Tag: ಸೋನು ಗೌಡ

  • ಬೆಸ್ಟ್ ಫ್ರೆಂಡ್ ಕೀರ್ತಿ ಸುರೇಶ್ ಮದುವೆಯಲ್ಲಿ ಕನ್ನಡತಿ ಸೋನು ಗೌಡ

    ಬೆಸ್ಟ್ ಫ್ರೆಂಡ್ ಕೀರ್ತಿ ಸುರೇಶ್ ಮದುವೆಯಲ್ಲಿ ಕನ್ನಡತಿ ಸೋನು ಗೌಡ

    ಹುಭಾಷಾ ನಟಿ ಕೀರ್ತಿ ಸುರೇಶ್ (Keerthy Suresh) ಮದುವೆ ಇತ್ತೀಚೆಗೆ ಗೋವಾದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಮದುವೆಯಲ್ಲಿ ಕನ್ನಡದ ‘ಗುಳ್ಟು’ ನಟಿ ಸೋನು ಗೌಡ (Sonu Gowda) ಭಾಗಿಯಾಗಿದ್ದು, ಸುಂದರ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಉಗ್ರಂ ಮಂಜು ಅಬ್ಬರಕ್ಕೆ ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್

    ಎರಡು ಸುಂದರ ಹೃದಯಗಳು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗುವುದು ತುಂಬಾ ಖುಷಿಯ ವಿಚಾರ. ಈ ಸುಂದರ ದಂಪತಿಗೆ ಮತ್ತೊಮ್ಮೆ ಹ್ಯಾಪಿ ಮ್ಯಾರೀಡ್ ಲೈಫ್, ನಿಮ್ಮ ಜೀವನ ಸುಂದರವಾಗಿರಲಿ ಎಂದು ನಟಿ ಸೋನು ಶುಭಹಾರೈಸಿದ್ದಾರೆ. ಮದುವೆಯಲ್ಲಿ ಕೀರ್ತಿ ದಂಪತಿ ಜೊತೆ ತೆಗೆದ ಸುಂದರ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.

    ಈ ಹಿಂದೆಯೇ ಸಂದರ್ಶನವೊಂದರಲ್ಲಿ ಕೀರ್ತಿ ಜೊತೆಗಿನ ಸ್ನೇಹದ ಬಗ್ಗೆ ಸೋನು ಮಾತನಾಡಿದ್ದರು.  ಕಾಮನ್ ಫ್ರೆಂಡ್ ಮೂಲಕ ಕೀರ್ತಿ ಸುರೇಶ್ ಪರಿಚಯವಾಗಿದ್ದು, ಇದೀಗ ಸೋನು ಅವರಿಗೂ ಕೀರ್ತಿ ಬೆಸ್ಟ್ ಫ್ರೆಂಡ್ ಆಗಿದ್ದಾರೆ. ನಾವು ಫೋನ್‌ನಲ್ಲೂ ಮಾತನಾಡುತ್ತೇವೆ, ಆದರೆ ಸಿನಿಮಾ ಬಗ್ಗೆ ಮಾತನಾಡೋದಿಲ್ಲ, ಕೀರ್ತಿ ಅವರು ಆಹಾರ ಪ್ರಿಯೆ. ಹಾಗಾಗಿ ಆಹಾರದ ವಿಚಾರವಾಗಿ ಹೆಚ್ಚಾಗಿ ಮಾತನಾಡುತ್ತೇವೆ ಎಂದಿದ್ದರು ಸೋನು. ಹಾಗಾಗಿ ನಟಿಯ ಮದುವೆಯಲ್ಲಿ ಸೋನುಗೆ ವಿಶೇಷವಾಗಿ ಆಹ್ವಾನ ನೀಡಲಾಗಿತ್ತು.

    ಇನ್ನೂ ಡಿ.12ರಂದು ಗೋವಾದಲ್ಲಿ ಆಂಟೋನಿ ತಟ್ಟಿಲ್ (Antony Thattil) ಜೊತೆ ಕೀರ್ತಿ ಮದುವೆಯಾದರು. ಈ ಮದುವೆಯಲ್ಲಿ ದಳಪತಿ ವಿಜಯ್, ತ್ರಿಷಾ, ಜವಾನ್ ಡೈರೆಕ್ಟರ್ ಅಟ್ಲಿ ದಂಪತಿ, ಕಲ್ಯಾಣಿ ಪ್ರಿಯಾದರ್ಶನ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದರು.

  • ‘ಟೆನೆಂಟ್’ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್-ತಿಲಕ್ ಗೆ ಜೊತೆಯಾದ ಸೋನು ಗೌಡ

    ‘ಟೆನೆಂಟ್’ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್-ತಿಲಕ್ ಗೆ ಜೊತೆಯಾದ ಸೋನು ಗೌಡ

    ನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅದರ ಭಾಗವಾಗಿ ಮೂಡಿ ಬರ್ತಿರುವ ಸಿನಿಮಾ ಟೆನೆಂಟ್ (Tennant). ಟೆನೆಂಟ್ ಎಂದರೆ ಬಾಡಿಗೆದಾರ..ಯುವ ಪ್ರತಿಭೆ ಶ್ರೀಧರ್ ಶಾಸ್ತ್ರೀ ನಿರ್ದೇಶನ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ವಿಎಫ್ ಎಕ್ಸ್ ನಲ್ಲಿ 4 ವರ್ಷದ ಅನುಭವವಿರುವ ಶ್ರೀಧರ್ ಮೊದಲ ಪ್ರಯತ್ನ ಟೆನೆಂಟ್. ಒಂದಷ್ಟು ಕಿರುಚಿತ್ರ ನಿರ್ದೇಶಿಸಿರುವ ಅವರೀಗ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಡುತ್ತಿದ್ದಾರೆ.

