Tag: ಸೋಮಿ ಅಲಿ

  • ನಟ ಸಲ್ಮಾನ್ ಖಾನ್ ಸ್ಯಾಡಿಸ್ಟ್ : ಮಾಜಿ ಗೆಳತಿ ಬಿಚ್ಚಿಟ್ಟ ರಹಸ್ಯ

    ನಟ ಸಲ್ಮಾನ್ ಖಾನ್ ಸ್ಯಾಡಿಸ್ಟ್ : ಮಾಜಿ ಗೆಳತಿ ಬಿಚ್ಚಿಟ್ಟ ರಹಸ್ಯ

    ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಬರೋಬ್ಬರಿ ಎಂಟು ವರ್ಷಗಳ ಕಾಲ ರಿಲೇಷನ್ ಶಿಪ್ ನಲ್ಲಿ ಇದ್ದವರು ಮಾಜಿ ನಟಿ ಸೋಮಿ ಅಲಿ. ಇವರು ಸಲ್ಮಾನ್ ಜೊತೆ ಹಲವಾರು ಸಿನಿಮಾಗಳನ್ನೂ ಮಾಡಿದ್ದಾರೆ. ಭಾರೀ ಬೇಡಿಕೆ ಇರುವ ಸಮಯದಲ್ಲಿ ಸಲ್ಮಾನ್ ಭೇಟಿಯಾಗಿ, ಅದು ಪ್ರೀತಿಗೂ ತಿರುಗಿ ಇಬ್ಬರೂ ಡೇಟಿಂಗ್ ಮಾಡುವಲ್ಲಿಗೆ ಅವರ ಸ್ನೇಹ ಬೆಳೆದಿತ್ತು. ಬಿ ಟೌನ್ ನಲ್ಲಿ ಸಲ್ಮಾನ್ ಮತ್ತು ಸೋಮಿ ಅಲಿ ಹೆಸರು ಎಂಟು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. ಆನಂತರ ಇಬ್ಬರೂ ದೂರ ದೂರವಾದರು.

    ಸಿನಿಮಾ ರಂಗದಿಂದ ದೂರವಿರುವ ಸೋಮಿ ಅಲಿ, ಇದೇ ಮೊದಲ ಬಾರಿಗೆ ತಮ್ಮ ಮತ್ತು ಸಲ್ಮಾನ್ ನಡುವಿನ ಬಾಂಧವ್ಯ ಯಾಕೆ ಮುರಿದು ಬಿತ್ತು ಎನ್ನುವ ಕುರಿತಾಗಿ ಮಾತನಾಡಿದ್ದಾರೆ. ತಮ್ಮಿಬ್ಬರ ಭೇಟಿಗೆ ಕಾರಣವನ್ನೂ ಅವರು ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ ಅಪ್ಪಟ ಅಭಿಮಾನಿಯಾಗಿದ್ದರಂತೆ ಸೋಮಿ. ಇವರನ್ನು ಮದುವೆ ಆಗುವುದಕ್ಕಾಗಿಯೇ ಯುಎಸ್ ಬಿಟ್ಟು ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಷ್ಟೊಂದು ಹುಚ್ಚು ಅಭಿಮಾನಿ ನಾನಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿ ಹಾಡಿಗೆ ಸುಂದರಿಯರ ಜೊತೆ ಕುಣಿದ ರಮೇಶ್ ಅರವಿಂದ್

