Tag: ಸೋಮಸುಂದರ ದೀಕ್ಷಿತ್

  • ಗಂಗೆಯ ದರ್ಶನ ಮಾಡದೇ ಸೂರ್ಯ ಮರೆಯಾಗಿದ್ದು, ಜಲಕಂಟಕ ಸಂಭವವಿದೆ: ಸೋಮಸುಂದರ್ ದೀಕ್ಷಿತ್

    ಗಂಗೆಯ ದರ್ಶನ ಮಾಡದೇ ಸೂರ್ಯ ಮರೆಯಾಗಿದ್ದು, ಜಲಕಂಟಕ ಸಂಭವವಿದೆ: ಸೋಮಸುಂದರ್ ದೀಕ್ಷಿತ್

    ಬೆಂಗಳೂರು: ಮಕರ ಸಂಕ್ರಾಂತಿಯ ಈ ದಿನ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಮುತ್ತಿಕ್ಕಿದೆ. ಈ ಬೆನ್ನಲ್ಲೇ ಇದೀಗ ಸ್ವಲ್ಪ ಜಲಕಂಟಕ ಎದುರಾಗುವ ಸಂಭವವಿದೆ ಎಂಬುದಾಗಿ ಗವಿಗಂಗಾಧರ ದೇವಾಲಯದ (Gavigangadhareshwara Temple) ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ (Somasundar Deekshit) ಹೇಳಿದ್ದಾರೆ.

    ಸೂರ್ಯ ರಶ್ಮಿಯು ಶಿವಲಿಂಗಕ್ಕೆ (Shivalinga) ಸ್ಪರ್ಶ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಧಾನ ಅರ್ಚಕರು, ಗವಿಗಂಗಾಧರ ದೇವಾಲಯ ಸ್ವಾಮಿ ದಕ್ಷಿಣಾಭಿಮುಖವಾಗಿ ಇದೆ. ವಿಶೇಷವಾಗಿ ಈ ದೇವಸ್ಥಾನದಲ್ಲಿ ಇಂದು ಸೂರ್ಯರಶ್ಮಿ ಸ್ಪರ್ಶಿಸಿದೆ. ಈ ಮೂಲಕ ಇವತ್ತು ವಿಶೇಷವಾದ ಅನುಗ್ರಹವೊಂದನ್ನು ನೀಡಿದೆ ಎಂದರು. ಇದನ್ನೂ ಓದಿ: ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾದ ಸನ್ನಿಧಾನ- ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಿದ ʼಭಾಸ್ಕರʼ

    ಈ ವರ್ಷ ಸೂರ್ಯ 46 ಸೆಕೆಂಡ್ ಗಳ ಕಾಲ ಲಿಂಗದ ಮೇಲಿದ್ದು ಪೂಜಿಸಿದ್ದಾನೆ. ಸ್ವಲ್ಪ ಜಲಕಂಟಕ ಸಂಭವಿಸಬಹುದು. ಯಾಕೆಂದರೆ ಗಂಗೆಯ ದರ್ಶನವನ್ನು ಮಾಡದೇ ಸೂರ್ಯ ಮರೆಯಾಗಿದ್ದಾನೆ. ಹೀಗಾಗಿ ಸಣ್ಣ ಜಲಾವೃತ್ತಿಯಾದ ಅನಾಹುತಗಳು ನಡೆಯುತ್ತವೆ. ಕೋಪಗೊಂಡ ಗಂಗೆಯಿಂದ ನದಿಯ ಪ್ರವಾಹದಂತಹ ಅನಾಹುತಗಳು ಸಂಭವಿಸಬಹುದು. ರುದ್ರಾಭಿಷೇಕ, ಗಂಗಾ ಜಪ ಮಾಡಬೇಕು ಎಂದು ಅವರು ಹೇಳಿದರು.

    ಸ್ವಾಮಿಯ ಲಿಂಗದ ಮೇಲೆ 46 ಸೆಕೆಂಡ್ ಪೂಜೆ ಇತ್ತು. ಪಾದದಿಂದ ಪೀಠದವರೆಗೆ 50 ಸೆಕೆಂಡ್ ಸೂರ್ಯರಶ್ಮಿ ಇತ್ತು. 5.38 ರಿಂದ 5.45ರವರೆಗೆ ಪೂಜೆ ಇತ್ತು ಎಂದು ಸೋಮಸುಂದರ್‌ ದೀಕ್ಷಿತ್‌ ವಿವರಿಸಿದರು.

