Tag: ಸೋಪ್

  • ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ: ಎಂ ಬಿ ಪಾಟೀಲ್‌

    ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ: ಎಂ ಬಿ ಪಾಟೀಲ್‌

    ಬೆಂಗಳೂರು: ಉತ್ಕೃಷ್ಣ ಗುಣಮಟ್ಟಕ್ಕೆ ಹೆಸರಾಗಿರುವ ಮೈಸೂರು ಸ್ಯಾಂಡಲ್‌ ಸೋಪ್‌ಗೆ (Mysore Sandal Soap) ಮತ್ತೆ ಬ್ರ್ಯಾಂಡ್ ಮೌಲ್ಯ ತಂದುಕೊಟ್ಟು, ಕರ್ನಾಟಕದ ಹೆಮ್ಮೆಯ ಉತ್ಪನ್ನವಾಗಿ ಮಾಡಲಾಗುವುದು. ಇದಕ್ಕಾಗಿ ಉದ್ಯಮ ಪರಿಣತರಿಂದ ಸಲಹೆಗಳನ್ನು ಮುಕ್ತವಾಗಿ ಆಹ್ವಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್‌ (MB Patil) ಹೇಳಿದ್ದಾರೆ. ಆಸಕ್ತರು karnatakavision2030@gmail.comಗೆ ತಮ್ಮ ಸಲಹೆಗಳನ್ನು ಕಳಿಸಬಹುದು.

    ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿರುವ ಅವರು, “ಮೈಸೂರು ಸ್ಯಾಂಡಲ್‌ ಸೋಪ್‌, ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‍‌ ಅವರು ಆರಂಭಿಸಿದ ಉತ್ಪನ್ನವಾಗಿದೆ. ಅದು ರಾಜ್ಯದ ಮಕುಟಮಣಿಯ ಅನರ್ಘ್ಯರತ್ನವಾಗಿದೆ. ಅವರ ಆಶಯಕ್ಕೆ ತಕ್ಕಂತೆ ಈ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ. ಉದ್ಯಮಿಗಳು ಈ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ಕೊಟ್ಟು, ಸರ್ಕಾರದ ಈ ಪ್ರಯತ್ನಕ್ಕೆ ಕೈಗೂಡಿಸಬೇಕು” ಎಂದು ಆಹ್ವಾನಿಸಿದ್ದಾರೆ.  ಇದನ್ನೂ ಓದಿ: ವೆಸ್ಟ್ ಎಂಡ್ ಹೋಟೆಲಿಗೆ ಜಮೀನಿನಲ್ಲಿ ಉಳುಮೆ ಮಾಡಿ ಬಾಡಿಗೆ ಕಟ್ಟುತ್ತಿದ್ದೀರಾ : ಹೆಚ್‌ಡಿಕೆಗೆ ಕಾಂಗ್ರೆಸ್‌ ಪ್ರಶ್ನೆ

    ಮೈಸೂರು ಸ್ಯಾಂಡಲ್‌ ಸೋಪ್‌ ರಾಜ್ಯದ ಸಾಬೂನು ಮಾರುಕಟ್ಟೆಯಲ್ಲೂ ಸಿಂಹಪಾಲು ಹೊಂದಿಲ್ಲ. ಹಾಗೆಯೇ, ಈ ಬ್ರ್ಯಾಂಡ್‌ ಉತ್ಪನ್ನವು ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗಿದೆ. ಮಾರುಕಟ್ಟೆಯಲ್ಲಿ ಉಳಿದ ಹೆಸರಿನ ಸಾಬೂನುಗಳು ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಜೊತೆಗೆ ಒಟ್ಟು ವಹಿವಾಟಿನಲ್ಲಿ 3% ರಷ್ಟು ಮಾತ್ರ ರಫ್ತು ವಹಿವಾಟಿನ ಮೂಲಕ ಬರುತ್ತಿದೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.

     

    ಇದು ಸ್ಪರ್ಧಾತ್ಮಕ ಮಾರುಕಟ್ಟೆಯ ಯುಗವಾಗಿದೆ. ನಮ್ಮ ಬಳಿ ಮೈಸೂರು ಸ್ಯಾಂಡಲ್‌ ಸೋಪ್‌ನಂತಹ ಉತ್ಕೃಷ್ಟ ಉತ್ಪನ್ನವಿದ್ದೂ ನಾವು ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸೋತಿದ್ದೇವೆ. ಈ ನಿರಾಶಾದಾಯಕ ಪರಿಸ್ಥಿತಿಯನ್ನು ನಿವಾರಿಸಲು ಸರ್ಕಾರ ಉತ್ಸುಕವಾಗಿದೆ. ಒಟ್ಟಿನಲ್ಲಿ ರಾಜ್ಯದ ಈ ಹೆಮ್ಮೆಯ ಉತ್ಪನ್ನಕ್ಕೆ ಮರುಜೀವ ತುಂಬಿ, ಮಾರುಕಟ್ಟೆಯನ್ನು ಸೃಷ್ಟಿಸಲು ಹಲವು ಉಪಕ್ರಮಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ಗತಿಕನಿಗೆ ಸ್ನಾನ ಮಾಡಿಸಿದ ಪೊಲೀಸ್ ಆಫೀಸರ್ – ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

