Tag: ಸೋಲಾರ್ ಹಗರಣ

  • ಪತಿ ಜೊತೆ ಸೇರಿ 7,894 ಕೋಟಿ ರೂ. ಸೋಲಾರ್ ಹಗರಣ ಮಾಡಿ ಸಿಕ್ಕಿಬಿದ್ಳು

    ಪತಿ ಜೊತೆ ಸೇರಿ 7,894 ಕೋಟಿ ರೂ. ಸೋಲಾರ್ ಹಗರಣ ಮಾಡಿ ಸಿಕ್ಕಿಬಿದ್ಳು

    ಲಾಸ್ ಏಂಜಲೀಸ್: ತನ್ನ ಪತಿಯೊಂದಿಗೆ ಸುಮಾರು 1 ಬಿಲಿಯನ್ (78,94,75,00,000 ರೂ.) ಡಾಲರ್ ಸೋಲಾರ್ ಹಗರಣ ಮಾಡಿದ ಮಹಿಳೆಗೆ 11 ವರ್ಷ, ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಕ್ಯಾಲಿಫೋರ್ನಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

    ಪಾಲೆಟ್ ಕಾರ್ಪೋಫ್(51) 2011 ಮತ್ತು 2018 ರ ನಡುವೆ ತನ್ನ ಪತಿ ಜೆಫ್‍ನೊಂದಿಗೆ ವ್ಯಾಪಕವಾದ ಪಿರಮಿಡ್ ಯೋಜನೆ ಮಾಡಲು ಸಾಥ್ ಕೊಟ್ಟಿದ್ದಳು. ಇವರು ಸೌರ ಉತ್ಪಾದಕಗಳ ಅಭಿವೃದ್ಧಿ ಮಾಡುತ್ತಿದ್ದಾರೆಂದು ಭಾವಿಸಿದ ಸುಮಾರು 20 ಹೂಡಿಕೆದಾರರು ಇವರತ್ತ ಆಕರ್ಷಣೆಯಾಗಿ ಹೊಡಿಕೆ ಮಾಡಿದ್ದರು. ಇದನ್ನೂ ಓದಿ:  ಸಾಕುನಾಯಿ ವಿಚಾರದಲ್ಲಿ ಜಗಳ – ದೊಣ್ಣೆ, ಕಬ್ಬಿಣದ ರಾಡ್‍ನಿಂದ ಕುಟುಂಬದ ಮೂವರ ಮೇಲೆ ಗಂಭೀರ ಹಲ್ಲೆ 

    ಈ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ಸಿಕ್ಕಿ ದಂಪತಿಯನ್ನು 2020ರಲ್ಲಿ ಬಂಧಿಸಿದ್ದರು. ಇವರನ್ನು ವಿಚಾರಣೆ ಮಾಡುವ ವೇಳೆ, ತಂತಿ ವಂಚನೆ ಮತ್ತು ಮನಿ ಲಾಂಡರಿಂಗ್ ಮಾಡುವ ಪಿತೂರಿ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡರು. ಈ ಹಿನ್ನೆಲೆ ಜೆಫ್ ಕಾರ್ಪೋಫ್ ಅವರಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅದೇ ರೀತಿ ಪಾಲೆಟ್ ಕಾರ್ಪೋಫ್ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಪ್ರಸ್ತುತ ಆಕೆಗೆ ನ್ಯಾಯಾಲಯವು 11 ವರ್ಷ, ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

    US: Woman jailed for 11 years for leading nearly $1 billion solar scam -  News | Khaleej Times

    ದಂಪತಿ 17 ಮಂದಿ ಹೂಡಿಕೆದಾರರಿಂದ 910 ಮಿಲಿಯನ್(71,84,26,80,000 ರೂ.) ಸಂಗ್ರಹಿಸಿದ್ದರು. ಈ ಹಣದಲ್ಲಿ 17,000 ಸೋಲರ್ ಸಾಧನಗಳನ್ನು ತಯಾರು ಮಾಡಿದ್ದರು. ಆದರೆ ಇದರಲ್ಲಿ ಅರ್ಧದಷ್ಟು ಸಾಧನಗಳು ಕೆಲಸ ಮಾಡುತ್ತಿರಲ್ಲಿಲ್ಲ. ಜೆಫ್ ಮತ್ತು ಪಾಲೆಟ್ ಕಾರ್ಪೋಫ್ ತಮ್ಮ ಸ್ವಂತ ಬಳಕೆಗಾಗಿಯೇ 140 ಮಿಲಿಯನ್(11,05,39,80,000) ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.

