Tag: ಸೋನಲ್

  • ಜಾನಪದ ಸೊಗಡಿನಲ್ಲಿ ಬಂತು ‘ಬನಾರಸ್’ ಸಿನಿಮಾದ ಹಾಡು

    ಜಾನಪದ ಸೊಗಡಿನಲ್ಲಿ ಬಂತು ‘ಬನಾರಸ್’ ಸಿನಿಮಾದ ಹಾಡು

    ಶಾಸಕ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಾಯಕನಾಗಿ ಹಾಗೂ ಸೊನಾಲ್ ಮೊಂತೆರೊ ನಾಯಕಿಯಾಗಿ ನಟಿಸಿರುವ,  ಜಯತೀರ್ಥ ನಿರ್ದೇಶಿಸಿರುವ “ಬನಾರಸ್” ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಸಂಗೀತ ರಸಿಕರ ಮನ ಗೆದ್ದಿದೆ.

    “ಬನಾರಸ್” ಹಾಡುಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿರುವ ಸಮಯದಲ್ಲಿ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ‌. “ಹೆಣ್ಣು ಹಡೆಯಲು ಬ್ಯಾಡಾ” ಎಂಬ ಪ್ರಸಿದ್ದ ಜಾನಪದ ಗೀತೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ‌.‌ ಅಜನೀಶ್ ಲೋಕನಾಥ್ ಅವರ ಸಮಧುರ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡನ್ನು ಹರ್ಷಿಕಾ ದೇವನಾಥ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ಜಯತೀರ್ಥ ಅವರು ವಿಶೇಷವಾಗಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದು, ಈಗಾಗಲೇ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಂಭೋ ಶಿವ ಶಂಕರ್ ಸಿನಿಮಾದಲ್ಲಿ ಹಾಡುಗಳ ಕಿಕ್

    ಶಂಭೋ ಶಿವ ಶಂಕರ್ ಸಿನಿಮಾದಲ್ಲಿ ಹಾಡುಗಳ ಕಿಕ್

    ಕಿರುತೆರೆ ಜಗತ್ತಿನಲ್ಲಿ ನಿರ್ದೇಶಕ ಶಂಕರ್ ಕೋನಮಾನಹಳ್ಳಿ ದೊಡ್ಡ ಹೆಸರು. ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ಇವರು, ಇದೇ ಮೊದಲ ಬಾರಿಗೆ ಹಿರಿತೆರೆಗೆ ಬಂದಿದ್ದಾರೆ. ಇವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಶಂಭೋ ಶಿವ ಶಂಕರ’ ಸಿನಿಮಾದ ಹಾಡುಗಳು ಸದ್ಯ ಸ್ಯಾಂಡಲ್ ವುಡ್ ನಲ್ಲಿ ವೈರಲ್ ಆಗಿವೆ.

    ಪಂಚತಂತ್ರ ಸಿನಿಮಾ ಖ್ಯಾತಿಯ ಸೋನಲ್ ಮೆಂಟೆರೋ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಅಭಯ್ ಪುನೀತ್, ರಕ್ಷಕ್ ಮತ್ತು ರೋಹಿತ್ ಮೂವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಹಾಡೊಂದರ ಚಿತ್ರೀಕರಣ ಭಾರತ ಚೀನಾ ಗಡಿಯ ಲಾಹೌಲ್ ಸ್ಪಿಟಿ ಎಂಬ ಸ್ಥಳದಲ್ಲಿ ನಡೆದದ್ದು, ಅದ್ಧೂರಿಯಾಗಿಯೇ ಈ ಹಾಡನ್ನು ಶೂಟ್ ಮಾಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಸೋಮವಾರ ಬೆಂಗಳೂರಿನಲ್ಲಿ ಈ ಸಿನಿಮಾದ ಹಾಡುಗಳು ಲೋಕಾರ್ಪಣೆಗೊಂಡಿದ್ದು, ನಟ ವಸಿಷ್ಠ ಸಿಂಹ, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಿಗೆ ನಿರ್ದೇಶನ ಮಾಡಿರುವ ಶಂಕರ್ ಕೋನಮಾನಹಳ್ಳಿ ಇದೇ ಮೊದಲ ಬಾರಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದುಕೊಂಡು ನಿರ್ದೇಶನ ಕೂಡ ಮಾಡಿದ್ದಾರೆ. ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಹಿರಿಯ ನಟ ಶಶಿಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಅವರು ಖಡಕ್ ಪೊಲೀಸ್ ಆಫೀಸರ್ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಇದನ್ನೂ ಓದಿ : ಪುನೀತ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ

    “ಶಂಭೋ ಶಿವ ಶಂಕರ್’ ಟೈಟಲ್ ಕೇಳಿದಾಕ್ಷಣ ಇದೊಂದು ಭಕ್ತಿ ಪ್ರಧಾನ ಸಿನಿಮಾ ಅಂತ ಅನಿಸಬಹುದು. ಆದರೆ, ಈ ಸಿನಿಮಾದ ಟೈಟಲ್ ಹೇಳುವಂತೆ ಮೂವರು ನಾಯಕರ ಹೆಸರನ್ನು ಚಿತ್ರದ ಶೀರ್ಷಿಕೆಗೆ ಬಳಸಿಕೊಂಡಿದ್ದಾರಂತೆ ನಿರ್ದೇಶಕರು. ಪ್ರೀತಿ, ಗೆಳೆತನ ಮತ್ತು ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಈ ಸಿನಿಮಾ ನೀಡಲಿದೆಯಂತೆ. ಜತೆಗೆ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ನೀಡುವಂತಹ ಸಾಕಷ್ಟು ಅಂಶಗಳನ್ನು ಈ ಸಿನಿಮಾ ಒಳಗೊಂಡಿದೆ.