Tag: ಸೋನು

  • ಸೋನು ನಂತರ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿದ ರಾಕಿ -ಅಮ್ಮು ಆಪ್ತತೆ

    ಸೋನು ನಂತರ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿದ ರಾಕಿ -ಅಮ್ಮು ಆಪ್ತತೆ

    ಬಿಗ್ ಬಾಸ್ ಮನೆಯ (Bigg Boss House)  ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ರಾಕೇಶ್ ಅಡಿಗ, ಓಟಿಟಿಯಲ್ಲಿ ಸೋನು ಗೌಡ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ನಟಿ ಅಮೂಲ್ಯ ಜೊತೆ ಹೆಚ್ಚು ಆಪ್ತತೆ ಬೆಳೆಸಿಕೊಂಡಿದ್ದಾರೆ. ಇನ್ನೂ ಅಮ್ಮುಗೆ ಸದಾ ಕೀಟಲೆ ಮಾಡ್ತಾರೆ ಜೋಶ್ ಹುಡುಗ ರಾಕೇಶ್.

    ದೊಡ್ಮನೆಯಲ್ಲಿ ಸಾನ್ಯ(Sanya Iyer) ಮತ್ತು ರೂಪೇಶ್ ಶೆಟ್ಟಿ(Roopesh Shetty) ನಂತರ ಇದೀಗ ರಾಕಿ ಮತ್ತು ಅಮ್ಮು ಜೋಡಿ ಸಖತ್ ಹೈಲೆಟ್ ಆಗುತ್ತಿದೆ. ಮನೆಯಲ್ಲಿ ಎಲ್ಲರಿಗೂ ರಾಕಿ ಅಂದ್ರೆ ತುಂಬಾ ಇಷ್ಟ. ರಾಕಿಗೂ ಹುಡುಗಿಯರು ಅಂದ್ರೆ ತುಂಬಾ ಪ್ರೀತಿ, ಸದಾ ಎಲ್ಲಾ ಹುಡುಗಿರ ಬಗ್ಗೆ ಕೇರ್ ಮಾಡ್ತಾ ಇರ್ತಾರೆ. ಇದೀಗ ಅಮೂಲ್ಯ(Amulya Gowda) ಜೊತೆ ಹೆಚ್ಚಾಗಿ ಹೈಲೈಟ್ ಆಗಿದ್ದಾರೆ. ಇದನ್ನೂ ಓದಿ:ಮತ್ತೆ `ಕಿರಿಕ್ ಪಾರ್ಟಿ’ ಟೀಮ್‌ಗೆ ರಶ್ಮಿಕಾ ಮಂದಣ್ಣ ಸಾಥ್: ಪ್ರಮೋದ್ ಶೆಟ್ಟಿ

    ಸದಾ ಅಮ್ಮುಗೆ ಕೀಟಲೆ ಕೊಡುತ್ತಾ, ನಗಿಸುತ್ತಾ ಎಲ್ಲಾ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾ ಇದ್ದಾರೆ. ಇನ್ನೂ ರಾಕಿ ಅಡುಗೆ ಮನೆಗೆ ಕೂರಲು ಹೋದಾಗ ಚೇರ್ ಬೀಳುವುದರಲ್ಲಿ ಇರುತ್ತೆ. ಆಗ ದಿವ್ಯಾ ಹುಷಾರ್ ಬೀಳುತ್ತೀರಾ ಎನ್ನುತ್ತಾರೆ. ಅದಕ್ಕೆ ನೇಹಾ, ಅವನು ಯಾವಾಗಲೂ ಬಿದ್ದು ಹೋಗಿ ಆಗಿದೆ ಎಂದು ಅಮ್ಮು ವಿಚಾರವಾಗಿ ರಾಕಿ ಕಾಲೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀ ಮತ್ತೆ ರಾಕಿ ಸೋನುಳನ್ನು ರೇಗಿಸುವುದಕ್ಕೆ ಹೋಗಿ ಏನೆಲ್ಲಾ ಆಯ್ತು..?

    ಜಯಶ್ರೀ ಮತ್ತೆ ರಾಕಿ ಸೋನುಳನ್ನು ರೇಗಿಸುವುದಕ್ಕೆ ಹೋಗಿ ಏನೆಲ್ಲಾ ಆಯ್ತು..?

    ತ್ತೀಚೆಗೆ ಜಯಶ್ರೀ (Jayashree) ಸೋನುಳನ್ನು ಉರಿಸುವುದಕ್ಕೆ ಶುರು ಮಾಡಿದ್ದಾಳೆ. ಸೋನು (Sonu Srinivas Gowda) ಬಾಯಿ ಎಂಥದ್ದು ಎಂದು ಗೊತ್ತಿದ್ದರು, ತಮಾಷೆ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾಳೆ. ಇದರ ನಡುವೆ ಆರ್ಯವರ್ಧನ್ ಕೂಡ ಅಲ್ಲಿ ಹೇಳಿದ್ದು ಇಲ್ಲಿ, ಇಲ್ಲಿ ಹೇಳಿದ್ದು ಅಲ್ಲಿ ಹೇಳುವುದಕ್ಕೆ ಶುರು ಮಾಡಿದ್ದಾರೆ. ಜಯಶ್ರೀ ಕೂಡ ಸೋನು ನಂಬಿ ಹೇಳಿದ್ದರೆ ಅದನ್ನು ತಂದು ರಾಕಿ ಬಳಿ ಹೇಳುತ್ತಿದ್ದಾಳೆ.

    ಸೋನು ಬಳಿ ಎಲ್ಲಾ ವಿಚಾರಗಳನ್ನು ಕೇಳಿಕೊಂಡ ಆರ್ಯವರ್ಧನ್ ರಾಕಿ ಬಂದ ಕೂಡಲೇ ಸೋನುಳದ್ದೇ ತಪ್ಪು ಎಂಬ ಚುಚ್ಚಿಕೊಟ್ಟಿದ್ದಾರೆ. ನೀವೂ ಜಯಶ್ರೀ ಜೊತೆ ಇರೋದು ಚೆನ್ನಾಗಿಲ್ಲವಂತೆ ಎಂದಿದ್ದಾರೆ. ಅದಕ್ಕೆ ನಾನು ಅವೈಡ್ ಮಾಡುತ್ತಾ ಇರುವುದು. ನಮ್ಮಿಂದ ಅವರ ಆಟ ಹಾಳಾಗಬಾರದಲ್ವಾ. ಕಿಸ್ ಕೊಡಬಾರದಂತೆ ಬೇರೆ ಹುಡಗಿಯರಿಗೆ. ಇದೆಲ್ಲವನ್ನು ನಿಮಗೆ ಹೇಳಿದ್ಲ ಎಂದಿದ್ದಾನೆ. ಆಗ ಗುರೂಜಿ ಇದನ್ನೆಲ್ಲಾ ಇನ್ನು ಮುಂದೆ ಬೇಕು ಅಂತ ಮಾಡು ಆಗ ಮಜಾ ಇರುತ್ತದೆ ಎಂದಿದ್ದಾರೆ. ಬೇಕು ಅಂತ ಅಲ್ಲ ನಾನು ಅದನ್ನೇ ಮಾಡುವುದು. ನನ್ನ ಯಾರು ಕಂಟ್ರೋಲ್ ಮಾಡುವುದಕ್ಕೆ ಆಗಲ್ಲ ಎಂದು ರಾಕಿ ಹೇಳಿದ್ದಾನೆ. ಇದನ್ನೂ ಓದಿ: ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

