Tag: ಸೋನಾಕ್ಷಿ ಸಿನ್ಹಾ

  • ಸಕ್ಸಸ್‌ಗಾಗಿ ಅದೃಷ್ಟ ಪರೀಕ್ಷೆಗಿಳಿದ ಸೋನಾಕ್ಷಿ ಸಿನ್ಹಾ

    ಸಕ್ಸಸ್‌ಗಾಗಿ ಅದೃಷ್ಟ ಪರೀಕ್ಷೆಗಿಳಿದ ಸೋನಾಕ್ಷಿ ಸಿನ್ಹಾ

    ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಸಹೋದರ ಕುಶ್ ಸಿನ್ಹಾ ನಿರ್ದೇಶನದ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ನಿಕಿತಾ ರಾಯ್’ ಕಥೆ ಹೇಳೋಕೆ ನಟಿ ಸಜ್ಜಾಗಿದ್ದಾರೆ. ಇದನ್ನೂ ಓದಿ:ಮೂರು ಭಾಗಗಳಲ್ಲಿ ಬರಲಿದೆ ‘ಮಹಾಭಾರತ’- ರಾಜಮೌಳಿ ಕನಸಿಗೆ ನಾನಿ ಸಾಥ್

    ಯಶಸ್ವಿ ನಟಿಯಾಗಿ ಸೈ ಎನಿಸಿಕೊಂಡಿದ್ದ ಸೋನಾಕ್ಷಿ ಇದೀಗ ಸಕ್ಸಸ್‌ಗಾಗಿ ಎದುರು ನೋಡ್ತಿದ್ದಾರೆ. ಹೀಗಾಗಿ ಸಹೋದರ ಕುಶ್ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ್ದಾರೆ. ‘ನಿಕಿತಾ ರಾಯ್’ ಚಿತ್ರವು ಮಾನಸಿಕ ಒತ್ತಡ ಹಾಗೂ ಮನುಷ್ಯನ ದುರ್ಬಲತೆಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾ ಇದಾಗಿದೆ. ಈ ವರ್ಷ ಮೇ 30ರಂದು ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್

    ಈ ಚಿತ್ರದಲ್ಲಿ ಸೋನಾಕ್ಷಿ ಜೊತೆ ಅರ್ಜುನ್ ರಾಮ್‌ಪಾಲ್, ಪರೇಶ್ ರಾವಲ್, ಸುಹೇಲ್ ನಯ್ಯರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಕುಶ್ ಅವರು ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬರುತ್ತಿದ್ದಾರೆ. ಯಶಸ್ಸಿಗಾಗಿ ಸೋನಾಕ್ಷಿ ಮತ್ತು ಕುಶ್ ಇಬ್ಬರೂ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ನಿಕಿತಾ ರಾಯ್’ ಚಿತ್ರದ ಮೂಲಕ ಸಕ್ಸಸ್ ಕಾಣ್ತಾರಾ? ಎಂದು ಕಾದುನೋಡಬೇಕಿದೆ.

  • ಝಹೀರ್ ಜೊತೆಗಿನ ಮದುವೆ ನಂತರ ಮನೆ ಮಾರಾಟಕ್ಕಿಟ್ಟ ಸೋನಾಕ್ಷಿ ಸಿನ್ಹಾ

    ಝಹೀರ್ ಜೊತೆಗಿನ ಮದುವೆ ನಂತರ ಮನೆ ಮಾರಾಟಕ್ಕಿಟ್ಟ ಸೋನಾಕ್ಷಿ ಸಿನ್ಹಾ

    ಬಾಲಿವುಡ್‌ ನಟ ಝಹೀರ್ ಇಕ್ಬಾಲ್ (Zaheer Iqbal) ಜೊತೆಗಿನ ಮದುವೆ ಬಳಿಕ ನಟಿ ಸೋನಾಕ್ಷಿ ಸಿನ್ಹಾ (Sonakshi Sinha)  ಮನೆ ಮಾರಾಟಕ್ಕೆ ಮುಂದಾಗಿದ್ದಾರೆ. ಮದುವೆಯಾದ ಎರಡೇ ತಿಂಗಳಿಗೆ ನಟಿ ಈ ನಿರ್ಧಾರ ಕೈಗೊಂಡಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ಹಿಂದಿ ಸಿನಿಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ: ರಿಷಬ್ ಶೆಟ್ಟಿ

