Tag: ಸೋನಾಲಿ ಫೋಗಟ್

  • ಸೋನಾಲಿಗೆ ಬಲವಂತವಾಗಿ ಮದ್ಯ ಕುಡಿಸಿದ ವೀಡಿಯೋ ವೈರಲ್

    ಸೋನಾಲಿಗೆ ಬಲವಂತವಾಗಿ ಮದ್ಯ ಕುಡಿಸಿದ ವೀಡಿಯೋ ವೈರಲ್

    ಮುಂಬೈ: ಆಗಸ್ಟ್ 23ರಂದು ನಿಧನರಾದ ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ ಅವರಿಗೆ ಪಬ್‌ನಲ್ಲಿ ಬಲವಂತವಾಗಿ ಮದ್ಯ ಕುಡಿಸುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಗೋವಾದಲ್ಲಿ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಕೆಗೆ ಬಲವಂತವಾಗಿ ಮದ್ಯ ಕುಡಿಸುತ್ತಿರುವ ವ್ಯಕ್ತಿ ಸುಧೀರ್ ಸಾಂಗ್ವಾನ್ ಎಂಬುದು ತಿಳಿದುಬಂದಿದೆ.

    ಈ ನಡುವೆ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಶನಿವಾರ, ಸೋನಾಲಿ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಭೇಟಿಯ ಬಳಿಕ ಬಿಜೆಪಿ ನಾಯಕಿಯ ಸಾವಿನ ಬಗ್ಗೆ ಕೇಂದ್ರೀಯ ತನಿಖಾ ದಳದಿಂದ(ಸಿಬಿಐ) ತನಿಖೆ ನಡೆಸುವಂತೆ ಗೋವಾ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

    ಭೇಟಿಯ ಬಳಿಕ ಮಾತನಾಡಿದ ಸೋನಾಲಿ ಸಹೋದರಿ ರೂಪೇಶ್, ಘಟನೆ ಬಗ್ಗೆ ಸಿಬಿಐ ತನಿಖೆ ನಡೆಯಲಿದೆ ಮತ್ತು ನಮಗೆ ನ್ಯಾಯ ಸಿಗಲಿದೆ ಎಂದು ಸಿಎಂ ಖಟ್ಟರ್ ನಮಗೆ ಭರವಸೆ ನೀಡಿದ್ದಾರೆ. ಇನ್ನು ಎಲ್ಲವೂ ಮುನ್ನೆಲೆಗೆ ಬರಲಿದೆ. ಬಲವಂತವಾಗಿ ಮಾಡಿದ್ದನ್ನು ವೀಡಿಯೋದಲ್ಲಿ ಕಾಣಬಹುದು. ಅವಳ ಫೋನ್ ಆಫ್ ಆದ ಬಳಿಕ ಏನೋ ತಪ್ಪಾಗಿದೆ ಎಂದು ಆಕೆ ನನಗೆ ಹೇಳಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದ ತಾಯಿಯ ಪಕ್ಕದಿಂದ ಮಗು ಕದ್ದು ಓಡಿದ – ಖತರ್ನಾಕ್ ಕಳ್ಳನ ವೀಡಿಯೋ ವೈರಲ್

    ಸೋನಾಲಿ ಫೋಗಟ್ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಗೋವಾದ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಆರೋಪಿಗಳಾದ ಸುಧೀರ್ ಸಾಂಗ್ವಾನ್(ಸೋನಾಲಿ ಆಪ್ತ ಸಹಾಯಕ) ಮತ್ತು ಸುಖ್ವಿಂದರ್ ಸಿಂಗ್(ಸುಧೀರ್ ಸಾಂಗ್ವಾನ್ ಸ್ನೇಹಿತ)ನನ್ನು ಅಂಜುನಾ ಪೊಲೀಸರು ಶನಿವಾರ ಮಪುಸಾ ಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ಮಂಗಳೂರಿನಲ್ಲೂ ರಸ್ತೆಗುಂಡಿಗಳ ದರ್ಬಾರ್- ಹೊಂಡ ಫೋಟೋ ಕಳಿಸಿದ್ರೆ ಸಿಗುತ್ತೆ ಬಹುಮಾನ

    ಆರೋಪಿಗಳು ಸೋನಾಲಿಗೆ ಗೋವಾದ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಬಲವಂತವಾಗಿ ಮಾದಕ ದ್ರವ್ಯ ನೀಡಿರುವುದಾಗಿ ತಪ್ಪೊಪ್ಪಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೋನಾಲಿ ಫೋಗಟ್ ದೇಹದ ಮೇಲೆ ಗಾಯದ ಗುರುತು ಪತ್ತೆ – ಇಬ್ಬರು ಸಹಚರರ ಬಂಧನ