    ಈ ಹಣದಲ್ಲಿ ದಂಪತಿ ಐಷಾರಾಮಿ ಜೀವನ ನಡೆಸುತ್ತಿದ್ದು, ಪ್ರಸ್ತುತ ಅವರ ಬಳಿ ಆಭರಣಗಳು, 148 ಕಾರು, ಐಷಾರಾಮಿ ರಿಯಲ್ ಎಸ್ಟೇಟ್ ಖರೀದಿಸಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರು: ಕಟೀಲ್ 

    Live Tv

  • ಕರ್ನಾಟಕ ಉಸ್ತುವಾರಿಯ ‘ಕೈ’ಚಳಕಕ್ಕೆ ಸರಿತಾಗೆ 5 ದಿನ ನಡೆಯೋಕೂ ಸಾಧ್ಯವಾಗಿಲ್ವಂತೆ!

    ಕರ್ನಾಟಕ ಉಸ್ತುವಾರಿಯ ‘ಕೈ’ಚಳಕಕ್ಕೆ ಸರಿತಾಗೆ 5 ದಿನ ನಡೆಯೋಕೂ ಸಾಧ್ಯವಾಗಿಲ್ವಂತೆ!

    – ಕೇರಳದ ಸೋಲಾರ್ ಕಾಮಕಾಂಡದ ವರದಿ ಬಯಲು
    – ವಿಧಾನಸಭೆಯಲ್ಲಿ ನ್ಯಾಯಾಂಗ ತನಿಖಾ ವರದಿ ಮಂಡನೆ

    ತಿರುವನಂತಪುರಂ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರು ಬಹುಕೋಟಿ ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಅವರಿಗೆ ದೈಹಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನ್ಯಾಯಾಂಗ ತನಿಖಾ ವರದಿ ಹೇಳಿದೆ.

    ಸೋಲಾರ್ ಹಗರಣದ ನ್ಯಾಯಾಂಗ ತನಿಖಾ ವರದಿ ಗುರುವಾರ ಕೇರಳ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಸರಿತಾ ನಾಯರ್ ಹೇಳಿಕೆಯನ್ನು ಆಧರಿಸಿ ತಯಾರಿಸಲಾದ ವರದಿಯಲ್ಲಿ ಕೆಸಿ ವೇಣುಗೋಪಾಲ್ ಅವರ ‘ಕೈ’ಚಳಕದ ಬಗ್ಗೆ ವಿವರವಾಗಿ ಪ್ರಸ್ತಾಪವಾಗಿದೆ.

    ವರದಿಯಲ್ಲಿ ಏನಿದೆ?
    ಟೀಂ ಸೋಲಾರ್ ಬ್ರ್ಯಾಂಚ್ ಉದ್ಘಾಟನೆಗೆ ಆಹ್ವಾನಿಸಲು ಆಲೆಪ್ಪಿಯಲ್ಲಿರುವ ವೇಣುಗೋಪಾಲ್ ನಿವಾಸ ‘ರಾಜೀವಂ’ ಗೆ ಸರಿತಾ ಆಗಮಿಸಿದ್ದರು. ಈ ವೇಳೆ ವೇಣುಗೋಪಾಲ್ ಅವರಿಗೆ ಸರಿತಾ ಪರಿಚಯವಾಗಿತ್ತು. ಉದ್ಘಾಟನೆಯ ದಿನಾಂಕ, ಸಮಯ ನಿಗದಿಯಾದ ಬಳಿಕ ಹೊರಡಲು ಸಜ್ಜಾಗಿದ್ದ ವೇಳೆ ಕೆ.ಸಿ.ವೇಣುಗೋಪಾಲ್ ಸರಿತಾ ಹಿಂಭಾಗವನ್ನು ಸವರಿದ್ದಾರೆ. ಇದೇ ವೇಳೆ ಕೈಯಲ್ಲಿದ್ದ ಫೈಲ್‍ನಲ್ಲಿ ವೇಣುಗೋಪಾಲ್ ಹೊಡೆದ ಸರಿತಾ,’ಹಾಗೆ ಮಾಡಬೇಡಿ’ ಎಂದು ಹೇಳಿದ್ದರು. ಈ ಘಟನೆಗೆ ಸರಿತಾ ಜೊತೆಗಿದ್ದ ಜನರಲ್ ಮ್ಯಾನೇಜರ್ ಸಾಕ್ಷಿಯಾಗಿದ್ದಾರೆ. ಈ ವೇಳೆ ಜನರಲ್ ಮ್ಯಾನೇಜರ್ ಮಧ್ಯಪ್ರವೇಶಿಸಿ ಸರಿತಾ ಅವರನ್ನು ಸುಮ್ಮನಾಗಿಸಿದ್ದರು.