    ಜೂನ್ 23ರಂದು ಝಹೀರ್ ಜೊತೆ ಸೋನಾಕ್ಷಿ ಮದುವೆಯಾದ ಬಳಿಕ ಮುಂಬೈನ ಬಾಂದ್ರಾದಲ್ಲಿ ಲಕ್ಷುರಿ ಮನೆಯೊಂದನ್ನು ಖರೀದಿಸಿದ್ದರು. ಇಷ್ಟಪಟ್ಟು ಖರೀದಿಸಿದ ಮನೆಯನ್ನೇ ನಟಿ ಸೇಲ್ ಮಾಡಲು ನಿರ್ಧರಿಸಿರೋದಕ್ಕೆ ನೆಟ್ಟಿಗರು ಶಾಕ್‌ ಆಗಿದ್ದಾರೆ. ಮನೆಯಲ್ಲಿ ಏನಾದ್ರೂ ಸಮಸ್ಯೆ ಇದ್ಯಾ ಅದಕ್ಕೆ ಇಂತಹ ನಿರ್ಧಾರ ಕೈಗೊಂಡ್ರಾ ಎಂಬ ಅನುಮಾನ ಅನೇಕರಲ್ಲಿ ಮೂಡಿದೆ.

    ಮುಂಬೈನ ಬಾಂದ್ರಾದ ನಟಿಯ ಮನೆ ಸಮುದ್ರ ಕಡೆಗೆ ಮುಖ ಮಾಡಿರುವ ಈ ಫ್ಲಾಟ್ ತುಂಬ ವಿಶಾಲವಾಗಿದೆ. 4200 ಚದರ ಅಡಿ ವಿಸ್ತೀರ್ಣದ ಈ ಮನೆಯಲ್ಲಿ ವಿಶಾಲವಾದ 2 ಬೆಡ್ ರೂಮ್ ಇದೆ. ಅಸಲಿಗೆ, ಇದು 4 ಬೆಡ್ ರೂಮ್‌ನಷ್ಟು ವಿಶಾಲವಾದ ಜಾಗ. ಆದರೆ ಆ ಜಾಗದಲ್ಲಿ 2 ಬೆಡ್ ರೂಮ್ ಇದ್ದು, ಜಿಮ್, ಪ್ರೈವೇಟ್ ಲಿಫ್ಟ್ ಮುಂತಾದ ಸೌಕರ್ಯಗಳು ಇವೆ ಎಂದು ರಿಯಲ್ ಎಸ್ಟೇಟ್ ಕಂಪನಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಶೇರ್ ಮಾಡಿದೆ. ಆದರೆ ಎಲ್ಲೂ ಸೋನಾಕ್ಷಿ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ.

    ಆದರೆ ಸ್ವತಃ ಸೋನಾಕ್ಷಿ ಈ ವಿಡಿಯೋವನ್ನು ಲೈಕ್ ಮಾಡಿರೋದು ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ, ಈ ಮನೆಯ ಬೆಲೆ ಬರೋಬ್ಬರಿ 25 ಕೋಟಿ ರೂ. ಮೌಲ್ಯಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಮುಂಚೆ 11 ಕೋಟಿ ರೂಪಾಯಿಗೆ ನಟಿ ಖರೀದಿಸಿದ್ದರು. ಇದೀಗ 2 ತಿಂಗಳ ಬಳಿಕ ಮುಂಬೈ ನಗರದಲ್ಲಿ ದುಬಾರಿ ಮೊತ್ತಕ್ಕೆ ಆಸ್ತಿ ಮಾರಾಟಕ್ಕೆ ಮುಂದಾಗಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇನ್ನೂ ನಟಿಯ ಕುರಿತು ಈ ಸುದ್ದಿ ನಿಜಾನಾ? ಎಂದು ಕಾದುನೋಡಬೇಕಿದೆ.