    ಇದು ಉರಿಸುವ ಕೆಲಸಕ್ಕೆ ನಾಂದಿ ಹಾಕಿದಂತೆ ಆಗಿದೆ. ಸದ್ಯ ಬಿಗ್ ಬಾಸ್ (Bigg Boss) ಮನೆಯಲ್ಲಿ ಸೋನು ಹಾಗೂ ರಾಕಿ (Rakesh Adiga) ಮಾತನಾಡುವುದನ್ನು ಬಿಟ್ಟಿದ್ದಾರೆ. ಗುರೂಜಿ, ಸೋಮಣ್ಣನ ಬಳಿ ಇದನ್ನೇ ಮಾತನಾಡುತ್ತಾ ಇದ್ದರು. ಅಲ್ಲಿಗೆ ರಾಕಿ ಬಂದ, ಆಗ ಗುರೂಜಿ ರಾತ್ರಿಯೆಲ್ಲಾ ಫುಲ್ ದೂರು ರಾಕಿ ಮೇಲೆ ಅಂದಿದ್ದಾರೆ. ಆಗ ರಾಕಿ ಎಗ್ ರೈಸ್ ಬಗ್ಗೆ ಹೇಳಿದ್ದಾನೆ. ಅದೇ ಸಮಯಕ್ಕೆ ಜಯಶ್ರೀ ಕೂಡ ಅಲ್ಲಿಗೆ ಬಂದಿದ್ದಾಳೆ. ಆಗ ಗುರುಗಳು ಮತ್ತು ಸೋಮಣ್ಣ ಇಬ್ಬರು ಕೂಡ, ಸೋನುಗೆ ಉರಿಸುವ ಫ್ಲ್ಯಾನ್ ಮಾಡಿದ್ದಾರೆ. ಜಯಶ್ರೀ ನೀನು ಇನ್ನು ಹತ್ತಿರ ಕುಳಿತುಕೋ, ಹೆಗಲ ಮೇಲೆ ಕೈ ಹಾಕಿ ಅಂತೆಲ್ಲಾ ಹೇಳಿದ್ದಾರೆ. ಅವರು ಹೇಳಿದಂತೆಯೇ ಜಯಶ್ರೀ ಕೂಡ ಮಾಡಿದ್ದಾಳೆ.

    ಆಮೇಲೆ ಮಾತನಾಡಿದ ಜಯಶ್ರೀ, ಗುರುಗಳು ಇಂಥ ಸೀನ್ ಎಲ್ಲಾ ಚೆನ್ನಾಗಿ ಮಾಡುತ್ತಾರೆ. ರಾಕಿ ಇದೆಲ್ಲಾ ಹೇಗೆ ಆಗುತ್ತೆ ಅಂದ್ರೆ ಬೇಕಂತ, ಅವಳಿಗೆ ಉರಿಸುವುದಕ್ಕೆ ಮಾಡಿದಂತೆ ಆಗಿ ಬಿಡುತ್ತೆ. ನನ್ನ ಮೇಲೆ ಉರಿದುಕೊಳ್ಳುತ್ತಾಳೆ. ನಿನ್ನೆ ಜೆನ್ಯೂನ್ ಆಗಿ ಹೇಳಿದ್ದಾಳೆ. ನೀನು ರಾಕಿ ಜೊತೆ ಇದ್ರೆ ನಂಗೆ ಪೊಸೆಸಿವ್ ಫೀಲ್ ಆಗುತ್ತೆ ಅಂತ. ಹಂಗೆ ಹೇಳಿದ ಮೇಲೂ ನಿನ್ನ ಜೊತೆ ಹಿಂಗೆ ಇದ್ರೆ ಅವಳಿಗೆ ಹೇಗೆ ಅನ್ಸುತ್ತೆ ಹೇಳು? ನೀನು ನನ್ನ ಫ್ರೆಂಡ್ ಅಂತ ಹೇಳುತ್ತಾ ಇದ್ದೀನಿ ಅಂತ ಬೇರೆ ಹೇಳಿದ್ಲು ಅಂತ ಹೇಳುವಾಗಲೇ ಅದೇ ಜಾಗಕ್ಕೆ ಸೋನು ಬಂದಿದ್ದಾಳೆ. ಆಗ ಮಾತು ಇಬ್ಬರಲ್ಲೂ ಕ್ಲೋಸ್ ಆಗಿತ್ತು. ಇದನ್ನೂ ಓದಿ: ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಸೋನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದವಳಂತೆ ಸೋಮಣ್ಣ ಮತ್ತು ಆರ್ಯವರ್ಧನ್ ನಡುವೆ ಕೂತು ಮಾತನಾಡುತ್ತಿದ್ದಳು. ಆದರೆ ಜಯಶ್ರೀ ನಡುವೆ ಮಾತನಾಡಿ, ನಾನು ಹೇಳಿದೆ ಸೋನು ನೀನು ಬೇರೆಯವರಿಗೆ ಉರಿಸುವುದಕ್ಕೆಲ್ಲಾ ನನ್ನ ಕರೆದು ಕೂರಿಸಿಕೊಳ್ಳಬೇಡ ಎಂದಿದ್ದೆ ತಡ. ಸೋನು ರೈಸ್ ಆಗಿದ್ದಾಳೆ. ನನಗೆ ಯಾಕೆ ಹೇಳುತ್ತಾ ಇದ್ದೀಯಾ. ನೀನ್ಯಾಕೆ ನನ್ನ ಹೆಸರನ್ನು ಹೇಳ್ತಿಯಾ. ನಾನು ಯಾರಿಗೂ ಉರಿಸುವುದಕ್ಕೆ ಹೇಳಲ್ಲ ಅಂತ ಸೋನು ಉತ್ತರ ಕೊಟ್ಟಿದ್ದಾಳೆ.

    ಆಗ ಜಯಶ್ರೀ, ಇರೋದು ಎರಡು ದಿನ ಸೋಮಣ್ಣ ಅವರೇ. ಇಷ್ಟು ದಿನ ಜೊತೆ ಜೊತೆಯಾಗಿ ಇದ್ದು ಬಿಟ್ಟು. ಎರಡು ದಿನಕ್ಕೆ ಏನೋ ಚೇಂಜ್ ಮಾಡುವುದಕ್ಕೆ ಹೊರಟಿದ್ದೀಯಾ ಅಂತ ರಾಕಿಯನ್ನು ಕೇಳಿದ್ದಾಳೆ.