    ಸೋನಾಲಿ ಫೋಗಟ್ ದೇಹದ ಮೇಲೆ ಗಾಯದ ಗುರುತು ಪತ್ತೆ – ಇಬ್ಬರು ಸಹಚರರ ಬಂಧನ

    ನವದೆಹಲಿ: ಇತ್ತಿಚೇಗೆ ಅನುಮಾನಸ್ಪದವಾಗಿ ಸಾವನ್ನಪ್ಪಿದ ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಮೃತ ದೇಹದ ಮೇಲೆ ಹಲವು ಗಾಯಗಳಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಉಲ್ಲೇಖಿಸಿದ ನಂತರ ಗೋವಾ ಪೊಲೀಸರು ಸೋನಾಲಿಯ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

    ಆಗಸ್ಟ್ 22ರಂದು ಫೋಗಟ್ ಗೋವಾಕ್ಕೆ ಆಗಮಿಸಿದಾಗ ಅವರ ಜೊತೆಗಿದ್ದ ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ವಾಸಿ ಆರೋಪಿಗಳೆಂದು ಪೊಲೀಸರು ಬಂಧಿಸಿದ್ದಾರೆ. ಸೋನಾಲಿ ಸಾವಿನ ಕುರಿತಾಗಿ ಆಕೆಯ ಸಹೋದರ ರಿಂಕು ಧಾಕಾ ಅನುಮಾನ ವ್ಯಕ್ತಪಡಿಸಿ ಬುಧವಾರ ಅಂಜುನಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಸೊನಾಲಿ ಫೋಗಟ್ ಆತ್ಮಹತ್ಯೆ ಪ್ರಕರಣ- ಇಬ್ಬರು ಸಹಚರರ ವಿರುದ್ಧ ಕೇಸ್

    ಆ ಬಳಿಕ ಸೋನಾಲಿ ಫೋಗಟ್‌ ಮೃತದೇಹವನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಫೋರೆನ್ಸಿಕ್ ತಜ್ಞರ ಸಮಿತಿಯು ಶವವನ್ನು ಶವಪರೀಕ್ಷೆ ನಡೆಸಿತು. ಈ ವರದಿಯಲ್ಲಿ ಹರಿತವಾದ ಆಯುಧದಿಂದ ಇರಿದಿರುವ ಗಾಯದ ಗುರುತು ಪತ್ತೆಯಾಗಿದೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಹಾಡಹಗಲೇ ಬಾಲಕಿ ಕಿಡ್ನ್ಯಾಪ್‍ಗೆ ಯತ್ನ

    ಸೊನಾಲಿ ಫೋಗಟ್ 2019ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹಿಸಾರ್ ಜಿಲ್ಲೆಯ ಆದಂಪುರ ಕ್ಷೇತ್ರದಿಂದ ಕುಲ್‍ದೀಪ್ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ, ಚುನಾವಣಾ ಕಣದಲ್ಲಿ ಭಾರಿ ಸದ್ದು ಮಾಡಿದ್ದರು. ಟಿಕ್ ಟಾಕ್‍ನಲ್ಲಿ ಜನಪ್ರಿಯರಾಗಿದ್ದ ಅವರು, 14ನೇ ಆವೃತ್ತಿಯ `ಬಿಗ್‍ಬಾಸ್’ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ಬಿಜೆಪಿ ನಾಯಕಿ: ವಿಡಿಯೋ ವೈರಲ್

    ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ಬಿಜೆಪಿ ನಾಯಕಿ: ವಿಡಿಯೋ ವೈರಲ್

    – ಪರಸ್ಪರ ದೂರು ದಾಖಲು

    ಚಂಡೀಗಢ: ಬಿಜೆಪಿ ಮುಖಂಡೆ, ಟಿಕ್‍ಟಾಕ್ ಸ್ಟಾರ್ ಸೋನಾಲಿ ಫೋಗಟ್ ಅವರು ಸರ್ಕಾರಿ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಫೋಗಟ್ ಶುಕ್ರವಾರ ಹಿಸಾರ್ ನ ಬಾಲ್ಸಮಂದ್ ಮಂಡಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹಿಸಾರ್ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸುಲ್ತಾನ್ ಸಿಂಗ್‍ರನ್ನು ಫೋಗಟ್ ಥಳಿಸಿದ್ದಾರೆ. ಕೆಲವು ರೈತರು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ವಿಚಾರದಲ್ಲಿ ಸಮಸ್ಯೆಗಳಿವೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಫೋಗಟ್ ಮಂಡಿಯ ಪರಿಶೀಲನೆಗೆ ಹೋಗಿದ್ದರು. ಆಗ ಸುಲ್ತಾನ್ ಸಿಂಗ್ ನಿಮ್ಮಂಥ ಸುಂದರ ಚೆಲುವೆ, ಸ್ಟಾರ್ ಬಿಸಿಲಿನಲ್ಲಿ ಹೀಗೆ ಮಂಡಿಗೆ ಬರಬಾರದು ಎಂದು ಹೇಳಿದ್ದರು ಎನ್ನಲಾಗಿದೆ.