    ಸಲ್ಮಾನ್ ಜೊತೆ ಎಂಟು ವರ್ಷಗಳ ಕಾಲ ಕಳೆದಿರುವೆ. ಅವರ ತಾಯಿ ತುಂಬಾ ಒಳ್ಳೆಯವರು. ಆದರೆ, ಸಲ್ಮಾನ್ ಸ್ಯಾಡಿಸ್ಟ್. ನನ್ನನ್ನು ತೀರಾ ಕೆಟ್ಟದ್ದಾಗಿ ನಡೆಸಿಕೊಂಡ. ಮಾತುಗಳು ಕೂಡ ಸರಿ ಇರಲಿಲ್ಲ. ದೈಹಿಕವಾಗಿಯೂ ನಾನು ಕಿರುಕುಳಕ್ಕೆ ಒಳಗಾದ. ಇವೆಲ್ಲದರಿಂದ ಮುಕ್ತಿ ಹೊಂದುವುದಕ್ಕಾಗಿಯೇ ಅವನನ್ನು ಬಿಟ್ಟು ಆಚೆ ಬಂದೆ. ನಾನು ಬಿಟ್ಟು ಬಂದಾಗ ಅದು ಸುದ್ದಿ ಆಗಲೇ ಇಲ್ಲ. ಈಗಲೂ ಆಗುತ್ತದೆ ಎನ್ನುವ ನಂಬಿಕೆ ನನಗಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಅಂದಹಾಗೆ ಸೋಮಿ ಒಂದು ಎನ್.ಜಿ.ಓ ನಡೆಸುತ್ತಿದ್ದಾರೆ. ಅತ್ಯಾಚಾರ ಹಾಗೂ ಕೌಟುಂಬಿಕ ಹಿಂಸೆಗೆ ಒಳಗಾದ ಸಂತ್ರಸ್ತರಿಗೆ ಅವರು ಕಣ್ಣೀರು ಒರೆಸುವ ಕೆಲಸದಲ್ಲಿ ತೊಡಗಿದ್ದಾರೆ. ಹೆಣ್ಣು ಮಕ್ಕಳಿಗೆ ಸಾಮಾನ್ಯ ಜನರಷ್ಟೇ ಹಿಂಸೆ ಕೊಡುವುದಿಲ್ಲ. ಪ್ರತಿಷ್ಠಿತ ವ್ಯಕ್ತಿಗಳಿಂದಲೂ ಹೆಣ್ಣು ಹಿಂಸೆ ಅನುಭವಿಸುತ್ತಾಳೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಈ ಮೂಲಕ ಅವರು ಸಮಾಜದ ಮತ್ತೊಂದು ಮುಖವನ್ನೂ ಬಿಚ್ಚಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿನ್ನ ಲೈಂಗಿಕ ಕಿರುಕುಳದ ಮುಖ ಮುಂದೊಂದು ದಿನ ಬಯಲಾಗುತ್ತೆ: ಸಲ್ಮಾನ್ ಮಾಜಿ ಗರ್ಲ್ ಫ್ರೆಂಡ್ ಯಾರಿಗೆ ಹೇಳಿದ್ದು?

    ನಿನ್ನ ಲೈಂಗಿಕ ಕಿರುಕುಳದ ಮುಖ ಮುಂದೊಂದು ದಿನ ಬಯಲಾಗುತ್ತೆ: ಸಲ್ಮಾನ್ ಮಾಜಿ ಗರ್ಲ್ ಫ್ರೆಂಡ್ ಯಾರಿಗೆ ಹೇಳಿದ್ದು?