    ನಿರ್ಗತಿಕನಿಗೆ ಸ್ನಾನ ಮಾಡಿಸಿದ ಪೊಲೀಸ್ ಆಫೀಸರ್ – ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

    ತಿರುವನಂತಪುರಂ: ಈ ಹಿಂದೆ ನಿರ್ಗತಿಕರೊಬ್ಬರಿಗೆ ಪೊಲೀಸ್ ಪೇದೆಯೊಬ್ಬರು ಊಟ ತಿನ್ನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ಆ ಪೇದೆಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ಕೇರಳದಲ್ಲಿ ನಡೆದಿದೆ.

    ಟ್ರಾಫಿಕ್ ಪೊಲೀಸ್ ಆಫೀಸರ್ ಶೈಜು ಎಂಬವರು ನಿರ್ಗತಿಕನಿಗೆ ಸ್ನಾನ ಮಾಡಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಪೊಲೀಸ್ ಆಫೀಸರ್ ಅವರ ಮಾನವೀಯ ಕಾರ್ಯಕ್ಕೆ ಜನ ಶಹಬ್ಬಾಸ್ ಎಂದಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ – ಪುಂಡರ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಕ್ಕೆ ಪ್ಲ್ಯಾನ್

    ಪೂವಾರ್ ಮೂಲದ ಶೈಜು ಕರ್ತವ್ಯದಲ್ಲಿದ್ದಾಗಲೇ ಈ ಘನ ಕಾರ್ಯ ಮಾಡಿ ಇದೀಗ ಸುದ್ದಿಯಾಗಿದ್ದಾರೆ. ಶೈಜು ಅವರು ಡ್ಯೂಟಿಯಲ್ಲಿದ್ದ ಸಂದರ್ಭದಲ್ಲಿ ವೃದ್ಧನೊಬ್ಬ ಬಂದು ಸೋಪ್ ತೆಗೆದುಕೊಳ್ಳಲು ಹಣ ನೀಡುವಂತೆ ಕೇಳಿದ್ದಾನೆ. ಈ ವೇಳೆ ವೃದ್ಧನಿಗೆ ಹಣ ನೀಡುವ ಬದಲು ಹತ್ತಿರದಲ್ಲೇ ಇದ್ದ ಟ್ಯಾಪ್ ನಲ್ಲಿ ಆತನ ಸ್ನಾನಕ್ಕೆ ಕೂಡ ಸಹಾಯ ಮಾಡಿದ್ದಾರೆ.

    ತಾವೇ ಸ್ವತಃ ಸೋಪ್ ಖರೀದಿಸಿ ತೆಗೆದುಕೊಂಡು ಬಂದು ವೃದ್ಧನಿಗೆ ಸ್ನಾನ ಮಾಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಸ್ನಾನ ಆದ ಬಳಿಕ ವೃದ್ಧನಿಗೆ ಹೊಸ ಬಟ್ಟೆ ಕೊಡಿಸಿದ್ದಾರೆ. ಪೊಲೀಸ್ ಆಫೀಸರ್ ಅವರ ಈ ಮಹಾನ್ ಕಾರ್ಯ ಗುರುತಿಸಿದ ನೆಯ್ಯಟ್ಟಿಂಕರ ಯೂತ್ ಕಮಿಟಿಯವರು ಸನ್ಮಾನ ಮಾಡಿದ್ದಾರೆ.