  • ಗ್ರಹಣದ ವಿಶೇಷತೆ ಏನು? ಇಂದು ಏನು ಮಾಡಬೇಕು- ಜ್ಯೋತಿಷಿ ಸೋಮಸುಂದರ ದೀಕ್ಷಿತ್ ಹೇಳ್ತಾರೆ

    ಗ್ರಹಣದ ವಿಶೇಷತೆ ಏನು? ಇಂದು ಏನು ಮಾಡಬೇಕು- ಜ್ಯೋತಿಷಿ ಸೋಮಸುಂದರ ದೀಕ್ಷಿತ್ ಹೇಳ್ತಾರೆ

    – ರಾತ್ರಿ 8 ಗಂಟೆಯೊಳಗೆ ಊಟ ಮಾಡಿ
    – ವೃಶ್ಚಿಕ ರಾಶಿಯವರಿಗೆ ಮಿತ್ರರೇ ಶತ್ರುಗಳಾಗಬಹುದು
    – ಸಿಎಂ, ಪಿಎಂ ಮನಸ್ಸಿನ ಮೇಲೆ ಪರಿಣಾಮ

    ಬೆಂಗಳೂರು: ಇಂದು ವರ್ಷದ 2ನೇ ಚಂದ್ರಗ್ರಹಣ. ಚಂದ್ರಗ್ರಹಣ ಗೋಚರ ನಮ್ಮಲ್ಲಿ ಇಲ್ಲ. ಆದರೂ ಚಂದ್ರಗ್ರಹಣದ ಎಫೆಕ್ಟ್ ಮಾತ್ರ ಇದೆ. ವೃಶ್ಚಿಕ ರಾಶಿಗೆ ಹೆಚ್ಚು ಎಫೆಕ್ಟ್ ಇದೆ. ಹಾಗೆಯೇ ಎಲ್ಲ ರಾಶಿ, ನಕ್ಷತ್ರದವರು ಎಚ್ಚರಿಕೆಯಿಂದ ಇರಬೇಕು ಎಂದು ಜ್ಯೋತಿಷಿ ಸೋಮಸುಂದರ ದೀಕ್ಷಿತ್ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ರಾತ್ರಿ 11 ಗಂಟೆಯಿಂದ ಶನಿವಾರ ಮುಂಜಾನೆ 2.45ರವರೆಗೂ ಗ್ರಹಣದ ಕಾಲ ಇದೆ. ಚಂದ್ರಗ್ರಹಣ ನಮಗೆ ಗೋಚರವಾಗದ ಕಾರಣ ಅದರ ಯಾವುದೇ ಎಫೆಕ್ಟ್ ಇರುವುದಿಲ್ಲ. ಆದರೂ ನಾವು ನೋಡುವ ಚಂದ್ರನಿಗೆ ಗ್ರಹಣವಾಗುವುದರಿಂದ ಅದರ ಬಗ್ಗೆ ನಮಗೂ ಕಾಳಜಿ ಇದೆ. ಈಗ ವೃಶ್ವಿಕ ಲಗ್ನದಲ್ಲಿ ಗ್ರಹಣ ನಡೆಯುತ್ತಿದೆ. ಹೀಗಾಗಿ ಈ ರಾಶಿಯವರಿಗೆ ಅನುಕೂಲವೂ ಇದೆ, ಅನಾನುಕೂಲವೂ ಇದೆ. ಇದೊಂದು ಮಿಶ್ರ ಫಲದ ಗ್ರಹಣವಾಗಿದೆ ಎಂದರು.