    ಬಿಟೌನ್ ನ ಮೋಸ್ಟ್ ಬ್ಯಾಚ್ಯುಲರ್ ನಟ ಸಲ್ಮಾನ್ ಖಾನ್ ಅವರ ಮಾಜಿ ಪ್ರೇಯಸಿ ಸೋಮಿ ಅಲಿ ಶಾಕಿಂಗ್ ಪೋಸ್ಟ್ ವೊಂದನ್ನು ಇನ್ ಸ್ಟಾಗ್ರಾಮ್ ದಲ್ಲಿ ಪೋಸ್ಟ್ ಮಾಡಿ, ಆ ನಂತರ ಡಿಲಿಟ್ ಮಾಡಿದ್ದಾರೆ. ಅವರು ಹಾಕಿರುವ ಪೋಸ್ಟ್ ಸ್ಕ್ರೀನ್ ಶಾಟ್ ಈಗ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    1992 ರಿಂದ ಐದಾರು ವರ್ಷಗಳ ಕಾಲ ಸೋಮಿ ಬಾಲಿವುಡ್ ನಲ್ಲಿ ಹಲವಾರು ಚಿತ್ರಗಳನ್ನು ಮಾಡಿದ್ದಾರೆ. ಈ ವೇಳೆಯಲ್ಲೇ ಬಾಲಿವುಡ್ ಹ್ಯಾಂಡ್ ಸಮ್ ನಟ ಸಲ್ಮಾನ್ ಖಾನ್ ಜತೆ ಇವರು ರಿಲೇಶನ್ ಶಿಪ್ ನಲ್ಲಿ ಇದ್ದರು ಎಂದು ಹೇಳಲಾಗಿತ್ತು. ಪಾರ್ಟಿ ಮತ್ತು ಖಾಸಗಿ ಹೋಟೆಲ್ ಗಳಲ್ಲಿ ಆಗಾಗ್ಗೆ ಇವರು ಕಾಣಿಸಿಕೊಂಡಿದ್ದು ಹಲವು ಚರ್ಚೆಗಳಿಗೂ ಕಾರಣವಾಗಿತ್ತು. ಎಂದಿನಂತೆ ಸಲ್ಮಾನ್ ಜತೆಗಿನ ಬಾಂಧವ್ಯ ನಂತರದ ದಿನಗಳ ಕಡಿದುಕೊಂಡು ಸಿನಿಮಾ ರಂಗದಿಂದಲೇ ದೂರವಾದರು.

    ಸದ್ಯ ತಮ್ಮದೇ ಸ್ವಯಂ ಸೇವಾ ಸಂಸ್ಥೆಯೊಂದನ್ನು ಕಟ್ಟಿಕೊಂಡು ಬಾಲಿವುಡ್ ನಿಂದ ಅಂತರವನ್ನೇ ಕಾಪಾಡಿಕೊಂಡಿರುವ ಸೋಮಿ, ಏಕಾಏಕಿ ನಿಗೂಢ ವ್ಯಕ್ತಿಯ ಮೇಲೆ ಲೈಂಗಿಕ ಆರೋಪವೊಂದನ್ನು ಮಾಡಿದ್ದಾರೆ. ಈ ಹಿಂದೆ ಲೈಂಗಿಕ ಆರೋಪಕ್ಕೆ ಗುರಿಯಾಗಿ ಶಿಕ್ಷೆಯನ್ನೂ ಅನುಭವಿಸಿದ್ದ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ ಸ್ಟೀನ್ ಅವರಿಗೆ ಆ ನಿಗೂಢ ವ್ಯಕ್ತಿಯನ್ನು ಹೋಲಿಕೆ ಮಾಡಿದ್ದಾರೆ. ‘ನೀವು ಬಾಲಿವುಡ್ ಹಾರ್ವೆ ವೈನ್ ಸ್ಟೀನ್. ನಿಮ್ಮ ಬಗೆಗಿನ ಹಲವು ವಿಚಾರಗಳು ಬಹಿರಂಗಗೊಳ್ಳುತ್ತವೆ. ನಿಮ್ಮಿಂದ ತೊಂದರೆಗೆ ಒಳಗಾದ ಮಹಿಳೆಯರು ಮುಂದೊಂದು ದಿನ ಸತ್ಯದೊಂದಿಗೆ ನಿಲ್ಲುತ್ತಾರೆ, ಐಶ್ವರ್ಯ ರೈ ಅವರಂತೆ’ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ಅದಕ್ಕೆ ಹಲವರು, ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲೇ ಅದನ್ನು ಡಿಲೀಟ್ ಕೂಡ ಮಾಡಿದ್ದಾರೆ. ಆ ಬಾಲಿವುಡ್ ನ ಹಾರ್ವೆ ವೈನ್ ಸ್ಟೀನ್ ಇವರ ಮಾಜಿ ಬಾಯ್ ಫ್ರೆಂಡ್ ಎಂದೂ ಹಲವರು ಕಾಮೆಂಟ್ ಮಾಡಿದ್ದಾರೆ. ಐಶ್ವರ್ಯ ರೈ ಅವರನ್ನು ಸುಖಾಸುಮ್ಮನೆ ಎಳೆದು ತಂದಿದ್ದಕ್ಕಾಗಿ ಅವರ ಅಭಿಮಾನಿಗಳು ಸಿಟ್ಟಿಗೆದ್ದಿದ್ದರು. ಇವೆಲ್ಲ ಕಾರಣಕ್ಕಾಗಿ ಈ ಪೋಸ್ಟ್ ಡಿಲೀಟ್ ಆಗಿರಬಹುದು ಎನ್ನಲಾಗುತ್ತಿದೆ.