    ಇದಾದ ಕೆಲ ಸಮಯದ ಬಳಿಕ ಸರಿತಾ ಮೊಬೈಲ್‍ಗೆ ವೇಣುಗೋಪಾಲ್ ‘ತುಂಬಾ ಮೃದುವಾಗಿತ್ತು’ ಎಂದು ಸಂದೇಶ ಕಳುಹಿಸಿದ್ದಾರೆ. ಇದರಿಂದ ಸಿಟ್ಟಾಗಿ ಸರಿತಾ ಫೋನ್ ಮಾಡಿ ಬೈದಾಗ ‘ಸ್ಟಿಲ್ ಲವ್ ಯೂ’ ಎಂದು ಹೇಳಿದ್ದಾರೆ. ಫೋನ್ ಕರೆಯಲ್ಲಿ ನೀನು ದೆಹಲಿಗೆ ಬಂದ್ರೆ ಮಾತ್ರ ಬ್ರ್ಯಾಂಚ್ ಉದ್ಘಾಟನೆಗೆ ಬರುತ್ತೇನೆ ಎಂದು ಷರತ್ತು ವಿಧಿಸಿದ್ದರು. ಕೊನೆಗೆ ದೆಹಲಿಗೆ ಬಂದು ಸರಿತಾ – ವೇಣುಗೋಪಾಲ್ ರಾಜಿಯಾಗಿದ್ದರು. ಇದಾದ ಬಳಿಕ ರಾತ್ರಿ ವೇಳೆ ಪದೇ ಪದೇ ವೇಣುಗೋಪಾಲ್ ಫೋನ್ ಮಾಡುತ್ತಿದ್ದರು. ಅನಿಲ್ ಕುಮಾರ್ ಹಾಗೂ ನಜರುಲ್ಲಾ ಅವರು ಕೆಸಿ ವೇಣುಗೋಪಾಲ್‍ಗೆ ಪಿಂಪ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಅಂದು ಕೇರಳದಲ್ಲಿ ಬಿಜೆಪಿ ಬಂದ್‍ಗೆ ಕರೆ ನೀಡಿತ್ತು. ಈ ವೇಳೆ ಇಕೋ ಟೂರಿಸಂ ಯೋಜನೆಯ ಪೇಪರ್ ರೆಡಿಯಿದೆ ಎಂದು ರೋಸ್ ಹೌಸ್‍ಗೆ ಬರಲು ವೇಣುಗೋಪಾಲ್ ಸರಿತಾಗೆ ಆಹ್ವಾನ ನೀಡಿದ್ದರು. ಇಕೋಟೂರಿಸಂ ಯೋಜನೆ ನಂಬಿ ಸರಿತಾ ಆಗಮಿಸಿದಾಗ ರೋಸ್ ಹೌಸ್ ನಲ್ಲಿ ಬಂದಾಗ ಸಚಿವರೂ ಇರಲಿಲ್ಲ, ಸಚಿವರ ಆಪ್ತ ಸಿಬ್ಬಂದಿಯೂ ಇರಲಿಲ್ಲ. ಇಬ್ಬರು ಪೊಲೀಸರು ಮಾತ್ರ ಗೇಟ್‍ನಲ್ಲಿ ನಿಂತಿದ್ದರು. ಫೋನ್ ಮಾಡಿದಾಗ ಹಾಲ್‍ನಲ್ಲಿದ್ದೇನೆ ಎಂದು ವೇಣುಗೋಪಾಲ್ ಹೇಳಿದ್ದರು. ಕುಡಿದ ಅಮಲಿನಲ್ಲಿ ತೇಲಾಡುತ್ತಿದ್ದ ವೇಣುಗೋಪಾಲ್ ಸರಿತಾ ಕೊಠಡಿಗೆ ಬಂದಾಗ ಒತ್ತಾಯಪೂರ್ವಕವಾಗಿ ಅಪ್ಪಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವೇಣುಗೋಪಾಲ್ ಬಲವಂತವಾಗಿ ದೈಹಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ದೌರ್ಜನ್ಯ ನಡೆದ ಬಳಿಕ ಸರಿತಾಗೆ 5 ದಿನ ನಡೆಯಲೂ ಸಾಧ್ಯವಾಗಲಿಲ್ಲ. ಎದ್ದುನಿಂತುಕೊಳ್ಳಲೂ ಸಾಧ್ಯವಾಗಿರಲಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಸರಿತಾ ಬಳಿ ಸಾಕ್ಷ್ಯಗಳಿದ್ದು, ಇದಾದ ಬಳಿಕವೂ ಫೋನ್ ಕಾಲ್ ಹಾಗೂ ಎಸ್‍ಎಂಎಸ್ ಮೂಲಕ ದೌರ್ಜನ್ಯ ನಡೆಯುತ್ತಿತ್ತು ಎನ್ನುವ ಅಂಶ ವರದಿಯಲ್ಲಿದೆ.