  • ಕಲಾವಿದ ದೇವಿಕಿರಣ್ ಕೈಚಳಕದಲ್ಲಿ ಪವರ್ ಸ್ಟಾರ್ ಪುನೀತ್

    ಕಲಾವಿದ ದೇವಿಕಿರಣ್ ಕೈಚಳಕದಲ್ಲಿ ಪವರ್ ಸ್ಟಾರ್ ಪುನೀತ್

    ಮಂಗಳೂರು: ಡಾ. ಪುನೀತ್ ರಾಜ್‍ಕುಮಾರ್ ಎಲ್ಲರನ್ನು ಬಿಟ್ಟು ಅಗಲಿದರೂ ಅಭಿಮಾನಿಗಳು ಒಂದಲ್ಲ ಒಂದು ರೀತಿ ಇಂದಿಗೂ ಅಭಿಮಾನವನ್ನು ತೋರಿಸುತ್ತಿದ್ದಾರೆ. ಇಂದು ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬವಾಗಿದ್ದು, ಅಭಿಮಾನಿಗಳು ‘ಅಪ್ಪು’ ಹುಟ್ಟುಹಬ್ಬದ ಪ್ರಯುಕ್ತ ಬೇರೆ ಬೇರೆ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

    ಅಂತೆಯೇ ಮಂಗಳೂರಿನ ಅಪ್ಪಟ ‘ಅಪ್ಪು’ ಅಭಿಮಾನಿಯೊಬ್ಬರು ‘ಲೈಫ್ ಬಾಯ್’ ಬಾತ್ ಸೋಪ್‍ನಲ್ಲಿ ಪುನೀತ್ ರಾಜಕುಮಾರ್ ಚಿತ್ರ ಬಿಡಿಸಿ ವಿಶಿಷ್ಟ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಕೇವಲ ಎರಡು ಗಂಟೆಯಲ್ಲಿ ಸೋಪ್‍ನಲ್ಲಿ ಅಪ್ಪು ಚಿತ್ರವನ್ನು ಗುಂಡು ಪಿನ್ ಮೂಲಕ ಚಿತ್ರಿಸಿದ್ದಾರೆ. ಇದನ್ನೂ ಓದಿ:  ರವಿವರ್ಮಾ ಸ್ಟಂಟ್‌ಗೆ ಪವರ್ ಸ್ಟಾರ್ ಫಿದಾ: ಫೋನ್ ಮಾಡಿ ಪುನೀತ್ ಹೇಳಿದ್ದೇನು?

    ಮಂಗಳೂರಿನ ಗಣೇಶಪುರದ ದೇವಿಕಿರಣ್ ಬೇರೆ ಸೋಪ್‍ನಿಂದ ಅಪ್ಪು ಚಿತ್ರ ರಚಿಸಲು ಟ್ರೈ ಮಾಡಿದರೂ ಸಾಧ್ಯವಾಗಿರಲಿಲ್ಲ. ಆ ಬಳಿಕ ಲೈಫ್‍ಬಾಯ್ ಸೋಪ್‍ನಿಂದ ಅಪ್ಪು ಚಿತ್ರ ಮಾಡಿ ಯಶಸ್ಸು ಕಂಡಿದ್ದಾರೆ. ಅಪ್ಪು ಚಿತ್ರ ರಚನೆಯ ವೀಡಿಯೋವನ್ನು ದೇವಿಕಿರಣ್ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದು ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೀಡಿಯೋ ಸಾಕಷ್ಟು ವೈರಲ್ ಕೂಡಾ ಆಗುತ್ತಿದೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾ: ಅಭಿಮಾನಿಗಳ ಫಸ್ಟ್ ರಿಯಾಕ್ಷನ್

  • ಐಫೋನ್ ಬದಲು ಸೋಪ್ ಸಿಕ್ಕಿದ್ದ ಗ್ರಾಹಕನಿಗೆ 70,900 ರೂ. ವಾಪಸ್

    ಐಫೋನ್ ಬದಲು ಸೋಪ್ ಸಿಕ್ಕಿದ್ದ ಗ್ರಾಹಕನಿಗೆ 70,900 ರೂ. ವಾಪಸ್

    ಆಲುವಾ (ಕೇರಳ): ಐಫೋನ್ ಬದಲು ಬಟ್ಟೆ ಒಗೆಯುವ ಸೋಪ್ ಹಾಗೂ 5 ರೂಪಾಯಿ ನಾಣ್ಯ ಸಿಕ್ಕಿದ ಗ್ರಾಹಕನಿಗೆ ಅಮೆಜಾನ್ 70,900 ರೂ. ವಾಪಸ್ ಕೊಟ್ಟಿದೆ. ಆಲುವಾ ನಿವಾಸಿ ನೂರುಲ್ ಅಮೀನ್ ಎಂಬವರು ಐಫೋನ್ 12 ಖರೀದಿಸಲೆಂದು 70,900 ರೂಪಾಯಿಯನ್ನು ಅಮೆಜಾನ್ ಮೂಲಕ ಪಾವತಿಸಿದ್ದರು. ಆದರೆ ಪೊಲೀಸ್ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಪಾವತಿಸಿದ ಸಂಪೂರ್ಣ ಹಣ ಮೋಸ ಹೋದ ಗ್ರಾಹಕನ ಖಾತೆಗೆ ವಾಪಾಸಾಗಿದೆ.