    ಆಗ ಮತ್ತೆ ಸೋನು ಮಾತನಾಡಿ, ನಾನು ಅಲ್ಲಿ ಇಲ್ಲ ಎಂದಾಗ ನನ್ನ ಹೆಸರನ್ನು ಕರಿಬೇಡ ಅಂತ ಎಷ್ಟು ಸಲ ಹೇಳಿದ್ದೀನಿ. ಸೈಲೆಂಟ್ ಆಗಿ ಇರುವುದಕ್ಕೆ ಏನ್ ತಗೋಳ್ತಿಯಾ. ನೀನ್ ಯಾಕೆ ನನ್ನ ಕೇಳಿದೆ. ನಿಂಗೇನ್ ಜಲಸ್ ಫೀಲ್ ಹಾ ಅಂತ. ನಾನು ಹೇಳುವುದಕ್ಕೆ ಬಂದಿದ್ನಾ ನಂಗೆ ಉರಿತಿದೆ ಅಂತ. ಕಿಸ್ ಮಾಡೋದು ಏನೇ ಮಾಡಿದರೂ ಅದು ಒಂದು ಫೀಲಿಂಗ್ ಸುಮ್ಮ ಸುಮ್ಮನೆ ಮಾಡುವುದಕ್ಕೆ ಬರಲ್ಲ. ಅವರಿಗೂ ಬರಲ್ಲ ಬಿಡು ಅಂತ ಹೇಳಿದ್ದಾಳೆ. ಆಗ ಜಯಶ್ರೀ ಫುಲ್ ವಿವರಣೆ ನೀಡಿದ್ದಾಳೆ. ಆ ಬಳಿಕ ಅಲ್ಲಿಂದ ಸೋನು ಎದ್ದು ಹೋಗಿ, ಸೋಮಣ್ಣನ ಜೊತೆಗೆ ಬಾಲ್ ಆಟ ಆಡುವಾಗ ಇದೇ ಟಾಪಿಕ್ ಜಯಶ್ರೀ ಮಾತನಾಡುತ್ತಾ ಕುಳಿತಿದ್ದಾಳೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    Live Tv
    [brid partner=56869869 player=32851 video=960834 autoplay=true]

  • ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?

    ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?

    ಚೈತ್ರಾ ಹೋದ ಮೇಲೆ ಜಯಶ್ರೀಯ ಒಂಟಿತನಕ್ಕೆ ಒಂದಷ್ಟು ಜೊತೆಯಾಗಿದ್ದು ಸೋನು. ಈಗ ಜಯಶ್ರೀ (Jayashree) ಹೆಚ್ಚು ಸಮಯ ಸೋನು (Sonu Srinivas Gowda) ಜೊತೆಗೆ ಕಳೆಯುತ್ತಾಳೆ. ಆದರೆ ಸೋನು ಇಲ್ಲದೆ ಇರುವಂತ ಸಮಯ ನೋಡಿ ಸೋನು ಬಗ್ಗೆ ನೆಗೆಟಿವ್ ಆಗಿಯೇ ಮಾತನಾಡುವುದು ಹೆಚ್ಚು. ಸೋನು ಮುಂದೆ ಇದ್ದಾಗ ಉರಿದುಂಬಿಸಿ, ನಾನು ನಿನ್ನ ವೆಲ್ ವಿಷರ್ ಅನ್ನೋ ರೀತಿ ಬಿಂಬಿಸಿಕೊಳ್ಳುತ್ತಾಳೆ ಜಯಶ್ರೀ.

    ಸೋಮಣ್ಣ ಬಟ್ಟೆ ಮಡಿಚಿಡುತ್ತಿದ್ದರು. ಜಯಶ್ರೀ ಕುಳಿತು ಮಾತನಾಡುತ್ತಿದ್ದಳು. ಆಗ ಬಂದ ಸೋನು, ಸೋಮಣ್ಣ ನನ್ನ ವಾಟರ್ ಬಾಟೆಲ್ ನೋಡಿದ್ರಾ ಅಂದ್ಲು. ಅದಕ್ಕೆ ಸೋಮಣ್ಣ ಸ್ವಲ್ಪ ಕೋಪಗೊಂಡವರಂತೆ ಉತ್ತರಿಸಿದರು. ಬಳಿಕ ಕೋಪ ಮಾಡಿಕೊಂಡ ಸೋನು ಅಲ್ಲಿಂದ ಕಾಲ್ಕಿತ್ತಳು. ಆಮೇಲೆ ಜಯಶ್ರೀ, ಸೋನು ಮುಂದಿನ ಭವಿಷ್ಯದ ದಿನಗಳನ್ನು ಸೋಮಣ್ಣನ ಮುಂದೆ ತೆರೆದಿಟ್ಟಿದ್ದಾಳೆ. ಇದನ್ನೂ ಓದಿ: ಸೋನು-ರಾಕೇಶ್ ನಡುವೆ ಜಯಶ್ರೀ ಆಟ!

    ಸೋನು ಬಗ್ಗೆ ಮಾತು ಮುಂದುವರಿಸಿದ ಜಯಶ್ರೀ, ಒಳಗಡೆ ಇರುವವರಿಗೆ ಯಾರಿಗೂ ಇಷ್ಟವಾಗುವುದಿಲ್ಲ. ಹೊರಗಡೆ ನೋಡುಗರಿಗೆ ಮಜಾ ಕೊಡುತ್ತಾಳೆ ಅಷ್ಟೇ. ಮೊನ್ನೆ ಅವಳು ಟಾಪ್ ತ್ರಿ ತೆಗೆದುಕೊಂಡಾಗಲೂ ನಾನು ನನ್ನ ಒಪಿನಿಯನ್ ಹೇಳುತ್ತಾ ಇಲ್ಲ ಇಲ್ಲಿ. ಜಯಶ್ರೀಗೆ ಆ ಕ್ಯಾರೆಕ್ಟರ್ ನಿಜವಾಗಲೂ ಇಷ್ಟವಾಗಲ್ಲ. ನೋಡುವ ಜನರಿಗೂ ಅದು ಇಷ್ಟವಾಗುತ್ತೆ ಅಂತ ಹೇಳಲ್ಲ. ಮಜಾ ಕೊಡುತ್ತೆ. ಅವಳು ಆಡುವ ಮಾತು, ಬಿಹೇವಿಯರ್, ಏನೇನೋ ಮಾತನಾಡುವುದು ಮಜಾ ಕೊಡುತ್ತದೆ. ಸೀಸನ್ 9ಗೆ ಬರುವವರಿಗೆ ಏನಾದರೂ ಇವಳು ಬರ್ತಿದ್ದಾಳೆ ಅಂತ ಗೊತ್ತಾದರೆ, ಇವಳನ್ನು ಎಷ್ಟರಲ್ಲಿ ಬೇಕೋ ಅಷ್ಟರಲ್ಲಿ ಇಟ್ಟುಕೊಳ್ಳುತ್ತಾರೆ.