  • ಮದುವೆ ಬಳಿಕ ಗಂಡನ ಕೈಗೆ ಚಪ್ಪಲಿ ಕೊಟ್ಟ ಸೋನಾಕ್ಷಿ ಸಿನ್ಹಾ

    ಮದುವೆ ಬಳಿಕ ಗಂಡನ ಕೈಗೆ ಚಪ್ಪಲಿ ಕೊಟ್ಟ ಸೋನಾಕ್ಷಿ ಸಿನ್ಹಾ

    ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಇದೀಗ ಮದುವೆಯಾಗಿ ಒಂದೇ ವಾರಕ್ಕೆ ಗಂಡನ (Zaheer Iqbal) ಕೈಗೆ ಚಪ್ಪಲಿ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ಇದನ್ನೂ ಓದಿ:ಜೈಲಿಗೆ ದರ್ಶನ್ ಕುಟುಂಬ ಭೇಟಿ- ತಾಯಿಯನ್ನು ನೋಡ್ತಿದಂತೆ ನಟ ಕಣ್ಣೀರು

    ಜೂನ್ 23ರಂದು ಝಹೀರ್ ಇಕ್ಬಾಲ್ ಜೊತೆ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮದುವೆಯಾಗಿ ಒಂದು ವಾರ ಕಳೆದಿದ್ದು, ಗಂಡನ ಕೈಗೆ ಚಪ್ಪಲಿ ಕೊಟ್ಟಿದ್ದಾರೆ. ಅದನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನಟಿ ಹಂಚಿಕೊಂಡಿದ್ದಾರೆ. ಚೆಂದದ ಅಡಿಬರಹ ಕೂಡ ನೀಡಿದ್ದಾರೆ.

    ಶಾಪಿಂಗ್ ಮಾಲ್‌ನಲ್ಲಿ ಪತಿ ಝಹೀರ್ ತನ್ನ ಚಪ್ಪಲಿ ಹಿಡಿದಿರುವ ಫೋಟೋ ಶೇರ್ ಮಾಡಿ, ಇಷ್ಟಪಟ್ಟವರನ್ನು ಮದುವೆಯಾದರೆ ಇರುತ್ತದೆ ಎಂದು ಸೋನಾಕ್ಷಿ ಅಡಿಬರಹ ನೀಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ:ಪತ್ತೆದಾರಿ ಸಿನಿಮಾದಲ್ಲಿ ಆಲಿಯಾ ಭಟ್- ಜು.15ರಿಂದ ಶೂಟಿಂಗ್ ಸ್ಟಾರ್ಟ್

    ಅಂದಹಾಗೆ, 7 ವರ್ಷಗಳ ಹಿಂದೆ 2017ರ ಜೂನ್ 23ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆಯೇ ನಿಂತು ತಂದೆ ಶತ್ರುಘ್ನ ಸಿನ್ಹಾ ಸಂಭ್ರಮಿಸಿದ್ದರು.

  • ಬಾಲಿವುಡ್‌ ಹಿರಿಯ ನಟ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು

    ಬಾಲಿವುಡ್‌ ಹಿರಿಯ ನಟ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು

    ಮುಂಬೈ: ಬಾಲಿವುಡ್‌ನ ಹಿರಿಯ ನಟ ಮತ್ತು ಅಸನ್ಸೋಲ್ ಕ್ಷೇತ್ರದ ಲೋಕಸಭಾ ಸದಸ್ಯ ಶತ್ರುಘ್ನ ಸಿನ್ಹಾ (Shatrughan Sinha) ಅವರು ಮುಂಬೈನ ಕೋಕಿಲಾಬೆನ್‌ (Kokilaben) ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಳೆದ ಎರಡು ದಿನಗಳಿಂದ ವೈರಲ್ ಜ್ವರ ಮತ್ತು ಆಯಾಸದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ಪುತ್ರ ಲವ್ ಸಿನ್ಹಾ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಮಾತೃವಿಯೋಗ

    ಶತ್ರುಘ್ನ ಸಿನ್ಹಾ ಆಸ್ಪತ್ರೆಯಿಂದ ಯಾವಾಗ ಬಿಡುಗಡೆಯಾಗುತ್ತಾರೆ ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ. ಪ್ರಸ್ತುತ ನಟನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯರ ನಿಗಾದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.