    ಕೆಸಿ ವೇಣುಗೋಪಾಲ್ ಬೆದರಿಸಿ ನನ್ನನ್ನು ಸೆಕ್ಸ್ ಗೆ ಬಳಸಿಕೊಂಡಿದ್ದಾರೆ. ಟೆಲಿಫೋನ್ ಕಾಲ್, ಎಸ್‍ಎಂಎಸ್ ಮಾಡಿ ದೌರ್ಜನ್ಯ ಎಸಗಿದ್ದಾರೆ. ಇದಕ್ಕೆ ಎಲ್ಲ ನನ್ನ ಬಳಿ ಸಾಕ್ಷ್ಯವಿದೆ ಎಂದು ಆಯೋಗದ ಮುಂದೆ ಸರಿತಾ ನಾಯರ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ವರದಿ ಮಂಡನೆ ಬಗ್ಗೆ ಪ್ರತಿಕ್ರಿಯಿಸಿದ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ, ಇದು ಸೋಲಾರ್ ತನಿಖಾ ಆಯೋಗದ ವರದಿಯೋ ಅಥವಾ ಸರಿತಾ ನಾಯರ್ ಹೇಳಿಕೆಯ ವರದಿಯೋ ಎಂದು ಪ್ರಶ್ನಿಸಿದ್ದಾರೆ. ವರದಿಯಲ್ಲಿರುವ ಎಲ್ಲ ಅಂಶಗಳು ಈ ಹಿಂದೆ ಸರಿತಾ ಬರೆದ ಪತ್ರದಲ್ಲಿತ್ತು. ಈ ವರದಿಯಲ್ಲಿ ಏನೂ ವಿಶೇಷ ಅಂಶಗಳಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಈ ಹಿಂದಿನ ಯುಡಿಎಫ್ ಸರಕಾರದ ಆಡಳಿತದ ವೇಳೆ ನಡೆದ ಸೋಲಾರ್ ಭ್ರಷ್ಟಾಚಾರ ಹಗರಣದ ನ್ಯಾಯಾಂಗ ತನಿಖೆಯನ್ನು ಜಸ್ಟೀಸ್ ಜಿ. ಶಿವರಾಜನ್ ನಡೆಸಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ, ವಿದ್ಯುತ್ ಖಾತೆ ಸಚಿವ ಆರ್ಯಾಡನ್ ಮುಹಮ್ಮದ್, ಸೋಲಾರ್ ಪ್ಯಾನಲ್ ಪೂರೈಕೆಯ ಪ್ರಧಾನ ಸೂತ್ರಧಾರಿ ಸರಿತಾ ಎಸ್. ನಾಯರ್, ಆಕೆಯ ಪತಿ ಬಿಜು ರಾಧಾಕೃಷ್ಣನ್ ಸೇರಿದಂತೆ ಹಲವರು ಈ ಹೇಳಿಕೆ ನೀಡಿದ್ದರು.

