Tag: ಸೋಮಶೇಖರ ರೆಡ್ಡಿ

  • ರೆಡ್ಡಿಯನ್ನು ದೂರವಿಟ್ಟಿದ್ದಕ್ಕೆ ಬಿಜೆಪಿಗೆ ಸೋಲು: ಶಾಸಕ ಸೋಮಶೇಖರ ರೆಡ್ಡಿ

    ರೆಡ್ಡಿಯನ್ನು ದೂರವಿಟ್ಟಿದ್ದಕ್ಕೆ ಬಿಜೆಪಿಗೆ ಸೋಲು: ಶಾಸಕ ಸೋಮಶೇಖರ ರೆಡ್ಡಿ

    ಬಳ್ಳಾರಿ: ಗಾಲಿ ಜನಾರ್ದನ ರೆಡ್ಡಿಯವರನ್ನು ಪಕ್ಷದಿಂದ ದೂರವಿಟ್ಟಿದ್ದಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

    ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಎಲ್ಲಾ ಅವಕಾಶಗಳಿದ್ದವು, ಆದರೆ ಗಾಲಿ ಜನಾರ್ದನ ರೆಡ್ಡಿಯನ್ನ ಬಿಜೆಪಿ ನಾಯಕರು ಪಕ್ಷದಿಂದ ದೂರವಿಟ್ಟಿದ್ದರಿಂದ ಸೋಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಭೆಯ ಬಳಿಕ ಮಾಧ್ಯಮದವರು ಈ ಕುರಿತು ಪ್ರಶ್ನಿಸಿದಾಗ, ರಾಜ್ಯದ ಜನರು ಜನಾರ್ದನ ರೆಡ್ಡಿಯವರನ್ನು ದೂರವಿಟ್ಟಿದ್ದಕ್ಕೆ ಬಿಜೆಪಿ ಸೋಲು ಅನುಭವಿಸಿತೂ ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಜನರ ಅಭಿಪ್ರಾಯವಾಗಿದೆ. ಜನರ ಅಭಿಪ್ರಾಯ ಹೀಗಿರುವಾಗ ಅದನ್ನು ಒಪ್ಪಬೇಕಲ್ವಾ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಟೀಕಿಸಿದರು. ಜನರು ಹೇಳಿದ್ದನ್ನು ನಾನು ಹೇಳಿದ್ದೇನೆ. ಇದರಲ್ಲಿ ನನ್ನದೇನು ಇಲ್ಲ ಅನ್ನೋ ಮೂಲಕ ಸೋಮಶೇಖರ ರೆಡ್ಡಿ ತನ್ನ ಹೇಳಿಕೆಗೆ ಸಮರ್ಥನೆ ನೀಡಿದರು.

  • ಶಾ ಹೇಳಿಕೆಯಿಂದ ರೆಡ್ಡಿ ಪಾಳೆಯದಲ್ಲಿ ಗರಿಗೆದರಿದ ಚಟುವಟಿಕೆ

    ಶಾ ಹೇಳಿಕೆಯಿಂದ ರೆಡ್ಡಿ ಪಾಳೆಯದಲ್ಲಿ ಗರಿಗೆದರಿದ ಚಟುವಟಿಕೆ

    ಬೆಂಗಳೂರು: ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ ಬೆನ್ನಲ್ಲೇ ರೆಡ್ಡಿ ಪಾಳೆಯದಲ್ಲಿ ಚಟುವಟಿಕೆಗಳು ಹೆಚ್ಚಾಗಿದೆ. ನಾಳೆ ಶ್ರೀರಾಮುಲು ಜತೆ ಜನಾರ್ದನ ರೆಡ್ಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

    ಅಮಿತ್ ಶಾ ಹೇಳಿಕೆಯ ದಿನವೇ ಮುಂಬೈಗೆ ತೆರಳಿದ್ದ ಜನಾರ್ದನ ರೆಡ್ಡಿ ಸದ್ಯ ಮುಂಬೈ ಪ್ರವಾಸದಲ್ಲಿದ್ದಾರೆ. ಇವತ್ತು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕಾದುನೋಡುವ ತಂತ್ರಕ್ಕೆ ಮೊರೆ ಹೋಗಲು ಜನಾರ್ದನ ರೆಡ್ಡಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

     

    ಆಪ್ತ ಮಿತ್ರ ಶ್ರೀರಾಮುಲು, ಸಹೋದರ ಸೋಮಶೇಖರ ರೆಡ್ಡಿಯನ್ನ ಅಖಾಡಕ್ಕಿಳಿಸಲು ಜನಾರ್ದನ ರೆಡ್ಡಿ ಒಲವು ತೋರಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಶ್ರೀರಾಮುಲು, ಬಳ್ಳಾರಿ ನಗರದಿಂದ ಸೋಮಶೇಖರ ರೆಡ್ಡಿ ಸ್ಪರ್ಧೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

    ನಾಳೆ ಶ್ರೀರಾಮುಲು ಜೊತೆ ಮಹತ್ವದ ಮಾತುಕತೆ ನಡೆಸಲಿರುವ ಜನಾರ್ದನ ರೆಡ್ಡಿ ಅಮಿತ್ ಶಾ ಹೇಳಿಕೆಯ ಬಗ್ಗೆಯೂ ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

  • ಜನಾರ್ದನ ರೆಡ್ಡಿ ರಾಜಕೀಯ ಜೀವನ ಅಂತ್ಯವಾಯ್ತಾ?- ಅಮಿತ್ ಶಾ ಮಾತಿನ ಹಿಂದಿನ ಮರ್ಮವೇನು?