    ನಮಗೆಲ್ಲಾ ಹೇಗೆ ಆಗಿ ಬಿಟ್ಟಿದೆ ಅಂದ್ರೆ ಇಲ್ಲಿ, ಅಯ್ಯೋ ಅವಳ ಹತ್ರ ಮಾತನಾಡಿ ನಮ್ಮ ಇದನ್ನು ನಾವೇ ಯಾಕೆ ಹಾಳು ಮಾಡಿಕೊಳ್ಳಬೇಕು ಅಂತ ಸುಮ್ಮನೆ ಇರುತ್ತೀವಿ. ರಾಕಿ, ನನ್ನ ಮೊನ್ನೆ ಕೇಳುತ್ತಾ ಇದ್ದ. ನೀನು ಅಷ್ಟೊಂದು ರೇಗುತ್ತೀಯಾ, ಕೋಪ ಮಾಡಿಕೊಳ್ಳುತ್ತೀಯಾ. ಆದರೆ ಸೋನುನಾ ಅದೇಗೆ ಸಹಿಸಿಕೊಂಡು ಇದ್ದೀಯಾ ಅಂತ ಕೇಳಿದ. ನಾನು ಎಲ್ಲರಿಗೂ ಇಲ್ಲಿ ಮಾತನಾಡುತ್ತೀನಿ. ಅವಳ ವಿಚಾರವಾಗಿ ನಾನು ಯಾಕೆ ಮಾತನಾಡುವುದಿಲ್ಲ ಎಂದರೆ ಅವಳ ಮಾತು ನನಗೆ ಲೆಕ್ಕಕ್ಕೆ ಇಲ್ಲ. ನಿಜ ಜೀವನದಲ್ಲಿ ಅವಳ ಕ್ಯಾರೆಕ್ಟರ್ ಅನ್ನು ಸಹಿಸಿಕೊಂಡು ಯಾವನು ಇರಲ್ಲ ಎಂದಾಗ ಹು ಹು ಅಂತಿದ್ದ ಸೋಮಣ್ಣ ಕೂಡ ಮಾತು ಜೋಡಿಸಿದ್ದಾರೆ. ಚಾನ್ಸೆ ಇಲ್ಲ. ಬದುಕಿಗೂ ಇದೆಲ್ಲಾ ಯೂಸ್ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಸೋನು ಹಿಂದೆ ಸಾವಿರ ಹುಡುಗರು ಇದ್ದಾರಂತೆ – ಹಿಂದೆ ನಿಂತಿದ್ದ ಗುರೂಜಿಗೆ ನಾನೊಬ್ಬನೆ ಅಲ್ವಾ ಅನ್ನೋ ಅನುಮಾನ!

    ಮಾತು ಮುಂದುವರೆಸಿದ ಜಯಶ್ರೀ, ಹುಹು ಈ ಥರ ಇದ್ದರೆ ಅವಳನ್ನು ಎಲ್ಲರು ಉಗಿದು ಉಪ್ಪಿನಕಾಯಿ ಹಾಕಿ, ದೂರ ಇಡುತ್ತಾರೆ ಬಿಟ್ಟರೆ, ಯಾರು ಅವಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ. ಸೋಮಣ್ಣ ಅವರೇ ನಾನೇ ಬರೆದುಕೊಡ್ತೀನಿ, ಹೊರಗೆ ಹೋದ ಮೇಲೆ ನೋಡಿ. ಈ ಸೀಸನ್ 9 ಕಂಟಿನ್ಯೂ ಆಗಬಹುದು ಆಗದೆಯೂ ಇರಬಹುದು. ಆದರೆ ಹೊರಗೆ ಹೋದ ಮೇಲೆ ಅವಳನ್ನ ಯಾರು ಏನು ಎಂಟರ್ಟೈನ್ ಮಾಡಿಕೊಂಡು, ಕಾಫಿಗೆ ಕರೆದುಕೊಂಡು, ಮನೆ ಫಂಕ್ಷನ್‌ಗೆ ಕರೆದುಕೊಂಡು ಆ ರೀತಿಯೆಲ್ಲಾ ಯಾರು ಅವಳನ್ನು ಇಷ್ಟ ಪಡಲ್ಲ ನನ್ನ ಪ್ರಕಾರ ಎಂದಿದ್ದಾಳೆ. ಆಗ ಸೋಮಣ್ಣ, ಹೌದು ಅವಳ ರೀತಿಯ ತಿಕ್ಕಲುಗಳೇ ಅವಳನ್ನು ಇಷ್ಟಪಡಬೇಕು ಎಂದಿದ್ದಾರೆ.

    ಆಗ ಜಯಶ್ರೀ, ಇಲ್ಲಿ ನಾವೆಲ್ಲಾ ಅವಳನ್ನು ಮಾತನಾಡಿಸಬಹುದು. ಆದರೆ ಹೊರಗಡೆ ಹೋದ್ರೆ ಯಾರೂ ಅವಳನ್ನು ಮಾತನಾಡಿಸುವುದಿಲ್ಲ. ಅವಳಿಗೆ ಲೀಸ್ಟ್ ಇಂಪಾರ್ಟೆಂಟ್ ಇರುತ್ತೆ ಎಂದು ಸೋನು ಬಗ್ಗೆ ಮಾತನಾಡಿದ್ದಾಳೆ. ರಾಕಿ ಬಳಿಯೂ ಹೋಗಿ ಸೋನು ನಿನ್ನ ಕೇರ್ ಟೇಕರ್ ಅಂದ್ಲು, ಫ್ರೆಂಡ್ ಆಗಿ ಜಲಸಿ ಇದೆ ಅಂದ್ಲು ಅಂತ ನಂಬಿ ಹೇಳಿದ್ದ ಮಾತನ್ನೆಲ್ಲಾ ಅವನ ಬಳಿ ಹೇಳುತ್ತಾ ಇದ್ದಳು. ಇದನ್ನೂ ಓದಿ: ಸೆ.25ರಿಂದ ಬರಲಿದೆ ಬಿಗ್ ಬಾಸ್ 9ನೇ ಸೀಸನ್

    Live Tv
    [brid partner=56869869 player=32851 video=960834 autoplay=true]