    ಇದರಿಂದ ಕೋಪಗೊಂಡ ಫೋಗಟ್, ಸಿಂಗ್ ಜೊತೆ ತೀವ್ರವಾಗಿ ಮಾತುಕತೆ ನಡೆಸಿದ್ದಾರೆ. ನಂತರ ಚಪ್ಪಲಿ ತೆಗೆದುಕೊಂಡು ಥಳಿಸಿದ್ದಾರೆ. ಈ ವಿಡಿಯೋವನ್ನು ಸ್ಥಳದಲ್ಲಿದ್ದವರು ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. “ನಿಮ್ಮಂತಹ ಜನರಿಂದ ನಿಂದನೆಗಳನ್ನು ಕೇಳಲು ನಾನು ಕೆಲಸ ಮಾಡುತ್ತಿದ್ದೇನೆ? ಗೌರವಾನ್ವಿತವಾಗಿ ಬದುಕಲು ನನಗೆ ಹಕ್ಕಿಲ್ಲವೇ?” ಎಂದು ಫೋಗಟ್ ವೀಡಿಯೊದಲ್ಲಿ ಹೇಳಿದ್ದಾರೆ.

    ಪರಸ್ಪರ ಪೊಲೀಸರಿಗೆ ದೂರು:
    ಈ ಘಟನೆ ನಡೆದ ನಂತರ ಫೋಗಟ್ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ, ಸುಲ್ತಾನ್ ಸಿಂಗ್ ಅಸಭ್ಯವಾಗಿ ಮಾತನಾಡಿ ನನ್ನನ್ನು ಅವಮಾನಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಇತ್ತ ಸುಲ್ತಾನ್ ಸಿಂಗ್ ಕೂಡ ಒಬ್ಬ ಸರ್ಕಾರಿ ಅಧಿಕಾರಿಯ ಮೇಲೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಫೋಗಟ್ ವಿರುದ್ಧ ದೂರು ದಾಖಲಿಸಿದ್ದಾರೆ.

    ಸುಲ್ತಾನ್ ಸಿಂಗ್ ಮತ್ತು ಫೋಗಟ್ ಇಬ್ಬರು ಪರಸ್ಪರ ದೂರು ದಾಖಲಿಸಿದ್ದಾರೆ. ನಾವು ಇಬ್ಬರ ಹೇಳಿಕೆಗಳು ಮತ್ತು ವಿಡಿಯೋಗಳನ್ನು ಪರಿಶೀಲಿಸುತ್ತಿದ್ದೇವೆ. ನಂತರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಫೋಗಟ್ ವಿರುದ್ಧ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಕೃತ್ಯಗಳನ್ನು ಬಿಜೆಪಿ ಮುಖಂಡೆ ಮಾಡಿದ್ದಾರೆ. ಸರ್ಕಾರಿ ಕೆಲಸ ಮಾಡುವುದು ಅಪರಾಧವೇ? ಸಿಎಂ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಫೋಗಟ್ ವಿರುದ್ಧ ಕ್ರಮ ತೆಗೆದುಕೊಳ್ಳುವರೇ” ಎಂದು ಪ್ರಶ್ನೆ ಮಾಡಿದ್ದಾರೆ.

    ಕಳೆದ ವರ್ಷ ಅದಂಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋನಾಲಿ ಫೋಗಟ್ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್‍ನ ಕುಲದೀಪ್ ಬಿಶ್ನೋಯಿ ವಿರುದ್ಧ ಸೋತಿದ್ದರು.

  • ಬಿಜೆಪಿ ಟಿಕೆಟ್ ಪಡೆದಿದ್ದ ಟಿಕ್ ಟಾಕ್ ಸ್ಟಾರ್ ಸೋನಾಲಿ ಫೋಗಟ್‍ಗೆ ಸೋಲು

    ಬಿಜೆಪಿ ಟಿಕೆಟ್ ಪಡೆದಿದ್ದ ಟಿಕ್ ಟಾಕ್ ಸ್ಟಾರ್ ಸೋನಾಲಿ ಫೋಗಟ್‍ಗೆ ಸೋಲು

    ಚಂಡೀಗಢ: ಈ ಬಾರಿ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕ್‍ಟಾಕ್ ಸ್ಟಾರ್ ಸೋನಾಲಿ ಫೋಗಟ್ ಸೋಲು ಕಂಡಿದ್ದಾರೆ.