    ಇದು ಭಾರತ ದೇಶಕ್ಕೆ ಕಾಣಿಸದೆ ಇರುವುದರಿಂದ ಬೇರೆ ಕೆಲವು ದೇಶಗಳಿಗೆ ಪರಿಣಾಮ ಬೀರುತ್ತದೆ. ವೃಶ್ಚಿಕ ಲಗ್ನದಲ್ಲಿ ಗ್ರಹಣ ಸಂಭವವಾಗುವ ಹಿನ್ನೆಲೆಯಲ್ಲಿ ಮನಸ್ಕರಕ ಚಂದ್ರನಿಂದ ಮನಸ್ಸಿನ ಮೇಲೆ ಪರಿಣಾಮ ಬೀಳಲಿದೆ. ಸದ್ಯ ದೇವಾಲಯಗಳು ಬಂದ್ ಆಗಿದೆ. ಹೀಗಾಗಿ ಯಾವುದೇ ಸ್ವಚ್ಛ ಕಾರ್ಯ ಇಲ್ಲ. ಜೊತೆಗೆ ಗೋಚರವೂ ಇಲ್ಲ. ದರ್ಬೆ ಹಾಕುವ ಪದ್ಧತಿಯೂ ಇಲ್ಲ. ಶಿವನಿಗೆ ಪೂಜೆ ಮಾಡುವುದರಿಂದ ಗ್ರಹಣದ ದೋಷ ಪರಿಹಾರ ಆಗಲಿದೆ. ಹೀಗಾಗಿ ಶಿವ ದೇವಾಲಯಗಳಲ್ಲಿ ಇಂದು ಸಂಜೆ ದರ್ಬೆ ಹಾಕಲಾಗುತ್ತದೆ ಎಂದು ಸೋಮಸುಂದರ್ ದೀಕ್ಷಿತ್ ಹೇಳಿದರು.

    ಮನೆಯಲ್ಲಿ ದರ್ಬೆ ಹಾಕುವ ಅವಶಕ್ಯತೆ ಇರುವುದಿಲ್ಲ. ಆದರೆ ಗ್ರಹಣ ಕಾಲವಧಿಯನ್ನು ನೋಡಿದರೆ ಇಂದು ರಾತ್ರಿ 8 ಗಂಟೆಯೊಳಗೆ ಭೋಜನ ಮಾಡಿ ಮುಗಿಸಿರಬೇಕು. ಇನ್ನೂ ಗ್ರಹಣ ದೋಷ ಪರಿಹಾರವಾಗಲು ಬೆಳಗ್ಗೆಯೇ ಸ್ನಾನ ಮಾಡಿ ಮನೆಯಲ್ಲಿ ಶಿವನ ಪೂಜೆ ಮಾಡಿ. ವೃಶ್ಚಿಕ ರಾತ್ರಿ ಮಾತ್ರವಲ್ಲದೇ ಎಲ್ಲ ರಾಶಿ, ನಕ್ಷತ್ರ, ಜನರಿಗೆ ಚಂದ್ರ ಬೇಕಿರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಇರುವುದು ಉತ್ತಮ ಎಂದರು.

    ಸಿಎಂ ಯಡಿಯೂರಪ್ಪ ಅವರದ್ದು ವೃಶ್ಚಿಕ ರಾಶಿ. ದೇಶದ ಪ್ರಧಾನಿ ಮಂತ್ರಿಗಳದ್ದು ಅನುರಾಧ ನಕ್ಷತ್ರ, ವೃಶ್ಚಿಕ ರಾಶಿಯಾಗಿದೆ. ಮನಸ್ಕರ ಚಂದ್ರವಾಗಿರುವುದರಿಂದ ವೃಶ್ಚಿಕ ರಾಶಿಯವರಿಗೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ, ಆರ್ಥಿಕ ಸಂಕಷ್ಟ ಎದುರಾಗಿದೆ. ಇದರ ಬಗ್ಗೆ ಸಿಎಂ ತಲೆ ಕೆಡಿಸಿಕೊಳ್ಳುತ್ತಾರೆ. ಅದರಂತೆಯೇ ದೇಶದಲ್ಲೂ ಕೊರೊನಾ, ಅತ್ತ ಚೀನ ಯುದ್ಧ ಮಾಡಲು ಮುಂದಾಗಿದೆ. ಇದೆಲ್ಲದರ ಬಗ್ಗೆ ಪ್ರಧಾನಿ ಅವರು ಯೋಚನೆ ಮಾಡುತ್ತಾರೆ. ಹೀಗಾಗಿ ವೃಶ್ಚಿಕ ರಾಶಿಯವರಿಗೆ ಮನಸ್ಸಿನ ನೆಮ್ಮದಿ ಕೆಡುತ್ತದೆ. ಮಿತ್ರರೇ ಶತ್ರುಗಳಾಗಬಹುದು ಎಂದು ಜ್ಯೋತಿಷಿ ಸೋಮಸುಂದರ ದೀಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದರು.

