Tag: ಸೋನುಗೌಡ

  • ಯುವಧೀರನ ‘ಗುಡ್ ಗುಡ್ಡರ್ ಗುಡ್ಡೆಸ್ಟ್’ಗೆ ಚಾಲನೆ

    ಯುವಧೀರನ ‘ಗುಡ್ ಗುಡ್ಡರ್ ಗುಡ್ಡೆಸ್ಟ್’ಗೆ ಚಾಲನೆ

    ಳೆದ ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ ಗುರುತಿಸಿಕೊಂಡಿರುವ ಯುವಧೀರ, ಗುಡ್ ಗುಡ್ಡರ್ ಗುಡೆಸ್ಟ್ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. ನಿನ್ನೆ ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಮುಹೂರ್ತ ನೆರವೇರಿದ್ದು, ಜೀ ಕನ್ನಡದ ಡಿಕೆಡಿ ಶೋ ವಿನ್ನರ್ ಚೈತ್ರಾಲಿ ಕ್ಲ್ಯಾಪ್ ಮಾಡಿದರೆ, ಬೂಸೆ ಗೌಡ ಎಂಬ ಭರತನಾಟ್ಯದಲ್ಲಿ ನ್ಯಾಷನಲ್ ಅವಾರ್ಡ್ ಪಡೆದ ದೃಷ್ಟಿ ವಿಶೇಷ ಚೇತನ ಕ್ಯಾಮೆರಾಗೆ ಚಾಲನೆ ನೀಡಿದರು. ಇದನ್ನೂ ಓದಿ : ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’

    ಈ ಕುರಿತು ನಿರ್ದೇಶಕರು ಮಾತನಾಡಿ, ‘ಕಳೆದ ಹದಿನೈದು ವರ್ಷಗಳಿಂದ ಸಿನಿಮಾಗಳಲ್ಲಿ ಸಂಭಾಷಣೆಕಾರನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮಿಂಚು, ಜಾನಿ ಜಾನಿ ಎಸ್ ಪಪ್ಪಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ಮೊದಲ ನಿರ್ದೇಶನ ಸಿನಿಮಾ. ಒಂದೇ ಕಥೆ ಮೂರು ಟ್ರ್ಯಾಕ್ ನಲ್ಲಿ ನಡೆಯುತ್ತದೆ. ಇದು ಯಾವ ಜಾನರ್ ಸಿನಿಮಾ ಅನ್ನೋದು ವರ್ಗೀಕೃತ ಮಾಡುವುದು ಕಷ್ಟ. ಹೀಗಾಗಿ ಇದು ಮಲ್ಟಿಪಲ್ ಜಾನರ್ ನ  ಸಿನಿಮಾ ಎಂದರು. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

    ಸುಚೇಂದ್ರ ಪ್ರಸಾದ್, ಇವರು ಇಟ್ಟಿರುವ ಶೀರ್ಷಿಕೆ  ವ್ಯಾಕರಣ ಬದ್ಧವಲ್ಲ ಹಾಗೇಯೇ ಸಿನಿಮಾ ಕೂಡ ಎಲ್ಲ ವ್ಯಾಕರಣವನ್ನ ಮುರಿಯಲಿದೆ. ಇದು ನಿಜ ಜೀವನದ ಕೆಲವು ಪ್ರಸಂಗ ತಳುಕು ಹಾಕಿ ಕಥೆ ರೆಡಿ ಮಾಡಿದ್ದಾರೆ. ಒಳ್ಳೆ ಕಥಾಹಂದರವನ್ನು ತಯಾರಿಸಿದ್ದಾರೆ ಎಂದು ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್ ಹೇಳಿದರು. ಯುವಧೀರ ನಿರ್ದೇಶನದ ಜೊತೆಗೆ ತಾವೇ ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಇವರಿಗೆ ಜೋಡಿಯಾಗಿ ಆದ್ಯಾ ಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಸೋನುಗೌಡ, ಪ್ರಮೋದ್ ಶೆಟ್ಟಿ, ಗೋಪಾಲ್ ಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್, ವಿ.ಮನೋಹರ್, ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಇದೊಂದು ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರವಾಗಿದ್ದು, ಜೊತೆಗೆ ರೊಮ್ಯಾನ್ಸ್‌, ಥ್ರಿಲ್ಲರ್‌, ಡ್ರಾಮಾ, ಕ್ರೈಂ, ಆ್ಯಕ್ಷನ್‌ ಕೂಡ ಒಳಗೊಂಡಿದೆ.