    ಜನಾರ್ದನ ರೆಡ್ಡಿ ರಾಜಕೀಯ ಜೀವನ ಅಂತ್ಯವಾಯ್ತಾ?- ಅಮಿತ್ ಶಾ ಮಾತಿನ ಹಿಂದಿನ ಮರ್ಮವೇನು?

    ಮೈಸೂರು: ರಾಜ್ಯ ರಾಜಕಾರಣಕ್ಕೆ ಕಮ್ ಬ್ಯಾಕ್ ಆಗೋ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಅತಿ ದೊಡ್ಡ ಶಾಕ್ ಆಗಿದೆ. ಜನಾರ್ದನರೆಡ್ಡಿಗೂ ಬಿಜೆಪಿಗೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ ಅಂತ ಸ್ಪಷ್ಟಪಡಿಸುವ ಮೂಲಕ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

    ರಾಜ್ಯ ಪ್ರವಾಸದಲ್ಲಿರುವ ಶಾ ಇಂದು ಮೈಸೂರಿನಲ್ಲಿ ನೀಡಿದ ಈ ಹೇಳಿಕೆಯಿಂದಾಗಿ, ರೆಡ್ಡಿ ಬೆಂಬಲಿಗರು ಆಘಾತಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಪರಮಾಪ್ತ ಹಾಗೂ ಶಾಸಕ ಶ್ರೀರಾಮುಲು ದಿಗ್ಭ್ರಾಂತರಾಗಿದ್ದಾರೆ ಅಂತಾ ಹೇಳಲಾಗಿದೆ.

    ಈ ಮೂಲಕ ಅಕ್ರಮ ಗಣಿಗಾರಿಕೆ ಪ್ರಕರಣದಿಂದಾಗಿ ಬಳ್ಳಾರಿಗೆ ಕಾಲಿಡಬಾರದೆಂದು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಮನೆ ಮಾಡಿಕೊಂಡು ಪಕ್ಷ ಬಲವರ್ಧನೆಗೆ ಮುಂದಾಗಿದ್ದ ರೆಡ್ಡಿ ಅವರ ಆಸೆಗೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ತಣ್ಣೀರು ಎರಚಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ, ಅಣ್ಣನಿಗೆ ಪಕ್ಷದ ಹಿರಿಯರಿಂದ ಮೌಖಿಕ ಸೂಚನೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಲಿದ್ದಾರೆ ಅಂತ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡಿದ್ದರು. ಆದ್ರೆ ಸೋಮಶೇಖರ್ ರೆಡ್ಡಿ ಹೇಳಿಕೆ ನೀಡುತ್ತಿದ್ದಂತೆಯೇ ಇತ್ತ ಅಮಿತ್ ಶಾ ಮಾತು ಬಳ್ಳಾರಿ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

  • ಹನುಮ ಜಯಂತಿಗೆ ಶೂ ಧರಿಸಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಪಾದಯಾತ್ರೆ

    ಹನುಮ ಜಯಂತಿಗೆ ಶೂ ಧರಿಸಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಪಾದಯಾತ್ರೆ

    ಬಳ್ಳಾರಿ: ಹನುಮ ಜಯಂತಿ ಆಚರಣೆಗೆ ಅವಕಾಶ ನೀಡಲಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪೊಲೀಸರ ವಿರುದ್ಧ ಸಿಟ್ಟಾಗಿದ್ದರೆ, ಜಿಲ್ಲೆಯ ಮಾಜಿ ಶಾಸಕರೊಬ್ಬರು ಶೂ ಧರಿಸಿ ಹನುಮ ಜಯಂತಿಯ ಪಾದಯಾತ್ರೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

    ಮಾಜಿ ಶಾಸಕ ಸೋಮಶೇಖರ ರೆಡ್ಡಿ ಹನುಮ ಜಯಂತಿಯಂದು ಮಾಲೆ ಧರಿಸಿ ಶೂ ಹಾಕಿಕೊಂಡು ಪಾದಯಾತ್ರೆ ಮಾಡಿದ್ದಾರೆ. ಹನುಮಂತನ ಭಕ್ತರಾದ ಮಾಜಿ ಶಾಸಕ ರೆಡ್ಡಿ ಪ್ರತಿ ವರ್ಷ ತಪ್ಪದೇ ಮಾಲೆ ಧರಿಸಿ ಹನುಮ ಜಯಂತಿ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಬಾರಿ ಬಳ್ಳಾರಿಯಿಂದ ಆಂಧ್ರದ ಗಡಿ ಭಾಗದಲ್ಲಿರುವ ಕಸಾಪುರ ಆಂಜನೇಯನ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ವೇಳೆ ಶೂ ಧರಿಸಿ ಯಾತ್ರೆ ಆರಂಭಿಸಿದ್ದಾರೆ.