    ಕೆಲ ತಿಂಗಳುಗಳಿಂದ ನಟ, ಚುನಾವಣಾ ಪ್ರಚಾರ ಮತ್ತು ಅವರ ಪುತ್ರಿಯ ಮದುವೆಯಿಂದಾಗಿ ಬ್ಯುಸಿಯಾಗಿದ್ದರು. ಜೂನ್‌ 23 ರಂದು ತಮ್ಮ ಮಗಳು ಮತ್ತು ನಟಿ ಸೋನಾಕ್ಷಿ ಸಿನ್ಹಾ ಹಾಗೂ ದೀರ್ಘಕಾಲದ ಗೆಳೆಯ ಜಹೀರ್ ಇಕ್ಬಾಲ್ ಮದುವೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಶತ್ರುಘ್ನ ಸಿನ್ಹಾ ಭಾಗಿಯಾಗಿದ್ದರು.

  • ಮದುವೆ ಬಳಿಕ ಆಸ್ಪತ್ರೆಗೆ ಬಂದ ಸೋನಾಕ್ಷಿ- ಹಬ್ಬಿತು ಪ್ರೆಗ್ನೆನ್ಸಿ ಸುದ್ದಿ

    ಮದುವೆ ಬಳಿಕ ಆಸ್ಪತ್ರೆಗೆ ಬಂದ ಸೋನಾಕ್ಷಿ- ಹಬ್ಬಿತು ಪ್ರೆಗ್ನೆನ್ಸಿ ಸುದ್ದಿ

    ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ (Sonakshi Sinha) ಮದುವೆಯಾಗಿ ಒಂದೇ ವಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿರುವುದು ನೆಟ್ಟಿಗರ ಚರ್ಚೆ ಗ್ರಾಸವಾಗಿದೆ. ಸೋನಾಕ್ಷಿ ಪ್ರೆಗ್ನೆನ್ಸಿ ಸುದ್ದಿ ಘೋಷಣೆ ಮಾಡುತ್ತಾರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

    ಹೇಳಿ ಕೇಳಿ ಬಾಲಿವುಡ್‌ನಲ್ಲಿ ಪ್ರೆಗ್ನೆಂಟ್ ಆದ್ಮೇಲೆ ಮದುವೆಯಾಗುವುದು ಟ್ರೆಂಡ್ ಆಗಿದೆ. ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್‌ ಜೋಡಿ, ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೋಡಿ, ಶ್ರೀದೇವಿ ಮತ್ತು ಬೋನಿ ಕಪೂರ್‌ ಜೋಡಿ ಸೇರಿದಂತೆ ಅನೇಕರು ಸೆಲೆಬ್ರಿಟಿಗಳು ಈ ಟ್ರೆಂಡ್ ಫಾಲೋ ಮಾಡಿದ್ದಾರೆ. ಇದನ್ನೂ ಓದಿ:ಮಾನ್ವಿತಾ, ಶ್ರೇಯಸ್ ಕಾಂಬಿನೇಷನ್ ನ ‘ಒನ್ ಅಂಡ್ ಹಾಫ್’ ಶೂಟಿಂಗ್ ಕಂಪ್ಲೀಟ್

    ಅದರಂತೆ ಸೋನಾಕ್ಷಿ, ಮತ್ತು ಝಹೀರ್ (Zaheer Iqbal) ಜೋಡಿ ಗುಡ್ ನ್ಯೂಸ್ ಕೊಡ್ತಾರಾ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇಬ್ಬರೂ ಜೂನ್ 23ರಂದು ತರಾತುರಿಯಲ್ಲಿ ಮದುವೆಯಾದರು. ಇವರ ಮದುವೆ ಗುಟ್ಟಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಿತು. ಪ್ರೆಗ್ನೆಂಟ್ ಆದ ಕಾರಣದಿಂದಲೇ ನಟಿ ಇಷ್ಟು ಆತುರದಲ್ಲಿ ಮದುವೆಯಾದ್ರಾ? ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇದಕ್ಕೆ ಉತ್ತರ ಸಿಗುತ್ತಾ ಕಾಯಬೇಕಿದೆ. ಇದನ್ನೂ ಓದಿ:ವಿಶ್ವಕಪ್ ಗೆದ್ದ ಭಾರತ- ಸಂಭ್ರಮಿಸಿದ ಸಿನಿತಾರೆಯರು

