಮಗಳು ಸೌಂದರ್ಯ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಾರ್ಟ್‍ಮೆಂಟ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಸೌಂದರ್ಯ ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗುತ್ತಿದೆ. ಅಬ್ಬಿಗೆರೆಯ ನೀರಜ್ ಫಾರ್ಮ್‍ಹೌಸ್‍ನಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಮಗುವಾದ ಬಳಿಕ ಡಿಪ್ರೆಷನ್‌ಗೆ ಒಳಗಾಗಿದ್ರಾ ಬಿಎಸ್‌ವೈ ಮೊಮ್ಮಗಳು?

    ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಅವರು ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಅವರ ಪತಿ ಡಾ. ನಿರಂಜನ್ ಕೂಡ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ದಂಪತಿಗೆ 9 ತಿಂಗಳ ಗಂಡು ಮಗು ಇದೆ. ರಾಮಯ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಬೌರಿಂಗ್‌ನಲ್ಲೇ ಸರ್ಜನ್ ಆಗಿದ್ದ ಸೌಂದರ್ಯ ಅವರು ಮಗುವಾದ ನಂತರ ಕೆಲಸ ಬಿಟ್ಟಿದ್ದರು. ನಂತರ ಡಿಪ್ರೆಷನ್‌ಗೆ ಒಳಗಾಗಿದ್ದರು. ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ದಂಪತಿ ನಡುವೆ ಯಾವತ್ತೂ ಜಗಳವಾಗಿಲ್ಲ- ಬಿಲ್ಡಿಂಗ್ ಕನ್‌ಸ್ಟ್ರಕ್ಟರ್‌ ಖ್ವಾಜಾ ಹುಸೇನ್

    ಸೌಂದರ್ಯ ಹಾಗೂ ಪತಿ ಡಾ. ನಿರಂಜನ್ ಅವರು ಧವಳಗಿರಿ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದರು. ಆದರೆ ಇಂದು ಡಾಲರ್ಸ್ ಕಾಲೋನಿಯ ಲೆಗೆಸ್ಸಿ ಅಪಾರ್ಟ್ಮೆಂಟ್ ಫ್ಲಾಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗುವನ್ನು ಪಕ್ಕದ ರೂಮ್‌ನಲ್ಲಿ ಮಲಗಿಸಿ ತಾನು ಬೇರೊಂದು ರೂಮ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.