Tag: ಸೋನು ಶ್ರೀನಿವಾಸ್‌

  • ಸೋನು ಬದಲು ದೊಡ್ಮನೆಗೆ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ

    ಸೋನು ಬದಲು ದೊಡ್ಮನೆಗೆ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ

    ಬಿಗ್ ಬಾಸ್(Bigg Boss) ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 18 ಜನವಿದ್ದ ದೊಡ್ಮನೆಯಲ್ಲಿ 12 ಜನ ಸ್ಪರ್ಧಿಗಳಾಗಿದ್ದಾರೆ. ಸಾಕಷ್ಟು ರೋಚಕ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಹೀಗಿರುವಾಗ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಟಿವಿ ಸೀಸನ್‌ಗೆ ಲಗ್ಗೆ ಇಡುತ್ತಾರೆ ಎನ್ನಲಾಗಿತ್ತು. ಆದರೆ ಈಗ ಬೇರೆಯದ್ದೇ ಟ್ವಿಸ್ಟ್ ಸಿಕ್ಕಿದೆ. ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಚಕ್ರವರ್ತಿ ಚಂದ್ರಚೂಡ್ (Chakravarthy Chandrachuda) ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಾರೆ.

    ಸಿನಿಮಾ ಹಾವಳಿ ನಡುವೆ ಕಿರುತೆರೆಯ ಬಿಗ್ ಬಾಸ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಬಿಗ್ ಬಾಸ್ ಸೀಸನ್ 9ರಲ್ಲಿ ಪ್ರವೀಣರು ಮತ್ತು ನವೀನರ ಜುಗಲ್‌ಬಂದಿ ನೋಡುಗರನ್ನ ಅಟ್ರಾಕ್ಟ್ ಮಾಡುತ್ತಿದೆ. ಈ ಸೀಸನ್ ಇದೀಗ 6 ವಾರಗಳು ಪೂರೈಸಿದ್ದು, ವೈಲ್ಡ್ ಕಾರ್ಡ್ ಎಂಟ್ರಿಗೆ ಕೌಂಟ್ ಡೌನ್ ಶುರುವಾಗಿದೆ. 6ನೇ ಸ್ಪರ್ಧಿಯಾಗಿ ಸಾನ್ಯ ಎಲಿಮಿನೇಟ್ ಆಗಿರುವ ಬೆನ್ನಲ್ಲೇ ಹಳೆಯ ಸೀಸನ್‌ನ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್(Wild Card Entry) ಎಂಟ್ರಿಯ ಮೂಲಕ ಮನೆಗೆ ಲಗ್ಗೆ ಇಡಲಿದ್ದಾರಂತೆ.

    ಬಿಗ್ ಬಾಸ್ ಮನೆಯ(Bigg Boss House) ಆಟ ಸಾಕಷ್ಟು ಟ್ವಿಸ್ಟ್‌ಗಳನ್ನ ಪಡೆಯುತ್ತಿದ್ದು, ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಓಟಿಟಿ ಫೇಮ್ ಸೋನು ಅವರನ್ನ ಕಳುಹಿಸಲು ಬಿಗ್ ಬಾಸ್ ಟೀಮ್ ನಿರ್ಧರಿಸಿತ್ತು. ಆದರೆ ಸೋನು ಅವರ ವೈಯಕ್ತಿಕ ಕಾರಣಗಳಿಂದ ದೊಡ್ಮನೆಗೆ ಹೋಗಲು ನೋ ಎಂದಿದ್ದಾರೆ. ಇದನ್ನೂ ಓದಿ:ಆಧಾರ್ ಇರುವ ಪ್ರತಿಯೊಬ್ಬರು ಟ್ವಿಟ್ಟರ್ ಬ್ಲೂಟಿಕ್ ಖಾತೆ ಪಡೆಯಬೇಕು – ಮಸ್ಕ್ ನಿರ್ಧಾರಕ್ಕೆ ಕಂಗನಾ ಬೆಂಬಲ

    ಇದೀಗ ಬಿಗ್ ಬಾಸ್ ಸೀಸನ್ 8ರಲ್ಲಿ ಮನೆ ಮಾತಾಗಿದ್ದ ಚಕ್ರವರ್ತಿ ಚಂದ್ರಚೂಡ್ ಅವರು ಸೀಸನ್ 9ಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಅಥವಾ ವದಂತಿನಾ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]