  • ಚಿಕ್ಕಂದಿನಲ್ಲಿ 3 ಬಾರಿ ಅತ್ಯಾಚಾರಕ್ಕೊಳಗಾಗಿದ್ದೆ: ಸಲ್ಮಾನ್ ಮಾಜಿ ಪ್ರೇಯಸಿ ಸೋಮಿ ಅಲಿ

    ಚಿಕ್ಕಂದಿನಲ್ಲಿ 3 ಬಾರಿ ಅತ್ಯಾಚಾರಕ್ಕೊಳಗಾಗಿದ್ದೆ: ಸಲ್ಮಾನ್ ಮಾಜಿ ಪ್ರೇಯಸಿ ಸೋಮಿ ಅಲಿ

    ಮುಂಬೈ: ಚಿಕ್ಕವಳಿದ್ದಾಗ ಮೂರು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂದು ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ ಹೇಳಿದ್ದಾರೆ.

    ಇತ್ತೀಚೆಗೆ ನಡೆದಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೋಮಿ, ಚಿಕ್ಕವಳಿದ್ದಾಗ ತನ್ನ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಬಗ್ಗೆ ಬಾಯ್ಬಿಟ್ಟಿದ್ದಾರೆ. 5 ವರ್ಷದವಳಿದ್ದಾಗ ಮೊದಲ ಬಾರಿ ಪಾಕಿಸ್ತಾನದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಹೀಗೆ ಮೂರು ಘಟನೆಗಳು ನನ್ನ ಜೀವನದಲ್ಲಿ ನಡೆದಿವೆ ಎಂದು ಅವರು ಹೇಳಿಕೊಂಡಿದ್ದಾರೆ.

    ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಸಂದರ್ಭದಲ್ಲಿ ನಾನು ನನ್ನ ಅಪ್ಪ-ಅಮ್ಮನ ಬಳಿ ಹೇಳಿಕೊಂಡಿದ್ದೆ. ಆದರೆ ಅವರು ಈ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡ ಎಂದು ಹೇಳಿದ್ದರು. ಹೀಗಾಗಿ ಇದೂವರೆಗೂ ನಾನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ ಎಂದಿದ್ದಾರೆ.

    5 ವರ್ಷದವಳಿದ್ದಾಗ ಪಾಕಿಸ್ತಾನದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕ್ರಮ ಕೂಡ ಕೈಗೊಳ್ಳಲಾಗಿತ್ತು. ಆದ್ರೆ ನನ್ನ ಮೇಲೆ ನಡೆದಿದ್ದ ದೌರ್ಜನ್ಯ ಇಷ್ಟಕ್ಕೆ ನಿಲ್ಲಲಿಲ್ಲ. 9ನೇ ವಯಸ್ಸಿನಲ್ಲಿ ಹಾಗೂ 14ನೇ ವಯಸ್ಸಿನಲ್ಲಿಯೂ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸೋಮಿ ತಿಳಿಸಿದ್ದಾರೆ.’

