Tag: ಸೋನು ಸೋದ್

  • ಆ ಹುಡುಗಿಯ ಖಾಸಗಿ ವಿಡಿಯೋ ಹಂಚಬೇಡಿ ಎಂದು ಕೇಳಿಕೊಂಡ ನಟ ಸೋನು ಸೋದ್

    ಆ ಹುಡುಗಿಯ ಖಾಸಗಿ ವಿಡಿಯೋ ಹಂಚಬೇಡಿ ಎಂದು ಕೇಳಿಕೊಂಡ ನಟ ಸೋನು ಸೋದ್

    ಚಂಡೀಗಡ (Chandigarh) ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ ಎನ್ನಲಾದ ತಲೆತಗ್ಗಿಸುವ ಕೆಲಸ, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವ ವಿದ್ಯಾಲಯದ ಆವರಣದಲ್ಲಿ ಈ ಘಟನೆಯ ಕುರಿತು ಪ್ರತಿಭಟಿಸಲಾಗುತ್ತಿದ್ದು, ತಪ್ಪತಸ್ಥರನ್ನು ಕೂಡಲೇ ಬಂಧಿಸಿ, ಉಗ್ರ ಶಿಕ್ಷೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ಇನ್ನೂ 60 ಹುಡುಗಿಯರು ಈ ಸಂಕಷ್ಟಕ್ಕೆ ಸಿಲುಕೊಳ್ಳಲಿದ್ದಾರೆ ಎನ್ನುವುದು ಮತ್ತಷ್ಟು ಆತಂಕ್ಕೆ ಕಾರಣವಾಗಿದೆ.

    ಚಂಡೀಗಡ ವಿವಿಯ (University)  ಹಾಸ್ಟೇಲ್ ನಲ್ಲಿ ಹುಡುಗಿಯೊಬ್ಬಳು, ಬಾತ್ ರೂಮ್ ಗೆ ಹೋಗುವ ಹುಡುಗಿಯರ ಖಾಸಗಿ ವಿಡಿಯೋಗಳನ್ನು (Private Video) ಚಿತ್ರಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಅಲ್ಲದೇ, 60ಕ್ಕೂ ಹೆಚ್ಚು ಇಂತಹ ವಿಡಿಯೋಗಳು ಇನ್ನೂ ಇವೆ ಎಂದು ಹೇಳಿದ್ದಾಳೆ ಎನ್ನಲಾಗುತ್ತಿದೆ. ಹಾಗಾಗಿ, ಯಾರದೆಲ್ಲ ವಿಡಿಯೋ ಆಚೆ ಬಂದು, ಇನ್ನೇನು ಆವಾಂತರ ಸೃಷ್ಟಿ ಆಗತ್ತೋ ಅನ್ನುವ ಆತಂಕ ವಿವಿ ಆವರಣದಲ್ಲಿರುವ ಹುಡುಗಿಯರದ್ದು. ಇದನ್ನೂ ಓದಿ:ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ

    ಈ ವಿಷಯ ತಿಳಿಯುತ್ತಿದ್ದಂತೆಯೇ ನಟ ಸೋನು ಸೋದ್ (Sonu Sodh), ನೊಂದವರ ಬೆನ್ನಿಗೆ ನಿಂತಿದ್ದಾರೆ. ಅಲ್ಲದೇ, ಇಂತಹ ಯಾವುದೇ ವಿಡಿಯೋಗಳನ್ನು ನೋಡಬೇಡಿ ಮತ್ತು ಇತರರಿಗೆ ಕಳುಹಿಸಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ, ಈ ಕೃತ್ಯವನ್ನು ಖಂಡಿಸಿದ್ದಾರೆ. ಹೀನ ಮನಸ್ಥಿತಿಯವರನ್ನು ಸುಮ್ಮನೆ ಬಿಡಬೇಡಿ ಎಂದು ಮನವಿ ಮಾಡಿರುವ ಅವರು, ಹೆಣ್ಣು ಮಕ್ಕಳಿಗೆ ಗೌರವವನ್ನು ಕೊಡಿ ಎಂದು ವಿಶೇಷವಾಗಿ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಕಟವಾಗಲಿದೆ ಸೋನುಸೂದ್ ಲಾಕ್‍ಡೌನ್ ಅನುಭವದ ಪುಸ್ತಕ

    ಪ್ರಕಟವಾಗಲಿದೆ ಸೋನುಸೂದ್ ಲಾಕ್‍ಡೌನ್ ಅನುಭವದ ಪುಸ್ತಕ

    ನವದೆಹಲಿ: ‘ಐ ಆಮ್ ನಾಟ್ ಎ ಮೈಸೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಾಲಿವುಡ್ ನಟ ಸೋನುಸೂದ್ ಅವರ ಲಾಕ್‍ಡೌನ್ ಅನುಭವದ ಪುಸ್ತಕ ಪ್ರಕಟವಾಗಲಿದೆ.

    ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ ಅನುಭವವನ್ನು ವಿವರಿಸುವ ಪುಸ್ತಕವನ್ನು ಬರೆಯುತ್ತಿದ್ದೇನೆ ಎಂದು ಈ ಹಿಂದೆ ಸೋನುಸೂದ್ ಹೇಳಿದ್ದರು. ಲಾಕ್‍ಡೌನ್‍ನಲ್ಲಿ ಸಹಾಯವನ್ನು ನೀಡುವಾಗ ನಟ ಎದುರಿಸಿದ ಭಾವನಾತ್ಮಕ ಸವಾಲುಗಳನ್ನು ಮತ್ತು ಅನುಭವಗಳನ್ನು ‘ಐ ಆಮ್ ನಾಟ್ ಎ ಮೈಸೆ’ ಈ ಪುಸ್ತಕ ಒಳಗೊಂಡಿರುತ್ತದೆ.

    ಕೆಲವರು ನನ್ನನ್ನು ಪ್ರೀತಿಯಿಂದ ವಲಸೆ ಕಾರ್ಮಿಕರ ಪಾಲಿನ ದೇವದೂತ ಎಂದು ಕರೆದರು. ಆದರೆ ನಾನು ನಿಜಕ್ಕೂ ದೇವದೂತನಲ್ಲ ನನ್ನ ಹೃದಯ ನನಗೆ ಹೇಳುವುದನ್ನು ನಾನು ಸರಳವಾಗಿ ಮಾಡುತ್ತೇನೆ. ಲಾಕ್‍ಡೌನ್ ನಿಂದಾಗಿ ಸಾವಿರಾರು ಜನ ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡಬೇಕು ಎಂದು ನನ್ನ ಮನಸ್ಸು ಹೇಳಿತು ಎಂದರು.

    ಪರಸ್ಪರ ಸಹಾಯ ಮಾಡುವುದು ಮಾನವರಾಗಿ ನಮ್ಮ ಜವಾಬ್ದಾರಿಯಾಗಿದೆ. ಅದೇ ಕಾರಣಕ್ಕೆ ನಾನು ಅವರಿಗೆ ಸಹಾಯ ಮಾಡಿದ್ದೇನೆ. ಹೀಗಾಗಿ ನನ್ನ ದೇವದೂತ ಎನ್ನುವುದು ದೊಡ್ಡ ಮಾತಾಗಿದೆ. ಈ ಎಲ್ಲ ಅನುಭವಗಳನ್ನು ಹೊಂದಿರುವ ಪುಸ್ತಕ ‘ಐ ಆಮ್ ನೋ ಮೆಸೈ’ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ನಟ ಸೋನುಸೋದ್ ತಿಳಿಸಿದ್ದಾರೆ.