Tag: ಸೋಮ್ಲಾಪುರ

  • ಆನೆ ದಾಳಿಗೆ ಯುವತಿ ಸಾವು- ತಾಯಿಗೆ ಗಂಭೀರ ಗಾಯ

    ಆನೆ ದಾಳಿಗೆ ಯುವತಿ ಸಾವು- ತಾಯಿಗೆ ಗಂಭೀರ ಗಾಯ

    ದಾವಣಗೆರೆ: ಆನೆ ದಾಳಿಗೆ (Elephant Attack) ಯುವತಿಯೋರ್ವಳು ಮೃತಪಟ್ಟ ದುರ್ಘಟನೆ ಚನ್ನಗಿರಿಯ (Channagiri) ಸೋಮ್ಲಾಪುರ (Somlapura) ಗ್ರಾಮದಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಯುವತಿಯ ತಾಯಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ.

    ಗ್ರಾಮದ ಕವನ (17) ಮೃತ ಯುವತಿ ಎಂದು ತಿಳಿದುಬಂದಿದೆ. ಮುಂಜಾನೆ ತಾಯಿ ಮಂಜುಳಾ (42) ಅವರ ಜೊತೆಯಲ್ಲಿ ಯುವತಿ ಜಮೀನಿಗೆ ತೆರಳಿದ್ದಳು. ಜಮೀನಿನಲ್ಲಿ ಅವರೆಕಾಯಿ ಬಿಡಿಸುವ ವೇಳೆ ತಾಯಿ ಹಾಗೂ ಮಗಳ ಮೇಲೆ ಆನೆ ದಾಳಿ ನಡೆಸಿದೆ. ಇದನ್ನೂ ಓದಿ: ಮನೆಮುಂದೆ ನಿಲ್ಲಿಸಿದ್ದ ಕಾರನ್ನು ಹೆದ್ದಾರಿಗೆ ತಳ್ಳಿಕೊಂಡು ಬಂದ ಕಾಡಾನೆ

    ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕವನಾಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆದಿದೆ. ಆದರೆ ಯುವತಿ ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದಾಳೆ. ಗಾಯಗೊಂಡಿರುವ ಮಂಜುಳಾ ಅವರಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ. ಇದನ್ನೂ ಓದಿ: ತೈವಾನ್ ಸುತ್ತ ಮತ್ತೆ ಮಿಲಿಟರಿ ತಾಲೀಮು ಪ್ರಾರಂಭಿಸಿದ ಚೀನಾ