  • ಕಳಪೆ ಎಂದ ರಾಕೇಶ್ ಮೇಲೆ ಸೋನುಗೆ ಕೆಂಡದಷ್ಟು ಕೋಪ

    ಕಳಪೆ ಎಂದ ರಾಕೇಶ್ ಮೇಲೆ ಸೋನುಗೆ ಕೆಂಡದಷ್ಟು ಕೋಪ

    ವಾರದ ಕ್ಯಾಪ್ಟನ್ ಆಗಬೇಕು ಎಂದು ಸ್ಪರ್ಧೆಗೆ ಇಳಿದಿದ್ದ ಸೋನು ಅಕಸ್ಮಾತ್ ಆಗಿ ನಿರೀಕ್ಷೆಯನ್ನೇ ಮಾಡದೆ ಕಳಪೆ ಬೋರ್ಡ್ ಹೊತ್ತು ಜೈಲು ಪಾಲಾಗಿದ್ದಾಳೆ. ಯಾರು ಏನೇ ಹೇಳಲಿ ಯಾವುದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲ. ತಾನು ಆಡುತ್ತಿದ್ದ ಮಾತಿಗೆ ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆಗಲೂ ತನಗೆ ಏನು ಅನ್ನಿಸುತ್ತೆ ಅದನ್ನ ಮಾತನಾಡಿ, ಅಲ್ಲಿಗೆ ಅದನ್ನೆಲ್ಲ ಮರೆತು ಮತ್ತೆ ನೆಕ್ಸ್ಟ್ ಮೂಮೆಂಟೇ ಅವಳದ್ದೆ ಲೋಕದಲ್ಲಿ ಆಕ್ಟೀವ್ ಆಗಿದ್ದಂತಹ ಹುಡುಗಿ ಎಂದರೆ ಸೋನು. ಆದರೆ ಈ ಬಾರಿ ಸೋನು ಉಳಿಯುವುದು ಕಷ್ಟ ಎನ್ನಲಾಗುತ್ತಿದೆ. ಯಾಕೆಂದರೆ ಕಳಪೆ ಬೋರ್ಡ್ ಹೊತ್ತ ಕೂಡಲೇ ತುಂಬಾ ವೀಕ್ ಆದವಳಂತೆ ಭಾಸವಾಗುತ್ತಿದ್ದಾಳೆ.

    ತನಗೆ ಯಾರಾದರೂ ಕೆಲಸ ಮಾಡು ಎಂದಾಗ, ನಾನೇನು ಕೆಲಸ ಮಾಡಲು ಬಂದಿದ್ದೀನಾ ಅಂತ ಪ್ರತಿ ಬಾರಿಯೂ ಪ್ರಶ್ನಿಸುತ್ತಿದ್ದಳು. ಇದಕ್ಕೆ ಮನೆಮಂದಿಯೆಲ್ಲಾ ಸೇರಿ ಬೆಸ್ಟ್ ಅಂಡ್ ವರ್ಸ್ಟ್ ಪರ್ಫಾಮರ್ ಅನ್ನು ಆಯ್ಕೆ ಮಾಡಬೇಕಾದ ಸಂದರ್ಭ ತಕ್ಕ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಒಂದಷ್ಟು ಮಂದಿ ಜಯಶ್ರೀಗೆ ಬೆಸ್ಟ್ ಎಂದು ಹೇಳಿದರು, ಇನ್ನೊಂದಷ್ಟು ಮಂದಿ ಜಯಶ್ರೀಯನ್ನೇ ವರ್ಸ್ಟ್ ಎಂದರು. ಆದರೂ ಜಯಶ್ರೀ ಜೈಲಿನಿಂದ ಬಂದ ಮೇಲಿಂದ ಹೇಗಾದರೂ ಗೆಲ್ಲಲೇಬೇಕು ಎಂಬ ಹಠ ಹೊತ್ತು ಇವತ್ತು ಬೆಸ್ಟ್ ಎಂಬ ಅವಾರ್ಡ್ ತೆಗೆದುಕೊಂಡಿದ್ದಾಳೆ. ಅದರಂತೆ ಸೋನುಳನ್ನು ಹಲವು ಜನ ಕಳಪೆಗೆ ಆಯ್ಕೆ ಮಾಡಿದರು. ಕೊನೆಗೆ ಸೋನು ಜೈಲು ಸೇರಬೇಕಾಗಿ ಬಂತು.

    ಸೋನುಗೆ ಯಾರೇ ಕಳಪೆ ಅಂತ ಹೇಳಿದ್ದರೂ, ಜೈಲಿಗೆ ಹಾಕಿದ್ದರೂ ಇಷ್ಟು ನೋವು ಆಗುತ್ತಿರಲಿಲ್ಲ ಎಂದು ಕಾಣುತ್ತದೆ. ಆದರೆ ರಾಕೇಶ್ ಅವಳ ಹೆಸರನ್ನು ತೆಗೆದುಕೊಂಡಾಗಲೇ ಆಕೆಯ ಮನಸ್ಸು ಭಾರವಾದಂತೆ ಕಾಣುತ್ತಿತ್ತು. ಜೈಲಿಗೆ ಹೋಗುವ ಸಂದರ್ಭ ದಯವಿಟ್ಟು ಎಲ್ಲರೂ ಇಲ್ಲಿಂದ ಹೋಗಿ ಬಿಡಿ ಎಂದು ರಿಕ್ವೆಸ್ಟ್ ಮಾಡಿದ್ದಳು. ಸ್ವಲ್ಪ ಸಮಯದ ಬಳಿಕ ರಾಕೇಶ್ ಬಂದು ಸಮಾಧಾನ ಮಾಡಲು ಯತ್ನಿಸಿದ. ಆಯ್ತು ಬೈಯ್ಯಬೇಕು ಎನಿಸಿದರೆ ನನ್ನನ್ನು ಬೈದು ಬಿಡು ಎಂದ. ಆದರೆ ಸೋನುಗೆ ರಾಕೇಶ್ ಮುಖವನ್ನು ನೋಡುವುದಕ್ಕೆ ಇಷ್ಟವಿರಲಿಲ್ಲ. ಸುಮ್ಮನೆ ಹೋಗಿಬಿಡು. ನಾನು ಕಿರುಚಿಕೊಳ್ಳುವಂತೆ ಮಾಡಬೇಡ ಎಂದಳು. ಇದನ್ನೂ ಓದಿ: ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ರಾಕೇಶ್ ಅಲ್ಲಿಂದ ವಾಪಾಸ್ ಆದವ ಗುರೂಜಿ ಬಳಿ ಕುಳಿತು ಆ ಬಗ್ಗೆ ಬೇಸರ ಹೊರಹಾಕಿದ. ತುಂಬಾ ಒಳ್ಳೆ ಫ್ರೆಂಡು ಅಂದುಕೊಂಡಿದ್ದವನೇ ಕಳಪೆ ಕೊಟ್ಟರೆ ಯಾರಿಗೆ ತಾನೇ ಹರ್ಟ್ ಆಗಲ್ಲ ಹೇಳಿ ಎಂದಿದ್ದ. ಎಲ್ಲವೂ ಒಂದು ತಹಬದಿಗೆ ಬಂದ ಮೇಲೆ ಚೈತ್ರಾ ಸಮಾಧಾನ ಮಾಡಲು ಹೋದಳು. ಅಷ್ಟರಲ್ಲಾಗಲೇ ಸೋನು ಕಣ್ಣಲ್ಲಿ ಕಣ್ಣೀರ ಕೋಡಿ ತುಂಬಿತ್ತು. ಚೈತ್ರಾ ಸಮಾಧಾನದ ಮಾತುಗಳನ್ನು ಆಡುತ್ತಿದ್ದಂತೆ ಜೋರು ಸುರಿಯಿತು. ಅಲ್ಲ ಮನೆ ಕೆಲಸ ಮಾಡಲಿಲ್ಲ ಅಂತ ಕಳಪೆ ಕೊಡುತ್ತಾರಲ್ಲ. ಅದು ನಂಬಿದ್ದವರೆ ಇಂತಹ ದ್ರೋಹ ಮಾಡುತ್ತಾರಲ್ಲ. ನಾವೇನು ಮನೆ ಕೆಲಸಕ್ಕೆ ಬಂದಿದ್ದೀವಾ? ಯಾವನ್ ಹೇಳಿದ್ದು ಹಾಗೇ. ಇವತ್ತು ಯಾರೆಲ್ಲಾ ಕಳಪೆ ಎಂದರೋ, ಯಾರೂ ಸರಿ ಇಲ್ಲ. ಎಲ್ಲಾ ನಕಲಿ ಜನರೇ ಎಂದಿದ್ದಾಳೆ.