    ಕಾಂಗ್ರೆಸ್ ನ ಕುಲದೀಪ್ ಬಿಶ್ನೋಯಿ ವಿರುದ್ಧ ಸೋನಾಲಿ ಫೋಗಟ್ ಸೋಲು ಅನುಭವಿಸಿದ್ದಾರೆ. ಆದಂಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು, 11 ಬಾರಿ ಬಿಶ್ನೋಯಿ ಕುಟುಂಬದ ಸದಸ್ಯರೇ ಸತತವಾಗಿ ಗೆಲುವಿನ ವಿಜಯಮಾಲೆ ಧರಿಸುತ್ತಾ ಬಂದಿದ್ದಾರೆ.

    ಕುಲದೀಪ್ ಬಿಶ್ನೋಯಿ 55,554 (ಶೇ.52.34) ಮತಗಳನ್ನು ಪಡೆದುಕೊಂಡಿದ್ದಾರೆ. ಸೋನಾಲಿ ಫೋಗಟ್ 28,888 (ಶೇ.27.22) ಮತಗಳನ್ನು ಪಡೆದುಕೊಂಡಿದ್ದಾರೆ.

    ಹರ್ಯಾಣದ ಹಿಸಾರ್ ಜಿಲ್ಲೆಯ ಸಂತ ನಗರದ ನಿವಾಸಿ ಸೋನಾಲಿ ಫೋಗಟ್ (40) ತಮ್ಮ ಟಿಕ್ ಟಾಕ್ ವಿಡಿಯೋಗಳ ಮೂಲಕ ಚರ್ಚೆಯಲ್ಲಿದ್ದರು. ಹರ್ಯಾಣದ ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಸೋನಾಲಿ ಫೋಗಾಟ್ ಆದಂಪುರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಹರಿಯಾಣ ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯೆಯಾಗಿದ್ದರಿಂದ ಸೋನಾಲಿ ಫೋಗಟ್ ಟಿಕೆಟ್ ಪಡೆದು ಚುನಾವಣೆ ಕಣಕ್ಕೆ ಇಳಿದಿದ್ದರು.

    ಹರ್ಯಾಣದ ಮಾಜಿ ಮುಖ್ಯಮಂತ್ರಿ ಚೌಧರಿ ಭಜನ್ ಲಾಲ್ ಪುತ್ರ ಕುಲದೀಪ್ ಬಿಶ್ನೋಯಿ ಕ್ಷೇತ್ರ ಉಳಿಸಿಕೊಳ್ಳಲು ಭಾರೀ ಪ್ರಚಾರ ನಡೆಸಿದ್ದರು. ಹರ್ಯಾಣ 12 ವಿಧಾನಸಭಾ ಚುನಾವಣೆಯಲ್ಲಿ 11 ಬಾರಿ ಆದಂಪುರ ಕ್ಷೇತ್ರದಲ್ಲಿ ಬಿಶ್ನೋಯಿ ಕುಟುಂಬಸ್ಥರೇ ಗೆಲ್ಲುತ್ತಾ ಬಂದಿದ್ದಾರೆ. ಜಾಟ್ ಸಮುದಾಯದ ಕುಲದೀಪ್ ಮೂರು ಬಾರಿ ಶಾಸಕರಾಗಿ ಮತ್ತು ಒಂದು ಸಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹರ್ಯಾಣ ಕಾಂಗ್ರೆಸ್‍ನ ಜಾಟ್ ಸಮುದಾಯದ ನಾಯಕರಾಗಿಯೂ ಕುಲದೀಪ್ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಹರ್ಯಾಣದ ಹೆಚ್ಚು ಜಾಟ್ ಸಮುದಾಯದ ಜನರು ವಾಸಿಸುವ ಕ್ಷೇತ್ರಗಳಲ್ಲಿ ಕುಲ್‍ದೀಪ್ ಕೈ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದರು.

    ಜನ್‍ನಾಯಕ್ ಜನತಾ ಪಾರ್ಟಿಯ ರಮೇಶ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. ಆದಂಪುರ ವಿಧಾನಸಭಾ ಚುನಾವಣಾ ಕಣದಲ್ಲಿ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.