    ಶ್ರೀಧರ್ ಹೊಸ ಪ್ರಯತ್ನಕ್ಕೆ ಪ್ರತಿಭಾನ್ವಿತ ತಾರಾಬಳಗ ಸಾಥ್ ಕೊಟ್ಟಿದೆ. ಧರ್ಮ ಕೀರ್ತಿರಾಜ್ (Keerthiraj), ತಿಲಕ್ ರಾಜ್ (Tilak) , ಸೋನು ಗೌಡ (Sonu Gowda), ರಾಕೇಶ್ ಮಯ್ಯ ಹಾಗೂ ಉಗ್ರಂ ಮಂಜು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

    ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಶ್ರೀಧರ್ ಶಾಸ್ತ್ರೀ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಬೆಂಗಳೂರಿನ ಮನೆಯೊಂದರಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮಾಸ್ಟರ್ ಚಾಯ್ಸ್ ಕ್ರಿಯೇಷನ್ ನಡಿ ನಾಗರಾಜ್ ಟಿ ಟೆನೆಂಟ್ ಸಿನಿಮಾ ನಿರ್ಮಿಸುತ್ತಿದ್ದು, ಪೃಥ್ವಿರಾಜ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.

    ಗಿರೀಶ್ ಹೋತೂರ್ ಸಂಗೀತ, ಉಜ್ವಲ್ ಚಂದ್ರ ಸಂಕಲನ, ಮನೋಹರ್ ಜೋಷಿ ಛಾಯಾಗ್ರಹಣ ಚಿತ್ರಕ್ಕಿದೆ. ಶ್ರೀಧರ್ ಶಾಸ್ತ್ರಿ, ಪ್ರವೀಣ್ ಪ್ರಕಾಶ್, ಪ್ರದೀಪ್ ಚಂದ್ರ, ಪ್ರಸನ್ನ ಭಟ್, ಪುರಷೋತ್ತಮ್ ಎ, ರಾಘವೇಂದ್ರ ಸಿ.ಪಿ, ಕಾರ್ತಿಕ್ ಎಸ್.ಎಸ್ ಸಂಭಾಷಣೆ ಬರೆದಿದ್ದು, ಐಶ್ವರ್ಯ ರಂಗರಾಜನ್, ಅನಿರುದ್ಧ ಶಾಸ್ತ್ರಿ, ಗಿರೀಶ್ ಹೋತೂರ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸದ್ಯ ಫಸ್ಟ್ ಲುಕ್ ರಿಲೀಸ್ ಮಾಡಿರುವ ಚಿತ್ರತಂಡ ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

  • ರಮ್ಯಾ ಪಾತ್ರವನ್ನು ನಾನು ಮಾಡುತ್ತಿಲ್ಲ: ನಟಿ ಸೋನು ಸ್ಪಷ್ಟನೆ

    ರಮ್ಯಾ ಪಾತ್ರವನ್ನು ನಾನು ಮಾಡುತ್ತಿಲ್ಲ: ನಟಿ ಸೋನು ಸ್ಪಷ್ಟನೆ

    ನ್ನಡದ ಪ್ರತಿಭಾವಂತ ನಿರ್ದೇಶಕ ವಿಜಯ್ ‍ಪ್ರಸಾದ್ ಮತ್ತೊಂದು ಸಿದ್ಲಿಂಗು ಕಥೆ ಹೇಳಲು ಮುಂದಾಗಿದ್ದಾರೆ. ಈ ಹಿಂದೆ ಲೂಸ್ ಮಾದ ಯೋಗಿ (Yogi)  ಮತ್ತು ರಮ್ಯಾ ಅವರನ್ನು ಆಯ್ಕೆ ಮಾಡಿಕೊಂಡು ಸಿದ್ಲಿಂಗು ಕಥೆ ಹೇಳಿದ್ದರು ವಿಜಯ್ ಪ್ರಸಾದ್. ಇದೀಗ ರಮ್ಯಾ (Ramya) ಬದಲು ಸೋನು ಗೌಡ (Sonu Gowda) ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿ ಸಿದ್ಲಿಂಗು 2 (Sidlingu 2) ಚಿತ್ರದ ಕಥೆ ಹೇಳುತ್ತಿದ್ದಾರೆ.