  • ಜೊತೆ ಜೊತೆಯಲಿ ಅನಿರುದ್ಧಅವರ ಮೊದಲ ಪತ್ನಿ ನಟಿ ಸೋನು ಗೌಡ

    ಜೊತೆ ಜೊತೆಯಲಿ ಅನಿರುದ್ಧಅವರ ಮೊದಲ ಪತ್ನಿ ನಟಿ ಸೋನು ಗೌಡ

    ಇಂತಿ ನಿನ್ನ ಪ್ರೀತಿಯ ಹುಡುಗಿ ಸೋನು ಗೌಡ ಅವರು ವಿಷ್ಣುವರ್ಧನ್ ಅವರ ಅಳಿಯ, ನಟ ಅನಿರುದ್ಧ ಅವರ ಮೊದಲ ಪತ್ನಿ ಎಂದು ಹೇಳುವ ಮೂಲಕ ‘ಜೊತೆ ಜೊತೆಯಲಿ’ ಧಾರಾವಾಹಿ ಹೊಸ ಟ್ವಿಸ್ಟ್ ಕೊಟ್ಟಿದೆ. ಹೀಗಾಗಿ ಕಿರುತೆರೆಯ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಿದೆ. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ

    ನೀವು ಜೊತೆ ಜೊತೆಯಲಿ ಧಾರಾವಾಹಿಗಳ ವೀಕ್ಷಕರಾಗಿದ್ದಾರೆ. ಆ ಧಾರಾವಾಹಿಯಲ್ಲಿ ಪದೇ ಪದೇ ಪ್ರಸ್ತಾಪ ಆಗುತ್ತಿದ್ದ ಹೆಸರು ರಾಜನಂದಿನಿ ಅವರದ್ದು. ಈ ರಾಜನಂದಿನಿ ಯಾರು ಎಂದು ಹಲವು ತಿಂಗಳುಗಳಿಂದ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಈಗ ಆ ರಾಜನಂದಿನಿಯ ಪಾತ್ರ ಎಂಟ್ರಿ ಆಗಿದೆ. ಆ ಪಾತ್ರವನ್ನೇ ನಟಿ ಸೋನು ಗೌಡ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ಸ್ಟಾರ್ ನಟನ ಮಗಳನ್ನೂ ಬಿಡಲಿಲ್ಲ ಕಾಸ್ಟಿಂಗ್ ಕೌಚ್ : ನೋವು ಹಂಚಿಕೊಂಡ ಮೋಹನ್ ಬಾಬು ಪುತ್ರಿ

    ಈ ರಾಜನಂದಿನಿ ಬೇರೆ ಯಾರೂ ಅಲ್ಲ, ಆರ್ಯವರ್ಧನ್ (ಅನಿರುದ್ಧ) ಅವರ ಮೊದಲ ಪತ್ನಿಯಂತೆ. ಈ ದಾಂಪತ್ಯಗೀತೆ ಹೇಗೆ ಅಂತ್ಯ ಆಯಿತು ಎನ್ನುವ ಕುರಿತು ಇನ್ಮುಂದೆ ಕಥೆ ಸಾಗಬಹುದು. ಇದನ್ನೂ ಓದಿ : ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತರು ಮಳೆ ಹನಿ ನಿಲ್ಲದು

    ರಂಗಭೂಮಿ ಹಿನ್ನೆಲೆಯ ಸೋನು ಗೌಡ ಅವರಿಗೆ ಕಿರುತೆರೆಯಲ್ಲಿ ಸಾಕಷ್ಟು ಅವಕಾಶಗಳು ಇದ್ದರೂ, ಅವರು ಆಯ್ಕೆ ಮಾಡಿಕೊಂಡಿದ್ದು ಹಿರಿತೆರೆಯನ್ನು. ಸಹೋದರಿ ಕೂಡ ಕಿರುತೆರೆಯ ಫೇಮಸ್ ನಟಿ. ಆದರೂ, ಸೋನು ಸಿನಿಮಾ ರಂಗ ಬಿಡಲಿಲ್ಲ. ಈಗ ಡಿಢೀರ್ ಅಂತ ಕಿರುತೆರೆಗೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.  ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ಕನ್ನಡದಲ್ಲಿ ಮಾತ್ರವಲ್ಲ, ಮಲಯಾಳಂನಲ್ಲೂ ಸೋನು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಏಳು ವರ್ಷಗಳ ಹಿಂದೆಯೇ ಮುಮ್ಮುಟಿ ಜತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಮೊದಲ ಸಿನಿಮಾದಲ್ಲೇ ಅತ್ಯುತ್ತಮ ನಟಿ ಪ್ರಶಸ್ತಿಗೂ ಕೂಡ ಕಾರಣರಾಗಿದ್ದರು. ಈಗ ಕಿರುತೆರೆಗೆ ಪ್ರವೇಶ ಮಾಡಿದ್ದಾರೆ. ಇಲ್ಲಿನ ಪ್ರೇಕ್ಷಕರು ಸೋನು ಅವರನ್ನು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕು.