Tag: ಸೋನ್ ಸೂದ್

  • ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿ ರಿಲೀಸ್ – ಸೋನು ಸೂದ್‍ಗೆ ಮೊದಲ ಸ್ಥಾನ

    ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿ ರಿಲೀಸ್ – ಸೋನು ಸೂದ್‍ಗೆ ಮೊದಲ ಸ್ಥಾನ

    – 2ನೇ ಸ್ಥಾನದಲ್ಲಿ ಲಿಲ್ಲಿ ಸಿಂಗ್

    ಮುಂಬೈ: ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿ ರಿಲೀಸ್ ಆಗಿದ್ದು, ಬಾಲಿವುಡ್ ನಟ ಸೋನು ಸೂದ್ ಮೊದಲ ಸ್ಥಾನ ಪಡೆದಿದ್ದಾರೆ.

    ಹೌದು. ಬ್ರಿಟನ್ ನ ‘ಈಸ್ಟರ್ನ್ ಐ’ ನಿಯತಕಾಲಿಕೆ ಪ್ರಕಟಿಸಿರುವ ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಭಾರತದ ಇಬ್ಬರು ಸೆಲೆಬ್ರಿಟಿಗಳು ಸ್ಥಾನ ಪಡೆದಿದ್ದಾರೆ. ಸೋನು ಸೂದ್ ಮೊದಲ ಸ್ಥಾನದಲ್ಲಿದ್ದರೆ, ಭಾರತೀಯ ಮೂಲದ ಲಿಲ್ಲಿ ಸಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.

    ಸಿನಿಮಾ ಮಾತ್ರವಲ್ಲ, ಲಾಕ್‍ಡೌನ್ ಬಳೀಕದ ಮಾನವೀಯ ಕಾರ್ಯಕ್ರಗಳಿಂದ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಸೋನ್ ಸೂದ್ ಇದೀಗ ಏಷ್ಯಾದ ನಂಬರ್ 1 ಸೆಲೆಬ್ರಿಟಿ ಆಗಿದ್ದಾರೆ. ಈ ಕುರಿತು ಈಸ್ಟರ್ನ್ ಐ ನ ಸಂಪಾದಕ ಅಜರ್ ನಜೀರ್, ಏಷ್ಯಾದ ನಂಬರ್ 1 ಸೆಲೆಬ್ರಿಟಿ ಸ್ಥಾನಕ್ಕೆ ಸೋನು ಸೂದ್ ಅರ್ಹ ವ್ಯಕ್ತಿ. ಕೊರೊನಾ ಸಮಯದಲ್ಲಿ ಅವರು ಮಾಡಿದ್ದಷ್ಟು ಸಹಾಯ ಬೇರೆ ಯಾವ ಸೆಲೆಬ್ರಿಟಿ ಕೂಡ ಮಾಡಿಲ್ಲ ಎಂದು ಬಣ್ಣಿಸಿದ್ದಾರೆ.

    ಸೂನ್ ಸೂದ್ ಅವರು ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಮಿಕರನ್ನು ಊರಿಗೆ ಕಳುಹಿಸುವುದು, ಬಡವರಿಗೆ ಹಣಕಾಸು, ವಿದ್ಯಾರ್ಥಿಗಳಿಗೆ ಸಹಾಯ, ಶಸ್ತ್ರಚಿಕಿತ್ಸೆಗಳಿಗೆ ಹಣಕಾಸು, ರೈತರಿಗೆ ಸಹಾಯ, ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಹೀಗೆ ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಬ್ರಿಟನ್‍ನ ‘ಜಿನ್ ಹೆರ್ಶೋಲ್ಟ್ ಹ್ಯುಮೆನಿಟೇರಿಯನ್’ ಪ್ರಶಸ್ತಿ ನೀಡಬೇಕು ಎಂದು ಹೇಳಿದ್ದಾರೆ.

