Tag: ಸೋಲಿಗರು

  • ಮಳೆಗಾಲದಲ್ಲೂ 1 ಕಿ.ಮೀ ಕಾಲ್ನಡಿಗೆಯಲ್ಲಿ ತೆರಳಿ ನೀರು ತರುತ್ತಿದ್ದಾರೆ ಗ್ರಾಮಸ್ಥರು

    ಮಳೆಗಾಲದಲ್ಲೂ 1 ಕಿ.ಮೀ ಕಾಲ್ನಡಿಗೆಯಲ್ಲಿ ತೆರಳಿ ನೀರು ತರುತ್ತಿದ್ದಾರೆ ಗ್ರಾಮಸ್ಥರು

    ಚಾಮರಾಜನಗರ: ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ಸೋಲಿಗರು ಕಿಲೋಮೀಟರ್ ಗಟ್ಟಲೇ ಅಲೆದಾಡಿ ನೀರು ಹೊತ್ತು ತರುತ್ತಿದ್ದಾರೆ.

    ಹನೂರು ತಾಲೂಕಿನ ಉತ್ತೂರು ಗ್ರಾಪಂನ ಕತ್ತೆಕಾಲು ಪೋಡು ಹಾಗೂ ಹಿರಿಹಂಬಲ ಪೋಡುಗಳಲ್ಲಿ ಕಳೆದ 6 ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೊರಿದ್ದು, ಒಂದು ಕಿಮೀ ದೂರದ ಕಾಡುಹಾದಿಯಲ್ಲಿ ಹಳ್ಳದ ನೀರನ್ನು ಜನರು ಹೊತ್ತು ತರುತ್ತಿದ್ದಾರೆ. ಪೋಡಿನಲ್ಲಿ ನೀರು ಎತ್ತುವ ಮೋಟಾರ್ ಸುಟ್ಟು ಹೋಗಿದೆ ಎಂದು ಸಬೂಬು ಹೇಳಿಕೊಂಡು ರಿಪೇರಿ ಮಾಡಿಸದ ಪರಿಣಾಮ ಕಾಡಿನೊಳಗೆ ನಡೆದು ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಕಾಲುವೆಗೆ ಬಿದ್ದು 10 ವರ್ಷದ ಮಗು ಸಾವು 

    ಕಾಡು ಪ್ರಾಣಿಗಳ ಭಯ ಹಾಗೂ ಮಳೆಯಿಂದ ಕೆಸರಿನೊಳಗೆ ನಡೆದು ಹೋಗುವ ಗಿರಿಜನರ ಕಷ್ಟವನ್ನು ಪಂಚಾಯಿತಿ ಅಧಿಕಾರಿಗಳು ಬಗೆಹರಿಸದಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ನೀರನ್ನು ಹೊತ್ತು ತರಲು ಕೂಲಿ ಬಿಟ್ಟು ಜನರು ಹೋಗಬೇಕು. ಈ ಹಿನ್ನೆಲೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕಿದೆ.

  • ವಿನೂತನವಾಗಿ ಹೊಸವರ್ಷವನ್ನು ಬರಮಾಡಿಕೊಂಡ ಸೋಲಿಗರು

    ವಿನೂತನವಾಗಿ ಹೊಸವರ್ಷವನ್ನು ಬರಮಾಡಿಕೊಂಡ ಸೋಲಿಗರು

    ಚಾಮರಾಜನಗರ: ಸೋಲಿಗರು ತಾವು ಬೆಳೆದ ಮೊದಲ ಬೆಳೆಗಳಾದ ರಾಗಿ, ಜೋಳ ಹಾಗೂ ಕುಂಬಳಕಾಯಿಗಳನ್ನು ತಿನ್ನದೆ ಅದರಿಂದ ರೊಟ್ಟಿ ತಯಾರಿಸಿದ್ದಾರೆ. ನಂತರ ಅದನ್ನು ವನದೇವತೆ ಹಾಗೂ ವನ್ಯಜೀವಿಗಳಿಗೆ ಅರ್ಪಿಸಿ ಪೂಜಿಸುವ ಸಾಂಪ್ರದಾಯಿಕ ಹಬ್ಬ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯದೊಳಗಿನ ಕೋಳಿಕಟ್ಟೆ ಡ್ಯಾಂ ಬಳಿ ನಡೆದಿದೆ.

    ಪ್ರತಿ ವರ್ಷವೂ ಹೊಸವರ್ಷವನ್ನು ಬರಮಾಡಿಕೊಳ್ಳಲು ಹಾಗೂ ವನಪೂಜೆ ಮಾಡಿ ಅಲ್ಲಿನ ವನ್ಯಜೀವಿಗಳಿಗೆ ಒಳ್ಳೆಯದಾಗಲಿ ಎಂದು ಕಾಡಿನೊಳಗಿರುವ ಪ್ರತಿಯೊಬ್ಬ ಸೋಲಿಗರ ನಂಬಿಕೆಯಾಗಿದೆ. ಅಲ್ಲದೆ ತಾವು ಬೆಳೆದ ಮೊದಲ ಬೆಳೆಗಳಾದ ರಾಗಿ, ಜೋಳ ಹಾಗೂ ಕುಂಬಳಕಾಯಿಗಳನ್ನು ಒಂದೆಡೆ ಸಂಗ್ರಹಿಸಿ, ಎಲ್ಲರೂ ಸೇರಿ ರಾಗಿ ಜೋಳವನ್ನು ಕಲ್ಲಿನಿಂದ ಪುಡಿಮಾಡಿ, ಕಾಡಿನೊಳಗೆ ಅದನ್ನು ಕೆಂಡದಿಂದ ಬೇಯಿಸಿ ತಯಾರಿಸಿದ ರೊಟ್ಟಿಯನ್ನು ಅಲ್ಲಿಯೇ ಇರುವ ಮಾದೇಶ್ವರನಿಗೆ, ಆನೆ, ಜಿಂಕೆ ಹಾಗೂ ಇನ್ನಿತರೆ ವನ್ಯಜೀವಿಗಳಿಗೆ ಭಕ್ತಿಯಿಂದ ಎಡೆ ಇಟ್ಟು ಪೂಜಿಸುತ್ತಾರೆ. ಬಳಿಕ ಕಾಡಿಗೆ ಹಾಗೂ ವನ್ಯಜೀವಿಗಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಎಲ್ಲ ಸೋಲಿಗರು ರೊಟ್ಟಿ ತಿನ್ನುತ್ತಾರೆ.

    ಕಾಡಿನೊಳಗೆ ಕೆಂಡದಿಂದ ಬೇಯಿಸಿ ತಯಾರಿಸುವ ಸಾವಿರಾರು ರೊಟ್ಟಿಯನ್ನು ಸೋಲಿಗರೆಲ್ಲರೂ ಒಂದೆಡೆ ಕುಳಿತು ರೊಟ್ಟಿ ತಿಂದು ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.