    ಏನಾಗಿತ್ತು?: ಕೇರಳದ ನೂರುಲ್ ಅಮೀನ್ ಅಕ್ಟೋಬರ್ 12 ರಂದು ಅಮೆಜಾನ್ ಮೂಲಕ ಐಫೋನ್ 12 ಆರ್ಡರ್ ಮಾಡಿದ್ದರು. ಇದಕ್ಕೆ ಅವರು ತಮ್ಮ ಕ್ರೆಡಿಟ್ ಕಾರ್ಡ್ ಬಳಸಿದ್ದರು. ಆದರೆ ಮನೆಗೆ ಬಂದ ಪಾರ್ಸೆಲ್ ಓಪನ್ ಮಾಡಿದಾಗ ಅದರಲ್ಲಿ ಮೊಬೈಲ್ ಬದಲು ಬಟ್ಟೆ ಒಗೆಯುವ ಸೋಪ್ ಹಾಗೂ 5 ರೂಪಾಯಿ ನಾಣ್ಯ ಸಿಕ್ಕಿತ್ತು. ಇದನ್ನೂ ಓದಿ: ಪರ್ವತದ ನೀರು ಕುಡಿದು, ದೇವಾಲಯದ ಪ್ರಸಾದ ಸೇವಿಸಿ ಬದುಕುಳಿದೆವು: ಉತ್ತರಾಖಂಡ್ ಪ್ರವಾಹ ಭೀಕರತೆ ಬಿಚ್ಚಿಟ್ಟ ಕನ್ನಡಿಗರು

    ಪ್ರಮುಖ ಆನ್‍ಲೈನ್ ಸ್ಟೋರ್‌ನ ಹೈದರಾಬಾದ್‍ನಲ್ಲಿರುವ ಮಾರಾಟಗಾರರು ಈ ಫೋನನ್ನು ಕಳಿಸಿದ್ದರು. ಆಲುವಾ ತಲುಪುವ ಮುನ್ನ ಸೇಲಂನಲ್ಲಿ ಈ ಫೋನ್ ಇತ್ತು ಎಂಬ ವಿಚಾರ ಆನ್‍ಲೈನ್ ಟ್ರ್ಯಾಕಿಂಗ್ ಮೂಲಕ ಗೊತ್ತಾಗಿದೆ. ಹೀಗಾಗಿ ಅನುಮಾನ ಬಂದ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ ಮುಂದೆಯೇ ಈ ಬಾಕ್ಸ್ ಓಪನ್ ಮಾಡಿದ್ದರು. ಜೊತೆಗೆ ಇದರ ವೀಡಿಯೋ ಕೂಡಾ ಶೂಟ್ ಮಾಡಿದ್ದರು. ಇದನ್ನೂ ಓದಿ: ಆರ್ಡರ್ ಮಾಡಿದ್ದು ಐಫೋನ್, ಸಿಕ್ಕಿದ್ದು ಬಾರ್ ಸೋಪ್, 5ರೂ. ನಾಣ್ಯ – ವ್ಯಕ್ತಿ ಶಾಕ್

    ಬಾಕ್ಸ್ ಓಪನ್ ಮಾಡಿದಾಗ ಫೋನ್‍ನಷ್ಟೇ ತೂಕ ಬರುವ ವಸ್ತುಗಳನ್ನು ಬಾಕ್ಸ್‌ನಲ್ಲಿ ಜೋಡಿಸಲಾಗಿತ್ತು. ನೂರುಲ್ ಅಮೀನ್ ಆಗಾಗ ಆನ್‍ಲೈನ್ ಮೂಲಕ ವಸ್ತುಗಳ ಖರೀದಿ ಮಾಡುತ್ತಿದ್ದರು. ತೆಲಂಗಾಣದಿಂದ ಕೇರಳಕ್ಕೆ ಕಳಿಸುವ ವಸ್ತುಗಳು 2 ದಿವಸದೊಳಗೆ ಕೇರಳಕ್ಕೆ ಬಂದು ತಲುಪುತ್ತಿತ್ತು. ಆದರೆ ಈ ಬಾರಿ ಮೂರು ದಿನ ಕಳೆದ ನಂತರ ಬಾಕ್ಸ್ ತಲುಪಿದೆ. ಈ ಬಗ್ಗೆ ಆನ್‍ಲೈನ್ ಕಂಪೆನಿಯ ಕಸ್ಟಮರ್ ಕೇರ್ ಹಾಗೂ ಕೇರಳ ಪೊಲೀಸ್ ಸೈಬರ್ ಸೆಲ್‍ಗೆ ದೂರು ಸಲ್ಲಿಸಿದ್ದರು.