    ಅಂದಹಾಗೆ, 7 ವರ್ಷಗಳ ಹಿಂದೆ 2017ರ ಜೂನ್‌ 23ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆಯೇ ನಿಂತು ತಂದೆ ಶತ್ರುಘ್ನ ಸಿನ್ಹಾ ಸಂಭ್ರಮಿಸಿದ್ದರು.

  • ಮದುವೆ ಬಳಿಕ 25 ಕೋಟಿ ಬೆಲೆ ಬಾಳುವ ಮನೆಗೆ ಸೋನಾಕ್ಷಿ ಸಿನ್ಹಾ ಶಿಫ್ಟ್

    ಮದುವೆ ಬಳಿಕ 25 ಕೋಟಿ ಬೆಲೆ ಬಾಳುವ ಮನೆಗೆ ಸೋನಾಕ್ಷಿ ಸಿನ್ಹಾ ಶಿಫ್ಟ್

    ‘ದಬಾಂಗ್’ ಬೆಡಗಿ ಸೋನಾಕ್ಷಿ ಸಿನ್ಹಾ (Sonakshi Sinha) ಮತ್ತು ಝಹೀರ್ ಇಕ್ಬಾಲ್ (Zaheer Iqbal) ಜೂನ್ 23ರಂದು ಸರಳವಾಗಿ ಮದುವೆ ಆಗಿದ್ದಾರೆ. ಇದೀಗ ಮದುವೆಯ ಬಳಿಕ 25 ಕೋಟಿ ಮೌಲ್ಯದ ಐಷಾರಾಮಿ ಮನೆಗೆ (Home) ಸೋನಾಕ್ಷಿ ದಂಪತಿ ಶಿಫ್ಟ್ ಆಗಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಅರೆಸ್ಟ್ ಆಗಿರೋದು ನೋವುಂಟು ಮಾಡಿದೆ- ಶ್ರುತಿ

    ಸೋನಾಕ್ಷಿ ಹೊಸ ಮನೆ 4000 ಚದರ ಅಡಿ ವಿಸ್ತೀಣದಲ್ಲಿ ನಿರ್ಮಿಸಲಾಗಿದೆ. ತಮ್ಮ ಆಸೆಯಂತೆಯೇ ಇಂಟೀರಿಯರ್ ಡಿಸೈನ್ ಮಾಡಿಸಿದ್ದಾರೆ. ಮನೆಯಲ್ಲಿ ಬೆಡ್ ರೂಮ್ ಕೂಡ ದೊಡ್ಡದಾಗಿದೆ. ಮನೆಗೆ ಲೈಟ್ ಕಲರ್‌ಗಳನ್ನೇ ಆಯ್ಕೆ ಮಾಡಿದ್ದಾರೆ. ಈ ಮನೆಯ ವಾಲ್‌ಗಳಿಗೂ ಲೈಟ್ ಕಲರ್ ಹಾಕಲಾಗಿದೆ. ನಟಿಯ ಮನೆಗೆ ಕಾಲಿಟ್ಟರೆ ಅದ್ಧೂರಿತನ ಎದ್ದು ಕಾಣುತ್ತದೆ. ಇದೀಗ ಹೊಸ ಮನೆಯ ಹೋಮ್ ಟೂರ್ ಮಾಡಿರುವ ನಟಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅಂದಹಾಗೆ, 7 ವರ್ಷಗಳ ಹಿಂದೆ 23-06-2017ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆಯೇ ನಿಂತು ತಂದೆ ಶತ್ರುಘ್ನ ಸಿನ್ಹಾ ಸಂಭ್ರಮಿಸಿದ್ದರು.