  • ಜುಲೈ -27 ದೊಡ್ಡಗೌಡ್ರ ಕುಟುಂಬಕ್ಕೆ ಡೇಂಜರ್ – ಭವಿಷ್ಯ ನುಡಿದ ಗವಿಗಂಗಾಧರ ದೇಗುಲದ ಪ್ರಧಾನ ಅರ್ಚಕ

    ಜುಲೈ -27 ದೊಡ್ಡಗೌಡ್ರ ಕುಟುಂಬಕ್ಕೆ ಡೇಂಜರ್ – ಭವಿಷ್ಯ ನುಡಿದ ಗವಿಗಂಗಾಧರ ದೇಗುಲದ ಪ್ರಧಾನ ಅರ್ಚಕ

    ಬೆಂಗಳೂರು: ಜ್ಯೋತಿಷ್ಯ, ವಾಸ್ತುವನ್ನೆಲ್ಲಾ ಚಾಚೂ ತಪ್ಪದೇ ಪಾಲಿಸುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೀಗ ಗ್ರಹಣ ಭಯ ಕಾಡುತ್ತಿದೆ.

    ಹೌದು, ಜುಲೈ 27ರಂದು ಕೇತುಗ್ರಸ್ಥ ಚಂದ್ರ ಗ್ರಹಣ ಘಟಿಸಲಿದೆ. ಕೇತುವಿನ ಅದಿದೇವತೆ ಶಿವನಿಗೆ ಕಾಟ ಕೊಡುವ ಗ್ರಹಣ ಇದಂತೆ. ಇದು ಮಗ ಹಾಗೂ ಮಕ್ಕಳ ಮಧ್ಯೆ ವೈಮನಸ್ಸು ತಿಕ್ಕಾಟ ತರುವ ಗ್ರಹಣವಂತೆ. ಕೇತುವಿನ ಅಧಿದೇವತೆ ಶಿವನಿಗೆ ತೊಂದರೆ ಕಾಟ ಕೊಡುವ ಗ್ರಹಣ ಇದಾಗಲಿದ್ದು ಅಪ್ಪ ಮಕ್ಕಳ ಮಧ್ಯೆ ಬಿರುಕು ಮೂಡಲಿದ್ಯಯಂತೆ ಎಂದು ತಿಳಿದು ಬಂದಿದೆ.

    ಗ್ರಹಣದಿಂದಾಗಲಿರುವ ತೊಂದರೆಯ ಬಗ್ಗೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕರೂ ಆಗಿರುವ ಖ್ಯಾತ ಜ್ಯೋತಿಷಿ ಸೋಮಸುಂದರ ದೀಕ್ಷಿತರು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಮೂಲಕ ದೊಡ್ಡಗೌಡರಿಗೆ ತಿಳಿಸಿದ್ದಾರೆ.

    ಈ ಗ್ರಹಣ ರಾಜಕೀಯ ಅಸ್ಥಿರತೆಗೂ ಕಾರಣವಾಗಬಹುದು ಅನ್ನುವ ಭವಿಷ್ಯವಾಣಿಯನ್ನು ಹೇಳಿದ್ದಾರೆ. ಇದರಿಂದ ಭಯಗೊಂಡಿರುವ ರೇವಣ್ಣ ಗ್ರಹಣದಂದು ಶಿವನ ಸನ್ನಿಧಿಯಲ್ಲಿ ವಿಶೇಷ ಪೂಜೆಯನ್ನು ನಡೆಸುವುದಾಗಿ ಜ್ಯೋತಿಷಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

    ನವಗ್ರಹಗಳಿಗೆ ಎಡೆಬಿಡದೇ ಕ್ಷೀರಾಭಿಷೇಕ, ಉದ್ಭವ ಶಿವಲಿಂಗಕ್ಕೆ ಕ್ಷೀರ ಎಳೆನೀರಿನ ಅಭಿಷೇಕ, ಸಂಪ್ರೋಕ್ಷಣಾ ವಿಧಿ ವಿಧಾನಗಳನ್ನು ನಡೆಸಲಿದ್ದಾರೆ. ವ್ಯಕ್ತಿಗೆ ದೈವಾನುಗ್ರಹವಿದ್ದರೂ ಮಾನಸಿಕವಾಗಿ ಹಿಂಸೆ ಕೊಡಲಿರುವ ಗ್ರಹಣವಿದು ಅನ್ನೋದು ಜ್ಯೋತಿಷಿಗಳ ಮಾತಾಗಿದೆ.