    ಬಳಿಕ ಜಿಲ್ಲಾ ಎಸ್‍ಪಿ ಕಾರ್ತಿಕ್‍ಗೆ ದೂರು ನೀಡಿದ್ದರು. ಎಸ್‍ಪಿ ನೇತೃತ್ವದಲ್ಲಿ ಸೈಬರ್ ಠಾಣೆಯ ವಿಶೇಷ ತಂಡ ತನಿಖೆ ಶುರು ಮಾಡಿತು. ಪೊಲೀಸರು ಅಮೆಜಾನ್ ಸಂಪರ್ಕಿಸಿದರು. ನೂರುಲ್‌ ಅಮೀನ್‌ಗೆ ಬಂದ ಮೊಬೈಲ್ ಬಾಕ್ಸ್‌ನಲ್ಲಿ ಐಎಂಇಐ ನಂಬರ್ ಇತ್ತು. ಇದನ್ನು ಪರಿಶೀಲನೆ ನಡೆಸಿದಾಗ ಮೊಬೈಲ್ ಜಾಖರ್ಂಡ್‍ನಲ್ಲಿ ಬಳಕೆಯಾಗುತ್ತಿರುವ ಮಾಹಿತಿ ಸಿಕ್ಕಿದೆ. ಅದೇ ಐಫೋನ್‍ಗೆ ಆಪಲ್ ಸ್ಟೋರ್ ಖಾತೆಯೂ ಇತ್ತು. ಹಣ ವಾಪಸ್ ಸಿಕ್ಕಿದರೂ ಪ್ರಕರಣ ಮುಂದುವರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ಒಂದೇ ವಿಮಾನದಲ್ಲಿ ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ – ಇದರ ಹಿಂದಿನ ರಹಸ್ಯವೇನು?

    ಕಳೆದ ತಿಂಗಳು ಕೇರಳದ ಪರವೂರ್ ಎಂಬಲ್ಲಿನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಒಂದೂ ಕಾಲು ಲಕ್ಷದ ಲ್ಯಾಪ್‍ಟಾಪ್ ಬುಕ್ ಮಾಡಿದ್ದರು. ಅದರೆ ಅವರಿಗೆ ಬಂದ ಬಾಕ್ಸ್‌ನಲ್ಲಿ ನ್ಯೂಸ್ ಪೇಪರ್‌ಗಳು ಮಾತ್ರ ಇದ್ದವು. ಬಳಿಕ ಜಿಲ್ಲಾ ಪೊಲೀಸರು ಮಧ್ಯ ಪ್ರವೇಶಿಸಿ ಹಣ ವಾಪಸ್ ಕೊಡಿಸಿದ್ದರು. ಈ ಪ್ರಕರಣದ ತನಿಖೆಯೂ ಮುಂದುವರಿದಿದೆ.

     

     

     

  • ಆರ್ಡರ್ ಮಾಡಿದ್ದು ಐಫೋನ್, ಸಿಕ್ಕಿದ್ದು ಬಾರ್ ಸೋಪ್, 5ರೂ. ನಾಣ್ಯ – ವ್ಯಕ್ತಿ ಶಾಕ್

    ಆರ್ಡರ್ ಮಾಡಿದ್ದು ಐಫೋನ್, ಸಿಕ್ಕಿದ್ದು ಬಾರ್ ಸೋಪ್, 5ರೂ. ನಾಣ್ಯ – ವ್ಯಕ್ತಿ ಶಾಕ್

    ತಿರುವನಂತಪುರ: ಇ-ಕಾಮರ್ಸ್ ವೆಬ್ ಸೈಟ್‍ನಲ್ಲಿ ಆರ್ಡರ್ ಮಾಡಿದಾಗ ನಿಮಗೆ ತಪ್ಪಾದ ಪ್ರಾಡೆಕ್ಟ್ ಬರುವುದು ಹೊಸ ವಿಚಾರವೇನಲ್ಲ. ಸದ್ಯ ಕೇರಳದ ವ್ಯಕ್ತಿಯೋರ್ವ ಐಷಾರಾಮಿ ಐಫೋನ್ ಆರ್ಡರ್ ಮಾಡಿದ್ದು, ಅವರಿಗೆ ಐಫೋನ್ ಅಲ್ಲಿ ಪಾತ್ರೆ ತೊಳೆಯುವ ಸೋಪು ಮತ್ತು 5 ರೂ. ನಾಣ್ಯ ಸಿಕ್ಕಿದೆ.