    ಶೂ ಧರಿಸಿ ಪಾದಯಾತ್ರೆ ಮಾಡಿದರೆ ಹನುಮ ಜಯಂತಿಗೆ ಅಗೌರವ ಮಾಡಿದಂತೆ. ಇದರಿಂದ ಪ್ರಯೋಜನ ಏನು ಬಂತು ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ.

    ಈ ಕುರಿತು ರೆಡ್ಡಿ ಆಪ್ತರನ್ನು ಪ್ರಶ್ನೆ ಮಾಡಿದ್ರೆ, ಸಾಹೇಬರು 65 ಕಿಲೋ ಮೀಟರ್ ದೂರ ಪಾದಯಾತ್ರೆ ಮಾಡಬೇಕಾದ ಹಿನ್ನೆಲೆಯಲ್ಲಿ ನಾವೇ ಒತ್ತಾಯ ಮಾಡಿ ಶೂ ಹಾಕಿಕೊಳ್ಳುವಂತೆ ಸೂಚಿಸಿದೆವು. ಹೀಗಾಗಿ ಶೂ ಹಾಕಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

     

     

  • ಜನಾರ್ದನ ರೆಡ್ಡಿ ಸಲೈಂಟಾಗಿದ್ದಾರೆ, ಅವರನ್ನು ವೈಲೆಂಟ್ ಮಾಡ್ಬೇಡಿ: ಹೆಚ್‍ಡಿಕೆಗೆ ಸೋಮಶೇಖರರೆಡ್ಡಿ ಎಚ್ಚರಿಕೆ!

    ಜನಾರ್ದನ ರೆಡ್ಡಿ ಸಲೈಂಟಾಗಿದ್ದಾರೆ, ಅವರನ್ನು ವೈಲೆಂಟ್ ಮಾಡ್ಬೇಡಿ: ಹೆಚ್‍ಡಿಕೆಗೆ ಸೋಮಶೇಖರರೆಡ್ಡಿ ಎಚ್ಚರಿಕೆ!

    ಬಳ್ಳಾರಿ: ಮಾಜಿ ಸಚಿವ ಜನಾರ್ದನರೆಡ್ಡಿ ಸಲೈಂಟ್ ಆಗಿದ್ದಾರೆ, ಅವರನ್ನು ವೈಲೆಂಟ್ ಮಾಡಬೇಡಿ. ಜನಾರ್ದನರೆಡ್ಡಿಯನ್ನು ಕೆಣಕಿದ್ರೆ ಸರಿ ಇರಲ್ಲ ಎಂದು ಮಾಜಿ ಶಾಸಕ ಸೋಮಶೇಖರರೆಡ್ಡಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

    ಜನಾರ್ದನ ರೆಡ್ಡಿ ಮೇಲಿನ ಕೇಸ್ ಹಿಂಪಡೆಯಲು ಬಿಜೆಪಿಗೆ 500 ಕೋಟಿ ರೂ. ಹಣ ನೀಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಈ ಸಂಬಂಧ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಪ್ರತಿಕ್ರಿಯಿಸಿ, ಮಾಜಿ ಸಿಎಂ ಕುಮಾರಸ್ವಾಮಿ ಸುಳ್ಳು ಆರೋಪ ಮಾಡಬಾರದು. ಕುಮಾರಸ್ವಾಮಿ ಹೇಳಿಕೆ ಸಣ್ಣತನದಿಂದ ಕೂಡಿದೆ ಎಂದು ಹೇಳಿದ್ರು.

    ಕೊನೆಗೆ ಕುಮಾರಸ್ವಾಮಿಗೆ ಕೈ ಮುಗಿದು ಕೇಳುವೆ. ಜನಾರ್ದನರೆಡ್ಡಿ ಅವರು ತುಂಬಾನೇ ಸೈಲೆಂಟ್ ಆಗಿದ್ದಾರೆ. ನಾವು ಕುಟುಂಬಸ್ಥರೆಲ್ಲರೂ ಸಂತೋಷವಾಗಿದ್ದೇವೆ. ಕುಮಾರಸ್ವಾಮಿ ಅವರು ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಬೇಕು. ನಾನು ಅವರನ್ನು ಕೈ ಮಗಿದು ಕೇಳುತ್ತೇನೆ ಅಂತ ಸೋಮಶೇಖರರೆಡ್ಡಿ ಹೇಳಿದ್ರು.

    ಇದನ್ನೂ ಓದಿ: ಬಿಜೆಪಿ ಎಲೆಕ್ಷನ್‍ಗೆ ಜನಾರ್ದನ ರೆಡ್ಡಿಯಿಂದ 500 ಕೋಟಿ ಹಣ:ಎಚ್‍ಡಿಕೆ ಬಾಂಬ್