    ರಮ್ಯಾ ಮಾಡಿದ ಪಾತ್ರಕ್ಕೆ ಸೋನು ಗೌಡ ರಿಪ್ಲೇಸ್ ಆಗಿದ್ದಾರಾ ಎನ್ನುವ ಮಾತು ಕೇಳಿ ಬಂದಿತ್ತು. ಈ ಕುರಿತಂತೆ ಸೋನು ಮಾತನಾಡಿದ್ದಾರೆ. ತಮ್ಮದು ರಮ್ಯಾ ಮಾಡಿದ ಪಾತ್ರದ ರಿಪ್ಲೇಸ್ ಅಲ್ಲ. ಆ ಪಾತ್ರವೇ ಬೇರೆ, ನಾನು ಮಾಡುತ್ತಿರುವ ಪಾತ್ರವೇ ಬೇರೆ ಎಂದು ಅವರು ಹೇಳಿಕೊಂಡಿದ್ದಾರೆ.

    ಮೊನ್ನೆಯಷ್ಟೇ ಸಿನಿಮಾಗೆ ಮುಹೂರ್ತವಾಗಿದೆ. ಸಿಂಪಲ್ ಆಗಿ ಆದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ನಾಯಕ ಯೋಗಿ, ನಾಯಕಿ ಸೋನು ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಿದ್ಲಿಂಗು ಸಿನಿಮಾದ ಕೊನೆಯಲ್ಲಿ ನಾಯಕಿ ಸಾವನ್ನಪ್ಪುತ್ತಾಳೆ. ಹಾಗಾಗಿ ಸಿದ್ಲಿಂಗು 2 ಸಿನಿಮಾದ ಕಥೆಯು ಹೇಗೆ ಶುರುವಾಗಬಹುದು ಎನ್ನುವ ಕುತೂಹಲವಿದೆ.

     

    2012ರಲ್ಲಿ ಸಿದ್ಲಿಂಗು ತೆರೆಗೆ ಬಂದಿತ್ತು. ಮೊದಲ ಬಾರಿಗೆ ರಮ್ಯಾ ಜೊತೆ ಯೋಗಿ ನಟಿಸಿದ್ದರಿಂದ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಸಿನಿಮಾ ಕೂಡ ಗೆದ್ದಿತ್ತು. ಮತ್ತೆ ಹನ್ನೆರಡು ವರ್ಷಗಳ ನಂತರ ವಿಜಯ್ ಪ್ರಸಾದ್ (Vijay Prasad) ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಏನೆಲ್ಲ ವಿಷಯಗಳನ್ನು ಈ ಚಿತ್ರ ಹೊತ್ತು ತರಲಿದೆ ಎನ್ನುವುದನ್ನು ಕಾದು ನೋಡಬೇಕು. ಈಗಾಗಲೇ ಮೊದಲ ಹಂತದ ಶೂಟಿಂಗ್ ಕೂಡ ಮುಗಿಸಿದೆ ಚಿತ್ರತಂಡ.

  • ‘ಸಿದ್ಲಿಂಗು 2’ನಲ್ಲಿ ಡಬಲ್ ಮೀನಿಂಗ್ ಇರಲ್ಲ: ಪ್ರಾಮೀಸ್ ಎಂದ ನಟ ಯೋಗಿ

    ‘ಸಿದ್ಲಿಂಗು 2’ನಲ್ಲಿ ಡಬಲ್ ಮೀನಿಂಗ್ ಇರಲ್ಲ: ಪ್ರಾಮೀಸ್ ಎಂದ ನಟ ಯೋಗಿ

    ಲೂಸ್ ಮಾದ ಖ್ಯಾತಿಯ ಯೋಗಿ  ಮತ್ತೊಂದು ಬಾರಿ ಸಿಂದ್ಲಿಂಗು ಜೊತೆ ಅಭಿಮಾನಿಗಳ ಎದುರು ನಿಂತಿದ್ದಾರೆ. ಬರೋಬ್ಬರಿ ಹನ್ನೆರಡು ವರ್ಷಗಳ ಹಿಂದೆ ಸಿಂದ್ಲಿಂಗು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಯೋಗಿ, ಈಗ ಮತ್ತೆ ಸಿದ್ಲಿಂಗು 2 ಮೂಲಕ ರಂಜಿಸಲು ಸಜ್ಜಾಗುತ್ತಿದ್ದಾರೆ. ಆ ಸಿದ್ಲಿಂಗು ಚಿತ್ರದಲ್ಲಿ ಅಲ್ಲಲ್ಲಿ ಡಬಲ್ ಮೀನಿಂಗ್ ಇದ್ದರೂ, ಈ ಸಿದ್ಲಿಂಗು ಹಾಗೆ ಇರುವುದಿಲ್ಲ ಎಂದು ಅಭಿಮಾನಿಗಳಿಗೆ ಪ್ರಾಮೀಸ್ ಮಾಡಿದ್ದಾರೆ.