    ಸದ್ಯ ಸೋಮಿ ಅವರು ಎನ್‍ಜಿಓ ಒಂದನ್ನು ನಡೆಸುತ್ತಿದ್ದು, ಅದರಲ್ಲಿ ಅತ್ಯಾಚಾರಕ್ಕೆ ಒಳಗಾದವರಿಗೆ ರಕ್ಷಣೆ ನೀಡುತ್ತಿದ್ದಾರೆ. ಸುಮಾರು 8 ವರ್ಷಗಳ ಕಾಲ ಸಲ್ಮಾನ್ ಜೊತೆ ಸಂಬಂಧದಲ್ಲಿದ್ದ ಸೋಮಿ, ಮದುವೆಯಾಗುತ್ತಾರೆ ಎಂದು ಸುದ್ದಿ ಬಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡಿತ್ತು. ಕ್ರಮೇಣ ಬಾಲಿವುಡ್ ಹಾಗೂ ಸಲ್ಮಾನ್ ಖಾನ್ ಅವರಿಂದಲೂ ಸೋಮಿ ದೂರವಾದರು.

  • ಸಲ್ಮಾನ್ ಜೊತೆ ಮದುವೆಯ ಕನಸು ಕಂಡು ಭಾರತಕ್ಕೆ ಬಂದಿದ್ದ ಪಾಕ್ ನಟಿ!

    ಸಲ್ಮಾನ್ ಜೊತೆ ಮದುವೆಯ ಕನಸು ಕಂಡು ಭಾರತಕ್ಕೆ ಬಂದಿದ್ದ ಪಾಕ್ ನಟಿ!

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆಯಾಗಲು ಅದೆಷ್ಟೋ ಯುವತಿಯರು ತುದಿಗಾಲಲ್ಲಿ ನಿಂತಿದ್ದ ವಿಚಾರ ಎಲ್ಲರಿಗೆ ತಿಳಿದೇ ಇದೆ. ಅಂತೆಯೇ ಇದೀಗ ಪಾಕಿಸ್ತಾನದ ನಟಿಯೊಬ್ಬಳು ಸಲ್ಮಾನ್‍ಗಾಗಿ ಭಾರತಕ್ಕೆ ಬಂದಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

    ಹೌದು. ನಟಿ ಸೋಮಿ ಅಲಿಯೇ ತನ್ನ ದೇಶ ಬಿಟ್ಟು ಭಾರತಕ್ಕೆ ಬಂದ ನಟಿ. ಈಕೆ ಬಾಲಿವುಡ್ ಬಾಯ್ ಜಾನ್ ನನ್ನು ಮದುವೆಯಾಗುವ ಒಂದೇ ಉದ್ದೇಶದಿಂದ ಭಾರತಕ್ಕೆ ಬಂದಿರುವ ವಿಚಾರವನ್ನು ಇದೀಗ ಬಯಲು ಮಾಡಿದ್ದಾರೆ.

    ಹೌದು. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೋಮಿ, ತನ್ನ 16ನೇ ವಯಸ್ಸಿನಲ್ಲಿ ಸೋಮಿ ಅಲಿ ಪಾಕಿಸ್ತಾನದಿಂದ ಮುಂಬೈಗೆ ಬಂದಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. 1991ಕ್ಕೆ ನನಗೆ 16 ವರ್ಷ ವಯಸ್ಸು. ಆ ಸಂದರ್ಭದಲ್ಲಿ ಮೈನೆ ಪ್ಯಾರ್ ಕಿಯಾ ಸಿನಿಮಾ ನೋಡಿದ್ದೆ. ಚಿತ್ರ ನೋಡಿದ ಬಳಿಕ ನನಗೆ ಸಲ್ಮಾನ್ ಖಾನ್ ಅವರನ್ನು ಮದುವೆಯಾಗಬೇಕು ಎಂಬ ಆಸೆ ಹುಟ್ಟಿತ್ತು. ಅದೇ ಕನಸಿನಿಂದ ನಾನು ನಾಳೆಯೇ ಭಾರತಕ್ಕೆ ಹೋಗುವುದಾಗಿ ತಾಯಿಗೆ ತಿಳಿಸಿದೆ. ಆದರೆ ಅವರು ನನ್ನ ಮಾತಿಗೆ ಒಪ್ಪಿಗೆ ನೀಡಿಲ್ಲ. ಇದಾದ ಬಳಿಕ ನಾನು ಈ ವ್ಯಕ್ತಿಯನ್ನು ಮದುವೆಯಾಗಬೇಕು, ಅದಕ್ಕಾಗಿ ಭಾರತಕ್ಕೆ ಹೋಗುವುದಾಗಿ ಹೇಳಿ ತಂದೆಗೆ ತಿಳಿಸದೇ ಅಲ್ಲಿಂದ ಹೊರಟೇ ಬಿಟ್ಟೆ ಎಂದು ಹೇಳಿದ್ದಾರೆ.

