Tag: ಸೋಯಾ ಕೀಮಾ ಮಸಾಲ

  • ಚಪಾತಿ, ಪೂರಿಗೆ ಪರ್ಫೆಕ್ಟ್ ಸೋಯಾ ಕೀಮಾ ಮಸಾಲ..!

    ಚಪಾತಿ, ಪೂರಿಗೆ ಪರ್ಫೆಕ್ಟ್ ಸೋಯಾ ಕೀಮಾ ಮಸಾಲ..!

    ದಿನಬೆಳಗಾದರೆ ಏನು ತಿಂಡಿ ಮಾಡುವುದು ಎಂಬುದೇ ಎಲ್ಲಾ ಅಮ್ಮಂದಿರ ಚಿಂತೆಯಾಗಿರುತ್ತದೆ. ತಿಂಡಿ ಮಾಡಿದರೆ ಅದಕ್ಕೆ ಸೈಡ್ ಡಿಶ್ ಏನು ಮಾಡುವುದು ಎನ್ನುವ ಯೋಚನೆ ಎಲ್ಲರನ್ನು ಕಾಡುತ್ತದೆ. ಅದಕ್ಕಾಗಿ ಇವತ್ತಿನ ನಮ್ಮ ರೆಸಿಪಿಯಲ್ಲಿ ಚಪಾತಿ, ಪೂರಿ, ರೋಟಿ ಹೀಗೆ ಎಲ್ಲಾ ತಿಂಡಿಗೂ ಪರ್ಫೆಕ್ಟ್ ಕಾಂಬಿನೇಷನ್ ಆಗಿರುವ ಸೋಯಾ ಕೀಮಾ ಮಸಾಲ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಇದು ಮಾಡಲು ಅತ್ಯಂತ ಸುಲಭವಾಗಿದ್ದು, ತುಂಬಾ ಟೇಸ್ಟಿಯಾಗಿರುತ್ತದೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಬಂಗಾಳದ ಫೇಮಸ್ ಬಸಂತಿ ಪಲಾವ್ ಟ್ರೈ ಮಾಡಿ

    ಬೇಕಾಗುವ ಸಾಮಗ್ರಿಗಳು:
    ಸೋಯಾ ಚಂಕ್ಸ್ – 1 ಕಪ್
    ದೊಡ್ಡದಾಗಿ ಹೆಚ್ಚಿದ ಈರುಳ್ಳಿ – 1
    ಬೆಳ್ಳುಳ್ಳಿ -3
    ಹಸಿರುಮೆಣಸಿನಕಾಯಿ -1
    ಶುಂಠಿ – ಸ್ವಲ್ಪ
    ಟೊಮೆಟೋ – 1
    ಪಲಾವ್ ಎಲೆ- 1
    ಲವಂಗ – 1
    ಸೋಂಪು – ಸ್ವಲ್ಪ
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
    ಅಚ್ಚಖಾರದ ಪುಡಿ – 1 ಚಮಚ
    ಕಾಶ್ಮೀರಿ ಚಿಲ್ಲಿ ಪೌಡರ್ – 1 ಚಮಚ
    ಗರಂ ಮಸಾಲ – 1 ಚಮಚ
    ಧನಿಯಾ ಪೌಡರ್ – 1 ಚಮಚ
    ಉಪ್ಪು -ರುಚಿಗೆ ತಕ್ಕಷ್ಟು
    ನೀರು – 1 ಕಪ್
    ಕಸೂರಿ ಮೇತಿ – ಸ್ವಲ್ಪ

     

    ಮಾಡುವ ವಿಧಾನ:
    * ಮೊದಲಿಗೆ ಸೋಯಾ ಚಂಕ್ಸ್ ಅನ್ನು ಬಿಸಿನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ.
    * ನಂತರ ನೆನೆಸಿದ ಚಂಕ್ಸ್ ಅನ್ನು ನೀರಿನಿಂದ ತೆಗೆದು ಚನ್ನಾಗಿ ಹಿಂಡಿ ಅದರ ನೀರನ್ನು ತೆಗೆಯಿರಿ. ಬಳಿಕ ಸೋಯಾ ಚಂಕ್ಸ್ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ.
    * ಈಗ ಪುನಃ ಒಂದು ಮಿಕ್ಸಿ ಜಾರಿಗೆ ಈರುಳ್ಳಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ ಹಾಗೂ ಟೊಮೆಟೋವನ್ನು ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
    * ನಂತರ ಒಂದು ಪ್ಯಾನ್ ಅಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಪಲಾವ್ ಎಲೆ, ಲವಂಗ, ಸೋಂಪು, ಜೀರಿಗೆ, ಮತ್ತು ರುಬ್ಬಿದ ಮಿಶ್ರಣ ಹಾಕಿ ಹಸಿವಾಸನೆ ಹೋಗುವವರೆಗೆ ಚನ್ನಾಗಿ ಫ್ರೈ ಮಾಡಿಕೊಳ್ಳಿ.
    * ಬಳಿಕ ಅದಕ್ಕೆ ಅಚ್ಚ ಖಾರದ ಪೌಡರ್, ಕಾಶ್ಮೀರಿ ಚಿಲ್ಲಿ ಪೌಡರ್, ಗರಂ ಮಸಾಲ ಹಾಗೂ ಧನಿಯಾ ಪೌಡರ್ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ.
    * ಈಗ ರುಬ್ಬಿದ ಸೋಯಾ ಚಂಕ್ಸ್ ಮಿಶ್ರಣವನ್ನು ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ. ಬಳಿಕ ಅದಕ್ಕೆ ಒಂದು ಕಪ್ ನೀರನ್ನು ಸೇರಿಸಿಕೊಂಡು ಮಿಕ್ಸ್ ಮಾಡಿಕೊಂಡು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಅದರ ಮೇಲೆ ಸ್ವಲ್ಪ ಕಸೂರಿ ಮೇತಿ ಹಾಕಿಕೊಳ್ಳಿ.
    * ನಂತರ ಅದನ್ನು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿಕೊಂಡು ನಿಮ್ಮಿಷ್ಟದ ತಿಂಡಿಯೊಂದಿಗೆ ಸೈಡ್ ಡಿಶ್ ಆಗಿ ತಿನ್ನಲು ಕೊಡಿ. ಇದನ್ನೂ ಓದಿ: ಪಾರ್ಟಿಗೆ ಮಾಡಿ ಚೀಸಿ ಪನೀರ್ ಸಿಗರ್ ರೋಲ್ !