    ಈ ಹಿಂದೆ ತಿರುವನಂತಪುರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಸರಿತಾ ನಾಯರ್ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ. ಹೀಗಾಗಿ ಸರಿತಾ ನಾಯರ್ ಯಾರ ವಿರುದ್ಧ ಹೇಳಿಕೆ ನೀಡಿದ್ದಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದರು.

    ಆರೋಪಿ ಸರಿತಾ ಉಲ್ಲೇಖ ಮಾಡಿರುವ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ನ್ಯಾಯಾಂಗ ಆಯೋಗ ಹೇಳಿದೆ. ಲೈಂಗಿಕ ಬಯಕೆ ಈಡೇರಿಸುವಂತೆ ಬೇಡಿಕೆ ಇಡುವುದು ಭ್ರಷ್ಟಾಚಾರದ ಭಾಗವೆಂದು ಪರಿಗಣಿಸಲಾಗಿದೆ. ವರದಿಯನ್ನೇ ಆಧರಿಸಿ ಕಾಂಗ್ರೆಸ್‍ಗೆ ಶಾಕ್ ನೀಡಲು ಕೇರಳದ ಎಡಪಕ್ಷಗಳ ಸರ್ಕಾರ ಈಗ ಮುಂದಾಗಿದೆ.

  • ನಾನು ತಪ್ಪು ಮಾಡಿದ್ರೆ, ಸಾರ್ವಜನಿಕ ಜೀವನದಿಂದ ನಿವೃತ್ತಿ: ವೇಣುಗೋಪಾಲ್

    ನಾನು ತಪ್ಪು ಮಾಡಿದ್ರೆ, ಸಾರ್ವಜನಿಕ ಜೀವನದಿಂದ ನಿವೃತ್ತಿ: ವೇಣುಗೋಪಾಲ್

    ಬೆಂಗಳೂರು: ನಾನು ತಪ್ಪು ಮಾಡಿದ್ದೇನೆಂದು ಸಾಬೀತಾದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

    ಶಾಂತಿನಗರದಲ್ಲಿ ಇಂದು ಬೆಂಗಳೂರಿನಿಂದ ಕೇರಳದ ಆಲೆಪ್ಪಿಗೆ ಜೆಎಸ್‍ಆರ್‍ಡಿಸಿ ಬಸ್ಸು ಸೇವೆಗೆ ಹಸಿರು ನಿಶಾನೆ ತೋರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಆರೋಪಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

    ನಾನು 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಈ ರೀತಿಯ ಆರೋಪಗಳನ್ನು ವಿಪಕ್ಷಗಳು ಮೊದಲಿನಿಂದಲೂ ಮಾಡಿಕೊಂಡು ಬಂದಿವೆ. ನಾನು ಚುನಾವಣೆಗೆ ನಿಂತಾಗ ಹೆಚ್ಚು ಅಪಪ್ರಚಾರ ಮಾಡಿದ್ದರು. ಸರೀತಾ ನಾಯರ್ ಮೇಲೆ 36 ಕ್ರಿಮಿನಲ್ ಕೇಸುಗಳಿವೆ. ಅವರು ನನ್ನ ಬಗ್ಗೆ ಆರೋಪ ಮಾಡಿದ್ದು ವಿರುದ್ಧ ನಾನು ಎರ್ನಾಕುಲಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದರು.