    ಕನ್ನಡದ ಪ್ರತಿಭಾವಂತ ನಿರ್ದೇಶಕ ವಿಜಯ್ ‍ಪ್ರಸಾದ್ ಮತ್ತೊಂದು ಸಿದ್ಲಿಂಗು ಕಥೆ ಹೇಳಲು ಮುಂದಾಗಿದ್ದಾರೆ. ಈ ಹಿಂದೆ ಲೂಸ್ ಮಾದ ಯೋಗಿ (Yogi)  ಮತ್ತು ರಮ್ಯಾ ಅವರನ್ನು ಆಯ್ಕೆ ಮಾಡಿಕೊಂಡು ಸಿದ್ಲಿಂಗು ಕಥೆ ಹೇಳಿದ್ದರು ವಿಜಯ್ ಪ್ರಸಾದ್. ಇದೀಗ ರಮ್ಯಾ ಬದಲು ಸೋನು ಗೌಡ (Sonu Gowda) ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿ ಸಿದ್ಲಿಂಗು 2 (Sidlingu 2) ಚಿತ್ರದ ಕಥೆ ಹೇಳುತ್ತಿದ್ದಾರೆ.

    ಮೊನ್ನೆಯಷ್ಟೇ ಸಿನಿಮಾಗೆ ಮುಹೂರ್ತವಾಗಿದೆ. ಸಿಂಪಲ್ ಆಗಿ ಆದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ನಾಯಕ ಯೋಗಿ, ನಾಯಕಿ ಸೋನು ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಿದ್ಲಿಂಗು ಸಿನಿಮಾದ ಕೊನೆಯಲ್ಲಿ ನಾಯಕಿ ಸಾವನ್ನಪ್ಪುತ್ತಾಳೆ. ಹಾಗಾಗಿ ಸಿದ್ಲಿಂಗು 2 ಸಿನಿಮಾದ ಕಥೆಯು ಹೇಗೆ ಶುರುವಾಗಬಹುದು ಎನ್ನುವ ಕುತೂಹಲವಿದೆ.

     

    2012ರಲ್ಲಿ ಸಿದ್ಲಿಂಗು ತೆರೆಗೆ ಬಂದಿತ್ತು. ಮೊದಲ ಬಾರಿಗೆ ರಮ್ಯಾ ಜೊತೆ ಯೋಗಿ ನಟಿಸಿದ್ದರಿಂದ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಸಿನಿಮಾ ಕೂಡ ಗೆದ್ದಿತ್ತು. ಮತ್ತೆ ಹನ್ನೆರಡು ವರ್ಷಗಳ ನಂತರ ವಿಜಯ್ ಪ್ರಸಾದ್ (Vijay Prasad) ದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಏನೆಲ್ಲ ವಿಷಯಗಳನ್ನು ಈ ಚಿತ್ರ ಹೊತ್ತು ತರಲಿದೆ ಎನ್ನುವುದನ್ನು ಕಾದು ನೋಡಬೇಕು.

  • ‘ಸಿದ್ಲಿಂಗು 2’ ಚಿತ್ರಕ್ಕೆ ಮುಹೂರ್ತ: ಅಂದು ರಮ್ಯಾ, ಇಂದು ಸೋನು ಗೌಡ ನಾಯಕಿ

    ‘ಸಿದ್ಲಿಂಗು 2’ ಚಿತ್ರಕ್ಕೆ ಮುಹೂರ್ತ: ಅಂದು ರಮ್ಯಾ, ಇಂದು ಸೋನು ಗೌಡ ನಾಯಕಿ

    ನ್ನಡದ ಪ್ರತಿಭಾವಂತ ನಿರ್ದೇಶಕ ವಿಜಯ್ ‍ಪ್ರಸಾದ್ ಮತ್ತೊಂದು ಸಿದ್ಲಿಂಗು ಕಥೆ ಹೇಳಲು ಮುಂದಾಗಿದ್ದಾರೆ. ಈ ಹಿಂದೆ ಲೂಸ್ ಮಾದ ಯೋಗಿ (Yogi)  ಮತ್ತು ರಮ್ಯಾ ಅವರನ್ನು ಆಯ್ಕೆ ಮಾಡಿಕೊಂಡು ಸಿದ್ಲಿಂಗು ಕಥೆ ಹೇಳಿದ್ದರು ವಿಜಯ್ ಪ್ರಸಾದ್. ಇದೀಗ ರಮ್ಯಾ ಬದಲು ಸೋನು ಗೌಡ (Sonu Gowda) ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿ ಸಿದ್ಲಿಂಗು 2 (Sidlingu 2) ಚಿತ್ರದ ಕಥೆ ಹೇಳುತ್ತಿದ್ದಾರೆ.

    ನಿನ್ನೆಯಷ್ಟೇ ಸಿನಿಮಾಗೆ ಮುಹೂರ್ತವಾಗಿದೆ. ಸಿಂಪಲ್ ಆಗಿ ಆದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ನಾಯಕ ಯೋಗಿ, ನಾಯಕಿ ಸೋನು ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಿದ್ಲಿಂಗು ಸಿನಿಮಾದ ಕೊನೆಯಲ್ಲಿ ನಾಯಕಿ ಸಾವನ್ನಪ್ಪುತ್ತಾಳೆ. ಹಾಗಾಗಿ ಸಿದ್ಲಿಂಗು 2 ಸಿನಿಮಾದ ಕಥೆಯು ಹೇಗೆ ಶುರುವಾಗಬಹುದು ಎನ್ನುವ ಕುತೂಹಲವಿದೆ.