    ಹೀಗೆ ಭಾರತಕ್ಕೆ ಬಂದ ಯುವ ನಟಿಯಾಗಿದ್ದ ಸೋಮಿ ಅಲಿ ಪಂಚತಾರಾ ಹೋಟೆಲಿನಲ್ಲಿ ಉಳಿದುಕೊಳ್ಳುತ್ತಾರೆ. ಅಲ್ಲದೆ ಹೇಗಾದರೂ ಮಾಡಿ ಸಲ್ಮಾನ್ ಖಾನ್ ಅವರನ್ನು ಪಟಾಯಿಸಲೇಬೇಕು ಎಂದು ನಟನೆ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಬಾಲಿವುಡ್ ಅಂಗಳಕ್ಕೆ ಇಳಿಯುತ್ತಾರೆ.  ಆದರೆ ಡೈರೆಕ್ಟರ್ ಹೇಳುವ ರಿಹರ್ಸಲ್ ಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಈ ಮೂಲಕ ನಾನು ಬೇರೆಯವರಿಗಿಂದ ಭಿನ್ನವಾಗಿದ್ದು, ಚಿತ್ರೋದ್ಯಮಕ್ಕೆ ನಾನು ಫಿಟ್ ಅಲ್ಲ ಅಂತ ಅನಿಸುತ್ತಿತ್ತು. ಆದರೂ ಸಲ್ಮಾನ್ ಆಸೆಯಿಂದ ನಟನೆ ಮಾಡಿದೆ ಎಂದು ಸೋಮಿ ವಿವರಿಸಿದ್ದಾರೆ.

    ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಬಳಿಕ ಒಂದು ತನ್ನ ಆಸೆಯಂತೆ ಸಲ್ಮಾನ್ ಖಾನ್ ಜೊತೆ ಸೋಮಿ ಸ್ನೇಹ ಬೆಳೆಸುತ್ತಾರೆ. ಕ್ರಮೇಣ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಬಾಲಿವುಡ್ ಅಂಗಳದಲ್ಲಿ ಹರಿದಾಡಲು ಶುರುವಾಯಿತು. ಆದರೆ ಕೊನೆಗೂ ಸೋಮಿಗೆ ಸಲ್ಮಾನ್ ನನ್ನು ಮದುವೆಯಾಗಲು ಸಾಧ್ಯವಾಗಿಲ್ಲ. ನಿಜವಾದ ಪ್ರೀತಿಯನ್ನು ಹುಡುಕಿಕೊಂಡು ಹೋಗಿ ತಪ್ಪು ಮಾಡಿದೆ. ಆದರೆ ನಾನು ಮನಸಾರೆ ಪ್ರೀತಿ ಮಾಡಿದ್ದರಿಂದ ಈ ಬಗ್ಗೆ ನನಗೆ ಪಶ್ಚಾತಾಪವಿಲ್ಲ ಎಂದು ಸೋಮಿ ಹೇಳಿದ್ದಾರೆ.

    ಇಷ್ಟೆಲ್ಲಾ ಆದ ಬಳಿಕ ಸಲ್ಮಾನ್ ನನ್ನು ವರಿಸಲು ಸಾಧ್ಯವಾಗದಿದ್ದರಿಂದ 1999ರಲ್ಲಿ ಸೋಮಿ ವಾಪಸ್ ಪಾಕಿಸ್ತಾನಕ್ಕೆ ತೆರಳಿದ್ದಾರೆ.