    ಬೆಂಗಳೂರಿನ ಮಳೆಗೆ 5 ಜನ ಸಾವನ್ನಪ್ಪಿದ್ದಾರೆ. ಇದು ಆಕಸ್ಮಿಕವಾಗಿ ಆಗಿರುವ ಘಟನೆ. ಇನ್ನು ಮುಂದೆ ಈ ರೀತಿ ಆಗದ ರೀತಿಯಲ್ಲಿ ಸರಿಪಡಿಸಿಕೊಳ್ಳುತ್ತೇವೆಂದು ತಿಳಿಸಿದರು.

    ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ಅವಾಚ್ಯ ಶಬ್ದ ಬಳಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಎಐಸಿಸಿಯ ಪರವಾಗಿ ಮಾತನಾಡುತ್ತಿದ್ದೇನೆ. ಬಿಜೆಪಿಯ ನಾಯಕರು ಇದಕ್ಕಿಂತ ಹೆಚ್ಚಾಗಿ ಕಾಮೆಂಟ್ ಮಾಡಿದ್ದಾರೆ. ರೋಷನ್ ಬೇಗ್‍ಗಿಂತ ಕೆಟ್ಟದಾಗಿ ಮಾತನಾಡಿದ್ದು ಕೇಳಿದ್ದೇನೆ. ರೋಷನ್ ಬೇಗ್ ಉದ್ದೇಶ ಪೂರಕವಾಗಿ ಮಾತನಾಡಿಲ್ಲ. ಇದರ ಬಗ್ಗೆ ಸ್ಪಷ್ಟನೆ ನೀಡಿದರೂ ಸಹ ಇಂತಹ ಪದ ಬಳಕೆ ಸರಿ ಅಲ್ಲ. ರಾಹುಲ್ ಗಾಂಧಿ ಅವರು ಕೆಲವೇ ದಿನಗಳಲ್ಲಿ ಎಐಸಿಸಿ ಅಧ್ಯಕ್ಷರಾಗಲಿದ್ದಾರೆ. ಕೆಪಿಸಿಸಿ ಸಹ ಇದರ ಪರವಾಗಿದೆ ಎಂದು ತಿಳಿಸಿದರು.

    ಏನಿದು ಪ್ರಕರಣ?
    ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ 2013ರ ಜುಲೈನಲ್ಲಿ ಜೈಲಿನಿಂದಲೇ ಒಂದು ಪತ್ರ ಬರೆದಿದ್ದರು. ಆ ಪತ್ರವನ್ನು ಆಧರಿಸಿ ರಾಜ್ಯದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗುವ ಸಾಧ್ಯತೆಯಿದೆ.

    ಸೋಲಾರ್ ಹಗರಣದ ಬಗ್ಗೆ ಈ ಹಿಂದೆ ತಿರುವನಂತಪುರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಸರಿತಾ ನಾಯರ್ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ. ಹೀಗಾಗಿ ಸರಿತಾ ನಾಯರ್ ಪತ್ರದಲ್ಲಿ ಯಾರ ಹೆಸರನ್ನು ಬರೆದಿದ್ದಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದ್ದರು.

    ಕೇರಳ ಸಿಎಂ ಪಿಣರಾಯ್ ವಿಜಯನ್ ನೇತೃತ್ವದ ಎಡಪಕ್ಷಗಳ ಒಕ್ಕೂಟದ ಸರ್ಕಾರಕ್ಕೆ ಸೋಲಾರ್ ತನಿಖಾ ಆಯೋಗದ ವರದಿ ಬಂದಿದ್ದು, ಆರೋಪಿ ಸರಿತಾ ಪತ್ರದಲ್ಲಿ ಉಲ್ಲೇಖ ಮಾಡಿರುವ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ಎಂದು ಹೇಳಿದೆ. ಲೈಂಗಿಕ ಬಯಕೆ ಈಡೇರಿಸುವಂತೆ ಬೇಡಿಕೆ ಇಡುವುದು ಭ್ರಷ್ಟಾಚಾರದ ಭಾಗವೆಂದು ಪರಿಗಣಿಸಲಾಗಿದೆ. ವರದಿಯನ್ನೇ ಆಧರಿಸಿ ಕಾಂಗ್ರೆಸ್‍ಗೆ ಶಾಕ್ ನೀಡಲು ಕೇರಳದ ಎಡಪಕ್ಷಗಳ ಸರ್ಕಾರ ಮುಂದಾಗಿದೆ.