    ಹೌದು ಅಲುವಾ ನಿವಾಸಿಯಾದ ನೂರುಲ್ ಅಮೀನ್, ಆರ್ಡರ್ ಮಾಡಿದ್ದ ಆಪಲ್ ಸ್ಮಾರ್ಟ್ ಫೋನ್‍ಗಾಗಿ ಕಾಯುತ್ತಿದ್ದರು. ಆದರೆ ಐಫೋನ್ ಬಾಕ್ಸ್‌ನಲ್ಲಿ ಸೋಪನ್ನು ಸ್ವೀಕರಿಸುತ್ತಾರೆ ಎಂಬುವುದನ್ನು ಎಂದೂ ಊಹಿಸಿರಲಿಲ್ಲ. ಇದನ್ನೂ ಓದಿ:  ಬೆಂಗಳೂರಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ಸಿದ್ಧ: ಜಗದೀಶ್

    5 rs coin

    ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ, ಹಸಿರು ಬಣ್ಣದ ವಿಮ್ ಡಿಶ್ ವಾಶ್ ಸೋಪ್ ಮತ್ತು 5 ರೂ. ನಾಣ್ಯ ಇರುವುದನ್ನು ಕಾಣಬಹುದಾಗಿದೆ. ನುರುಲ್ 70,900 ರೂ ಸ್ಮಾರ್ಟ್ ಫೋನ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಸ್ಮಾರ್ಟ್ ಫೋನ್ ಬದಲಾಗಿ ಪಾತ್ರೆ ತೊಳೆಯುವ ಸಾಬೂನನ್ನು ಪಡೆದಿದ್ದರು. ಹೀಗಾಗಿ ಎನ್‍ಆರ್‍ಐನಲ್ಲಿ ದೂರು ದಾಖಲಿಸಿ ನಂತರ ಅದೃಷ್ಟವಶಾತ್ ಪಾವತಿಸಿದ ಹಣ ಹಿಂಪಡೆದರು.

    ಅಮೀನ್ ಅವರು ಅಕ್ಟೋಬರ್ 12ರಂದು ಐಫೋನ್ ಬುಕ್ ಮಾಡಿದ್ದರು. ಅಕ್ಟೋಬರ್ 15ರಂದು ಆರ್ಡರ್ ಅನ್ನು ಸ್ವೀಕರಿಸಿದ್ದರು.ಇತ್ತೀಚೆಗೆ ಆನ್‍ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನೂ ಓದಿ: ಬಿಜೆಪಿಯವರ ಬ್ರಹ್ಮಾಂಡಗಳನ್ನು ಹೇಳ ಹೊರಟರೆ ಸಮಯ ಹಿಡಿಯುತ್ತೆ: ಪ್ರಜ್ವಲ್ ರೇವಣ್ಣ

    ಇದೀಗ ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಅಲ್ಲದೇ ನೂರುಲ್ ಸ್ವೀಕರಿಸಬೇಕಿದ್ದ ಫೋನ್ ಅನ್ನು ಜಾರ್ಖಂಡ್ ನಲ್ಲಿ ಸೆಪ್ಟೆಂಬರ್‌ನಿಂದ ಯಾರೋ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೊಬೈಲ್ ನ ಐಎಂಇಐ ಸಂಖ್ಯೆಯಿಂದಾಗಿ ಇದೆಲ್ಲವನ್ನು ಕಂಡುಹಿಡಿಯಲು ಸಾಧ್ಯವಾಯಿತು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಪರೀಕ್ಷಾ ಕೊಠಡಿಯಲ್ಲಿ ಸ್ಯಾನಿಟೈಸರ್, ಸೋಪ್, ನೀರಿನ ವ್ಯವಸ್ಥೆ: ಸುರೇಶ್ ಕುಮಾರ್

