Tag: ಸೋನಿಯಾ ಕಪೂರ್

  • ಗೆಳತಿಯನ್ನ ರಾತ್ರೋರಾತ್ರಿ ವರಿಸಿದ ಗಾಯಕ ಹಿಮೇಶ್ ರೇಶಮಿಯಾ

    ಗೆಳತಿಯನ್ನ ರಾತ್ರೋರಾತ್ರಿ ವರಿಸಿದ ಗಾಯಕ ಹಿಮೇಶ್ ರೇಶಮಿಯಾ

    ಮುಂಬೈ: ಗಾಯಕ, ನಟ ಮತ್ತು ಕಂಪೋಸರ್ ಹಿಮೇಶ್ ರೇಶಮಿಯಾ ಅವರು ತಮ್ಮ ಗೆಳತಿ ಹಾಗೂ ನಟಿಯಾದ ಸೋನಿಯಾ ಕಪೂರ್ ಅವರನ್ನು ಮದುವೆಯಾಗಿದ್ದಾರೆ.

    ಶುಕ್ರವಾರ ರಾತ್ರಿ ಈ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರೇಶಮಿಯಾ ಅವರ ನಿವಾಸದಲ್ಲಿಯೇ ಹಿರಿಯರ ಮತ್ತು ಕುಟುಂಬದವರ ಸಮ್ಮುಖದಲ್ಲಿ ಹಿಂದು ಸಂಪ್ರದಾಯದಂತೆ ಮದುವೆ ಆಗಿದ್ದಾರೆ.

    ಶನಿವಾರ ಗಾಯಕ ಹಿಮೇಶ್ ರೇಶಮಿಯಾ ತನ್ನ ಮದುವೆಯ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೋಟೋ ಜೊತೆಗೆ “ಸೋನಿಯಾ ಹಾಗೂ ನಾನು ಇಬ್ಬರೂ ಹೊಸ ಜೀವನವನ್ನು ಆರಂಭಿಸಿದ್ದು, ಬಹಳ ಸಂತೋಷವಾಗುತ್ತಿದೆ. ಒಟ್ಟಾಗಿರುವುದು ಆನಂದ” ಎಂದು ಬರೆದುಕೊಂಡಿದ್ದಾರೆ.

    ರೇಶಮಿಯಾ ಅವರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ನಂತರ ಅವರ ಅಭಿಮಾನಿಗಳ ತಂಡ ನವಜೋಡಿಯ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ಶುಭ ಹಾರೈಸಿದ್ದಾರೆ.

    ಮದುವೆಯಲ್ಲಿ ಹಿಮೇಶ್ ಗೋಲ್ಡನ್-ಬೀಜ್ ಶೆರ್ವಾನಿ ಹಾಕಿದ್ದು, ಸೋನಿಯಾ ಅವರು ಪಿಂಕ್ ಲೆಹೆಂಗ್ ಧರಿಸಿದ್ದರು. ಹಿಮೇಶ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಕೋಮಲರನ್ನು ವಿವಾಹವಾಗಿದ್ದರು. ಆದರೆ ಕೆಲ ದಿನಗಳ ಹಿಂದಷ್ಟೇ ಹಿಮೇಶ್ ಪತ್ನಿ ಕೋಮಲ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು.

    ಸೋನಿಯಾ ಕಿರುತೆರೆಯ ನಟಿಯಾಗಿದ್ದು, `ಕೈಸಾ ಯೆ ಪ್ಯಾರ್ ಹೈ’, `ಜುಗ್ನಿ ಚಾಲಿ ಜಲಂಧರ್’, `ಯೆಸ್ ಬಾಸ್’ ಮತ್ತು `ರಿಮಿಕ್ಸ್’ ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

    https://www.instagram.com/p/BiqEOpngP7K/?hl=en&taken-by=realhimesh