    ಇನ್ನು ಎರಡನೇ ಸ್ಥಾನದಲ್ಲಿರುವ ಯೂಟ್ಯೂಬರ್ ಲಿಲ್ಲಿ ಸಿಂಗ್ ಭಾರೀ ಜನಪ್ರಿಯರಾಗಿದ್ದು, ಭಾರತ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಲ್ಲಿ ತಮ್ಮದೇ ಆದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

  • 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

    400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

    ಮುಂಬೈ: ಬಾಲಿವುಡ್ ನಟ ಸೋನು ಸೂದ್ ಈಗಾಗಲೇ ಲಾಕ್‍ಡೌನ್ ವೇಳೆ ಸಂಕಷ್ಟದಲ್ಲಿದ್ದ ನೂರಾರು ಜನರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ನಟ ಸೋನು ಸೂದ್ ಮತ್ತೊಮ್ಮೆ ಕೊರೊನಾ ಸಂಕಷ್ಟದಲ್ಲಿರುವ ಕುಟುಂಬದವರಿಗೆ ಸಹಾಯದ ಹಸ್ತ ಚಾಚಿದ್ದಾರೆ.

    ಕೊರೊನಾ ಪ್ರೇರಿತ ರಾಷ್ಟ್ರವ್ಯಾಪಿ ಲಾಕ್‍ಡೌನ್‍ನಿಂದಾಗಿ ಮೃತ ಮತ್ತು ಗಾಯಗೊಂಡಿರುವ ವಲಸೆ ಕಾರ್ಮಿಕರ 400ಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ನಟ ಸೋನು ಸೂದ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

    ನಟ ಸೋನು ಸೂದ್ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕೊರೊನಾದಿಂದ ಮೃತ ವಲಸಿಗರ ಸಂಬಂಧಿತ ಮಾಹಿತಿ, ವಿಳಾಸ ಮತ್ತು ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದಾರೆ.

    “ಮೃತ ಅಥವಾ ಗಾಯಗೊಂಡಿರುವ ವಲಸಿಗರ ಕುಟುಂಬಗಳಿಗೆ ಸುರಕ್ಷಿತ ಭವಿಷ್ಯವನ್ನು ಹೊಂದಲು ನಾನು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ. ಅವರನ್ನು ಬೆಂಬಲಿಸುವುದು ನನ್ನ ವೈಯಕ್ತಿಕ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ” ಎಂದು ಸೋನು ಸೂದ್ ಹೇಳಿದರು.

    177 ಯುವತಿಯರಿಗೆ ಸಹಾಯ:
    ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಶುರುವಾದಾಗಿನಿಂದ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ಯುವತಿಯರು ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಈ ಯುವತಿಯರ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು.

    ತಕ್ಷಣ ಯುವತಿಯರಿಗೆ ಸಹಾಯ ಮಾಡಲು ಮುಂದಾಗಿದ್ದು, ನಂತರ ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದರು. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ ಒಡಿಶಾಕ್ಕೆ ಕಳುಹಿಸಿದ್ದರು.

    ಈ ಹಿಂದೆ ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದ. ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ನೀಡಿ ಕನ್ನಡಿಗರ ಬಗ್ಗೆ ಕಾಳಜಿ ತೋರಿದ್ದರು.

  • ಲಾಕ್‍ಡೌನ್ ವೇಳೆ ಹೊಸ ಮಹಾತ್ಮನ ಜನ್ಮ, ಸೂದ್ ಬಿಜೆಪಿಯ ಕೈಗೊಂಬೆ – ಶಿವಸೇನೆ

    ಲಾಕ್‍ಡೌನ್ ವೇಳೆ ಹೊಸ ಮಹಾತ್ಮನ ಜನ್ಮ, ಸೂದ್ ಬಿಜೆಪಿಯ ಕೈಗೊಂಬೆ – ಶಿವಸೇನೆ

    ಮುಂಬೈ: ಮಹಾರಾಷ್ಟ್ರದಲ್ಲಿ ವಲಸೆ ಕಾಮಿರ್ಕರಿಗೆ ನೆರವಾದ ಸೋನ್ ಸೂದ್ ಅವರನ್ನು ಶಿವಸೇನೆ ವ್ಯಂಗ್ಯವಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.

    ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕೊರೊನಾ ವೈರಸ್ ಲಾಕ್‍ಡೌನ್ ಸಮಯದಲ್ಲಿ ಹೊಸ ಮಹಾತ್ಮನ ಜನ್ಮವಾಗಿದೆ ಎಂದು ಬರೆದುಕೊಂಡಿದ್ದಾರೆ.

    ಸೋನ್ ಸೂದ್ ಲಕ್ಷಾಂತರ ವಲಸಿಗರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಯಾಗುತ್ತಿದೆ. ಮಹಾರಾಷ್ಟ್ರ ರಾಜ್ಯಪಾಲರು ಸೋನ್ ಸೂದ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ಕೆಲಸ ಮಾಡಲಿಲ್ಲ ಎಂಬ ಭಾವನೆ ಬರುತ್ತದೆ. ಲಾಕ್‍ಡೌನ್ ಸಮಯದಲ್ಲಿ ಇಷ್ಟೊಂದು ಬಸ್‍ಗಳು ಸೋನ್ ಸೂದ್ ಅವರಿಗೆ ಸಿಕ್ಕಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

    ಸಾಮಾಜಿಕ ಕ್ರಾಂತಿಯಲ್ಲಿ ಮಹಾರಾಷ್ಟ್ರ ಜ್ಯೋತಿರಾವ್ ಪುಲೆ, ಬಾಬಾ ಆಮ್ಟೆ ಅವರನ್ನು ನೋಡಿದೆ ಲಾಕ್ಡೌನ್ ಅವಧಿಯಲ್ಲಿ ಸಾಮಾಜಿಕ ಕ್ರಾಂತಿಯ ಹೊಸ ಪಟ್ಟಿಯಲ್ಲಿ ಸೂನುಸೂದ್ ನೋಡುತ್ತಿದ್ದೇವೆ ಎಂದು ವಿಡಂಬನೆ ಮಾಡಿದ್ದಾರೆ.

    ರಾಜ್ಯಗಳು ವಲಸೆ ಕಾರ್ಮಿಕರನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿರುವಾಗ ಈ ಕಾರ್ಮಿಕರು ಎಲ್ಲಿಗೆ ಹೋಗುತ್ತಿದ್ದಾರೆ. ಶಿವಸೇನೆ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಲು ಬಿಜೆಪಿ ಸೋನುಸೂದ್ ಅವರನ್ನು ಬಳಸಿಕೊಂಡಿದೆ ದೂರಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ರಾವತ್, ಸೋನ್ ಸೂದ್ ಉತ್ತಮ ನಟ. ಚಲನ ಚಿತ್ರದಲ್ಲಿ ನಿರ್ದೇಶಕರು ಹೇಳಿದಂತೆ ಸೋನ್ ಸೂದ್ ನಟಿಸುತ್ತಾರೆ. ಈಗ ಈ ವಿಚಾರದಲ್ಲೂ ಸೋನ ಸೂದ್ ಹಿಂದೆ ರಾಜಕೀಯ ನಿರ್ದೇಶಕರು ಇದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಸೋನ್ ಸೋದ್ ಸಹಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಎದ್ದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದ ಬಗ್ಗೆ ನನಗೆ ಆಸಕ್ತಿ ಇಲ್ಲ. ಯಾರದರೂ ಆಹ್ವಾನ ನೀಡಿದರೂ ನಾನು ರಾಜಕೀಯಕ್ಕೆ ಸೇರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಸೋನ್ ಸೂದ್ ಅವರನ್ನು ರಾಜಭವನಕ್ಕೆ ಆಹ್ವಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಭೆಯ ಚಿತ್ರಗಳನ್ನು ಹಂಚಿಕೊಂಡ ಭಗತ್ ಸಿಂಗ್ ಕೊಶಿಯಾರಿ, ಲಾಕ್ ಡೌನ್ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ವಾಪಸ್ ಕಳುಹಿಸುವಲ್ಲಿ ಸೋನು ಸೂದ್ ಮಾಡಿದ ಪ್ರಯತ್ನವನ್ನು ಶ್ಲಾಘಿಸಿದರು.