    ಪರೀಕ್ಷಾ ಕೊಠಡಿಯಲ್ಲಿ ಸ್ಯಾನಿಟೈಸರ್, ಸೋಪ್, ನೀರಿನ ವ್ಯವಸ್ಥೆ: ಸುರೇಶ್ ಕುಮಾರ್

    ಚಾಮರಾಜನಗರ: ಪ್ರತೀ ಪರೀಕ್ಷಾ ಕೊಠಡಿಯಲ್ಲಿ ಕೂಡ ಸ್ಯಾನಿಟೈಸರ್, ಸೋಪ್ ಹಾಗೂ ಕೈ ತೊಳೆಯಲು ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಇಡೀ ವಿಶ್ವವನ್ನೇ ಕಾಡ್ತಿರುವ ಕೊರೊನಾ ಭೀತಿ ಇದೀಗ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಕೂಡ ಕಾಡ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವರು, ಒಂದು ರೂಂನಲ್ಲಿ ಕಡಿಮೆ ಮಕ್ಕಳನ್ನು ಕೂರಿಸಿ ಪರೀಕ್ಷೆ ಬರೆಸಲಾಗುತ್ತದೆ. ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗೆ ಅಂತರ ಕಾಯ್ದುಕೊಳ್ಳಲಾಗುತ್ತೆ ಎಂದರು.

    ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಕೂಡ ಸ್ಯಾನಿಟೈಸರ್, ಸೋಪ್ ಹಾಗೂ ಕೈ ತೊಳೆಯಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಯಾರಿಗಾದರೂ ಸಮಸ್ಯೆ ಇದ್ದರೆ ಮಾಸ್ಕ್ ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ. ತುಂಬಾ ತೊಂದರೆಯಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದೇವೆ ಎಂದು ತಿಳಿಸಿದರು.

    ಪರೀಕ್ಷೆ ಮುಗಿದ ನಂತರ ಮಕ್ಕಳು ಗುಂಪು ಗುಂಪಾಗಿ ಮಕ್ಕಳನ್ನು ಬಿಡುವುದಿಲ್ಲ. ಒಂದು ಕೊಠಡಿ ನಂತರ ಮತ್ತೊಂದು ಕೊಠಡಿಯ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯಿಂದ ಹೊರ ಕಳುಹಿಸಲಾಗುತ್ತದೆ. ಪರೀಕ್ಷೆ ನಡೆಸಬೇಕು? ಬೇಡ್ವೋ ಅನ್ನೋ ಕುರಿತು ಮಕ್ಕಳ ಜೊತೆ ಸಮಾಲೋಚನೆ ನಡೆಸಿದ್ದೇನೆ. ಎಲ್ಲರೂ ಕೂಡ ಪರೀಕ್ಷೆ ಬೇಕೆ ಬೇಕು ಎಂದು ಕೇಳಿಕೊಂಡಿದ್ದಾರೆಂದು ಸಚಿವರು ಹೇಳಿದರು.

  • ಬುಕ್ ಮಾಡಿದ್ದು ಮೊಬೈಲ್, ಬಂದಿದ್ದು ಸರ್ಫ್ ಎಕ್ಸೆಲ್ ಸೋಪ್!

    ಬುಕ್ ಮಾಡಿದ್ದು ಮೊಬೈಲ್, ಬಂದಿದ್ದು ಸರ್ಫ್ ಎಕ್ಸೆಲ್ ಸೋಪ್!

    ಬೆಂಗಳೂರು: ಮೊಬೈಲ್ ಬದಲು ಸರ್ಫ್ ಎಕ್ಸೆಲ್ ಸೋಪ್ ಕೊಟ್ಟು ಆನ್‍ಲೈನ್ ಕಂಪನಿಯೊಂದು ಬೆಂಗಳೂರಿನ ಗ್ರಾಹಕನಿಗೆ ವಂಚಿಸಿದೆ.

    ವೆಂಕಟೇಶ್ ಎಂಬುವರು ಆನ್ ಲೈನ್ ನಲ್ಲಿ ಮೊಬೈಲ್ ಖರೀದಿ ಮಾಡಿದ್ದರು. ವೆಂಕಟೇಶ್ ಬೆಂಗಳೂರಿನ ಉತ್ತರಹಳ್ಳಿ ನಿವಾಸಿ ಆಗಿದ್ದು, ಪೇಟಿಯಂ ನಲ್ಲಿ ವೆಂಕಟೇಶ್ 85 ಸಾವಿರ ಹಣ ಪಾವತಿಸಿ ಸ್ಯಾಮ್‍ಸಂಗ್ ನೋಟ್ 9 ಮೊಬೈಲ್ ಖರೀದಿ ಮಾಡಿದ್ದರು.