     

    2012ರಲ್ಲಿ ಸಿದ್ಲಿಂಗು ತೆರೆಗೆ ಬಂದಿತ್ತು. ಮೊದಲ ಬಾರಿಗೆ ರಮ್ಯಾ ಜೊತೆ ಯೋಗಿ ನಟಿಸಿದ್ದರಿಂದ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಸಿನಿಮಾ ಕೂಡ ಗೆದ್ದಿತ್ತು. ಮತ್ತೆ ಹನ್ನೆರಡು ವರ್ಷಗಳ ನಂತರ ವಿಜಯ್ ಪ್ರಸಾದ್ (Vijay Prasad) ದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಏನೆಲ್ಲ ವಿಷಯಗಳನ್ನು ಈ ಚಿತ್ರ ಹೊತ್ತು ತರಲಿದೆ ಎನ್ನುವುದನ್ನು ಕಾದು ನೋಡಬೇಕು.

  • ಉಜ್ಜಯಿನಿಯಲ್ಲಿ ಸ್ಟಾರ್ ಸಿಸ್ಟರ್ಸ್: ದೇವರ ಮಹಿಮೆ ಅಪಾರ ಎಂದ ನಟಿಯರು

    ಉಜ್ಜಯಿನಿಯಲ್ಲಿ ಸ್ಟಾರ್ ಸಿಸ್ಟರ್ಸ್: ದೇವರ ಮಹಿಮೆ ಅಪಾರ ಎಂದ ನಟಿಯರು

    ಸ್ಟಾರ್ ಸಹೋದರಿಯರು ಎಂದೇ ಹೆಸರುವಾಸಿಯಾಗಿರುವ ಸೋನು ಗೌಡ (Sonu Gowda) ಮತ್ತು ಅವರ ಸಹೋದರಿ ನೇಹಾ ಗೌಡ (Neha Gowda) ಶೂಟಿಂಗ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ಟೆಂಪ್ ರನ್ ಮಾಡುತ್ತಿದ್ದಾರೆ. ಸದ್ಯ ಅವರು ಉಜ್ಜಯಿನಿ (Ujjain) ಮತ್ತು ಓಂಕಾರೇಶ್ವರ ಯಾತ್ರೆಯಲ್ಲಿದ್ದು, ದೇವರ ದರ್ಶನ ಪಡೆದಿದ್ದಾರೆ.

    ಕುಟುಂಬ ಸಮೇತ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಸಹೋದರಿಯರು, ಆ ಧಾರ್ಮಿಕ ಕ್ಷೇತ್ರಗಳ ಮಹಿಮೆಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ಫೋಟೋಗಳನ್ನೂ ಅವರು ಶೇರ್ ಮಾಡಿದ್ದಾರೆ. ಓಂಕಾರೇಶ್ವರ ಮತ್ತು ಮಹಾಕಾಳನ ಮಹಿಮೆಯನ್ನು ಕೊಂಡಾಡಿದ್ದಾರೆ.

     

    ದೇವರ ಸನ್ನಿಧಾನದಲ್ಲಿ ವಿಶ್ವಾಸ, ಶಾಂತಿ, ನಂಬಿಕೆಗಳು ಇಮ್ಮಡಿಯಾಗುತ್ತವೆ ಎಂದು ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ನಂಬಿಕೆಗಳ ಬಗ್ಗೆ ಮಾತನಾಡಿದ್ದಾರೆ. ಭಕ್ತಿ, ಪರ್ವತ, ನದಿಗಳ ಬಗ್ಗೆಯೂ ಅವರು ಹೇಳಿಕೊಂಡಿದ್ದು, ಅದೊಂದು ಪುಣ್ಯ ಸ್ಥಳ ಎಂದಿದ್ದಾರೆ.

  • ನಾನು ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಗಂಡನ ಥರ ಇರಬೇಕು- ಸೋನು

    ನಾನು ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಗಂಡನ ಥರ ಇರಬೇಕು- ಸೋನು

    ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸೋಶಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಸೆನ್ಸೇಷನ್ ಕ್ರಿಯೆಟ್ ಮಾಡ್ತಿರುತ್ತಾರೆ. ಇದೀಗ ಮದುವೆ ಯಾವಾಗ? ಮದುವೆಯಾಗುವ (Wedding) ಹುಡುಗ ಹೇಗಿರಬೇಕು ಎಂದು ಕೇಳಿದ್ರೆ, ಕನ್ನಡದ ಶ್ಯಾನೆ ಟಾಪ್ ನಟಿ ಅದಿತಿ ಅವರ ಪತಿ ಯಶಸ್ ಕಡೆ ಬೆಟ್ಟು ತೋರಿಸಿದ್ದಾರೆ.