  • ಪತಿ ಝಹೀರ್ ಕಡೆಯಿಂದ ಸೋನಾಕ್ಷಿ ಸಿನ್ಹಾಗೆ ದುಬಾರಿ ಕಾರ್ ಗಿಫ್ಟ್

    ಪತಿ ಝಹೀರ್ ಕಡೆಯಿಂದ ಸೋನಾಕ್ಷಿ ಸಿನ್ಹಾಗೆ ದುಬಾರಿ ಕಾರ್ ಗಿಫ್ಟ್

    ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಸದ್ಯ ಝಹೀರ್ (Zaheer Iqbal) ಜೊತೆಗಿನ ಮದುವೆ ಸಂಭ್ರಮದಲ್ಲಿದ್ದಾರೆ. ಜೂನ್ 23ರಂದು ಸಿಂಪಲ್ ಆಗಿ ಮದುವೆಯಾಗಿದ್ದಾರೆ. ಈ ಬೆನ್ನಲ್ಲೇ ನಟಿಗೆ ಪತಿ ಝಹೀರ್ ದುಬಾರಿ ಕಾರ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಇಬ್ಬರೂ ಬೇರೆ ಬೇರೆ ಧರ್ಮವಾಗಿರುವ ಕಾರಣ ಕಾನೂನಾತ್ಮಕವಾಗಿ ವಿವಾಹ ನೋಂದಣಿ ಮಾಡಿಸುವ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬಳಿಕ ಬಾಲಿವುಡ್ ಸ್ಟಾರ್ಸ್‌ಗೆ ಅದ್ಧೂರಿ ಆರತಕ್ಷತೆ ಕೂಡ ಆಯೋಜಿಸಿದ್ದಾರೆ.

    ಇದೀಗ ಪತ್ನಿ ಸೋನಾಕ್ಷಿಗೆ BMW i7 ಕಾರನ್ನು ಉಡುಗೊರೆಯಾಗಿ ನೀಡಿದ್ದು, 2 ಕೋಟಿ ರೂ.ಗಿಂತ ಅಧಿಕ ಮೌಲ್ಯದಾಗಿದೆ. ಪತಿಯ ಗಿಫ್ಟ್‌ಗೆ ನಟಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    7 ವರ್ಷಗಳ ಹಿಂದೆ 23-06-2017ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆಯೇ ನಿಂತು ತಂದೆ ಶತ್ರುಘ್ನ ಸಂಭ್ರಮಿಸಿದ್ದಾರೆ.

  • ಸೋನಾಕ್ಷಿ ಸಿನ್ಹಾ, ಝಹೀರ್ ಆರತಕ್ಷತೆಯಲ್ಲಿ ಬಾಲಿವುಡ್‌ ಸೆಲೆಬ್ರಿಟೀಸ್

    ಸೋನಾಕ್ಷಿ ಸಿನ್ಹಾ, ಝಹೀರ್ ಆರತಕ್ಷತೆಯಲ್ಲಿ ಬಾಲಿವುಡ್‌ ಸೆಲೆಬ್ರಿಟೀಸ್

    ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ (Sonakshi Sinha) ಜೂನ್ 23ರಂದು ಝಹೀರ್ ಇಕ್ಬಾಲ್ (Zaheer Iqbal) ಜೊತೆ ಸರಳವಾಗಿ ಮದುವೆಯಾದರು. ನಟಿಯ ಆರತಕ್ಷತೆ (Reception) ಸಂಭ್ರಮದಲ್ಲಿ ಬಾಲಿವುಡ್ ನಟ-ನಟಿಯರು ಭಾಗಿಯಾಗಿ ಶುಭಹಾರೈಸಿದರು.