    ಮಾಧ್ಯಮಗಳಿಗೆ ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಮಾಜಿ ಸರಿತಾ ನಾಯರ್ ಪತ್ರದಲ್ಲಿ, ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸಂಸದ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಆಗಿರುವ ವೇಣುಗೋಪಾಲ್, ಹೈಬಿ ಈಡನ್, ಅರ್ಯಾಡನ್ ಮೊಹಮ್ಮದ್, ಅಡೂರ್ ಪ್ರಕಾಶ್, ಲೋಕಸಭಾ ಸಂಸದ ಜೋಸ್ ಕೆ ಮನಿ, ಕೆಪಿ ಅನಿಲ್ ಕುಮಾರ್ ಹೆಸರು ಇದೆ.

     

  • ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್?

    ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್?

    ತಿರುವನಂತಪುರಂ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಬಹುಕೋಟಿ ಸೋಲಾರ್ ಹಗರಣದಲ್ಲಿ ಏಕಕಾಲಕ್ಕೆ ಭ್ರಷ್ಟಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಲು ಕೇರಳ ಸರ್ಕಾರ ಚಿಂತನೆ ನಡೆಸಿದೆ.

    ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ 2013ರ ಜುಲೈನಲ್ಲಿ ಜೈಲಿನಿಂದಲೇ ಒಂದು ಪತ್ರ ಬರೆದಿದ್ದರು. ಆ ಪತ್ರವನ್ನು ಆಧರಿಸಿ ರಾಜ್ಯದ ಪ್ರಮಖ ರಾಜಕೀಯ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲು ಸೂಚನೆ ನೀಡಲಾಗಿದೆ.

    ಈ ವಿಚಾರದ ಬಗ್ಗೆ ತಿರುವನಂತಪುರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಸರಿತಾ ನಾಯರ್ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ. ಹೀಗಾಗಿ ಸರಿತಾ ನಾಯರ್ ಪತ್ರದಲ್ಲಿ ಯಾರ ಹೆಸರನ್ನು ಬರೆದಿದ್ದಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

    ಕೇರಳ ಸಿಎಂ ಪಿಣರಾಯ್ ವಿಜಯನ್ ನೇತೃತ್ವದ ಎಡಪಕ್ಷಗಳ ಒಕ್ಕೂಟದ ಸರ್ಕಾರಕ್ಕೆ ಸೋಲಾರ್ ತನಿಖಾ ಆಯೋಗದ ವರದಿ ಬಂದಿದ್ದು, ಆರೋಪಿ ಸರಿತಾ ಪತ್ರದಲ್ಲಿ ಉಲ್ಲೇಖ ಮಾಡಿರುವ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ಎಂದು ಹೇಳಿದೆ. ಲೈಂಗಿಕ ಬಯಕೆ ಈಡೇರಿಸುವಂತೆ ಬೇಡಿಕೆ ಇಡುವುದು ಭ್ರಷ್ಟಾಚಾರದ ಭಾಗವೆಂದು ಪರಿಗಣಿಸಲಾಗಿದೆ. ವರದಿಯನ್ನೇ ಆಧರಿಸಿ ಕಾಂಗ್ರೆಸ್‍ಗೆ ಶಾಕ್ ನೀಡಲು ಕೇರಳದ ಎಡಪಕ್ಷಗಳ ಸರ್ಕಾರ ಮುಂದಾಗಿದೆ.

    ಮಾಧ್ಯಮಗಳಿಗೆ ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಮಾಜಿ ಸರಿತಾ ನಾಯರ್ ಪತ್ರದಲ್ಲಿ, ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸಂಸದ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಆಗಿರುವ ವೇಣುಗೋಪಾಲ್, ಹೈಬಿ ಈಡನ್, ಅರ್ಯಾಡನ್ ಮೊಹಮ್ಮದ್, ಅಡೂರ್ ಪ್ರಕಾಶ್, ಲೋಕಸಭಾ ಸಂಸದ ಜೋಸ್ ಕೆ ಮನಿ, ಕೆಪಿ ಅನಿಲ್ ಕುಮಾರ್ ಹೆಸರು ಇದೆ.