    ಸಂದರ್ಶನದಲ್ಲಿ ಮದುವೆ ಬಗ್ಗೆ ಸೋನು ಮಾತನಾಡಿ, ಮೊದಲಿಗೆ ಮದುವೆ ಅನ್ನೋದು ನನ್ನ ತಲೆಯಲ್ಲಿ ಇಲ್ಲ. ಆದರೆ ನಮ್ಮ ಕನ್ನಡದ ನಟಿ ಅದಿತಿ ಪ್ರಭುದೇವ (Aditi Prabhudeva) ಅಂದರೆ ತುಂಬಾ ಇಷ್ಟ. ಹುಡುಗಿಯರಿಗೆ ಹುಡುಗಿಯರೇ ಕ್ರಶ್ ಆದರೆ ಯಾರು ಅಂತಾ ಕೇಳಿದ್ರೆ? ನಾನು ಅದಿತಿ ಮೇಡಂ ಎನ್ನುತ್ತೇನೆ. ಅವರು ಮಾತನಾಡುವ ರೀತಿ, ತೊಡುವ ಬಟ್ಟೆ ನನಗಿಷ್ಟ ಎಂದು ಸೋನು ಮಾತನಾಡಿದ್ದಾರೆ.

    ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಅವರ ಗಂಡನ ಥರ ಇರಬೇಕು. ಅದಿತಿ- ಯಶಸ್ ಬಾಂಧವ್ಯ ನೋಡಿದ್ರೆ ಖುಷಿಯಾಗುತ್ತದೆ. ಇಬ್ಬರ ಫೋಟೋ, ವಿಡಿಯೋ ನೋಡಿದಾಗ ನನಗೂ ಅದಿತಿ ಗಂಡನ ಥರ ಹುಡುಗ ಬೇಕು ಅನಿಸುತ್ತದೆ ಎಂದು ಮದುವೆಯಾಗುವ ಹುಡುಗನ ಬಗೆಗಿನ ಕನಸನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಪ್ಯಾಲೆಸ್ತೀನ್ ಪರ ಬ್ಯಾಟಿಂಗ್ ಮಾಡಿದಕ್ಕೆ ಮಿಯಾಗೆ ಕೆಲಸ ಹೋಯ್ತು

    ಟೀಕೆ, ಟ್ರೋಲ್‌ಗಳ (Troll) ವಿಚಾರಕ್ಕೆ ಬಂದರೆ ನನಗೆ ರಶ್ಮಿಕಾ ಮಂದಣ್ಣ (Rashmika Mandanna) ನನಗೆ ಸ್ಪೂರ್ತಿ ಎಂದು ಸೋನು ಮಾತನಾಡಿದ್ದಾರೆ. ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ ಎಂದರೆ ತನಗಿಷ್ಟ ಎಂದು ಸಂದರ್ಶನದಲ್ಲಿ ಸೋನು ನೆಚ್ಚಿನ ಬಗ್ಗೆ ಹೇಳಿದ್ದಾರೆ. ಅವರಿಂದ ಕಲಿತಿರೋದು ತುಂಬಾನೇ ಇದೆ. ಯಾರೆಲ್ಲಾ ಅವರನ್ನ ಹೇಟ್ ಮಾಡುತ್ತಾರೆ ಅದು ನನಗೆ ಬೇಕಿಲ್ಲ. ರಶ್ಮಿಕಾ ನನ್ನ ಸ್ಪೂರ್ತಿ ಹೇಗೆಲ್ಲಾ ನೆಗೆಟಿವಿಯನ್ನ ದೂರ ಇಡಬೇಕು ಎಂದು ಅವರಿಂದ ಕಲಿತಿದ್ದೇನೆ.

    ನೀನು ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ಯಾ ಅಂದರೆ ಮಾತು ಬೇಡ. ನಮ್ಮ ಸಾಧನೆಯಿಂದ ಉತ್ತರ ಕೊಡಬೇಕು. ನೀವೊಂದು ಸಿನಿಮಾ ಮಾಡುತ್ತಿದ್ದೀರಾ ಅಂದರೆ ಅಲ್ಲೇ ಟ್ರೋಲಿಗರಿಗೆ ಉತ್ತರ ಸಿಗುತ್ತದೆ. ಸೇಮ್ ನನಗೆ ರಶ್ಮಿಕಾ ಥರನೇ ಬೆಳೆಯಬೇಕು ಎಂದು ಆಸೆ ಇದೆ. ಅಮಿತಾಬ್ ಬಚ್ಚನ್ ಜೊತೆ ಎಲ್ಲ ಅವರು ಆಕ್ಟ್ ಮಾಡಿದ್ದಾರೆ. ಅದೆಲ್ಲಾ ಈಸಿ ಅಲ್ಲ. ಇನ್ನೂ ಹೇಳಬೇಕು ಅಂದರೆ ರಶ್ಮಿಕಾ ಅವರ ಬಿಂಬ ನಾನು ಎಂದು ಸೋನು ಮಾತನಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೆಗೆಟಿವ್ಸ್ ಹೇಗೆ ಅವಾಯ್ಡ್ ಮಾಡಬೇಕು ಎಂದು ರಶ್ಮಿಕಾ ನೋಡಿ ಕಲಿತಿದ್ದೇನೆ- ಸೋನು

    ನೆಗೆಟಿವ್ಸ್ ಹೇಗೆ ಅವಾಯ್ಡ್ ಮಾಡಬೇಕು ಎಂದು ರಶ್ಮಿಕಾ ನೋಡಿ ಕಲಿತಿದ್ದೇನೆ- ಸೋನು

    ಸೌತ್ ಮತ್ತು ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿರುವ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಸೋನು ಗೌಡ (Sonu Gowda) ಮಾತನಾಡಿದ್ದಾರೆ. ರಶ್ಮಿಕಾ ಅವರ ಬಿಂಬ ನಾನು ಎಂದು ನಟಿಯ ಮೇಲಿನ ಅಭಿಮಾನದ ಬಗ್ಗೆ ಮುಕ್ತವಾಗಿ ಸೋನು ರಿಯಾಕ್ಟ್ ಮಾಡಿದ್ದಾರೆ.

    ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ ಎಂದರೆ ತನಗಿಷ್ಟ ಎಂದು ಸಂದರ್ಶನದಲ್ಲಿ ಸೋನು ನೆಚ್ಚಿನ ಬಗ್ಗೆ ಹೇಳಿದ್ದಾರೆ. ಅವರಿಂದ ಕಲಿತಿರೋದು ತುಂಬಾನೇ ಇದೆ. ಯಾರೆಲ್ಲಾ ಅವರನ್ನ ಹೇಟ್ ಮಾಡುತ್ತಾರೆ ಅದು ನನಗೆ ಬೇಕಿಲ್ಲ. ರಶ್ಮಿಕಾ ನನ್ನ ಇನ್ಸ್ಪಿರೇಷನ್. ಹೇಗೆಲ್ಲಾ ನೆಗೆಟಿವಿಯನ್ನ ದೂರ ಇಡಬೇಕು ಎಂದು ಅವರಿಂದ ಕಲಿತಿದ್ದೇನೆ.

    ನೀನು ಸಿಕ್ಕಾಪಟ್ಟೆ ಟ್ರೋಲ್ (Troll) ಆಗ್ತಿದ್ಯಾ ಅಂದರೆ ಮಾತು ಬೇಡ. ಸಾಧನೆಯಿಂದ ಉತ್ತರ ಕೊಡು. ನೀವೊಂದು ಸಿನಿಮಾ ಮಾಡುತ್ತಿದ್ದೀರಾ ಅಂದರೆ ಅಲ್ಲೇ ಟ್ರೋಲಿಗರಿಗೆ ಉತ್ತರ ಸಿಗುತ್ತದೆ. ಸೇಮ್ ನನಗೆ ರಶ್ಮಿಕಾ ಥರನೇ ಬೆಳೆಯಬೇಕು ಎಂದು ಆಸೆ ಇದೆ. ಅಮಿತಾಬ್ ಬಚ್ಚನ್ (Amitabh Bachchan) ಜೊತೆ ಎಲ್ಲ ಆಕ್ಟ್ ಮಾಡಿದ್ದಾರೆ. ಅದೆಲ್ಲಾ ಈಸಿ ಅಲ್ಲ. ಇನ್ನೂ ಹೇಳಬೇಕು ಅಂದರೆ ರಶ್ಮಿಕಾ ಅವರ ಬಿಂಬ ನಾನು ಎಂದು ಸೋನು ಮಾತನಾಡಿದ್ದಾರೆ.‌ ಇದನ್ನೂ ಓದಿ:ಅನಾಥ ಮಕ್ಕಳಿಗಾಗಿ ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್

    ಕಳೆದ ವರ್ಷ ‘ಬಿಗ್ ಬಾಸ್ ಒಟಿಟಿ’ ಮೂಲಕ ಸೋನು ಗೌಡ ಪರಿಚಿತರಾದರು. ಸೋಷಿಯಲ್ ಮೀಡಿಯಾ ಸ್ಟಾರ್ ಈಗ ‘ಕ್ಯಾಡ್ಬರೀಸ್’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರುಣ್- ವರ್ಷ ಕಾವೇರಿ ಬ್ರೇಕಪ್ ಬಗ್ಗೆ ಸೋನು ಗೌಡ ಪ್ರತಿಕ್ರಿಯೆ

    ವರುಣ್- ವರ್ಷ ಕಾವೇರಿ ಬ್ರೇಕಪ್ ಬಗ್ಗೆ ಸೋನು ಗೌಡ ಪ್ರತಿಕ್ರಿಯೆ

    ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಚರ್ಚೆಗೆ ಗ್ರಾಸವಾಗಿರುವ ವಿಚಾರ ಅಂದರೆ ವರುಣ್ ಆರಾಧ್ಯ- ವರ್ಷ ಕಾವೇರಿ ಬ್ರೇಕಪ್ ಮ್ಯಾಟರ್. ಈ ಜೋಡಿಯ ಬ್ರೇಕಪ್‌ಗೆ ಸೋನು ಕಾರಣ ಅಂತಾ ಕೂಡ ಸಖತ್ ಟ್ರೋಲ್ ಆಗಿತ್ತು. ಈ ಬಗ್ಗೆ ‘ಬಿಗ್ ಬಾಸ್’ ಸೋನು (Sonu Gowda) ಸ್ಪಷ್ಟನೆ ನೀಡಿದ್ದಾರೆ.

    ಕೆಲ ದಿನಗಳ ಹಿಂದೆ ವರ್ಷ ಕಾವೇರಿ- ವರುಣ್(Varun Aradhya) ಬ್ರೇಕ್‌ಗೆ ಸೋನುನೇ ಕಾರಣ ಎಂಬಂತೆ ಸೋನು ಮಾಲ್ಡೀವ್ಸ್ ಫೋಟೋ ಸೇರಿಸಿ ಸಖತ್ ಟ್ರೋಲ್ ಮಾಡಲಾಗಿತ್ತು. ಈ ಬಗ್ಗೆ ಸೋನು ಮಾತನಾಡಿ, ಇಬ್ಬರ ಬ್ರೇಕಪ್‌ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

    ಈ ಟ್ರೋಲ್‌ನವರು ಸಾವಿರ ಕೆಲಸ ಮಾಡುತ್ತಾರೆ. ಈ ಇನ್ಸ್ಟಾಗ್ರಾಂನಲ್ಲಿ ಏನು ಆಗುತ್ತಿದೆ ಎಂದೇ ನನಗೆ ತಿಳಿಯುತ್ತಿಲ್ಲ. ಕೆಲ ದಿನಗಳಿಂದ ನನ್ನ ಮಾಲ್ಡೀವ್ಸ್ ವಿಡಿಯೋಸ್‌ನ ವೈರಲ್ ಮಾಡ್ತಿದ್ದರು. ಈಗ ವರುಣ್ ಬ್ರೇಕಪ್‌ಗೆ ನನ್ನ ಫೋಟೋ ಮ್ಯಾಚ್ ಮಾಡ್ತಿದ್ದಾರೆ.

    ವರುಣ್-ವರ್ಷ (Varsha Kaveri) ಅವರದ್ದು 5 ವರ್ಷದ ಲವ್. ಇವರಿಬ್ಬರ ಮಧ್ಯೆ ನಾನು ತಗ್ಲಾಕೊಂಡಿದ್ದೀನಿ. ನಾನೇನು ತಪ್ಪು ಮಾಡಿಲ್ಲ. ಇನ್ನೂ ಲವ್ ವಿಷ್ಯ ಅಂದರೆ ಕೇಳಬೇಕಾ? ಅವರ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡ್ತಿದ್ದಾರೆ. ಇದಕ್ಕೆಲ್ಲಾ ಸೋನು ಮಾಲ್ಡೀವ್ಸ್‌ಗೆ ಹೋಗಿದ್ದ ವಿಡಿಯೋನೇ ಕಾರಣ ಅಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ. ಇದನ್ನೂ ಓದಿ:ಮದುಮಗಳಂತೆ ಮಿಂಚಿದ ಅನುಶ್ರೀಗೆ ಮದುವೆ ಯಾವಾಗ ಎಂದ ನೆಟ್ಟಿಗರು?

    ಲೇ ಸೋನು ನಿನಗೆ ಬೇರೆ ಯಾರು ಸಿಗಲಿಲ್ವಾ ಇಬ್ಬರ ಮಧ್ಯೆ ಹೋಗಿದ್ಯಾ ಅಂತೆಲ್ಲಾ ಮಾತು ಬಂತು. ವರುಣ್-ವರ್ಷ ಬ್ರೇಕಪ್‌ಗೂ (Breakup) ನನಗೂ ಯಾವುದೇ ಸಂಬಂಧವಿಲ್ಲ. ಸುಮ್ಮನೆ ಇಂತಹದೊಂದು ಸುದ್ದಿ ಸೃಷ್ಟಿ ಮಾಡಿದ್ದಾರೆ. ನೆಗೆಟಿವ್‌ ಮಾತುಗಳಿಗೆ, ಟ್ರೋಲ್‌ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಈ ಮೂಲಕ ಗಾಳಿ ಸುದ್ದಿಗೆ, ಟ್ರೋಲ್‌ಗೆ ನಟಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಈ ಬಾರಿ ಬಿಗ್‌ ಬಾಸ್‌ ಸೀಸನ್‌ 10ಕ್ಕೆ (Bigg Boss Kannada 10) ವರುಣ್‌ ಅಥವಾ ವರ್ಷ ಕಾವೇರಿ ಕಾಲಿಡುತ್ತಾರೆ ಎನ್ನಲಾಗಿತ್ತು. ಆದರೆ ಈ ಸುದ್ದಿ ಕೂಡ ಸುಳ್ಳಾಗಿದೆ. ಇಬ್ಬರಲ್ಲಿ ಒಬ್ಬರು ಕೂಡ ದೊಡ್ಮನೆ ಆಟಕ್ಕೆ ಎಂಟ್ರಿ ಕೊಟ್ಟಿಲ್ಲ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಮದುವೆ ಆಗೋ ಹುಡುಗ ಅದಿತಿ ಪ್ರಭುದೇವ್ ಗಂಡ ತರ ಇರ್ಬೇಕು ಎಂದ ಸೋನು

    ನಾನು ಮದುವೆ ಆಗೋ ಹುಡುಗ ಅದಿತಿ ಪ್ರಭುದೇವ್ ಗಂಡ ತರ ಇರ್ಬೇಕು ಎಂದ ಸೋನು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]