    ಡೆಲಿವರಿ ಬಾಯ್ ಗ್ರಾಹಕನ ಸಹಿ ಪಡೆಯದೇ ಮೊಬೈಲ್ ನೀಡಿದ್ದ. ವೆಂಕಟೇಶ್ ಡೆಲಿವರಿ ಬಾಯ್ ಕೊಟ್ಟ ಬಾಕ್ಸ್ ಓಪನ್ ಮಾಡಿ ನೋಡಿದ್ದಾಗ ಅದರಲ್ಲಿ 5 ರೂ. ಸರ್ಫ್ ಎಕ್ಸೆಲ್ ಸೋಪು ಪತ್ತೆಯಾಗಿದೆ.

    ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಸ್‍ಗೆ ಅನಾರೋಗ್ಯವಾಗಲೆಂದು ಕಾಫಿಗೆ ಸೋಪ್ ಹಾಕ್ತಿದ್ದ ಮಹಿಳೆಗೆ 3 ವರ್ಷ ಜೈಲು

    ಬಾಸ್‍ಗೆ ಅನಾರೋಗ್ಯವಾಗಲೆಂದು ಕಾಫಿಗೆ ಸೋಪ್ ಹಾಕ್ತಿದ್ದ ಮಹಿಳೆಗೆ 3 ವರ್ಷ ಜೈಲು

    ವಾಷಿಂಗ್ಟನ್: ಕಾಫಿ ಮೇಕರ್‍ನಲ್ಲಿ ಗ್ಲಾಸ್ ಕ್ಲೀನರ್ ಮತ್ತು ಪಾತ್ರೆ ತೊಳೆಯುವ ಸೋಪ್ ಹಾಕಿ ಸಹೋದ್ಯೋಗಿಗಳ ಅನಾರೋಗ್ಯಕ್ಕೆ ಕಾರಣವಾದ ಮಹಿಳೆಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಅಮೆರಿಕದ ವರ್ಜೀನಿಯಾದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 33 ವರ್ಷದ ಮೇಯ್ಡಾ ರಿವೇರಾ ಜುವಾರೆಝ್ ಶಿಕ್ಷೆಗೆ ಒಳಗಾಗಿರುವ ಮಹಿಳೆ. ಕಳೆದ ಫೆಬ್ರವರಿಯಲ್ಲಿ ಈಕೆಯ ಮೇಲಿನ ಆರೋಪ ಸಾಬೀತಾಗಿತ್ತು.

    ವಕೀಲರು ಹೇಳುವ ಪ್ರಕಾರ ಸ್ಟೆರ್ಲಿಂಗ್‍ನಲ್ಲಿರುವ ಜೆಎಎಸ್ ಫಾರ್ವಡಿಂಗ್ ವಲ್ರ್ಡ್‍ವೈಡ್ ನಲ್ಲಿ 2016ರ ಜನವರಿ ಯಲ್ಲಿ ಕೆಲಸಗಾರರಿಗೆ ಹೊಟ್ಟೆ ನೋವು ಹಾಗೂ ವಾಂತಿಯಾಗುವುದು ಶುರುವಾಗಿತ್ತು. ಅಕ್ಟೋಬರ್‍ನಲ್ಲಿ ಯಾರೋ ಕಾಫಿಯಲ್ಲಿ ಏನನ್ನೋ ಬೆರೆಸುತ್ತಿದ್ದಾರೆ ಎಂಬ ಅನುಮಾನ ಮೂಡಿತ್ತು. ಹೀಗಾಗಿ ವಿಚಾರಣೆ ನಡೆದು ಕಚೇರಿಯ ಸೂಪರ್‍ವೈಸರ್ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದರು. ಆಗ ಮೇಯ್ಡಾ ಕಾಫಿ ಮೇಕರ್‍ಗೆ ಗ್ಲಾಸ್ ಕ್ಲೀನರ್ ಬೆರೆಸುತ್ತಿದ್ದುದು ಬಹಿರಂಗವಾಗಿತ್ತು.

    ಮೇಯ್ಡಾ ತನ್ನ ಬಾಸ್‍ಗೆ ಅನಾರೋಗ್ಯವಾಗಲಿ ಎಂಬ ಕಾರಣದಿಂದ ಈ ರೀತಿ ಮಾಡಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಮೇಯ್ಡಾ ಕೂಡ ಕಾಫಿ ಮೇಕರ್‍ನಲ್ಲಿ ಸೋಪ್ ಹಾಕಿದ್ದನ್ನು ಹಾಗೆ ಒಂದು ಬಾರಿ ನೇರವಾಗಿ ತನ್ನ ಬಾಸ್‍ನ ಕಾಫಿ ಕಪ್‍ನಲ್ಲಿ ಸೋಪ್ ಹಾಕಿದ್ದನ್ನು ಒಪಿಕೊಂಡಿದ್ದಾಳೆ.