    7 ವರ್ಷಗಳ ಪ್ರೀತಿಗೆ ಸೋನಾಕ್ಷಿ, ಝಹೀರ್ ಮದುವೆಯ ಮುದ್ರೆ ಒತ್ತಿದ್ದಾರೆ. ಸೋನಾಕ್ಷಿ ಮದುವೆ ಆರತಕ್ಷತೆಯಲ್ಲಿ ಹಿರಿಯ ನಟ ಅನಿಲ್ ಕಪೂರ್ ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದ ಚಿತ್ರಾಲ್ ರಂಗಸ್ವಾಮಿ

     

    View this post on Instagram

     

    A post shared by Viral Bhayani (@viralbhayani)

    ನಟಿ ಅದಿತಿ ರಾವ್ ಹೈದರಿ ಜೊತೆ ತಮಿಳು ನಟ ಸಿದ್ಧಾರ್ಥ್ (Siddarth)ಕೂಡ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ. ಇವರ ಜೊತೆ ಹಿರಿಯ ನಟಿ ರೇಖಾ (Rekha) ಕೂಡ ಫೋಟೋಗೆ ಪೋಸ್ ನೀಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ರವೀನಾ ಟಂಡನ್, ಕಾಜೋಲ್(Kajol), ವಿದ್ಯಾ ಬಾಲನ್ (Vidya Balan), ಡೈಸಿ ಷಾ, ಆದಿತ್ಯಾ ರಾಯ್ ಕಪೂರ್, ಹುಮಾ ಖುರೇಶಿ, ಟಬು, ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.

    ಅಂದಹಾಗೆ, 7 ವರ್ಷಗಳ ಹಿಂದೆ 23-06-2017ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆ ನಿಂತು ತಂದೆ ಶತ್ರುಘ್ನ ಸಂಭ್ರಮಿಸಿದ್ದಾರೆ. ಈ ಮೂಲಕ ಮಗಳ ಮದುವೆ ಅವರಿಗೆ ಇಷ್ಟವಿಲ್ಲ ಎಂಬ ಗಾಸಿಪ್‌ಗೆ ಬ್ರೇಕ್ ಹಾಕಿದ್ದಾರೆ.

    ಅಂದಹಾಗೆ, ಸೋನಾಕ್ಷಿ ಮತ್ತು ಝಹೀರ್ ಹಿಂದೂ ಅಥವಾ ಇಸ್ಲಾಂ ಸಂಪ್ರದಾಯದಂತೆ ಮದುವೆಯಾಗದೇ ತಮ್ಮ ಮದುವೆಯನ್ನು ಕಾನೂನಾತ್ಮಕವಾಗಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಈ ವೇಳೆ, ಕ್ರೀಮ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.

  • ಸರಳವಾಗಿ ಜರುಗಿತು ಝಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ

    ಸರಳವಾಗಿ ಜರುಗಿತು ಝಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ

    ಬಾಲಿವುಡ್‌ನ ಖ್ಯಾತ ನಟ ಶತ್ರುಘ್ನ ಸಿನ್ಹಾ (Shatrughan Sinha) ಪುತ್ರಿ ಸೋನಾಕ್ಷಿ ಸಿನ್ಹಾ (Sonakshi Sinha) ಜೂನ್ 23ರಂದು ಬಹುಕಾಲದ ಗೆಳೆಯ ಝಹೀರ್ (Zaheer Iqbal) ಜೊತೆ ಸಿಂಪಲ್ ಆಗಿ ಮದುವೆ ಆಗಿದ್ದಾರೆ. ಮದುವೆ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸಮಂತಾ ಜೊತೆ ಶಾರುಖ್ ಖಾನ್ ರೊಮ್ಯಾನ್ಸ್

    7 ವರ್ಷಗಳ ಹಿಂದೆ 23-06-2017ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆ ನಿಂತು ತಂದೆ ಶತ್ರುಘ್ನ ಸಂಭ್ರಮಿಸಿದ್ದಾರೆ. ಈ ಮೂಲಕ ಮಗಳ ಮದುವೆ ಅವರಿಗೆ ಇಷ್ಟವಿಲ್ಲ ಎಂಬ ಗಾಸಿಪ್‌ಗೆ ಬ್ರೇಕ್ ಹಾಕಿದ್ದಾರೆ.