    ಈಗಾಗಲೇ ಸೋನುಗೆ ರಾಕೇಶ್ ಮೇಲೆ ಕೆಂಡದಷ್ಟು ಕೋಪ ಬಂದಿದೆ. ಮತ್ತೆ ಕಳಪೆ ಎಂದಿದ್ದಾರೆ. ನೆಕ್ಸ್ಟ್ ಪ್ರೂವ್ ಮಾಡೋಣಾ ಎಂಬ ಹಠ ಅವಳಲ್ಲಿ ಹುಟ್ಟಿಕೊಂಡಂತೆ ಇಲ್ಲ. ಕಳಪೆ ಎಂದುಬಿಟ್ಟರಲ್ಲ ಎಂಬ ನೋವೇ ಎದ್ದು ಕಾಣುತ್ತಿದೆ. ಇಷ್ಟು ದಿನ ರಾಕೇಶ್‌ಗೆ ಹರ್ಟ್ ಆಗುವಂತೆ ಮಾತನಾಡಿದರು. ರಾಕಿ ಅದ್ಯಾವುದನ್ನು ಮನಸ್ಸಲ್ಲಿ ಇಟ್ಟುಕೊಂಡಿರಲಿಲ್ಲ. ಮತ್ತೆ ಮತ್ತೆ ಸರಿ ಮಾಡಿಕೊಂಡು ಮಾತನಾಡುತ್ತಿದ್ದ. ಆದರೆ ಸೋನು ಆ ರೀತಿ ಅಲ್ಲ. ಇದನ್ನೇ ಸ್ಟ್ರಾಂಗ್ ಆಗಿ ಹಿಡಿದುಕೊಳ್ಳುತ್ತಾಳೆ ಅನ್ನಿಸುತ್ತೆ. ನನ್ನನ್ನೇ ಕಳಪೆ ಎಂದವನು ನನಗೆ ಯಾವ ಸೀಮೆ ಫ್ರೆಂಡ್ ಅಂತ ಈಗಾಗಲೇ ಹೇಳಿದ್ದಾಳೆ. ಹೀಗಾಗಿ ಜೈಲಿನಿಂದ ಬಂದ ಮೇಲೆ ರಾಕಿನ ಕ್ಷಮಿಸೋದು ಸುಳ್ಳು ಎನಿಸುತ್ತಿದೆ. ಇದನ್ನೂ ಓದಿ: ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

    Live Tv
    [brid partner=56869869 player=32851 video=960834 autoplay=true]

  • ರಾಕಿ ಯಾರ ಜೊತೆಗಾದ್ರೂ ಮಾತಾಡ್ಲಿ ಚೈತ್ರಾ ಜೊತೆ ಬಿಟ್ಟು – ಯಾಕೆಂದ್ರೆ ಅದು ವಯಸ್ಸಿನ ಮ್ಯಾಟರ್ ಅಂತೆ ಸೋನುಗೆ..!

    ರಾಕಿ ಯಾರ ಜೊತೆಗಾದ್ರೂ ಮಾತಾಡ್ಲಿ ಚೈತ್ರಾ ಜೊತೆ ಬಿಟ್ಟು – ಯಾಕೆಂದ್ರೆ ಅದು ವಯಸ್ಸಿನ ಮ್ಯಾಟರ್ ಅಂತೆ ಸೋನುಗೆ..!

    ಬಿಗ್‍ಬಾಸ್ ಮನೆಯಲ್ಲಿ ಹಿಂಗೆ ಕಿತ್ತಾಡಿ ಹಂಗೆ ಒಂದಾಗುವವರು ಯಾರು ಎಂದರೆ ಅದು ಸೋನು ಮತ್ತು ರಾಕೇಶ್ ಅಂತಾನೇ ಹೇಳಬಹುದು. ಸೋನು ಬಾಯಿ ಸರಿ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೊಂದು ಸಲ ಬೀಪ್ ಸೌಂಡ್ ಶಬ್ಧಗಳೇ ಹೆಚ್ಚು ಬರುತ್ತವೆ. ಇನ್ನು ಕೆಲವೊಂದು ಸಲ ಮನಸ್ಸಿಗೆ ನಾಟುವಂತ ಶಬ್ಧಗಳು ಬರುತ್ತವೆ. ಇತ್ತೀಚೆಗೆ ಇದು ರಾಕಿಯನ್ನು ಬಿಟ್ಟಿಲ್ಲ. ಕಳೆದ ವಾರ ರಾಕಿ ನಾನೇನು ನಿಮ್ಮ ಮನೆ ಆಳ. ಇದೆಲ್ಲ ನನ್ನತ್ರ ಇಟ್ಟುಕೊಳ್ಳಬೇಡ ಅಂತ ಸೋನು ಮೇಲೆ ಎರಡು ಸಲ ರೇಗಿದ್ದರು. ಆಗ ನೋಡಿದವರು ಓ ಸೋನು ಅಂಡ್ ರಾಕಿ ಫ್ರೆಂಡ್ಶಿಪ್ ಇಲ್ಲಿಗೆ ಕಟ್ ಅಂತ ಎಂದುಕೊಂಡಿದ್ದರು. ಆಗಲೂ ಏನು ಆಗಲಿಲ್ಲ. ಇಬ್ಬರು ಮಾಮೂಲಿ ದೋಸ್ತರಾಗಿಯೇ ಮುಂದುವರೆದಿದ್ದರು.

