Tag: ಸೋಹೈಲ್‌

  • ಸಿಂಬು ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ನಟಿ ಹನ್ಸಿಕಾ ಮೋಟ್ವಾನಿ

    ಸಿಂಬು ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ನಟಿ ಹನ್ಸಿಕಾ ಮೋಟ್ವಾನಿ

    ನ್ನಡದ `ಬಿಂದಾಸ್’ (Bindas) ಚಿತ್ರದ ಮೂಲಕ ಮನಗೆದ್ದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಇತ್ತೀಚೆಗೆ ಉದ್ಯಮಿ ಸೋಹೈಲ್ ಕಥುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ತಮಿಳು ನಟ ಸಿಂಬು (Actor Simbu) ಜೊತೆಗಿನ ಬ್ರೇಕಪ್ ಬಗ್ಗೆ ಹನ್ಸಿಕಾ ಬಾಯ್ಬಿಟ್ಟಿದ್ದಾರೆ.

    ನಟಿ ಹನ್ಸಿಕಾ (Actress Hansika) ಸದ್ಯ ತಮ್ಮ ವೈವಾಹಿಕ ಬದುಕಿನಲ್ಲಿ ಖುಷಿಯಾಗಿದ್ದಾರೆ. ಜೈಪುರ ಪ್ಯಾಲೇಸ್ ಹನ್ಸಿಕಾ-ಸೋಹೈಲ್ (ಡಿ.4)ರಂದು ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈಗ ತಮ್ಮ ಮಾಜಿ ಬಾಯ್‌ಫ್ರೆಂಡ್ ಸಿಂಬು ಬಗ್ಗೆ ನಟಿ ಹನ್ಸಿಕಾ ಮಾತನಾಡಿದ್ದಾರೆ.

    ಕಾರಣಾಂತರಗಳಿಂದ ಸಿಂಬು- ಹನ್ಸಿಕಾ ರಿಲೇಷನ್‌ಶಿಪ್ ಬ್ರೇಕಪ್ ಆಗಿತ್ತು. ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಕೊನೆಯ ಸಂಬಂಧ ಬಹಳ ವಿಚಿತ್ರವಾಗಿತ್ತು. ಆದರೆ ಅದು ಈಗ ಕಥೆಯ ಅಂತ್ಯವಾಗಿದೆ. ಬ್ರೇಕಪ್ ಆದ ನಂತರ ಮತ್ತೆ ಲವ್‌ಗೆ ಯೆಸ್ ಎಂದು ಹೇಳಲು 7-8 ವರ್ಷ ಬೇಕಾಯಿತು. ದೇವರು ಒಳ್ಳೆಯ ದಾರಿ ತೋರಿಸಿದ್ದಾನೆ ಎಂದು ನಟಿ ಮಾತನಾಡಿದ್ದಾರೆ.

    ನಾನೊಬ್ಬ ರೊಮ್ಯಾಂಟಿಕ್ ವ್ಯಕ್ತಿ ಎಂದ ಹನ್ಸಿಕಾ ಪ್ರೀತಿ, ಮದುವೆಯಲ್ಲಿ ನನಗೆ ನಂಬಿಕೆ ಇದೆ ಎಂದಿದ್ದಾರೆ. ಸೋಹೈಲ್ ನನ್ನ ಜೀವನದಲ್ಲಿ ಬಂದ ನಂತರ ನನಗೆ ಪ್ರೀತಿಯಲ್ಲಿ ನಂಬಿಕೆ ಹೆಚ್ಚಿದೆ ಎಂದು ಹನ್ಸಿಕಾ ಹೇಳಿದ್ದಾರೆ. ಈಗ ಹೊಸ ಪಯಣ ಆರಂಭಿಸಿದ್ದೇನೆ ಎಂದು ಹನ್ಸಿಕಾ ಖುಷಿಯಿಂದ ಹೇಳಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆಯಾದ ಮೇಲೆ ಗ್ಲಾಮರಸ್ ಆಗಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ

    ಮದುವೆಯಾದ ಮೇಲೆ ಗ್ಲಾಮರಸ್ ಆಗಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ

    ಸೌತ್ ನಟಿ ಹನ್ಸಿಕಾ ಮೋಟ್ವಾನಿ, ಉದ್ಯಮಿ ಸೋಹೈಲ್ ಜೊತೆ ಖುಷಿಯಿಂದ ವೈವಾಹಿಕ (Wedding) ಜೀವನವನ್ನು ನಡೆಸುತ್ತಿದ್ದಾರೆ. ಇತ್ತೀಚಿಗಷ್ಟೇ ಜೈಪುರದಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆಯಾಗಿದ್ದರು. ಈಗ ಮದುವೆಯ ಬಳಿಕ ಹನ್ಸಿಕಾ ಚೆಂದದ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ಸಖತ್ ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದ್ದಾರೆ.

    ಸ್ಯಾಂಡಲ್‌ವುಡ್‌ಗೆ (Sandalwood) `ಬಿಂದಾಸ್’ (Bindas) ಚಿತ್ರದ ಮೂಲಕ ಗಮನ ಸೆಳೆದ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಬಹುಭಾಷೆಗಳಲ್ಲಿ ಮಿಂಚಿದ್ದಾರೆ. ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಟಾಪ್ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಈಗ ಮದುವೆ, ಸಂಸಾರ ಅಂತಾ ನಟಿ ಬ್ಯುಸಿಯಾಗಿದ್ದಾರೆ.

    ಡಿಸೆಂಬರ್ 4ರಂದು ಜೈಪುರ ಪ್ಯಾಲೇಸ್‌ನಲ್ಲಿ ಹನ್ಸಿಕಾ ಮತ್ತು ಸೋಹೈಲ್ ಕಥುರಿಯಾ ಮದುವೆಯಾದರು. ಮದುವೆಯಾಗಿ ಒಂದೂವರೆ ತಿಂಗಳ ನಂತರ ಹಾಟ್ ಆಗಿ ನಟಿ ಫೋಟೋಶೂಟ್ ಮಾಡಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ- ಹರಿಪ್ರಿಯಾ

     

    View this post on Instagram

     

    A post shared by Hansika Motwani (@ihansika)

    ನೇರಳೆ ಬಣ್ಣದ ಡ್ರೆಸ್‌ನಲ್ಲಿ ಗ್ಲಾಮರಸ್ ಆಗಿ ಹನ್ಸಿಕಾ ಕಾಣಿಸಿಕೊಂಡಿದ್ದಾರೆ. ಸ್ಲಿವ್ ಲೆಸ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಈ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೀ ವೆಡ್ಡಿಂಗ್ ಸಂಭ್ರಮದಲ್ಲಿ ಹನ್ಸಿಕಾ ಮೋಟ್ವಾನಿ ಜೋಡಿ

    ಪ್ರೀ ವೆಡ್ಡಿಂಗ್ ಸಂಭ್ರಮದಲ್ಲಿ ಹನ್ಸಿಕಾ ಮೋಟ್ವಾನಿ ಜೋಡಿ

    ಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ಹನ್ಸಿಕಾ ಮೋಟ್ವಾನಿ(Hansika Motwani) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬ್ಯುಸಿನೆಸ್‌ಮ್ಯಾನ್ ಸೊಹೈಲ್ (Sohail) ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಸದ್ಯ ಈ ಜೋಡಿ ಪ್ರೀ ವೆಡ್ಡಿಂಗ್ (Pre-wedding) ಸಂಭ್ರಮದಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ಫೋಟೋಗಳು ಸದ್ದು ಮಾಡುತ್ತಿದೆ.

     

    View this post on Instagram

     

    A post shared by Hansika Motwani (@ihansika)

    ಬಾಲನಟಿಯಾಗಿ ಎಂಟ್ರಿ ಕೊಟ್ಟು, ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿದ ಹನ್ಸಿಕಾ ಮೋಟ್ವಾನಿ ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಸದ್ಯ ಪ್ರೀ ವೆಡ್ಡಿಂಗ್ ಶೂಟ್ ಸಂಭ್ರಮದಲ್ಲಿ ಈ ಜೋಡಿ ಮಿಂಚಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಮದುವೆ ನಡೆಯಲಿದೆ. ಇದನ್ನೂ ಓದಿ:EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

    ನಟಿ ರೆಡ್ ಕಲರ್ ಸ್ಯಾರಿಯಲ್ಲಿ ಕಾಣಿಸಿಕೊಂಡರೆ, ಸೊಹೈಲ್ ರೆಡ್ ಕಲರ್ ಕುರ್ತಾದಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೋಡಿದ್ದಾರೆ. ಇತ್ತೀಚೆಗೆ ಉದ್ಯಮಿ ಸೊಹೈಲ್ ಪ್ಯಾರಿಸ್‌ನಲ್ಲಿ ನಟಿಗೆ ಪ್ರಪೋಸ್ ಮಾಡಿದ್ದರು. ಈ ಕುರಿತು ಹನ್ಸಿಕಾ ಅಧಿಕೃತವಾಗಿ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು.

    ಜೈಪುರದ 450 ವರ್ಷದ ಹಳೆಯ ಕಟ್ಟಡದಲ್ಲಿ ಈ ಜೋಡಿ ಹಸೆಮನೆ ಏರಲಿದೆ. ಡಿಸೆಂಬರ್ 2ರಿಂದ ಮದುವೆ ಶಾಸ್ತçಗಳು ಪ್ರಾರಂಭವಾಗಲಿದೆ. ಡಿಸೆಂಬರ್ 4ರಂದು ಆಪ್ತರ ಸಮ್ಮುಖದಲ್ಲಿ ಈ ಮದುವೆ ಜರುಗಲಿದೆ.

    Live Tv
    [brid partner=56869869 player=32851 video=960834 autoplay=true]