    ಅಂದಹಾಗೆ, ಸೋನಾಕ್ಷಿ ಮತ್ತು ಝಹೀರ್ ಹಿಂದೂ ಅಥವಾ ಇಸ್ಲಾಂ ಸಂಪ್ರದಾಯದಂತೆ ಮದುವೆಯಾಗದೇ ತಮ್ಮ ಮದುವೆಯನ್ನು ಕಾನೂನಾತ್ಮಕವಾಗಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಈ ವೇಳೆ, ಕ್ರೀಮ್ ಬಣ್ಣದ ಉಡುಗೆಯಲ್ಲಿ ನವಜೋಡಿ ಮಿಂಚಿದ್ದಾರೆ. ಸೋನಾಕ್ಷಿ ದಂಪತಿಗೆ ಅಭಿಮಾನಿಗಳು ಶುಭಕೋರಿದ್ದಾರೆ.

  • ಶತ್ರುಘ್ನ ಸಿನ್ಹಾ ಮಗಳು ಇಸ್ಲಾಂಗೆ ಮತಾಂತರ ಆಗ್ತಾರಾ?- ಕೊನೆಗೂ ಸಿಕ್ತು ಉತ್ತರ

    ಶತ್ರುಘ್ನ ಸಿನ್ಹಾ ಮಗಳು ಇಸ್ಲಾಂಗೆ ಮತಾಂತರ ಆಗ್ತಾರಾ?- ಕೊನೆಗೂ ಸಿಕ್ತು ಉತ್ತರ

    ಬಾಲಿವುಡ್ ಹಿರಿಯ ನಟ ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ (Sonakshi Sinha) ಇಂದು (ಜೂನ್ 23) ಝಹೀರ್ ಇಕ್ಬಾಲ್ (Zaheer Iqbal) ಜೊತೆ ಮದುವೆಗೆ ರೆಡಿಯಾಗಿದ್ದಾರೆ. ಮಗಳ ಮದುವೆಗೆ (Wedding) ಶತ್ರುಘ್ನ ಸಿನ್ಹಾ (Shatrughan Sinha) ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬೆನ್ನಲ್ಲೇ ನಟಿ ಇಸ್ಲಾಂಗೆ ಮತಾಂತರ ಆಗ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಸೋನಾಕ್ಷಿ ಮದುವೆಯಾಗಲಿರುವ ವರ ಝಹೀರ್ ತಂದೆ ಇಕ್ಬಾಲ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ‘ಸೀತಾರಾಮಂ’ ಜೋಡಿ

    ಇಕ್ಬಾಲ್ ರತಾನ್ಸಿ ಮಾತನಾಡಿ, ಸೋನಾಕ್ಷಿ ಸಿನ್ಹಾ ಮತಾಂತರಗೊಳ್ಳುತ್ತಿಲ್ಲ. ನಾನು ಮಾನವೀಯತೆಯನ್ನು ನಂಬುತ್ತೇನೆ. ಹಿಂದೂಗಳು ದೇವರನ್ನು ಭಗವಾನ್ ಮತ್ತು ಮುಸ್ಲಿಮರು ಅಲ್ಲಾಹ್ ಎಂದು ಕರೆಯುತ್ತಾರೆ. ಆದರೆ ಕೊನೆಯಲ್ಲಿ ನಾವೆಲ್ಲರೂ ಮನುಷ್ಯರು. ನನ್ನ ಹಾರೈಕೆ ಝಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆ ಎಂದಿದ್ದಾರೆ.

    ಸೋನಾಕ್ಷಿ ಸಿನ್ಹಾ ಅವರು ಝಹೀರ್ ಇಕ್ಬಾಲ್ ಹಲವು ವರ್ಷಗಳ ಡೇಟಿಂಗ್ ನಂತರ ಮದುವೆಯಾಗುತ್ತಿದ್ದಾರೆ. ಮುಂಬೈನಲ್ಲಿ ಸೋನಾಕ್ಷಿ ಸಿನ್ಹಾ ಅವರು ಜೂನ್ 23ರಂದು ಮದುವೆಯಾಗಲಿದ್ದು, ಶುಕ್ರವಾರ (ಜೂನ್ 21) ಮೆಹಂದಿ ಶಾಸ್ತ್ರವು ಅದ್ಧೂರಿಯಾಗಿ ಜರುಗಿದೆ.