    ಇತ್ತೀಚೆಗೆ ಅಕ್ಷತಾ ಮತ್ತು ರಾಕಿ ಇಬ್ಬರು ಇದ್ದಾಗಲು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಸೋನು ಹೇಳಿದ್ದರು. ಆಗ ದೊಡ್ಡ ಮನಸ್ತಾಪವೇ ಬಂದಿತ್ತು. ರಾಕಿ, ಅಕ್ಷತಾಗೆ ಸಮಾಧಾನ ಮಾಡಿದ್ದರು. ಆಗಲೂ ಇನ್ನು ಮುಂದೆ ಇವರಿಬ್ಬರು ಅಷ್ಟೇ ಅಂದುಕೊಂಡಿದ್ದರು. ಆದರೆ ಅದೇನೋ ಗೊತ್ತಿಲ್ಲ. ಅದೆಷ್ಟೇ ಮಾತು ಕತೆಗಳು ನಡೆದರೂ ಸೋನು ಹಾಗೂ ರಾಕಿಯನ್ನು ದೂರ ಮಾಡಲು ಆಗುತ್ತಿಲ್ಲ. ಇಬ್ಬರು ಮತ್ತೆ ಮತ್ತೆ ಬರೀ ಒಂದಾಗುವುದಲ್ಲ, ಕ್ಲೋಸ್ ಕೂಡ ಆಗುತ್ತಿದ್ದಾರೆ. ಈ ಮಧ್ಯೆ ರಾಕಿಗೆ ಸೋನು ಯಾಕೆ ಚೈತ್ರಾ ಬಳಿ ಮಾತನಾಡಿದರೆ ಸಹಿಸುವುದಿಲ್ಲ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಈ ಪ್ರಶ್ನೆ ಈ ಥಿಂಕ್ ರಾಕಿಗೆ ಇಂದು ನಿನ್ನೆ ಬಂದಿರುವ ಪ್ರಶ್ನೆಯಲ್ಲ. ಸುಮಾರು ದಿನದ ಪ್ರಶ್ನೆ ಈಗ ಉತ್ತರ ಕಂಡುಕೊಳ್ಳಲು ಯೋಚಿಸಿದ್ದಾರೆ ಎನಿಸುತ್ತದೆ. ಬೆಡ್ ಮೇಲೆ ರಾಕಿ ಮಲಗಿದ್ದರು. ರಾಕಿ ಮೇಲೆ ಕುಳಿತು ಸೋನು ಮಸಾಜ್ ಮಾಡುತ್ತಾ ಇದ್ದರು. ಆಗ ನಿಧಾನವಾಗಿ ರಾಕಿ, ಇಲ್ಲಿ ಯಾರು ಇಲ್ಲ ಅಲ್ವಾ ಅಂತ ಕನ್ಫರ್ಮ್ ಮಾಡಿಕೊಂಡಿದ್ದಾರೆ. ಇಲ್ಲ ಎಂದಾಗ. ನಂಗೆ ಒಂದು ಸತ್ಯ ಹೇಳು ನಾನು ಯಾರಿಗೂ ಹೇಳಲ್ಲ. ನಾನು ಯಾರ ಜೊತೆ ಮಾತನಾಡಿದರು ನೀನು ಏನು ಅನ್ನಲ್ಲ. ಆದರೆ ಚೈತ್ರಾ ಅಕ್ಕ ಜೊತೆ ಮಾತನಾಡಿದರೆ ನಿನಗೆ ಇಷ್ಟವಾಗಲ್ಲ ಯಾಕೆ ಎಂದು ಕೇಳಿದ್ದಾರೆ. ಅದಕ್ಕೆ ಸೋನು, ಅದೇ ನನಗೂ ಗೊತ್ತಾಗುತ್ತಿಲ್ಲ. ಅವತ್ತೆ ಕೂತು ನಾನು ಕೂಡ ಥಿಂಕ್ ಮಾಡಿದ್ದೇನೆ. ಯಾರೇ ಆಗಲಿ ಅವರು ವಯಸ್ಸಿನ ತಕ್ಕಂತೆ ನಡೆದುಕೊಳ್ಳಬೇಕು. ನೀನು ಇನ್ನು ಯಂಗ್ ಹುಡುಗ. ಬೇರೆ ಹುಡುಗಿಯರ ಜೊತೆ ಇರುವುದು ಕಾಮನ್. ಹಾಗಂತ ಅವರು ಹಂಗೆ ಇರಬೇಕು ಅಂದರೆ ಎಂದು ಈ ಪ್ರಶ್ನೆ ಬೇಡ ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಆದರೆ ರಾಕಿಗೆ ಅದನ್ನು ತಿಳಿಯುವ ಕುತೂಹಲ. ಪ್ಲೀಸ್ ಪ್ಲೀಸ್ ಹೇಳು. ನನ್ನ ಬಗ್ಗೆ ಅವರು ಹೊರಗಡೆ ಏನೋ ಅಂದಿರುತ್ತಾರೆ. ಅದಕ್ಕೆ ನೀನು ಈ ಥರ ನಡೆದುಕೊಳ್ಳುತ್ತಾ ಇದ್ದೀಯಾ ಎಂದಾಗ, ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ, ಎಲ್ಲರ ಜೊತೆಗೂ ಚೆನ್ನಾಗಿಯೇ ಇರುತ್ತಾರೆ. ಅವತ್ತೇ ನೋಡು ಸ್ಲಿಪ್ಪರ್ ಕೊಡುವ ಅವಶ್ಯಕತೆಯೇ ಇರಲಿಲ್ಲ. ಅಚ್ಚಚ್ಚೋ ನನ್ನ ಮುದ್ದು, ನನ್ನ ಗುಂಡು, ನೀನ್ ನನ್ನ ಮಕ್ಕಳ ಥರ ಅಂತೆಲ್ಲಾ ಅಂದ್ರು ಉರಿದು ಹೋಗಿಬಿಟ್ಟಿತು. ಈಗ ಅದೇ ಸೈಜಿನ ಹವಾಯ್ ಚಪ್ಪಲಿ ತೆಗೆದುಕೊಂಡು ಬಂದು ವಾಶ್ ರೂಮಿಗೆ ಯೂಸ್ ಮಾಡುತ್ತೇನೆ ನೋಡು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೋನು ಮುಖ ನೋಡಿ ಪ್ರಜ್ಞೆತಪ್ಪಿ ಬಿದ್ದಿದ್ರಂತೆ ಆರ್ಯವರ್ಧನ್!

    ಸೋನು ಮುಖ ನೋಡಿ ಪ್ರಜ್ಞೆತಪ್ಪಿ ಬಿದ್ದಿದ್ರಂತೆ ಆರ್ಯವರ್ಧನ್!

    ಬಿಗ್ ಬಾಸ್ ಮನೆಯಲ್ಲಿ ಸೋನು ಹಾಗೂ ಅಕ್ಷತಾ ಮಾಡಿದ ಪ್ರ್ಯಾಂಕ್ ಬಗ್ಗೆ ಸೂಪರ್ ಸಂಡೇ ವಿತ್ ಸುದೀಪ ವೇದಿಕೆಯಲ್ಲಿ ಚರ್ಚೆಯಾಗಿತ್ತು. ದೆವ್ವದಂತೆ ಮೇಕಪ್ ಮಾಡ್ಕೊಂಡು ಬಂದಿದ್ದ ಸೋನು ನೋಡಿ ಆರ್ಯವರ್ಧನ್ ಅವರು ತಲೆ ತಿರುಗಿ ಬಿದ್ದುಬಿಟ್ಟಿದ್ದರು. ಆದರೆ ಮನೆಮಂದಿಯೆಲ್ಲಾ ಅವರು ಆಕ್ಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದರಂತೆ. ಆದರೆ ಅಂದು ನಿಜವಾಗಲೂ ಅವರ ಜೀವಕ್ಕೆ ಅಪಾಯ ಬಂದೊದಗಿತ್ತು ಎಂಬುದು ಬಳಿಕ ಗೊತ್ತಾಗಿದೆ.

    ಹೌದು, ಅಕ್ಷತಾ ಮತ್ತು ಸೋನು ಗುರೂಜಿಯನ್ನು ಪ್ರ‍್ಯಾಂಕ್ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದರು. ಅದರಂತೆ ಸೋನು ದೆವ್ವದಂತೆ ಮೇಕಪ್ ಕೂಡ ಮಾಡಿಕೊಂಡಳು. ಇದಕ್ಕೂ ಮುನ್ನ ರಾಕೇಶ್ ಹಾಗೂ ರೂಪೇಶ್ ಗುರೂಜಿ ಬಳಿ ಹೋಗಿ ಈ ರೀತಿ ನಿಮಗೆ ಪ್ರ್ಯಾಂಕ್ ಮಾಡುತ್ತಾರೆ, ಅವರು ಬಂದಾಕ್ಷಣ ನೀವೂ ಪ್ರಜ್ಞೆ ತಪ್ಪಿ ಬಿದ್ದು ಬಿಡಿ ಎಂದು ಆರ್ಯವರ್ಧನ್ ಅವರಿಗೆ ಹೇಳಿಕೊಟ್ಟಿದ್ದರು. ಎಲ್ಲವೂ ಹೇಳಿದಂತೆಯೇ ನಡೆಯಿತು. ಗುರೂಜಿ ಬಾತ್ ರೂಮಿನಿಂದ ಹೊರಗೆ ಬಂದಾಗ ಸೋನು ಹೆದರಿಸಿದಳು. ಗುರೂಜಿ ತಕ್ಷಣ ಬಿದ್ದು ಬಿಟ್ಟರು. ಎಷ್ಟೇ ಎಚ್ಚರ ಮಾಡಿದರೂ ಎಚ್ಚರವಾಗಲೇ ಇಲ್ಲ. ರಾಕೇಶ್ ಇದು ಸೂಪರ್ ಪರ್ಫಾಮೆನ್ಸ್ ಎಂದುಕೊಂಡರು. ಆದರೆ ರೂಪೇಶ್‌ಗೆ ಕೊಂಚ ಅನುಮಾನ ಮೂಡಿತ್ತು. ಆಮೇಲೆ ಅವರನ್ನು ಕಷ್ಟಪಟ್ಟು ಹೊರಗೆ ಎಳೆದು ತಂದರು.

    ಇದೆಲ್ಲಾ ನೋಡುತ್ತಿದ್ದಂತೆ ಅಕ್ಷತಾ ಹಾಗೂ ಸೋನು ಗಾಬರಿಗೊಂಡಿದ್ದರು. ಸ್ವಲ್ಪ ಸಮಯವಾದ ಬಳಿಕ ಗುರೂಜಿಗೆ ಪ್ರಜ್ಞೆ ಬಂತು. ಆದರೆ ಜಯಶ್ರೀ ಈ ಮಧ್ಯೆ ಸೋನು ಹಾಗೂ ಅಕ್ಷತಾ ಬಳಿ ಹೋಗಿ, ಇದು ಅವರೆಲ್ಲ ಸೇರಿ ಮಾಡಿದ ಪ್ರ್ಯಾಂಕ್ ಅಂತ ಹೇಳಿದ್ದರು. ಈ ಬಗ್ಗೆ ಸೋನು ಕ್ಲಾರಿಟಿ ತೆಗೆದುಕೊಳ್ಳಲು ಹೋದಾಗ ರಾಕೇಶ್ ಹಾಗೂ ರೂಪೇಶ್ ಬುದ್ಧಿ ಹೇಳಿ ಕಳುಹಿಸಿದ್ದರು. ಇದರ ನಡುವೆ ತಾವು ಮಾಡಿದ ತಪ್ಪನ್ನು ನೆನೆದು ಅಕ್ಷತಾ ಜೋರಾಗಿ ಅತ್ತಿದ್ದು, ರಾಕೇಶ್ ಆಕೆಯನ್ನು ಸಮಾಧಾನ ಮಾಡಿದ್ದ. ಇದನ್ನೂ ಓದಿ: ಮೊದಲ ಜಗಳ, ವಾದ, ಗಾಯ ಆಗಿದ್ದೇ ಉದಯ್‍ಯಿಂದ – ಬೇರೆಯವರ ಇಮೋಷನ್ ನೋಡಿ ಉದಯ್ ಡಿಸ್ಟರ್ಬ್ ಆಗಿದ್ರಾ?

    ಈ ಎಲ್ಲಾ ಡ್ರಾಮಾದ ಬಗ್ಗೆ ಸೂಪರ್ ಸಂಡೇನಲ್ಲಿ ಸುದೀಪ್ ಕೇಳಿದಾಗ ರೂಪೇಶ್ ಮತ್ತು ರಾಕೇಶ್, ನಾವೂ ಕೂಡ ಅದನ್ನು ಆಕ್ಟಿಂಗ್ ಎಂದೇ ಭಾವಿಸಿದ್ದೆವು. ಆದರೆ ಅವರು ನಿಜವಾಗಿಯೂ ಪ್ರಜ್ಞೆ ತಪ್ಪಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಸುದೀಪ್ ಗುರೂಜಿ ಅವರಿಗೆ ಧೈರ್ಯ ತುಂಬಿದ್ದಾರೆ. ಇಲ್ಲಿ ಎರಡೇ ದೆವ್ವ ಇರುವುದು. ಪಿಂಕ್ ಕಲರ್ ಹಾಕಿರುವ ದೆವ್ವ ಹಾಗೂ ಹಸಿರು ಬಣ್ಣ ತೊಟ್ಟಿರುವ ದೆವ್ವ. ನೀವು ಯಾವುದಕ್ಕೂ ಹೆದರಬೇಡಿ. ಇಲ್ಲಿ ನಮ್ಮನ್ನು ಹೊರತುಪಡಿಸಿ 300 ಜನ ನಿಮ್ಮ ಕಾವಲಿಗಿದ್ದಾರೆ ಎಂದು ಧೈರ್ಯ ತುಂಬಿದರು.

    ಆಗ ಗುರೂಜಿ ನನಗೆ ದೆವ್ವ ಎಂದರೆ ತುಂಬಾ ಭಯ. ಸೋನು ಬಂದಾಗ ವಿಕಾರವಾಗಿ ಕಂಡಿತು, ತಕ್ಷಣ ಬಿದ್ದು ಬಿಟ್ಟೆ. ಆಮೇಲೆ ಇವರೆಲ್ಲ ಕರೆದು ತಂದು ಮಲಗಿಸಿದ್ದರು ಎಂದರು. ಮತ್ತೆ ಸುದೀಪ್ ನಿಮಗೆ ಏನು ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಕೂಡ ಎಂದು ಸೋನು ಹಾಗೂ ಅಕ್ಷತಾಗೂ ಬುದ್ಧಿ ಹೇಳಿದ್ದಾರೆ. ಪ್ರ‍್ಯಾಂಕ್ ಮಾಡಿ ಆದರೆ ಈ ರೀತಿಯಾದ ಟಾಪಿಕ್ ಬೇಡ ಎಂದಿದ್ದಾರೆ. ಇದನ್ನೂ ಓದಿ: ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

    Live Tv
    [brid partner=56869869 player=32851 video=960834 autoplay=true]